ವಿಷ್ಣುವರ್ಧನ್ ಜೀವನದ ಬಗ್ಗೆ ಹೆಚ್ಚಿನವರಿಗೆ ಗೊತ್ತಿರದ (ಆದರೆ ಗೊತ್ತಿರಬೇಕಾದ) 34 ವಿಷಯಗಳು

ರಜನಿಕಾಂತ್ ತಮಿಳು ಚಿತ್ರರಂಗ ಪ್ರವೇಶಿಸಕ್ಕೆ ಕಾರಣವೇ ವಿಷ್ಣು

1. ‘ವಿಷ್ಣುವರ್ಧನ್’ ಅನ್ನೋ ಹೆಸರು ಗುರು ಪುಟ್ಟಣ್ಣ ಕಣಗಾಲ್ ಕೊಟ್ಟಿದ್ದು

1973 ರಲ್ಲಿ ನಾಗರಹಾವು ಚಿತ್ರೀಕರಣದ ಸಮಯದಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆ ಈ ಹೆಸರಿಟ್ಟು ಕರಿಯಕ್ಕೆ ಶುರು ಮಾಡಿದರು! ಕ್ರಿ.ಶ. 1108ರಿಂದ 1152ರವರೆಗಿದ್ದ ಹೊಯ್ಸಳ ಮಹಾರಾಜನ ನೆನಪಿನಲ್ಲಿ ಇಟ್ಟಿದ್ದು.

vishnu1-supergoodmovies_com.bmp.jpgsupergoodmovies

2. ಚಿಕ್ಕಂದಿನ ಹೆಸರು ‘ಸಂಪತ್ ಕುಮಾರ್’

vishnu2-colorlibrary_bp.bmp.jpgcolorlibrary

3. 1972 - 2009ರ ಅವಧಿಯಲ್ಲಿ ವರ್ಷಕ್ಕೆ ಸರಾಸರಿ 6 ಚಿತ್ರ ಮಾಡಿದ್ದಾರೆ!

vishnu3-upperstall_com.bmp.jpg

4. ಏಶಿಯಾ ಖಂಡದಲ್ಲಿ ಗಣ್ಯರ ಹೆಸರಿಟ್ಟಿರುವ ಅತ್ಯಂತ ಉದ್ದದ ರಸ್ತೆ - ಡಾ.ವಿಷ್ಣುವರ್ಧನ್ ರಸ್ತೆ.

ಬೆಂಗಳೂರಿನ ಬನಶಂಕರಿ ದೇವಸ್ಥಾನದಿಂದ ಕೆಂಗೇರಿ ವೃತ್ತದ ವರೆಗಿನ ರಸ್ತೆಯನ್ನು ಡಾ.ವಿಷ್ಣುವರ್ಧನ್ ರಸ್ತೆ ಎಂದು ಕರೆದಿದ್ದಾರೆ.

vishnu4-newindianexpress_com.bmp.jpgnewindianexpress

5. ನೆಲಮಂಗಲದಲ್ಲಿ ವಿಷ್ಣುವರ್ಧನ್ ಹೆಸರಲ್ಲಿ ಒಂದು ದೇವಸ್ಥಾನ ಇದೆ!

vishnu5-supergoodmovies_com.jpgsupergoodmovies

6. 'ಸಾಹಸ ಸಿಂಹ' ಚಿತ್ರದ ಎಲ್ಲಾ ಸ್ಟಂಟೂ ತಾವೇ ಮಾಡಿದ್ದರು

ವಿಷ್ಣುವಿಗೆ ಬ್ರೂಸ್ ಲೀ ನೋಡಕ್ಕೆ ಸಿಕ್ಕಾಪಟ್ಟೆ ಖುಷಿಯಿತ್ತು. ಆಗಿನ ಕಾಲದಲ್ಲಿ ವಿಷ್ಣು ಮತ್ತು ಕಮಲ್ ಹಾಸನ್ ಮಾತ್ರ ಬ್ರೂಸ್ ಲೀ ತರದ ಸಮರ ಕಲೆಯನ್ನ ಕಲಿತವರಾಗಿದ್ದರು.

vishnu6-youutbe.com-LWGiebgux7Q.bmp.jpgyoutube

7. ಮೊದಲ ಚಿತ್ರ 'ವಂಶವೃಕ್ಷ' ಎಸ್.ಎಲ್.ಭೈರಪ್ಪನವರ ಕಾದಂಬರಿ ಅಧಾರಿತವಾಗಿತ್ತು

ಗಿರೀಶ್ ಕಾರ್ನಾಡ್ ನಿರ್ದೇಶನದ ಚಿತ್ರ ಅದು.

vishnu7-booksrevisit_bp.jpgbooksrevisit

8. ಎರಡನೇ ಚಿತ್ರ 'ನಾಗರಹಾವು' ಬೆಂಗಳೂರಿನ 3 ಮುಖ್ಯ ಚಿತ್ರಮಂದಿರಗಳಲ್ಲಿ 100 ದಿನ ಓಡಿದ ಮೊದಲ ಚಿತ್ರ.

vishnu8-kannadastore_in.bmp.jpgkannadastore

9. ಕನ್ನಡಕ್ಕೆ ಮಳೆಯಲ್ಲಿ ರೊಮ್ಯಾಂಟಿಕ್ ಹಾಡುಗಳ್ನ ತಂದಿದ್ದೇ ವಿಷ್ಣು

ಅಂಬಿಕಾ ಮತ್ತು ಭವ್ಯ ಜೊತೆ ಮಾಡಿದ ಮಳೆ ದೃಶ್ಯದ ಹಾಡುಗಳಿಗೆ ವಿಷ್ಣು ಅವರದೇ ಸ್ಟೈಲ್ನಲ್ಲಿ ಮಿಂಚಿದ್ದರು.

youtube

10. 'ಮುತ್ತಿನ ಹಾರ' ಚಿತ್ರೀಕರಣದ ಸಮಯದಲ್ಲಿ ಪ್ಯಾರಚೂಟ್ ನಿಂದ ಹಾರುವಾಗ ಅಕಸ್ಮಾತ್ ಸಾವಿನ ದವಡೆಯಿಂದ ಪಾರಾಗಿದ್ದರು.

vishnu10-onlinekannadamovies_bp.bmp.jpgonlinekannadamovies

11. ವಿಷ್ಣು ದಾದ ನಟಿಸಿದ್ದ 220 ಚಿತ್ರಗಳಲ್ಲಿ 120 ಚಿತ್ರ ರೀಮೇಕುಗಳು

vishnu11-youtube.bmp.jpgyoutube

12. ಜನಪ್ರಿಯ ಹಿಂದಿ ಧಾರಾವಾಹಿ 'ಮಾಲ್ಗುಡಿ ಡೇಸ್'ನಲ್ಲಿ ವಿಷ್ಣುವರ್ಧನ್‌ 'ವೆಂಕಟ್ ರಾವ್' ಆಗಿ ನಟಿಸಿದ್ದರು

"ರುಪೀಸ್‌ ಫಾರ್ಟಿ-ಫೈವ್ ಎ ಮಂತ್‌" ಅನ್ನೋ ಕಂತಿನಲ್ಲಿ.

vishnu12-youtube.bmp.jpgyoutube

13. 'ಸ್ನೇಹ ಲೋಕ' ಅನ್ನೋ ಸಮಾಜ ಕಲ್ಯಾಣ ಸಂಸ್ಥೆಯನ್ನು ಶುರು ಮಾಡಿ ಬಹಳ ಚೆನ್ನಾಗಿ ನಡೆಸಿದರು

ತಮ್ಮ ಸಮ್ಮಜ ಸೇವೆಯ ಮುಖವನ್ನು ಎಂದಿಗೂ ಭರ್ಜರಿಯಾಗಿ ಹೊರಗಡೆ ತೋರಿಸುತ್ತಿರಲ್ಲಿಲ್ಲ. ಪ್ರವಾಹ ಅಥವಾ ಪ್ರಕೃತಿ ವಿಕೋಪದಿಂದ ಆದ ಸಂಕಷ್ಟ ಪರಿಹಾರಕ್ಕೆ ಶ್ರಮಪಟ್ಟು ದುಡಿದ್ದಿದ್ದರು.

vishnu13-filmysphere_com.bmp.jpgfilmysphere

ಆದರೆ ಎಂದಿಗೂ ತಮ್ಮ ಕೆಲಸದ ಬಗ್ಗೆ ಹೇಳಿಕೊಳ್ತಾ ಇರಲಿಲ್ಲ, ಬಡಾಯಿ ಕೊಚ್ಕೋತಾ ಇರಲಿಲ್ಲ...

14. ಮೈಸೂರಿನ ವಿಕ್ರಮ್ ಆಸ್ಪತ್ರೆಗೆ ಇವರೇ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರು.

ಹೃದಯದ ಸಮಸ್ಯೆಯಿಂದ ಬಳಲುವ ಹಳ್ಳಿ ಮಕ್ಕಳಿಗೆ ತಕ್ಕ ಔಷಧಿ-ಆರೈಕೆಯ ಜವಾಬ್ದಾರಿ ಹೊತ್ತು ಕೆಲಸ ಮಾಡಿದ್ದರು.

vishnu14-plus_google_com.bmp.jpgplus

15. ಹೆಂಡತಿ ಭಾರತಿ ಮತ್ತು ವಿಷ್ಣು ಮಂಡ್ಯದ ಮೇಲುಕೋಟೆ ಊರನ್ನು ದತ್ತು ತೊಗೊಂಡಿದ್ದರು

ಬೋರ್ವೆಲ್ಗಳ್ನ ತೋಡಿಸಿ ದೇವಸ್ಥಾನಕ್ಕೆ ಅಗತ್ಯವಿದ್ದ ನೀರಿನ ಪೂರೈಕೆ ಮಾಡಿದ್ದರು

vishnu15-mozes42_wp.jpgmozes42

16. ಎಸ್.ಪಿ.ಬಾಲಸುಬ್ರಮಣ್ಯಂ ಅವರ ಎಲ್ಲಾ ಹುಟ್ಟಿದ ಹಬ್ಬಕ್ಕೂ ಹಾಜರಿರುತ್ತಿದ್ದರು.

ಒಂದೂ ಮಿಸ್ ಮಾಡಿಲ್ಲವಂತೆ. ಹಾಗೆ ವಿಷ್ಣು ತಮ್ಮ ಚಿತ್ರದಲ್ಲಿ ಕನಿಷ್ಠ ಒಂದಾದರೂ ಎಸ್.ಪಿ.ಬಾಲಸುಬ್ರಮಣ್ಯಂ ಹಾಡು ಇರುವಂತೆ ನೋಡಿಕೊಳ್ಳುತ್ತಿದ್ದರಂತೆ. ಎಸ್.ಪಿ.ಬಿ ಮತ್ತು ವಿಷ್ಣು ತುಂಬಾ ವಿಶ್ವಾಸದಿಂದಿದ್ದರು.

vishnu16-shrutifortwayne_com.bmp.jpgshrutifortwayne

17. ವಿಷ್ಣು-ದ್ವಾರಕೀಶ್ ನಟಿಸಿದ 'ಸಿಂಗಾಪೂರಿನಲ್ಲಿ ರಾಜಾ ಕುಳ್ಳ' ಭಾರತದ ಹೊರಗೆ ಚಿತ್ರಿಸಿದ ಕನ್ನಡದ ಮೊದಲ ಚಿತ್ರ

vishnu17-youtube.bmp.jpgyoutube

18. 'ಆಪ್ತಮಿತ್ರ' ಚಿತ್ರದಲ್ಲಿ ನಟಿಸಿ ದ್ವಾರಕೀಶ್ನನ್ನು ಸಾಲದ ಬಾಧೆಯಿಂದ ಹೊರತಂದಿದ್ದರು.

vishnu18-youtube.bmp.jpgyoutube

19. ವಿಷ್ಣು -ಸುಹಾಸಿನಿಯ ಜೋಡಿ ದಕ್ಷಿಣ ಭಾರತದ ಚಿತ್ರರಂಗದ ಅತ್ಯುತ್ತಮ ಜೋಡಿಗಳಲ್ಲಿ ಒಂದು

ಬಂಧನ, ಸುಪ್ರಭಾತ ಚಿತ್ರಗಳು ಎಂದಿಗೂ ಮರೆಯಲಾಗದಂತದ್ದು. ವಿಷ್ಣುಗೋಸ್ಕರ ಸುಹಾಸಿನಿ 2009ರಲ್ಲಿ ಕನ್ನಡದಲ್ಲಿ ಚಿತ್ರದ ನಿರ್ದೇಶನ ಮಾಡ್ತೀನಿ ಅಂತ ಹೇಳಿದ್ರು!

vishnu19-filmibeat_com.bmp.jpgfilmybeat

20. ರಜನಿಕಾಂತ್ ತಮಿಳು ಚಿತ್ರರಂಗ ಪ್ರವೇಶಿಸಕ್ಕೆ ಕಾರಣವೇ ವಿಷ್ಣು

ಒಮ್ಮೆ ರಜನಿಕಾಂತ್ಗೆ ಕನ್ನಡ ಮತ್ತು ತಮಿಳು ಎರಡೂ ಚಿತ್ರಕ್ಕೂ ಕರೆ ಬಂತು. ಆಗ ವಿಷ್ಣು "ನೀನು ತಮಿಳು ಚಿತ್ರದಲ್ಲಿ ನಟಿಸಿ ದೊಡ್ದ ಸಾಧನೆ ಮಾಡು" ಅಂತ ಹೇಳಿದ್ದನ್ನ ಇನ್ನೂ ಸ್ಮರಿಸಿಕೊಳ್ಳುತ್ತಾರೆ ರಜನಿ!

vishnu20-youtube.bmp.jpgyoutube

21. ವಿಷ್ಣು ಒಳ್ಳೆಯ ಹಾಡುಗಾರ ಕೂಡ!

ಮೊದಮೊದಲು ಸಿನೆಮಾಕ್ಕೆ ಹಾಡಿದರು ಆಮೇಲೆ ಭಕ್ತಿ ಗೀತೆಗಳನ್ನು ಮಾತ್ರ ಹಾಡಿದರು. "ಜ್ಯೋತಿರೂಪ ಆಯಪ್ಪ" ವಿಷ್ಣು ಹಾಡಿದ ಮೊದಲ ದೇವರನಾಮ.

vishnu21-youtube.bmp.jpgyoutube

22. ವಿಷ್ಣು ಹೆಂಗಸರನ್ನು ನಿಂದನೆ ಮಾಡುವ ಅಥವಾ ಹೀಯಾಳಿಸುವ ಯಾವ ಪಾತ್ರವನ್ನೂ ಮಾಡಿಲ್ಲ.

ಫಣಿ ರಾಮಚಂದ್ರ ನಿರ್ದೇಶಿಸಿದ 'ದರಿದ್ರ ಲಕ್ಷ್ಮಿಯರು' ಧಾರವಾಹಿ ತೆರೆ ಮೇಲೆ ಬಂದಾಗ ವಿಷ್ಣುಗೆ ಬಹಳ ಕೋಪ ಬಂದು ಟೈಟಲ್ ಬದಲಾಯಿಸಬೇಕು ಅಂತ ತಾಕೀತು ಮಾಡಿದ್ದರಂತೆ!

vishnu22-indya101_com.bmp.jpg

23. ನಟಿ ಭಾರತಿ ಜೊತೆ ಮದುವೆ ಆಗೋದು ಅವರ ಅಪ್ಪ ಅಮ್ಮನಿಗೆ ಒಪ್ಪಿಗೆ ಇರಲಿಲ್ಲ.

ಆದರೂ ಫೆಬ್ರವರಿ 17, 1975ನೇ ತಾರೀಕು ನಡೀತು. ದಂಪತಿಗಳು ಕೀರ್ತಿ ಮತ್ತು ಚಂದನ ಅನ್ನೋ ಇಬ್ಬರು ಮಕ್ಕಳ್ನ ದತ್ತು ತೊಗೊಂಡರು.

vishnu23.bmp.jpg

24. ವಿಷ್ಣು ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ಹುಟ್ಟಿ, ಬೆಳೆದು, ಗೋಪಲಸ್ವಾಮಿ ಶಿಶುವಿಹಾರದಲ್ಲಿ ಓದಿದ್ದರು.

ಅವರ ಮನೆತನದವರು ಮಂಡ್ಯದ ಹಳ್ಳಗೆರೆ ಊರಿನವರು.

vishnu24-filmibeat_com.bmp.jpgfilmybeat

25. ತಂದೆ ಹೆಚ್.ಎಲ್.ನಾರಾಯಣರಾವ್ ಮನೆತುಂಬ ಸಂಗೀತ ವಾದ್ಯಗಳ್ನ ಇಟ್ಕೊಂಡಿದ್ರು

ತಂದೆ ಕಲಾವಿದರು, ಸಂಗೀತ ನಿರ್ದೇಶಕರು ಮತ್ತು ಸಂಭಾಷಣೆಕಾರರು ಆಗಿದ್ದರು. ತಾಯಿ ಹೆಸರು ಕಾಮಾಕ್ಷಮ್ಮ.

vishnu25-lifeculturalforum_weebly_com.bmp.jpglifeculturalforum

26. ಫಿಲಂಫೇರ್ ಅತ್ಯುತ್ತಮ ನಟ ಪ್ರಶಸ್ತಿ ವಿಷ್ಣುವರ್ಧನ್ಗೆ 7 ಸಲ ಸಿಕ್ಕಿದೆ.

ಕರ್ನಾಟಕದ ಸಿನೆಮಾ ರಂಗದಲ್ಲಿ ಜೀವನದ ಸಾಧನೆಗೆ ಕೊಡಉವ ಪ್ರಶಸ್ತಿಯನ್ನು ಡಾ.ವಿಷ್ಣುವರ್ಧನ್ ಪ್ರಶಸ್ತಿ ಅಂತ ಹೆಸರಿಡಲಾಗಿದೆ.

vishnu26-indya101_com.bmp.jpg

27. ಕರ್ನಾಟಕ ರಾಜ್ಯ ಕೊಡುವ ಅತ್ಯುತ್ತಮ ನಟ ಪ್ರಶಸ್ತಿ ವಿಷ್ಣುಗೆ 8 ಸಲ ಸಿಕ್ಕಿದೆ.

vishnu27-youtube.bmp.jpgyoutube

28. ವಿಷ್ಣು "ಡಾಕ್ಟರ್ ವಿಷ್ಣುವರ್ಧನ್" ಆಗಿದ್ದಕ್ಕೆ ಕಾರಣ 2005ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದವರು ಕೊಟ್ಟ ಡಾಕ್ಟರೇಟ್

vishnu28-wikipedia.jpgwikipedia

29. ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ವಿಷ್ಣು ನಟಿಸಿದ್ದಾರೆ. ಹಿಂದಿಯಲ್ಲೂ 5 ಫಿಲಂ ಮಾಡಿದ್ದಾರೆ.

vishnu29-filmysphere_com.jpgfilmysphere

30. ವಿಷ್ಣು ಬನ್ನಂಜೆ ಗೋವಿಂದಾಚಾರ್ಯರ ಶಿಷ್ಯರಾಗಿದ್ದರು.

ಸಂಖ್ಯಾ ಶಾಸ್ತ್ರ ನಂಬುತ್ತಿದ್ದ ಇವರು ತಮ್ಮ ಕಾರಿನ ನಂಬರಾಗಿ ಮತ್ತು ಮೊಬೈಲ್ನ ಕೊನೆಯ ಸಂಖ್ಯೆಯಾಗಿ "321" ಬಳಸುತ್ತಿದ್ದರು.

vishnu30-youtube.jpgyoutube

31. ಡಾ.ರಾಜ್ನ ಬಹಳ ಗೌರವಿಸುತ್ತಿದ್ದರು

ಹಿರಿಯರು ಅಂತ ಹಲವು ಬಾರಿ ಕಾಲು ಮುಟ್ಟಿ ನಮಸ್ಕಾರ ಮಾಡಿರುವುದೂ ಉಂಟು.

vishnu31-chiloka_com.jpgchiloka

32. ಮುಖ್ಯಮಂತ್ರಿ ಗುಂಡೂರಾವ್ ಮತ್ತು ಜೀವರಾಜ್ ಆಳ್ವ ವಿಷ್ಣೂನ ರಾಜಕೀಯಕ್ಕೆ ಬರಬೇಕು ಅಂತ ಬಹಳ ಒತ್ತಾಯಿಸಿದ್ದರು. ಆದರೆ ಒಪ್ಪಲಿಲ್ಲ.

vishnu32-karnataka_com.jpg

33. ಡಿಸೆಂಬರ್ 30, 2009, ಸಾಹಸ ಸಿಂಹ ವಿಷ್ಣುವರ್ಧನ್ ಹೃದಯಾಘಾತದಿಂದ ಕೊನೆಯುಸಿರೆಳೆದರು.

ತಮ್ಮ ಕಡೆಯ ಕ್ಷಣಗಳ್ನ ಕಳೆದದ್ದು ಮೈಸೂರಿನ ಕಿಂಗ್ಸ್ ಕೋರ್ಟ್ ಹೋಟೆಲ್ನಲ್ಲಿ.

vishnu33-mangalorean_com.jpgmangalorean

34. ವಿಷ್ಣುವರ್ಧನ್ ಸತ್ತಾಗ ಅಂಬರೀಶ್ ಮುಂದೆ ನಿಂತು ಕೊನೆಯ ಪ್ರಯಾಣ ಶಾಂತಿಯುತವಾಗಿ ನಡೆಯುವಂತೆ ಮಾಡಿದ್ದರು.

ಭಾರತೀಯ ಚಿತ್ರರಂಗದ ಮುಖ್ಯ ವ್ಯಕ್ತಿಗಳೆಲ್ಲ ಬಂದಿದ್ದರು. ಎಲ್ಲರಿಗೂ ವಿಷ್ಣು ಮರಣ ದೊಡ್ಡ ಆಘಾತವನ್ನೇ ಉಂಟುಮಾಡಿತ್ತು...

vishnu34-daijiworld.jpgdaijiworld

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ಅವಳು ನಿನ್ನವಳೇ ಆಗಿದ್ದರೆ ಈಗಾಗಲೇ ಈ 23 ಗುರುತುಗಳಲ್ಲಿ ಕೆಲವಾದರೂ‌ ಕಂಡಿರಬೇಕು

ಕಂಡಿದ್ದರೆ ನಿನ್ನ ಜೀವನಸಂಗಾತಿ ಅವಳೇ

ಜೀವನದಲ್ಲಿ ಇಂತ ಅದ್ಭುತ ನಡಿಯೋದು ಒಂದೇ ಒಂದು ಸತಿ. ನಿಮ್ಮ ಜೀವನಕ್ಕೆ ಬೆಳಕ್ ತರ ಬಂದು, ನಿಮ್ಮ ಸುಖ ದುಃಖದಲ್ಲೆಲ್ಲ ಜೊತೆಗಿದ್ದು, ಇವಳೇ ನಿಮ್ಮ ಸಂಗಾತಿ ಇರ್ಬೋದೆನೋ ಅಂತ ಅನ್ನಿಸ್ತಿದ್ರೆ, ಅವ್ಳಲ್ಲಿ ಈ ಕೆಳ್ಗಿರೊ ಗುಣಗಳಿದ್ರೆ ಡೌಟೇ ಬೇಡ ಅವ್ಳು ನಿಮ್ ಹುಡ್ಗಿ...

1. ಅವಳು ನಿಮ್ಮ್ ಜೊತೆ ಇದ್ದಾಗ ನಿಮಗೆ ಏನೋ ಒಂದು ಪ್ರೇರಣೆ, ನಿನ್ನೆಗಿಂತ ನನ್ನ ಜೀವನ ಇನ್ನು ಚೆನಾಗ್ ಆಗ್ಬೇಕು, ಕಷ್ಟ ಪಟ್ಟು ಜೀವನದಲ್ಲಿ ಇನ್ನು ಮೇಲೇರಬೇಕು ಅಂತ ಅನ್ನಿಸತ್ತೆ.

2. ಏಯ್ ಗಟ್ಟಿ ಗಂಡಸು ಮಾರ್ರೆ ನಾನು, ಯಾವ್ ಸೆಂಟಿಮೆಂಟು ನನ್ನತ್ರ ನಡಿಯಲ್ಲ, ಕಲ್ಲು ಬಂಡೆ ಥರ ನಾನು ಅಂತಿದ್ದ ನಿಮ್ಮನ್ನ, ಈ ಹುಡುಗಿ ಹೋಗ್ತಾಹೋಗ್ತಾ ಕರ್ಗೋಗೊ ಹಾಗೆ ಮಾಡ್ಬಿಡ್ತಾಳೆ. ಅವ್ಳು ನಿಮ್ಮಲ್ಲಿ ಪ್ರೀತಿ, ವಾತ್ಸಲ್ಯ, ಸಂತೋಷ ಒಂತರ ಎಲ್ಲ ಭಾವನೆ ನಿಮ್ಮಲ್ಲಿ ಶುರು ಆಗೋ ಹಾಗೆ ಮಾಡಿರ್ತಾಳೆ. ಅವ್ಳಿಗೆ ನಿಮ್ ಕಣ್ಣಲ್ಲೂ ನೀರ್ ಹಾಕ್ಸೋ ತಾಕತ್ತಿರತ್ತೆ... ಇಂತ ಭಾವನೆಗಳು ನಿಮ್ಗೆ ಮುಂಚೆ ಅನುಭವಕ್ಕೆ ಬಂದಿರಲ್ಲ.

3. ಇದೊಂತರ ವಿಚಿತ್ರ. ಅವ್ಳ ಖುಷಿ ನಿಮಗೆ ಖುಷಿ ಕೊಡತ್ತೆ. ಅವಳ ಒಂದು ನಗು ಸಾಕು ನಿಮಗೆ ಸಿಕ್ಕಾಪಟ್ಟೆ ಖುಷಿಯಾಗಿರಕ್ಕೆ, ಅವ್ಳ ನಗು ಕಾರಣ ನಿಮ್ಗೆ ಬೇಕಿರಲ್ಲ, ಅವ್ಳ್ ನಕ್ರೆ ಸಾಕು.

4. ನಿಮ್ಮ ಎಲ್ಲ ಯೋಚನೆ, ನಿಮ್ಮ ಟೆನ್ಷನ್ನು ಎಲ್ಲ ದೂರ ಆಗಕ್ಕೆ ಅವಳ ಒಂದೇ ಒಂದು ನಗು ಸಾಕು. ಆ ಒಂದ್ ಕ್ಷಣ ಏನೋ ಒಂತರ ನೆಮ್ಮದಿ ಸಿಗೊಹಾಗ್ ಮಾಡತ್ತೆ.

ಮೂಲ

5. ಅವಳ ನಗು ನಿಮಗೆ ಖುಷಿ ತರತ್ತೆ ಅಂತ ಯಾವಾಗ್ಲೂ ಅವ್ಳು ನಿಮ್ಮತ್ರ ನಗ್ತನೇ ಇರ್ಬೇಕಿಲ್ಲ... ಅವ್ಳ್ ಜೊತೆ ಟೈಮ್ ಸ್ಪೆಂಡ್ ಮಾಡೊ ಭಾಗ್ಯ ನಿಮ್ಗೆ ಸಿಕ್ಕಿದ್ರೆ ಸಾಕಾಗಿರತ್ತೆ. ಅವ್ಳ್ ಜೊತೆ ಇರೋ ಅಷ್ಟೂ ಹೊತ್ತು ನಿಮ್ಗೆ ಮಧುರವಾದ ಕ್ಷಣ ಅನ್ನಿಸ್ತಿರತ್ತೆ.

6. ಎರಡು ದೇಹ ಒಂದೇ ಜೀವ ನಿಮ್ಮದು ಅನ್ನಿಸತ್ತೆ.

7. ಅವಳ ಎಲ್ಲ ಭಾವನೆ ನಿಮಗೆ ಆಕರ್ಷಕವಾಗಿರತ್ತೆ, ಅವಳ ಬಗ್ಗೆ ಪೂರ್ತಿ ತಿಳ್ಕೊಬೇಕು ಅಂತ ಅನ್ನಿಸತ್ತೆ ನಿಮಗೆ... ಅವ್ಳಲ್ಲಿರೊ ಒಳ್ಳೇದು, ಕೆಟ್ಟದ್ದು ಮತ್ತೆ ಸುಮಾರಾಗಿರೊ ವಿಚಾರ್ವೆಲ್ಲ ನಿಮ್ಗೆ ಓಕೆ ಆಗೋಗಿರತ್ತೆ... ಅವ್ಳನ್ನ ನೀವು ಆರಾಧಿಸಕ್ಕೆ ಶುರು ಮಾದ್ಬಿಟ್ಟಿರ್ತೀರ.

8. ಅವಳು ನಿಮ್ಮ ಕಡೆ ನಡ್ಕೊಂಡು ಬರ್ತಿದ್ರೆ ನಿಮ್ ಕಣ್ಣಿಗೆ ಬೇರೇನೂ ಕಾಣಲ್ಲ... ಎಲ್ಲ ಮಂಜ್ ಮಂಜು ಆಗೋಗತ್ತೆ... ಬರಿ ಅವಳೊಬ್ಬಳೇ... ನಿಮ್ಮ ಟೆನ್ಷನ್ನು, ನಿಮ್ಮ ಕೆಲಸಗಳೆಲ್ಲ ನೆನಪಾಗದೇ ಇಲ್ಲ, ಇಡೀ ಜೀವನ ಹೀಗೆ ಅವ್ಳನ್ನ ನೋಡ್ಕೊಂಡು ನೆಮ್ಮದಿಯಾಗಿದ್ಬಿಡ್ಬೇಕು ಅನ್ನಿಸತ್ತೆ.

ಮೂಲ

9. ಇವತ್ತಿನ ತಂಕ ಯಾರ್ ಹತ್ರನೂ ಹೇಳಿರದ ಗುಟ್ಟನ್ನ ಇವಳ ಹತ್ರ ಹೇಳ್ಕೊಬೇಕು ಅನ್ನಿಸತ್ತೆ. ನಿಮ್ಮ ಭಾವನೆಗಳ್ನೆಲ್ಲ ಅವ್ಳ್ ಹತ್ರ ಹಂಚ್ಕೊಬೇಕು ಅನ್ನಿಸತ್ತೆ. ನಿಮ್ಮೆಲ್ಲಾ ಗುಟ್ಟುಗಳ್ನ ಅವ್ಳು ಕಾಪಾಡ್ತಾಳೆ.

10. ನಿಮಗೆ ಗೊತ್ತಿಲ್ಲದ ಹಾಗೆ ಅವಳು ನಿಮ್ಮ ಪ್ರಪಂಚ ಆಗ್ಬಿಟ್ಟಿರ್ತಾಳೆ. ನೀವು ನಿಮ್ಮ ಮುಂದಿನ ಜೀವನದ ಬಗ್ಗೆ ಮಾಡೋ ಪ್ರತಿಯೊಂದು ಯೋಚನೇಲು ಅವಳಿಗೆ ಜಾಗ ಕೊಟ್ಟಿರ್ತೀರ.

11. ಕನಸಲೂ ನೀನೆ ಮನಸಲೂ ನೀನೆ... ದಿನಾ ಕನಸಲ್ಲಿ ಅವಳೇ ಬರ್ತಾಳೆ. ನಿಮಗೆ ಅವಳ್ ಬಿಟ್ಟು ಬೇರೇನೂ ಬೇಕಿರಲ್ಲ.

12. ಯಾವತ್ತೂ ಅನುಭವಿಸದ ಅನ್ಯೋನ್ಯತೆ ನಿಮಗೆ ಅವ್ಳ ಬಗ್ಗೆ. ಅಪ್ಪಿ ತಪ್ಪಿ ಒಂದ್ಸತಿ ಅವ್ಳನ್ನ ಮುಟ್ಟಿದ್ರೆ ಮೈ ಜುಮ್ ಅನ್ನತ್ತೆ, ತಲೆ ನಿಲ್ಲದೇ ಇಲ್ಲ. ಅವ್ಳನ್ನ ನಿಮ್ಮ ತೋಳಲ್ಲಿ ತಬ್ಬಿ ಹಿಡ್ಕೊಬೇಕು ಅನ್ನಿಸತ್ತೆ, ಹೀಗೆ ಜೀವನ ಪೂರ್ತಿ ಒಟ್ಟಿಗೆ ಇರ್ಬೇಕು ಅನ್ನಿಸ್ತಿರತ್ತೆ.

ಮೂಲ

13. ಬರಿ ಅದೇ ಅಂತಲ್ಲ, ಜಾಸ್ತಿ ಸುತ್ತಾಡ್ಬೇಕು ಅನ್ನೊಹಾಗೆ ಮಾಡ್ತಾಳೆ, ಬೇರೆ ಬೇರೆ ಹೋಟೆಲ್ಲಿಗೆ ಹೋಗಿ ಹೊಸ-ಹೊಸ ತಿಂಡಿ ಊಟ ಟ್ರೈ ಮಾಡ್ಬೇಕು ಅನ್ನಿಸೋ ಹಾಗೆ ಮಾಡ್ತಾಳೆ. ಪ್ರತಿ ಕ್ಷಣ ಜಗತ್ತು ಹೊಸದಾಗಿ ಕಾಣೋಹಾಗೆ ಮಾಡ್ತಾಳೆ. ನಿಮ್ಮ ಜೀವನ  ಇನ್ನು ಕುತೂಹಲಕಾರಿ ಆಗತ್ತೆ.

14. ನಿಮ್ಮ ಸ್ನೇಹಿತರಿಗೆ, ಮನೆಯವರಿಗೆಲ್ಲ ಅವಳನ್ನ ಪರಿಚಯ ಮಾಡ್ಸ್ ಬೇಕು ಅನ್ನಿಸತ್ತೆ. ಅವಳೆಷ್ಟು ಒಳ್ಳೇವ್ಳು ಅಂತ ನಿಮ್ಮ ಮನೆಯವರಿಗೆ ಖಂಡಿತ ಗೊತ್ತಾಗತ್ತೆ ಅಂತ ನಿಮಗನ್ನಿಸತ್ತೆ... ಅವ್ಳ ಗುಣ ಎಲ್ಲಾರ್ಗೂ ಹಿಡ್ಸೋ ಅಂತದ್ದು ಅಂತ ನಿಮ್ಗೆ ಎಷ್ಟರಮಟ್ಟಿಗೆ ಅನ್ನಿಸತ್ತೆ ಅಂದ್ರೆ ಕೆಲವೊಮ್ಮೆ ಇವಳನ್ನ ನನಗಿಂತ ಜಾಸ್ತಿ ನನ್ನ ಸ್ನೇಹಿತರೆ ಇಷ್ಟ ಪಡ್ತಿದಾರಲ್ಲಪ್ಪ ಅಂತ ಅನ್ನಿಸಿಬಿಡತ್ತೆ.

15. ನಿಮ್ಮ ಬಗ್ಗೆ ತುಂಬ ಕಾಳಜಿ ಮತ್ತೆ ಪ್ರೀತಿ ತೋರುಸ್ತಾಳೆ ಅವಳು, ಹೇಗೆ ಅಂತ ಹೇಳಕ್ಕಾಗಲ್ಲ. ದಿನ ನೀರ್ ಕುಡಿ ಅಂತ ಹೇಳೋದ್ರಿಂದ ನಿಮ್ಮ ಹುಟ್ಟು ಹಬ್ಬಕ್ಕೆ ಅದ್ಭುತವಾಗಿ ಒಂದು ಸುರ್ಪ್ರೈಸ್ ರೆಡಿ ಮಾಡೊತನ್ಕ ಎಲ್ಲ ಮಾಡಿರ್ತಾಳೆ... ನಿಮ್ಮನ್ನ ಯಾವಾಗ್ಲೂ ಖುಷಿಯಾಗಿ ನೋಡ್ಬೇಕು ಅನ್ನೋದು ಅವಳ ಆಸೆ ಆಗಿರತ್ತೆ.

16. ಅವ್ಳಿಗೆ ನಿಮ್ಮ ನಿಜವಾದ ಮುಖ ನೀವ್ ತೋರಿಸ್ತೀರ. ನಿಮಗೆ ಮೆಚ್ಚಿಸಕ್ಕೆ ನಾಟಕ ಆಡ್ಬೇಕು ಅಂತ ಅನ್ಸಲ್ಲ. ನೀವಾಗಿ ಅವಳೊಂದಿಗೆ ಆರಾಮಾಗಿ ಇರಬಹುದು. ನಿಮ್ಮ ಎಲ್ಲ ತುಂಟತನ ಮತ್ತೆ ತರ್ಲೆಗಳು ಅವ್ಳು ನಿಮ್ಮನ್ನ ಹೆಚ್ಚೆಚ್ಚು ಪ್ರೀತ್ಸೋ ಹಾಗೆ ಮಾಡತ್ತೆ. ಅವಳ ಜೊತೆ ನಿಮಗೆ ಯಾವ್ದೇ ಹಿಂಜರಿಕೆ ಇರಲ್ಲ.

ಮೂಲ

17. ಅವಳು ಸ್ವಂತಂತ್ರವಾಗಿ ತನ್ನ ಕೆಲಸ ತಾನು ಮಾಡ್ಕೊಂಡು ಇರೋಂತ ಹುಡುಗಿ ಆಗಿದ್ರು ಯಾವಾಗಾದ್ರೂ ಸಹಾಯ ಬೇಕು ಅನ್ಸಿದ್ರೆ, ನಿಮ್ಮನ್ನ ಕೇಳ್ತಾಳೆ. ನೀವು ಇಲ್ಲ ಅನ್ನಲ್ಲ ಅಂತ ಅವ್ಳಿಗೆ ಚೆನ್ನಾಗಿ ಗೊತ್ತಿರತ್ತೆ. ಯಾವತ್ತೂ ನಿಮಗೆ ಮೋಸ ಮಾಡಬೇಕು ಅನ್ನೋ ಯೋಚ್ನೆ ಇರಲ್ಲ.

18. ನಿಮಗೆ ಚೆನ್ನಾಗಿ ಗೊತ್ತಿರತ್ತೆ ಇವ್ಳು ಯಾವಾಗ್ಲೂ ಎಂತ ಸಮಯದಲ್ಲೂ ಜೊತೇಗೆ ಇರ್ತಾಳೆ ಅಂತ. ಕೆಲವೊಮ್ಮೆ ನಿಮಗೆ ಏನು ತೋಚದೇ, ಇನ್ನೇನು ದಾರಿ ಇಲ್ಲ ಅಂದಾಗ ಕೂಡ, ಇವಳು ನಿಮ್ಮನ್ನ ಬಿಡದೇ ಬೆನ್ನೆಲುಬಾಗಿ ನಿಲ್ತಾಳೆ ಅನ್ನಿಸತ್ತೆ.

19. ಯಾವುದೇ ಅನುಮಾನ ಇಲ್ಲದೆ ಕಣ್ಣು ಮುಚ್ಚಿಕೊಂಡು ಎಲ್ಲ ಸಮಯದಲ್ಲೂ ನಂಬಬಹುದು. ಅವಳು ಎಲ್ಲಿ, ಯಾರ್ ಜೊತೆ, ಯಾವ ಸಮಯದಲ್ಲಿ ಇದ್ದಳು, ಯಾಕೆ ಇದ್ದಳು ಅನ್ನೋದೆಲ್ಲ ನಿಮ್ಗೆ ದೊಡ್ಡ ವಿಷ್ಯ ಅನ್ಸದೇ ಇಲ್ಲ, ಅವ್ಳ ಬಗ್ಗೆ ಬಲವಾದ್ ನಂಬಿಕೆ ನಿಮ್ಗಿರತ್ತೆ. ನಿಮ್ಮ ಸಂಬಂದಾನೆ ಹಾಗೆ! ಇಬ್ಬರು ಒಬ್ಬರನ್ನ ಒಬ್ಬರು ಅಷ್ಟು ನಂಬ್ತೀರಿ, ಅಷ್ಟೇ ಗೌರವ ಕೊಡ್ತೀರಿ.

20. ಅವ್ಳು ಯಾವದಾದ್ರು ಕಾರಣಕ್ಕೆ ಬೇಜಾರಾಗಿದ್ರೆ ನಿಮಗೆ ತಡ್ಕೊಳಕ್ಕಾಗಲ್ಲ, ಯಾರಾದ್ರೂ ಬೇಜಾರ್ ಮಾಡಿದ್ರೆ ನೀವು ಅವ್ರನ್ನ ಸುಮ್ನೆ ಬಿಡಲ್ಲ. ಅವಳು ದುಃಖ ಪಡೋದನ್ನ ನಿಮಗೆ ಸಹಿಸಿಕೊಳಕ್ಕೆ ಆಗದೇ ಇಲ್ಲ.

ಮೂಲ

21. ನೀವು ನಿಮ್ಮ ಮುಂದಿನ ದಿನಗಳಿಗೆ ಅಂತ ಮಾಡಿದ ಎಲ್ಲ ಯೋಚನೆಲಿ ನಿಮಗೆ ಗೊತ್ತಿಲ್ಲದ ಹಾಗೆ ಅವಳನ್ನು ಸೇರಿಸಿಕೊಂಡಿರ್ತೀರ. ನೀವು ಸುತ್ತಾಡಬೇಕು ಅನ್ಕೊಂಡಿರೋ ಜಾಗ, ನೀವು ಮಾಡ್ಬೇಕು ಅನ್ಕೊಂಡಿರೋ ಸಾಹಸ, ಹೀಗೇ ಎಲ್ಲದ್ರಲ್ಲೂ ಅವ್ಳು ಇದ್ದೇ ಇರ್ತಾಳೆ...

22. ನಿಮಗೆ ಸರ್ವಸ್ವಾನು ಅವಳೇ ಆಗಿರ್ತಾಳೆ. ನೀವು ರಾತ್ರಿ ಮಲಗುವಾಗ ತೊಗೊಳೋ ಕೊನೆ ಹೆಸರು ಅವಳದ್ದೇ, ಬೆಳಗ್ಗೆ ಎದ್ದಾಗ ಹೇಳೋ ಮೊದಲನೇ ಹೆಸರು ಅವಳದ್ದೇ. ನಿಮ್ಮೆಲ್ಲ ತುಂಟಾಟದಲ್ಲಿ ಅವಳು ಇರ್ತಾಳೆ, ಅವಳ ಜೊತೆ ನಿಮ್ಮ ಜೀವನ ಪೂರ್ತಿ ಕಳೀಬೇಕು ಅಂತ ಅನ್ನಿಸತ್ತೆ. ಹೌದು ಅವಳೇ ನಿಮ್ಮ ಪ್ರೇಯಸಿ, ಅವಳೇ ನಿಮ್ಮ ನಿಜವಾದ ಸಂಗಾತಿ.

23. ನಿಮ್ಮ ಬದುಕು ಸಾರ್ಥಕ ಅಂತ ಅನ್ನಿಸೋದು, ಬದುಕಿಗೆ ಒಂದು ಅರ್ಥ ಅಂತ ಸಿಗೋದು, ಅವಳು ನಿಮ್ಮ ಜೊತೆ ಇದ್ದಾಗ ಮಾತ್ರ.

ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: