ಮುಟ್ಟಾದ ಹೆಂಗಸರು ತಲೆತಲಾಂತರದಿಂದ ನಡೆಸಿಕೊಂಡು ಬಂದಿರುವ 9 ಆಚರಣೆಗಳಿಗೆ ನಿಜವಾದ ಕಾರಣಗಳು

ಅಲ್ಲಲ್ಲಿಯ ಸಂಸೃತಿಯ ಪ್ರಕಾರ ಭಾರತದಲ್ಲಿ ಹತ್ತು ಹಲವು ಪದ್ದತಿಗಳಿವೆ

ಭರತನಾಟ್ಯಂ

‘ಹಳೇದೆಲ್ಲ ಕೆಟ್ಟದು. ಹಳಬರೆಲ್ಲ ಅಯೋಗ್ಯರು. ಅವರಿಗೆ ವಿಜ್ಞಾನದ ಗಂಧವೇ ಇರಲಿಲ್ಲ. ಅವರು ಮಾಡ್ತಾ ಇದ್ದಿದ್ದೆಲ್ಲ ಮೂಢನಂಬಿಕೆ.’

ಇತ್ತೀಚೆಗೆ ಹೀಗನ್ಕೊಳೋರು ಜಾಸ್ತಿ ಆಗ್ತಿದಾರೆ. ಇಂಗ್ಲಿಷ್ ಮೀಡಿಯಾನೋರಂತೂ ಇದನ್ನ ಬಂಡವಾಳ ಮಾಡ್ಕೊಂಡಿದಾರೆ. ಆದರೆ ನಿಜಾಂಶ ಏನು? ಹೆಂಗಸರ ಮುಟ್ಟಿನ ವಿಷಯಕ್ಕೆ ಬಂದಾಗ ಈ ಅನಿಸಿಕೆ ಎಷ್ಟು ತಪ್ಪು ಅಂತ ಬಹಳ ಚೆನ್ನಾಗಿ ಗೊತ್ತಾಗುತ್ತೆ.

ಭಾರತದಲ್ಲೆಲ್ಲ ಅಲ್ಲಲ್ಲಿಯ ಸಂಸೃತಿಯ ಪ್ರಕಾರ ಮುಟ್ಟಿನ ಸುತ್ತ ಹತ್ತು ಹಲವು ಪದ್ದತಿಗಳನ್ನ ಹೆಣೆದುಕೊಂಡಿದ್ದಾರೆ. ಅದರಲ್ಲಿ ಕೆಲವನ್ನ ಕೆಳಗೆ ಕಾರಣದ ಸಮೇತ ಹಾಕಿದೀವಿ. ಇದೆಲ್ಲಾ ಮೂಡನಂಬಿಕೇನೋ ಅಲ್ಲವೋ ಅಂತ ನೀವೇ ತೀರ್ಮಾನ ಮಾಡಿ.

1. ಧಾರ್ಮಿಕ ಕೆಲಸಗಳಲ್ಲಿ ಪಾಲ್ಗೊಳ್ಳದೆ ಇರುವುದು, ದೇವಸ್ಥಾನಕ್ಕೆ ಹೋಗದೆ ಇರುವುದು

ಆಯುರ್ವೇದದ ಪ್ರಕಾರ ಮುಟ್ಟದಾಗ ಪ್ರಾಣಶಕ್ತಿ ಅಪಾನವಾಯುವಿನ ರೂಪದಲ್ಲಿ ಮೇಲಿಂದ ಕೆಳಗೆ ಭೂಮಿಗೆ ಹರಿಯತ್ತೆ. ಆದರೆ ಪೂಜೆ, ದಾನಧರ್ಮ ಮಾಡುವಾಗ ಪ್ರಾಣಶಕ್ತಿ ಪ್ರಾಣವಾಯು ರೂಪದಲ್ಲಿ ಕೆಳಗಿಂದ ಮೇಲಕ್ಕೆ ಏರುತ್ತಾ ಹೋಗುತ್ತೆ. ಅದರಿಂದ ಅವಳ ಅಪಾನವಾಯುವಿನ ಹರಿಯುವಿಕೆಗೆ ತಡೆ ಒಡ್ಡಿದಂತಾಗಿ ಅವಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ.

idols-onlineprasad_com.jpgonlineprasad

ಕೆಲವು ಸಂಸ್ಕೃತಿಗಳಲ್ಲಿ ಮುಟ್ಟಾಗಿದ್ದಾಗ ಹೆಂಗಸನ್ನು ನಡೆದಾಡುವ ದೇವತೆಯ ಥರ ಕಾಣುತ್ತಾರೆ. ಅವಳು ದೇವಸ್ಥಾನಕ್ಕೆ ಹೋದರೆ ದೇವರ ವಿಗ್ರಹ ಅವಳ ಹೋಲಿಕೆಯಲ್ಲಿ ಪ್ರಾಣಶಕ್ತಿ ಕಳೆದುಕೊಂಡಂತಾಗುತ್ತದೆ. ಶಕ್ತಿ ಕಳೆದುಕೊಂಡಿರುವ ದೇವರ ವಿಗ್ರಹವನ್ನು ನೋಡಲು ಅಥವಾ ಪೂಜಿಸಲು ಯಾವ ಭಕ್ತರು ತಾನೇ ಬರುತ್ತಾರೆ? ಆದ್ದರಿಂದ ಮುಟ್ಟಾದ ಹೆಂಗಸನ್ನು ಕೀಳಾಗಿ ಕಂಡಲ್ಲ, ಅವಳಿಗೆ ಹೆದರಿ ಅವಳು ದೇವಸ್ಥಾನ ಮುಂತಾದವುಗಳಿಗೆ ಬರಬಾರದು ಎಂಬ ಪದ್ದತಿಯನ್ನು ಮಾಡಿಕೊಂಡಿದ್ದಾರೆ.

2. ಅಡುಗೆ ಮಾಡದೆ ಇರುವುದು

ಬೆಂಕಿಯಿಲ್ಲದೆ ಅಡುಗೆ ಇಲ್ಲ. ಮುಟ್ಟಾದ ಹೆಂಗಸಿನಲ್ಲಿ ವಾತ ಮತ್ತು ಪಿತ್ತಗಳೇ ಹೆಚ್ಚಾಗಿರುತ್ತವೆ ಅಂತ ಮೇಲೆ ಹೇಳಾಗಿದೆ. ಇವೆರಡರಲ್ಲಿ ಪಿತ್ತ ಬೆಂಕಿಗೆ ಸಂಬಂಧಿಸಿದ್ದು. ಈಗಾಗಲೇ ಪಿತ್ತ ಹೆಚ್ಚಿರುವವಳು ಬೆಂಕಿಯ ಹತ್ತಿರ ಹೋದರೆ ಪಿತ್ತ ಮತ್ತಷ್ಟು ಹೆಚ್ಚಾಗಿ ಅವಳ ಆರೋಗ್ಯ ಕೆಡಬಹುದು ಎಂಬ ಕಾರಣದಿಂದ ಅಡುಗೆ ಮಾಡಬಾರದೆಂಬ ಪದ್ದತಿ ಕೆಲವು ಸಂಸ್ಕೃತಿಗಳಲ್ಲಿದೆ.

cooking-celebrateorigins_com.JPGcelebrateorigins

ಮತ್ತೊಂದು ಕಾರಣವೇನೆಂದರೆ ಅಡುಗೆ ಮಾಡುವಾಗ ಬೆಂಕಿಯ ಜೊತೆಗೆ ನೀರಿನ ಸಂಪರ್ಕವೂ ಆಗುತ್ತದೆ. ಅದರಿಂದಾಗುವ ತೊಂದರೆ ಮುಂದೆ ವಿವರಿಸಿದೆ.

3. ಅತಿಯಾದ ದೈಹಿಕ ಚಟುವಟಿಕೆ ಮಾಡದೆ ಇರುವುದು

ಊರೂರು ಸುತ್ತೋದು, ಓಟ-ಆಟಗಳಲ್ಲಿ ಭಾಗವಹಿಸುವುದು ಇವೆಲ್ಲಾ ಮುಟ್ಟಾದ ಸಮಯದಲ್ಲಿ ದೇಹದಲ್ಲಿನ ವಾಯು ಹೆಚ್ಚು ಮಾಡತ್ತೆ. ಇದರಿಂದಲೂ ಹೆಂಗಸಿನ ಆರೋಗ್ಯ ಕೆಡುವ ಸಾಧ್ಯತೆ ಇರುವುದರಿಂದ ಈ ಪದ್ದತಿ ಹುಟ್ಟಿಕೊಂಡಿದೆ.

exercise-youtube-ZrlnYZycp1o.jpgyoutube

4. ಲೈಂಗಿಕ ಇಂದ್ರಿಯಗಳನ್ನು ಹಿಡಿತದಲ್ಲಿಡುವುದು

ಪಾಶ್ಚಾತ್ಯ ದೇಶಗಳಲ್ಲಿ ಮುಟ್ಟಾದ ಹೆಂಗಸನ್ನು ಕೂಡಿದರೆ ಲೈಂಗಿಕ ಕ್ರಿಯೆಯಲ್ಲಿ ಮಜಾ ಜಾಸ್ತಿ ಅನ್ನೋರಿದಾರೆ. ಆದರೆ ಭಾರತದಲ್ಲಿ ಆ ಸಮಯದಲ್ಲಿ ಗಂಡು-ಹೆಣ್ಣು ಕೂಡಬಾರದೆಂಬುದೇ ಸಂಸ್ಕೃತಿ. ಇದಕ್ಕೆ ಕಾರಣ ಮತ್ತೆ ಆಯುರ್ವೇದದಲ್ಲಿದೆ. ಅದರ ಪ್ರಕಾರ ಲೈಂಗಿಕ ಕ್ರಿಯೆಯಲ್ಲಿ ಗಂಡಸಿನ ಪ್ರಾಣ ಹೆಂಗಸನ್ನು ಸೇರುತ್ತದೆ. ಇದು ಕೆಳಗಿಂದ ಮೇಲಕ್ಕೆ ಹೋಗುವ ವಾಯುವಾಗಿರುವುದರಿಂದ, ಮುಟ್ಟಾದ ಹೆಂಗಸಿನ ಅಪಾನವಾಯುವಿನ ಚಲನೆಗೆ ಅಡೆತಡೆ ಉಂಟುಮಾಡುತ್ತದೆ. ಇದು ಕೂಡ ಹೆಂಗಸಿನ ಆರೋಗ್ಯಕ್ಕೆ ಒಳ್ಳೆಯದಲ್ಲ.

erotic-sculpture-wikimedia.jpgwikimedia

5. ತಲೆ ಸ್ನಾನ ಮಾಡದೆ ಇರುವುದು

ಮುಟ್ಟಾದ ಹೆಂಗಸಿನಲ್ಲಿ ವಾತ ಮತ್ತು ಪಿತ್ತಗಳೇ ಹೆಚ್ಚು ಎಂದು ಮೇಲೆ ಹೇಳಿತ್ತು. ಅವುಗಳು ಹೆಚ್ಚಿದ್ದರೇ ಅವಳ ಚಕ್ರ ಸರಿಯಾಗಿ ಆಗುವುದು. ಆದರೆ ನೀರು ಕಫ. ಅಂಥದ್ದರಲ್ಲಿ ಕಫದ ಅಂಶ ಅವಳಲ್ಲಿ ಸೇರಿದರೆ ಆ ಚಕ್ರದಲ್ಲಿ ಏರುಪೇರಾಗುತ್ತದೆ. ಅಲ್ಲದೆ, ಹಿಂದಿನವರು ನೀರನ್ನು ಪೂಜಾಸ್ಥಾನದಲ್ಲಿ ಇಡುತ್ತಿದ್ದರು. ಅದಕ್ಕಿರುವ ಪ್ರಾಣಶಕ್ತಿಯನ್ನು ಗುರುತಿಸಿಕೊಂಡಿದ್ದರು. ಆ ಶಕ್ತಿ ಮುಟ್ಟಾದ ಹೆಂಗಸಿನ ಚಕ್ರವನ್ನು ಬದಲಾಯಿಸಬಲ್ಲುದು. ಹಾಗೆ ಬದಲಾಗುವುದನ್ನು ತಡೆಗಟ್ಟಬೇಕಾದರೆ ನೀರಿನ ಸಂಪರ್ಕ ಕಡಿಮೆ ಮಾಡಿಕೊಂಡಷ್ಟೂ ಒಳ್ಳೆಯದು.

Shower-burkewilliamsspa.jpgburkewilliamsspa

6. ನದಿಗೆ ಇಳಿಯದೆ ಇರುವುದು, ಈಜದೆ ಇರುವುದು

ಆ ದಿನಗಳಲ್ಲಿ ಹೆಂಗಸಿಗೆ ನಿಜಕ್ಕೂ ಬೇಕಾಗಿರುವುದು ಪಿತ್ತದ ವಸ್ತುಗಳು; ನೀರಿನಂತಹ ಕಫದ ವಸ್ತುಗಳು ಒಳ್ಳೆಯದಲ್ಲ. ತಲೆ ಸ್ನಾನ ಮಾಡದೆ ಇರುವುದಕ್ಕೆ ಏನು ಕಾರಣ ಹೇಳಿತ್ತೋ ಅದು ಇಲ್ಲಿ ಇನ್ನಷ್ಟು ಅನ್ವಯಿಸುತ್ತದೆ.

river-bath-framepool_com.jpgframepool

7. ಪಥ್ಯ ಮಾಡುವುದು

ಮುಟ್ಟಾದಾಗ ಕೆಲವು ಆಹಾರ ಪದಾರ್ಥಗಳು ಒಳ್ಳೆಯದಲ್ಲ ಎಂದು ಆಯುರ್ವೇದದಲ್ಲಿ ಸ್ಪಷ್ಟವಾಗಿದೆ. ಮುಖ್ಯವಾಗಿ ಮಾಂಸ ಮತ್ತು ಹಾಲಿನ ಉತ್ಪನ್ನಗಳನ್ನು ಸೇವಿಸಬಾರದು. ಉಷ್ಣದ ಪದಾರ್ಥಗಳನ್ನು ತಿನ್ನಕೂಡದು. ಅಲ್ಲದೆ, ಸುಲಭವಾಗಿ ಅರಗುವಂಥದ್ದನ್ನು ತಿನ್ನುವುದು ಒಳ್ಳೆಯದು. ಹೆಚ್ಚು ಕಬ್ಬಿಣ ಮತ್ತು ಕ್ಯಾಲ್ಷಿಯಂ ಇರುವ ರಾಗಿ, ನುಗ್ಗೇಸೊಪ್ಪು,ಎಳ್ಳು ಮುಂತಾದ ಪದಾರ್ಥಗಳನ್ನು ಸೇವಿಸುವುದು ಒಳ್ಳೆಯದು.

healthy_indian_women-entreedietclinic_zest_md.jpgentreedietclinic

8. ನಿದ್ದೆ ಕೆಡದೆ ಇರುವುದು

ಮುಟ್ಟದಾಗ ಹೆಂಗಸಿನ ಗರ್ಭವು ಸರಿಯಾಗಿ ಶುದ್ದವಾಗಬೇಕಾದರೆ ವಿಶ್ರಾಂತಿ ಅತ್ಯಗತ್ಯ ಎಂದು ಆಯುರ್ವೇದ ಹೇಳಿದೆ. ನಿದ್ದೆ ಕೆಡುವುದರಿಂದ ವಾತ ಹೆಚ್ಚಾಗುತ್ತದೆ. ಇದು ಕೂಡ ಅವಳ ಆರೋಗ್ಯಕ್ಕೆ ಒಳ್ಳೆಯದಲ್ಲ.

sleep-1966mag_com.jpg1966mag

9. ಮುಟ್ಟಿಸಿಕೊಳ್ಳದೆ ಇರುವುದು

ಈ ಪದ್ದತಿಯಂತೂ ಎಲ್ಲೆಲ್ಲೂ ಇದೆ. ಆದರೆ ಈಗಿನ ಮೀಡಿಯಾನೋರು ಹೇಳುವ ಹಾಗೆ ಕಾರಣ ಹೆಂಗಸರು ಆಗ ಕೊಳಕಾಗಿರ್ತಾರೆ ಅಂತಲ್ಲ. ಬದಲಾಗಿ, ಮುಟ್ಟುವವರ ಪ್ರಾಣಶಕ್ತಿ ಅವಳಿಗೆ ಹರಿದು, ಸಹಜವಾಗಿ ಆ ದಿನಗಳಲ್ಲಿ ಮೇಲಿಂದ ಕೆಳಗೆ ಚಲಿಸಬೇಕಾದ ಅಪಾಯವಾಯುವಿನ ಹರಿಯುವಿಕೆಗೆ ತಡೆಯೊಡ್ಡಿದಂತಾಗುತ್ತದೆ ಎನ್ನುವುದು ಮುಖ್ಯವಾದ ಕಾರಣ.

hand-theartofyoga_org.jpgtheartofyoga

ಮುಟ್ಟಿನ ಬಗ್ಗೆ ಇಲ್ಲಿ ಮೇಲೆ ಕೊಟ್ಟಿರುವ ಕಾರಣಗಳೆಲ್ಲ ಎಲ್ಲಾ ಕಾಲದಲ್ಲೂ ಎಲ್ಲರಿಗೂ ಗೊತ್ತಿರುತ್ತಿರಲಿಲ್ಲ. ಆಚರಣೆಗಳ್ನ ಮುಂದುವರೆಸಿಕೊಂಡು ತಮಗೆ ತೋಚಿದ ಕಾರಣ ಕೊಟ್ಟು ಮುಂದುವರೆದಿದ್ದರು. ಆ ಕಾರಣಗಳು ಸರಿ ಅನ್ನಿಸದಿದ್ದಾಗ ಆಚರಣೆ ಮೂಢನಂಬಿಕೆ ಅನ್ನಿಸುವುದು ಸಹಜ. ಆದರೆ ಕಾರಣ ಗೊತ್ತಾದಾಗ ಏನನ್ನಬೇಕೋ ಅದು ಅವರವರಿಗೆ ಬಿಟ್ಟಿದ್ದು.

ಹೊರಚಿತ್ರ: bharatanatyamdancers

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಈ 6 ವಿಷಯ ತಿಳ್ಕೊಂಡ್ರೆ ಇನ್ಮೇಲೆ ಫೋನು, ಚಾರ್ಜರ್ ಎಲ್ಲಾ ತಗೊಳೋವಾಗ ಮೋಸ ಹೋಗಲ್ಲ

ಸ್ವಲ್ಪ ಹುಷಾರಾಗಿ ನೋಡ್ಬೇಕಷ್ಟೆ

ಹೆಸರಾಂತ ಬ್ರಾಂಡುಗಳನ್ನ ನಕಲು ಮಾಡಿ ಕಳಪೆ ಪ್ರಾಡಕ್ಟುಗಳನ್ನ ಮಾರ್ಕೆಟ್ಟಿಗೆ ಬಿಡೋದು ಮಾಮೂಲಿ. ತೆಗೊಳ್ವಾಗ ನಾವು ಹುಷಾರಾಗಿರ್ಬೇಕು. ಈ 6 ವಿಷ್ಯಗಳ್ನ ತಿಳ್ಕೊಂಡ್ರೆ, ಮೋಸ ಹೋಗೋದು ತಪ್ಪಿಸ್ಬಹುದು.

1. ಪ್ಯಾಕ್ ಮಾಡಿರೋ ರೀತಿ ಗಮನಿಸಿ- ದೊಡ್ಡ ಬ್ರಾಂಡುಗಳು ಪ್ಯಾಕೇಜಿಂಗ್ ಬಗ್ಗೆ ಕೂಡ ತುಂಬಾ ಗಮನ ಕೊಟ್ಟಿರ್ತಾರೆ

ಸಾಮಾನ್ಯವಾಗಿ ನಕಲಿ ಕಂಪೆನಿಗಳು ಪ್ಯಾಕೇಜಿಂಗ್ ಬಗ್ಗೆ ಜಾಸ್ತಿ ತಲೆ ಕೆಡಿಸ್ಕೊಳೊಲ್ಲ. ದೊಡ್ಡ ಬ್ರಾಂಡುಗಳು ಅವರ ಪ್ರಾಡಕ್ಟಿಗೆ ಯಾವ್ದೇ ಡ್ಯಾಮೇಜ್ ಆಗ್ದಿರೋ ರೀತಿ ತುಂಬ ಎಚ್ಚರಿಕೆಯಿಂದ ಪ್ಯಾಕ್ ಮಾಡಿರ್ತಾರೆ. ಫೋನಿನ ಮೂಲೆಗಳೆಲ್ಲ ಸರಿಯಾಗಿ ಹೊಂದ್ಕೊಂಡು ಕೂರೋ ರೀತಿ ಬಾಕ್ಸ್ ಡಿಸೈನ್ ಮಾಡಿರ್ತಾರೆ. ಇದನ್ನೆಲ್ಲ ಪರೀಕ್ಷೆ ಮಾಡಿ ನೋಡಿ. ಇದಲ್ಲದೆ ಬಾಕ್ಸಿನಲ್ಲಿ ಪ್ರಿಂಟ್ ಆಗಿರೋದನ್ನ ನೋಡಿ, ಫಾಂಟು ಒಂದೇ ರೀತಿ ಇರ್ಬೇಕು, ಪ್ರಿಂಟ್ ಆಗಿರೋದೆಲ್ಲ ಓದೋಕೆ ಆಗೋ ಹಾಗಿರ್ಬೇಕು.

ಮೂಲ

2. ಯೂಸರ್ ಮಾನ್ಯುವಲ್ ಇಂಗ್ಲಿಷ್ ಅಥವಾ ಭಾರತದ ಅಫಿಷಿಯಲ್ ಭಾಷೆಗಳಲ್ಲಿರ್ಬೇಕು, ನಿಮ್ಗೆ ಅರ್ಥಾನೇ ಆಗ್ದಿರೋ ಯಾವ್ದೋ ಭಾಷೆಯಲ್ಲಿರ್ಬಾರ್ದು

 ಯೂಸರ್ ಮ್ಯಾನ್ಯುವಲ್ ಯಾವುದೋ ನಿಮ್ಗೆ ಅರ್ಥ ಆಗ್ದಿರೋ ಭಾಷೆಯಲ್ಲಿದ್ರೆ ಅಥವಾ ಅದರಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕುಗಳಿದ್ರೆ, ಅದು ಸ್ಮಗಲ್ ಆಗಿರೋ ಮಾಲು ಅಥವಾ ನಕಲಿ ಮಾಲು ಆಗಿರೋ ಸಂಭವ ಜಾಸ್ತಿ.

ಮೂಲ

3. ರಬ್ಬರ್, ಪ್ಲಾಸ್ಟಿಕ್, ಅಲ್ಯೂಮಿನಿಯಮ್ - ಯಾವ್ದೇ ಆದ್ರೂ ಒಳ್ಳೆ ಕ್ವಾಲಿಟೀದಿದ್ಯಾ ನೋಡಿ

ಎಲ್ಲೂ ಚೂಪುಚೂಪಾಗಿರೋ ಪ್ಲಾಸ್ಟಿಕ್ ಇರ್ಬಾರ್ದು. ಅದರ ಮೈ ಸಮವಾಗಿ ಇರ್ಬೇಕು, ಮೆತ್ತಗಿರ್ಬೇಕು. ಒಂದೊಂದು ಕಡೆ ಒಂದೊಂದು ರೀತಿ ಇದ್ರೆ, ನಕಲಿ ಆಗಿರೋ ಸಾಧ್ಯತೆ ಹೆಚ್ಚು. ಫೋನಿನ ಕ್ಯಾಮೆರಾ ಮತ್ತು ಫ್ಲ್ಯಾಶ್ಲೈಟಿನ ಕ್ವಾಲಿಟಿಯನ್ನೂ ನೋಡಿ. ಕೆಳಗಿನ ಚಿತ್ರದಲ್ಲಿ ಗೋಲ್ಡನ್ ಫ್ರೇಮ್ ಇರೋದು ಒರಿಜಿನಲ್, ಇನ್ನೊಂದು ನಕಲಿ. ಎರಡರಲ್ಲೂ ಕ್ಯಾಮೆರಾ ಮತ್ತು ಫ್ಲ್ಯಾಶ್ ಲೈಟ್ ಕೂರಿಸಿರೋ ರೀತಿ ನೋಡಿ. ಅಸಲಿಯಲ್ಲಿ ಸ್ಮೂತ್ ಫಿನಿಶಿಂಗ್ ಇದೆ, ನಕಲಿಯಲ್ಲಿ ಕಳಪೆ ಅಂತ ಗೊತ್ತಾಗೋ ರೀತಿ ಇದೆ.

ಮೂಲ

 

4. ಕಂಪೆನಿ ಲೋಗೋ ಗಮನಿಸಿ - ಸ್ಪೆಲ್ಲಿಂಗ್ ಮಿಸ್ಟೇಕ್ ಇದ್ಯಾ ಅಥ್ವಾ ಅವರ ಒರಿಜಿನಲ್ ಪ್ರಾಡಕ್ಟಿಗೆ ಹೋಲ್ಸಿದ್ರೆ ಏನಾದ್ರೂ ವ್ಯತ್ಯಾಸ ಇದ್ಯಾ ನೋಡಿ

ಯಾವ್ದೇ  ಕಂಪೆನಿಗೆ ಅದರ ಲೋಗೋ ಬಹಳ ಮುಖ್ಯ. ಅದರಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ ಆಗ್ಲಿ, ತಪ್ಪು ಫಾಂಟ್ ಆಗ್ಲಿ ಇರೋಕೆ ಸಾಧ್ಯಾನೇ ಇಲ್ಲ. ಅಲ್ಲದೆ ಲೋಗೋ ಅಳಿಸಿ ಹೋಗೋ ಥರ ಇರೊಲ್ಲ, ಎಷ್ಟೋ ವರ್ಷ ಉಪ್ಯೋಗ್ಸಿದ್ರೂ ಓದ್ಲಿಕ್ಕೆ ಆಗೋ ಹಾಗೆ ಇರುತ್ತೆ. ಆ ಕಂಪೆನಿಯ ವೆಬ್ಸೈಟಿನಲ್ಲಿ ಇರೋ ಪ್ರಾಡಕ್ಟುಗಳಲ್ಲಿರೋ ಲೋಗೋ ಜೊತೆ ಹೋಲಿಸಿ ನೋಡಿ. ಏನಾದ್ರೂ ವ್ಯತ್ಯಾಸ ಇದ್ರೆ ನಕಲಿ ಅನ್ನೋದ್ರಲ್ಲಿ ಸಂಶಯ ಇಲ್ಲ. ಕೆಳಗಿನ ಫೋಟೋದಲ್ಲಿರೋದು ನಕಲಿ ಪವರ್ ಬ್ಯಾಂಕು. ಅದರಲ್ಲಿರೋ ಲೋಗೋ ನಕಲಿ. ಅವರ ಅಫಿಷಿಯಲ್ ವೆಬ್ಸೈಟಿನಲ್ಲಿರೋ ಲೋಗೋ ನೋಡಿದ್ರೆ ಇದು ನಕಲಿ ಅಂತ ಗೊತ್ತಾಗುತ್ತೆ.

5. ಚಾರ್ಜರಿನ ಪ್ಲಾಸ್ಟಿಕ್ ಗಮನಿಸಿ - ಒಳ್ಳೆ ಕ್ವಾಲಿಟಿ ಇದ್ಯಾ, ಸಮವಾಗಿ ಮೆತ್ತಗಿರೋ ಪ್ಲಾಸ್ಟಿಕ್/ರಬ್ಬರ್ ಉಪ್ಯೋಗ್ಸಿದಾರಾ ನೋಡಿ

ಮೊದಲ್ನೆದಾಗಿ ಫೋನ್ ತೆಗೊಂಡಾಗ ಚಾರ್ಜರ್ ಇರ್ಲೇಬೇಕು. ಅದೇನಾದ್ರೂ ಸೆಪರೇಟ್ ಆಗಿ ತೆಗೋಬೇಕು ಅಂತ ಇದ್ರೆ ಇದು ಸ್ಮಗಲ್ ಮಾಡಿದ ಮಾಲು ಅಥ್ವಾ ನಕಲಿ ಮಾಲು ಅನ್ನೋದು ಖಂಡಿತ. ಚಾರ್ಜರ್ ಕೂಡ ಒಳ್ಳೆ ಕ್ವಾಲಿಟಿಯಲ್ಲಿರ್ಬೇಕು. ಚಾರ್ಜರಿನ ಪ್ಲಾಸ್ಟಿಕ್ಕು ಬೇರೆ ಬೇರೆ ಬಣ್ಣದಲ್ಲಿದ್ರೆ, ಎರಡು ಬಣ್ಣಗಳ ಮಧ್ಯೆ ಯಾವ್ದೇ ಗೆರೆ ಇರೊಲ್ಲ, ಅದು ಮೆತ್ತಗೆ ಇರುತ್ತೆ, ಮುಟ್ಟಿದಾಗ ಗೊತ್ತೇ ಆಗದ ಹಾಗೆ ಇರುತ್ತೆ. ಏನಾದ್ರೂ ಚೂಪಾಗಿರೋ ಗೆರೆಗಳು ಮಧ್ಯದಲ್ಲಿದ್ರೆ ನಕಲಿ ಆಗಿರೋ ಚಾನ್ಸ್ ಜಾಸ್ತಿ. ಕೆಳಗಿನ ಚಿತ್ರದಲ್ಲಿ ಎಡಗಡೆ ಇರೋದು ಅಸಲಿ, ಬಲಗಡೆಯದ್ದು ನಕಲಿ. ಎರಡರ ಫಿನಿಶಿಂಗ್ ಹೋಲಿಸಿ ನೋಡಿ.

ಮೂಲ

6. ವೈರು, ಪ್ಲಗ್ಗು ಸಾಕೆಟ್ಟಲ್ಲಿ ಸರಿಯಾಗಿ ಕೂರುತ್ತಾ, ರಬ್ಬರ್ ಒಳ್ಳೆ ಕ್ವಾಲಿಟಿ ಇದ್ಯಾ ನೋಡಿ

ವೈರು ಕೂಡ ಒಳ್ಳೆ ಕ್ವಾಲಿಟಿ ರಬ್ಬರಲ್ಲಿ ಮಾಡಿರ್ಬೇಕು. ಪ್ಲಗ್ ಮಾಡಿದಾಗ ಸ್ಮೂತ್ ಆಗಿ ಕೂರ್ಬೇಕು, ಸ್ವಲ್ಪ ಉದ್ದ ಹೆಚ್ಚಿದ್ರೆ, ಅಥ್ವಾ ಸ್ಮೂತ್ ಆಗಿ ಕೂರದಿದ್ರೆ ನಕಲಿ ಮಾಲಾಗಿರ್ಬಹುದು. ವೈರು ಫ್ಲೆಕ್ಸಿಬಲ್ ಇರ್ಬೇಕು, ಬಣ್ಣ ಸಮವಾಗಿರ್ಬೇಕು. ವೈರು, ಪ್ಲಗ್ಗುಗಳ ಮೇಲೆ ಏನಾದ್ರೂ ಸಿಂಬಲ್ಗಳಿದ್ರೆ ಅದು ಅಳಿಸಿ ಹೋಗೋ ಹಾಗಿರ್ಬಾರ್ದು. ನೋಡಿದಾಗ ಕಳಪೆ ಕ್ವಾಲಿಟಿ ಕಂಡ್ರೆ ಹುಷಾರಾಗಿ.

ಮೂಲ

ಅಫಿಷಿಯಲ್ ವೆಬ್ಸೈಟುಗಳು, ಹೆಸರುವಾಸಿ ಅಂಗಡಿಗಳಲ್ಲಿ ತೆಗೊಳ್ವಾಗ ನಕಲಿ ಆಗಿರೋ ಸಾಧ್ಯತೆ ಕಡಿಮೆ. ಬೇರೆ ಕಡೆ ತೆಗೊಳ್ವಾಗ ಹುಷಾರಾಗಿರ್ಬೇಕು. ಯಾವಾಗ್ಲೂ ನಮ್ಮ ಎಚ್ಚರಿಕೆಯಲ್ಲಿ ನಾವಿರೋದು ಒಳ್ಳೇದು. ಸರಿ ಅಲ್ವಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: