ಯಾರು ಜಾಸ್ತಿ ಒಡ್ಡರು?

ಒಬ್ಬ ತಮಿಳ, ಒಬ್ಬ ಮಲೆಯಾಳಿ ಮತ್ತೆ ನಮ್ಮ ಕೆಂಚ ಆಸ್ಪತ್ರೇಲಿ ಮಾತಾಡ್ತಾ ಇರ್ತಾರೆ. ವಿಷಯ: ಯಾರು ಎಲ್ಲರಿಗಿಂತ ಜಾಸ್ತಿ ಒಡ್ಡರು?

ತಮಿಳ ಹೇಳ್ತಾನೆ: ‘ಎಲ್ಲರಿಗಿಂತ ಒಡ್ಡ ನಾನೇ. ಯಾಕೆ ಗೊತ್ತಾ? ಇವತ್ತು ಬೆಳಗ್ಗೆ ಫುಟ್ಪಾತ್ ಮೇಲೆ ಕಾರ್ ಹತ್ತಿಸಿ ಒಂದು ಕಾಂಪೌಂಡಿಗೆ ಡಿಕ್ಕಿ ಹೊಡೆದುಬಿಟ್ಟೆ. ಕಾರು ಗುಜರಿಗೆ ಹೋಗಿದ್ದು ಅಷ್ಟೇ ಅಲ್ಲ, ನಾನು ಮೂರು ತಿಂಗಳು ಕತ್ತಿಗೆ ಈ ಪಟ್ಟಿ ಹಾಕೋಬೇಕು ಅಂತ ಡಾಕ್ಟರ್ ಹೇಳಿದಾರೆ’.

ಮಲೆಯಾಳಿ ಹೇಳ್ತಾನೆ: ‘ಏ ಅದೇನು ಮಹಾ? ಇವತ್ತು ಬೆಳಗ್ಗೆ ಸಿಗ್ನಲ್ಲಲ್ಲಿ ಕೆಂಪು ದೀಪ ಇದ್ದರೂ ನುಗ್ಗಿ ಒಂದು ವ್ಯಾನಿಗೆ ಡಿಕ್ಕಿ ಹೊಡೆದೆ. ಕಾರು ಚಿಂದಿ ಚಿತ್ರಾನ್ನ ಆಗಿದೆ, ಮತ್ತೆ ನನ್ನ ಹೆಗಲು ಮುರಿದಿದೆ.’

ಕಡೆಗೆ ಕೆಂಚ ಹೇಳ್ತಾನೆ: ‘ಇದೆಲ್ಲ ಏನೂ ಇಲ್ಲ ಕಣ್ರಪ್ಪ. ಇವತ್ತು ಬೆಳಗ್ಗೆ ಸ್ವಲ್ಪ ಬೇಗ ಟರ್ನ್ ಮಾಡಿದಾಗ ಕಂಟ್ರೋಲ್ ತಪ್ಪಿ ಹೋಗಿ ಲೈಟ್ ಕಂಬಕ್ಕೆ ಎಟ್ಟಿ ಎರಡು ಕಾಲೂ ಮುರಿದು ಹೋಗಿದೆ.’

ಆಗ ತಮಿಳ ಕೇಳಿದ: ‘ಓಹೋ ನೀನು ಪಂಟ ಕಣಪ್ಪ! ಅಂದಹಾಗೆ ನಿನ್ನ ಕಾರಿಗೆ ಏನಾಯಿತು?’

‘ಕಾರಾ? ಯಾವ ಕಾರು? ನಾನು ನಡ್ಕೊಂಡ್ ಹೋಗ್ತಿದ್ದೆ.’

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: