ವಜ್ರದ ಉಂಗುರ

ಕೆಂಚ ಆಫೀಸ್ ಕೆಲಸದಲ್ಲಿ ಮುಳುಗಿದ್ದಾಗ ಒಂದು ದಿನ ಸೀನನ ಫೋನ್ ಬರುತ್ತೆ.

`ಕೆಂಚ, ಈಗತಾನೇ ಕಮಲಂಗೆ ಒಂದು ಲಕ್ಷ ರೂಪಾಯಿ ವಜ್ರದ ಉಂಗುರ ಕೊಂಡ್ಕೊಂಡೆ. ಇದರಿಂದ ನಮ್ಮಿಬ್ಬರ ಸಂಬಂಧ ಹಾಳಾಗಲ್ಲ ತಾನೇ?'

ಕೆಂಚ: `ಛೆ ಛೆ! ಅಲ್ಲವೋ, ನಿನ್ನ ಹೆಂಡತಿಗೆ ನೀನು ಉಂಗುರ ವಜ್ರದ ಉಂಗುರ ಕೊಟ್ಟರೆ ನಮ್ಮಿಬ್ಬರ ಸಂಬಂಧ ಯಾಕೆ ಹಾಳಾಗಬೇಕು? ನನ್ನ ಹೆಂಡತಿಗೆ ಏನು ಕೊಡ್ತಿಲ್ಲವಲ್ಲ?!'

ಸೀನ: `ನಾನು ಕೊಡ್ತಿಲ್ಲಪ್ಪ, ನನ್ನ ಹೆಂಡತಿ ಇಷ್ಟು ಹೊತ್ತಿಗೆ ಕೊಟ್ಟಿರ್ತಾಳೆ... ನೋಡು ನಂಜಿ ನನ್ನ ಹೊಸ ಉಂಗುರ ಇದೇನೇ ಅಂತ!'

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: