Google ನಲ್ಲಿ ಹುಡುಕ್ತಾ ಹುಡುಕ್ತಾ ಕಾಣಿಸಿಕೊಳೋ ಈ ಸಮಸ್ಯೆ ನಿಮಗೂ ಇದ್ಯಾ?

ಪ್ರಪಂಚದಲ್ಲೆಲ್ಲ ಹರಡ್ತಾ ಇದೆ.

ಅವನಿಗೆ ಸೊಲ್ಪ ಬಿಟ್ಟು ಬಿಟ್ಟು ತಲೆ ನೋವು ಬರ್ತಿತ್ತು... ವಿಕ್ಸ್ ಹಚ್ಕೊಂಡ್ರೂ ಹೋಗ್ತಿರ್ಲಿಲ್ಲ, ಮಾತ್ರೆ ತಗೊಂಡ್ರೂ ಹೋಗ್ತಿರ್ಲಿಲ್ಲ, ಡಾಕ್ಟ್ರತ್ರ ಹೋಗಕ್ಕೆ ಟೈಮಿಲ್ಲ.

tale novu.jpgfindingdulcinea

ಅದಕ್ಕೆ ಇನ್ಟರ್ನೆಟ್ಟಲ್ಲಿ ತಲೆನೋವಿಗೆ ಮದ್ದು ಹುಡುಕಿದ.

1363839764307.jpghome.bt

 

ಆದ್ರೆ ಅವನಿಗೆ ಸಿಕ್ಕಿದ್ದು ತಲೆನೋವಿಗೆ ಪರಿಹಾರ ಅಲ್ಲ, ಬದಲಾಗಿ ಇನ್ನಷ್ಟು ತಲೆನೋವು! 

ಯಾಕಂದ್ರೆ ಅವನಿಗೆ ಇದ್ದ ಕಾಮನ್ ತಲೆನೋವಿನ ಬಗ್ಗೆ ಹುಡುಕಕ್ ಹೋಗಿ ಕೊನೆಗೆ ಮೈಗ್ರೇನ್, ಬ್ರೈನ್ ಟ್ಯೂಮರ್ ಬಗ್ಗೆ ಏನೇನೋ ಓದಿ, ತನಗೂ ಆ ರೋಗ ಇದೆ ಅನ್ನೋ ಭ್ರಮೆಗೆ ಒಳಗಾದ. 

a-shocked-man-looks-at-his-laptop-computer-multiple-options_qyw8sdhu__S0002.jpgcloudfront

ನಿಮ್ ಲೈಫಲ್ಲೂ ಈ ಥರ ನಡದಿದ್ರೆ ಈಥರ ಆಗ್ತಿರೋದು ನಿಮಗೆ ಮಾತ್ರ ಅನ್ಕೋಬೇಡಿ.

ನಿಮ್ಮಂತೋರು ತುಂಬಾ ಜನ ಇದ್ದಾರೆ...

ಜಗತ್ತಿನಾದ್ಯಂತ ಗೂಗಲ್ಲಲ್ಲಿ ಪ್ರತಿ ೨೦ರಲ್ಲಿ ಒಂದು ಹುಡುಕಾಟ ಆರೋಗ್ಯದ ಕುರಿತು ಆಗಿರುತ್ತಂತೆ.

Shocked-man-at-computer.jpgconselium

ಯಾವುದೇ ಒಂದು ವಿಷಯದ ಬಗ್ಗೆ ತಿಳ್ಕೋಬೇಕಾದ್ರೆ ಈಗಿನ ಹುಡುಗ್ರು ಚಕ್ ಅಂತ ಗೂಗಲ್ ಸರ್ಚ್ ಮಾಡ್ತಾರೆ. ಆದ್ರೆ ಆರೋಗ್ಯದ ವಿಷಯದಲ್ಲಿ ಈ ಥರ ಗೂಗಲ್ಲಿಂದ ಮಾಹಿತಿ ತಗೊಳ್ಳೋರು ಸ್ವಲ್ಪ... ಅಲ್ಲ ತುಂಬಾ ಹುಷಾರಾಗಿರಬೇಕು. ಯಾಕಂದ್ರೆ, ಈ ಥರ ಗೂಗಲ್ಲಲ್ಲಿ ಆರೋಗ್ಯದ ಸಮಸ್ಯೆಗಳ ಬಗ್ಗೆ ಹುಡುಕಾಡಿ ಯಾವ್ಯಾವ್ದೋ ವೆಬ್ ಸೈಟಲ್ಲಿ ಏನೇನೋ ಓದಿ, ಅರೆಬೆರಕೇಲಿ ಊಹಿಸಿಕೊಂಡು ತಮಗೂ ಯಾವುದೋ ದೊಡ್ರೋಗ ಇದೆ ಅಂತ ತಲೆಕೆಡಿಸಿಕೊಳ್ಳೋದೇ ಒಂದು ಹೊಸ ರೋಗವಂತೆ.

ಆ ರೋಗದ ಹೆಸ್ರೇ ಸೈಬರ್ ಕಾಂಡ್ರಿಯಾ (cyberchondria)

really.jpgytimg

ಅದಕ್ಕೆ ಮದ್ದು ಇಷ್ಟೇ...

ನಿಮ್ಮ ಆರೋಗ್ಯದಲ್ಲಿ ಏನೇ ವ್ಯತ್ಯಾಸ ಆದ್ರೂ ಅದರ ಬಗ್ಗೆ ಗೂಗಲ್ಲಲ್ಲಿ ಹುಡುಕೋಕ್ಕೆ ಹೋಗಬೇಡಿ. 

ನಿಮ್ಮ ಆರೋಗ್ಯದ ಸಮಸ್ಯೆ ಚಿಕ್ಕದೇ ಆಗಿರಲಿ ದೊಡ್ಡದೇ ಆಗಿರಲಿ, ಡಾಕ್ಟ್ರರಿಗೆ ತೋರಿಸಿ ಔಷಧಿ ತಗೊಳಿ...

article-1354640-07C1B8EA000005DC-997_468x312.jpgdailymail

ಆರೋಗ್ಯದ ವಿಷಯದಲ್ಲಿ ನೀವು ಕೇಳಬೇಕಿರೋದು ಡಾಕ್ಟ್ರರ್ ಮಾತನ್ನೇ ಹೊರೆತು ಇಂಟರ್ನೆಟ್ಟಿನ ಮಾತಲ್ಲ...

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಸೇಬ್ನ ಹೀಗೆ ವಾರೆಯಾಗಿ ಕತ್ತರಿಸಿದರೆ ಏನ್ ಲಾಭ ಇದೆ ಅಂತ ನೋಡಿ ಆಶ್ಚರ್ಯ ಪಡ್ತೀರಿ

ನೋಡ್ ನೋಡ್ತಾ ಏನೇನೋ ಆಗೋಗುತ್ತೆ

ಇವನು ನಮ್ಮ ಥರ ಮಾಮೂಲಿಯಾಗಿ ಕತ್ತರಿಸಲ್ಲ. ಆದರೆ ಕಡೆಗೆ ಏನ್ ಮಾಡ್ತಾನೆ ಅಂತ ನೋಡಿ. ನಮಗಂತೂ ಮೊದಲು ಟ್ರೈ ಮಾಡಬೇಕು ಅನ್ನಿಸ್ತಿದೆಯಪ್ಪ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: