ಇವತ್ತು ಇನ್ನೂ ಚೆನ್ನಾಗ್ ಕಾಣಬೇಕು ಅನ್ಕೊಂಡಿರೋ ಹುಡುಗೀರಿಗೆ 25 ಉಪಾಯಗಳು

ಯಾರಿಗೆ ತಾನೆ ಆಸೆ ಇರಲ್ಲ?

ಚೆನ್ನಾಗಿ ಕಾಣಬೇಕು, ಮೇಕಪ್ ಮಾಡ್ಕೋಬೇಕು ಇದು ಎಲ್ಲಾ ಹುಡುಗೀರಿಗೆ ಬೇಕಾಗಿರೋದೇ ತಾನೇ? ಇಲ್ಲಿ ಕೊಟ್ಟಿರೋ ಉಪಾಯಗಳ್ನ ಓದ್ಕೊಂಡು ಇನ್ನೂ ಚಂದ ಮೇಕಪ್ ಮಾಡ್ಕೊಳ್ಳೋದು ಕಲಿತುಕೊಳ್ಳಿ.

1. ನೈಲ್ ಪಾಲಿಶ್ ಬೇಗ ಒಣಗಬೇಕು ಅಂದರೆ ನಿಮ್ಮ ಕೈಗಳನ್ನ ತಣ್ಣೀರಲ್ಲಿ ಅದ್ದಿಡಿ. ಐಸ್ ಹಾಕಿದ ನೀರಾದರೆ ಇನ್ನೂ ಬೇಗ ಒಣಗುತ್ತೆ ನೋಡಿ.

2.  ನೈಲ್ ಪಾಲಿಶ್ ಹಚ್ಚೋಕೆ ಮುಂಚೆ ಆಲಿವ್ ಆಯಿಲ್ ನಲ್ಲಿ ಮಸಾಜ್ ಮಾಡಿದರೆ ನಿಮ್ಮ ಚರ್ಮಕ್ಕೆ ನೈಲ್ ಪಾಲಿಶ್ ಅಂಟಲ್ಲ. ಹಚ್ಚಿದ್ದು ಉಗುರಿಗೆ ಮಾತ್ರ.

3.  ಹಳೆ ನೈಲ್ ಪಾಲಿಶ್ ಹಾಳಾಗಿ ಮತ್ತೆ ಹಚ್ಚೋ ಸಮಯ ಇಲ್ಲದಿದ್ದರೆ ಸ್ವಲ್ಪ ಗ್ಲಿಟ್ಟರ್ಸ್ ಬಳಸೋ ಅಭ್ಯಾಸ ಮಾಡಿಕೊಳ್ಳಿ.

4. ನೈಲ್ ಪಾಲಿಶ್ ಹಚ್ಚೋವಾಗ ನಿಮ್ಮ ಉಗುರಿಗೆ ಅಂಟಿಸೋ ಸ್ಟಿಕ್ಕರ್ ಉಗುರಿಗಿಂತ ದೊಡ್ಡದಿರಲಿ

5. ಗ್ಲಿಟರ್ ರಿಮೂ ಮಾಡ್ಬೇಕಾದ್ರೆ ರಿಮೂವರ್ನಲ್ಲಿ ಹತ್ತಿ ಅದ್ದಿ ಉಗುರಿನ ಮೇಲಿಟ್ಟು ಸಿಲ್ವರ್ ಪೇಪರ್ ಸುತ್ತಿ, ಸಣ್ಣ ಸಣ್ಣದ್ದೂ ಕ್ಲೀನ್ ಆಗತ್ತೆ

6. ಸ್ನಾನ ಆದಮೇಲೆ ಕೂದಲು ಸುಕ್ಕುಗಟ್ಟದೇ ಇರೋಕೆ ಕಂಡಿಷನರ್ ಹಚ್ಚಿ ತಾನಾಗೇ ಒಣಗೋಕೆ ಬಿಡಿ

7. ಹೇರ್ ಡ್ರೈಯರ್ ಬಳಸೋವಾಗ ಕತ್ತು ಸ್ವಲ್ಪ ಬಗ್ಗಿಸಿ. ಆಗ ಕೂದಲಿನ ಬುಡ ಕೂಡ ಒಣಗುತ್ತೆ

8. ಇನ್ನು ಜಡೆ ಹಾಕೋ ವಾಗ ಹೇರ್ ಜೆಲ್ ಬಳಸಿ, ನೀಟಾಗಿ ಬರತ್ತೆ.

9. ಇನ್ನು ಸುಕ್ಕಾಗೋ ಹಟಮಾರೀ ಕೂದಲು ನಿಮ್ಮದಾದರೆ ತುದಿಯಿಂದ ಸಿಕ್ಕು ಬಿಡಿಸೋಕೆ ಶುರು ಮಾಡಿ ಬುಡದತ್ತ ಬಾಚಿ ಕೂದಲು ಹೆಚ್ಚು ಹಾಳಾಗಲ್ಲ

10. ಟವಲ್ನಲ್ಲಿ ಕೂದಲನ್ನ ತುಂಬಾ ಒರಟಾಗಿ ಒರೆಸೋ ಅಭ್ಯಾಸದಿಂದ ಕೂದಲು ಹೆಚ್ಚು ಉದುರುತ್ತೆ, ಬಿಟ್ಟುಬಿಡಿ

11. ಕೂದಲು ಎಣ್ಣೆಣ್ಣೆಯಾಗಿ ಕಾಣ್ಬಾರ್ದು ಅಂದ್ರೆ ಡ್ರೈ ಶ್ಯಾಂಪೂ ಅಥವಾ ಬೇಬಿ ಪೌಡರ್ ಬಳಸಿ

12.  ನಿಮ್ಮ ಐ ಲೈನರ್ ಸರಿಯಾಗಿ ಬರದಿದ್ದರೆ ಪರವಾಗಿಲ್ಲ ಒಂದೆರಡು ಲೈನ್ ಹಚ್ಚಿ ಅವನ್ನ ಒಂದುಗೂಡಿಸಿ

13.  ಸಾಫ್ಟ್ ಲಿಪ್ ಲೈನರ್ ಶಾರ್ಪ್ ಮಾಡ್ಕೊಳ್ಳೊ ಮುಂಚೆ ಸ್ವಲ್ಪ ಹೊತ್ತು ಫ್ರಿಡ್ಜ್ ನಲ್ಲಿಡಿ. ಆಗ ಟಿಪ್ ಗಟ್ಟಿಯಾಗತ್ತೆ, ನೀಟಾಗಿ ಮೆಂಡ್ ಆಗತ್ತೆ.

14. ಬೆಳಗ್ಗೆ ಸಂಜೆ ಎರಡೂ ಹೊತ್ತಿಗೆ ಸರಿಹೋಗೋ ಹಾಗೆ ಡಾರ್ಕ್ ಐ ಶ್ಯಾಡೋಗೆ ಲೈಟ್ ಐ ಶ್ಯಾಡೋ ಮಿಕ್ಸ್ ಮಾಡಿ ಬಳಸಿ

15. ಕೆನ್ನೆಗಳಿಗೆ ಬ್ಲಶ್ ಬಳಸೋದನ್ನ ಮರೀಬೇಡಿ

16. ಕಣ್ಣಿಗೆ ಹಚ್ಚಿದ ಮೇಕ್ ಅಪ್ ತಗೆಯೋಕೆ ಕೊಬ್ಬರಿ ಎಣ್ಣೆ ಬಳಸಿ

17. ಲಿಪ್ ಸ್ಟಿಕ್ ಹಚ್ಚಿದ ಹಾಗೇ ಬಹಳ ಹೊತ್ತು ಇರೋಕೆ ತುಟಿಗೆ ಮೊದಲು ಪೌಡರ್ ಹಚ್ಚಿ

18. ಮಸ್ಕರಾ ಹರಡಬಾರದು ಅಂದರೆ ಓಂದು ಕಾರ್ಡ್ ಹೀಗೆ ಇಟ್ಕೊಳಿ

19. ಬೇಸಿಗೇಲಿ ಮಾಯಿಶ್ಚುರೈಝರ್ ಹಚ್ಕೊಳಿ ಇಲ್ಲಂದ್ರೆ ಅಗಾಗ ತಣ್ಣೀರಲ್ಲಿ ತೊಳ್ಕೊಳಿ

20.ಕಣ್ಣಿನ ಸುತ್ತ ಬೇಗ ಸುಕ್ಕು ಬರ್ಬಾರ್ದು ಅಂದ್ರೆ ಜೆಲ್ ಹಚ್ಕೊಳಿ

21. ಬೆಳಗ್ಗೆ ಎದ್ದ ತಕ್ಷಣ ಕಣ್ಣಿಗೆ ತಣ್ಣಿರೆರೆಚಿ ಕಣ್ಣು ಕೆಳಗೆ ಐಸ್ ಕ್ಯೂಬ್ ಸವರಿದ್ರೆ ಕಣ್ಣೂತ ಕಮ್ಮಿ ಆಗಿ ಮುಖ ಫ್ರೆಶ್ ಕಾಣತ್ತೆ

22. ಮುಖಕ್ಕೆ ಐಸ್ ಮಸಾಜ್ ಮಾಡಿ, ಊತ ಇಲ್ಲದೇ ಹೋದರೆ ಮೊಡವಗಳೂ ಕಾಣಲ್ಲ

23. ಪಾದ ಮೃದುವಾಗಿರೋಕೆ ಹಳೇ ಫೇಸ್ ಕ್ರೀಂ ಕಾಲಿಗೆ ಹಚ್ಚಿ ಸಾಕ್ಸ್ ಹಾಕಿ ಮಲಗಿ

24. ಚರ್ಮ ಮೃದುವಾಗಿಸೋಕೆ ಸ್ನಾನಕ್ಕೆ ಮುಂಚೆ ಇಡೀ ದೇಹವನ್ನ ಬ್ರಷ್ ಮಾಡಿ, ಆಗ ರಕ್ತ ಸಂಚಾರ ಹೆಚ್ಚುತ್ತೆ

25. ಹುಬ್ಬು ಬೆಳೆಸೋಕೆ ಕೊಬ್ಬರಿ ಎಣ್ಣೆ ಜೊತೆ ಹರಳೆಣ್ಣೆ ದಿನ ರಾತ್ರಿ ಹಚ್ಚಿ

ಏನು ಸುಲಭ ತಾನೇ? ಬೇಕಾದಾಗಾ ಈ ಉಪಾಯ ಮಾಡ್ಬೋದು ತಾನೆ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮಗೆ ರಾಮನ ಬಗ್ಗೆ ಎಷ್ಟು ಗೊತ್ತು ಅಂತ ಅರ್ಥ ಆಗಕ್ಕೆ ಈ ಚಿಕ್ಕ ಕ್ವಿಜ಼್‌ ಸಹಾಯ ಮಾಡುತ್ತೆ

ರಾಮಾಪಹರಣ ಕೇಳಿದೀರಿ ತಾನೆ?

ರಾಮನ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ! ಆದರೆ ರಾಮನ ಬಗ್ಗೆ ಎಲ್ಲವೂ ಗೊತ್ತಿದೆ ಅನ್ನೋರ ಸಂಖ್ಯೆ ಪ್ರಾಯಶಃ ಒಂದು. ಹೌದು, ಒಬ್ಬನಿಗೇ ಗೊತ್ತಿರೋದು ಎಲ್ಲಾ… ಅದು ವಾಲ್ಮೀಕಿಗೆ ಮಾತ್ರ! ಆದರೆ ಕಳಗಿರೋ ಕೆಲವು ಪ್ರಶ್ನೆಗಳಿಗೆ ನೀವು ಉತ್ತರ ಕೊಡ್ತಾ ಹೋಗಿ, ಆಗ ನಿಮಗೆ ರಾಮನ ಬಗ್ಗೆ ಎಷ್ಟು ಗೊತ್ತಿದೆ ಅಂತ ನಿಮಗೇ ಗೊತ್ತಾಗುತ್ತೆ.

1. ರಾಮನಿಗೆ ರಾಮ ಅಂತ ಹೆಸರು ಕೊಟ್ಟಿದ್ದು ಯಾರು?

2. ಯಾವುದೇ ಆಯುಧ ಇಲ್ಲದೆ ರಾಮನ್ನ ಯುದ್ಧದಲ್ಲಿ ಸೋಲಿಸಿದ ವ್ಯಕ್ತಿ ಯಾರು?

3. ರಾಮ ವನವಾಸಕ್ಕೆ ಹೋದಾಗ ಅವನಿಗೆ ಎಷ್ಟು ವರ್ಷ?

4. ತನ್ನ ಅವತಾರದ ಕೊನೆಯಲ್ಲಿ ರಾಮ ದೇಹವನ್ನ ಎಲ್ಲಿ ಮತ್ತೆ ಹೇಗೆ ಬಿಟ್ಟು ಹೋಗ್ತಾನೆ?

5. ರಾಮ, ಸೀತೆ ಮತ್ತು ಲಕ್ಷ್ಮಣರು ವನವಾಸ ಮಾಡಿದ ವನ ಯಾವುದು?

6. ಸೀತಾಪಹರಣ ಕೇಳಿದೀರಿ, ಆದರೆ ರಾಮಾಪಹರಣ ಕೇಳಿದೀರಾ? ಅಪಹರಿಸಿದ ವ್ಯಕ್ತಿ ಯಾರು?

7. ರಾಮಸೇತು ಎಷ್ಟು ಉದ್ದ ಇತ್ತು? ಅದನ್ನ ಕಟ್ಟಕ್ಕೆ ಎಷ್ಟು ದಿನ ತೊಗೋತು?

8. ರಾವಣನ ಮಾಯಾವಿ ಶಕ್ತಿಗಳ ಬಗ್ಗೆ ರಾಮನಿಗೆ ತಿಳಿಸಿದ್ದು ಯಾರು?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: