ಎಷ್ಟು ಕುರಿ?

ಒಬ್ಬ ತಮಿಳ ನಂದಿಬೆಟ್ಟದ ಹತ್ತಿರ ಬಯಲಲ್ಲಿ ನಡ್ಕೊಂಡು ಹೋಗ್ತಿದ್ದನಂತೆ. ದೂರದಲ್ಲಿ ಒಂದು ಕುರಿ ಮಂದೆ ಕಾಣಿಸ್ತಂತೆ.

ಅವನ ಕಣ್ಣು ಚುರುಕು ನೋಡಿ, ಒಂದೇ ನಿಮಿಷಕ್ಕೆ ಒಟ್ಟು 64 ಕುರಿ ಇದೆ ಅಂತ ಏಣಿಸಿ ಕುರುಬನ ಹತ್ತಿರ ಬಂದನಂತೆ. ಅವನು ಕನ್ನಡಿಗ.

‘ನಿನ್ನ ಹತ್ರ ಎಷ್ಟು ಕುರಿ ಇದೆ ಅಂತ ಹೇಳಿದ್ರೆ ನಂಗೆ ಒಂದು ಮಡೀಕೊಳಕ್ಕೆ ಕೊಡ್ತೀಯಾ?’ ಅಂದನಂತೆ.

ಕುರುಬ ‘ಖಂಡಿತ ಕೊಡ್ತೀನಿ. ನಿಮ್ಮಪ್ಪರಾಣೆ ನಿಂಗೆ ಹೇಳಕ್ಕಾಗಲ್ಲ’ ಅಂದನಂತೆ.

ತಮಿಳ ‘64' ಅಂದಾಗ ಕುರುಬ ದಂಗು. ‘ಪರವಾಗಿಲ್ಲ ಕಣ್ಲಾ ನೀನು, ನಾನೇನೋ ಅನ್ಕೊಂಡಿದ್ದೆ! ಸರಿ, ಒಂದು ಎತ್ತುಕೋ’ ಅಂದನಂತೆ.

ತಮಿಳ ಖುಷಿಯಿಂದ ತನ್ನ ಬಹುಮಾನ ಎತ್ತುಕೊಂಡು ನಗುನಗ್ತಾ ಹೊರಟಾಗ ಕುರುಬ ಕೇಳಿದನಂತೆ: ‘ಈಗ ನೀನು ಎಲ್ಲಿಂದ ಬಂದಿರೋನು ಅಂತ ಹೇಳಿದ್ರೆ ನನ್ನ ನಾಯಿ ವಾಪಸ್ ಕೊಡ್ತ್ಯಾ?’

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: