ಪ್ರಪಂಚದಲ್ಲಿ ಅತಿ ಹೆಚ್ಚು ಬೆಲೆಬಾಳುವಂಥ ಈ 16 ವಸ್ತುಗಳ ಕುಲ ಗೋತ್ರ ಕೇಳಿ ದಂಗಾಗೋಗ್ತೀರಿ

ಚಿನ್ನ ಗಿನ್ನ ಎಲ್ಲ ಯಾವ್ ಮೂಲೆಗೆ ರೀ?

ಅತೀ ಹೆಚ್ಚು ಬೆಲೆ ಇರೋ ವಸ್ತು ಅಂದ ತಕ್ಷಣ ನಮ್ಗೆ ನೆನಪಾಗೋದು ಚಿನ್ನ. ಅದಕ್ಕಿಂತ ಹೆಚ್ಚು ಬೆಲೆಬಾಳೋ ವಸ್ತುಗಳು ಕೂಡ ಇವೆ ಗೊತ್ತಾ? ಸ್ವಲ್ಪ ನೋಡ್ತಾ ಹೋಗಿ ಗೊತ್ತಾಗುತ್ತೆ:

16. ಕೇಸರಿ ಒಂದು ಗ್ರಾಂ = 710 ರೂ

ಪ್ರಪಂಚದಲ್ಲಿ ಅತ್ಯಂತ ದುಬಾರಿಯಾದ ಮಸಾಲ ಪದಾರ್ಥ ಅಂದರೆ ಅದು ಕೇಸರಿ. 150,000 ಹೂವುಗಳನ್ನು ಒಟ್ಟು ಮಾಡಕ್ಕೆ 40 ಗಂಟೆ ಕಾಲ ಕೆಲಸ ಮಾಡ್ಬೇಕಾಗತ್ತೆ. ತುಂಬಾ ಕಷ್ಟಪಟ್ಟು ಸಂಗ್ರಹಿಸೋದ್ರಿಂದ ಇದರ ಬೆಲೆ ಹೆಚ್ಚು.

 

15.  ಚಿನ್ನ ಒಂದು ಗ್ರಾಂ = 2850 ರೂ (ದಿನಾ ಬದ್ಲಾಗತ್ತೆ)

ಹೆಣ್ಣು ಮಕ್ಕಳಿಗೆ ಅಚ್ಚು ಮೆಚ್ಚು ಇದು. ಕಾಲಾನುಕಾಲದಿಂದಲೂ ಚಿನ್ನಕ್ಕೆ ಅದರದ್ದೇ ಬೆಲೆ.

 

14. ರೋಡಿಯಮ್ ಒಂದು ಗ್ರಾಂ = 3750 ರೂ

ಅತಿ ಅಪರೂಪದ ಪ್ಲಾಟಿನಂ ಕುಟುಂಬಕ್ಕೆ ಸೇರಿದ ಒಂದು ಲೋಹ. ಇನು ನಿಜ ಹೇಳಬೇಕು ಅಂದರೆ ಒಂದು ಟನ್ ಭೂಮಿಗೆ 0.001 ಗ್ರಾಮ್ ರೋಡಿಯಮ್ ಮಾತ್ರ ಸಿಗುತ್ತೆ.

 

13. ಪ್ಲಾಟಿನಂ ಒಂದು ಗ್ರಾಂ = 3880 ರೂ

ಬೆಳ್ಳಿ ಬಣ್ಣದ ಮಿನುಗೋ ಲೋಹ ಪ್ಲಾಟಿನಂ. ಇದು ಬಂಗಾರದ ಹಾಗೆ ಆಸಿಡ್ ಅಥವಾ ಬೇರೆ ಕೆಮಿಕಲ್ ಯಾವ್ದಕ್ಕೂ ಜಗ್ಗಲ್ಲ.

 

12. ಮೆತಮ್ಫಿಟಮೈಟ್ ಒಂದು ಗ್ರಾಂ = 6465 ರೂ

ಇದು ಮನುಷ್ಯ ಮಾಡಿರೋ ಒಂದು ಕೆಮಿಕಲ್. ಗಾಜಿನ ಚೂರಿನ ತರಹ ಕಾಣೋ ಇದನ್ನ ಅಡುಗೆಗೆ ಬಳಸಿ ಆರೋಗ್ಯ ಹಾಳು ಮಾಡಿಕೊಳ್ಳಬಾರದು ಅಂತ ಇದನ್ನ ಕಾನೂನಿನ ಪ್ರಕಾರ ಬ್ಯಾನ್ ಮಾಡಿದಾರೆ. ಇನ್ನು ನೀವಿದನ್ನ ನೋಡದೇ ಇರೋದೇ ಒಳ್ಳೇದು.

 

11. ಖಡ್ಗಮೃಗದ ಕೊಂಬು ಒಂದು ಗ್ರಾಂ = 7111 ರೂ

ಕೊಂಬಲ್ಲಿ ಸಾಕಷ್ಟು ಔಷಧದ ಗುಣ ಇದೆ. ಅದಕ್ಕೆ ಕೊಂಬಿಗೆ ಡಿಮ್ಯಾಂಡು. ಚೈನೀಸ್ ಔಷಧಿ ತಯಾರಕರು ಜಾಸ್ತಿ ಉಪಯೋಗಿಸ್ತಾರೆ. ಕೊಂಬು ಪುಡಿ ಮಾಡಿ ಜ್ವರ, ಆರ್ಥ್ರೈಟಿಸ್ ಹಾಗೆ ಏನೇನಕ್ಕೋ ಬಳಸ್ತಾರಂತೆ.

 

10. ಹೆರಾಯಿನ್ ಒಂದು ಗ್ರಾಂ = 8398 ರೂ

ಇದು ಒಂದು ಡ್ರಗ್. ನೀವಿದರಿಂದ ದೂರ ಇದ್ದಷ್ಟೂ ಒಳ್ಳೇದು. ಬಳಸೋಕೆ ಯೋಗ್ಯವಲ್ಲ. ಆದ್ರೆ ಇದರ ಬೆಲೆ ಮಾತ್ರ ಸಿಕ್ಕಾಪಟ್ಟೆ.

 

9. ಕೊಕೈನ್ ಒಂದು ಗ್ರಾಂ = 15,246 ರೂ

ಹೆಚ್ಚು ಬಳಸೋದ್ರಿಂದ ಪ್ರಾಣಕ್ಕೂ ಹಾನಿ ಮಾಡಬಹುದಾದ ಭಯಾನಕ ವಸ್ತು ಕೊಕೈನ್. ಇದರ ಜಾಸ್ತಿ ಬೆಲೆಗೆ ಕಾರಣ ಇದರ ಶುದ್ಧತೆ. 

 

8. ಎಲ್.ಎಸ್.ಡಿ. ಒಂದು ಗ್ರಾಂ = 1,938,15 ರೂ 3000 

ಮತ್ತು ಬರಿಸೋ ಡ್ರಗ್ ಗಳಲ್ಲಿ ಕೇಳಿಬರೋ ಒಂದು ಹೆಸರು ಎಲ್.ಎಸ್.ಡಿ. ಇದರ ಸೇವನೆಯಿಂದ ಪ್ರಾಣ ನಿಧಾನವಾಗಿ ಹೋಗುತ್ತೆ. ಇದನ್ನ ಕೃತಕವಾಗಿ ತಯಾರಿಸೋಕೆ ಬೇಕಾದ ಶ್ರಮ ಇದರ ಬೆಲೆಯನ್ನ ನಿರ್ಧರಿಸಿದೆ.

 

7. ಪ್ಲುಟೋನಿಯಂ ಒಂದು ಗ್ರಾಂ = 2,584,20 ರೂ

ಸ್ಪೇಸ್ ಕ್ರಾಫ್ಟ್ ಇಂಧನಕ್ಕೆ ಬಳಸ್ತಾರೆ. ಹಾಗೆ ಇದು ಪರಮಾಣು ಶಕ್ತಿ ಉತ್ಪಾದನೆಗೂ ಬಳಸ್ತಾರಂತೆ.

 

6. ಪೈನೈಟ್ ಒಂದು ಗ್ರಾಂ = 3,878,40 ರೂ

ಇಂಥದ್ದೊಂದು ಹರಳು ಇದೆ ಅಂತ ಎಷ್ಟೋ ಜನಕ್ಕೆ ಗೊತ್ತೇ ಇಲ್ಲ, ಇದು ಸಿಗೋದು ಅಷ್ಟು ವಿರಳ. ಕೆಂಬಣ್ಣದ ಈ ಹರಳನ್ನ 65 ವರ್ಷಗಳ ಹಿಂದೆ ಕಂಡುಹಿಡಿದರಂತೆ. ಒಂದು ನೂರರಿಂದ ಇನ್ನೂರು ಹರಳುಗಳಿರಬಹುದು ಅಷ್ಟೆ ಹೆಚ್ಚೇನಲ್ಲ.

 

5. ಟಾಫ್ಫೈಟ್ ಒಂದು ಗ್ರಾಂ = 12,928,00 ರೂ

ನೇರಳೆ, ಕೆಂಪು, ಬಿಳಿ ಹಾಗು ಗುಲಾಬಿ ಬಣ್ಣದಲ್ಲಿ ಸಿಗೋ ಈ ಹರಳು ವಜ್ರಕ್ಕಿಂತಲೂ ಅಪರೂಪದ್ದು. ಇನ್ನು ಒಡವೆಗಳಲ್ಲಿ ಅಷ್ಟು ಕಾಣೋಕೆ ಸಿಗಲ್ಲ ನೋಡಿ.

 

4. ಟ್ರೀಶಿಯಂ ಒಂದು ಗ್ರಾಂ = 19,394,25 ರೂ

ಇದನ್ನ ದೀಪಗಳಲ್ಲಿ ಬಳಸಲಾಗುತ್ತೆ. ಇನ್ನು ಒಂದು ಪೌಂಡ್ ತಯಾರಿಸೋಕೆ 15 ಮಿಲಿಯನ್ ಡಾಲರ್ ಬೇಕಾಗುತ್ತಂತೆ.

 

3. ವಜ್ರ ಒಂದು ಗ್ರಾಂ = 35,552,00 ರೂ ವರೆಗೂ ಇದೆ

ಭೂಮಿಮೇಲೆ ಸಿಗೋ ಅತ್ಯಂತ ಬೆಲೆಯುಳ್ಳ ಹರಳು. ಎಲ್ಲರ ಅಚ್ಚುಮೆಚ್ಚು.

 

2. ಕ್ಯಾಲಿಫೋರ್ನಿಯಂ ಒಂದು ಗ್ರಾಂ = 16,160,000,00 ರೂ

ಅತ್ಯಂತ ಬೆಲೆಯುಳ್ಳ ಕೆಮಿಕಲ್. ಇನ್ನು ಇದನ್ನ 1950 ಇಂದ ಈಚೆಗೆ ಒಂದೇ ಬಾರಿ ತಯಾರಿಸಲಾಗಿದೆ.

 

1. ಅಂಟಿಮ್ಯಾಟರ್ ಒಂದು ಗ್ರಾಂ = 6,46,050,000,000,00 ರೂ

ಪ್ರಪಂಚದಲ್ಲೇ ಅತ್ಯಂತ ಹೆಚ್ಚಿನ ಬೆಲೆ ಇದಕ್ಕೆ. ಮುಂದೆ ಇದನ್ನ ಸ್ಪೇಸ್ ಕ್ರಾಫ್ಟಿನಲ್ಲಿ ಇಂಧನವಾಗಿ ಬಳಸಬಹುದು ಅಂತ ಹೇಳ್ತಾರೆ. ಆದರೆ ತಯಾರಿಸೋಕೆ ಎಷ್ಟು ಖರ್ಚಾಗುತ್ತೆ ಅಂದ್ರೆ ಇಡೀ ಪ್ರಪಂಚದ ಮನುಷ್ಯರೆಲ್ಲಾ ಸೇರಿ ಒಂದು ವರ್ಷ ಒಂಚೂರು ವಿಶ್ರಾಂತಿ ತೊಗೊಳ್ದೆ ದುಡೀಬೇಕು!

 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮಗೆ ರಾಮನ ಬಗ್ಗೆ ಎಷ್ಟು ಗೊತ್ತು ಅಂತ ಅರ್ಥ ಆಗಕ್ಕೆ ಈ ಚಿಕ್ಕ ಕ್ವಿಜ಼್‌ ಸಹಾಯ ಮಾಡುತ್ತೆ

ರಾಮಾಪಹರಣ ಕೇಳಿದೀರಿ ತಾನೆ?

ರಾಮನ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ! ಆದರೆ ರಾಮನ ಬಗ್ಗೆ ಎಲ್ಲವೂ ಗೊತ್ತಿದೆ ಅನ್ನೋರ ಸಂಖ್ಯೆ ಪ್ರಾಯಶಃ ಒಂದು. ಹೌದು, ಒಬ್ಬನಿಗೇ ಗೊತ್ತಿರೋದು ಎಲ್ಲಾ… ಅದು ವಾಲ್ಮೀಕಿಗೆ ಮಾತ್ರ! ಆದರೆ ಕಳಗಿರೋ ಕೆಲವು ಪ್ರಶ್ನೆಗಳಿಗೆ ನೀವು ಉತ್ತರ ಕೊಡ್ತಾ ಹೋಗಿ, ಆಗ ನಿಮಗೆ ರಾಮನ ಬಗ್ಗೆ ಎಷ್ಟು ಗೊತ್ತಿದೆ ಅಂತ ನಿಮಗೇ ಗೊತ್ತಾಗುತ್ತೆ.

1. ರಾಮನಿಗೆ ರಾಮ ಅಂತ ಹೆಸರು ಕೊಟ್ಟಿದ್ದು ಯಾರು?

2. ಯಾವುದೇ ಆಯುಧ ಇಲ್ಲದೆ ರಾಮನ್ನ ಯುದ್ಧದಲ್ಲಿ ಸೋಲಿಸಿದ ವ್ಯಕ್ತಿ ಯಾರು?

3. ರಾಮ ವನವಾಸಕ್ಕೆ ಹೋದಾಗ ಅವನಿಗೆ ಎಷ್ಟು ವರ್ಷ?

4. ತನ್ನ ಅವತಾರದ ಕೊನೆಯಲ್ಲಿ ರಾಮ ದೇಹವನ್ನ ಎಲ್ಲಿ ಮತ್ತೆ ಹೇಗೆ ಬಿಟ್ಟು ಹೋಗ್ತಾನೆ?

5. ರಾಮ, ಸೀತೆ ಮತ್ತು ಲಕ್ಷ್ಮಣರು ವನವಾಸ ಮಾಡಿದ ವನ ಯಾವುದು?

6. ಸೀತಾಪಹರಣ ಕೇಳಿದೀರಿ, ಆದರೆ ರಾಮಾಪಹರಣ ಕೇಳಿದೀರಾ? ಅಪಹರಿಸಿದ ವ್ಯಕ್ತಿ ಯಾರು?

7. ರಾಮಸೇತು ಎಷ್ಟು ಉದ್ದ ಇತ್ತು? ಅದನ್ನ ಕಟ್ಟಕ್ಕೆ ಎಷ್ಟು ದಿನ ತೊಗೋತು?

8. ರಾವಣನ ಮಾಯಾವಿ ಶಕ್ತಿಗಳ ಬಗ್ಗೆ ರಾಮನಿಗೆ ತಿಳಿಸಿದ್ದು ಯಾರು?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: