ಬಾನ್ ಅಪೆಟೀಟ್!

ಕೆಂಚ ಒಂದ್ಸಲಿ ಏರೋಪ್ಲೇನಲ್ಲಿ ಹೋಗ್ತಿದ್ದ. ಪಕ್ಕದ ಸೀಟಲ್ಲಿ ಒಬ್ಬ ಫ್ರೆಂಚ್ ಹುಡುಗಿ.

ಏರ್ ಹೋಸ್ಟೆಸ್ ಬೆಳಗ್ಗಿನ ತಿಂಡಿ ತಂದು ಬಡಿಸಿದಾಗ ಅವಳು ಕೆಂಚನ ಮುಖ ನೋಡಿ ‘ಬಾನ್ ಅಪೆಟೀಟ್’ ಅಂತಾಳೆ. ಕೆಂಚನಿಗೆ ಸ್ವಲ್ಪ ಅರ್ಥವಾಗದೆ ಸುಮ್ನೆ ನಕ್ಕಿಬಿಡ್ತಾನೆ.

ಮಧ್ಯಾಹ್ನದ ಊಟ ತಂದುಕೊಟ್ಟಾಗಲೂ ಆಕೆ ‘ಬಾನ್ ಅಪೆಟೀಟ್’ ಅಂತಾಳೆ. ಈ ಸಾರಿ ಕೆಂಚ... ‘ಕೆಂಚಣ್ಣ’ ಅಂತ ಉತ್ತರ ಕೊಡ್ತಾನೆ.

ಆಮೇಲೆ ಸಾಯಂಕಾಲ ತಿಂಡಿ ತಂದುಕೊಟ್ಟಾಗಲೂ ಅವಳದು ಅದೇ ಪ್ರಶ್ನೆ, ಇವನದು ಅದೇ ಉತ್ತರ. ಕಡೆಗೆ ಸಾಕಾಗಿ ಅಲ್ಲೊಬ್ಬ ಟೈ ಹಾಕೊಂಡಿರೋ ಕನ್ನಡಿಗನ ಹತ್ತಿರ ಹೋಗಿ: ‘ಅವಳ ಹೆಸರು ಬಾನಪೆಟೀಟ್ ಅಂತ ಹೇಳ್ತಾಳೆ, ನಾನು ನನ್ನ ಹೆಸರು ಹೇಳ್ತೀನಿ... ಆಮೇಲೆ ಕಥೆ ಮುಂದಕ್ಕೆ ಹೋಗೋದೇ ಇಲ್ಲ. ಏನಾದರೂ ತಿನ್ನಬೇಕಾದ್ರೆ ಅಥವಾ ಕುಡೀಬೇಕಾದ್ರೆಲ್ಲ ಹೀಗೇ ನಡೀತಿದೆ. ಇದೊಳ್ಳೇ ಕಥೆ ಆಯ್ತಲ್ಲ?’ ಅಂತಾನೆ.

ಆಗ ಆ ಟೈಕನ್ನಡಿಗ ನಕ್ಕುಬಿಟ್ಟು ಕೆಂಚನಿಗೆ ಹೇಳ್ತಾನೆ - ‘ಅವಳು ಹೆಸರು ಹೇಳ್ಕೋತಿಲ್ಲ, ನಿನಗೆ ತಿನ್ನೋದು ಚೆನ್ನಾಗಿ ಹಿಡಿಸಲಿ ಅಂತ ಹೇಳ್ತಾ ಇದಾಳೆ, ಅಷ್ಟೆ.’

ಕೆಂಚನಿಗೆ ಎಲ್ಲಾ ಅರ್ಥವಾಗಿ ಹೋಗಿ ವಾಪಸ್ ತನ್ನ ಸೀಟಲ್ಲಿ ಕೂತ್ಕೋತಾನೆ.

ರಾತ್ರಿ ಊಟ ಬಂದಾಗ ಕೆಂಚ ಮುಖ ಅರಳಿಸಿಕೊಂಡು ‘ಬಾನಪೆಟೀಟ್’ ಅಂತಾನೆ.

ಅದಕ್ಕೆ ಅವಳು ‘ಕೆಂಚಣ್ಣ!’ ಅಂದುಬಿಡೋದೇ?!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: