ಹುಡುಗೀರು ಫೋಟೋನಲ್ಲಿ ಮಸ್ತಾಗ್ ಕಾಣಬೇಕು ಅಂದ್ರೆ ಈ 20ರಲ್ಲಿ ಒಂದ್ ಪೋಸ್ ಆರಿಸಿಕೊಳ್ಳಿ

ಯಾವ್ ಹೀರೋಯಿನ್ನಿಗೂ ಕಮ್ಮಿ ಇರಲ್ಲ

ನೆನ್ನೆ ಮೊನ್ನೆ ಒಂದು ಪೋಸ್ಟ್ ಹಾಕಿದ್ವಿ, ಗಂಡಸರು/ಹುಡುಗರು ಫೋಟೋ ತೆಗೆಸ್ಕೊಳ್ಳೊ ಮುಂಚೆ ಈ ಮಸ್ತ್ ಪೋಸ್ಗಳ ಬಗ್ಗೆ ಗೊತ್ತಿರ್ಲಿ ಅಂತ. ಹುಡ್ಗೀರೆಲ್ಲ ಒಂದೇ ಸಮನೆ ಬೈತಿದಾರೆ, ಯಾಕೆ ಅಂತ ಕೇಳುದ್ರೆ ಬರೀ ಹುಡುಗರಿಗೆ ಮಾತ್ರ ಬೇಕಾಗಿರೋ ಪೋಸ್ಟ್ ಹಾಕ್ತೀರ ಅಂತ ಗರಂ ಆಗ್ಬಿಡದ. ಹೆಣ್ಣು ಮಕ್ಕಳನ್ನ ಎದ್ರಾಕೊಳಕ್ಕೆ ಆಗತ್ತಾ? ಇಲ್ಲ, ಅದಕ್ಕೆ ಇವತ್ತು ಹೆಂಗಸರು/ಹುಡುಗಿಯರು ಫೋಟೋ ತೆಗೆಸ್ಕೊಳ್ಳೊ ಮುಂಚೆ ಈ 20 ಮಸ್ತ್ ಪೋಸ್ಗಳ ಬಗ್ಗೆ ಗೊತ್ತಿರ್ಲಿ ಅಂತ ಪೋಸ್ಟ್ ಬರ್ದಿದೀವಿ. ನೋಡಿ ತಿಳ್ಕೊಳಿ.

1. ಸುಮ್ನೆ ಹೀಗ್ ನಿಂತ್ಕೋಳಿ, ಭುಜ ಸ್ವಲ್ಪ ಮೇಲಕ್ಕೆತ್ತಿ, ಗದ್ದ ಕೆಳಗಿರ್ಲಿ ಮುಖ ಕ್ಯಾಮೆರಾ ನೋಡ್ಲಿ. ಸಣ್ಣಕ್ಕೂ ಕಾಣ್ತೀರ

2. ಸುಮ್ನೆ ನೆಟ್ಟಗೆ ಒಂದು ಕಾಲಿನ ಮೇಲೆ ಭಾರ ಹಾಕಿ S ಶೇಪಲ್ಲಿ ನಿಂತ್ಕೊಳಿ

3. ಹೀಗೆ ಯಾವ್ದಾದ್ರು ವಸ್ತುವಿನ ಮೇಲೆ ವಾಲ್ಕೊಂಡು ಫೋಟೋ ತೆಗುಸ್ಕೊಳಿ ಚೆನ್ನಾಗಿರತ್ತೆ 

4. ನಿಮಗೆ ಉದ್ದ ಕೂದ್ಲಿದ್ರೆ ಯಾರಾದ್ರೂ ಟಕ್ಕಂತ ಹೀಗ್ ಫೋಟೋ ತೆಗೀಲಿ

ಕ್ಯಾಂಡಿಡ್ ಫೋಟೋಗ್ರಫಿ...ಕೂದಲು ಹಾರೋ ಹಾಗೆ ತಲೆ ಅಲ್ಲಾಡಿಸಿದ್ರೆ ಸೂಪರಾಗಿ ಬರತ್ತೆ.

5. ಆರಾಮಾಗಿ ಹೀಗ್ ಕೂತ್ಕೊಂಡು ಫೋಟೋ ತೆಗುಸ್ಕೊಳಿ 

6. ಸೋಫಾ ಮೇಲೆ ಒರಗೊಂಡು ಪೋಸ್ ಕೊಡಿ 

7. ನೆಲದಮೇಲೆ ನಿಮಗೆ ಇಷ್ಟ ಬಂದಹಾಗೆ ಕೂತ್ಕೊಳಿ

8. ಸುಮ್ಮನೆ ಹೀಗೆ ಕೂತ್ಕೊಳಿ, ಎಲ್ಲಾದ್ರೂ ಸರಿ. ಹಾಸಿಗೇನೋ, ನೆಲಾನೋ ಒಟ್ಟು ಫೋಟೋ ಕಲಾತ್ಮಕವಾಗಿ ಕಾಣತ್ತೆ 

9. ಹೀಗೆ ಕೈ ಕಟ್ಟಿಕೊಂಡು ಪೋಸ್ ಕೊಡಿ ಸಾಕು, ಇದರ ಗಮ್ಮತ್ತು ನಿಮಗೆ ಗೊತ್ತು 

10. ಆರಾಮಾಗಿ ನಿಂತ್ಕೊಳಿ ಸಾಕು ಗೊಂಬೆ ಥರ ಕಾಣುಸ್ತೀರ

11. ಕಾಲ್ಮುಂದೆ ಇನ್ನೋಂದ್ ಕಾಲು ಇಟ್ಕೊಂಡು ನಿಂತ್ಕೊಳಿ ಸಾಕು ಉದ್ದನೆಯ ಫೋಟೋ ತೆಗುಸ್ಕೊಳಕ್ಕೆ ಚೆನ್ನಾಗಿರತ್ತೆ 

12. ಕೈ ಹಿಂದಕ್ಕೆ ಕಟ್ಟಿ ಹೀಗೆ ಪೋಸ್ ಕೊಡಿ ಚೆನಾಗ್ ಕಾಣ್ತೀರ 

13. ಹೀಗೆ ಯಾವದಕ್ಕಾದ್ರೂ ಒರಗಿಕೊಂಡು ಫೋಟೋ ತೆಗುಸ್ಕೊಳಿ 

ಮೂಲ

14. ಉದ್ದನೆಯ ಫೋಟೋ ತೆಗುಸ್ಕೊಳಕ್ಕೆ ಹೀಗ್ ಪೋಸ್ ಕೊಟ್ರೆ ಚೆನ್ನಾಗಿರತ್ತೆ 

15. ಮಲ್ಕೊಂಡು ಕಾಲು ಮೇಲಕ್ಕೆ ಎತ್ತಿ ಹೀಗ್ ಪೋಸ್ ಕೊಡಿ 

16. ಸುಮ್ಮನೆ ಹೀಗೆ ಅಂಗಾತ ಮಲ್ಕೊಂಡು ಪೋಸ್ ಕೊಡಿ 

17. ಹೈ ಹೀಲ್ಸ್ ಹಾಕಿದ್ರೆ ಈ ಪೋಸ್ ಚೆನ್ನಾಗಿರತ್ತೆ 

18. ಮಂಡಿ ಮೇಲೆ ಕೂತ್ಕೊಂಡು ಫೋಟೋ ತೆಗುಸ್ಕೊಳಿ 

 

19. ಗೋಡೆ ಅಥವಾ ಕಿಟಿಕಿ ಕಡೆ ಬಾಗಿ ಹೀಗ್ ಫೋಟೋ ತೆಗುಸ್ಕೊಳಿ 

20. ಲಕ್ಷಣವಾಗಿ ಮಹಾರಾಣಿ ಥರ ಹೀಗೆ ಸೋಫಾಮೇಲೆ ಕೂತ್ಕೊಂಡು ಫೋಟೋ ತೆಗುಸ್ಕೊಳಿ 

ಕೈಯಲ್ಲಿ ಫೋನು, ಹೋದ್ ಕಡೇಲೆಲ್ಲಾ ಸೆಲ್ಫಿ ತಕ್ಕೊಬೇಕಾದ್ರೆ ಈ ಪೋಸ್ಗಳು ನೆನಪಲ್ಲಿದ್ರೆ ಸಕತ್!!!! 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮಗೆ ರಾಮನ ಬಗ್ಗೆ ಎಷ್ಟು ಗೊತ್ತು ಅಂತ ಅರ್ಥ ಆಗಕ್ಕೆ ಈ ಚಿಕ್ಕ ಕ್ವಿಜ಼್‌ ಸಹಾಯ ಮಾಡುತ್ತೆ

ರಾಮಾಪಹರಣ ಕೇಳಿದೀರಿ ತಾನೆ?

ರಾಮನ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ! ಆದರೆ ರಾಮನ ಬಗ್ಗೆ ಎಲ್ಲವೂ ಗೊತ್ತಿದೆ ಅನ್ನೋರ ಸಂಖ್ಯೆ ಪ್ರಾಯಶಃ ಒಂದು. ಹೌದು, ಒಬ್ಬನಿಗೇ ಗೊತ್ತಿರೋದು ಎಲ್ಲಾ… ಅದು ವಾಲ್ಮೀಕಿಗೆ ಮಾತ್ರ! ಆದರೆ ಕಳಗಿರೋ ಕೆಲವು ಪ್ರಶ್ನೆಗಳಿಗೆ ನೀವು ಉತ್ತರ ಕೊಡ್ತಾ ಹೋಗಿ, ಆಗ ನಿಮಗೆ ರಾಮನ ಬಗ್ಗೆ ಎಷ್ಟು ಗೊತ್ತಿದೆ ಅಂತ ನಿಮಗೇ ಗೊತ್ತಾಗುತ್ತೆ.

1. ರಾಮನಿಗೆ ರಾಮ ಅಂತ ಹೆಸರು ಕೊಟ್ಟಿದ್ದು ಯಾರು?

2. ಯಾವುದೇ ಆಯುಧ ಇಲ್ಲದೆ ರಾಮನ್ನ ಯುದ್ಧದಲ್ಲಿ ಸೋಲಿಸಿದ ವ್ಯಕ್ತಿ ಯಾರು?

3. ರಾಮ ವನವಾಸಕ್ಕೆ ಹೋದಾಗ ಅವನಿಗೆ ಎಷ್ಟು ವರ್ಷ?

4. ತನ್ನ ಅವತಾರದ ಕೊನೆಯಲ್ಲಿ ರಾಮ ದೇಹವನ್ನ ಎಲ್ಲಿ ಮತ್ತೆ ಹೇಗೆ ಬಿಟ್ಟು ಹೋಗ್ತಾನೆ?

5. ರಾಮ, ಸೀತೆ ಮತ್ತು ಲಕ್ಷ್ಮಣರು ವನವಾಸ ಮಾಡಿದ ವನ ಯಾವುದು?

6. ಸೀತಾಪಹರಣ ಕೇಳಿದೀರಿ, ಆದರೆ ರಾಮಾಪಹರಣ ಕೇಳಿದೀರಾ? ಅಪಹರಿಸಿದ ವ್ಯಕ್ತಿ ಯಾರು?

7. ರಾಮಸೇತು ಎಷ್ಟು ಉದ್ದ ಇತ್ತು? ಅದನ್ನ ಕಟ್ಟಕ್ಕೆ ಎಷ್ಟು ದಿನ ತೊಗೋತು?

8. ರಾವಣನ ಮಾಯಾವಿ ಶಕ್ತಿಗಳ ಬಗ್ಗೆ ರಾಮನಿಗೆ ತಿಳಿಸಿದ್ದು ಯಾರು?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: