ಜನ ನೋಡಿ ನಗಲ್ವಾ?

ಕೆಂಚ ವರ್ಷಗಟ್ಲೆಯಿಂದ ಕಾರ್ ಕೊಂಡ್ಕೊಳಕ್ಕೆ ಅಂತ ದುಡ್ಡು ಕೂಡಿಹಾಕ್ತಿದ್ದ.

ಕಾರಿಗೆ ಬೇಕಾದಷ್ಟು ದುಡ್ಡು ಆಗ್ತಿದ್ದಂಗೇ ಕಾರ್ ತೊಗೊಳೋ ಬದಲು ಹೋಗಿ ಒಂದು ಎಮ್ಮೆ ಕೊಂಡುಕೊಂಡುಬಿಟ್ಟ.

ಹೆಂಡ್ತಿ ನಂಜಿಗೆ ಆಶ್ಚರ್ಯ ಆಗಿ ಕೇಳ್ತಾಳೆ - ‘ಅಲ್ಲ ರೀ, ಇಷ್ಟು ದಿನ ಕಾರು ಕಾರು ಅಂತ ಕನಸು ಕಾಣ್ತಿದ್ರಿ, ಈಗ ಎಮ್ಮೆ ಕೊಂಡ್ಕೊಂಡಿದೀರಲ್ಲ, ಅದನ್ನ ಓಡಿಸಿಕೊಂಡು ಪ್ಯಾಟೆಗೆ ಹೋದ್ರೆ ಜನ ನೋಡಿ ನಗಲ್ವಾ?’

ಅದಕ್ಕೆ ಕೆಂಚ ಥಟ್ ಅಂತ ಉತ್ತರ ಕೊಡ್ತಾನೆ - ‘ಅಲ್ಲವೇ, ಮಾರುತಿ ಕಾರಿಂದ ಹಾಲು ಕರಿಯಕ್ಕೆ ಹೋದ್ರೆ ಇನ್ನೂ ಜಾಸ್ತಿ ನಗಲ್ವಾ?’

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: