ಕತ್ತಲೆಯಲ್ಲಿ ಕೆಲಸ ಮಾಡಕ್ಕಾಗಲ್ಲ!

ಒಂದ್ ದಿನ ಕೆಂಚನಿಗೆ ಆಫೀಸ್ ಕೆಲಸ ಬೇಜಾರಾಗಿ ಏನಾದರೂ ಮಾಡಿ ರಜಾ ತೊಗೋಬೇಕು ಅಂತ ಹೊಂಚು ಹಾಕಕ್ಕೆ ಶುರು ಮಾಡಿದ್ನಂತೆ.

ಕಡೆಗೆ ಒಂದು ಐಡಿಯಾ ಹೊಳಿಯುತ್ತೆ. ಬಾಸ್ ಬರೋ ಹೊತ್ತಿಗೆ ಸರಿಯಾಗಿ ಫ್ಯಾನಿಂದ ತಲೆಕಳಗೆ ನೇತು ಹಾಕಿಕೊಂಡು ಹುಚ್ಚು-ಹುಚ್ಚಾಗಿ ಕೂಗಾಡಕ್ಕೆ ಶುರು ಮಾಡ್ತಾನೆ.

ಬಾಸ್ ನೋಡಿ ‘ಏನಿದು ಕೆಂಚ, ಹೀಗೆ ಆಡ್ತಾ ಇದ್ಯಲ್ಲ?’ ಅಂತಾನೆ.

ಅದಕ್ಕೆ ಕೆಂಚ - ‘ನಾ ಲೈಟ್ ಬಲ್ಬು! ನಾ ಲೈಟ್ ಬಲ್ಬು! ನಾ ಲೈಟ್ ಬಲ್ಬು!’ ಅಂತ ಹುಚ್ಚು-ಹುಚ್ಚಾಗಿ ಹಾಡು ಹೇಳಕ್ಕೆ ಶುರು ಮಾಡ್ತಾನೆ.

ಬಾಸ್ ಕಿವಿ ಮುಚ್ಚಿಕೊಂಡು ‘ನಿನಗೆ ತುಂಬ ಆಯಾಸ ಆಗೋಗಿದೆ, ಕೆಲಸದ ಒತ್ತಡದಿಂದ ಹೀಗೆ ಆಡ್ತಾ ಇದ್ಯಾ... ಆದ್ದರಿಂದ ಒಂದು ವಾರ ರಜಾ ತೊಗೊಂಡು ರಿಫ್ರೆಶ್ ಆಗಿ ಬಾ...’ ಅಂದುಬಿಡ್ತಾನೆ.

ಕೆಂಚನಿಗೆ ಒಳಗೊಳಗೇ ಖುಷಿ. ಫ್ಯಾನಿಂದ ಕೆಳಗೆ ಇಳಿದು ತನ್ನ ಬ್ಯಾಗ್ ಎತ್ಕೊಂಡು ಹೋಗುವಾಗ ಅವನ ಕೊಲೀಗ್ ಸೀನ ಕೂಡ ಅವನ ಹಿಂದೆ ಬರ್ತಾನೆ.

ಆಗ ಬಾಸ್ ಸೀನನ್ನ ತಡೆದು ‘ಹಲೋ - ನೀನೆಲ್ಲೀಗ್ ಹೋಗ್ತಿದ್ಯಾ?’ ಅಂತ ಕೇಳ್ತಾನೆ.

ಅದಕ್ಕೆ ಸೀನ - ‘ನಂಗೆ ಕತ್ತಲೆಯಲ್ಲಿ ಕೆಲಸ ಮಾಡಕ್ಕಾಗಲ್ಲ ಸಾರ್!’ ಅಂದಾಗ ಬಾಸ್ ತಲೆ ತಿರುಗಿ ಬಿದ್ದುಹೋಗ್ತಾನೆ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: