ಹೆಂಡತಿಗೆ ಇಷ್ಟ ಆಗಲಿಲ್ಲ

ಸೀನ ಅರೆಸ್ಟ್ ಆಗಿ ಕೋರ್ಟಲ್ಲಿ ಜಡ್ಜ್ ಮುಂದೆ ನಿಂತಿರ್ತಾನೆ.

ಜಡ್ಜು: ‘ನೀನು 3 ಸಾರಿ ಒಂದೇ ಅಂಗಡಿ ಬೀಗ ಮುರಿದು ಒಳಗೆ ಹೋಗಿದ್ದು ನಿಜಾನಾ?’

ಸೀನ: ‘ಹೌದು ಮಹಾಸ್ವಾಮಿ!’

ಜಡ್ಜು: ‘ನೀನು ಏನು ಕದ್ದೆ ಅಂತ ಕೋರ್ಟಿಗೆ ಹೇಳು.’

ಸೀನ: ‘ಒಂದು ಸೀರೆ ಕದ್ದೆ ಮಹಾಸ್ವಾಮಿ!’

ಜಡ್ಜು: ‘ಒಂದೇ ಸೀರೆ ನಾ? ಮತ್ತೆ 3 ಸಲಿ ಬೀಗ ಒಡ್ದಿದೀನಿ ಅಂತ್ಯಾ?’

ಸೀನ: ‘ಹೌದು ಮಹಾಸ್ವಾಮಿ! ಆದ್ರೆ 2 ಸಲ ಸೀರೆ ವಾಪಸ್ ಇಡಕ್ಕೆ ಹೋಗಿದ್ದೆ ಮಹಾಸ್ವಾಮಿ!’

ಜಡ್ಜು: ‘ವಾಪಸ್ಸಾ? ಯಾಕೆ?’

ಸೀನ: ‘ನನ್ನ ಹೆಂಡ್ತಿ ಕಮಲಂಗೆ ಡಿಜೈನ್ ಇಷ್ಟ ಆಗ್ಲಿಲ್ಲ ಮಹಾಸ್ವಾಮಿ!’

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: