ನನ್ನಂತೆ ಎಲ್ಲರೂ...!

ಕೆಂಚ ಮಾಮೂಲಿಯಂತೆ ಬಾರ್ಗೆ ಹೋಗಿ ತನ್ನ ಮಾಮೂಲಿ ಜಾಗದಲ್ಲಿ ಕೂತ್ಕೋತಾನೆ.

‘ಏಯ್, ನಂಗೆ 1 ಬಾಟ್ಲು ಬೀರ್ ತೊಗೊಂಡ್ ಬಾ. ಹಂಗೇ ಇಲ್ಲಿ ಇರೋರ್ಗೆಲ್ಲ 2 ಬಾಟ್ಲು ಕೊಡು. ನಾನು ಮಾಡಿದಂಗೆ ಅವರೂ ಮಜಾ ಮಾಡ್ಲಿ.’

ಬಾರ್ ಮಾಲೀಕ ಹೇಳಿದಂಗೆ ಮಾಡ್ತಾನೆ. ಎಲ್ಲರೂ ಕೆಂಚನ್ನ ಹೊಗಳಿ ಕುಡಿಯಕ್ಕೆ ಶುರು ಮಾಡ್ತಾರೆ.

ಎಲ್ಲರೂ ಕುಡೀತಿದ್ದಂಗೆ ಕೆಂಚ ಮತ್ತೊಂದು ಆರ್ಡರ್ ಮಾಡ್ತಾನೆ:

‘ಏಯ್, ನಂಗೆ 1 ಪ್ಲೇಟ್ ಚಿಕನ್-65 ತೊಗೊಂಡ್ ಬಾ. ಹಂಗೇ ಇಲ್ಲಿ ಇರೋರ್ಗೆಲ್ಲ 2 ಪ್ಲೇಟ್ ಕೊಡು. ನಾನು ಮಾಡಿದಂಗೆ ಅವರೂ ಮಜಾ ಮಾಡ್ಲಿ.’

ಬಾರ್ ಮಾಲೀಕ ಹೇಳಿದಂಗೆ ಮಾಡ್ತಾನೆ. ಎಲ್ಲರೂ ಮತ್ತೆ ಕೆಂಚನ್ನ ಹಾಡಿ ಕೊಂಡಾಡ್ತಾರೆ.

ಸ್ವಲ್ಪ ಹೊತ್ತಾದ ಮೇಲೆ ಕೆಂಚ ಮತ್ತೆ ತನ್ನ ಬಾಯಿ ತೆಗೀತಾನೆ:

‘ಏಯ್, ನನ್ ಬಿಲ್ ತೊಗೊಂಡ್ ಬಾ. ಹಂಗೇ ಇಲ್ಲಿ ಇರೋರ್ಗೆಲ್ಲ ಬಿಲ್ ತಂದುಕೊಡು. ನಾನು ಕೊಟ್ಟಂಗೆ ಅವರೂ ದುಡ್ಡು ಕೊಡ್ಲಿ.’

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: