10 ಅಡಿ ಏನು ಮಹಾ?

ಕೆಂಚ ಮತ್ತು ಸೀನ ಅಂತ ಇಬ್ಬರು ಒಳ್ಳೇ ಆಕಾಶ-ಜಿಗಿತದ ಪಟುಗಳಿರ್ತಾರೆ.

ಪ್ಲೇನಿಂದ ನೆಲಕ್ಕೆ ಜಿಗಿಯೋದು, ಮಧ್ಯದಲ್ಲಿ ಎಲ್ಲೋ ಪ್ಯಾರಚೂಟ್ ತೆಗೆದು ಸುರಕ್ಷಿತವಾಗಿ ನೆಲಕ್ಕೆ ಬರೋದು. ಇದೇ ಇವರ ಕಸುಬು. ಇದರಲ್ಲಿ ಕರ್ನಾಟಕದ ಮಟ್ಟದಲ್ಲಿ ಸಾಕಷ್ಟು ದಾಖಲೆಗಳ್ನ ಸಾಧಿಸಿರ್ತಾರೆ.

ಈಗ ಒಂದು ವಿಶ್ವದಾಖಲೆ ಮಾಡಲೇ ಬೇಕು ಅಂತ ಹಟ ಹಿಡಿದು 100 ಅಡಿ ವರೆಗೂ ಪ್ಯಾರಚೂಟ್ ತೆಗೀದೇ ಇರೋ ಸಾಹಸ ಮಾಡೋಣ ಅಂತ ತೀರ್ಮಾನಿಸ್ತಾರೆ.

ಸರಿ, 8,000 ಅಡಿಯಿಂದ ಇಬ್ಬರೂ ಹಾರ್ತಾರೆ...

ಆಲ್ಟಿಮೀಟರಲ್ಲಿ 100 ಅಡಿ ತೋರಿಸಿದಾಗ ಕೆಂಚ: `ಬಿಚ್ಲಾ?'

ಸೀನ: `ಬೇಡ ತಾಳು, ನೋಡೇ ಬಿಡೋಣ ಔರ*ನ್!'

ಆಲ್ಟಿಮೀಟರಲ್ಲಿ 50 ಅಡಿ ತೋರಿಸಿದಾಗ ಕೆಂಚ: `ಈಗ?'

ಸೀನ: `ಈಗಲೂ‌ ಬೇಡ ತಾಳು, ನೋಡೇ ಬಿಡೋಣ ಔರ*ನ್!'

ಇನ್ನು ಸ್ವಲ್ಪ ಹೊತ್ತಲ್ಲಿ ಕೆಂಚ: `ಲೋ ಬರೀ 10 ಅಡಿ ಇದೆ ಕಣೋ!'

ಸೀನ: `ಥೂ ನನ್ ಮಗನೆ!‌ ನಾಚಿಕೆಗೇಡು! 10 ಅಡಿಯಿಂದ ನೀನು ಯಾವತ್ತೂ‌ ಬಿದ್ದೇ‌ ಇಲ್ಲವೇನೋ?'

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: