ಬರೀ 5 ನಿಮಿಷ ತೊಗೊಳೋ ಈ 5 ಅಭ್ಯಾಸಗಳಿಂದ ನಿಮ್ಮ ದೇಹ ಮತ್ತು ಮನಸ್ಸು ಎರಡಕ್ಕೂ ಒಳ್ಳೇ ಆರೋಗ್ಯ

ನಂಬಿಕೇನೇ ಬರಲ್ಲ

5 ನಿಮಿಷ ಏನ್ ಮಹಾ ಅಲ್ಲ ಅಲ್ವಾ? ಬರೀ ಐದೇ ನಿಮಿಷ ಬೇಕಾಗೊ ಈ ಅಭ್ಯಾಸಗಳ್ನ ನಾವ್ ಬೆಳ್ಸ್ ಕೊಂಡ್ರೆ ನಮ್ಮ ಆರೋಗ್ಯ ಮತ್ತೆ ಜೀವನ ಚೆನ್ನಾಗಿರತ್ತೆ.

ಗಂಟೆಗೊಂದ್ಸಲ 5 ನಿಮಿಷ ಓಡಾಡೋದ್ರಿಂದ ಆರೋಗ್ಯ ಚೆನ್ನಾಗಿರದಲ್ದೆ ಮೂಡ್ ಕೂಡ ಚೆನ್ನಾಗಿರತ್ತೆ

ಸಕ್ಕ್ರೆ ಖಾಯ್ಲೆ, ಒಬೆಸಿಟಿ ಎಲ್ಲ ಯಾಕ್ ಜಾಸ್ತಿ ಆಗ್ತಿದೆ ಅಂದ್ರೆ ಕೂತ್ಕೊಂಡೆ ಕೆಲ್ಸ ಮಾಡದ್ ಹೆಚ್ಚಾಗ್ತಿರದ್ರಿಂದ. ಅದಕ್ಕೆ ಗಂಟೆಗೆ ಒಂದ್ಸಲನಾದ್ರೂ ಒಂದ್ ಐದ್ ನಿಮಿಷ ಆಕಡೆ ಈಕಡೆ ಓಡಾಡಿ. ಇದ್ರಿಂದ ನಿಮ್ಮ ಮನಸ್ಸಿಗೂ ನೆಮ್ಮದಿ ಸಿಕ್ಕಿ ನಿಮ್ಮ ಮೂಡ್ ಚೆನ್ನಾಗಿರತ್ತೆ.

ಯಾವ್ದಾದ್ರು ಕೆಲ್ಸ ಶುರು ಮಾಡಕ್ಕೆ ಮನಸ್ಸೇ ಇಲ್ಲ ಅಂದ್ರೆ, ಮುಂದೂಡೋ ಬದ್ಲಿಗೆ ಆ ಕೆಲ್ಸನ ಒಂದು 5-ನಿಮಿಷನಾದ್ರು ಮಾಡಿ, ಇದ್ರಿಂದ ನಿಮ್ಗೆ ಎಷ್ಟೊ ನೆಮ್ಮದಿ ಸಿಗತ್ತೆ

ಎಷ್ಟೋ ಕೆಲ್ಸಗಳ್ನ ಆಮೇಲ್ ಮಾಡಣ ಅಂತ ಮುಂದಕ್ ಹಾಕ್ತಿರ್ತೀವಿ. ಮಾಡ್ಲೇಬೇಕಿರೋ ಕೆಲ್ಸ ಏನಾದ್ರು ಇದ್ದು ಅದ್ನ ಶುರು ಮಾಡಕ್ಕೆ ನಿಮ್ಗೆ ಮನಸ್ ಇಲ್ದೇದ್ರೆ, ಆಮೇಲ್ ಮಾಡಣ ಅಂತ ಅನ್ಸಿದ್ರೆ, ಅಂತ ಕೆಲ್ಸಗಳ್ನ ಸುಮ್ನೆ ಮುಂದೂಡ ಬದ್ಲಿಗೆ ಒಂದ್ 5 ನಿಮಿಷನಾದ್ರು ಆ ಕೆಲ್ಸ ಮಾಡಿದಾದ್ಮೇಲೆ ನಿಲ್ಲಿಸಿ. ಆಗ ಸದ್ಯ ಶುರುನಾದ್ರು ಮಾಡಿದೀನಿ ಅಂತ ನೆಮ್ಮದಿ ಇರತ್ತೆ. ಆಮೇಲೆ ಮತ್ಯಾವಾಗ ನೀವ್ ರೆಡಿ ಇರ್ತೀರೋ ಆಗ ಮುಂದುವರ್ಸ್ಕೊಂಡು ಹೋಗದು ಕಷ್ಟ ಆಗಲ್ಲ.

ಒಂದೇಸಮ ಕೆಲ್ಸ ಮಾಡ್ತಿರ್ಬೇಕಾದ್ರೆ 5 ನಿಮಿಷ ಬ್ರೇಕ್ ತೊಗೊಳ್ಳೊದ್ರಿಂದ ನಿಮ್ಮ ಕೆಲ್ಸ ಚೆನ್ನಾಗಿ ಆಗತ್ತೆ

ಕೆಲವ್ರಿಗೆ ಯಾವಾಗ ಬ್ರೇಕ್ ತೊಗೋಬೇಕು ಅನ್ನೋದೇ ಗೊತ್ತಿರಲ್ಲ. ನಮ್ಗೆ ಆಗಾಗ ಬ್ರೇಕ್ ಬೇಕು. ಯಾರ್ ಕೈಲೂ ಒಂದೇಸಮ ಕೆಲ್ಸ ಮಾಡಕ್ ಆಗಲ್ಲ. ಈ ಥರ ಬ್ರೇಕ್ ತೊಗೊಂಡ್ರೆ ಕೆಲ್ಸದ್ ಮೇಲೆ ನಮ್ ಉತ್ಸಾಹ ಹೆಚ್ಚಾಗತ್ತೆ. ಓದೋ ಹುಡುಗ್ರು 25 ನಿಮಿಷ ಓದಿ 5 ನಿಮಿಷ ಬ್ರೇಕ್ ತೊಗೊಳ್ಳೋದ್ರಿಂದ ಓದಿದ್ದು ತಲೆಗ್ ಹತ್ತತ್ತೆ.

ದಿನಾ 5 ನಿಮಿಷ ನಿಮ್ಗಾಗಿರೋ ಒಳ್ಳೆದನ್ನ ಮೆಲಕ್ ಹಾಕಿ ಥ್ಯಾಂಕ್ಸ್ ಹೇಳೋದ್ರಿಂದ ಖುಷಿಯಾಗಿರ್ತೀರ

ದಿನಾ ನಿಮ್ಗೆ ಏನೇನ್ ಒಳ್ಳೆದಾಗಿದೆ ಅನ್ನದನ್ನ ಒಂದ್ಸಲ ಮಲಗಕ್ಕೆ ಮುಂಚೆ ಮೆಲಕ್ ಹಾಕಿ. ಸಾಧ್ಯ ಆದ್ರೆ ಹೇಗ್ ಒಳ್ಳೇದಾಯ್ತು ಅಂತ ತಿಳ್ಕೊಂಡು ಥ್ಯಾಂಕ್ಸ್ ಹೇಳೊ ಅಭ್ಯಾಸ ಮಾಡ್ಕೊಳ್ಳಿ. ಇದ್ರಿಂದ ನೀವು ಖುಷಿಯಾಗಿರ್ತೀರ. ಈ ಥರ ಮಾಡೋದ್ರಿಂದ ನಿಮ್ ಉತ್ಸಾಹ, ಸಂಯಮ ಎಲ್ಲಾ ಜಾಸ್ತಿ ಆಗತ್ತೆ.

5 ನಿಮಿಷ ದಿನಾ ಓಡೋದ್ರಿಂದ 3 ವರ್ಷ ಆಯಸ್ಸು ಹೆಚ್ಚಿಸ್ಕೊಬೋದು

ಬರ್ತಾ ಬರ್ತಾ 40-50 ವರ್ಷದವ್ರೆಲ್ಲಾ ಸಡನ್ನಾಗಿ ಸಾಯ್ತಿದಾರೆ, ಬರೀ 5 ನಿಮಿಷ ದಿನಾ ಓಡೋದ್ರಿಂದ ಹೀಗೆಲ್ಲಾ ಆಗಲ್ಲ. ಹಾರ್ಟ್ ಪ್ರಾಬ್ಲಮ್ ಇರೋವ್ರು ದಿನಾ 5 ನಿಮಿಷ ಓಡೋ ಅಭ್ಯಾಸ ಮಾಡ್ಕೊಳೋದ್ರಿಂದ ಹಾರ್ಟ್ ಅಟ್ಯಾಕ್ನ ದೂರ ಓಡಿಸ್ಬೋದು. ಸಣ್ಣ-ಪುಟ್ಟ ವ್ಯಾಯಾಮಕ್ಕೆಲ್ಲಾ ನಮ್ಮ ಆರೋಗ್ಯ ಕಾಪಾಡೊ ತಾಕತ್ತಿದೆ ಅನ್ನದ್ನ ಮರೀಬೇಡಿ.

ಐದೇ ನಿಮಿಷ ಮಾಡ್ಬೇಕಿರೋ ಇನ್ನೊಂದಷ್ಟು ಸಣ್ಣ-ಪುಟ್ಟದ್ದು:

  • 5 ನಿಮಿಷ ನಿಮ್ಮ ಮಗು ಮತ್ತೆ ಹೆಂಡತಿ ಜೊತೆ ಮಾತಾಡದ್ರಿಂದ ಸಂಬಂಧದಲ್ಲಿ ಪ್ರೀತಿ ಹೆಚ್ಚತ್ತೆ.
  • 5 ನಿಮಿಷ ಧ್ಯಾನ ಮಾಡದ್ರಿಂದ ಬೀಪಿ ಕಮ್ಮಿ ಆಗತ್ತೆ, ನಿಮ್ಮನ್ನ ನೀವು ಅರ್ಥ ಮಾಡ್ಕೊಬೋದು.
  • 5 ನಿಮಿಷ ಗಮನ ಕೊಟ್ಟು ನಿಮ್ಗೆ ಇಷ್ಟ ಇರೋ ತಿಂಡಿ ತಿನ್ನಿ, ಮಸಾಜ್ ಮಾಡಿಸ್ಕೊಳ್ಳಿ, ಗೆಳೆಯರ್ ಜೊತೆ ಮಾತಾಡಿ... ಹೀಗ್ ಮಾಡದ್ರಿಂದ ಚಿಕ್ಕ ಚಿಕ್ಕ ಸಂತೋಷಗಳ್ನ ನೀವ್ ಮಿಸ್ ಮಾಡ್ಕೊಳಲ್ಲ.

 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮಗೆ ರಾಮನ ಬಗ್ಗೆ ಎಷ್ಟು ಗೊತ್ತು ಅಂತ ಅರ್ಥ ಆಗಕ್ಕೆ ಈ ಚಿಕ್ಕ ಕ್ವಿಜ಼್‌ ಸಹಾಯ ಮಾಡುತ್ತೆ

ರಾಮಾಪಹರಣ ಕೇಳಿದೀರಿ ತಾನೆ?

ರಾಮನ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ! ಆದರೆ ರಾಮನ ಬಗ್ಗೆ ಎಲ್ಲವೂ ಗೊತ್ತಿದೆ ಅನ್ನೋರ ಸಂಖ್ಯೆ ಪ್ರಾಯಶಃ ಒಂದು. ಹೌದು, ಒಬ್ಬನಿಗೇ ಗೊತ್ತಿರೋದು ಎಲ್ಲಾ… ಅದು ವಾಲ್ಮೀಕಿಗೆ ಮಾತ್ರ! ಆದರೆ ಕಳಗಿರೋ ಕೆಲವು ಪ್ರಶ್ನೆಗಳಿಗೆ ನೀವು ಉತ್ತರ ಕೊಡ್ತಾ ಹೋಗಿ, ಆಗ ನಿಮಗೆ ರಾಮನ ಬಗ್ಗೆ ಎಷ್ಟು ಗೊತ್ತಿದೆ ಅಂತ ನಿಮಗೇ ಗೊತ್ತಾಗುತ್ತೆ.

1. ರಾಮನಿಗೆ ರಾಮ ಅಂತ ಹೆಸರು ಕೊಟ್ಟಿದ್ದು ಯಾರು?

2. ಯಾವುದೇ ಆಯುಧ ಇಲ್ಲದೆ ರಾಮನ್ನ ಯುದ್ಧದಲ್ಲಿ ಸೋಲಿಸಿದ ವ್ಯಕ್ತಿ ಯಾರು?

3. ರಾಮ ವನವಾಸಕ್ಕೆ ಹೋದಾಗ ಅವನಿಗೆ ಎಷ್ಟು ವರ್ಷ?

4. ತನ್ನ ಅವತಾರದ ಕೊನೆಯಲ್ಲಿ ರಾಮ ದೇಹವನ್ನ ಎಲ್ಲಿ ಮತ್ತೆ ಹೇಗೆ ಬಿಟ್ಟು ಹೋಗ್ತಾನೆ?

5. ರಾಮ, ಸೀತೆ ಮತ್ತು ಲಕ್ಷ್ಮಣರು ವನವಾಸ ಮಾಡಿದ ವನ ಯಾವುದು?

6. ಸೀತಾಪಹರಣ ಕೇಳಿದೀರಿ, ಆದರೆ ರಾಮಾಪಹರಣ ಕೇಳಿದೀರಾ? ಅಪಹರಿಸಿದ ವ್ಯಕ್ತಿ ಯಾರು?

7. ರಾಮಸೇತು ಎಷ್ಟು ಉದ್ದ ಇತ್ತು? ಅದನ್ನ ಕಟ್ಟಕ್ಕೆ ಎಷ್ಟು ದಿನ ತೊಗೋತು?

8. ರಾವಣನ ಮಾಯಾವಿ ಶಕ್ತಿಗಳ ಬಗ್ಗೆ ರಾಮನಿಗೆ ತಿಳಿಸಿದ್ದು ಯಾರು?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: