ಹಸಿದು ಭಿಕ್ಷೆ ಬೇಡ್ತಿದ್ದ ಈ ಕನ್ನಡಿಗ ‘ಪ್ರವಾಸಿ ಕ್ಯಾಬ್ಸ್’ ಅನ್ನೋ 30 ಕೋಟಿ ₹ ಕಂಪನಿ ಕಟ್ಟಿದ ಕಥೆ

ಛಲವಿದ್ದರೆ ಗೆಲುವು ಅನ್ನಕ್ಕೆ ರೇಣುಕಾ ಆರಾಧ್ಯಂಗಿಂತ ಬೇರೆ ಉದಾಹರಣೆ ಬೇಕಿಲ್ಲ

ರೇಣುಕಾ

ಒಂದು ಕಾಲದಲ್ಲಿ ಒಂದೊತ್ತಿನ ಊಟಕ್ಕೂ ಗತಿ ಇರಲಿಲ್ಲ. ಈಗ ₹30 ಕೋಟಿ ಕಂಪನಿ ಒಡೆಯ. ಸಂಸಾರ ಸಾಗಿಸಲು ಏನೇನೋ ಕೆಲಸ ಮಾಡಬೇಕಾಯಿತು. ಈ ಹೊತ್ತು 150 ಉದ್ಯೋಗಿಗಳು ಇವರ ಕಂಪನಿಯಲ್ಲಿ ದುಡೀತ್ತಿದ್ದಾರೆ. ಈ ಕನ್ನಡಿಗ ಬೆಳೆದ ರೀತಿ, ಪಟ್ಟ ಕಷ್ಟ ಮಾಡಿದ ಸಾಧನೆ ಕೇಳಿದರೆ ನೀವು ಥ್ರಿಲ್ ಆಗ್ತೀರ.

ಇಂದು ಪ್ರಮುಖ ಉದ್ಯಮಿಗಳಲ್ಲಿ ಗುರುತಿಸಿಕೊಂಡಿರುವ ರೇಣುಕಾ ಆರಾಧ್ಯ ಅವರ ಕಥೆ ಎಂಥವರಿಗೂ ಸ್ಫೂರ್ತಿ ತುಂಬುತ್ತದೆ. ಹುಟ್ಟಿದ್ದು ಕಡುಬಡತನದಲ್ಲಿ, ಹೊಟ್ಟೆಪಾಡಿಗೆ ಬೀದಿಬೀದಿಗಳಲ್ಲಿ ಭಿಕ್ಷೆ ಎತ್ತಬೇಕಾಯಿತು. ಅವರ ಜೀವನ ಕಥೆ ಯಾವ ಸಿನಿಮಾ ಕಥೆಗಿಂತಲೂ ಕಮ್ಮಿಇಲ್ಲ. 

ಒಂದು ಕಾಲದಲ್ಲಿ ಕೈಗಾಡಿ ತಳ್ಳುತ್ತಾ ಇದ್ದವನು ಇಂದು 1000 ಕಾರುಗಳ ಓನರ್. ಹತ್ತನೇ ಕ್ಲಾಸ್ ಪರೀಕ್ಷೆ ಪಾಸು ಮಾಡವನು ಇಂದು ಬಡಾ ಉದ್ಯಮಿಗಳ ಜೊತೆ ಕೈಕುಲುವಷ್ಟು ಸ್ಥಿತಿವಂತ ರೇಣುಕಾ ಆರಾಧ್ಯ. ಇದೆಲ್ಲಾ ಒಂದೇ ದಿನದಲ್ಲೇನು ಆಗಲಿಲ್ಲ. ಇದರ ಹಿಂದೆ ಸಾಕಷ್ಟು ಶ್ರಮ, ನೋವಿದೆ. ಅವರ ಸಾಧನೆಯ ಕಥೆ ಕೇಳೋಣ ಬನ್ನಿ.  

ಅಕ್ಕಿ, ರಾಗಿ, ಜೋಳ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದರು

ಇವರ ಹುಟ್ಟೂರು ಆನೇಕಲ್ ತಾಲೂಕಿನ ಸಣ್ಣಹಳ್ಳಿ ಗೋಪಸಂದ್ರ. ತಂದೆ ದೇವಸ್ಥಾನದ ಪೂಜಾರಿ. ಸರ್ಕಾರಕ್ಕೆ ಸೇರಿದ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದರೂ ರೆಗ್ಯುಲರ್ ಆದಾಯ ಅಂತ ಇರಲಿಲ್ಲ. ಪೂಜೆ ಮುಗಿದ ಕೂಡಲೆ ಅಕ್ಕಿ, ರಾಗಿ,ಜೋಳಕ್ಕಾಗಿ ಭಿಕ್ಷೆ ಬೇಡಲು ಜೋಳಿಗೆ ಹಿಡಿದು ಹೊರಟುಬಿಡುತ್ತಿದ್ದರು ಇವರ ತಂದೆ. ಭಿಕ್ಷೆಯಲ್ಲಿ ಬಂದ ದವಸಧಾನ್ಯಗಳನ್ನು ಮಾರಾಟ ಮಾಡಿ ಬಂದ ದುಡ್ಡಲ್ಲಿ ಕುಟುಂಬ ಸಾಗಿಸಬೇಕಾದ ಪರಿಸ್ಥಿತಿ. ಗಂಡಹೆಂಡತಿ, ಇಬ್ಬರು ಗಂಡು, ಒಂದು ಹೆಣ್ಣುಮಗು ಇದಿಷ್ಟು ಕುಟುಂಬ.

ಮೂಲ

ಪಾತ್ರೆ ತಿಕ್ಕಿ, ಕಸ ಗುಡಿಸಿ, ಮನೆ ಒರೆಸೋ ಕೆಲಸಾನೂ ಮಾಡಿದರು

ಭಿಕ್ಷೆಬೇಡಲು ಹೋಗುತ್ತಿದ್ದ ಅಂದಿನ ಅಕ್ಕಪಕ್ಕದ ಹಳ್ಳಿಗಳೇ ಇಂದಿನ ಎಲೆಕ್ಟ್ರಾನಿಕ್ ಸಿಟಿ. ಆರನೇ ಕ್ಲಾಸ್ ಮುಗೀತಿದ್ದಂಗೆ ಹತ್ತನೇ ಕ್ಲಾಸ್ ವರೆಗೂ ಅವರಿರವರ ಮನೆಯಲ್ಲಿ ಪಾತ್ರೆ ತಿಕ್ಕಿ, ಕಸ ಗುಡಿಸಿ, ಮನೆ ಒರೆಸುವ ಕೆಲ್ಸ ಮಾಡುತ್ತಿದ್ದರು. ಚರ್ಮರೋಗಕ್ಕೆ ತುತ್ತಾಗಿದ್ದ ವಯಸ್ಸಾದವರೊಬ್ಬರನ್ನು ನೋಡಿಕೊಳ್ಳುವುದು. ಅವರಿಗೆ ಸ್ನಾನ ಮಾಡ್ಸೋದು, ಆಮೇಲೆ ಅವರ ದೇಹಕ್ಕೆಲ್ಲಾ ಮುಲಾಮು ಹಚ್ಚೋದು ಇವರ ಆರಂಭದ ಕೆಲಸ. 

ಮೂಲ

ಬೆಳಗ್ಗೆ 8ಕ್ಕೆ ಒಮ್ಮೆ ಊಟ ಹಾಕಿದರೆ ಮತ್ತೆ ರಾತ್ರಿ 8ಕ್ಕೆ

''ಕುಲಕಸುಬು ಗೊತ್ತಿದ್ದ ಕಾರಣ ಹತ್ತಿರದ ದೇವಸ್ಥಾನಗಳಲ್ಲಿ ಪೂಜೆನೂ ಮಾಡುತ್ತಿದ್ದೆ. ಆಮೇಲೆ ಸ್ಕೂಲಿಗೆ ಹೋಗುತ್ತಿದ್ದೆ. ಹೀಗೇ ಒಂದು ವರ್ಷ ಅಲ್ಲಿ ಕಳೆದ ಮೇಲೆ ನನ್ನ ತಂದೆ ಚಿಕ್ಕಪೇಟೆಯ ಆಶ್ರಮಕ್ಕೆ ಹಾಕಿದರು. ಅಲ್ಲಿ ಮೂರು ವರ್ಷ ಇದ್ದೆ ಎನ್ನುತ್ತಾರೆ ರೇಣುಕಾ. ದಿನಕ್ಕೆ ಅಲ್ಲಿ ಎರಡು ಹೊತ್ತಿನ ಊಟ. ಬೆಳಗ್ಗೆ 8ಕ್ಕೆ ಒಮ್ಮೆ ಊಟ ಹಾಕಿದರೆ ಮತ್ತೆ ರಾತ್ರಿ 8ಕ್ಕೆ, ಈ ನಡುವೆ ಏನೂ ಕೊಡುತ್ತಿರಲಿಲ್ಲ'' ಎಂದು ತಮ್ಮ ಆಶ್ರಮದ ದಿನಗಳನ್ನು ನೆನೆಯುತ್ತಾರೆ. 

ಮೂಲ

ಆಶ್ರಮದಲ್ಲಿ ಸೀನಿಯರ್ಗಳ ಬಟ್ಟೆಬರೆ ಒಗೀಬೇಕಾಗಿತ್ತು

''ಸದಾ ಹೊಟ್ಟೆ ಹಸಿವಿನಿಂದ ಒದ್ದಾಡೋ ಸ್ಥಿತಿಯಲ್ಲಿದ್ದ ಕಾರಣ ಓದಿನ ಕಡೆಗೆ ಹೆಚ್ಚಿನ ಗಮನ ಕೊಡಲು ಸಾಧ್ಯವಾಗುತ್ತಿರಲಿಲ್ಲ. ಹೊಟ್ಟೆತುಂಬಿಸಿಕೊಳ್ಳೋದು ಹೇಗಪ್ಪಾ ಅಂತ ಯೋಚಿನೆ ಇರುತ್ತಿತ್ತು. ಆಶ್ರಮದಲ್ಲಿ ಸಂಸ್ಕೃತ ಹಾಗೂ ವೇದಪಾಠಗಳನ್ನು ಕಡ್ಡಾಯವಾಗಿ ಕಲೀಬೇಕಿತ್ತು. ಇದರಿಂದ ಆಗಾಗ ನಾಮಕರಣ, ಮದುವೆ, ಮುಂಜಿ, ಪೂಜೆಗೆ ಹೋಗುವ ಅವಕಾಶ ಸಿಗುತ್ತಿತ್ತು. ಅಲ್ಲಿ ಪುಷ್ಕಳ ಭೋಜನ. ಆದರೆ ಆ ಅವಕಾಶ ಅಷ್ಟು ಸುಲಭವಾಗಿ ಸಿಗುತ್ತಿರಲಿಲ್ಲ. ಇದಕ್ಕಾಗಿ ಸೀನಿಯರ್ ಗಳ ಬಟ್ಟೆಬರೆ ವಾಷ್ ಮಾಡ್ಬೇಕಾಗಿತ್ತು.''

 ಮೂಲ

ಹತ್ತನೇ ಕ್ಲಾಸ್ ಫೇಲ್, ಹೆಗಲಿಗೆ ಬಿತ್ತು ಸಂಸಾರ 

''ಈ ರೀತಿಯ ಕೆಲಸಗಳಲ್ಲಿ ಬಿದ್ದ ಕಾರಣ ಹತ್ತನೇ ಕ್ಲಾಸ್ ಫೇಲಾದೆ. ಆಶ್ಚರ್ಯ ಅಂದ್ರೆ ಸಂಸ್ಕೃತ ಒಂದೇ ಒಂದು ಸಬ್ಜೆಕ್ಟ್ ನಲ್ಲಿ ಪಾಸಾಗಿದ್ದೆ. ತಂದೆಯವರು ತೀರಿಕೊಂಡ ಬಳಿಕ ಅಮ್ಮನನ್ನು ನೋಡಿಕೊಳ್ಳೋ ಜವಾಬ್ದಾರಿ ಬಿತ್ತು. ನನ್ನ ಅಣ್ಣನಿಗೆ ಆಗಲೇ ಮದುವೆಯಾಗಿತ್ತು. ಹಾಗಾಗಿ ಅವನು ಈ ಕಡೆ ಗಮನಕೊಡಲಿಲ್ಲ. ಸಂಸಾರ ಸಾಕಲು ಆಡಿಗೋಡಿಯ ಫ್ಯಾಕ್ಟರಿಯಲ್ಲಿ ಒಂದು ವರ್ಷ ಕೆಲಸ ಮಾಡಿದೆ. ಆಮೇಲೆ ಪ್ಲಾಸ್ಟಿಕ್ ತಯಾರಿಕಾ ಕಂಪನಿ, ಆಮೇಲೆ ಐಸ್ ತಯಾರಿಸೋ ಕಂಪನಿಯಲ್ಲಿ ಸ್ವಲ್ಪ ಸಮಯ ಕೆಲಸ ಮಾಡಿದೆ.''   

ಮೂಲ

ಬ್ಯಾಗ್ ಸೂಟ್ ಕೇಸ್ ಕಾಕ್ಕೊಂಡು ಕೈಗಾಡಿ ತಳ್ಳಿದ್ದೂ ಆಯ್ತು

''ಇದಾದ ಬಳಿಕ ಅಡ್ ಲ್ಯಾಬ್ಸ್ ನಲ್ಲಿ ಕಸಗುಡಿಸುವ ಕೆಲಸ ಸಿಕ್ಕಿತು. ಚುರುಕಾಗಿದ್ದ ಕಾರಣ, ಬೇರೆ ಜವಾಬ್ದಾರಿಗಳನ್ನು ಕೊಟ್ಟರು. ಮೂರು ವರ್ಷ ಅಲ್ಲಿ ಕೆಲಸ ಮಾಡಿದೆ. ಆದರೆ ಅಲ್ಲಿನ ಕೆಲಸಗಾರರು ಅಕ್ರಮ ಕೆಲಸಗಳಲ್ಲಿ ನನ್ನನ್ನೂ ಸೇರಿಕೊಳ್ಳಲು ಬಯಸಿದರು. ಅದು ನನಗಿಷ್ಟವಿರಲಿಲ್ಲ. ಉದ್ಯೋಗ ಬಿಟ್ಟೆ.ಹೆಲ್ಪರ್ ಆಗಿ ಶ್ಯಾಂಸುಂದರ್ ಟ್ರೇಡಿಂಗ್ ಕಂಪನಿಯಲ್ಲಿ ಸೇರಿಕೊಂಡೆ. ಬ್ಯಾಗ್ ಮತ್ತು ಸೂಟ್ ಕೇಸ್ ಗಳನ್ನು ಕೈಗಾಡಿಯಲ್ಲಿ ತುಂಬಿಸಿಕೊಂಡು ಅಂಗಡಿಗಳಿಗೆ ಹಾಕೋ ಕೆಲಸ. ಅಲ್ಲಿ ಸೇಲ್ಸ್ ಪೊಸಿಷನ್ ಗೆ ಪ್ರೊಮೋಟ್ ಆದೆ. ಅಲ್ಲಿ ಕೆಲ ತಿಂಗಳು ಕೆಲಸ ಮಾಡಿದ ಮೇಲೆ ನಾನೇ ಯಾಕೆ ಸ್ವಂತ ಬ್ಯುಸಿನೆಶ್ ಶುರು ಮಾಡಬಾರದು? ಎಂದು ಯೋಚಿಸಿದೆ.'' 

ಮೂಲ

ಹೊಸ ಬ್ಯುಸಿನೆಸ್ ಕೈಹತ್ತಲಿಲ್ಲ

''ಸೂಟ್ ಕೇಸ್ ಮತ್ತು ಬ್ಯಾಗ್ ಗಳಿಗೆ ಕವರ್ ತಯಾರಿಸಿ ಮಾರೋ ಕೆಲಸ ಶುರುವಚ್ಚಿಕೊಂಡೆ. ಸೂಟ್ ಕೇಸ್ ರಿಪೇರಿ ಬ್ಯಾಗ್ ರಿಪೇರಿ ಎಂದು ಕೂಗಿಕೊಳ್ತಾ ಬೀದಿಬೀದಿ  ಅಲೆದೆ. ಆ ಕೆಲಸ ಆಗಿಬರಲಿಲ್ಲ. ₹ 30000 ಲಾಸ್ ಆಯ್ತು. ಈ ಕಷ್ಟದ ದಿನಗಳಲ್ಲಿ ಕೆಲವು ಕೆಟ್ಟ ಪರಿಸ್ಥಿತಿಗಳು ಬಂದವು. ಕುಡಿತ ಹಾಗೂ ಜೂಜಾಡುವವರ ಜೊತೆಯಾದರು.  ಆದರೆ ಅವರು ಬಂದಷ್ಟೇ ವೇಗವಾಗಿ ದೂರ ಸರಿದರು. 20ನೇ ವಯಸ್ಸಿಗೆ ಬಂದಾಗ ಮದುವೆಯಾಗುವುದಾಗಿ ತಾಯಿಯ ಬಳಿ ಹೇಳಿದೆ.''

ಮೂಲ

ಮತ್ತೆ ಸೆಕ್ಯುರಿಟಿ ಗಾರ್ಡ್ ಕೆಲಸಾನೇ ಗತಿ

''ಸೆಕ್ಯುರಿಟಿ ಗಾರ್ಡ್ ಆಗಿ ₹ 600 ಸಂಪಾದಿಸುತ್ತಿದ್ದೆ. ಎಕ್ಸ್ ಟ್ರಾ ಇನ್ ಕಂಗಾಗಿ ತೋಟದ ಕೆಲಸ, ತೆಂಗಿನ ಮರ ಹತ್ತೋದು ಮಾಡ್ತಿದ್ದೆ. ಒಂದು ಮರದಿಂದ ತೆಂಗಿನ ಕಾಯಿ ಇಳ್ಸೋದಕ್ಕೆ  15 ರೂಪಾಯಿ. ದಿನಕ್ಕೆ 20 ಮರ ಹತ್ತುತ್ತಿದ್ದೆ. ಈ ಕೆಲ್ಸಗಳಿಂದ ಮನಸ್ಸಿಗೆ ಸಮಾಧಾನ ಆಗ್ತಿರಲಿಲ್ಲ. ಡ್ರೈವರ್ ಆಗ್ಬೇಕು ಅಂತ ನಿರ್ಧರಿಸಿದೆ. ಆದರೆ ಡ್ರೈವಿಂಗ್ ಗೊತ್ತಿರಲಿಲ್ಲ. ಡ್ರೈವಿಂಗ್ ಲೈಸೆನ್ಸ್ ಪಡೆಯಲು ದುಡ್ಡಿರಲಿಲ್ಲ. ಮದುವೆ ಉಂಗುರ ಅಡವಿಟ್ಟು ಸಾಲಪಡೆದೆ. ಇನ್ನೇನು ಡ್ರೈವಿಂಗ್ ಲೈಸೆನ್ಸ್ ಸಿಕ್ಕೇ ಸಿಗುತ್ತದೆ ಎಂದುಕೊಂಡೆ. ಆದರೆ ಎಲ್ಲವೂ ಉಲ್ಟಾ ಆಯ್ತು. ರಿವರ್ಸ್ ಗೇರ್ ನಲ್ಲಿ ಪಾರ್ಕ್ ಮಾಡಲು ಹೋಗಿ ಗೇಟಿಗೆ ಗುದ್ದಿದೆ. ಅಲ್ಲಿಗೆ ಆ ಕನಸು ಕೈಗೂಡಲಿಲ್ಲ. ಮತ್ತೆ ಸೆಕ್ಯುರಿಟಿ ಗಾರ್ಡ್ ಕೆಲ್ಸಕ್ಕೆ ವಾಪಾಸ್ಸಾದೆ.'' 

ಮೂಲ

ನನ್ನ ಮೊದಲ ಔಟ್ ಸ್ಟೇಷನ್ ಟ್ರಿಪ್ ಗೋಕರ್ಣ

''ಟ್ಯಾಕ್ಸಿ ಆಪರೇಟರ್ ಒಬ್ಬರು ನನಗೆ ಬ್ರೇಕ್ ನೀಡಿದರು. ಅವರೇ ಧೈರ್ಯ ತುಂಬಿದರು. ಡ್ರೈವಿಂಗ್ ಪಕ್ಕಾ ಆದೆ. ನನ್ನ ಮೊದಲ ಔಟ್ ಸ್ಟೇಷನ್ ಟ್ರಿಪ್ ಗೋಕರ್ಣ. ಒಂದು ಕಡೆ ಭಯ. ಗಾಡಿ ತುಂಬಾ ನಿಧಾನಕ್ಕೆ ಓಡಿಸುತ್ತಿದ್ದೆ. ಕಸ್ಟಮರ್ಸ್ ಗೆ ಇದು ಇಷ್ಟ ಆಯ್ತು. ಅವರು ಒಳ್ಳೆ ಫೀಡ್ ಬ್ಯಾಕ್ ಕೊಡುತ್ತಿದ್ದರು. ಇದರಿಂದ ಎಲ್ಲರಿಗೂ ನಾನೇ ಬೇಕಾಗಿತ್ತು. ಇದರ ಜೊತೆಗೆ ಕಂಪನಿ ನಿಮ್ಹಾನ್ಸ್ ನಂತಹ ಆಸ್ಪತ್ರೆಗಳಿಗೂ ಕಳುಹಿಸುತ್ತಿತ್ತು. ಅಲ್ಲಿಂದ ಡೆಡ್ ಬಾಡಿಗಳನ್ನು ಅವರರ ಸಂಬಂಧಿಕರ ಮನೆಗಳಿಗೆ ಹೊತ್ತೊಯ್ಯಬೇಕಾಗಿತ್ತು. ಒಮ್ಮೊಮ್ಮೆ ಡೆಡ್ ಬಾಡಿಗಳ ಜೊತೆಗೆ ಯಾರೂ ಇರ್ತಿರಲಿಲ್ಲ. ಒಬ್ಬನೇ ಹೆಣಗಳನ್ನು ಸಾಗಿಸುತ್ತಿದ್ದೆ. ವಿಚಿತ್ರ ಅಂದ್ರೆ ಅದಾದ ಕೂಡಲೆ ನನ್ನ ಕಾರು ಶಬರಿಮಲೆ ಯಾತ್ರಿಗಳಿಗೆ ಹೊರಡಬೇಕಿತ್ತು. ಆಗೆಲ್ಲಾ ಕಾರಿಗೆ ಒಂದಷ್ಟು ನೀರು ಚುಮುಕಿಸಿ ಶುದ್ಧಿಮಾಡಿ ಕರೆದುಕೊಂಡು ಹೋಗುತ್ತಿದ್ದೆ. ''

  ಮೂಲ

ಇಂಗ್ಲಿಷ್ ಬರ್ತಿರ್ಲಿಲ್ಲ, ಹತ್ತನೇ ಕ್ಲಾಸ್ ಡ್ರಾಪ್ ಔಟ್ ಬೇರೆ

''ಇಲ್ಲಿಂದ ಬೇರೆ ಟ್ರಾವೆಲ್ ಕಂಪನಿಗೆ ಹೋದೆ. ಅಲ್ಲಿ ಫಾರಿನ್ ಟೂರಿಸ್ಟ್ ಗಳನ್ನು ಕರೆದೊಯ್ಯುವ ಕೆಲಸ. ಅವರೊಂದಿಗೆ ಮಾತನಾಡಲು ಇಂಗ್ಲಿಷ್ ಬರ್ತಿರಲಿಲ್ಲ. ನಾನು ಬೇರೆ ಹತ್ತನೇ ಕ್ಲಾಸ್ ಡ್ರಾಪ್ ಔಟ್. ಅದರೆ ಡಾಲರ್ಸ್ ನಲ್ಲೇ ಒಳ್ಳೆ ಟಿಪ್ಸ್ ಸಿಗುತ್ತಿತ್ತು. ನಾಲ್ಕು ವರ್ಷ ಕೆಲಸ ಮಾಡಿದ ಮೇಲೆ ಒಂದಷ್ಟು ಹಣ ಕೈಸೇರಿತು. ನನ್ನ ಹೆಂಡ್ತಿ ಪಿಎಫ್ ವಿತ್ ಡ್ರಾ ಮಾಡ್ಸಿ, ಒಂದಷ್ಟು ಸೇರ್ಸಿ ಸಿಟಿ ಸಫಾರಿ ಎಂಬ ಕಂಪನಿ ಆರಂಭಿಸಿದೆ. ಕಂಪನಿ ಚೆನ್ನಾಗಿ ನಡೀತು. ನಾನು ಮ್ಯಾನೇಜರ್ ಆದೆ. ಆಗಲೇ ಕಾರು ತೆಗೆದುಕೊಂಡಿದ್ದು, ನನ್ನ ಮೊದಲ ಕಾರು ಟಾಟಾ ಇಂಡಿಕಾ.'' 

ಮೂಲ

ಶ್ಯೂರಿಟಿ ಹಾಕಲು ನನ್ನ ಸ್ವಂತ ಅಣ್ಣ ಸಹ ಮುಂದೆ ಬರಲಿಲ್ಲ

''ಆಗ ಬ್ಯಾಂಕ್ ಲೋನ್ ಗೆ ಶ್ಯೂರಿಟಿ ಹಾಕಲು ನನ್ನ ಸ್ವಂತ ಅಣ್ಣ ಸಹ ಮುಂದೆ ಬರಲಿಲ್ಲ. ಮತ್ತೊಬ್ಬರ ಸಹಾಯ ಪಡೀಬೇಕಾಯಿತು. ಇದಾದ ಒಂದೂವರೆ ವರ್ಷದಲ್ಲಿ ಇನ್ನೊಂದು ಕಾರು ತೆಗೆದುಕೊಂಡೆ. ಈ ಕಾರುಗಳ ಜೊತೆಗೆ ಎರಡು ವರ್ಷಗಳ ಕಾಲ ಸ್ಪಾಟ್ ಸಿಟಿ ಟ್ಯಾಕ್ಸಿಯಲ್ಲಿ ಕೆಲ್ಸ ಮಾಡಿದೆ. ಆಗಲೇ ನನ್ನದೇ ಟ್ರಾವಲ್ ಕಂಪನಿ ಮಾಡಬೇಕೆಂಬ ಆಲೋಚನೆ ಬಂದದ್ದು. ಇಂಡಿಯನ್ ಸಿಟಿ ಟ್ಯಾಕ್ಸಿ ಎಂಬ ಕಂಪನಿ ಲಾಸಲ್ಲಿ ಇತ್ತು. ವ್ಯಾವಹಾರಿಕವಾಗಿ ನನಗೇನು ಗೊತ್ತಿರಲಿಲ್ಲ. ಪೈಸೆ ದೇದೋ ಕಂಪನಿ ಲೇಲೋ ಅಷ್ಟೇ. 2006ರಲ್ಲಿ 6.5 ಲಕ್ಷಕ್ಕೆ ಕೊಂಡುಕೊಂಡೆ. ಇದಕ್ಕಾಗಿ ನನ್ನ ಬಳಿ ಇದ್ದ ಎಲ್ಲಾ ಕಾರುಗಳನ್ನು ಮಾರಬೇಕಾಯಿತು. ಆ ಕಂಪನಿಗೆ 35 ಕಾರುಗಳು ಅಟ್ಯಾಚ್ ಆಗಿದ್ದವು.'' 

ಈಗ 700 ಕಾರುಗಳ ಪ್ರವಾಸಿ ಕ್ಯಾಬ್ ಮಾಲೀಕ

''ಒಂದು ಕಾರಿಗೆ 1000 ರುಪಾಯಿ ಕಮೀಷನ್. ತಿಂಗಳಿಗೆ 35,000 ರುಪಾಯಿ ಗ್ಯಾರಂಟಿಯಾಗಿತ್ತು. ತುಂಬಾ ರಿಸ್ಕಿ ಕೆಲ್ಸ. ಅದಾದ ಬಳಿಕ ''ಪ್ರವಾಸಿ ಕ್ಯಾಬ್ಸ್'' ಎಂಬ ಕಂಪನಿ ರಿಜಿಸ್ಟರ್ ಮಾಡಿಸಿದೆ. ನಮ್ಮ ಕಂಪನಿಯಲ್ಲೀಗ 700ಕ್ಕೂ ಅಧಿಕ ಕಾರುಗಳಿವೆ. ನನ್ನ ಡ್ರೈವರ್ ಗಳಿಗೆ ಹೊಸ ಸ್ಕೀಮ್ ಆರಂಭಿಸಿದೆ. ಅದೇ ಡ್ರೈವರ್ ಕಮ್ ಓನರ್ ಸ್ಕೀಮ್. 50 ಸಾವಿರ ಅಡ್ವಾನ್ಸ್ ಕೊಟ್ಟು 36 ತಿಂಗಳು ಕೆಲಸ ಮಾಡಿದರೆ ಆ ಕಾರು ಅವರ ಸ್ವಂತದ್ದಾಗುತ್ತದೆ. ಆ ರೀತಿ ಕಾರುಗಳೇ 300 ಇವೆ.'' 

ಮೂಲ

ಇಂದು ಅವರ ಬಳಿ 23 ಲಕ್ಷ ರುಪಾಯಿಗಳ ಲಗ್ಜುರಿ ಕಾರಿದೆ

ಜೀವನದಲ್ಲಿ ಸಾಧಿಸಬೇಕು ಅನ್ನೋ ಛಲ ಇರಬೇಕು. ಅದಕ್ಕಾಗಿ ಶ್ರಮಿಸಬೇಕು. ಆಗ ಗೆದ್ದೇ ಗೆಲ್ತೀವಿ ಅಂತಾರೆ ರೇಣುಕಾ ಆರಾಧ್ಯ. ಇದೇ ಅವರ ಗೆಲುವಿನ ಸೂತ್ರ. ಇವರ ಬಳಿ ಯಾವುದೇ ಐಐಟಿ, ಐಐಎಂ ಡಿಗ್ರಿ ಇಲ್ಲ. ಆದರೂ ಎಷ್ಟೋ ಮಂದಿಗೆ ಕೆಲಸ ಕೊಟ್ಟಿದಾರೆ!

ಇನ್ನು ಮೂರು ವರ್ಷದಲ್ಲಿ ನನ್ನ ಕಂಪನಿ 100 ಕೋಟಿ ಬಿಸಿನೆಸ್ ಮಾಡುತ್ತೆ ಅಂತ ಹೇಳ್ತಾರೆ ರೇಣುಕಾ ಆರಾಧ್ಯ... ಸೆಲ್ಯೂಟ್ ಸಾರ್!

ಮಾಹಿತಿ: ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ಅವಳು ನಿನ್ನವಳೇ ಆಗಿದ್ದರೆ ಈಗಾಗಲೇ ಈ 23 ಗುರುತುಗಳಲ್ಲಿ ಕೆಲವಾದರೂ‌ ಕಂಡಿರಬೇಕು

ಕಂಡಿದ್ದರೆ ನಿನ್ನ ಜೀವನಸಂಗಾತಿ ಅವಳೇ

ಜೀವನದಲ್ಲಿ ಇಂತ ಅದ್ಭುತ ನಡಿಯೋದು ಒಂದೇ ಒಂದು ಸತಿ. ನಿಮ್ಮ ಜೀವನಕ್ಕೆ ಬೆಳಕ್ ತರ ಬಂದು, ನಿಮ್ಮ ಸುಖ ದುಃಖದಲ್ಲೆಲ್ಲ ಜೊತೆಗಿದ್ದು, ಇವಳೇ ನಿಮ್ಮ ಸಂಗಾತಿ ಇರ್ಬೋದೆನೋ ಅಂತ ಅನ್ನಿಸ್ತಿದ್ರೆ, ಅವ್ಳಲ್ಲಿ ಈ ಕೆಳ್ಗಿರೊ ಗುಣಗಳಿದ್ರೆ ಡೌಟೇ ಬೇಡ ಅವ್ಳು ನಿಮ್ ಹುಡ್ಗಿ...

1. ಅವಳು ನಿಮ್ಮ್ ಜೊತೆ ಇದ್ದಾಗ ನಿಮಗೆ ಏನೋ ಒಂದು ಪ್ರೇರಣೆ, ನಿನ್ನೆಗಿಂತ ನನ್ನ ಜೀವನ ಇನ್ನು ಚೆನಾಗ್ ಆಗ್ಬೇಕು, ಕಷ್ಟ ಪಟ್ಟು ಜೀವನದಲ್ಲಿ ಇನ್ನು ಮೇಲೇರಬೇಕು ಅಂತ ಅನ್ನಿಸತ್ತೆ.

2. ಏಯ್ ಗಟ್ಟಿ ಗಂಡಸು ಮಾರ್ರೆ ನಾನು, ಯಾವ್ ಸೆಂಟಿಮೆಂಟು ನನ್ನತ್ರ ನಡಿಯಲ್ಲ, ಕಲ್ಲು ಬಂಡೆ ಥರ ನಾನು ಅಂತಿದ್ದ ನಿಮ್ಮನ್ನ, ಈ ಹುಡುಗಿ ಹೋಗ್ತಾಹೋಗ್ತಾ ಕರ್ಗೋಗೊ ಹಾಗೆ ಮಾಡ್ಬಿಡ್ತಾಳೆ. ಅವ್ಳು ನಿಮ್ಮಲ್ಲಿ ಪ್ರೀತಿ, ವಾತ್ಸಲ್ಯ, ಸಂತೋಷ ಒಂತರ ಎಲ್ಲ ಭಾವನೆ ನಿಮ್ಮಲ್ಲಿ ಶುರು ಆಗೋ ಹಾಗೆ ಮಾಡಿರ್ತಾಳೆ. ಅವ್ಳಿಗೆ ನಿಮ್ ಕಣ್ಣಲ್ಲೂ ನೀರ್ ಹಾಕ್ಸೋ ತಾಕತ್ತಿರತ್ತೆ... ಇಂತ ಭಾವನೆಗಳು ನಿಮ್ಗೆ ಮುಂಚೆ ಅನುಭವಕ್ಕೆ ಬಂದಿರಲ್ಲ.

3. ಇದೊಂತರ ವಿಚಿತ್ರ. ಅವ್ಳ ಖುಷಿ ನಿಮಗೆ ಖುಷಿ ಕೊಡತ್ತೆ. ಅವಳ ಒಂದು ನಗು ಸಾಕು ನಿಮಗೆ ಸಿಕ್ಕಾಪಟ್ಟೆ ಖುಷಿಯಾಗಿರಕ್ಕೆ, ಅವ್ಳ ನಗು ಕಾರಣ ನಿಮ್ಗೆ ಬೇಕಿರಲ್ಲ, ಅವ್ಳ್ ನಕ್ರೆ ಸಾಕು.

4. ನಿಮ್ಮ ಎಲ್ಲ ಯೋಚನೆ, ನಿಮ್ಮ ಟೆನ್ಷನ್ನು ಎಲ್ಲ ದೂರ ಆಗಕ್ಕೆ ಅವಳ ಒಂದೇ ಒಂದು ನಗು ಸಾಕು. ಆ ಒಂದ್ ಕ್ಷಣ ಏನೋ ಒಂತರ ನೆಮ್ಮದಿ ಸಿಗೊಹಾಗ್ ಮಾಡತ್ತೆ.

ಮೂಲ

5. ಅವಳ ನಗು ನಿಮಗೆ ಖುಷಿ ತರತ್ತೆ ಅಂತ ಯಾವಾಗ್ಲೂ ಅವ್ಳು ನಿಮ್ಮತ್ರ ನಗ್ತನೇ ಇರ್ಬೇಕಿಲ್ಲ... ಅವ್ಳ್ ಜೊತೆ ಟೈಮ್ ಸ್ಪೆಂಡ್ ಮಾಡೊ ಭಾಗ್ಯ ನಿಮ್ಗೆ ಸಿಕ್ಕಿದ್ರೆ ಸಾಕಾಗಿರತ್ತೆ. ಅವ್ಳ್ ಜೊತೆ ಇರೋ ಅಷ್ಟೂ ಹೊತ್ತು ನಿಮ್ಗೆ ಮಧುರವಾದ ಕ್ಷಣ ಅನ್ನಿಸ್ತಿರತ್ತೆ.

6. ಎರಡು ದೇಹ ಒಂದೇ ಜೀವ ನಿಮ್ಮದು ಅನ್ನಿಸತ್ತೆ.

7. ಅವಳ ಎಲ್ಲ ಭಾವನೆ ನಿಮಗೆ ಆಕರ್ಷಕವಾಗಿರತ್ತೆ, ಅವಳ ಬಗ್ಗೆ ಪೂರ್ತಿ ತಿಳ್ಕೊಬೇಕು ಅಂತ ಅನ್ನಿಸತ್ತೆ ನಿಮಗೆ... ಅವ್ಳಲ್ಲಿರೊ ಒಳ್ಳೇದು, ಕೆಟ್ಟದ್ದು ಮತ್ತೆ ಸುಮಾರಾಗಿರೊ ವಿಚಾರ್ವೆಲ್ಲ ನಿಮ್ಗೆ ಓಕೆ ಆಗೋಗಿರತ್ತೆ... ಅವ್ಳನ್ನ ನೀವು ಆರಾಧಿಸಕ್ಕೆ ಶುರು ಮಾದ್ಬಿಟ್ಟಿರ್ತೀರ.

8. ಅವಳು ನಿಮ್ಮ ಕಡೆ ನಡ್ಕೊಂಡು ಬರ್ತಿದ್ರೆ ನಿಮ್ ಕಣ್ಣಿಗೆ ಬೇರೇನೂ ಕಾಣಲ್ಲ... ಎಲ್ಲ ಮಂಜ್ ಮಂಜು ಆಗೋಗತ್ತೆ... ಬರಿ ಅವಳೊಬ್ಬಳೇ... ನಿಮ್ಮ ಟೆನ್ಷನ್ನು, ನಿಮ್ಮ ಕೆಲಸಗಳೆಲ್ಲ ನೆನಪಾಗದೇ ಇಲ್ಲ, ಇಡೀ ಜೀವನ ಹೀಗೆ ಅವ್ಳನ್ನ ನೋಡ್ಕೊಂಡು ನೆಮ್ಮದಿಯಾಗಿದ್ಬಿಡ್ಬೇಕು ಅನ್ನಿಸತ್ತೆ.

ಮೂಲ

9. ಇವತ್ತಿನ ತಂಕ ಯಾರ್ ಹತ್ರನೂ ಹೇಳಿರದ ಗುಟ್ಟನ್ನ ಇವಳ ಹತ್ರ ಹೇಳ್ಕೊಬೇಕು ಅನ್ನಿಸತ್ತೆ. ನಿಮ್ಮ ಭಾವನೆಗಳ್ನೆಲ್ಲ ಅವ್ಳ್ ಹತ್ರ ಹಂಚ್ಕೊಬೇಕು ಅನ್ನಿಸತ್ತೆ. ನಿಮ್ಮೆಲ್ಲಾ ಗುಟ್ಟುಗಳ್ನ ಅವ್ಳು ಕಾಪಾಡ್ತಾಳೆ.

10. ನಿಮಗೆ ಗೊತ್ತಿಲ್ಲದ ಹಾಗೆ ಅವಳು ನಿಮ್ಮ ಪ್ರಪಂಚ ಆಗ್ಬಿಟ್ಟಿರ್ತಾಳೆ. ನೀವು ನಿಮ್ಮ ಮುಂದಿನ ಜೀವನದ ಬಗ್ಗೆ ಮಾಡೋ ಪ್ರತಿಯೊಂದು ಯೋಚನೇಲು ಅವಳಿಗೆ ಜಾಗ ಕೊಟ್ಟಿರ್ತೀರ.

11. ಕನಸಲೂ ನೀನೆ ಮನಸಲೂ ನೀನೆ... ದಿನಾ ಕನಸಲ್ಲಿ ಅವಳೇ ಬರ್ತಾಳೆ. ನಿಮಗೆ ಅವಳ್ ಬಿಟ್ಟು ಬೇರೇನೂ ಬೇಕಿರಲ್ಲ.

12. ಯಾವತ್ತೂ ಅನುಭವಿಸದ ಅನ್ಯೋನ್ಯತೆ ನಿಮಗೆ ಅವ್ಳ ಬಗ್ಗೆ. ಅಪ್ಪಿ ತಪ್ಪಿ ಒಂದ್ಸತಿ ಅವ್ಳನ್ನ ಮುಟ್ಟಿದ್ರೆ ಮೈ ಜುಮ್ ಅನ್ನತ್ತೆ, ತಲೆ ನಿಲ್ಲದೇ ಇಲ್ಲ. ಅವ್ಳನ್ನ ನಿಮ್ಮ ತೋಳಲ್ಲಿ ತಬ್ಬಿ ಹಿಡ್ಕೊಬೇಕು ಅನ್ನಿಸತ್ತೆ, ಹೀಗೆ ಜೀವನ ಪೂರ್ತಿ ಒಟ್ಟಿಗೆ ಇರ್ಬೇಕು ಅನ್ನಿಸ್ತಿರತ್ತೆ.

ಮೂಲ

13. ಬರಿ ಅದೇ ಅಂತಲ್ಲ, ಜಾಸ್ತಿ ಸುತ್ತಾಡ್ಬೇಕು ಅನ್ನೊಹಾಗೆ ಮಾಡ್ತಾಳೆ, ಬೇರೆ ಬೇರೆ ಹೋಟೆಲ್ಲಿಗೆ ಹೋಗಿ ಹೊಸ-ಹೊಸ ತಿಂಡಿ ಊಟ ಟ್ರೈ ಮಾಡ್ಬೇಕು ಅನ್ನಿಸೋ ಹಾಗೆ ಮಾಡ್ತಾಳೆ. ಪ್ರತಿ ಕ್ಷಣ ಜಗತ್ತು ಹೊಸದಾಗಿ ಕಾಣೋಹಾಗೆ ಮಾಡ್ತಾಳೆ. ನಿಮ್ಮ ಜೀವನ  ಇನ್ನು ಕುತೂಹಲಕಾರಿ ಆಗತ್ತೆ.

14. ನಿಮ್ಮ ಸ್ನೇಹಿತರಿಗೆ, ಮನೆಯವರಿಗೆಲ್ಲ ಅವಳನ್ನ ಪರಿಚಯ ಮಾಡ್ಸ್ ಬೇಕು ಅನ್ನಿಸತ್ತೆ. ಅವಳೆಷ್ಟು ಒಳ್ಳೇವ್ಳು ಅಂತ ನಿಮ್ಮ ಮನೆಯವರಿಗೆ ಖಂಡಿತ ಗೊತ್ತಾಗತ್ತೆ ಅಂತ ನಿಮಗನ್ನಿಸತ್ತೆ... ಅವ್ಳ ಗುಣ ಎಲ್ಲಾರ್ಗೂ ಹಿಡ್ಸೋ ಅಂತದ್ದು ಅಂತ ನಿಮ್ಗೆ ಎಷ್ಟರಮಟ್ಟಿಗೆ ಅನ್ನಿಸತ್ತೆ ಅಂದ್ರೆ ಕೆಲವೊಮ್ಮೆ ಇವಳನ್ನ ನನಗಿಂತ ಜಾಸ್ತಿ ನನ್ನ ಸ್ನೇಹಿತರೆ ಇಷ್ಟ ಪಡ್ತಿದಾರಲ್ಲಪ್ಪ ಅಂತ ಅನ್ನಿಸಿಬಿಡತ್ತೆ.

15. ನಿಮ್ಮ ಬಗ್ಗೆ ತುಂಬ ಕಾಳಜಿ ಮತ್ತೆ ಪ್ರೀತಿ ತೋರುಸ್ತಾಳೆ ಅವಳು, ಹೇಗೆ ಅಂತ ಹೇಳಕ್ಕಾಗಲ್ಲ. ದಿನ ನೀರ್ ಕುಡಿ ಅಂತ ಹೇಳೋದ್ರಿಂದ ನಿಮ್ಮ ಹುಟ್ಟು ಹಬ್ಬಕ್ಕೆ ಅದ್ಭುತವಾಗಿ ಒಂದು ಸುರ್ಪ್ರೈಸ್ ರೆಡಿ ಮಾಡೊತನ್ಕ ಎಲ್ಲ ಮಾಡಿರ್ತಾಳೆ... ನಿಮ್ಮನ್ನ ಯಾವಾಗ್ಲೂ ಖುಷಿಯಾಗಿ ನೋಡ್ಬೇಕು ಅನ್ನೋದು ಅವಳ ಆಸೆ ಆಗಿರತ್ತೆ.

16. ಅವ್ಳಿಗೆ ನಿಮ್ಮ ನಿಜವಾದ ಮುಖ ನೀವ್ ತೋರಿಸ್ತೀರ. ನಿಮಗೆ ಮೆಚ್ಚಿಸಕ್ಕೆ ನಾಟಕ ಆಡ್ಬೇಕು ಅಂತ ಅನ್ಸಲ್ಲ. ನೀವಾಗಿ ಅವಳೊಂದಿಗೆ ಆರಾಮಾಗಿ ಇರಬಹುದು. ನಿಮ್ಮ ಎಲ್ಲ ತುಂಟತನ ಮತ್ತೆ ತರ್ಲೆಗಳು ಅವ್ಳು ನಿಮ್ಮನ್ನ ಹೆಚ್ಚೆಚ್ಚು ಪ್ರೀತ್ಸೋ ಹಾಗೆ ಮಾಡತ್ತೆ. ಅವಳ ಜೊತೆ ನಿಮಗೆ ಯಾವ್ದೇ ಹಿಂಜರಿಕೆ ಇರಲ್ಲ.

ಮೂಲ

17. ಅವಳು ಸ್ವಂತಂತ್ರವಾಗಿ ತನ್ನ ಕೆಲಸ ತಾನು ಮಾಡ್ಕೊಂಡು ಇರೋಂತ ಹುಡುಗಿ ಆಗಿದ್ರು ಯಾವಾಗಾದ್ರೂ ಸಹಾಯ ಬೇಕು ಅನ್ಸಿದ್ರೆ, ನಿಮ್ಮನ್ನ ಕೇಳ್ತಾಳೆ. ನೀವು ಇಲ್ಲ ಅನ್ನಲ್ಲ ಅಂತ ಅವ್ಳಿಗೆ ಚೆನ್ನಾಗಿ ಗೊತ್ತಿರತ್ತೆ. ಯಾವತ್ತೂ ನಿಮಗೆ ಮೋಸ ಮಾಡಬೇಕು ಅನ್ನೋ ಯೋಚ್ನೆ ಇರಲ್ಲ.

18. ನಿಮಗೆ ಚೆನ್ನಾಗಿ ಗೊತ್ತಿರತ್ತೆ ಇವ್ಳು ಯಾವಾಗ್ಲೂ ಎಂತ ಸಮಯದಲ್ಲೂ ಜೊತೇಗೆ ಇರ್ತಾಳೆ ಅಂತ. ಕೆಲವೊಮ್ಮೆ ನಿಮಗೆ ಏನು ತೋಚದೇ, ಇನ್ನೇನು ದಾರಿ ಇಲ್ಲ ಅಂದಾಗ ಕೂಡ, ಇವಳು ನಿಮ್ಮನ್ನ ಬಿಡದೇ ಬೆನ್ನೆಲುಬಾಗಿ ನಿಲ್ತಾಳೆ ಅನ್ನಿಸತ್ತೆ.

19. ಯಾವುದೇ ಅನುಮಾನ ಇಲ್ಲದೆ ಕಣ್ಣು ಮುಚ್ಚಿಕೊಂಡು ಎಲ್ಲ ಸಮಯದಲ್ಲೂ ನಂಬಬಹುದು. ಅವಳು ಎಲ್ಲಿ, ಯಾರ್ ಜೊತೆ, ಯಾವ ಸಮಯದಲ್ಲಿ ಇದ್ದಳು, ಯಾಕೆ ಇದ್ದಳು ಅನ್ನೋದೆಲ್ಲ ನಿಮ್ಗೆ ದೊಡ್ಡ ವಿಷ್ಯ ಅನ್ಸದೇ ಇಲ್ಲ, ಅವ್ಳ ಬಗ್ಗೆ ಬಲವಾದ್ ನಂಬಿಕೆ ನಿಮ್ಗಿರತ್ತೆ. ನಿಮ್ಮ ಸಂಬಂದಾನೆ ಹಾಗೆ! ಇಬ್ಬರು ಒಬ್ಬರನ್ನ ಒಬ್ಬರು ಅಷ್ಟು ನಂಬ್ತೀರಿ, ಅಷ್ಟೇ ಗೌರವ ಕೊಡ್ತೀರಿ.

20. ಅವ್ಳು ಯಾವದಾದ್ರು ಕಾರಣಕ್ಕೆ ಬೇಜಾರಾಗಿದ್ರೆ ನಿಮಗೆ ತಡ್ಕೊಳಕ್ಕಾಗಲ್ಲ, ಯಾರಾದ್ರೂ ಬೇಜಾರ್ ಮಾಡಿದ್ರೆ ನೀವು ಅವ್ರನ್ನ ಸುಮ್ನೆ ಬಿಡಲ್ಲ. ಅವಳು ದುಃಖ ಪಡೋದನ್ನ ನಿಮಗೆ ಸಹಿಸಿಕೊಳಕ್ಕೆ ಆಗದೇ ಇಲ್ಲ.

ಮೂಲ

21. ನೀವು ನಿಮ್ಮ ಮುಂದಿನ ದಿನಗಳಿಗೆ ಅಂತ ಮಾಡಿದ ಎಲ್ಲ ಯೋಚನೆಲಿ ನಿಮಗೆ ಗೊತ್ತಿಲ್ಲದ ಹಾಗೆ ಅವಳನ್ನು ಸೇರಿಸಿಕೊಂಡಿರ್ತೀರ. ನೀವು ಸುತ್ತಾಡಬೇಕು ಅನ್ಕೊಂಡಿರೋ ಜಾಗ, ನೀವು ಮಾಡ್ಬೇಕು ಅನ್ಕೊಂಡಿರೋ ಸಾಹಸ, ಹೀಗೇ ಎಲ್ಲದ್ರಲ್ಲೂ ಅವ್ಳು ಇದ್ದೇ ಇರ್ತಾಳೆ...

22. ನಿಮಗೆ ಸರ್ವಸ್ವಾನು ಅವಳೇ ಆಗಿರ್ತಾಳೆ. ನೀವು ರಾತ್ರಿ ಮಲಗುವಾಗ ತೊಗೊಳೋ ಕೊನೆ ಹೆಸರು ಅವಳದ್ದೇ, ಬೆಳಗ್ಗೆ ಎದ್ದಾಗ ಹೇಳೋ ಮೊದಲನೇ ಹೆಸರು ಅವಳದ್ದೇ. ನಿಮ್ಮೆಲ್ಲ ತುಂಟಾಟದಲ್ಲಿ ಅವಳು ಇರ್ತಾಳೆ, ಅವಳ ಜೊತೆ ನಿಮ್ಮ ಜೀವನ ಪೂರ್ತಿ ಕಳೀಬೇಕು ಅಂತ ಅನ್ನಿಸತ್ತೆ. ಹೌದು ಅವಳೇ ನಿಮ್ಮ ಪ್ರೇಯಸಿ, ಅವಳೇ ನಿಮ್ಮ ನಿಜವಾದ ಸಂಗಾತಿ.

23. ನಿಮ್ಮ ಬದುಕು ಸಾರ್ಥಕ ಅಂತ ಅನ್ನಿಸೋದು, ಬದುಕಿಗೆ ಒಂದು ಅರ್ಥ ಅಂತ ಸಿಗೋದು, ಅವಳು ನಿಮ್ಮ ಜೊತೆ ಇದ್ದಾಗ ಮಾತ್ರ.

ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: