ಕೆಂಚನ ಮತಾಂತರ

ಕೆಂಚನ ಮನೆಗೆ ಒಬ್ಬ ಕ್ರಿಶ್ಚಿಯನ್ ಮಿಶನರಿ ಬಂದು ಕಡೆಗೂ‌ ಮತಾಂತರಕ್ಕೆ ಒಪ್ಪಿಸ್ತಾನೆ.

`ಭಾನುವಾರ ಬಂದುಬಿಡು, ನಿನಗೆ ಜೀಸಸ್ ಕರುಣೆ ಸಿಗೋಹಂಗೆ ಮಾಡ್ತೀನಿ.'

`ಸರಿ ಫಾದರ್.'

ಭಾನುವಾರ ಆಗತ್ತೆ, ಕೆಂಚ ಕೊಟ್ಟ ಮಾತು ತಪ್ಪದೆ ಪಾದ್ರಿ ಹತ್ತಿರ ಹೋಗ್ತಾನೆ. ಆದರೆ ಒಂದೇ‌ ಒಂದು ಪ್ರಾಬ್ಲಂ. ಬಡ್ಡೀಮಗ ಕುಡಿದು ಬಿಟ್ಟಿರ್ತಾನೆ.

ಪಾದ್ರಿ: `ಜೀಸಸ್ ಕಂಡುಕೊಳಕ್ಕೆ ನೀನು ರೆಡಿ ನಾ?'

ಕೆಂಚ: `ರೆಡಿ ಫಾದರ್!'

ಪಾದ್ರಿ ಕೆಂಚನ ಮುಖ ಕೆರೆಯಲ್ಲಿ ಮುಳುಗಿಸಿ ತೆಗೆದು ಕೇಳ್ತಾನೆ: `ಜೀಸಸ್ ಕಂಡನಾ?'

ಕೆಂಚ: `ಇಲ್ಲ.'

ಪಾದ್ರಿ ಮತ್ತೆ ಮುಖ ನೀರೊಳಗೆ ಮುಳುಗಿಸಿ ತೆಗೆದು ಕೇಳ್ತಾನೆ: `ಈಗ?'

ಕೆಂಚ: `ಈಗಲೂ ಇಲ್ಲ ಫಾದರ್!'

ಪಾದ್ರಿ ಈ‌ ಸಲ ಸ್ವಲ್ಪ ಉರ್ಕೊಂಡು 1 ಇಡೀ‌ ನಿಮಿಷ ಕೆಂಚನ ಮುಖ ನೀರೊಳಗೆ ಒತ್ತರಿಸಿ ಹಿಡ್ಕೋತಾನೆ. ಆಮೇಲೆ ಹೊರಕ್ಕೆ ಎಳೆದು ಮತ್ತೆ ಅದೇ ಪ್ರಶ್ನೆ ಕೇಳ್ತಾನೆ.

ಆಗ ಕೆಂಚ: `ಈಗಲೂ ಇಲ್ಲ ಫಾದರ್! ಗ್ಯಾರಂಟಿ ಇಲ್ಲೇ ಬಿದ್ದಿದ್ದಾ?'

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: