ಛೀ ತುಂಟ!

ನಂಜಿ ಏನಾದರೂ‌ ಮಾಡಿ ಚಿಕ್ಕೋಳ ಥರ ಕಾಣಬೇಕು ಅಂತ ಮಾಲ್ಗೆ ಹೋಗಿ ಇದ್ದ ಬದ್ದ ಮೇಕಪ್ ಸಾಮಾನೆಲ್ಲ ಕೊಡುಕೊಂಡು ಬರ್ತಾಳೆ.

ಇಡೀ ದಿನ ಮೇಕಪ್ ಮಾಡ್ಕೊಂಡು ಕಡೆಗೆ ಗಂಡನ ಮುಂದೆ ಬಂದು ನಿಂತುಕೋತಾಳೆ.

`ನಿಜವಾಗಲು ಹೇಳು ಚಿನ್ನ... ಈಗ ನಾನು ಎಷ್ಟು ವಯಸ್ಸಿನೋಳ ಥರ ಕಾಣಿಸ್ತಿದೀನಿ?'

ಕೆಂಚ: `ನಿನ್ನ ಕೂದಲ ಪ್ರಕಾರ 15... ನಿನ್ನ ಮೈಬಣ್ಣದ ಪ್ರಕಾರ 16... ನಿನ್ನ ಫಿಗರ್ ಪ್ರಕಾರ 18! ಹತ್ತಿರ ಬಾ  ಸ್ವಲ್ಪ...'

ನಂಜಿ: `ಛೀ ತುಂಟ! ಅಷ್ಟು ಚಿಕ್ಕೋಳಾಗಿ ಕಾಣ್ತೀನೇನೋ ನಾನು?'

ಕೆಂಚ: `ಇಲ್ಲ ಇಲ್ಲ, ಮೂರ್ನೂ ಕೂಡ್ತಾ ಇದೀನಿ ತಾಳು!'

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: