http://www.boredpanda.com/how-to-spot-atm-scam

ನಾವು ATM ಬಳಸುವಾಗ ಸಾಮಾನ್ಯವಾಗಿ ಹುಷಾರಾಗಿ ಇರ್ತೀವಿ. ಒಳಗೆ ಹೋಗೋ ಮುಂಚೆ ಆಕಡೆ ಈಕಡೆ ನೋಡ್ಕೊಂಡೇ ಹೋಗ್ತೀವಿ, ದುಡ್ಡು ತೊಗೊಂಡು ಹೊರಗೆ ಬರೋ ಮುಂಚೆ 4-5 ಸಲ Cancel ಬಟನ್ ಒತ್ತೇ ಒತ್ತುತ್ತೀವಿ.

ಆದರೆ ಜನ ಎಷ್ಟೇ ಹುಷಾರಾಗಿರ್ಲಿ, ATM ಕಳವಾಗಿರೋ ಸುದ್ದಿಗಳಿಗೇನು ಕಡಿಮೆ ಇಲ್ಲ. ಬ್ಯಾಂಕುಗಳು, ಸರಕಾರದೋರು ಎಲ್ಲ ಎಷ್ಟೇ ಪ್ರಯತ್ನ ಪಟ್ಟರೂ ಕಳ್ಳರ ತಲೆ ಅವರಿಗಿಂತ ಜಾಸ್ತಿ ಓಡುತ್ತೇನೋ ಅನ್ನಿಸುತ್ತೆ. ಇಲ್ಲಿ ನೋಡಿ, ಎಷ್ಟು ಓಡುತ್ತೆ ಅಂತ…

1. ATM ಸ್ಕ್ರೀನ್ ಒಳಗೆ ಕ್ಯಾಮೆರಾ ಕೂಡಿಸುವಂಥ ಮಹಾನ್ ತಂತ್ರಜ್ಞಾನಿಗಳು ಇರ್ತಾರೆ

ಇಲ್ಲಿ ನೋಡಿ, ಕಳ್ಳರು ಈ ATM ಸ್ಕ್ರೀನಿನ ಕವರ್ ಒಳಗೆ ಹೆಂಗೆ ಕ್ಯಾಮೆರಾ ಇಟ್ಟಿದಾರೆ ಅಂತ ಈಕೆ ತೋರಿಸ್ತಾರೆ…

2. ಸ್ಕ್ರೀನ್ ಮೇಲೆ ಕೂಡ್ಸಿರೋ ಬಾಕ್ಸ್ ಒಳಗೆ ಬತ್ತಿ!

ಇಲ್ಲಿ ನೋಡಿ, ಮೇಲಿರೋ ಈ ಚಿಕ್ಕ ಬಾಕ್ಸ್ ಒಳಗೆ ಎಷ್ಟು ನೀಟಾಗಿ ಕ್ಯಾಮರಾ ಔಸಿಟ್ಟಿದಾರೆ ಅಂತ…

3. ನಕಲಿ Key Pad

ಯಾಕೆ ಹೇಳಿ? ನಿಮ್ಮ PIN ನಂಬರ್ ಕದಿಯಕ್ಕೆ.

4. ಕಾರ್ಡ್ ಹಾಕೋ ಕಡೆ ಬತ್ತಿ

ಕೆಲವರು ಕಳ್ಳರಂತೂ ಕಾರ್ಡ್ ಹಾಕೋ ಜಾಗವನ್ನೇ ಬದಲಾಯಿಸಿ ನಿಮ್ಮ ಕಾರ್ಡ್ ನಂಬರ್ ಕದೀತಾರೆ.

5. Pinhole Camera ಔಸಿಟ್ಟು ನಿಮ್ಮ PIN ನಂಬರ್ ಕದೀತಾರೆ

ಇಷ್ಟು ಚಿಕ್ಕ ಜಾಗದಲ್ಲಿ ಇಷ್ಟು ಚಿಕ್ಕ ಕ್ಯಾಮೆರಾ ಇರುತ್ತೆ ಅಂತ ಯಾರಿಗೆ ತಾನೇ ಗೊತ್ತಾಗುತ್ತೆ ರೀ? ಅವರೂ ಸರಿ, ಇಂಥ ಮಹಾನ್ ತಾಂತ್ರಿಕ ಕೆಲಸ ಮಾಡೋ ಬದ್ಲು ಏನಾದರೂ ಒಳ್ಳೇ ಕೆಲಸ ಮಾಡಬಾರದಾ?

6. ಬಟನ್ ಬಣ್ಣ ಏನು ಬದಲಾಗಿಲ್ಲ ತಾನೇ?

ಇದು ಒಂದೇ ATM ಫೋಟೋಗಳು… ಎರಡು ಬೇರೆ ಬೇರೆ ದಿನ ತೆಗೆದಿರೋದು. ಒಳಗೆ ಮಾಡಬಾರದು ಮಾಡಿ ಒಂದು ಸುಳಿವು ಬಿಟ್ಟು ಹೋಗಿದಾರೆ: ಬಟನ್ ಬಣ್ಣ. ಇದನ್ನೆಲ್ಲ ಗಮನಿಸೋರಿಗೆ ಬದಲಾಗಿರೋ ಬಣ್ಣ ಗೊತ್ತಾಗುತ್ತೆ. ಮಿಕ್ಕೋರು?…

7. ಏನ್ ತಲೆ ನೋಡಿ… ತೊಗೊಂಡ್ ಹೋಗಿ ಮ್ಯೂಸಿಯಮ್ಮಲ್ಲಿ ಇಡಬೇಕು

ಇಲ್ಲಿ ನೋಡಿ, keypad ನಲ್ಲಿ ಎಂಥ ಸೆಟಿಂಗ್ ಮಾಡಿದಾರೆ ಅಂದ್ರೆ ನೀವು ನಂಬರ್ ಒತ್ತುತ್ತಾ ಇದ್ದಂಗೇ ಅಲ್ಲೀ ಬಾಸ್-ಗೆ SMS ಮೂಲಕ ಎಲ್ಲಾ ಗೊತ್ತಾಗುತ್ತೆ!

8. Nokia ಫೋನ್ ಬ್ಯಾಟರಿ ತೊಗೊಂಡು ಮಾಡಿರೋದು ನೋಡಿ

ಒಂದು ನೋಕಿಯಾ ಬ್ಯಾಟರೆ ಸಿಕ್ಕರೆ ಜನ ಏನೇನ್ ಮಾಡ್ತಾಅರೆ ನೋಡಿ. ಸ್ಕ್ರೀನ್ ಫ್ರೇಮ್ ಒಳಗೆ ಹೆಂಗೆ ಕ್ಯಾಮೆರಾ ಕೂಡ್ಸಿದಾರೆ ಅಂದರೆ ನಂಬಕ್ಕಾಗಲ್ಲ!

9. ಜಾಗ ಎಷ್ಟ್ ಚೆನ್ನಾಗಿ ಉಪಯೋಗಿಸಿಕೊಂಡಿದಾರೆ ನೋಡಿ

ತಗಳಪ್ಪ! ಇಲ್ಲಿ ನೋಡುದ್ರೆ ಇಡೀ ಮೊಬೈಲೇ ಒಳಗೆ ಔಸಿಟ್ತಿದಾರೆ! ATM ಒಳಗೆ ಒಂದು ಕ್ಯಾಮರಾ ಅಂತೂ ಇದ್ದೆ ಇರುತ್ತೆ. ಆದರೆ ಇಲ್ಲಿ ನೋಡಿ, ಕಳ್ಳರು ಪಕ್ಕದಲ್ಲಿ ಇನ್ನೊಂದು ಇಟ್ಟಿದಾರೆ… ಗೊತ್ತೇ ಆಗದಂಗೆ!

10. ಒಡೆದು ಹಾಕಿ ಬತ್ತಿ

ರಸೀದಿ ಪ್ರಿಂಟಾಗಿ ಬರೋ ಜಾಗದಲ್ಲಿ ಒಡೆದು ಒಳಗೆ ಬತ್ತಿ ಇಟ್ಟಿರ್ತಾರೆ ಅಂದ್ರೆ ನಂಬ್ತೀರಾ?

11. ಕುರುಡರಿಗೋಸ್ಕರ ಹಾಕಿರೋ ತಂತ್ರಜ್ಞಾನ… ಆದರೆ…

ಕೆಲವು ATMಗಳಲ್ಲಿ ಕುರುಡರಿಗೋಸ್ಕರ ಆಡಿಯೋ‌ ಜ್ಯಾಕ್ ಹಾಕಿರ್ತಾರೆ. ಕಳ್ಳರು ಇವರನ್ನೂ ಬಿಡಲ್ಲ. ಅಲ್ಲೂ ಕದ್ದು ಕೇಳಿ ಕದೀತಾರೆ.

ನೋಡಿ, ಕಳ್ಳರು ಇರೋ ವರೆಗೂ ಕಳ್ಳತನ ಇದ್ದೇ ಇರುತ್ತೆ. ತಂತ್ರಜ್ಞಾನದಿಂದ ಕಳ್ಳತನ ನಿರ್ಮೂಲನೆ ಆಗಲ್ಲ… ಕಳ್ಳರು ತಂತ್ರಜ್ಞಾನ ಕಲಿತುಕೊಳ್ತಾರೆ, ಅಷ್ಟೇ. ಕಳ್ಳತನ ನಿಜವಾಗಲೂ ನಿರ್ಮೂಲನೆ ಆಗಬೇಕು ಅನ್ನೋದಾದ್ರೆ ಮನಸ್ಸುಗಳು ಬದಲಾಗಬೇಕು. ಕಳ್ಳತನದ ದಾರಿ ಹಿಡಿಯೋರಿಗೆ ಬೇರೆ ರೀತೀಲಿ ಜೀವನ ಮಾಡಕ್ಕೆ ಆಗಬೇಕು. ಆದರೆ ಅವೆಲ್ಲ ಆಗೋ ವರೆಗೆ ನಿಮ್ಮ ಜೇಬು ತೂತಾಗದಿರಲಿ ಅಂತ ಇದನ್ನೆಲ್ಲ ಹೇಳಬೇಕಾಗಿ ಬಂತು, ಅಷ್ಟೇ.

ಮಾಹಿತಿ ಮತ್ತು ಚಿತ್ರಗಳ ಮೂಲ