ಎಂಟನೇ ಮೀನು

ಒಂದ್ ದಿನ ಕೆಂಚ ಹೋಟೆಲ್ಗೆ ಹೋದನಂತೆ. ಜೋರು ಮಳೆ.

ಬಾಗಿಲಲ್ಲಿ ಒಬ್ಬ ಮುದುಕ ಕೂತುಕೊಂಡು ಬೀದಿಯಲ್ಲಿರೋ ಹಳ್ಳದಲ್ಲಿ ಕೈ ಆಡಿಸ್ತಾ ಇದ್ದನಂತೆ.

ಕೆಂಚ ‘ಏನ್ ತಾತಾ, ಏನ್ ಮಾಡ್ತಿದ್ಯಾ?’ ಅಂದನಂತೆ.

ಅದಕ್ಕೆ ಮುದುಕ ‘ನಾನು ಬಡವಾಪ್ಪಾ. ಮೀನು ಹಿಡೀತಿದೀನಿ’ ಅಂದನಂತೆ.

ಕೆಂಚನಿಗೆ ಅಯ್ಯೋ ಪಾಪ ಅನ್ನಿಸಿ ಒಳಗೆ ಕರ್ಕೊಂಡು ಹೋಗಿ ಒಂದು ಮಸಾಲೆ ದೋಸೆ ಕೊಡಿಸಿ ತಾನೂ ಒಂದು ತೊಗೊಂಡನಂತೆ.

ಇಬ್ಬರೂ ತಿನ್ನಕ್ಕೆ ಕೂತ್ಕೊಂಡಾಗ ಕೆಂಚ ಕೇಳಿದನಂತೆ - ‘ಎಷ್ಟು ಮೀನು ಹಿಡಿದಿ ತಾತಾ?’

ಅದಕ್ಕೆ ತಾತ ‘ಎಂಟು. ನೀನೇ ಎಂಟನೆಯವನು’ ಅಂದನಂತೆ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: