ಪ್ರೀತಿಸ್ತಾ ಇದೀನಲ್ಲ?

ಒಂದ್ ದಿನ ಕೆಂಚ ಬಹಳ ಬೇಜಾರು ಮಾಡ್ಕೊಂಡಿರೋದನ್ನ ಸೀನ ಗಮನಿಸಿದ.

‘ಯಾಕೆ ಕೆಂಚ ಒಂಥರಾ ಇದ್ಯಲ್ಲ?’

‘ಏನಿಲ್ಲ. ನಂಜಿ ಜೊತೆ ನನ್ನ ಸಂಬಂಧ ಯಾಕೋ ಸರಿಯಿಲ್ಲ’

‘ಯಾಕೆ, ಏನಾಯ್ತು?’

‘ಮೊನ್ನೆ ಯಾವತ್ತೂ ಕೇಳದಿರೋ ಪ್ರಶ್ನೆ ಕೇಳಿಬಿಟ್ಳು... ನಾನು ದಪ್ಪಕ್ಕಾಗಿ ನನಗೆ ವಯಸ್ಸಾಗಿ ಮೈಕೈಯೆಲ್ಲ ಸುಕ್ಕುಸುಕ್ಕಾದರೂ ನನ್ನ ನೀವು ಪ್ರೀತಿಸ್ತೀರಾ... ಅಂತ’

‘ಅದಕ್ಕೇನಂತೆ, ಹೂಂ ಅಂದರಾಯಿತು’ ಅಂತ ಸೀನ ಬಾಯಿ ಹಾಕಿದ.

‘ಹೌದಪ್ಪಾ, ನೀನು ಹೇಳೋದು ಸರಿ. ಆದ್ರೆ ನಾನು "ಹೂಂ, ಪ್ರೀತಿಸ್ತಾ ಇದೀನಲ್ಲ?" ಅಂದುಬಿಟ್ಟೆ...’ ಅಂದಾಗ ಸೀನ ತಲೆ ಚೆಚ್ಚಿಕೊಂಡ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: