ಗಿಣಿ ಪಾಠ

ಕೆಂಚ ಒಂದು ಗಿಣಿ ಕೊಂಡ್ಕೊಳಕ್ಕೆ ಬೆಂಗಳೂರಲ್ಲಿ ಹರಾಜಿಗೆ ಹೋಗ್ತಾನೆ.

ಅವನು 1,000 ರೂಪಾಯಿ ಕೂಗ್ತಾನೆ, ಆದರೆ ಬೇರೆ ಯಾರೋ 1,500 ಕೂಗಿ ಬಿಡ್ತಾರೆ.

ಅದಕ್ಕೆ ಇವನು 2,000 ಕೂಗ್ತಾನೆ. ಬೇರೆ ಯರೋ 2,500 ಕೂಗಿ ಬಿಡ್ತಾರೆ.

ಇವನು 3,000 ಕೂಗ್ತಾನೆ, ಬೇರೆ ಯಾರೋ 3,500 ಕೂಗಿ ಬಿಡ್ತಾರೆ.

ಕೆಂಚನಿಗೆ ಯಾವುದೇ ಕಾರಣಕ್ಕೂ ಗಿಣಿ ಕೈತಪ್ಪಿ ಹೋಗಬಾರದು ಅನ್ನೋ‌ ಆಸೆ... ಅದಕ್ಕೆ 4,000 ಕೂಗ್ತಾನೆ.

ಹೆಚ್ಚಿಗೆ ಯಾರೂ‌ ಕೂಗದೆ ಇರೋದ್ರಿಂದ ಗಿಣಿ ಇವನದೇ ಆಗುತ್ತೆ. ದುಡ್ಡು ಕೊಟ್ಟು ಗಿಣಿ ಇಸ್ಕೊಳ್ತಾ ಗಿಣಿ ಮಾಲೀಕನಿಗೆ ಹೇಳ್ತಾನೆ: `ಸಕ್ಕತ್ ದುಡ್ಡು ಕೊಡ್ತಾ ಇದೀನಿ... ಈ‌ ಗಿಣಿಗೆ ಮಾತಾಡಕ್ಕೆ ಬರುತ್ತೆ ತಾನೆ?'

ಮಾಲೀಕ: `ಖಂಡಿತ ಬರುತ್ತೆ. ನೀನು ದುಡ್ಡು ಕೂಗಿದಾಗೆಲ್ಲ ಅದನ್ನ ಹೆಚ್ಚಿಸ್ತಾ ಇದ್ದಿದ್ದು ಯಾರು ಅನ್ಕೊಂಡೆ?'

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: