ಬೆಂಗಳೂರಲ್ಲಿ ಒಂದು ದರ್ಶಿನಿಗೆ ಹೋದರೆ ಅಲ್ಲಿ ಮುರುಗನ್ ಬೊಕ್ಕಳೆ ಹೊಡೀತಿದ್ದ.

ಅಲ್ಲಿರೋರ್ನೆಲ್ಲ ಚಾಲೆಂಜ್ ಮಾಡ್ತಿದ್ದ: ‘ನಿಮ್ಮಲ್ಲಿ ಯಾರಾರೂ 1 ನಿಮಿಷದಲ್ಲಿ ನನಗಿಂತ ಜಾಸ್ತಿ ಇಡ್ಲಿ ತಿಂದ್ರೆ 5000 ರೂಪಾಯಿ ಕೊಡ್ತೀನಿ. ಹೋದ ಸಲ ನಾನು 10 ಇಡ್ಲಿ ತಿಂದಿದ್ದು ನಿಮಗೆ ಗೊತ್ತೇ ಇದೆ. ಯಾರಾರೂ ತಾಕತ್ತಿದ್ರೆ ಮುಂದೆ ಬನ್ನಿ, ಬೆಟ್ ಕಟ್ಟಿ’ ಅಂತ.

ಯಾರೂ ಮುಂದೆ ಬರಲಿಲ್ಲ. ಅಲ್ಲೇ ಇದ್ದ ಕೆಂಚ ಕೂಡ ಸುಮ್ನೆ ಎದ್ದು ಹೊರಟು ಹೋದ.

10 ನಿಮಿಷ ಆದಮೇಲೆ ಮತ್ತೆ ಬಂದ ಕೆಂಚನ್ನ ನೋಡಿ ಮುರುಗನ್ ಕೆಣಕಿದ: ‘ಏನು, ವಾಪಸ್ ಬಂದ್ಯಲ್ಲ? ಬೆಟ್ ಕಟ್ತೀಯಾ?’ ಅಂತ.

ಕೆಂಚ ‘ಹೂಂ, ತರ್ಸು ಇಡ್ಲೀನ’ ಅಂದ.

ಒಂದು ದೊಡ್ಡ ಪಾತ್ರೇಲಿ ಇಡ್ಲಿ ಬಂತು.

‘ಒಂದು, ಎರಡು, ಮೂರು’ ಅಂತ ದರ್ಶಿನಿ ಕ್ಯಾಶಿಯರ್ ಹೀಳ್ತಿದ್ದಂಗೇ ಕೆಂಚ ಮುರುಗನ್ ಇಬ್ಬರೂ ಇಡ್ಲಿ ತಿನ್ನಕ್ಕೆ ಶುರು ಮಾಡಿದ್ರು. ಒಂದು ನಿಮಿಷದಲ್ಲಿ ಮುರುಗನ್ 12 ಇಡ್ಲಿ, ಕೆಂಚ 14 ಇಡ್ಲಿ ತಿಂದರು. ಅಲ್ಲಿದ್ದೋರೆಲ್ಲ ‘ಕೆಂಚ! ಕೆಂಚ! ಕೆಂಚ!’ ಅಂತ ಕೇಕೆ ಹಾಕಿ ಕೂಗಕ್ಕೆ ಶುರು ಮಾಡಿದ್ರು.

ಮುರುಗನ್ ಸೋಲು ಒಪ್ಪಿಕೊಂಡು 5000 ರೂಪಾಯಿ ಕೆಂಚಂಗೆ ಕೊಟ್ಟು ಒಂದು ಮಾತು ಕೇಳ್ದ: ‘ಅಲ್ಲವೋ, ಮೊದಲು ಚಾಲೆಂಜ್ ಮಾಡಿದಾಗ ಎದ್ದು ಹೊರಟು ಹೋದ್ಯಲ್ಲ, ಆಮೇಲೆ ಬಂದ್ಯಲ್ಲ ಯಾಕೆ? ಎಲ್ಲಿಗೆ ಹೋಗಿದ್ದೆ?’ ಅಂದ.

ಅದಕ್ಕೆ ಕೆಂಚ ಹೇಳ್ದ: ‘5000 ರೂಪಾಯಿ ಏನು ಕಡಿಮೆ ದುಡ್ಡಾ? ನನ್ ಕೈಯಲ್ಲಿ 10 ತಿನ್ನಕ್ಕಾಗತ್ತಾ ಅಂತ ಪಕ್ಕದ ಹೋಟಲ್ಗೆ ಹೋಗಿ ಚೆಕ್ ಮಾಡ್ಕೊಂಡ್ ಬಂದೆ’. ಅಲ್ಲಿದ್ದೋರೆಲ್ಲ ಸುಸ್ತು!