ಗಂಡಸರ ಮಿದುಳು ಹೆಂಗಸರ ಮಿದುಳು ಹೇಗೆ ಬೇರೆ ಬೇರೆ ಅಂತ ತಿಳ್ಕೊಳಿ ಬೇಕಾಗುತ್ತೆ

ಹೆಂಗಸರು ಯೋಚನೆ ಮಾಡದೆ ಮಾತಾಡ್ತಾರೆ, ಗಂಡಸರು ಯೋಚನೆ ಮಾಡದೆ ಕೆಲಸ ಮಾಡ್ತಾರೆ

ಹೆಂಗಸರ ಬುದ್ಧಿ ಮೊಳಕಾಲ ಕೆಳಗೆ ಅನ್ನೋ ಮಾತನ್ನ ಕೇಳಿರ್ತೀರ. ಅಯ್ಯೋ ಗಂಡಸರ ಬುದ್ಧಿ ನಮಗ್ ಗೊತ್ತಿಲ್ವಾ ಅನ್ನೋ ಮಾತು ಹೆಂಗಸರ ಬಾಯಿಂದ ಆಗಾಗ ಉದುರ್ತಾನೇ ಇರುತ್ತೆ. ಒಟ್ನಲ್ಲಿ ಗಂಡು ಹೆಣ್ಣು ಅನ್ನೋ ಭೇದಭಾವ ಇದ್ದೇ ಇದೆ. ಯಾರು ಬುದ್ಧಿವಂತರು, ಯಾರು ಹೆಚ್ಚು ಶಕ್ತಿವಂತರು, ಸಾಮರ್ಥ್ಯ ಇರೋರು ಅನ್ನೋ ವಾದ ತಲೆತಲಾಂತರಿಂದ ನಡೀತಾನೇ ಇದೆ. ಎಲ್ಲಾರ ಬುರುಡೇಲು ಇರೋದು ಒಂದೇ ಮೆದುಳಂತೆ ಆದರೆ ಬುದ್ಧಿ ಒಂದಿಲ್ಲ ಅನ್ನೋ ಹಾಡಿನ ತರಹ ಗಂಡಸು ಮತ್ತು ಹೆಂಗಸರ ಮೆದುಳು ಬೇರೆಬೇರೆ ಅನ್ನೋದಕ್ಕೆ ಇಲ್ಲಿದೆ ನೋಡಿ ಸಾಕಷ್ಟು ವ್ಯತ್ಯಾಸಗಳು.

ಮೇಲ್ಮೋಟಕ್ಕೆ ಹೆಂಗಸರು ಮತ್ತೆ ಗಂಡಸರಲ್ಲಿ ಸಾಕಷ್ಟು ವ್ಯತ್ಯಾಸಳಿವೆ. ಆದರೆ ಮಿದುಳಲ್ಲೂ ಸಾಕಷ್ಟು ವ್ಯತ್ಯಾಸಗಳಿವೆ. ಅರ್ಥ ಮಾಡ್ಕೊಳ್ಳೋ ಸಾಮರ್ಥ್ಯ, ಯೋಚನೆ ಮಾಡೋದು, ಸಮಸ್ಯೆಗಳನ್ನ ಪರಿಹರಿಸೋದ್ರಲ್ಲಿ ಗಂಡಸರು ಮತ್ತೆ ಹೆಂಗಸರು ಬೇರೆಬೇರೆ ತರಾನೇ ಯೋಚ್ನೆ ಮಾಡ್ತಾರೆ. ಅದು ಹೇಗೆ ಅನ್ನೋದನ್ನ ಬ್ರೈನ್ ಅನಾಲಿಸಿಸ್ ತಿಳ್ಸತ್ತೆ ನೋಡಿ. 

1. ಹೆಂಗಸರ ಮಿದುಳು ಒಟ್ಟಗೆ ಒಂದಕ್ಕಿಂತ ಜಾಸ್ತಿ ಕೆಲಸ ಮಾಡೋದ್ರಲ್ಲಿ ಪಳಗಿರುತ್ತೆ

ಮಲ್ಟಿ ಟಾಸ್ಕಿಂಗ್ ವಿಚಾರಕ್ಕೆ ಬಂದ್ರೆ ಹೆಂಗಸರ ಮಿದುಳು ಚೆನ್ನಾಗಿ ಕೆಲಸ ಮಾಡುತ್ತೆ. ಒಂದೇ ಏಟಿಗೆ ಹಲವಾರು ಕೆಲಸಗಳನ್ನು ಮಾಡೋ ಸಾಮರ್ಥ್ಯ ಹೆಂಗಸರಿಗಿದೆ. ಹೆಂಗಸರ ಶಕ್ತಿ ಸಾಮರ್ಥ್ಯ ಇದ್ರಿಂದನೇ ತಿಳ್ಕೋಬೋದು. ಡ್ರೈವ್ ಮಾಡ್ತಾ ಫೋನಲ್ಲಿ ಲೀಲಾಜಾಲವಾಗಿ ಮಾಡ್ತಾರ್ತಾರೆ. ಆದರೆ ಗಂಡಸರು ಈ ವಿಚಾರದಲ್ಲಿ ಸ್ವಲ್ಪ ವೀಕು. ಅವರು ಒಂದೇ ಕೆಲಸದ ಮೇಲೆ ಕಾನ್ಸಟ್ರೇಟ್ ಮಾಡೋದ್ರಿಂದ ಅಪಘಾತಗಳಾಗೋದೆ ಹೆಚ್ಚು. ಮಲ್ಟಿಟಾಸ್ಕ್ ವಿಚಾರದಲ್ಲಿ ಗಂಡಸರು ಪವರ್‌ಫುಲ್ ಅಲ್ಲ. ಆದರೆ ಒಂದೊಂದೇ ಕೆಲಸಾನ ಅಚ್ಚುಕಟ್ಟಾಗಿ ಮಾಡ್ತಾರೆ.

2. ಬೇರೆಬೇರೆ ಭಾಷೆಗಳನ್ನ ಕಲಿಯೋದ್ರಲ್ಲಿ ಹೆಂಗಸರದೇ ಮೇಲುಗೈ

ಇನ್ನು ಬೇರೆಬೇರೆ ಭಾಷೆಗಳನ್ನ ಕಲಿಯೋ ವಿಚಾರಕ್ಕೆ ಬಂದ್ರೆ ಹೆಂಗಸರದು ಎತ್ತಿದ ಕೈ. ಆದರೆ ಈ ವಿಚಾರದಲ್ಲೂ ಗಂಡಸರದು ಮಿದುಳು ಅಷ್ಟು ಚುರುಕಿಲ್ಲ. ಇದಕ್ಕೆ ಕಾರಣ ಏನೆಂದರೆ ಗಂಡಸರಿಗಿಂತ ಹೆಂಗಸರು ಜಾಸ್ತಿ ಪದಗಳನ್ನ ನೆನಪಿನಲ್ಲಿ ಇಟ್ಕೋತಾರಂತೆ. ಮಕ್ಕಳನ್ನೇ ಗಮನಿಸಿ ಹೆಣ್ಣುಮಗು ಪಟಪಟಾಂತ ಮಾತಾಡಿದ್ರೆ ಗಂಡು ಮಗು ಮಾತಾಡೋ ವಿಚಾರದಲ್ಲಿ ಸ್ವಲ್ಪ ನಿಧಾನ. 

3. ಸಮಸ್ಯೆಗಳನ್ನ ಪರಿಹರಿಸ್ಕೊಳ್ಳೋದ್ರಲ್ಲಿ ಗಂಡಸರ ಮಿದುಳು ಚುರುಕು

ಆದರೆ ಸಮಸ್ಯೆಗಳನ್ನ ಬೇಗ ಪರಿಹರಿಸೋ ವಿಚಾರದಲ್ಲಿ ಹೆಂಗಸರ ಮಿದುಳು ಗಂಡಸರಿಗಿಂತ ಹಿಂದೆ ಇದೆಯಂತೆ. ಗಂಡಸರು ಬೇಗ ಮತ್ತೆ ಪರಿಣಾಮಕಾರಿಯಾಗಿ ಸಮಸ್ಯೆಗಳನ್ನ ಪರಿಹರಿಸ್ತಾರೆ. ಅದು ಎಷ್ಟೇ ದೊಡ್ಡ ಸಮಸ್ಯೆ ಇರಲಿ ಗಂಡಸರಿಗೆ ಅದನ್ನ ಹಂತಹಂತವಾಗಿ ಪರಿಹರಿಸೋ ಸಾಮರ್ಥ್ಯ ಇದೆ. ಆದರೆ ಹೆಂಗಸರು ಈ ವಿಚಾರದಲ್ಲಿ ಫೇಲ್. 

4. ಡ್ರೈವಿಂಗ್ ವಿಚಾರದಲ್ಲಿ ಹೆಂಗಸರಿಗಿಂತ ಗಂಡಸರದು ಮೇಲುಗೈ

ಇನ್ನು ಕಾರು ಡ್ರೈವಿಂಗ್ ವಿಚಾರಕ್ಕೆ ಬಂದರೆ ಹೆಂಗಸರಿಗಿಂತ ಗಂಡಸರೇ ಚೆನ್ನಾಗಿ ಓಡ್ಸೋದಂತೆ. ಗಂಡಸರಲ್ಲಿ ವಿಶ್ಲೇಷಣಾತ್ಮಕ ಸಾಮರ್ಥ್ಯ ಜಾಸ್ತಿ ಇರೋದೆ ಇದಕ್ಕೆ ಕಾರಣ. ಹಾಗಾಗಿ ಡ್ರೈವ್ ಮಾಡೋವಾಗ, ದಿಕ್ಕು, ವೇಗ, ದೂರದಲ್ಲಿ ಕಾಣೋಂತ ವಸ್ತುಗಳನ್ನ ಬೇಗ ಗ್ರಹಿಸ್ತಾರೆ. ಇದ್ರಿಂದ ಹೆಂಗಸರಿಗಿಂತ ಗಂಡಸರು ಫಾಸ್ಟಾಗಿ ಡ್ರೈವ್ ಮಾಡೋ ಸಾಮರ್ಥ್ಯ ಇದೆ. ಹೆಂಗಸರಿಗೆ ವೇಗವಾಗಿ ಡ್ರೈವ್ ಮಾಡೋ ಸಾಮರ್ಥ್ಯ ಇಲ್ಲ.

5. ಗಂಡಸರು ಹೇಳೋ ಸುಳ್ಳು ಹೆಂಗಸರಿಗೆ ಪಟ್ ಅಂತ ಗೊತ್ತಾಗುತ್ತೆ, ಆದರೆ ಹೆಂಗಸರು ಸುಳ್ಳು ಹೇಳೋದು ಗಂಡಸರಿಗೆ ಅಷ್ಟಾಗಿ ಗೊತ್ತಾಗಲ್ಲ

ಇನ್ನೊಂದು ಮುಖ್ಯವಾದ ವಿಷಯ ಅಂದ್ರೆ ಗಂಡಸರು ಹೇಳೋ ಸುಳ್ಳು ಹೆಂಗಸರಿಗೆ ಬಹಳ ಬೇಗ ಗೊತ್ತಾಗುತ್ತಂತೆ. ಇದಕ್ಕೆಲ್ಲಾ ಹೆಂಗಸರ ಮಿದುಳಿನ ಅಸಮಾನ್ಯ ಶಕ್ತಿಯೇ ಕಾರಣ. ಎದುರುಗಡೆ ಮಾತಾಡೋರ ಫೇಸ್‌ ಎಕ್ಸ್‌ಪ್ರೆಶನ್‍ನಿಂದಲೇ ಶೇ. 70ರಷ್ಟು, ಶೇ. 20 ಬಾಡಿ ಲಾಂಗ್ವೇಜ್ ಮತ್ತೆ ಶೇ. 10ಷ್ಟೇ ಅವರ ಮಾತಿನಿಂದ್ಲೇ ನಿರ್ಧರಿಸಿ ಬಿಡ್ತಾರೆ.  ಸುಳ್ಳು ಹೇಳೋ ಗಂಡಸರು ಹೆಂಗಸರ ಮುಂದೆ ಸಿಗಾಕ್ಕೊಳ್ಳೋದು ಯಾಕೆ ಅಂತ ಗೊತ್ತಾಯ್ತಲ್ವಾ! ಆದರೆ ಹೆಂಗಸರು ಸುಳ್ಳು ಹೇಳಿದ್ರೂ ಗಂಡಸರಿಗೆ ಗೊತ್ತೇ ಆಗಲ್ವಂತೆ!

6. ಹೆಂಗಸರಿಗೆ ದೊಡ್ಡ ಸಮಸ್ಯೇನ ಚಿಕ್ಕ ಚಿಕ್ಕ ಸಮಸ್ಯೆಗಳಾಗಿ ಒಡೆದು ಪರಿಹರಿಸ್ಕೊಳ್ಳೋ ಬುದ್ಧಿ ಇಲ್ಲ

ಗಂಡಸರಿಗೆ ಈ ಬುದ್ಧಿ ಇರುತ್ತೆ. ಆದರೆ ಹೆಂಗಸರು ಸಮಸ್ಯೇನ ಇನ್ನೊಬ್ರ ಹತ್ರ ಹೇಳ್ಕೊಳ್ಳೋದೆ ಜಾಸ್ತಿ. ಆಗ ಅವರ ಮನಸ್ಸು ಹಗುರಾಗುತ್ತೆ. ಆಮೇಲೆ ಸಮಸ್ಯೆ ಅಲ್ಲಿಗೆ ಬಿಟ್ಟು, ಅದನ್ನ ಪರಿಹರಿಸ್ಕೊಳ್ಳೋದು ಅನ್ನೋದ್ರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. 

7. ಹೆಂಗಸರು ಸಂಬಂಧಗಳಿಗೆ ಬೆಲೆ ಕೊಡ್ತಾರೆ, ಗಂಡಸರು ಯಶಸ್ಸಿನ ಬಗ್ಗೆ ತಲೆಕೆಡಿಸ್ಕೋತಾರೆ

ಗಂಡಸರು ಮತ್ತೆ ಹೆಂಗಸರ ನಡುವಿನ ಇನ್ನೊಂದು ಮುಖ್ಯವಾದಂತ ವ್ಯತ್ಯಾಸ ಅಂದ್ರೆ, ಯಶಸ್ಸು, ಸ್ಥಾನಮಾನ, ಹಣ. ಜೀವನದಲ್ಲಿ ದೊಡ್ಡದಾಗಿ ಏನನ್ನಾದ್ರೂ ಸಾಧಿಸ್ಬೇಕು ಅಂತ ಗಂಡಸರು ಯೋಚಿಸ್ತಾರೆ. ಆದರೆ ಹೆಂಗಸರು ಕುಟುಂಬ, ಗೆಳೆಯರು, ಸಂಬಂಧಗಳ ಬಗ್ಗೆ ಜಾಸ್ತಿ ಬೆಲೆ ಕೊಡ್ತಾರೆ. 

8. ಹೆಂಗಸರು ಯೋಚನೆ ಮಾಡದೆ ಮಾತಾಡ್ತಾರೆ, ಗಂಡಸರು ಯೋಚನೆ ಮಾಡದೆ ಕೆಲಸ ಮಾಡ್ತಾರೆ

ಹೆಂಗಸರು ಸುಮ್ಮನೆ ವಟವಟ ಅಂತಿರ್ತಾರೆ ಅನ್ನೋದು ಎಲ್ಲರೂ ಹೇಳೋ ಮಾತು. ಆದರೆ ಗಂಡಸರು ಸುಮ್ಮನೆ ಯೋಚನೆ ಮಾಡದೆ ಅದು ಇದು ಕೆಲಸ ಮಾಡ್ತಾನೇ ಇರ್ತಾರೆ. ಎನಾದರೂ ಮಾಡಿ ಆಮೇಲೆ ತುಂಬಾ ತೊಂದರೆ ಆದಾಗ ಅವರಿಗೆ ಗೊತ್ತಾಗುತ್ತೆ, ಓಹೋ, ನಾನು ಮಾಡಕ್ಕಿಂತ ಮುಂಚೆ ಇನ್ನೂ ಯೋಚನೆ ಮಾಡಬೇಕಿತ್ತು ಅಂತ.

9. ಹೆಂಗಸರು ಸುತ್ತಿಬಳಸಿ ಮಾತಾಡಿದ್ರೆ, ಗಂಡಸರು ನೇರವಾಗಿ ಮಾತಾಡ್ತಾರೆ

ಹೆಂಗಸರು ಮಾತಾಡೋವಾಗ ಸುತ್ತಿಬಳಸಿ ಮಾತಾಡ್ತಾರೆ, ಆದರೆ ಗಂಡಸರು ನೇರಾನೇರವಾಗಿಯೇ ಮಾತಾಡೋದು. ಭಾವನೆಗಳ ವಿಚಾರದಲ್ಲಿ ಹೆಂಗಸರು ಯೋಚನೇನೆ ಮಾಡ್ದೆ ಮಾತಾಡ್ತಾರೆ. ಆದರೆ ಗಂಡಸರು ಯೋಚನೆ ಮಾಡ್ದೀರ ನಡ್ಕೋತಾರೆ. 

ಈಗ ಗೊತ್ತಾತಲ್ವಾ ಯಾಕ್ ಹೆಂಗಸರು ಹಂಗಾಡ್ತಾರೆ ಅಂತ,  ಗಂಡಸರು ಯಾಕ್ ಹಿಂಗ್ ಆಡ್ತಾರೆ ಅಂತ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮಗೆ ರಾಮನ ಬಗ್ಗೆ ಎಷ್ಟು ಗೊತ್ತು ಅಂತ ಅರ್ಥ ಆಗಕ್ಕೆ ಈ ಚಿಕ್ಕ ಕ್ವಿಜ಼್‌ ಸಹಾಯ ಮಾಡುತ್ತೆ

ರಾಮಾಪಹರಣ ಕೇಳಿದೀರಿ ತಾನೆ?

ರಾಮನ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ! ಆದರೆ ರಾಮನ ಬಗ್ಗೆ ಎಲ್ಲವೂ ಗೊತ್ತಿದೆ ಅನ್ನೋರ ಸಂಖ್ಯೆ ಪ್ರಾಯಶಃ ಒಂದು. ಹೌದು, ಒಬ್ಬನಿಗೇ ಗೊತ್ತಿರೋದು ಎಲ್ಲಾ… ಅದು ವಾಲ್ಮೀಕಿಗೆ ಮಾತ್ರ! ಆದರೆ ಕಳಗಿರೋ ಕೆಲವು ಪ್ರಶ್ನೆಗಳಿಗೆ ನೀವು ಉತ್ತರ ಕೊಡ್ತಾ ಹೋಗಿ, ಆಗ ನಿಮಗೆ ರಾಮನ ಬಗ್ಗೆ ಎಷ್ಟು ಗೊತ್ತಿದೆ ಅಂತ ನಿಮಗೇ ಗೊತ್ತಾಗುತ್ತೆ.

1. ರಾಮನಿಗೆ ರಾಮ ಅಂತ ಹೆಸರು ಕೊಟ್ಟಿದ್ದು ಯಾರು?

2. ಯಾವುದೇ ಆಯುಧ ಇಲ್ಲದೆ ರಾಮನ್ನ ಯುದ್ಧದಲ್ಲಿ ಸೋಲಿಸಿದ ವ್ಯಕ್ತಿ ಯಾರು?

3. ರಾಮ ವನವಾಸಕ್ಕೆ ಹೋದಾಗ ಅವನಿಗೆ ಎಷ್ಟು ವರ್ಷ?

4. ತನ್ನ ಅವತಾರದ ಕೊನೆಯಲ್ಲಿ ರಾಮ ದೇಹವನ್ನ ಎಲ್ಲಿ ಮತ್ತೆ ಹೇಗೆ ಬಿಟ್ಟು ಹೋಗ್ತಾನೆ?

5. ರಾಮ, ಸೀತೆ ಮತ್ತು ಲಕ್ಷ್ಮಣರು ವನವಾಸ ಮಾಡಿದ ವನ ಯಾವುದು?

6. ಸೀತಾಪಹರಣ ಕೇಳಿದೀರಿ, ಆದರೆ ರಾಮಾಪಹರಣ ಕೇಳಿದೀರಾ? ಅಪಹರಿಸಿದ ವ್ಯಕ್ತಿ ಯಾರು?

7. ರಾಮಸೇತು ಎಷ್ಟು ಉದ್ದ ಇತ್ತು? ಅದನ್ನ ಕಟ್ಟಕ್ಕೆ ಎಷ್ಟು ದಿನ ತೊಗೋತು?

8. ರಾವಣನ ಮಾಯಾವಿ ಶಕ್ತಿಗಳ ಬಗ್ಗೆ ರಾಮನಿಗೆ ತಿಳಿಸಿದ್ದು ಯಾರು?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: