ಮೀನು ಹಿಡೀತಿದಾರೆ

ಚೋಳರ ರಾಜನಿಗೆ ಕನ್ನಡಿಗರು ತನ್ನ ಪ್ರಜೆಗಳ್ನ ಪೆದ್ದರು ಅಂತ ಆಡಿಕೊಳ್ಳೋದು ಕೇಳಿ ಕೇಳಿ ಸಾಕಾಗಿತ್ತಂತೆ.

ಅದಕ್ಕೆ ಪಕ್ಕದ ಚಾಲುಕ್ಯರ ರಾಜನೊಬ್ಬನ ಹತ್ತಿರ ಬಂದು ‘ನಮ್ಮಿಬ್ಬರ ನಡುವೆ ಸಂಬಂಧ ಚೆನ್ನಾಗಿರಬೇಕಾದರೆ ಕನ್ನಡಿಗರು ಏನಾದರೂ ಪೆದ್ದ ಕೆಲಸ ಮಾಡೋಹಾಗೆ ನೋಡಿಕೊಳ್ಳಿ. ಅದನ್ನ ನೋಡಿ ನನ್ನ ಪ್ರಜೆಗಳು ಆಡಿಕೊಳ್ಳಬೇಕು. ಆಗ ಎಲ್ಲಾ ಸರಿ ಹೋಗುತ್ತೆ’ ಅಂದನಂತೆ.

ಚಾಲುಕ್ಯನಿಗೆ ಒಳ್ಳೇ ಸಂಬಂಧ ಬೇಕಿತ್ತು. ಅದಕ್ಕೆ ‘ನಾವು ರಾಜಾಸ್ತಾನದ ಮರುಭೂಮಿಗೆ ಹೋಗಿ ಒಂದು ಅಣೆಕಟ್ಟು ಕಟ್ಟಿದರೆ ಹೇಗೆ?’ ಅಂದನಂತೆ. ಚೋಳ ಒಪ್ಪಿಗೆ ಕೊಟ್ಟ ನಾಲ್ಕು ತಿಂಗಳಲ್ಲಿ ಕನ್ನಡಿಗರು ರಾಜಾಸ್ತಾನದ ಮೇಲೆ ದಾಳಿ ಮಾಡಿ, ಗೆದ್ದು, ಮರುಭೂಮೀಲಿ ಒಂದು ಅಣೆಕಟ್ಟು ಕಟ್ಟಿದರಂತೆ.

ಆಗ ಇಡೀ ಪ್ರಪಂಚವೇ ಕನ್ನಡಿಗರ ಪೆದ್ದತನ ನೋಡಿ ಆಡಿಕೊಳ್ಳಕ್ಕೆ ಶುರು ಮಾಡಿತಂತೆ.

ಇದರಿಂದ ಚೋಳನಿಗೆ ಬಹಳ ಖುಷಿಯಾಗಿ, ‘ಹ ಹ ಹ! ಸಕ್ಕತ್ ತಮಾಷೆ ಆಯಿತು. ಸರಿ, ಈಗ ಆ ಅಣೆಕಟ್ಟು ಉರುಳಿಸಿ ಬಿಡಿ’ ಅಂದನಂತೆ.

ಅದಕ್ಕೆ ಚಾಲುಕ್ಯ ಹೇಳಿದನಂತೆ: ‘ಆಗಲ್ಲ. ಅದರ ಮೇಲೆ ಹತ್ತಿ ತಮಿಳರು ಮೀನು ಹಿಡೀತಿದಾರೆ’.

 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: