ಜಿರಾಫೆಯಿಂದ ನೀವು ಈ 10 ವಿಷಯ ಕಲಿತರೆ ರಾತ್ರೋರಾತ್ರಿ ಲೀಡರ್ ಆಗೋಗ್ತೀರಿ

ನೋಡಬೇಕು, ಕಲೀಬೇಕು

ನಮ್ಗೆ ಕಲಿತುಕೊಳ್ಳೋ ಬುದ್ಧಿ ಇದ್ರೆ ಯಾರ್ ಹತ್ರ ಬೇಕಾದ್ರೂ ಕಲಿಬಹುದು. ಹಂಗಂತ ಪ್ರಾಣಿಗಳಿಂದಾನೂ ಕಲಿಯಕ್ಕಾಗುತ್ತೆ ಅಂದ್ರೆ ನಂಬ್ತೀರಾ? ಉದಾಹರಣೆಗೆ ಇಲ್ಲಿ ನೋಡಿ, ಕಲೀತೀನಿ ಅನ್ನೋವ್ರಿಗೆ ಒಂದು ಜಿರಾಫೆ ಎಷ್ಟು ಒಳ್ಳೆ ಪಾಠ ಕಲ್ಸುತ್ತೆ ಅಂತ… ಕಲಿಸುತ್ತೆ ಅಂದ್ರೆ ಅದೇ ಬಂದು ಹೇಳ್ಕೊಡಲ್ಲ… ಅದನ್ನ ಚೆನ್ನಾಗಿ ಅರ್ಥ ಮಾಡ್ಕೊಂಡ್ರೆ ಅದರ ಗುಣಗಳು ಏನು ಅಂತ ಗೊತ್ತಾಗುತ್ತೆ… ಈ ಗುಣಗಳ್ನೆಲ್ಲ ಮೈಗೂಡಿಸಿಕೊಂಡರೆ ಮನುಷ್ಯ ರಾತ್ರೋರಾತ್ರಿ ನಮ್ಮ ನಾ.ಮೂ. ತರಹ ನಾಯಕತ್ವದ ಗುಣಗಳ್ನ ಪಡೋಬೋದು…

1. ನೀವು ಎಲ್ಲರಿಗಿಂತ ಹೇಗೆ ಬೇರೆ ಅನ್ನೋದನ್ನ ತೋರುಸ್ಕೋಬೇಕು

ಈ ಜಗತ್ತಲ್ಲಿ ಸರ್ವೈವ್ ಆಗ್ಬೇಕು ಅಂದ್ರೆ ಎಲ್ಲರ ತರ ಇದ್ರೆ ಆಗಲ್ಲಾರಿ. ಏನಾದ್ರೂ ಬೇರೆ ತರದ್ದು ಮಾಡ್ಬೇಕು. ಕತ್ತು ಉದ್ದ ಇದ್ದು ಜಿರಾಫೆ ಹೇಗೆ ಎಲ್ಲರ್‌ಗಿಂತ ಬೇರೆ ತರ ಕಾಣ್ಸುತ್ತೋ ಹಾಗೆ ಒಂದು ಟೀಮ್ ಅಲ್ಲಿದ್ದಾಗ ನಾವೂ ಸ್ವಲ್ಪ ಲೀಡರ್‌ಶಿಪ್ ಗುಣ ಬೆಳ್ಸಿ ಕೊಳ್ಳ್ಬೇಕು. ನಮ್ಮ ಸ್ಟ್ರೆಂತ್ ನಾ ಎಲ್ಲರ್ಗೂ ಗೊತ್ತಾಗೋ ಹಾಗೆ ಮಾಡ್ಕೊಳ್ಳ್ಬೇಕು.

2. ಗುಂಪಲ್ಲಿ ಗೋವಿಂದಾ ಅಂದ್ರೆ ನಡೆಯಲ್ಲ

ನಮ್ಮ ಜೀವನದಲ್ಲೂ ಹಾಗೇ. ಎಲ್ಲರ್‌ಗಿಂತ ಮೇಲೆ ಹೋಗೋ ಚಾನ್ಸ್ ನಮಗೆ ತುಂಬಾ ಸಲ ಸಿಗುತ್ತೆ. ಆದ್ರೆ ಅದನ್ನ ಹೇಗೆ ಬಳಸಿ ಕೊಳ್ಳೋದು ಅನ್ನೋದು ಗೊತ್ತಿರ್ಬೇಕು.  ನಾವು ಬೇರೆಯವ್ರಿಗಿಂತ ಹೇಗೆ ಡಿಫರೆಂಟ್ ಅನ್ನೋದನ್ನ ತಿಳ್ಕೊಂಡು ಬೇಕಾದಾಗ ಅದನ್ನ ಉಪಯೋಗ ಮಾಡ್ಕೊಳ್ಳ್ಬೇಕು.

3. ಎಷ್ಟು ಅಡ್ಜಸ್ಟ್ ಮಾಡ್ಕೋಬೇಕೋ ಅಷ್ಟು ಮಾಡ್ಕೋಬೇಕು

ಜಿರಾಫೆಗಳು ತಮ್ಮ ಸುತ್ತಮುತ್ತಲ ವಾತಾವರಣಕ್ಕೆ ಚೆನ್ನಾಗಿ ಒಗ್ಗಿಕೊಳ್ತವೆ. ಸುಮ್-ಸುಮ್ನೆ ಜಗಳ ಮಾಡ್ಕೊಳಲ್ಲ. ನಾವೂ ಅಷ್ಟೇ, ಪ್ರತಿಯೊಂದು ಕಡೇನೂ ಎಲ್ಲಾ ಬದಲಾಗಬೇಕು ಅಂತ ಕೂತಿದ್ರೆ ನಡೆಯಲ್ಲ.

4. ದೂರದೃಷ್ಟಿ ಇರ್ಬೇಕು

ಜಿರಾಫೆನ್ನಾ ನೋಡಿಲ್ವಾ. ಎಷ್ಟು ಮೇಲಿಂದ ಕೆಳ್ಗಡೆ ನೋಡೋ ಶಕ್ತಿ ಇದೆ ಅದಕ್ಕೆ. ಇದ್ರ ಅರ್ಥ ಒಂದು ವಿಷ್ಯಾನ್ನಾ ಬೇರೆ ಬೇರೆ ಸ್ಥಾನದಿಂದಾ ನೋಡಿದಾಗ ಬೇರೆ ಬೇರೆ ಅರ್ಥಾ ಇರುತ್ತೆ. ಅದ್ರಿಂದಾ ಹೋರ್ಗಡೆ ಬಂದು ನೋಡೋ ಶಕ್ತಿ ನಮ್ಗೆಇರ್ಬೇಕು ಅಂತಾ.

5. ನಮ್ಮ ಪ್ರತಿಭೆ ಮತ್ತು ಕೌಶಲ್ಯಾನೇ ಯಶಸ್ಸಿನ ಒಳಗುಟ್ಟು

ಜಿರಾಫೆಗಳಿಗೆ ಬೇರೆ ಪ್ರಾಣಿಗಳಿಗಿಂತ ಬುದ್ಧಿ ಜಾಸ್ತಿ ಜೊತೆಗೆ ಕೌಶಲ್ಯಾನೂ ಜಾಸ್ತಿನೇ. ಆದ್ರೆ ಇದೆ ಅಂತ ಸುಮ್ನೆ ಕೂತ್ಕೊಳ್ಳದೇ ಅದನ್ನ ಸಮಯಕ್ಕೆ ತಕ್ಕಹಾಗೆ ಉಪಯೋಗಾ ಮಾಡ್ಕೊಳ್ಳ್ಬೇಕು.

6. ಗಾತ್ರಕ್ಕೂ ಶಕ್ತಿಗೂ ವ್ಯತ್ಯಾಸ ಗೊತ್ತಿರಬೇಕು

ಜಿರಾಫೆ, ಸೈಜ್ ದೊಡ್ಡದಿದೆ ಅಂತ ತನ್ನ ಶಕ್ತಿಗೆ ಮಿತಿಯಿಲ್ಲ ಅಂದುಕೊಳಲ್ಲ. ಗಾತ್ರ ಯಾವ್ಡಿದ್ರೇನು ಶಕ್ತಿ ಮುಖ್ಯ ಅನ್ನೋದು ಪಾಲಿಸಿ. ಸೂಪರ್ ಅಲ್ವಾ?

7. ಕೆಲ್ಸ ಮಾಡಾದ್ಮೇಲೆ ದೇಹಕ್ಕೂ ಮನಸ್ಸಿಗೂ ರೆಸ್ಟ್ ಕೊಡ್ಬೇಕು

ಕತ್ತೆ ತರ ದುಡಿಯೋದು ಒಂದೇ ಅಲ್ರೀ. ನಮ್ಮ ದೇಹಕ್ಕೆ ರೆಸ್ಟ್ ಮುಖ್ಯ. ಜೊತೆಗೆ ಮನಸ್ಸೂ ಕೂಡ ರಿಲ್ಯಾಕ್ಸ್ ಆಗ್ಬೇಕು. ಕೆಲ್ಸಗಳನ್ನ ಶೇರ್ ಮಾಡ್ಕೊಂಡು ಮಾಡಿ ಮುಗ್ಸಿ ಆರಾಮಾಗಿ ವಿಶ್ರಾಂತಿ ತಗೊಳ್ಳ್ಬೇಕು. ಹೀಗೆ ಮಾಡಿದ್ರೆ ಮತ್ತೆ ಕೆಲ್ಸ ಮಾಡಕ್ಕೆ ಶಕ್ತಿ ಮತ್ತೆ ಹುಮ್ಮಸ್ಸು ಎರಡೂ ಬರುತ್ತೆ. ಏನಂತೀರಾ?

8. ಒಗ್ಗಟ್ಟಿನಲ್ಲಿ ಬಲವಿದೆ

ಈ ಮಾತನ್ನಾ ನಾವು ಅರ್ಥಾ ಮಾಡ್ಕೊಳ್ಳದೆ ಇದ್ರೂ ಜಿರಾಫೆ ಗಳು ಸರಿಯಾಗಿ ತಿಳ್ಕೊಂಡಿವೆ ಗೊತ್ತಾ.? ಗುಂಪಲ್ಲಿ ಕೆಲ್ಸ ಮಾಡೋದ್ರಿಂದ  ಒಂದು ಕೆಲ್ಸಾನ್ನಾ ಬೇಗ ಮಾಡಿ ಮುಗ್ಸೋದರ ಜೊತೆಗೆ ನಮ್ಮ ಬುದ್ಧಿನ್ನೂ ಕೂಡ ಬೆಳ್ಸಿ ಕೊಳ್ಳ್ಬಹುದು.

9. ಬದಲಾವಣೆ ಜಗದ ನಿಯಮ

ಹೌದು. ಬೇರೆ ಬೇರೆ ರೀತಿ ಜನರೊಟ್ಟಿಗೆ ಕೆಲ್ಸ ಮಾಡಿದ್ರೆ ನಮ್ಮ ಅನುಭವನ್ನ ವಿಸ್ತರಿಸಿಕೊಳ್ಳಬಹುದಂತೆ. ಇದನ್ನ ಜಿರಾಫೆಗಳೂ ಕೂಡ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾವಂತೆ. ಹೊಸ ಹೊಸ ಜನರ ಜೊತೆ ಕೆಲ್ಸ ಮಾಡಿದಾಗ ಹೊಸ ಹೊಸ ಐಡಿಯಾಗಳೂ ಸಿಗ್ತಾವಂತೆ. ಇದೆಲ್ಲ ಯಾರಿಗೆ ಬೇಡ ನೀವೇ ಹೇಳಿ?

10. ಎಲ್ಲಕ್ಕಿಂತ ನಿಷ್ಠೆ ಮುಖ್ಯ

ಜಿರಾಫೆಗಳಿಂದ ಕಲಿಯೋ ಇನ್ನೊಂದು ಪಾಠ ಅಂದ್ರೆ ನಿಷ್ಠೆ. ನಾವು ಒಳ್ಳೆ ಸ್ಥಾನಕ್ಕೆ ಹೋಗೋದಿಕೆ ಯಾರು ಹೆಲ್ಪ್ ಮಾಡ್ತಾರೋ ಅವ್ರಿಗೆ ಮತ್ತೆ ನಮ್ಮ ಜೊತೆ ಕೆಲ್ಸ ಮಾಡೋವ್ರಿಗೆ ಆದ್ರೂ ನಾವು ನಿಷ್ಠಾವಂತರಾಗಿರ್ಬೇಕಂತೆ. ನಮ್ಮ ಕೇಳ್ಗಿರೋವ್ರು ಒಳ್ಳೆ ಕೆಲ್ಸ ಮಾಡಿದಾಗ, ಪ್ರಶಂಶೆ ಮಾಡ್ಬೇಕಂತೆ. ಅವ್ರ ಖುಷಿ ಆದ್ರೆ ನಮಗೂ ಒಳ್ಳೆದಲ್ವಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮಗೆ ರಾಮನ ಬಗ್ಗೆ ಎಷ್ಟು ಗೊತ್ತು ಅಂತ ಅರ್ಥ ಆಗಕ್ಕೆ ಈ ಚಿಕ್ಕ ಕ್ವಿಜ಼್‌ ಸಹಾಯ ಮಾಡುತ್ತೆ

ರಾಮಾಪಹರಣ ಕೇಳಿದೀರಿ ತಾನೆ?

ರಾಮನ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ! ಆದರೆ ರಾಮನ ಬಗ್ಗೆ ಎಲ್ಲವೂ ಗೊತ್ತಿದೆ ಅನ್ನೋರ ಸಂಖ್ಯೆ ಪ್ರಾಯಶಃ ಒಂದು. ಹೌದು, ಒಬ್ಬನಿಗೇ ಗೊತ್ತಿರೋದು ಎಲ್ಲಾ… ಅದು ವಾಲ್ಮೀಕಿಗೆ ಮಾತ್ರ! ಆದರೆ ಕಳಗಿರೋ ಕೆಲವು ಪ್ರಶ್ನೆಗಳಿಗೆ ನೀವು ಉತ್ತರ ಕೊಡ್ತಾ ಹೋಗಿ, ಆಗ ನಿಮಗೆ ರಾಮನ ಬಗ್ಗೆ ಎಷ್ಟು ಗೊತ್ತಿದೆ ಅಂತ ನಿಮಗೇ ಗೊತ್ತಾಗುತ್ತೆ.

1. ರಾಮನಿಗೆ ರಾಮ ಅಂತ ಹೆಸರು ಕೊಟ್ಟಿದ್ದು ಯಾರು?

2. ಯಾವುದೇ ಆಯುಧ ಇಲ್ಲದೆ ರಾಮನ್ನ ಯುದ್ಧದಲ್ಲಿ ಸೋಲಿಸಿದ ವ್ಯಕ್ತಿ ಯಾರು?

3. ರಾಮ ವನವಾಸಕ್ಕೆ ಹೋದಾಗ ಅವನಿಗೆ ಎಷ್ಟು ವರ್ಷ?

4. ತನ್ನ ಅವತಾರದ ಕೊನೆಯಲ್ಲಿ ರಾಮ ದೇಹವನ್ನ ಎಲ್ಲಿ ಮತ್ತೆ ಹೇಗೆ ಬಿಟ್ಟು ಹೋಗ್ತಾನೆ?

5. ರಾಮ, ಸೀತೆ ಮತ್ತು ಲಕ್ಷ್ಮಣರು ವನವಾಸ ಮಾಡಿದ ವನ ಯಾವುದು?

6. ಸೀತಾಪಹರಣ ಕೇಳಿದೀರಿ, ಆದರೆ ರಾಮಾಪಹರಣ ಕೇಳಿದೀರಾ? ಅಪಹರಿಸಿದ ವ್ಯಕ್ತಿ ಯಾರು?

7. ರಾಮಸೇತು ಎಷ್ಟು ಉದ್ದ ಇತ್ತು? ಅದನ್ನ ಕಟ್ಟಕ್ಕೆ ಎಷ್ಟು ದಿನ ತೊಗೋತು?

8. ರಾವಣನ ಮಾಯಾವಿ ಶಕ್ತಿಗಳ ಬಗ್ಗೆ ರಾಮನಿಗೆ ತಿಳಿಸಿದ್ದು ಯಾರು?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: