ಈ 11 ರೀತಿಯ ಅಪ್ಪುಗೆಗಳಲ್ಲಿ ಯಾವುದಕ್ಕೆ ಏನ್ ಅರ್ಥ ಅಂತ ತಿಳ್ಕೊಂಡಿರಿ ಬೇಕಾಗುತ್ತೆ

ಒಂದೊಂದ್ ಒಂದೊಂಥರ

ಆಪ್ಪುಗೆ

ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ರೀತಿಯಲ್ಲಿ ತಬ್ಬಿಕೊಳ್ಳೋ ಸಂದರ್ಭ ಬಂದೇ ಬರುತ್ತೆ. ಸುಖ ದುಃಖ, ನೋವು ನಲಿವು, ಸೋಲು ಗೆಲುವನ್ನು ತಬ್ಬಿಕೊಳ್ಳೋ ಮೂಲಕ ವ್ಯಕ್ತಪಡಿಸ್ತೀವಿ. ತಬ್ಬಿಕೊಳ್ಳೋದ್ರಲ್ಲೂ ನಾನಾ ಬಗೆಗಳಿವೆ ಅಂತ ಸಂಶೋಧಕರು ಕಂಡುಹಿಡಿದಿದ್ದಾರೆ. ಅಷ್ಟೇ ಅಲ್ಲ ಅವುಗಳ ಗುಟ್ಟನ್ನೂ ಬಿಡಿಸಿದ್ದಾರೆ. 

1. ಸೊಂಟ ಬಳಸಿ ಅಪ್ಕೊಳೋದು - ಭರವಸೆ


ನಾನಿದ್ದೀನಿ ಭಯಬೇಡ ಅನ್ನೋ ಭರವಸೆ ನೀಡೋ ಅಪ್ಪುಗೆ ಇದು. ಹೆಣ್ಣಿನ ಬೆನ್ನಿಗೆ ಆಸರೆಯಾಗಿ ನಿಂತಿರುವುದು, ತಬ್ಬಿ ಹಿಡಿದಿರುವ ರೀತಿ ಹೆಣ್ಣಿಗೆ ರಕ್ಷಣೆ ಕೊಡೋ ಭರವಸೆ ನೀಡುತ್ತೆ. ಪ್ರೇಮಿಗಳ ನಡುವಿನ ಅನ್ಯೋನ್ಯತೆಯ ಸಂಕೇತ ಇದು. 

2.  ಒಬ್ಬರನ್ನೊಬ್ಬರು ಬಳಸಿ ಅಪ್ಪಿಕೊಳ್ಳೋದು - ನಂಬಿಕೆ


ಈ ರೀತಿಯ ಅಪ್ಪುಗೆ ನಂಬಿಕೆಯ ಸಂಕೇತ. ಬಿಗಿಯಾಗಿ ಅಪ್ಪಿಕೊಂಡ ಬಳಿಕ ಒಬ್ಬರ ಬೆನ್ನನ್ನು ಮತ್ತೊಬ್ಬರು ನಯವಾಗಿ ತಟ್ಟೋದು, ಉಜ್ಜೋದು ಒಬ್ಬರ ಮೇಲೊಬ್ಬರಿಗೆ ತುಂಬಾ ಭರವಸೆ ಇದೆ ಎಂಬುದನ್ನು ತೋರಿಸುತ್ತದೆ.  ಬೆನ್ನಿ ಹಿಂದಿನಿಂದ ಏನ್ ಬೇಕಾದ್ರೂ ಮಾಡಬಹುದು. ಆದ್ರೆ ಆ ರೀತಿ ನಾನಲ್ಲ ಎಂಬುದನ್ನು ಈ ರೀತಿಯ ಅಪ್ಪುಗೆ ಸೂಚಿಸುತ್ತೆ.

3. ಅಪ್ಪಿಕೊಂಡು ಬೆನ್ನುತಟ್ಟೋದು - ಗೆಳೆತನ


ಇದು ಗೆಳೆತನದ, ಪರಸ್ಪರ ಸಲಿಗೆ, ವಿಶ್ವಾಸ, ನಂಬಿಕೆ, ಗಾಡಸ್ನೇಹದ ಸಂಕೇತ. ಈ ಅಪ್ಪುಗೆಯಲ್ಲಿ ಎಲ್ಲೂ ರೊಮ್ಯಾಂಟಿಕ್ ಭಾವನೆ ಬರಲ್ಲ. ಇದೊಂದು ಅಪ್ಪಟ ಸ್ನೇಹದ ಅಪ್ಪುಗೆ. 

4. ಕೊರಳನ್ನು ಸುತ್ತಿಬಳಸುವ ಅಪ್ಪುಗೆ - ಪ್ರೇಮ


ಇದು ಪ್ರೇಮಿಗಳಿಗೆ ಮೀಸಲಾದ ಅಪ್ಪುಗೆ. ಇಲ್ಲಿ ಗಂಡು-ಹೆಣ್ಣಿನ ನಡುವೆಯ ಪ್ರೀತಿಯನ್ನು ಬಿಟ್ಟು ಬೇರೆ ಯಾವ ಅರ್ಥವೂ ಇಲ್ಲ. ಒಬ್ಬರು ಕೊರಳನ್ನು ಸುತ್ತಿ ಬಳಸಿದರೆ ಇನ್ನೊಬ್ಬರು ಸೊಂಟ ಸುತ್ತಿ ಬಳಸಿ ಅಪ್ಪಿಕೊಳ್ಳೋದು. ಇನ್ನೂ ಈಗಷ್ಟೇ ಪ್ರೀತಿಸುತ್ತಿರೋರ ಅಪ್ಪುಗೆ ಇದು. 

5. ಭುಜ ಬಳಸಿ ಅಪ್ಪುಕೊಳ್ಳೋದು - ಹತ್ತಿರದ ಗೆಳೆತನ


ಇಬ್ಬರು ಏನೋ ಕರಾಮತ್ತು ಮಾಡಿರುವವರ ಅಪ್ಪುಗೆ ಇದು! ಒಮ್ಮೊಮ್ಮೆ ಹತ್ತಿರದ ಫ್ರೆಂಡ್ಸ್ ಕೂಡ ಈ ರೀತಿ ಅಪ್ಪಿಕೊಳ್ತಾರೆ. ಈ ರೀತಿ ಯಾರೇ ಅಪ್ಪಿಕೊಂಡ್ರು ಅದ್ರ ಅರ್ಥ ಎಷ್ಟು ಬಿಗಿಯಾಗಿ ಅಪ್ಪಿಕೊಳ್ತಾರೋ ಅಷ್ಟು ಗಾಢವಾಗಿದೆ ಅವರ ಸಂಬಂಧ ಅಂತ.

6. ಉಸಿರಾಡಕ್ಕೆ ಆಗದಂತೆ ಬಿಗಿದಪ್ಪುವುದು - "ಬಿಟ್ಟಿರಲಾರೆವು"


ಇಬ್ಬರಿಗೂ ಬಿಡಿಸಿಕೊಂಡರೆ ಸಾಕು ಅನ್ನಿಸುತ್ತೆ. ಎಷ್ಟು ಸಾಧ್ಯವೋ ಅಷ್ಟು ಬಿಗಿಯಾಗಿ ಅಪ್ಪಿಕೊಳ್ತಾರೆ. ನಾವಿಬ್ಬರೂ ಬಿಟ್ಟಿರಲಾರೆವು ಎಂಬುದರ ಸಂಕೇತ ಈ ಅಪ್ಪುಗೆ.  

7.  ಎತ್ತಿ ಮುದ್ದಾಡೋ ಅಪ್ಪುಗೆ - ಪ್ರೇಮ


ಇದು ಪ್ರೇಮಿಗಳಿಗೆ ಮಾತ್ರ ಸಂಬಂಧಪಟ್ಟ ಅಪ್ಪುಗೆ. ಒಬ್ಬರನ್ನು ಎತ್ತಿಕೊಂಡೋ ಅಥ್ವಾ ಕೂತ ಭಂಗಿಯಲ್ಲಿ ಅಪ್ಪಿಕೊಳ್ಳೋದು. ಹೆಚ್ಚಿಗೇನು ಹೇಳೋದು ಬೇಡ ಪ್ರೇಮಿಗಳನ್ನು ಪ್ರೇಮಲೋಕದಲ್ಲಿ ತೇಲಾಡಿಸೋ ಅಪ್ಪುಗೆ ಇದು.   

8. ಹಿಂಜರಿಕೆಯ ಅಪ್ಪುಗೆ - ಇನ್ನೂ ಗಟ್ಟಿಯಲ್ಲದ ಪ್ರೇಮ


ಅಪ್ಪಿಕೊಳ್ಳಲೋ ಬೇಡವೋ ಅನ್ನೋ ರೀತಿ ಇರುತ್ತೆ. ಇಬ್ಬರೂ ಸಾಕಷ್ಟು ದೂರ ನಿಂತೇ ಅಪ್ಪಿಕೊಳ್ತಾರೆ. ಇಬ್ಬರ ನಡುವಿನ ಸಂಬಂಧಗಳು ಗಾಢವಾಗಿಲ್ಲ ಎಂಬುದನ್ನು ತೋರಿಸುತ್ತೆ. ಇಬ್ಬರ ನಡುವಿನ ಅಂತರವನ್ನ ಈ ಅಪ್ಪುಗೆ ತೋರಿಸುತ್ತೆ. 

9. ಕಣ್ಣಲ್ಲಿ ಕಣ್ಣಿಟ್ಟು ನೋಡ್ತಾ ಅಪ್ಪಿಕೊಳ್ಳೋದು - ಬಿಡಿಸಲಾರದ ಬಾಂಧವ್ಯ


ಇದು ಎರಡು ಮನಸುಗಳನ್ನ ಬೆಸೆಯೋ ಅಪ್ಪುಗೆ. ಇಬ್ಬರೂ ಹೇಗೆ ಅಪ್ಪಿಕೊಂಡರೂ ಪರ್ವಾಗಿಲ್ಲ ಇಲ್ಲಿ ಕಣ್ಣುಕಣ್ಣು ಕಲೆತಾಗ ಮನವು ಉಯ್ಯಾಲೆಯಂತೆ ತೂಗುವುದು ಮುಖ್ಯ. ಇದು ಗಾಢಪ್ರೇಮದ, ಬಿಡಿಸಲಾರದ ಬಾಂಧವ್ಯದ ಸಂಕೇತ ತೋರಿಸುತ್ತೆ.

10. ಒಬ್ಬರು ಮಾತ್ರ ಗಟ್ಟಿಯಾಗಿ ಅಪ್ಪಿಕೊಳ್ಳೋದು - ಒಬ್ಬರು ಮಾತ್ರ ಪ್ರೀತಿಸುತ್ತಿರುವ ಸಂಕೇತ


ಒಬ್ರು ಸುಮ್ನೆ ಇರ್ತಾರೆ ಆದ್ರೆ ಇನ್ನೊಬ್ರು ಬಿಗಿಯಾಗಿ ಅವರನ್ನು ಅಪ್ಪಿಕೊಳ್ತಾರೆ. ಇದು ಇಬ್ಬರ ನಡುವೆ ಸಂಬಂಧಗಳು ತಾಳತಪ್ಪಿವೆ ಎಂಬುದನ್ನು ತೋರಿಸುತ್ತೆ.  ಇಬ್ಬರ ನಡುವೆ ನಿಜವಾದ ಸ್ನೇಹ ಸಂಬಂಧ ಇಲ್ಲ ಎಂಬುದಕ್ಕೆ ನಿದರ್ಶನ ಇದು. 

11. ಒಬ್ಬರ ಜೇಬಲ್ಲಿ ಇನ್ನೊಬ್ರು ಕೈಯಿಟ್ಟು ಅಪ್ಪಿಕೊಳ್ಳೋದು - ಅತಿ ಹೆಚ್ಚು ಸಲುಗೆ


ಇಬ್ಬರ ನಡುವೆ ತುಂಬಾ ಸಲುಗೆ ಇದೆ ಎಂಬುದನ್ನು ಇದು ತೋರಿಸುತ್ತೆ.  ಇಬ್ಬರದ್ದೂ ಒಳ್ಳೆ ಜೋಡಿ ಎಂಬುದನ್ನು ಈ ರೀತಿಯ ಅಪ್ಪುಗೆ ತೋರಿಸುತ್ತೆ. ಸಂಬಂಧ ಇನ್ನಷ್ಟು ಗಟ್ಟಿಯಾಗಲು ಹೆಚ್ಚಿನ ಕಷ್ಟ ಪಡಬೇಕಾಗಿಲ್ಲ ಈ ರೀತಿ ಅಪ್ಪಿಕೊಳ್ಳೋರು. 

ಚಿತ್ರಗಳುಃ ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ಅವಳು ನಿನ್ನವಳೇ ಆಗಿದ್ದರೆ ಈಗಾಗಲೇ ಈ 23 ಗುರುತುಗಳಲ್ಲಿ ಕೆಲವಾದರೂ‌ ಕಂಡಿರಬೇಕು

ಕಂಡಿದ್ದರೆ ನಿನ್ನ ಜೀವನಸಂಗಾತಿ ಅವಳೇ

ಜೀವನದಲ್ಲಿ ಇಂತ ಅದ್ಭುತ ನಡಿಯೋದು ಒಂದೇ ಒಂದು ಸತಿ. ನಿಮ್ಮ ಜೀವನಕ್ಕೆ ಬೆಳಕ್ ತರ ಬಂದು, ನಿಮ್ಮ ಸುಖ ದುಃಖದಲ್ಲೆಲ್ಲ ಜೊತೆಗಿದ್ದು, ಇವಳೇ ನಿಮ್ಮ ಸಂಗಾತಿ ಇರ್ಬೋದೆನೋ ಅಂತ ಅನ್ನಿಸ್ತಿದ್ರೆ, ಅವ್ಳಲ್ಲಿ ಈ ಕೆಳ್ಗಿರೊ ಗುಣಗಳಿದ್ರೆ ಡೌಟೇ ಬೇಡ ಅವ್ಳು ನಿಮ್ ಹುಡ್ಗಿ...

1. ಅವಳು ನಿಮ್ಮ್ ಜೊತೆ ಇದ್ದಾಗ ನಿಮಗೆ ಏನೋ ಒಂದು ಪ್ರೇರಣೆ, ನಿನ್ನೆಗಿಂತ ನನ್ನ ಜೀವನ ಇನ್ನು ಚೆನಾಗ್ ಆಗ್ಬೇಕು, ಕಷ್ಟ ಪಟ್ಟು ಜೀವನದಲ್ಲಿ ಇನ್ನು ಮೇಲೇರಬೇಕು ಅಂತ ಅನ್ನಿಸತ್ತೆ.

2. ಏಯ್ ಗಟ್ಟಿ ಗಂಡಸು ಮಾರ್ರೆ ನಾನು, ಯಾವ್ ಸೆಂಟಿಮೆಂಟು ನನ್ನತ್ರ ನಡಿಯಲ್ಲ, ಕಲ್ಲು ಬಂಡೆ ಥರ ನಾನು ಅಂತಿದ್ದ ನಿಮ್ಮನ್ನ, ಈ ಹುಡುಗಿ ಹೋಗ್ತಾಹೋಗ್ತಾ ಕರ್ಗೋಗೊ ಹಾಗೆ ಮಾಡ್ಬಿಡ್ತಾಳೆ. ಅವ್ಳು ನಿಮ್ಮಲ್ಲಿ ಪ್ರೀತಿ, ವಾತ್ಸಲ್ಯ, ಸಂತೋಷ ಒಂತರ ಎಲ್ಲ ಭಾವನೆ ನಿಮ್ಮಲ್ಲಿ ಶುರು ಆಗೋ ಹಾಗೆ ಮಾಡಿರ್ತಾಳೆ. ಅವ್ಳಿಗೆ ನಿಮ್ ಕಣ್ಣಲ್ಲೂ ನೀರ್ ಹಾಕ್ಸೋ ತಾಕತ್ತಿರತ್ತೆ... ಇಂತ ಭಾವನೆಗಳು ನಿಮ್ಗೆ ಮುಂಚೆ ಅನುಭವಕ್ಕೆ ಬಂದಿರಲ್ಲ.

3. ಇದೊಂತರ ವಿಚಿತ್ರ. ಅವ್ಳ ಖುಷಿ ನಿಮಗೆ ಖುಷಿ ಕೊಡತ್ತೆ. ಅವಳ ಒಂದು ನಗು ಸಾಕು ನಿಮಗೆ ಸಿಕ್ಕಾಪಟ್ಟೆ ಖುಷಿಯಾಗಿರಕ್ಕೆ, ಅವ್ಳ ನಗು ಕಾರಣ ನಿಮ್ಗೆ ಬೇಕಿರಲ್ಲ, ಅವ್ಳ್ ನಕ್ರೆ ಸಾಕು.

4. ನಿಮ್ಮ ಎಲ್ಲ ಯೋಚನೆ, ನಿಮ್ಮ ಟೆನ್ಷನ್ನು ಎಲ್ಲ ದೂರ ಆಗಕ್ಕೆ ಅವಳ ಒಂದೇ ಒಂದು ನಗು ಸಾಕು. ಆ ಒಂದ್ ಕ್ಷಣ ಏನೋ ಒಂತರ ನೆಮ್ಮದಿ ಸಿಗೊಹಾಗ್ ಮಾಡತ್ತೆ.

ಮೂಲ

5. ಅವಳ ನಗು ನಿಮಗೆ ಖುಷಿ ತರತ್ತೆ ಅಂತ ಯಾವಾಗ್ಲೂ ಅವ್ಳು ನಿಮ್ಮತ್ರ ನಗ್ತನೇ ಇರ್ಬೇಕಿಲ್ಲ... ಅವ್ಳ್ ಜೊತೆ ಟೈಮ್ ಸ್ಪೆಂಡ್ ಮಾಡೊ ಭಾಗ್ಯ ನಿಮ್ಗೆ ಸಿಕ್ಕಿದ್ರೆ ಸಾಕಾಗಿರತ್ತೆ. ಅವ್ಳ್ ಜೊತೆ ಇರೋ ಅಷ್ಟೂ ಹೊತ್ತು ನಿಮ್ಗೆ ಮಧುರವಾದ ಕ್ಷಣ ಅನ್ನಿಸ್ತಿರತ್ತೆ.

6. ಎರಡು ದೇಹ ಒಂದೇ ಜೀವ ನಿಮ್ಮದು ಅನ್ನಿಸತ್ತೆ.

7. ಅವಳ ಎಲ್ಲ ಭಾವನೆ ನಿಮಗೆ ಆಕರ್ಷಕವಾಗಿರತ್ತೆ, ಅವಳ ಬಗ್ಗೆ ಪೂರ್ತಿ ತಿಳ್ಕೊಬೇಕು ಅಂತ ಅನ್ನಿಸತ್ತೆ ನಿಮಗೆ... ಅವ್ಳಲ್ಲಿರೊ ಒಳ್ಳೇದು, ಕೆಟ್ಟದ್ದು ಮತ್ತೆ ಸುಮಾರಾಗಿರೊ ವಿಚಾರ್ವೆಲ್ಲ ನಿಮ್ಗೆ ಓಕೆ ಆಗೋಗಿರತ್ತೆ... ಅವ್ಳನ್ನ ನೀವು ಆರಾಧಿಸಕ್ಕೆ ಶುರು ಮಾದ್ಬಿಟ್ಟಿರ್ತೀರ.

8. ಅವಳು ನಿಮ್ಮ ಕಡೆ ನಡ್ಕೊಂಡು ಬರ್ತಿದ್ರೆ ನಿಮ್ ಕಣ್ಣಿಗೆ ಬೇರೇನೂ ಕಾಣಲ್ಲ... ಎಲ್ಲ ಮಂಜ್ ಮಂಜು ಆಗೋಗತ್ತೆ... ಬರಿ ಅವಳೊಬ್ಬಳೇ... ನಿಮ್ಮ ಟೆನ್ಷನ್ನು, ನಿಮ್ಮ ಕೆಲಸಗಳೆಲ್ಲ ನೆನಪಾಗದೇ ಇಲ್ಲ, ಇಡೀ ಜೀವನ ಹೀಗೆ ಅವ್ಳನ್ನ ನೋಡ್ಕೊಂಡು ನೆಮ್ಮದಿಯಾಗಿದ್ಬಿಡ್ಬೇಕು ಅನ್ನಿಸತ್ತೆ.

ಮೂಲ

9. ಇವತ್ತಿನ ತಂಕ ಯಾರ್ ಹತ್ರನೂ ಹೇಳಿರದ ಗುಟ್ಟನ್ನ ಇವಳ ಹತ್ರ ಹೇಳ್ಕೊಬೇಕು ಅನ್ನಿಸತ್ತೆ. ನಿಮ್ಮ ಭಾವನೆಗಳ್ನೆಲ್ಲ ಅವ್ಳ್ ಹತ್ರ ಹಂಚ್ಕೊಬೇಕು ಅನ್ನಿಸತ್ತೆ. ನಿಮ್ಮೆಲ್ಲಾ ಗುಟ್ಟುಗಳ್ನ ಅವ್ಳು ಕಾಪಾಡ್ತಾಳೆ.

10. ನಿಮಗೆ ಗೊತ್ತಿಲ್ಲದ ಹಾಗೆ ಅವಳು ನಿಮ್ಮ ಪ್ರಪಂಚ ಆಗ್ಬಿಟ್ಟಿರ್ತಾಳೆ. ನೀವು ನಿಮ್ಮ ಮುಂದಿನ ಜೀವನದ ಬಗ್ಗೆ ಮಾಡೋ ಪ್ರತಿಯೊಂದು ಯೋಚನೇಲು ಅವಳಿಗೆ ಜಾಗ ಕೊಟ್ಟಿರ್ತೀರ.

11. ಕನಸಲೂ ನೀನೆ ಮನಸಲೂ ನೀನೆ... ದಿನಾ ಕನಸಲ್ಲಿ ಅವಳೇ ಬರ್ತಾಳೆ. ನಿಮಗೆ ಅವಳ್ ಬಿಟ್ಟು ಬೇರೇನೂ ಬೇಕಿರಲ್ಲ.

12. ಯಾವತ್ತೂ ಅನುಭವಿಸದ ಅನ್ಯೋನ್ಯತೆ ನಿಮಗೆ ಅವ್ಳ ಬಗ್ಗೆ. ಅಪ್ಪಿ ತಪ್ಪಿ ಒಂದ್ಸತಿ ಅವ್ಳನ್ನ ಮುಟ್ಟಿದ್ರೆ ಮೈ ಜುಮ್ ಅನ್ನತ್ತೆ, ತಲೆ ನಿಲ್ಲದೇ ಇಲ್ಲ. ಅವ್ಳನ್ನ ನಿಮ್ಮ ತೋಳಲ್ಲಿ ತಬ್ಬಿ ಹಿಡ್ಕೊಬೇಕು ಅನ್ನಿಸತ್ತೆ, ಹೀಗೆ ಜೀವನ ಪೂರ್ತಿ ಒಟ್ಟಿಗೆ ಇರ್ಬೇಕು ಅನ್ನಿಸ್ತಿರತ್ತೆ.

ಮೂಲ

13. ಬರಿ ಅದೇ ಅಂತಲ್ಲ, ಜಾಸ್ತಿ ಸುತ್ತಾಡ್ಬೇಕು ಅನ್ನೊಹಾಗೆ ಮಾಡ್ತಾಳೆ, ಬೇರೆ ಬೇರೆ ಹೋಟೆಲ್ಲಿಗೆ ಹೋಗಿ ಹೊಸ-ಹೊಸ ತಿಂಡಿ ಊಟ ಟ್ರೈ ಮಾಡ್ಬೇಕು ಅನ್ನಿಸೋ ಹಾಗೆ ಮಾಡ್ತಾಳೆ. ಪ್ರತಿ ಕ್ಷಣ ಜಗತ್ತು ಹೊಸದಾಗಿ ಕಾಣೋಹಾಗೆ ಮಾಡ್ತಾಳೆ. ನಿಮ್ಮ ಜೀವನ  ಇನ್ನು ಕುತೂಹಲಕಾರಿ ಆಗತ್ತೆ.

14. ನಿಮ್ಮ ಸ್ನೇಹಿತರಿಗೆ, ಮನೆಯವರಿಗೆಲ್ಲ ಅವಳನ್ನ ಪರಿಚಯ ಮಾಡ್ಸ್ ಬೇಕು ಅನ್ನಿಸತ್ತೆ. ಅವಳೆಷ್ಟು ಒಳ್ಳೇವ್ಳು ಅಂತ ನಿಮ್ಮ ಮನೆಯವರಿಗೆ ಖಂಡಿತ ಗೊತ್ತಾಗತ್ತೆ ಅಂತ ನಿಮಗನ್ನಿಸತ್ತೆ... ಅವ್ಳ ಗುಣ ಎಲ್ಲಾರ್ಗೂ ಹಿಡ್ಸೋ ಅಂತದ್ದು ಅಂತ ನಿಮ್ಗೆ ಎಷ್ಟರಮಟ್ಟಿಗೆ ಅನ್ನಿಸತ್ತೆ ಅಂದ್ರೆ ಕೆಲವೊಮ್ಮೆ ಇವಳನ್ನ ನನಗಿಂತ ಜಾಸ್ತಿ ನನ್ನ ಸ್ನೇಹಿತರೆ ಇಷ್ಟ ಪಡ್ತಿದಾರಲ್ಲಪ್ಪ ಅಂತ ಅನ್ನಿಸಿಬಿಡತ್ತೆ.

15. ನಿಮ್ಮ ಬಗ್ಗೆ ತುಂಬ ಕಾಳಜಿ ಮತ್ತೆ ಪ್ರೀತಿ ತೋರುಸ್ತಾಳೆ ಅವಳು, ಹೇಗೆ ಅಂತ ಹೇಳಕ್ಕಾಗಲ್ಲ. ದಿನ ನೀರ್ ಕುಡಿ ಅಂತ ಹೇಳೋದ್ರಿಂದ ನಿಮ್ಮ ಹುಟ್ಟು ಹಬ್ಬಕ್ಕೆ ಅದ್ಭುತವಾಗಿ ಒಂದು ಸುರ್ಪ್ರೈಸ್ ರೆಡಿ ಮಾಡೊತನ್ಕ ಎಲ್ಲ ಮಾಡಿರ್ತಾಳೆ... ನಿಮ್ಮನ್ನ ಯಾವಾಗ್ಲೂ ಖುಷಿಯಾಗಿ ನೋಡ್ಬೇಕು ಅನ್ನೋದು ಅವಳ ಆಸೆ ಆಗಿರತ್ತೆ.

16. ಅವ್ಳಿಗೆ ನಿಮ್ಮ ನಿಜವಾದ ಮುಖ ನೀವ್ ತೋರಿಸ್ತೀರ. ನಿಮಗೆ ಮೆಚ್ಚಿಸಕ್ಕೆ ನಾಟಕ ಆಡ್ಬೇಕು ಅಂತ ಅನ್ಸಲ್ಲ. ನೀವಾಗಿ ಅವಳೊಂದಿಗೆ ಆರಾಮಾಗಿ ಇರಬಹುದು. ನಿಮ್ಮ ಎಲ್ಲ ತುಂಟತನ ಮತ್ತೆ ತರ್ಲೆಗಳು ಅವ್ಳು ನಿಮ್ಮನ್ನ ಹೆಚ್ಚೆಚ್ಚು ಪ್ರೀತ್ಸೋ ಹಾಗೆ ಮಾಡತ್ತೆ. ಅವಳ ಜೊತೆ ನಿಮಗೆ ಯಾವ್ದೇ ಹಿಂಜರಿಕೆ ಇರಲ್ಲ.

ಮೂಲ

17. ಅವಳು ಸ್ವಂತಂತ್ರವಾಗಿ ತನ್ನ ಕೆಲಸ ತಾನು ಮಾಡ್ಕೊಂಡು ಇರೋಂತ ಹುಡುಗಿ ಆಗಿದ್ರು ಯಾವಾಗಾದ್ರೂ ಸಹಾಯ ಬೇಕು ಅನ್ಸಿದ್ರೆ, ನಿಮ್ಮನ್ನ ಕೇಳ್ತಾಳೆ. ನೀವು ಇಲ್ಲ ಅನ್ನಲ್ಲ ಅಂತ ಅವ್ಳಿಗೆ ಚೆನ್ನಾಗಿ ಗೊತ್ತಿರತ್ತೆ. ಯಾವತ್ತೂ ನಿಮಗೆ ಮೋಸ ಮಾಡಬೇಕು ಅನ್ನೋ ಯೋಚ್ನೆ ಇರಲ್ಲ.

18. ನಿಮಗೆ ಚೆನ್ನಾಗಿ ಗೊತ್ತಿರತ್ತೆ ಇವ್ಳು ಯಾವಾಗ್ಲೂ ಎಂತ ಸಮಯದಲ್ಲೂ ಜೊತೇಗೆ ಇರ್ತಾಳೆ ಅಂತ. ಕೆಲವೊಮ್ಮೆ ನಿಮಗೆ ಏನು ತೋಚದೇ, ಇನ್ನೇನು ದಾರಿ ಇಲ್ಲ ಅಂದಾಗ ಕೂಡ, ಇವಳು ನಿಮ್ಮನ್ನ ಬಿಡದೇ ಬೆನ್ನೆಲುಬಾಗಿ ನಿಲ್ತಾಳೆ ಅನ್ನಿಸತ್ತೆ.

19. ಯಾವುದೇ ಅನುಮಾನ ಇಲ್ಲದೆ ಕಣ್ಣು ಮುಚ್ಚಿಕೊಂಡು ಎಲ್ಲ ಸಮಯದಲ್ಲೂ ನಂಬಬಹುದು. ಅವಳು ಎಲ್ಲಿ, ಯಾರ್ ಜೊತೆ, ಯಾವ ಸಮಯದಲ್ಲಿ ಇದ್ದಳು, ಯಾಕೆ ಇದ್ದಳು ಅನ್ನೋದೆಲ್ಲ ನಿಮ್ಗೆ ದೊಡ್ಡ ವಿಷ್ಯ ಅನ್ಸದೇ ಇಲ್ಲ, ಅವ್ಳ ಬಗ್ಗೆ ಬಲವಾದ್ ನಂಬಿಕೆ ನಿಮ್ಗಿರತ್ತೆ. ನಿಮ್ಮ ಸಂಬಂದಾನೆ ಹಾಗೆ! ಇಬ್ಬರು ಒಬ್ಬರನ್ನ ಒಬ್ಬರು ಅಷ್ಟು ನಂಬ್ತೀರಿ, ಅಷ್ಟೇ ಗೌರವ ಕೊಡ್ತೀರಿ.

20. ಅವ್ಳು ಯಾವದಾದ್ರು ಕಾರಣಕ್ಕೆ ಬೇಜಾರಾಗಿದ್ರೆ ನಿಮಗೆ ತಡ್ಕೊಳಕ್ಕಾಗಲ್ಲ, ಯಾರಾದ್ರೂ ಬೇಜಾರ್ ಮಾಡಿದ್ರೆ ನೀವು ಅವ್ರನ್ನ ಸುಮ್ನೆ ಬಿಡಲ್ಲ. ಅವಳು ದುಃಖ ಪಡೋದನ್ನ ನಿಮಗೆ ಸಹಿಸಿಕೊಳಕ್ಕೆ ಆಗದೇ ಇಲ್ಲ.

ಮೂಲ

21. ನೀವು ನಿಮ್ಮ ಮುಂದಿನ ದಿನಗಳಿಗೆ ಅಂತ ಮಾಡಿದ ಎಲ್ಲ ಯೋಚನೆಲಿ ನಿಮಗೆ ಗೊತ್ತಿಲ್ಲದ ಹಾಗೆ ಅವಳನ್ನು ಸೇರಿಸಿಕೊಂಡಿರ್ತೀರ. ನೀವು ಸುತ್ತಾಡಬೇಕು ಅನ್ಕೊಂಡಿರೋ ಜಾಗ, ನೀವು ಮಾಡ್ಬೇಕು ಅನ್ಕೊಂಡಿರೋ ಸಾಹಸ, ಹೀಗೇ ಎಲ್ಲದ್ರಲ್ಲೂ ಅವ್ಳು ಇದ್ದೇ ಇರ್ತಾಳೆ...

22. ನಿಮಗೆ ಸರ್ವಸ್ವಾನು ಅವಳೇ ಆಗಿರ್ತಾಳೆ. ನೀವು ರಾತ್ರಿ ಮಲಗುವಾಗ ತೊಗೊಳೋ ಕೊನೆ ಹೆಸರು ಅವಳದ್ದೇ, ಬೆಳಗ್ಗೆ ಎದ್ದಾಗ ಹೇಳೋ ಮೊದಲನೇ ಹೆಸರು ಅವಳದ್ದೇ. ನಿಮ್ಮೆಲ್ಲ ತುಂಟಾಟದಲ್ಲಿ ಅವಳು ಇರ್ತಾಳೆ, ಅವಳ ಜೊತೆ ನಿಮ್ಮ ಜೀವನ ಪೂರ್ತಿ ಕಳೀಬೇಕು ಅಂತ ಅನ್ನಿಸತ್ತೆ. ಹೌದು ಅವಳೇ ನಿಮ್ಮ ಪ್ರೇಯಸಿ, ಅವಳೇ ನಿಮ್ಮ ನಿಜವಾದ ಸಂಗಾತಿ.

23. ನಿಮ್ಮ ಬದುಕು ಸಾರ್ಥಕ ಅಂತ ಅನ್ನಿಸೋದು, ಬದುಕಿಗೆ ಒಂದು ಅರ್ಥ ಅಂತ ಸಿಗೋದು, ಅವಳು ನಿಮ್ಮ ಜೊತೆ ಇದ್ದಾಗ ಮಾತ್ರ.

ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: