ಅರ್ಥವಿಲ್ಲದ ಪೈಪೋಟಿಯ ಪ್ರಪಂಚದಲ್ಲಿ ಯಶ್ ಎಷ್ಟು ಎತ್ತರದಲ್ಲಿದ್ದಾರೆ ಅಂತ ತೋರಿಸುವ 15 ಸನ್ನಿವೇಶಗಳು

ಅದಕ್ಕೇ ಅಲ್ಲವೇ ‘ಮಾಸ್ಟರ್ಪೀಸ್’ ಅನ್ನೋದು?

ಯಶ್

ಇತ್ತೀಚಿನ ದಿನದಲ್ಲಿ ಎಲ್ಲಾ ಕಾರ್ಯರಂಗಗಳಲ್ಲೂ ಪೈಪೋಟಿ ಇದ್ದೇ ಇದೆ. ನಮ್ಮ ಸ್ಯಾಂಡಲ್ವುಡ್ ಇದಕ್ಕೇನು ಕಡಿಮೆ ಇಲ್ಲ.

ಕನ್ನಡ ನಟ-ನಟಿಯರ ನಡುವೆ ಪೈಪೋಟಿ ಎಲ್ಲರಿಗೂ ಗೊತ್ತಿರುವ ವಿಷಯ.

ಹೀಗಿರುವಾಗ ರಾಕಿಂಗ್ ಸ್ಟಾರ್ ಯಶ್ ಸ್ವಲ್ಪ ಭಿನ್ನವಾಗಿ ನಡ್ಕೋತಾರೆ ಅಂದ್ರೆ ತಪ್ಪಾಗಲಾರದು.

yash-inside.jpgfacebook

ತಮಗೆ ಮತ್ತು ತಮ್ಮ ಫಿಲಂಗಳಿಗೆ ಮಾತ್ರ ಪ್ರಚಾರ ಕೊಡದೆ ಕನ್ನಡದ ಇತರ ನಟ-ನಟಿಯರಿಗೆ, ಅವರ ಫಿಲಂಗಳಿಗೂ ಕೂಡ ಪ್ರಚಾರ ಕೊಡುವ ದೊಡ್ಡ ಮನಸ್ಸು ಯಶ್ ಅವರದು. ಈ ಕೆಳಗಿನ ಸಂದರ್ಭಗಳಲ್ಲಿ ಯಶ್ ಹೀಗೆ ಇಡೀ ಕನ್ನಡ ಚಿತ್ರರಂಗವನ್ನು ಮೆರೆಸಿದ್ದಾರೆ:

1. ಶಂಕರ್ನಾಗ್ ಅವರ ಪಕ್ಕಾ ಅಭಿಮಾನಿಯಾಗಿ ಈ ಎರಡು ಫೇಸ್ಬುಕ್ ಸ್ಟೇಟಸ್ ಹಂಚಿಕೊಂಡಾಗ:

We miss u Mr Perfectionist...

Posted by Yash on Sunday, 8 November 2015

 

Badukiddu sattante baaluvavaru halavaru.... Sattamelu badukiruvavaru bari kelavaru....Tamma kelasagala mukhantara... Shankar Nag sadha jeevanta.... we miss u Shankranna...

Posted by Yash on Tuesday, 29 September 2015

2. ‘ನಾನು ಅವನಲ್ಲ ಅವಳು’ ಸಿನೆಮಾ ನೋಡಿ ಇಡೀ ತಂಡಕ್ಕೆ ಅಭಿನಂದಿಸಿದಾಗ

Watched the movie "Naanu avanalla avalu" yesterday.. must congratulate the entire team for their attempt of bringing the...

Posted by Yash on Saturday, 10 October 2015

ಈ ಚಿತ್ರದಿಂದ ದೇಶದ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ ಎಂದು ಸಂತೋಷ ಪಟ್ಟಾಗ:

27 years aadmele National Best Actor Award Kannada movie ge bandide, that too competing with the likes of Aamir Khan &...

Posted by Yash on Saturday, 26 September 2015

3. ಬೆಂಗಳೂರಲ್ಲಿ ಎಲ್ಲಾ ಮುಖ್ಯವಾದ ಸಿನೆಮಾ ಥಿಯೇಟರ್ಗಳಲ್ಲಿ ಕನ್ನಡ ಸಿನೆಮಾಗಳೇ ಒಡ್ತಿರೋದು ಕಂಡು ಹೀಗೆ ಖುಷಿ ಪಟ್ಟಾಗ:

Shubhavagu taitamooo..... :-)

Posted by Yash on Saturday, 26 September 2015

4. ಕೆಂಡಸಂಪಿಗೆ ಫಿಲಂನ ಹೊಗಳಿ ನೋಡಕ್ಕೆ ಕಾಯ್ತಿದೀನಿ ಅಂತ ಬಹಿರಂಗವಾಗಿ ಹೇಳಿಕೊಂಡಾಗ:

Ace Director Suri's Kendasampige is being cherished by audience & critics alike.Yash is eagerly looking forward to watch it with cast & crew at PVR Orion on 16th at 2 PM - Team Yash

Posted by Yash on Tuesday, 15 September 2015

5. ಹುಟ್ಟುಹಬ್ಬದ ದಿನ ವಿಷ್ಣು ನೆನಪಿಸಿಕೊಂಡಾಗ:

ಸಾಹಸ ಸಿಂಹ, ಅಭಿನಯ ಭಾರ್ಗವ ವಿಷ್ಣು ದಾದಾ ಹುಟ್ಟಿದ ದಿನ ಇಂದು.. ಅವರ ನೆನಪು, ಅವರ ವ್ಯಕ್ತಿತ್ವ, ಅವರು ನಡೆದು ಬಂದ ದಾರಿ ಮತ್ತು ಅವರ ಹಿರಿಮೆ ನಮ್ಮಂತ ಕಿರಿಯರಿಗೆ ಎಂದೆಂದಿಗೂ ಸ್ಪೂರ್ತಿದಾಯಕ.. Happy Birthday Vishnu Dada

Posted by Yash on Friday, 18 September 2015

6. ಶಿವರಾಜ್ಕುಮಾರ್ ಮಾಡಿರುವ 'ವಜ್ರಕಾಯ' ನ ಹೀಗೆ ಪ್ರೋತ್ಸಾಹಿಸಿದಾಗ:

Namma preethiya darling Shivanna abhinayada Vajrakaya release agtide... theatre top kittogbeku... hange shille hodidu njoy maadi :-) good luck to the whole team of Vajrakaya :-)

Posted by Yash on Thursday, 11 June 2015

7. ಸುದೀಪ್ ನಟಿಸಿರುವ ರನ್ನ ಫಿಲಂಗೆ ಹೀಗೆ ಪ್ರಚಾರ ಕೊಟ್ಟಾಗ:

Watching " Ranna " in mysore shanthala theatre :-)

Posted by Yash on Friday, 5 June 2015

8. ರಂಗಿತರಂಗ ಟ್ರೈಲರ್ "ಮಾಸ್ಟರ್ ಪೀಸ್" ಅಂತ ಹೊಗಳಿದಾಗ (ಹೌದು, ಮಾಸ್ಟರ್ಪೀಸ್ ಅನ್ನೋದು ಹೊಸ ಯಶ್ ಫಿಲಂ ಅನ್ನೋದು ನಿಜವಾದರೂ ಇದು ದೊಡ್ಡತನಾನೇ!)

Widespread applause received by technically rich trailer of 'Rangitaranga' caught the notice of Yash who called the...

Posted by Yash on Thursday, 30 April 2015

9. ಪುನೀತ್ ಮಾಡಿರೋ 'ರಣವಿಕ್ರಮ' ಭರ್ಜರಿ ಸದ್ದು ಮಾಡಿದ್ದಕ್ಕೆ ಹೀಗೆ ಸಂತೋಷ ಪಟ್ಟಾಗ:

Yeradu santhoshada visya, Rana Vikrama Karnataka as well as hora rajyagalallu sakkath sound madta idhe yella vargadha...

Posted by Yash on Monday, 20 April 2015

10. 'ಕೃಷ್ಣಲೀಲಾ', 'ರಾಟೆ' ತರಹ ಅಪ್ಪಟ ಕನ್ನಡ ಸಿನೆಮಾಗಳಿಗೆ ತುಂಬು ಹೃದಯದಿಂದ ಹೀಗೆ ಪ್ರೋತ್ಸಾಹ ಕೊಟ್ಟಾಗ:

Yellarigu namskara... ivattu yeradu appata kannada cinemagalu release agitive.... ibbaru nirdeshakaru already tamma...

Posted by Yash on Thursday, 19 March 2015

11. ರವಿಚಂದ್ರನ್ಗೆ ಹುಟ್ಟುಹಬ್ಬದ ಶುಭಾಶಯ ಹೇಳಿದಾಗ

Cinema aradhakanige huttu habbada shubhashayagalu :-) dream on crazy star :-)

Posted by Yash on Saturday, 30 May 2015

12. ಅಂಬರೀಶ್ಗೆ ಹುಟ್ಟುಹಬ್ಬದ ಶುಭಾಶಯ ಹೇಳಿದಾಗ

Namma nadina keerthi purusha... bhalabekayya koti varusha... Happy birthday anna :-)

Posted by Yash on Friday, 29 May 2015

13. "ಒಬ್ರು ಹೀರೋ ಫ್ಯಾನ್ಸ್ ಇನ್ನೊಬ್ಬ ಹೀರೋನ ಬಯ್ಯೋದು! ಬಿಟ್ಬುಡಿ ಅವೆಲ್ಲಾ, ಎಲ್ಲಾ ಒಂದೇ ಕಣ್ರಪ್ಪಾ! ನಮ್ ಇಂಡಸ್ಟ್ರೀಗೆ ರೆಸ್ಪೆಕ್ಟ್ ಕೊಡ್ರಪ್ಪಾ" ಅಂತ ಹೇಳಿದಾಗ:

While speaking at a Inter collegiate fest Yash expressed disappointment at the increasing Fan-fights we are witnessing...

Posted by Yash on Saturday, 21 March 2015

14. ಡಾ.ರಾಜ್ನ ಹುಟ್ಟುಹಬ್ಬದ ದಿನ ಹೀಗೆ ನೆನಪಿಸಿಕೊಂಡಾಗ:

"ಆಳಾಗ ಬಲ್ಲವನೇ ಅರಸನಾಗುವನು" ಕಲೆಗೆ ಆಳಾಗಿ.... ಕಲಾಭಿಮಾನಿಗಳಿಗೆ ಅರಸನಾಗಿ ಬಾಳಿದ.... ನಮ್ಮೆಲ್ಲಾರ ಪ್ರೀತಿಯ.... Da Da Da Dr Rajkumar Jayanthiya Shubhashyagalu.

Posted by Yash on Thursday, 23 April 2015

15. ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತಾಡ್ತಾ ಇಂಥ ದೊಡ್ಡ ಮಾತು ಹೇಳಿದಾಗ:

ನಾವೆಲ್ಲ ಒಟ್ಟಾಗಿ ದುಡಿದರೆ ಮುಂದಿನ ಹಂತಕ್ಕೆ ಹೋಗಿ ತಮಿಳು, ತೆಲುಗು, ಮತ್ತು ಹಿಂದಿ ಭಾಷೆಗಳ ಮಟ್ಟಕ್ಕೆ ಖಂಡಿತ ಬೆಳೆಯಬಹುದು. ನಮ್ಮ ನಟ-ನಟಿಯರು ಕನ್ನಡೇತರ ಸಿನೆಮಾಗಳ ಕಡೆಗೆ ತಿರುಗಿದ್ದ ಕನ್ನಡಿಗರ ಮನಸ್ಸನ್ನು ಈಗಾಗಲೇ ಸಾಕಷ್ಟು ಕನ್ನಡದ ಕಡೆಗೆ ಮತ್ತೆ ತಿರುಗಿಸಿದ್ದಾರೆ. ಮುಂದಿನ ವರ್ಷಗಳಲ್ಲಿ ಚೆನ್ನಾಗಿ ದುಡಿದು ಗೋವಾ, ಮಹರಾಷ್ಟ್ರ ಮುಂತಾದ ಅಕ್ಕಪ್ಪಕ್ಕದ ರಾಜ್ಯಗಳಲ್ಲೂ ಕನ್ನಡ ಚಿತ್ರಗಳು ಮೆರೆಯುವುದನ್ನು ನೋಡಬಹುದು. ನಾನು ಫೇಸ್ಬುಕ್ ಸೇರಿಕೊಂಡಿದ್ದು ಅಮೇರಿಕದವರು ನನ್ನೊಡನೆ ಹೆಚ್ಚು ಸಂಪರ್ಕದಲ್ಲಿರಲು ಇಷ್ಟ ವ್ಯಕ್ತ ಪಡಿಸಿದ್ದರಿಂದ...

... ಈ ಮೇಲಿನ ಸನ್ನಿವೇಶಗಳು ನಿಜಕ್ಕೂ ಯಶ್ ಯಾಕೆ ನಟ-ನಟಿಯರ ನಡುವೆ ಒಬ್ಬ ‘ಮಾಸ್ಟರ್ಪೀಸ್’ ಅನ್ನೋದನ್ನ ತೋರಿಸಿವೆ!

ಹೊಸ ಚಿತ್ರಕ್ಕೆ ಶುಭ ಹಾರೈಕೆಗಳು ಯಶ್!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ಈ 10 ಚಿಕ್ಕ ಚಿಕ್ಕ ಬದಲಾವಣೆ ಮಾಡ್ಕೊಂಡ್ರೆ ನಿಮ್ಮ ಜೀವನ ದೊಡ್ಡ ರೀತೀಲಿ ಬದಲಾಗತ್ತೆ ಅನ್ನೋದ್ರಲ್ಲಿ ಸಂದೇಹಾನೆ ಇಲ್ಲ

ಒಂದೊಂದ್ಸರ್ತಿ ಊಹೂಂ ಅನ್ನೋಕ್ಕೂ ಗೊತ್ತಿರ್ಬೇಕು

ಜೀವನ ಅದರ ಎಲ್ಲ ರೂಪದಲ್ಲೂ ಕೆಲವೊಮ್ಮೆ ನಮಗೆ ಎಷ್ಟು ಮಾಡಿದ್ರೂ ಅಷ್ಟೇ ಅನ್ನೋ ಭಾವನೆ ಬರೋಹಾಗೆ ಮಾಡಬಹುದು. ಆದ್ರೆ ಜೀವನದಲ್ಲಿ ಒಂದೊಂದ್ಸರ್ತಿ ಎಷ್ಟೇ ಕಷ್ಟ ಬಂದ್ರೂ ಮನಸ್ಸಿದ್ದರೆ ಮಾರ್ಗ ಇದ್ದೇ ಇದೆ ಅನ್ನೋದು ನೆನಪಿರ್ಲಿ.

ಈ 10 ವಿಷಯದ ಬಗ್ಗೆ ಗಮನ ಕೊಟ್ರೆ ನಿಮ್ಮ ಜೀವನ ಬದಲಾಯಿಸಿಕೊಳ್ಳೋದಕ್ಕೆ ಸಹಾಯ ಆಗುತ್ತೆ. ಆದ್ರೆ ಒಂದು ನೆನಪಿರ್ಲಿ... ಇವೆಲ್ಲಾ ಝಟ್ ಪಟ್ ಅಂತ ಆಗೋ ಬದಲಾವಣೆಗಳಲ್ಲ... ಸಮಯ ಹಿಡಿದೇ ಹಿಡಿಯತ್ತೆ. ಆದ್ರೆ ಕೊನೇಲಿ ಖುಷಿಯಾಗೋದು ಖಂಡಿತಾ. 

1. ಬೆಳಗ್ಗೆ ಲೇಟಾಗಿ ಏಳೋ ಬದ್ಲು ಬೇಗ ಏಳೋ ಅಭ್ಯಾಸ ಮಾಡ್ಕೊಳಿ

ಹಲವಾರು ಸಂಶೋಧನೆ, ಅಧ್ಯಯನಗಳಿಂದ ಗೊತ್ತಾಗಿರೋದು ಏನಪ್ಪಾ ಅಂದ್ರೆ ಬೆಳಗ್ಗೆ ಬೇಗ ಎದ್ದವರು ಬೇರೆಯವರಿಗಿಂತ ಕೆಲಸ ತುಂಬಾ ಚೆನ್ನಾಗಿ ಮಾಡ್ತಾರೆ, ತುಂಬಾ ಖುಷಿಯಾಗೂ ಇರ್ತಾರೆ ಅಂತ. ದಿನದಲ್ಲಿ ಕೆಲವೇ ಗಂಟೆಗಳು ನಮಗೆ ಸಿಗೋದು, ಅದ್ರಲ್ಲಿ ನಿದ್ದೆಯಲ್ಲೇ ಹೆಚ್ಚು ಸಮಯ ಹಾಳಾದ್ರೆ ನಿಮಗೆ ಬೇರೆದಕ್ಕೆ ಇನ್ನೆಲ್ಲಿಂದ ಟೈಮ್ ಸಿಗುತ್ತೆ?

ಇನ್ನು ನಿಮ್ಮ ಆಫೀಸ್ 24 ಗಂಟೇನೂ ಕೆಲಸ ಮಾಡೊತರದ್ದಾದ್ರೆ, ಬೆಳಗ್ಗೆ ಬೇಗ ಹೋಗಿ, ಬೇಗ ವಾಪಸ್ ಬಂದ್ರೆ ನಿಮ್ಮ ಸ್ವಂತಕ್ಕೆ, ಮನೆಯವರ ಜೊತೆ ಕಳೆಯೋದಕ್ಕೆ... ಹೀಗೆ ಎಲ್ಲದಕ್ಕೂ ನಿಮಗೆ ಸಾಕಷ್ಟು ಟೈಮ್ ಸಿಗುತ್ತೆ.

ಮೂಲ

2. ಎಲ್ಲದಕ್ಕೂ ಸರಿ, ಆಯ್ತು, ಮಾಡ್ತೀನಿ ಅಂತ ಒಪ್ಕೊಳೋ ಬದ್ಲು ಆಗಾಗ ಇಲ್ಲ, ಮಾಡಕ್ಕಾಗಲ್ಲ ಅಂತ ಹೇಳೋ ಅಭ್ಯಾಸ ಬೆಳೆಸ್ಕೊಳಿ

ಎಲ್ಲ ಟೈಮಲ್ಲೂ ಸರಿ, ಆಯ್ತು , ಮಾಡ್ತೀನಿ ಅಂತ ಒಪ್ಕೋಳೋದು ಸರಿಯಲ್ಲ. ಹೀಗೆ ಒಪ್ಕೋಳೋದ್ರಿಂದ ನಿಮ್ಮ ಮಾಡ್ಬೇಕಾಗಿರೋ ಕೆಲಸದ ಪಟ್ಟಿಗೆ ಇನ್ನಷ್ಟು ಸೇರುತ್ತೆ, ಕೆಲಸದಲ್ಲಿ ಎಷ್ಟು ಮುಳುಗಿ ಹೋಗ್ತೀರಾ ಅಂದ್ರೆ ನಿಮಗೆ ಅಂತ ಸ್ವಲ್ಪ ಬಿಡುವು ಮಾಡ್ಕೊಳೋದು ತುಂಬಾ ಕಷ್ಟ ಆಗುತ್ತೆ.

ಆಗಾಗ ಸಮಯಕ್ಕೆ ತಕ್ಕಂತೆ ನೀವು ಇಲ್ಲ, ಆಗಲ್ಲ, ಅಂತ ಹೇಳೋ ರೂಢಿ ಮಾಡ್ಕೊಂಡ್ರೆ ಅನವಶ್ಯಕವಾಗಿ ನೀವು ಹೇಳಿದ್ದಕ್ಕೆಲ್ಲ ಒಪ್ಪಿಕೊಂಡು ಕೆಲಸ ಮಾಡ್ತೀರಾ ಅಂತ ಗೊತ್ತಿದ್ದೇ ನಿಮಗೆ ಕೆಲಸ ಹೇಳ್ತಾರಲ್ಲ... ಅದೆಲ್ಲಾ ನಿಲ್ಲುತ್ತೆ. ನಿಮ್ಮ ಕೆಲಸ, ಟೈಮ್ ಎಲ್ಲ ನಿಮ್ಮ ನಿಯಂತ್ರಣದಲ್ಲಿರುತ್ತೆ.

3. ಯಾವಾಗ್ಲೂ ಕೈಯ್ಯಲ್ಲಿ ಮೊಬೈಲ್ ಫೋನ್ ಹಿಡ್ಕೊಂಡು ಕೂರೋ ಬದ್ಲು ಹೊರಗೆ ಹೋಗಿ ಸುತ್ತಾಡ್ಕೊಂಡು ಬನ್ನಿ

ಈಗಿನ ಟೆಕ್ನಾಲಜಿಯಿಂದ ನಮಗೆ ತುಂಬಾನೇ ಉಪಯೋಗ ಆಗಿದೆ. ಆದ್ರೆ ಇತ್ತೀಚಿಗೆ ನಾವು ಅದ್ರಲ್ಲಿ ಎಷ್ಟು ಮುಳ್ಗಿರ್ತಿವಿ ಅಂದ್ರೆ ಅದು ಇಲ್ಲ ಅಂದ್ರೆ ನಮಗೆ ಕೈಕಾಲೇ ಓಡಲ್ಲ ಅನ್ನೋ ಹಾಗೆ ಆಡ್ತೀವಿ. ಅದ್ರಲ್ಲೂ ಈ ಸ್ಮಾರ್ಟ್ ಫೋನ್ ಬಂದ್ಮೇಲಂತೂ ನೆಟ್ವರ್ಕ್ ಸಿಕ್ಕಿಲ್ಲ, ಇಂಟರ್ನೆಟ್ ಕನೆಕ್ಟ್ ಆಗ್ತಿಲ್ಲ ಅಂದ್ರೆ ಏನೋ ಕಳ್ಕೊಂಡಿರೋವ್ರ ಹಾಗೆ ಪರದಾಡ್ತಿವಿ ( ನಮ್ಮ ಹತ್ತಿರದವರು ದೂರ ಆದಾಗ್ಲೂ ಹೀಗೆ ನಾವು ಆಡಿರಲ್ವೇನೋ). ಈ ಮೊಬೈಲ್ ಹತ್ತಿರ ಇದ್ದಷ್ಟೂ ನಾವು ಆಗಾಗ ಅದನ್ನ ನೋಡೋದು, ಅಲ್ಲೇನಾಗ್ತಿದೆ, ಇಲ್ಲೇನಾಗ್ತಿದೆ ಅಂತ ಹುಡುಕಾಡೊ ಪ್ರಯತ್ನ ಮಾಡ್ತಾ ಇರ್ತೀವಿ.

ಆಗಾಗ ಈ ಮೊಬೈಲ್ ಮನೇಲೆ ಬಿಟ್ಟು ಕನಿಷ್ಠ 10 -15 ನಿಮಿಷನಾದ್ರೂ ಪ್ರಶಾಂತವಾಗಿರೋ ಜಾಗಕ್ಕೆ ಹೋಗಿ ಸುತ್ತಾಡಿಕೊಂಡು ಬನ್ನಿ. ನೀವು ಇಲ್ಲಿವರ್ಗೂ ಯೋಚನೆ ಮಾಡಿರದ ವಿಚಾರಗಳು ನಿಮಗೆ ಹೊಳೆಯುತ್ತೆ. ಈ ವಿಷಯಗಳು ನಿಮ್ಮ ತಲೆಗೆ ಹೋದಾಗ ನೀವು ಯೋಚನೆ ಮಾಡೋ ರೀತೀನೂ ಬದ್ಲಾಗತ್ತೆ. ಇದು ನಿಮಗೆ ಒಂಥರಾ ಖುಷಿ, ಉತ್ಸಾಹ ತುಂಬುತ್ತೆ.

ಮೂಲ

4. ನಿಮ್ಮನ್ನ ನೀವು ತೆಗಳ್ಕೊಳೋ ಬದ್ಲು ಹೊಗಳ್ಕೊಳಿ

ಸ್ವಯಂ ಟೀಕೆ ಒಂದು ಒಳ್ಳೆ ಸ್ವಭಾವಾನೆ, ಯಾಕೆ ಅಂದ್ರೆ ನಿಮ್ಮನ್ನ ನೀವು ಟೀಕೆ ಮಾಡ್ಕೊಳ್ತಾ ಇದ್ರೆ ನಿಮಗೆ ಸಿಕ್ಕ ಸಣ್ಣ ಪುಟ್ಟ ಗೆಲುವಿಗೇ ಸುಮ್ಮನಿದ್ದು ವಿಶ್ರಾಂತಿ ತೊಗೊಳಕ್ಕೆ ಅದು ಬಿಡಲ್ಲ, ಯಾವಾಗ್ಲೂ ಇನ್ನೂ ಮುಂದೆ ಸಾಗೋ ಹಾಗೆ ಮಾಡತ್ತೆ.

ಆದ್ರೆ ಬರಿ ಟೀಕೆ ಮಾಡ್ತಿದ್ರೆ ಆಗಲ್ಲ, ನೀವು ನಿಮ್ಮ ಸಾಧನೆ, ಯಶಸ್ಸಿನ ಬಗ್ಗೆ ಹೆಮ್ಮೆ ಪಟ್ಕೊಳಕ್ಕೆ ಆಗಾಗ ಹೊಗಳಿಕೇನೂ ಬೇಕು. ಇಲ್ಲ ಅಂದ್ರೆ ನಿಮ್ಮ ಸಾಧನೆ ಬಗ್ಗೆ ನಿಮಗೆ ಮೆಚ್ಚುಗೆ, ಸಮಾಧಾನ ಏನೂ ಇರಲ್ಲ.

5. ರಜಾ ಅಂತ ಹೆಚ್ಚು ಮಲ್ಕೊಳೋ ಬದ್ಲು ಬೇಗ ಎದ್ದು ವ್ಯಾಯಾಮ ಮಾಡಿ

ಬಾಕಿದಿನ ಎಲ್ಲ ಬೇಗ ಎದ್ದು ಹೋಗ್ತೀವಿ, ಇವತ್ತಾದ್ರೂ ಜಾಸ್ತಿ ಮಲಗೋಣ ಅಂತ ಮಲಗೋದು ಬಿಡಿ. ಈ ರಜಾ ದಿನದ ಅದ್ರಲ್ಲೂ ವಾರಾಂತ್ಯದ 48 ಗಂಟೆ ತುಂಬಾನೇ ಮುಖ್ಯ. ಅದು ನಿಮಗೆ ಅಂತ ಇರೋ ಟೈಮ್. ಅದರ ಉಪಯೋಗ ಸರಿಯಾಗಿ ಮಾಡ್ಕೊಳಿ.

ಮಲಗಿ ಸಮಯ ಹಾಳುಮಾಡದೆ ಬೇರೆ ದಿನ ಮಾಡಕ್ಕೆ ಆಗದಿದ್ದ ವ್ಯಾಯಾಮ ಮಾಡಿ, ಬೇಗೆ ತಿಂಡಿ ಊಟ ಮುಗಿಸಿದ್ರೆ ಸಂಜೆ ಹೊತ್ತು ನಿಮ್ಮ ಮನೆಯವರ, ಸ್ನೇಹಿತರ ಜೊತೆ ಆರಾಮಾಗಿ ಇರೋದಕ್ಕೆ ಸಮಯ ಸಿಗುತ್ತೆ. ಲೇಟಾಗಿ ಇದ್ದಷ್ಟೂ ಸಮಯ ಕಮ್ಮಿ ಸಿಗುತ್ತೆ.

ಮೂಲ

6. ಕೂಲ್ ಡ್ರಿಂಕ್ಸ್ ಬದ್ಲು ನೀರು ಕುಡಿಯೋ ಅಭ್ಯಾಸ ಮಾಡ್ಕೊಳಿ

ಇತ್ತೀಚೆಗಂತೂ ಎಲ್ಲರೂ ಈ ಕೂಲ್ ಡ್ರಿಂಕ್ಸ್ ಕುಡಿಯೋದು ಹೆಚ್ಚು. ಇದ್ರಿಂದ ಸಕ್ಕರೆ ಕಾಯಿಲೆನೂ ಬರೋದು ಹೆಚ್ಚಾಗಿದೆ. ಅಷ್ಟೇ ಅಲ್ಲ ನಿಮ್ಮ ಹಲ್ಲು ಹಾಳು ಮಾಡೋದ್ರಲ್ಲೂ ಇದು ಎತ್ತಿದ ಕೈ. ಒಂದು ಅಧ್ಯಯನದ ಪ್ರಕಾರ, ಪ್ರತಿ 10 ಜನರಲ್ಲಿ ಒಬ್ರಿಗೆ  ಈ ಕೂಲ್ ಡ್ರಿಂಕ್ಸ್ ಕುಡಿಯೋದ್ರಿಂದ ಸಕ್ಕರೆ ಕಾಯಿಲೆ ಬಾರೋ ಸಾಧ್ಯತೆ ಹೆಚ್ಚಾಗ್ತಿದೆಯಂತೆ. ಅದನ್ನ ಬಿಟ್ಟು ನೀರು ಕುಡಿಯೋ ಅಭ್ಯಾಸ ಮಾಡ್ಕೊಳಿ.

ಇದ್ರಿಂದ ನಿಮ್ಮ ಹಲ್ಲು ಚೆನ್ನಾಗಿರೋದು ಮಾತ್ರ ಅಲ್ಲ, ಚರ್ಮದ ಆರೋಗ್ಯಕ್ಕೂ ಒಳ್ಳೇದು. ಈ ಕಾರಣಗಳು ನಿಮಗೆ ಕೂಲ್ ಡ್ರಿಂಕ್ಸ್ ಬಿಡೋದಕ್ಕೆ ಸರಿಯಾದದ್ದಲ್ಲ ಅನ್ನಿಸಿದ್ರೆ, ಒಂದು ಹಲ್ಲನ್ನ ಈ ಕೂಲ್ ಡ್ರಿಂಕ್ಸ್ ಒಳಗೆ ಹಾಕಿ ಒಂದು ರಾತ್ರಿ ಇಡೀ ಇಟ್ಟು ಮರುದಿನ ನೋಡಿ, ಅದರ ಗತಿ ಏನಾಗಿರುತ್ತೆ ಅಂತ ತಿಳ್ಕೊಂಡು ಆಮೇಲೆ ನೀವೇ ನಿರ್ಧಾರ ಮಾಡ್ಕೊಳಿ.

7. ಹಿಂದೆ ಆಗಿದ್ದನ್ನ ನೆನಸ್ಕೊಂಡು ಕೊರಗೋ ಬದ್ಲು ಮುಂದೆ ಏನ್ ಮಾಡ್ಬೋದು ಅಂತ ಪ್ಲಾನ್ ಮಾಡಿ

ಹಿಂದಿನ ನೆನಪುಗಳು ಎಷ್ಟೇ ನಮಗೆ ಖುಷಿ ಕೊಡುವಂತದ್ದಾಗಿದ್ರೂ ಅದ್ರಲ್ಲೇ ಮುಳಿಗಿರಬಾರ್ದು. ಅದು ಮುಗಿದು ಹೋಗಿರೋ ಕ್ಷಣ. ಇದು ಕೆಟ್ಟ ನೆನಪುಗಳಿಗೂ ಅನ್ವಯಿಸತ್ತೆ.

ನೀವು ನಿಮ್ಮ ಮುಂದಿನ ಗುರಿ ಏನು ಅಂತ ನಿರ್ಧಾರ ಮಾಡಿದ ಮೇಲೆ ನಿಮ್ಮ ಹಿಂದಿನ ನೆನಪುಗಳ ಬಗ್ಗೆ ಯೋಚ್ನೆ ಮಾಡೋದು ಕಮ್ಮಿ ಆಗುತ್ತೆ. ಎಲ್ಲಿ ವರೆಗೂ ನಾವು, ಹಿಂದೆ ಆಗಿದ್ರ ಬಗ್ಗೆ ತಲೆ ಕೆಡಿಸ್ಕೊತಿರ್ತೀವೋ , ಆಗ ನಮ್ಮ ಭವಿಷ್ಯ ಕಳೆದು ಹೋಗುತ್ತೆ. 

ಮೂಲ

8. ನನ್ನ್ ಕೈಯ್ಯಲ್ಲಿ ಏನೂ ಸಾಧಿಸಕ್ಕಾಗಲ್ಲ ಅಂತ ಕೈ ಚಲ್ಲೋ ಬದ್ಲು ಒಂದು ಕೊನೆ ಸರ್ತಿ ಪ್ರಯತ್ನ ಮಾಡಿ

ವಯಸ್ಸಾದಷ್ಟೂ ಕನಸುಗಳನ್ನ, ನಮ್ಮ ಗುರಿಗಳನ್ನ ಸಾಧಿಸಕ್ಕಾಗಲ್ಲ ಅಂತ ಕೈ ಬಿಡೋದೇ ಹೆಚ್ಚು. ಹೀಗೆ ನಮ್ಮ ಕನಸನ್ನ ಬಿಡೋ ಬದಲು ಯಾವುದಾದ್ರೂ ಸುಲಭವಾಗಿ ಸಾಧಿಸಬಹುದಾದ ಮೈಲಿಗಲ್ಲಿನ ಬಗ್ಗೆ ಯೋಚಿಸಿ. ಇಂತ ಕನಸಿನ, ಗುರಿ ಬಗ್ಗೆ ಯೋಚಿಸಿ, ಅದನ್ನ ಸಾಧಿಸಕ್ಕೆ ತುಂಬಾ ಹತ್ತಿರ ಹೋಗ್ತಿದ್ದೀವಿ ಅನ್ನಿಸದಾಗ ನಿಮಗೆ ತುಂಬಾನೇ ಖುಷಿ ಸಿಗುತ್ತೆ. ಮಕ್ಕಳು ಏನಾದ್ರು ಸಾಧನೆ ಮಾಡಿದಾಗ ಖುಷಿ ಪಡ್ತಾರಲ್ಲ ಆ ರೀತಿಯ ಖುಷಿ, ಸಮಾಧಾನ ಸಿಗುತ್ತೆ.

9. ಯಾವಾಗ್ಲೂ ಡಯೆಟ್ಟು ಅಂತ ತಲೆ ಕೆಡಿಸ್ಕೊಳೋ ಬದ್ಲು ಒಂದೊಂದ್ಸರ್ತಿ ರುಚಿಯಾಗಿರೋ ಊಟ ತಿಂಡಿ ತಿನ್ನಿ

ಪ್ರತಿಯೊಬ್ಬರ ಜೀವನದಲ್ಲೂ ಊಟ ತಿಂಡಿಗೆ ತಮ್ಮದೇ ಆದ ಪದ್ಧತಿ ಇರುತ್ತೆ. ಅದ್ರಲ್ಲೂ ನಮ್ಮ ದೇಹಕ್ಕೆ, ಆರೋಗ್ಯಕ್ಕೆ ಸರಿ ಹೊಂದೋ ಡಯಟ್ ಊಟ ತಿಂಡೀನ ಇಷ್ಟ ಇಲ್ಲ ಅಂದ್ರೂ ಬಲವಂತವಾಗಿ ತಿನ್ತಿರ್ತೀವಿ.

ಇದೆಲ್ಲ ಇದ್ದಿದ್ದೇ, ಆಗಾಗ ನಿಮಗಿಷ್ಟ ಆಗೋ ಸ್ವೀಟ್, ಐಸ್ ಕ್ರೀಮ್, ಪಿಜ್ಜಾ, ಬರ್ಗರ್ ಎಲ್ಲಾನೂ ತಿನ್ನಿ, ಆದ್ರೆ ಆಮೇಲೆ ಸರಿಯಾಗಿ ವ್ಯಾಯಾಮ ಮಾಡೋದನ್ನ ಮರೀಬೇಡಿ.

ಮೂಲ

10. ಯಾವಾಗ್ಲೂ ಕುಂಟ ನೆಪ ಕೊಡೋ ಬದ್ಲು ತಪ್ಪಾಗಿದ್ರೆ ಪ್ರಾಮಾಣಿಕವಾಗಿ ಒಪ್ಕೊಳಿ

ಪ್ರಾಮಾಣಿಕತೆ ಒಳ್ಳೇದು ಅಲ್ವ? ಕೆಲವೊಂದು ಸಲ ಅದು ನಿಮಗೆ ನೋವನ್ನೂ ಕೊಡಬಹುದು, ಆದ್ರೆ ನಿಮ್ಮಲ್ಲಿ ಬದಲಾವಣೆ ಬರ್ಬೇಕು, ನೀವು ಸುಧಾರಿಸ ಬೇಕು ಅಂದ್ರೆ ನೀವು ಪ್ರಾಮಾಣಿಕವಾಗಿರ್ಬೇಕು. ನೀವು ಪ್ರಾಮಾಣಿಕವಾಗಿರಕ್ಕೆ ಶುರು ಮಾಡಿದ್ರೆ, ನಿಮ್ಮ ಸಾಮರ್ಥ್ಯನೂ ಹೆಚ್ಚಾಗುತ್ತೆ. ಇದನ್ನ ತಿಳ್ಕೊಳೋ ಒಳ್ಳೆ ಸುಲಭ ವಿಧಾನ ಅಂದ್ರೆ ನೀವು ಪ್ರತಿಯೊಂದು ಕೆಲಸ ಮುಗಿಸಿದಾಗಲೂ ನೀವು ಮಾಡಿರೋ ಪ್ರಯತ್ನದ ಬಗ್ಗೆ ಪ್ರಶ್ನೆ ಮಾಡ್ಕೊಳಿ. ನೀವು ಯಾವುದಾದ್ರೂ ಪ್ರಾಜೆಕ್ಟ್ ಗೆ ಕೆಲಸ ಮಾಡ್ತಾ ಇದ್ರೆ, ನಿಮ್ಮ ಜೊತೇಲಿರೋ ಕೆಲಸಗಾರರಿಂದ ನಿಮ್ಮ ಸುಧಾರಣೆ ಬಗ್ಗೆ ತಿಳ್ಕೊಳಿ.

ಈ ಸಣ್ಣಪುಟ್ಟ ಬದಲಾವಣೆಗಳನ್ನ ಮಾಡ್ಕೊಂಡ್ರೆ ನಮ್ಮ ಜೀವನ ಬದಲಾಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: