100 ವರ್ಷ ಆರೋಗ್ಯವಾಗಿ ಬದುಕಬೇಕು ಅಂತಿದ್ರೆ ಅಕ್ಕಿ ಗೋದಿ ಜೊತೆ ಈ 5 ಧಾನ್ಯಗಳ್ನೂ ತಿನ್ನಿ

ವಾರದಲ್ಲಿ 15 ಬಾರಿ ತಿಂದರೆ ಸಾಕು

ಕಿರುಧಾನ್ಯ

ಜೀವನದಲ್ಲಿ ಯಾವುದಾದರೂ ಖಾಯಿಲೆ ಬರಬಹುದು ಅಂತ ಅರೋಗ್ಯ ವಿಮೆ ಮಾಡಿಸ್ತೀವಿ. ಆ ವಿಮೆ ಕಂಪನಿಗಳಿಗೆ ಸಾವಿರಾರು ರೂಪಾಯಿ ದುಡ್ಡು ಸುರಿತೀವಿ. ಆಮೇಲೆ ಆಸ್ಪತ್ರೆಗೆ ಹೋಗಿ ನರಳಿ ಆ ದುಡ್ಡನ್ನ ಅತ್ತು ಕರೆದು ವಾಪಸ್ ತೊಗೊತೀವಿ (ಔರು ಕೊಟ್ರೆ). ಇಷ್ಟೆಲ್ಲಾ ಮಾಡೋ ಬದಲು ನಿಮ್ಮ ಹತ್ತಿರ ಇರೋ ದಿನಸಿ ಅಂಗಡಿಗೆ ಹೋಗಿ ಕೆಳಗೆ ತಿಳಿಸಿರೋ ಸಿರಿಧಾನ್ಯಗಳನ್ನ ತೊಗೊಂಡ್ ಬಂದು ತಿಂದ್ರೆ ನಮ್ ಕರ್ನಾಟಕದಲ್ಲಿ ಅರೋಗ್ಯ ವಿಮಾ ಕಂಪನಿಗಳಿಗೆ ಕೆಲಸಾನೇ ಇರಲ್ಲ.

ರುಚಿರುಚಿಯಾದ ಬಿಸಿಬೇಳೆಬಾತ್, ಪಲಾವ್, ಇಡ್ಲಿ, ದೋಸೆ, ನಿಪ್ಪಟ್ಟು, ಚಕ್ಕುಲಿ, ಉಪ್ಪಿಟ್ಟು, ರೊಟ್ಟಿ, ಪೊಂಗಲ್ ಎಲ್ಲಾ ಮಾಡ್ಕೊಂಡು ತಿಂದ್ರೆ ಅಕ್ಕಿ, ಗೋಧಿಗಿಂತ ಹೆಚ್ಚು ಕ್ಯಾಲ್ಶಿಯಂ, ಐರನ್ ಮತ್ತು ಫಾಸ್ಫರಸ್ ಮತ್ತು ಮ್ಯಾಂಗನೀಸ್ ಅಂಶ ಈ ಕೆಳಗಿನ ಧಾನ್ಯಗಳಿಂದ ಸಿಗತ್ತಂತೆ.

millets-meals-ganadhalu.wordpress.com_.jpgganadhalu

ಭಾರತದ ಅತೀ ಹೆಚ್ಚು ಆಯಸ್ಸು ಮತ್ತು ಅರೋಗ್ಯ ಇರೋರು ಹಿಮಾಲಯದ ತಪ್ಪಲಲ್ಲಿ ವಾಸಿಸುವ "ಹುಂಝ" ಜನಾಂಗದವರು. ಇದೇ ಸಿರಿಧಾನ್ಯಗಳನ್ನ (ಮಿಲ್ಲೆಟ್ಸ್) ದಿನಾ ತಿಂತಾರೆ.

ಭಾರತ, ಚೈನ ಮತ್ತು ನೈಜರ್ ದೇಶಗಳು ಅತಿ ಹೆಚ್ಚು ಸಿರಿಧಾನ್ಯ ಬೆಳೆಯುವ ದೇಶಗಳಾಗಿವೆ.

SeedFestival_millets_thealternative_in.jpg

ವಾಡಿಕೆಯಲ್ಲಿ ಅಕ್ಕಿ ಅಂತಾನೇ ಕರ್ಸ್ಕೊಳೋ 5 ಸಿರಿಧಾನ್ಯಗಳನ್ನ ತಿಂದು ಸಿರಿವಂತರಾಗಿ:

1. ತೆಳು ಹಳದಿ ಬಣ್ಣದ ನವಣೆ ಅಕ್ಕಿ ಶರೀರದ ನರನಾಡಿಗಳಿಗೆ ಹುರುಪು ಕೊಡತ್ತೆ.

ಸರ್ವಜ್ಞ ತನ್ನ ತ್ರಿಪದಿಯಲ್ಲಿ ಇದನ್ನ ಕೊಂಡಾಡಿದ್ದಾನೆ. ಮುಷ್ಟಿ ರೋಗ ತಡೆಗಟ್ಟತ್ತೆ. ಗರ್ಭಿಣಿಯರಿಗೆ ಒಳ್ಳೆಯದು. ಅಂಗಾಂಗಗಳ ಯಾವುದೇ ನೋವು ಕಡಿಮೆಯಾಗತ್ತೆ. ಬಾಣಂತಿಯರು 1 ವರ್ಷ ತಿನ್ನೋ ಹಾಗಿಲ್ಲ.

navane.jpg

2. ಮಾಸಲು ಬಿಳಿ ಬಣ್ಣದ ಸಾಮೆ ಅಕ್ಕಿ ಸಂತಾನೋತ್ಪತ್ತಿಯ ತೊಂದರೆಗಳನ್ನು ಸರಿಪಡಿಸತ್ತೆ.

ಹೆಣ್ಣು ಮಕ್ಕಳಲ್ಲಿ ಅಂಡಾಶಯದ ತೊಂದರೆಯನ್ನ ಸರಿಪಡ್ಸತ್ತೆ. ಗಂಡು ಮಕ್ಕಳಲ್ಲಿ ವೀರ್ಯಾಣುಗಳ ಕೊರತೆಯನ್ನ ನೀಗಿಸತ್ತೆ.

samai.jpg

3. ನಸುಗೆಂಪು ಬಣ್ಣದ ಆರ್ಕ ಅಕ್ಕಿ ದೇಹದಲ್ಲಿನ ರಕ್ತನ ಶುದ್ಧಿ ಮಾಡತ್ತೆ.

ರಕ್ತ ಶುದ್ಧಿಯಾದರೆ ಯಾವ ರೋಗವೂ ಹತ್ರ ಬರಲ್ಲ.

aarka.jpg

4. ಬಿಳಿ ಬಣ್ಣದ ಊದಲು ಅಕ್ಕಿ ಲಿವರ್ನ ಶುದ್ಧಿ ಮಾಡತ್ತೆ.

ಸಕ್ಕರೆ ಖಾಯಿಲೆಗೆ ಹೇಳಿ ಮಾಡಿಸಿದ ಪ್ರಕೃತಿಯ ಔಷಧಿ.

Udalu2.jpgkalakkalsamayal

5. ತಿಳಿ ಹಸಿರು ಬಣ್ಣದ ಕೊರಲೆ ಅಕ್ಕಿ ಪಚನಾಂಗಗಳ ಕಾರ್ಯ ದಕ್ಷತೆಯನ್ನ ಹೆಚ್ಚಿಸುತ್ತದೆ.

ಅತಿ ಹೆಚ್ಚು ನಾರಿನಂಶ ಇರತ್ತೆ. ಬೆಳಗ್ಗೆ ಎದ್ರೆ ಸಲೀಸಾಗಿ ಕಕಸ್ಸು ಆಗತ್ತೆ!

korle1.jpghomemadeonline

ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟ, ರಾತ್ರಿ ಊಟ ಅಂತ ದಿನಕ್ಕೆ 3 ಬಾರಿ ಆಹಾರ ಸೇವನೆ ಮಾಡ್ತೀವಿ. ಅಂದ್ರೆ ವಾರದಲ್ಲಿ 21 ಬಾರಿ ತಿಂತೀವಿ. ಅದ್ರಲ್ಲಿ 15 ಬಾರಿ ತಿನ್ನೋ ಆಹಾರದಲ್ಲಿ ಈ ಸಿರಿ/ಕಿರುಧಾನ್ಯಗಳನ್ನು ಅಳವಡಿಸಿಕೊಳ್ಳಿ. ಇನ್ನು 6 ಬಾರಿ ಅಕ್ಕಿ, ಗೋಧಿ ಅಥವಾ ರಾಗಿಯ ಪದಾರ್ಥ ತಿನ್ನುವುದರಿಂದ ಯಾವ ರೋಗವೂ ನಿಮ್ಮ ಹತ್ತಿರ ಸುಳಿಯಲ್ಲ.

ಅಕ್ಕಿ, ಗೋಧಿಗಳೆಲ್ಲ ಈ ಧಾನ್ಯಗಳ ಮುಂದೆ ನಾರಿನ ಅಂಶದ ದೃಷ್ಟಿಯಿಂದ ಏನೂ ಇಲ್ಲ. ಕೆಳಗೆ ನಮಗೆ ಗೊತ್ತಿರೋ ಎಲ್ಲಾ ಧಾನ್ಯಗಳ್ನ ಹೋಲಿಸಿದೀವಿ, ನೋಡಿ:

nutritionchart_millets.jpg

ಒಟ್ನಲ್ಲಿ ಮೇಲಿನ 5 ಧಾನ್ಯಗಳನ್ನ ತಿಂದರೆ ಮಧುಮೇಹ, ಮಲಬದ್ಧತೆ, ಸ್ಥೂಲಕಾಯತೆ ಇನ್ನೂ ಅನೇಕ ರೋಗಗಳು ಹೆದರ್ಕೊಂಡು ನಿಮ್ ಹತ್ರ ಕೂಡ ಸುಳಿಯೋದಿಲ್ವಂತೆ! 100 ವರ್ಷ ಆರೋಗ್ಯವಾಗಿ ಬಾಳಕ್ಕೆ ಈ ಧಾನ್ಯಗಳಿಗಿಂತ ವಿಮೆ ಇನ್ನೊಂದಿಲ್ಲ...

ಹೊರಚಿತ್ರ: indiawater

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಸೇಬ್ನ ಹೀಗೆ ವಾರೆಯಾಗಿ ಕತ್ತರಿಸಿದರೆ ಏನ್ ಲಾಭ ಇದೆ ಅಂತ ನೋಡಿ ಆಶ್ಚರ್ಯ ಪಡ್ತೀರಿ

ನೋಡ್ ನೋಡ್ತಾ ಏನೇನೋ ಆಗೋಗುತ್ತೆ

ಇವನು ನಮ್ಮ ಥರ ಮಾಮೂಲಿಯಾಗಿ ಕತ್ತರಿಸಲ್ಲ. ಆದರೆ ಕಡೆಗೆ ಏನ್ ಮಾಡ್ತಾನೆ ಅಂತ ನೋಡಿ. ನಮಗಂತೂ ಮೊದಲು ಟ್ರೈ ಮಾಡಬೇಕು ಅನ್ನಿಸ್ತಿದೆಯಪ್ಪ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: