ಕೊಲ್ಲೂರು ಮೂಕಾಂಬಿಕೆ ಬಗ್ಗೆ ಈ 19 ಸತ್ಯಗಳ್ನ ತಿಳ್ಕೊಂಡ್ರೆ ಜೀವನದಲ್ಲಿ ಒಂದ್ಸಲಿ ನೋಡಬೇಕು ಅನ್ನಿಸುತ್ತೆ

ಸಾವಿರಾರು ವರ್ಷದಿಂದ ಸತತವಾಗಿ ಕನ್ನಡಿಗರು ಪೋಷಿಸಿಕೊಂಡು ಬಂದಿರೋ ದೇವಸ್ಥಾನ ಇದು

ನಮ್ಮ ಕರ್ನಾಟಕದ ಪಶ್ಚಿಮ ಘಟ್ಟದ ತಪ್ಪಲಲ್ಲಿರುವ ಪ್ರಸಿದ್ಧ ಪುಣ್ಯ ಕ್ಷೇತ್ರ ಕೊಲ್ಲೂರು ಮೂಕಾಂಬಿಕೆ. ಪಾರ್ವತಿ, ಸರಸ್ವತಿ ಹಾಗೂ ಲಕ್ಷ್ಮಿಯ ಸ್ವರೂಪವಾದ ಮೂಕಾಂಬಿಕೆಯ ದರ್ಶನ ಪಡೆಯುವುದಕ್ಕೆ ಲಕ್ಷಗಟ್ಟಲೆ ಜನ ಕರ್ನಾಟಕ, ಕೇರಳ ಮತ್ತು ತಮಿಳುನಾಡು, ಮಹಾರಾಷ್ಟ್ರ ಮತ್ತು ಗೋವಾ ಕಡೆಯಿಂದ ಬರ್ತಾರೆ. ಸುಂದರ ಪರಿಸರದ ಮಧ್ಯೆ ಇರೋ ಈ ದೇವಾಲಯಕ್ಕೆ ಇರೋ ಪುರಾತನ ಹಿನ್ನಲೆ ಏನು, ಅಲ್ಲಿಯ ವಿಶೇಷತೆ ಏನು ಅಂತ ಗೊತ್ತೇ...

1. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಇರೋದು ಕೊಡಚಾದ್ರಿಯ ಹಸಿರಿನ ಮಧ್ಯೆ, ಸೌಪರ್ಣಿಕಾ ನದಿ ತೀರದಲ್ಲಿ

ಕನ್ನಡಿಗರು, ತುಳುವರು, ತಮಿಳರು ಮತ್ತು ಮಳಯಾಳಿಗಳ ಅರಾಧ್ಯ ದೇವತೆ, ಶಕ್ತಿದೇವತಿ ಇವಳು.

photo-5-fb.jpgಮೂಲ

2. ಮಂಗಳೂರಿಂದ 147 ಕಿ.ಮಿ ದೂರದಲ್ಲಿದೆ

ಕೊಲ್ಲೂರು ಉಡುಪಿ ಜಿಲ್ಲೆಗೆ ಸೇರಿದೆ.  ಕೊಲ್ಲೂರು ಕ್ಷೇತ್ರದ ಮೂಲ ಹೆಸರು ‘ಮಹಾರಣ್ಯಪುರ’ ಅಂತ ಇತ್ತು ಅಂತಾರೆ. ಕೊಡಚಾದ್ರಿ ಬೆಟ್ಟದಿಂದ ಪಶ್ಚಿಮ ದಿಕ್ಕಿನಲ್ಲಿ ಇಳೀಬೇಕು ಇಲ್ಲಿಗೆ ಬರಕ್ಕೆ.

photo-violethill.jpgಮೂಲ

3. ದೇವಸ್ಥಾನದಲ್ಲಿರೋ ಕಬ್ಬಿಣದ ಕಂಬ ಡೆಲ್ಲಿಯಲ್ಲಿರೋ ಕುತುಬ್ ಮಿನಾರ್ ಮುಂದೆ ಇರೋ ಕಂಬಕ್ಕಿಂತ 1300 ವರ್ಷ ಹಳೇದು.

ಕುತುಬ್ ಮಿನಾರ್ ಮುಂದೆ ಇರೋ ಕಬ್ಬಿಣದ ಕಂಬ 1000 ವರ್ಷ ಹಳೇದಾದ್ರೆ ಕೊಲ್ಲೂರು ಮೂಕಾಂಬಿಕೆಯ ದೇವಸ್ಥಾನದ ಮುಂದೆ ಇರೋ ಧ್ವಜಸ್ಥಂಭವನ್ನ ಸ್ಥಳೀಯರು 2300 ವರ್ಷದ ಹಿಂದೇನೇ ಕಟ್ಟಿದ್ದರು. ಈಗಲೂ ಅದು ಒಂದು ಸ್ವಲ್ಪಾನೂ ತುಕ್ಕು ಹಿಡಿಯದೆ, ಹಾಳಾಗದೆ ಗಟ್ಟಿಮುಟ್ಟಾಗಿದೆ. ವಿಜ್ಞಾನಿಗಳು ಇದರ ಬಗ್ಗೆ ಸಂಶೋಧನೆ ನಡೆಸಿದ್ದಾರೆ.

photo-1-fb-new.jpgಮೂಲ

4. ‘ಕೋಲ’ ಅನ್ನೋ ಹೆಸರಿನ ಮಹರ್ಷಿಯೊಬ್ಬ ಪೂಜೆ ಮಾಡ್ತಿದ್ದ ಲಿಂಗದಲ್ಲಿ ಮೂಕಾಂಬಿಕೆ ನೆಲೆಸಿದಳಂತೆ, ಅವನ ಹೆಸರಿಂದಾನೇ ‘ಕೊಲ್ಲೂರು’ ಅನ್ನೋ ಹೆಸರು ಬಂತಂತೆ

ಅವನಿಂದ ಈ ಜಾಗಕ್ಕೆ ಕೋಲಾಪುರ ಅಂತ ಹೆಸರಿತ್ತು. ಕಾಲಾನಂತರ ಇದು ಕೊಲ್ಲೂರು ಆಯ್ತು. ಕೋಲ ಮಹರ್ಷಿ ತನ್ನ ಆಶ್ರಮದ ಹಸುವೊಂದು ಪ್ರತಿನಿತ್ಯ ಒಂದು ಲಿಂಗಕ್ಕೆ ಹಾಲು ಸುರಿಸುವುದನ್ನು ಕಂಡು ಆ ಲಿಂಗಕ್ಕೆ ಏನೋ ಅದ್ಭುತ ಶಕ್ತಿ ಇರ್ಬೇಕು ಅಂತ ನಂಬಿ ಆ ಲಿಂಗವನ್ನ ಪೂಜಿಸೋಕ್ಕೆ ಶುರು ಮಾಡಿದನಂತೆ. ಆಗ ಕಂಹಾಸುರನೆಂಬ ರಾಕ್ಷಸನು ತೊಂದರೆ ಕೊಡಲು ಶುರು ಮಾಡಿದ. ಜೊತೆಗೆ ಶಿವನ ಕುರಿತು ಕಠಿಣ ತಪಸ್ಸು ಮಾಡಿ ಇನ್ನೇನು ವರ ಕೇಳಬೇಕು ಅನ್ನೋಷ್ಟರಲ್ಲಿ ಕೋಲ ಮಹರ್ಷಿಯ ಕೋರಿಕೆಯಂತೆ ಮಹಾದೇವಿ ಅವನ ನಾಲಿಗೆಯ ಮೇಲೆ ಕೂತು ಅವ ಮೂಕನಾಗುವ ಹಾಗೆ ಮಾಡುತ್ತಾಳಂತೆ. ಮಹರ್ಷಿಯ ಈ ಕುತಂತ್ರ ಮೂಕಾಸುರನಿಗೆ ಗೊತ್ತಾಗಿ ಅವನನ್ನು ಸಾಯಿಸಲು ಮುಂದಾಗುತ್ತಾನೆ. ಆಗ ದೇವಿಯು ಶಕ್ತಿಸ್ವರೂಪಿಣಿಯಾಗಿ ಮೂಕಾಸುರನ್ನ ಸಾಯಿಸಿ ಅಲ್ಲಿಯೆ ಕೋಲ ಮಹರ್ಷಿ ಪೂಜಿಸುತ್ತಿದ್ದ ಲಿಂಗದಲ್ಲಿ ನೆಲೆಸುತ್ತಾಳೆ ಎಂದು ಕಥೆ ಇದೆ.

photo-3-fb.jpgಮೂಲ

5. ಇನ್ನೊಂದು ಪುರಾಣದ ಪ್ರಕಾರ ಕೊಲ್ಲೂರ್ನ ಕಟ್ಟಿದ್ದು ಪರಶುರಾಮ ಅಂತೆ

ಪರಶುರಾಮ ತನ್ನ ಏಳು ಮುಕ್ತಿಸ್ಥಳಗಳಲ್ಲಿ ಕೊಲ್ಲೂರಿನಲ್ಲಿ ಮಾತ್ರ ಪಾರ್ವತಿಯ ವಿಗ್ರಹ ಸ್ಥಾಪಿಸಿದ್ದನಂತೆ. ಮಿಕ್ಕ ಆರು ಕ್ಷೇತ್ರಗಳಾದ ಉಡುಪಿ, ಸುಬ್ರಮಣ್ಯ, ಕುಂಬಾಶಿ, ಕೋಟೇಶ್ವರ, ಶಂಕರನಾರಾಯಣ ಮತ್ತು ಗೋಕರ್ಣಗಳಲ್ಲಿ ಗಣೇಶ, ಶಿವ ಮತ್ತು ಸುಬ್ರಮಣ್ಯನ ವಿಗ್ರಹ ಸ್ಥಾಪನೆ ಮಾಡಿದ್ದನು.ಪಾರ್ವತಿ, ಸರಸ್ವತಿ ಮತ್ತು ಲಕ್ಷ್ಮಿಯ ಅಂಶಗಳನ್ನು ಹೊಂದಿರೋ ಈ ತಾಯಿ ನಮ್ಮನ್ನು ಹರಸಲಿ, ನಮ್ಮ ಮಕ್ಕಳಿಗೆ ಎಲ್ಲಾ ಕೆಲ್ಸದಲ್ಲೂ ವೃದ್ಧಿ ತರಲಿ ಅಂತ ಲಕ್ಷಗಟ್ಟಲೆ ಜನರು ಈ ದೇವಸ್ಥಾನಕ್ಕೆ ಹೋಗುತ್ತಾರೆ.

Parashurama-commons.wikimedia.org_.JPGಮೂಲ

6. ಈಗಿರೋ ಪಂಚಲೋಹದ ದೇವಿ ಮೂರ್ತೀನ ಸ್ಥಾಪಿಸಿದ್ದು ಆದಿ ಶಂಕರಾಚಾರ್ಯರು

ಕೊಡಚಾದ್ರಿ ಬೆಟ್ಟದಲ್ಲಿ ಶಂಕರಾಚಾರ್ಯರು ತಪಸ್ಸು ಮಾಡಿದಾಗ ದೇವಿ ಪ್ರತ್ಯಕ್ಷಳಾಗಿ ಅವರ ಬಯಕೆಯೇನೆಂದು ಕೇಳಿದಳು. ಆಗ ಶಂಕರರು ಕೇರಳದಲ್ಲಿ ನಾನು ಹೇಳೋ ಜಾಗಕ್ಕೆ ಬಂದು ನೆಲೆಸಬೇಕು ಅಂತ ಹೇಳಿದರು. ಆಗ ದೇವಿಯು ಒಪ್ಪಿಕೊಂಡು ನಾನು ನಿನ್ನ ಹಿಂದೆ ಬರುವಾಗ ನೀನೇನಾದರೂ ಹಿಂದೆ ತಿರುಗಿ ನೋಡಿದೆಯಾದರೇ ನಾನು ಅಲ್ಲೇ ನೆಲೆಸುವೆ ಎಂದು ಸವಾಲು ಹಾಕಿದಳಂತೆ. ಆದರೆ ಶಂಕರರನ್ನು ಪರೀಕ್ಷಿಸೋ ಉದ್ದೇಶದಿಂದ ದೇವಿ ನಿಂತ್ಕೊತಾಳೆ. ತನ್ನ ಹಿಂದೆ ದೇವಿಯ ಕಾಲ್ಗೆಜ್ಜೆಗಳ ಧ್ವನಿ ಕೇಳದಾದಾಗ ಶಂಕರರು ಹಿಂದಿರುಗಿ ನೋಡಿದರು. ಹಾಗೆ ನೋಡುತ್ತಿದ್ದಂತೆ ಆ ಸ್ಥಳದಲ್ಲಿ ತನ್ನ ವಿಗ್ರಹವನ್ನು ಪ್ರತಿಷ್ಠಾಪಿಸುವಂತೆ ದೇವಿಯು ಶಂಕರರಿಗೆ ತಿಳಿಸಿದಳು. 

shakara-zenbudha.blogspot.com_.jpgಮೂಲ

7. ಆದಿ ಶಂಕರರು ಈ ದೇವಸ್ಥಾನದಲ್ಲಿರೋ ಸರಸ್ವತಿ ಮಂಟಪದಲ್ಲಿ ಕೂತ್ಕೊಂಡೇ "ಸೌಂದರ್ಯ ಲಹರಿ" ಬರೆದಿದ್ದು

ಜಗಜ್ಜನನಿಯ ವಿಶ್ವರೂಪ ವರ್ಣಿಸುವ ಸೌಂದರ್ಯ ಲಹರಿಯನ್ನು ಬರೆದ್ದಿದ್ದರು.

shankara-exoticindiaart.com_.jpgಮೂಲ

8. ಮಂಟಪದೊಳಗಡೆ ರಾಜಾ ರವಿವರ್ಮನ ಅದ್ಭುತವಾದ ಚಿತ್ರಕಲೆ ಇದೆ

20 ದಿನ ಶ್ರೀ ಕ್ಷೇತ್ರದಲ್ಲಿ ತಂಗಿದ್ದು ತನ್ನ ಚಿತ್ರಕಲೆಯ ಅಮೋಘ ಪ್ರದರ್ಶನ ಮಾಡಿ ವಿಶ್ವವಿಖ್ಯಾತನಾಗಿದ್ದ.

ravi-kavithamandana.wordpress.com_.jpgಮೂಲ

9. ದೇವಸ್ಥಾನದಲ್ಲಿ ರಾತ್ರಿ ಕೊಡೋ ತೀರ್ಥ ಆರೋಗ್ಯಕರವಾದ ಒಂದು ಕಷಾಯ

ಇದು ಶುಂಠಿ, ಮೆಣಸುಕಾಳು, ಏಲಕ್ಕಿ, ಲವಂಗ ಮತ್ತು ಬೆಲ್ಲ ಮೊದಲಾದವುಗಳೊಂದಿಗೆ ತಯಾರಿಸಿದ್ದು ಶೀತ, ಜ್ವರಗಳಿಂದ ನರಳುತ್ತಿರುವವರಿಗೆ ತುಂಬಾ ಒಳ್ಳೆಯದೆಂದೂ ಹೇಳುತ್ತಾರೆ. ಶಂಕರಾಚಾರ್ಯರ ಕಾಲದಿಂದ ನಡೆದು ಬಂದಿದೆ ಅಂತಾರೆ.

photo-4-fb-new.jpgಮೂಲ

10. ಮಕ್ಕಳಿಗೆ ಈ ಕ್ಷೇತ್ರದಲ್ಲಿ ‘ವಿದ್ಯಾರಂಬ’ ಮಾಡಿಸಿದರೆ ಚೆನ್ನಾಗಿ ಕಲೀತವಂತೆ

ಸುಮಾರು ಜನ ತಮ್ಮ ಮಕ್ಕಳಿಗೆ ಮೊದಲ ಅಕ್ಷರಾಭ್ಯಾಸ ಇಲ್ಲೇ ಮಾಡ್ತಾರೆ. ಡ್ಯಾನ್ಸ್ ಮತ್ತು ಹಾಡುಗಾರಿಕೆ ಕಲಿತವರು ಕೂಡ ತಮ್ಮ ಮೊದಲ ಪ್ರದರ್ಶನ ಇಲ್ಲಿಯೇ ಮಾಡ್ತಾರೆ.

v-craniumbolts.blogspot.com_.jpgಮೂಲ

11. ದೇವಸ್ಥಾನದ ವಾಸ್ತುಶಿಲ್ಪ ಕೆಳದಿ ರಾಜರ ಕಾಲದ್ದು

ಕೆಳದಿಯ ಅರಸ ವೆಂಕಟಪ್ಪನಾಯಕನು ಕೊಲ್ಲೂರು ಮೂಕಾಂಬಿಕಾ ದೇವಾಲಯವನ್ನು ವಿಸ್ತಾರವಾಗಿ ಕಟ್ಟಿಸಿದ್ದಂತೆ. ಲಕ್ಷದೀಪಾರಾಧನೆ ರಥೋತ್ಸವ ಕಟ್ಟಳೆಗಳು ಸರಾಗವಾಗಿ ನಡೆಯುವಂತೆ ನಿಯಮಿಸಿದ್ದಂತೆ.

ಇಕ್ಕೇರಿ ಸಂಸ್ಥಾನದವರೇ ಈಗ ದೇವಸ್ಥಾನದ ಬಾಗಿಲಲ್ಲಿರುವ ದ್ವಾರಪಾಲಕರಾದ ಜಯವಿಜಯರನ್ನು ಮಾಡಿಸಿ ಕೊಟ್ಟಿದ್ದಂತೆ.

keladi-kannada.nativeplanet.com_.jpgಮೂಲ

12. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಜಿ.ಅರ್. ಈ ದೇವಸ್ಥಾನಕ್ಕೆ ಒಂದು ಬಂಗಾರದ ಕತ್ತಿ ಕಾಣಿಕೆಯಾಗಿ ಕೊಟ್ಟಿದಾರೆ

ಅದು 1.ಕೇ. ಜಿ ತೂಕ ಹಾಗೂ 2.5 ಅಡಿ ಉದ್ದ ಇದೆ.

mgr-mayyam.com_.jpgಮೂಲ

13. ನಮ್ಮ ಮಾಜಿ ಮುಖ್ಯಮಂತ್ರಿ ಗುಂಡೂರಾವ್‌ ಔರು ಒಂದು ಬೆಳ್ಳಿ ಕತ್ತಿ ಕೊಟ್ಟಿದಾರೆ

gundu-rao-karnataka.com_.jpgಮೂಲ

14. ಮೂಕಾಂಬಿಕಾ ದೇವತೆಗೆ ಬಂಗಾರದ ಮುಖವಾಡ ಮಾಡಿಸಿದ್ದು ವಿಜಯನಗರದ ಅರಸರು

Hampi-heartyindia-hearty-india.com_.jpgಮೂಲ

15. ಜ್ಯೋತಿರ್ಲಿಂಗಕ್ಕೆ ಬಂಗಾರದ ಮುಖವಾಡ ಮಾಡಿಸಿದ್ದು ಕೆಳದಿ ಚೆನ್ನಮ್ಮ

keladi-Chennamma-junglekey.in_.jpgಮೂಲ

16. ಈ ದೇವಸ್ಥಾನದಲ್ಲಿ ಬಹಳ ವಿಶೇಷವಾದ್ದೇನಪ್ಪಾ ಅಂದ್ರೆ ಇದರಲ್ಲಿ ಒಂದಲ್ಲ, ಎರಡು ಉತ್ಸವಮೂರ್ತಿಗಳು!

ಬಂಗಾರದಲ್ಲಿ ಮಾಡಿರುವಂಥ, ಉತ್ಸವದಲ್ಲಿ ಬಳಸುವ ಎರಡು ಉತ್ಸವಮೂರ್ತಿಗಳನ್ನು ಈ ದೇವಸ್ಥಾನವು ಹೊಂದಿದೆ. ಮೂಲ ವಿಗ್ರಹವು ಕಳೆದುಹೋದಾಗ ಚೆನ್ನಮ್ಮ ರಾಣಿಯು ಮತ್ತೊಂದನ್ನು ಕೊಟ್ಟಿದ್ದಳಂತೆ. ಆದರೆ ಕಳೆದುಹೋದ ಉತ್ಸವಮೂರ್ತಿಯು ನಂತರ ಸಿಕ್ಕಿತ್ತಂತೆ. ಆವಾಗಿನಿಂದ ಇಲ್ಲಿ ಎರಡು ಉತ್ಸವ ಮೂರ್ತಿಗಳನ್ನು ಪೂಜಿಸುತ್ತಾರೆ.

photo-1-fb.jpgಮೂಲ

17. ಖ್ಯಾತ ಗಾಯಕ ಯೇಸುದಾಸ್‌‌‌‌ 30 ವರ್ಷದಿಂದ ಇಲ್ಲಿ ತಮ್ಮ ಹುಟ್ಟುಹಬ್ಬದ ದಿನ ಚಂಡಿಕಾ ಯಾಗ ಮಾಡಿಸ್ತಾರೆ

ಇದರ ಜೊತೆ ಕಳೆದ 14 ವರ್ಷಗಳಿಂದ ಸತತವಾಗಿ ಅಲ್ಲಿ ಸಂಗೀತೋತ್ಸವ ಮಾಡ್ಕೊಂಡು ಬಂದಿದ್ದಾರೆ.

yesudas-at-kollur-75-mathrubhuminews.in_.jpgಮೂಲ

18. ಚಂಡಿಕಾ ಹೋಮಕ್ಕೆ ಅಡ್ವಾನ್ಸ್ ಬುಕಿಂಗ್ 2 ವರ್ಷದ ಮುಂಚೆನೇ ಮಾಡಿಸ್ಬೇಕು

ಈಗಾಗಲೇ ಜನವರಿ 2019ರ ತನಕ ಬುಕ್ಕಿಂಗ್ ಮುಗಿದುಹೋಗಿದೆ!

chandika-youtube.com_.jpgಮೂಲ

19. ದೇವಸ್ಥಾನದ ಹುಂಡೀಲಿ 1,80,000 ರೂಪಾಯಿಗಿಂತಲೂ ಜಾಸ್ತಿ ಕಲಕ್ಷನ್ ಆಗತ್ತೆ.

ತಮ್ಮ ಹರಕೆ ತೀರಿದ್ದಕ್ಕೆ ಭಕ್ತರು ಲಕ್ಷಗಟ್ಟಲೆ ಬೆಲೆಬಾಳುವ ಚಿನ್ನ-ಬೆಳ್ಳಿ ಆಭರಣಗಳನ್ನು ದೇವಿಗೆ ಕಾಣಿಕೆಯಾಗಿ ಕೊಡುತ್ತಾರೆ.

hundi-srisailamonline.com_.JPGಮೂಲ

ಮಾರ್ಚಿ-ಏಪ್ರಿಲ್ ತಿಂಗಳಲ್ಲಿ 10 ದಿನದ ರಥೋತ್ಸವ ನಡೆಯತ್ತೆ. ಕೃಷ್ಣ ಜನ್ಮಾಷ್ಟಮಿ ಇಲ್ಲಿ ವಿಜೃಂಭಣೆಯಿಂದ ಮಾಡ್ತಾರೆ. ಸಾವಿರಾರು ವರ್ಷದಿಂದ ಈ ದೇವಿ ಕನ್ನಡಿಗರನ್ನ ಕಾಪಾಡಿಕೊಂಡು ಬಂದಿದಾಳೆ... ಒಮ್ಮೆ ಹೋಗಿ ಬನ್ನಿ...

ಹೊರಚಿತ್ರ: ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ಅವಳು ನಿನ್ನವಳೇ ಆಗಿದ್ದರೆ ಈಗಾಗಲೇ ಈ 23 ಗುರುತುಗಳಲ್ಲಿ ಕೆಲವಾದರೂ‌ ಕಂಡಿರಬೇಕು

ಕಂಡಿದ್ದರೆ ನಿನ್ನ ಜೀವನಸಂಗಾತಿ ಅವಳೇ

ಜೀವನದಲ್ಲಿ ಇಂತ ಅದ್ಭುತ ನಡಿಯೋದು ಒಂದೇ ಒಂದು ಸತಿ. ನಿಮ್ಮ ಜೀವನಕ್ಕೆ ಬೆಳಕ್ ತರ ಬಂದು, ನಿಮ್ಮ ಸುಖ ದುಃಖದಲ್ಲೆಲ್ಲ ಜೊತೆಗಿದ್ದು, ಇವಳೇ ನಿಮ್ಮ ಸಂಗಾತಿ ಇರ್ಬೋದೆನೋ ಅಂತ ಅನ್ನಿಸ್ತಿದ್ರೆ, ಅವ್ಳಲ್ಲಿ ಈ ಕೆಳ್ಗಿರೊ ಗುಣಗಳಿದ್ರೆ ಡೌಟೇ ಬೇಡ ಅವ್ಳು ನಿಮ್ ಹುಡ್ಗಿ...

1. ಅವಳು ನಿಮ್ಮ್ ಜೊತೆ ಇದ್ದಾಗ ನಿಮಗೆ ಏನೋ ಒಂದು ಪ್ರೇರಣೆ, ನಿನ್ನೆಗಿಂತ ನನ್ನ ಜೀವನ ಇನ್ನು ಚೆನಾಗ್ ಆಗ್ಬೇಕು, ಕಷ್ಟ ಪಟ್ಟು ಜೀವನದಲ್ಲಿ ಇನ್ನು ಮೇಲೇರಬೇಕು ಅಂತ ಅನ್ನಿಸತ್ತೆ.

2. ಏಯ್ ಗಟ್ಟಿ ಗಂಡಸು ಮಾರ್ರೆ ನಾನು, ಯಾವ್ ಸೆಂಟಿಮೆಂಟು ನನ್ನತ್ರ ನಡಿಯಲ್ಲ, ಕಲ್ಲು ಬಂಡೆ ಥರ ನಾನು ಅಂತಿದ್ದ ನಿಮ್ಮನ್ನ, ಈ ಹುಡುಗಿ ಹೋಗ್ತಾಹೋಗ್ತಾ ಕರ್ಗೋಗೊ ಹಾಗೆ ಮಾಡ್ಬಿಡ್ತಾಳೆ. ಅವ್ಳು ನಿಮ್ಮಲ್ಲಿ ಪ್ರೀತಿ, ವಾತ್ಸಲ್ಯ, ಸಂತೋಷ ಒಂತರ ಎಲ್ಲ ಭಾವನೆ ನಿಮ್ಮಲ್ಲಿ ಶುರು ಆಗೋ ಹಾಗೆ ಮಾಡಿರ್ತಾಳೆ. ಅವ್ಳಿಗೆ ನಿಮ್ ಕಣ್ಣಲ್ಲೂ ನೀರ್ ಹಾಕ್ಸೋ ತಾಕತ್ತಿರತ್ತೆ... ಇಂತ ಭಾವನೆಗಳು ನಿಮ್ಗೆ ಮುಂಚೆ ಅನುಭವಕ್ಕೆ ಬಂದಿರಲ್ಲ.

3. ಇದೊಂತರ ವಿಚಿತ್ರ. ಅವ್ಳ ಖುಷಿ ನಿಮಗೆ ಖುಷಿ ಕೊಡತ್ತೆ. ಅವಳ ಒಂದು ನಗು ಸಾಕು ನಿಮಗೆ ಸಿಕ್ಕಾಪಟ್ಟೆ ಖುಷಿಯಾಗಿರಕ್ಕೆ, ಅವ್ಳ ನಗು ಕಾರಣ ನಿಮ್ಗೆ ಬೇಕಿರಲ್ಲ, ಅವ್ಳ್ ನಕ್ರೆ ಸಾಕು.

4. ನಿಮ್ಮ ಎಲ್ಲ ಯೋಚನೆ, ನಿಮ್ಮ ಟೆನ್ಷನ್ನು ಎಲ್ಲ ದೂರ ಆಗಕ್ಕೆ ಅವಳ ಒಂದೇ ಒಂದು ನಗು ಸಾಕು. ಆ ಒಂದ್ ಕ್ಷಣ ಏನೋ ಒಂತರ ನೆಮ್ಮದಿ ಸಿಗೊಹಾಗ್ ಮಾಡತ್ತೆ.

ಮೂಲ

5. ಅವಳ ನಗು ನಿಮಗೆ ಖುಷಿ ತರತ್ತೆ ಅಂತ ಯಾವಾಗ್ಲೂ ಅವ್ಳು ನಿಮ್ಮತ್ರ ನಗ್ತನೇ ಇರ್ಬೇಕಿಲ್ಲ... ಅವ್ಳ್ ಜೊತೆ ಟೈಮ್ ಸ್ಪೆಂಡ್ ಮಾಡೊ ಭಾಗ್ಯ ನಿಮ್ಗೆ ಸಿಕ್ಕಿದ್ರೆ ಸಾಕಾಗಿರತ್ತೆ. ಅವ್ಳ್ ಜೊತೆ ಇರೋ ಅಷ್ಟೂ ಹೊತ್ತು ನಿಮ್ಗೆ ಮಧುರವಾದ ಕ್ಷಣ ಅನ್ನಿಸ್ತಿರತ್ತೆ.

6. ಎರಡು ದೇಹ ಒಂದೇ ಜೀವ ನಿಮ್ಮದು ಅನ್ನಿಸತ್ತೆ.

7. ಅವಳ ಎಲ್ಲ ಭಾವನೆ ನಿಮಗೆ ಆಕರ್ಷಕವಾಗಿರತ್ತೆ, ಅವಳ ಬಗ್ಗೆ ಪೂರ್ತಿ ತಿಳ್ಕೊಬೇಕು ಅಂತ ಅನ್ನಿಸತ್ತೆ ನಿಮಗೆ... ಅವ್ಳಲ್ಲಿರೊ ಒಳ್ಳೇದು, ಕೆಟ್ಟದ್ದು ಮತ್ತೆ ಸುಮಾರಾಗಿರೊ ವಿಚಾರ್ವೆಲ್ಲ ನಿಮ್ಗೆ ಓಕೆ ಆಗೋಗಿರತ್ತೆ... ಅವ್ಳನ್ನ ನೀವು ಆರಾಧಿಸಕ್ಕೆ ಶುರು ಮಾದ್ಬಿಟ್ಟಿರ್ತೀರ.

8. ಅವಳು ನಿಮ್ಮ ಕಡೆ ನಡ್ಕೊಂಡು ಬರ್ತಿದ್ರೆ ನಿಮ್ ಕಣ್ಣಿಗೆ ಬೇರೇನೂ ಕಾಣಲ್ಲ... ಎಲ್ಲ ಮಂಜ್ ಮಂಜು ಆಗೋಗತ್ತೆ... ಬರಿ ಅವಳೊಬ್ಬಳೇ... ನಿಮ್ಮ ಟೆನ್ಷನ್ನು, ನಿಮ್ಮ ಕೆಲಸಗಳೆಲ್ಲ ನೆನಪಾಗದೇ ಇಲ್ಲ, ಇಡೀ ಜೀವನ ಹೀಗೆ ಅವ್ಳನ್ನ ನೋಡ್ಕೊಂಡು ನೆಮ್ಮದಿಯಾಗಿದ್ಬಿಡ್ಬೇಕು ಅನ್ನಿಸತ್ತೆ.

ಮೂಲ

9. ಇವತ್ತಿನ ತಂಕ ಯಾರ್ ಹತ್ರನೂ ಹೇಳಿರದ ಗುಟ್ಟನ್ನ ಇವಳ ಹತ್ರ ಹೇಳ್ಕೊಬೇಕು ಅನ್ನಿಸತ್ತೆ. ನಿಮ್ಮ ಭಾವನೆಗಳ್ನೆಲ್ಲ ಅವ್ಳ್ ಹತ್ರ ಹಂಚ್ಕೊಬೇಕು ಅನ್ನಿಸತ್ತೆ. ನಿಮ್ಮೆಲ್ಲಾ ಗುಟ್ಟುಗಳ್ನ ಅವ್ಳು ಕಾಪಾಡ್ತಾಳೆ.

10. ನಿಮಗೆ ಗೊತ್ತಿಲ್ಲದ ಹಾಗೆ ಅವಳು ನಿಮ್ಮ ಪ್ರಪಂಚ ಆಗ್ಬಿಟ್ಟಿರ್ತಾಳೆ. ನೀವು ನಿಮ್ಮ ಮುಂದಿನ ಜೀವನದ ಬಗ್ಗೆ ಮಾಡೋ ಪ್ರತಿಯೊಂದು ಯೋಚನೇಲು ಅವಳಿಗೆ ಜಾಗ ಕೊಟ್ಟಿರ್ತೀರ.

11. ಕನಸಲೂ ನೀನೆ ಮನಸಲೂ ನೀನೆ... ದಿನಾ ಕನಸಲ್ಲಿ ಅವಳೇ ಬರ್ತಾಳೆ. ನಿಮಗೆ ಅವಳ್ ಬಿಟ್ಟು ಬೇರೇನೂ ಬೇಕಿರಲ್ಲ.

12. ಯಾವತ್ತೂ ಅನುಭವಿಸದ ಅನ್ಯೋನ್ಯತೆ ನಿಮಗೆ ಅವ್ಳ ಬಗ್ಗೆ. ಅಪ್ಪಿ ತಪ್ಪಿ ಒಂದ್ಸತಿ ಅವ್ಳನ್ನ ಮುಟ್ಟಿದ್ರೆ ಮೈ ಜುಮ್ ಅನ್ನತ್ತೆ, ತಲೆ ನಿಲ್ಲದೇ ಇಲ್ಲ. ಅವ್ಳನ್ನ ನಿಮ್ಮ ತೋಳಲ್ಲಿ ತಬ್ಬಿ ಹಿಡ್ಕೊಬೇಕು ಅನ್ನಿಸತ್ತೆ, ಹೀಗೆ ಜೀವನ ಪೂರ್ತಿ ಒಟ್ಟಿಗೆ ಇರ್ಬೇಕು ಅನ್ನಿಸ್ತಿರತ್ತೆ.

ಮೂಲ

13. ಬರಿ ಅದೇ ಅಂತಲ್ಲ, ಜಾಸ್ತಿ ಸುತ್ತಾಡ್ಬೇಕು ಅನ್ನೊಹಾಗೆ ಮಾಡ್ತಾಳೆ, ಬೇರೆ ಬೇರೆ ಹೋಟೆಲ್ಲಿಗೆ ಹೋಗಿ ಹೊಸ-ಹೊಸ ತಿಂಡಿ ಊಟ ಟ್ರೈ ಮಾಡ್ಬೇಕು ಅನ್ನಿಸೋ ಹಾಗೆ ಮಾಡ್ತಾಳೆ. ಪ್ರತಿ ಕ್ಷಣ ಜಗತ್ತು ಹೊಸದಾಗಿ ಕಾಣೋಹಾಗೆ ಮಾಡ್ತಾಳೆ. ನಿಮ್ಮ ಜೀವನ  ಇನ್ನು ಕುತೂಹಲಕಾರಿ ಆಗತ್ತೆ.

14. ನಿಮ್ಮ ಸ್ನೇಹಿತರಿಗೆ, ಮನೆಯವರಿಗೆಲ್ಲ ಅವಳನ್ನ ಪರಿಚಯ ಮಾಡ್ಸ್ ಬೇಕು ಅನ್ನಿಸತ್ತೆ. ಅವಳೆಷ್ಟು ಒಳ್ಳೇವ್ಳು ಅಂತ ನಿಮ್ಮ ಮನೆಯವರಿಗೆ ಖಂಡಿತ ಗೊತ್ತಾಗತ್ತೆ ಅಂತ ನಿಮಗನ್ನಿಸತ್ತೆ... ಅವ್ಳ ಗುಣ ಎಲ್ಲಾರ್ಗೂ ಹಿಡ್ಸೋ ಅಂತದ್ದು ಅಂತ ನಿಮ್ಗೆ ಎಷ್ಟರಮಟ್ಟಿಗೆ ಅನ್ನಿಸತ್ತೆ ಅಂದ್ರೆ ಕೆಲವೊಮ್ಮೆ ಇವಳನ್ನ ನನಗಿಂತ ಜಾಸ್ತಿ ನನ್ನ ಸ್ನೇಹಿತರೆ ಇಷ್ಟ ಪಡ್ತಿದಾರಲ್ಲಪ್ಪ ಅಂತ ಅನ್ನಿಸಿಬಿಡತ್ತೆ.

15. ನಿಮ್ಮ ಬಗ್ಗೆ ತುಂಬ ಕಾಳಜಿ ಮತ್ತೆ ಪ್ರೀತಿ ತೋರುಸ್ತಾಳೆ ಅವಳು, ಹೇಗೆ ಅಂತ ಹೇಳಕ್ಕಾಗಲ್ಲ. ದಿನ ನೀರ್ ಕುಡಿ ಅಂತ ಹೇಳೋದ್ರಿಂದ ನಿಮ್ಮ ಹುಟ್ಟು ಹಬ್ಬಕ್ಕೆ ಅದ್ಭುತವಾಗಿ ಒಂದು ಸುರ್ಪ್ರೈಸ್ ರೆಡಿ ಮಾಡೊತನ್ಕ ಎಲ್ಲ ಮಾಡಿರ್ತಾಳೆ... ನಿಮ್ಮನ್ನ ಯಾವಾಗ್ಲೂ ಖುಷಿಯಾಗಿ ನೋಡ್ಬೇಕು ಅನ್ನೋದು ಅವಳ ಆಸೆ ಆಗಿರತ್ತೆ.

16. ಅವ್ಳಿಗೆ ನಿಮ್ಮ ನಿಜವಾದ ಮುಖ ನೀವ್ ತೋರಿಸ್ತೀರ. ನಿಮಗೆ ಮೆಚ್ಚಿಸಕ್ಕೆ ನಾಟಕ ಆಡ್ಬೇಕು ಅಂತ ಅನ್ಸಲ್ಲ. ನೀವಾಗಿ ಅವಳೊಂದಿಗೆ ಆರಾಮಾಗಿ ಇರಬಹುದು. ನಿಮ್ಮ ಎಲ್ಲ ತುಂಟತನ ಮತ್ತೆ ತರ್ಲೆಗಳು ಅವ್ಳು ನಿಮ್ಮನ್ನ ಹೆಚ್ಚೆಚ್ಚು ಪ್ರೀತ್ಸೋ ಹಾಗೆ ಮಾಡತ್ತೆ. ಅವಳ ಜೊತೆ ನಿಮಗೆ ಯಾವ್ದೇ ಹಿಂಜರಿಕೆ ಇರಲ್ಲ.

ಮೂಲ

17. ಅವಳು ಸ್ವಂತಂತ್ರವಾಗಿ ತನ್ನ ಕೆಲಸ ತಾನು ಮಾಡ್ಕೊಂಡು ಇರೋಂತ ಹುಡುಗಿ ಆಗಿದ್ರು ಯಾವಾಗಾದ್ರೂ ಸಹಾಯ ಬೇಕು ಅನ್ಸಿದ್ರೆ, ನಿಮ್ಮನ್ನ ಕೇಳ್ತಾಳೆ. ನೀವು ಇಲ್ಲ ಅನ್ನಲ್ಲ ಅಂತ ಅವ್ಳಿಗೆ ಚೆನ್ನಾಗಿ ಗೊತ್ತಿರತ್ತೆ. ಯಾವತ್ತೂ ನಿಮಗೆ ಮೋಸ ಮಾಡಬೇಕು ಅನ್ನೋ ಯೋಚ್ನೆ ಇರಲ್ಲ.

18. ನಿಮಗೆ ಚೆನ್ನಾಗಿ ಗೊತ್ತಿರತ್ತೆ ಇವ್ಳು ಯಾವಾಗ್ಲೂ ಎಂತ ಸಮಯದಲ್ಲೂ ಜೊತೇಗೆ ಇರ್ತಾಳೆ ಅಂತ. ಕೆಲವೊಮ್ಮೆ ನಿಮಗೆ ಏನು ತೋಚದೇ, ಇನ್ನೇನು ದಾರಿ ಇಲ್ಲ ಅಂದಾಗ ಕೂಡ, ಇವಳು ನಿಮ್ಮನ್ನ ಬಿಡದೇ ಬೆನ್ನೆಲುಬಾಗಿ ನಿಲ್ತಾಳೆ ಅನ್ನಿಸತ್ತೆ.

19. ಯಾವುದೇ ಅನುಮಾನ ಇಲ್ಲದೆ ಕಣ್ಣು ಮುಚ್ಚಿಕೊಂಡು ಎಲ್ಲ ಸಮಯದಲ್ಲೂ ನಂಬಬಹುದು. ಅವಳು ಎಲ್ಲಿ, ಯಾರ್ ಜೊತೆ, ಯಾವ ಸಮಯದಲ್ಲಿ ಇದ್ದಳು, ಯಾಕೆ ಇದ್ದಳು ಅನ್ನೋದೆಲ್ಲ ನಿಮ್ಗೆ ದೊಡ್ಡ ವಿಷ್ಯ ಅನ್ಸದೇ ಇಲ್ಲ, ಅವ್ಳ ಬಗ್ಗೆ ಬಲವಾದ್ ನಂಬಿಕೆ ನಿಮ್ಗಿರತ್ತೆ. ನಿಮ್ಮ ಸಂಬಂದಾನೆ ಹಾಗೆ! ಇಬ್ಬರು ಒಬ್ಬರನ್ನ ಒಬ್ಬರು ಅಷ್ಟು ನಂಬ್ತೀರಿ, ಅಷ್ಟೇ ಗೌರವ ಕೊಡ್ತೀರಿ.

20. ಅವ್ಳು ಯಾವದಾದ್ರು ಕಾರಣಕ್ಕೆ ಬೇಜಾರಾಗಿದ್ರೆ ನಿಮಗೆ ತಡ್ಕೊಳಕ್ಕಾಗಲ್ಲ, ಯಾರಾದ್ರೂ ಬೇಜಾರ್ ಮಾಡಿದ್ರೆ ನೀವು ಅವ್ರನ್ನ ಸುಮ್ನೆ ಬಿಡಲ್ಲ. ಅವಳು ದುಃಖ ಪಡೋದನ್ನ ನಿಮಗೆ ಸಹಿಸಿಕೊಳಕ್ಕೆ ಆಗದೇ ಇಲ್ಲ.

ಮೂಲ

21. ನೀವು ನಿಮ್ಮ ಮುಂದಿನ ದಿನಗಳಿಗೆ ಅಂತ ಮಾಡಿದ ಎಲ್ಲ ಯೋಚನೆಲಿ ನಿಮಗೆ ಗೊತ್ತಿಲ್ಲದ ಹಾಗೆ ಅವಳನ್ನು ಸೇರಿಸಿಕೊಂಡಿರ್ತೀರ. ನೀವು ಸುತ್ತಾಡಬೇಕು ಅನ್ಕೊಂಡಿರೋ ಜಾಗ, ನೀವು ಮಾಡ್ಬೇಕು ಅನ್ಕೊಂಡಿರೋ ಸಾಹಸ, ಹೀಗೇ ಎಲ್ಲದ್ರಲ್ಲೂ ಅವ್ಳು ಇದ್ದೇ ಇರ್ತಾಳೆ...

22. ನಿಮಗೆ ಸರ್ವಸ್ವಾನು ಅವಳೇ ಆಗಿರ್ತಾಳೆ. ನೀವು ರಾತ್ರಿ ಮಲಗುವಾಗ ತೊಗೊಳೋ ಕೊನೆ ಹೆಸರು ಅವಳದ್ದೇ, ಬೆಳಗ್ಗೆ ಎದ್ದಾಗ ಹೇಳೋ ಮೊದಲನೇ ಹೆಸರು ಅವಳದ್ದೇ. ನಿಮ್ಮೆಲ್ಲ ತುಂಟಾಟದಲ್ಲಿ ಅವಳು ಇರ್ತಾಳೆ, ಅವಳ ಜೊತೆ ನಿಮ್ಮ ಜೀವನ ಪೂರ್ತಿ ಕಳೀಬೇಕು ಅಂತ ಅನ್ನಿಸತ್ತೆ. ಹೌದು ಅವಳೇ ನಿಮ್ಮ ಪ್ರೇಯಸಿ, ಅವಳೇ ನಿಮ್ಮ ನಿಜವಾದ ಸಂಗಾತಿ.

23. ನಿಮ್ಮ ಬದುಕು ಸಾರ್ಥಕ ಅಂತ ಅನ್ನಿಸೋದು, ಬದುಕಿಗೆ ಒಂದು ಅರ್ಥ ಅಂತ ಸಿಗೋದು, ಅವಳು ನಿಮ್ಮ ಜೊತೆ ಇದ್ದಾಗ ಮಾತ್ರ.

ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: