ಕೂದಲು ಒರಟಾಗಿದ್ರೆ ಈ 4 ಉಪಾಯ ಮಾಡಿ ರೇಶ್ಮೆ ತರ ಮಾಡ್ಕೊಳ್ಳಿ

ದುಡ್ಡೇನೂ ಹೆಚ್ಚು ಖರ್ಚು ಮಾಡ್ಬೇಕಾಗಿಲ್ಲ.

ಕಪ್ಪಗೆ, ದಪ್ಪಗೆ ಮಿರಿ ಮಿರಿ ಮಿಂಚೋ ಉದ್ದ ಕೂದಲು ಯಾರಿಗೆ ಇಷ್ಟ ಆಗಲ್ಲ ಹೇಳಿ? ಕೆಲವೊಂದು ಸಲ ವಾತಾವರಣ ಬದಲಾದ ಹಾಗೆ ಕೂದಲು ಕೂಡ ಅಂದ ಕಳಕೊಳ್ಳತ್ತೆ. ಒರಟು, ಜೀವ ಇಲ್ಲದಿರೋ ಕೂದಲಿಂದ ಬೇಸತ್ತು ಹೋಗಿದ್ರೆ, ಇಲ್ಲಿದೆ ನೋಡಿ ಸುಲಭ ಪರಿಹಾರ.

1. ತೆಂಗಿನ ಎಣ್ಣೆಗೆ ತೊಟ್ಟು ಹರಳೆಣ್ಣೆ ಸೇರಿಸಿ ಕೂದಲಿಗೆ ಹಚ್ಚಿ.

d2xvqrdcppz7p3.cloudfront.net
ಹೀಗೆ ಮಾಡೋದ್ರಿಂದ ನಿಮ್ಮ ಕೂದಲು ದಪ್ಪಗೆ ಬೆಳೆಯೋದು ಮಾತ್ರ ಅಲ್ಲ. ಕೂದಲು ಮೃದುವಾಗಿ ರೇಷ್ಮೆ ತರ ಮಿರಿ ಮಿರಿ ಮಿಂಚತ್ತೆ. ಕೂದಲಿನ ಬುಡಕ್ಕೂ ಬೇಕಾದ ಪೋಷಕಾಂಶ ಸಿಗುತ್ತೆ.

2. ವಾರಕ್ಕೊಂದು ಸಲ ಕೂದಲಿಗೆ ಮೊಸರು ಹಚ್ಚಿದ್ರೆ, ಯಾವ ಸ್ಪಾ ಟ್ರೀಟ್ಮೆಂಟೂ ಬೇಕಿಲ್ಲ.

cdn2.stylecraze.com
ದುಡ್ಡು ಖರ್ಚು ಮಾಡಿದರಷ್ಟೇ ಕೂದಲು ಚೆನ್ನಾಗಿರೋದು ಅನ್ಕೋಬೇಡಿ. ಅಲ್ಲಿ ಇಲ್ಲಿ ದುಡ್ಡು ಹಾಕೋದು ಬಿಟ್ಟು, ವಾರಕ್ಕೊಂದು ಸಲ ಕೂದಲಿಗೆ ಮೊಸರು ಹಚ್ಚಿ, ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿ. ನಿಮ್ಮ ಕೂದಲು ಹೊಳೆಯತ್ತೆ.

3. ವಾರಕ್ಕೊಂದು ಸಲ ಹಸಿ ಹಾಲಿನಿಂದ ಕೂದಲು ತೊಳೆಯಿರಿ.

i.ytimg.com
ಹಸಿ ಹಾಲು ಬರೀ ನಾಗಪ್ಪನ ಪೂಜೆಗೆ ಮಾತ್ರ ಅಲ್ಲ ರೀ...ನಿಮ್ಮ ಕೂದಲಿಗೂ ಶ್ರೇಷ್ಠನೇ. ಹೀಗೆ ಹಾಲು ಹಾಕಿ ಸ್ನಾನ ಮಾಡಿದ್ರೆ, ನಿಮ್ಮ ಕೂದಲು ನಿಜಕ್ಕೂ ತುಂಬಾ ಮೃದು ಆಗತ್ತೆ.

4. ಸ್ವಲ್ಪ ದಿನ ಮಕ್ಕಳ ಶ್ಯಾಂಪೂ ಹಾಕಿ. ನಿಮ್ಮ ಶ್ಯಾಂಪೂ ಬಳಸೋದು ನಿಲ್ಲಿಸಿ.

glossypolish.com ಶ್ಯಾಂಪೂಗಳು ಕೆಲವು ಸಲ ನಮ್ಮ ಕೂದಲಿಗೆ ಬೇಕಾದ ಜಿಡ್ಡಿನಂಶ ತೆಗೆದು ಹಾಕಿ ಬಿಡತ್ತೆ. ಜಾಸ್ತಿ ಅಂತಹ ಶ್ಯಾಂಪೂ ಬಳಸೋದ್ರಿಂದ ನಿಮ್ಮ ಕೂದಲು ಜೀವ ಕಳೆದುಕೊಳ್ಳತ್ತೆ. ಮಕ್ಕಳ ಶ್ಯಾಂಪೂ ನಿಮ್ಮ ಕೂದಲನ್ನ ಹಿತವಾಗಿ ಸ್ವಚ್ಛ ಮಾಡಿ, ತೇವಾಂಶ ಉಳಿಸತ್ತೆ. ಅದಕ್ಕೇ ಹೇಳಿದ್ದು, ಸ್ವಲ್ಪ ದಿನ ನಿಮ್ಮ ಶ್ಯಾಂಪೂಗೆ ಗುಡ್ ಬೈ ಹೇಳಿ ಅಂತ.

ಇಷ್ಟು ಮಾಡಿದ್ರೆ, ಬೇಕಾದಷ್ಟು. ಒಂದು ಸಲ ಪ್ರಯತ್ನ ಮಾಡಿ ನೋಡಿ. ಇವ್ಯಾವುದಕ್ಕೂ ನೂರಾರು ರುಪಾಯಿ ಖರ್ಚಾಗಲ್ಲ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮಗೆ ರಾಮನ ಬಗ್ಗೆ ಎಷ್ಟು ಗೊತ್ತು ಅಂತ ಅರ್ಥ ಆಗಕ್ಕೆ ಈ ಚಿಕ್ಕ ಕ್ವಿಜ಼್‌ ಸಹಾಯ ಮಾಡುತ್ತೆ

ರಾಮಾಪಹರಣ ಕೇಳಿದೀರಿ ತಾನೆ?

ರಾಮನ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ! ಆದರೆ ರಾಮನ ಬಗ್ಗೆ ಎಲ್ಲವೂ ಗೊತ್ತಿದೆ ಅನ್ನೋರ ಸಂಖ್ಯೆ ಪ್ರಾಯಶಃ ಒಂದು. ಹೌದು, ಒಬ್ಬನಿಗೇ ಗೊತ್ತಿರೋದು ಎಲ್ಲಾ… ಅದು ವಾಲ್ಮೀಕಿಗೆ ಮಾತ್ರ! ಆದರೆ ಕಳಗಿರೋ ಕೆಲವು ಪ್ರಶ್ನೆಗಳಿಗೆ ನೀವು ಉತ್ತರ ಕೊಡ್ತಾ ಹೋಗಿ, ಆಗ ನಿಮಗೆ ರಾಮನ ಬಗ್ಗೆ ಎಷ್ಟು ಗೊತ್ತಿದೆ ಅಂತ ನಿಮಗೇ ಗೊತ್ತಾಗುತ್ತೆ.

1. ರಾಮನಿಗೆ ರಾಮ ಅಂತ ಹೆಸರು ಕೊಟ್ಟಿದ್ದು ಯಾರು?

2. ಯಾವುದೇ ಆಯುಧ ಇಲ್ಲದೆ ರಾಮನ್ನ ಯುದ್ಧದಲ್ಲಿ ಸೋಲಿಸಿದ ವ್ಯಕ್ತಿ ಯಾರು?

3. ರಾಮ ವನವಾಸಕ್ಕೆ ಹೋದಾಗ ಅವನಿಗೆ ಎಷ್ಟು ವರ್ಷ?

4. ತನ್ನ ಅವತಾರದ ಕೊನೆಯಲ್ಲಿ ರಾಮ ದೇಹವನ್ನ ಎಲ್ಲಿ ಮತ್ತೆ ಹೇಗೆ ಬಿಟ್ಟು ಹೋಗ್ತಾನೆ?

5. ರಾಮ, ಸೀತೆ ಮತ್ತು ಲಕ್ಷ್ಮಣರು ವನವಾಸ ಮಾಡಿದ ವನ ಯಾವುದು?

6. ಸೀತಾಪಹರಣ ಕೇಳಿದೀರಿ, ಆದರೆ ರಾಮಾಪಹರಣ ಕೇಳಿದೀರಾ? ಅಪಹರಿಸಿದ ವ್ಯಕ್ತಿ ಯಾರು?

7. ರಾಮಸೇತು ಎಷ್ಟು ಉದ್ದ ಇತ್ತು? ಅದನ್ನ ಕಟ್ಟಕ್ಕೆ ಎಷ್ಟು ದಿನ ತೊಗೋತು?

8. ರಾವಣನ ಮಾಯಾವಿ ಶಕ್ತಿಗಳ ಬಗ್ಗೆ ರಾಮನಿಗೆ ತಿಳಿಸಿದ್ದು ಯಾರು?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: