ಹೌದು, ಮನೇಲಿಲ್ಲ

ಸೀನನ ಫ್ಲಾಟ್ ಹುಡುಕಿಕೊಂಡು ಅವರ ಕಡೆ ನೆಂಟರೊಬ್ಬರು ಬರ್ತಾರೆ.

ಸೆಕ್ಯೂರಿಟಿ ಹತ್ತಿರ ಅವರನ್ನ ಕೆಂಚ ನೋಡಿ ‘ಹಲೋ! ಚೆನ್ನಾಗಿದೀರಾ?’ ಅಂತ ಕೇಳ್ತಾನೆ.

‘ಚೆನ್ನಾಗಿದೀನಿ. ಸೀನನ ಫ್ಲಾಟ್ ಎಲ್ಲಿದೆ ಅಂತ ತೋರುಸ್ತೀರಾ?’

ಕೆಂಚ: ‘ಖಂಡಿತ, ಬನ್ನಿ’ ಅಂತ ಹೇಳಿ ಔರ್ನ ಫ್ಲಾಟ್ ಹತ್ತಿರ ಕರ್ಕೊಂಡ್ ಹೋಗ್ತಾನೆ.

ಅವರು ಬೆಲ್ ಹೊಡೀತಾರೆ... ಯಾರೂ ಹೊರಗೆ ಬರಲ್ಲ. ಎಷ್ಟು ಸಾರಿ ಬೆಲ್ ಹೊಡೆದರೂ ಬರಲ್ಲ.

‘ಯಾರೂ ಇಲ್ಲ ಅನ್ನಿಸುತ್ತೆ.’

ಕೆಂಚ: ‘ಹೌದು. ಎಲ್ಲರೂ ಹೊರಗೆ ಹೋಗಿದಾರೆ. ಸಾಯಂಕಾಲ ಬರ್ತಾರೆ.’

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: