ಜಾಸ್ತಿ ಮಾತಾಡದೆ ಇರೋರ್ನ ಅರ್ಥ ಮಾಡ್ಕೊಳಕ್ಕೆ ನಿಮಗೆ ಈ 6 ವಿಶೇಷ ಸತ್ಯಗಳು ಗೊತ್ತಿರಬೇಕು

ಮಾತಾಡೊಲ್ಲ ಅಂದ ಮಾತ್ರಕ್ಕೆ ನಾಚಿಕೆ ಅಲ್ಲ

ಜಾಸ್ತಿ ಮಾತಾಡದವ್ರನ್ನ ನೋಡಿ ನಾವು ಏನೇನೋ ಅಂದ್ಕೊಂಡಿರ್ತೀವಿ. ಅವ್ರಿಗೆ ನಾಚಿಕೆ, ಹಿಂಜರಿಕೆ, ಕೆಲವೊಮ್ಮೆ ಅಹಂಕಾರ ಅಂತಾನೂ ಅಂದ್ಕೊಂಡಿರ್ತೀವಿ. ಗುಮ್ಮನಗುಸಕ, ಮೂಶಂಡಿ, ಸುಮ್ನೆ ಕೂತು ಎಲ್ರೂ ಮಾತಾಡೋದು ನೋಡ್ತಿರ್ತಾರೆ, ಎಲ್ಲರ ಬಗ್ಗೆನೂ ಏನೋ ಅಂದ್ಕೋತಿರ್ತಾರೆ ಅಂತ ನಾವು ಅಂದ್ಕೊಂಡಿರ್ತೀವಿ. ಆದ್ರೆ ಅವ್ರು ನಾವು ಅಂದ್ಕೊಂಡ ಹಾಗಿರೊಲ್ಲ. ಸತ್ಯ ಬೇರೆನೇ ಇರುತ್ತೆ. ಈ 6 ಸತ್ಯಗಳ್ನ ತಿಳ್ಕೊಳ್ಳಿ, ನೀವು ಅವ್ರನ್ನ ನೋಡೋ ರೀತಿ ಬದಲಾಗುತ್ತೆ.

1. ಅವರು ಹೊರಗೆ ಮೌನವಾಗಿರ್ತಾರೆ, ಆದ್ರೆ ಒಳೊಳಗೇ ತುಂಬ ಮಾತಾಡ್ತಾರೆ

ಅವ್ರು ಏನೂ ಮಾತಾಡ್ತಿಲ್ಲ ಅಂದ ಮಾತ್ರಕ್ಕೆ ಅವ್ರ ತಲೆ ಖಾಲಿಯಾಗಿದೆ ಅಂತ ಅಲ್ಲ. ಸ್ಟೀಫನ್ ಹಾಕಿಂಗ್ ಒಮ್ಮೆ, 'Silent people have the loudest minds.', ಅಂತ ಹೇಳಿದ್ದಾನೆ. ಅವ್ರ ತಲೇಲಿ ತುಂಬಾ ಸೀರಿಯಸ್ ಆಲೋಚನೆಗಳು ಇರುತ್ತೆ, ಹಾಗೆನೇ ತಮಾಷೆ, ವ್ಯಂಗ್ಯ ಎಲ್ಲಾನೂ ಇರುತ್ತೆ. ಅವ್ರು ಯೋಚ್ನೆ ಮಾಡೋದು ಜಾಸ್ತಿ. ಅವ್ರು ಮನಸಲ್ಲೇ ಮಾತಾಡ್ತಾರೆ, ಏನಾದ್ರೂ ಕೆಲ್ಸಕ್ಕೆ ಕೈ ಹಾಕೋ ಮೊದ್ಲು ಅದರ ಪಾಸಿಟಿವ್-ನೆಗೆಟಿವ್ಗಳನ್ನ ಮನಸಲ್ಲೇ ಅಳೆದಿರ್ತಾರೆ.

2. ಮಾತಾಡದೆ ನಿಮ್ಮ ಬಗ್ಗೆ ತಿಳ್ಕೊಳ್ಳೋ ಕಲೆ ಅವ್ರಿಗೆ ಗೊತ್ತಿರುತ್ತೆ

ಅವ್ರಿಗೆ ಮೌನವೂ ಮಾತಾಡುತ್ತೆ. ನಿಮ್ಮ ಕಣ್ಣು, ನೀವು ನಿಂತಿರೋ ರೀತಿ - ಇಷ್ಟರಿಂದ್ಲೇ ನಿಮ್ಮ ಮೂಡ್ ಹೇಗಿದೆ ಅಂತ ಅವ್ರಿಗೆ ಗೊತ್ತಾಗುತ್ತೆ. ಯಾವಾಗ್ಲೂ ಇಷ್ಟೇ ಸಾಕಾಗೊಲ್ಲ, ಅವ್ರಿಗೆ ಇಂಟರೆಸ್ಟ್ ಇದ್ರೆ ಅವ್ರು ಮಾತಾಡಿ ನಿಮ್ ಬಗ್ಗೆ ತಿಳ್ಕೋತಾರೆ.

3. ಮಾತಾಡೊಲ್ಲ ಅಂದ ಮಾತ್ರಕ್ಕೆ ಅವರಿಗೆ ನಾಚಿಕೆ ಅಂತೇನಲ್ಲ

ಮಾತಾಡಿದ್ರೆ ತುಂಬಾ ಕಾನ್ಫಿಡೆಂಟ್ ವ್ಯಕ್ತಿ ಅಂತ ನಾವು ಅಂದ್ಕೋತೀವಿ. ಅದರಿಂದಾನೇ ಮಾತಾಡ್ದೇ ಇರೋರು ಆತ್ಮವಿಶ್ವಾಸ ಇಲ್ದಿರೋರು ಅಂತ ಅಂದ್ಕೋತೀವಿ. ಆದ್ರೆ ಇದೇನೂ ಯಾವಾಗ್ಲೂ ನಿಜ ಅಲ್ಲ. ಕೆಲವ್ರು ಕಡಿಮೆ ಮಾತಾಡಿದ್ರೂ ಕೂಡ ಅವ್ರಿಗೆ ಭಯ ಏನೂ ಇರೊಲ್ಲ. ಮನಸಲ್ಲಿರೋದನ್ನ ಹೇಳೋಕೆ ನಾಚ್ಕೇನೂ ಇರೊಲ್ಲ. ಅವ್ರು ಕೆಲವು ಸಲ ಮಾತಾಡೊಲ್ಲ, ಅಷ್ಟೆ. ಅದು ಅವ್ರ ಅಭ್ಯಾಸ. ಅದಕ್ಕೆ ಭಯ, ನಾಚಿಕೆ ಕಾರಣ ಅಲ್ಲ.

4. ಮಾತಾಡೊಲ್ಲ ಅಂದ ಮಾತ್ರಕ್ಕೆ ನಿಮ್ ಮೇಲೆ ಏನೋ ದ್ವೇಷ ಅಂತಲ್ಲ

ಯಾವ್ದೇ ಸಂಬಂಧದಲ್ಲಿ ಇನ್ನೊಬ್ರ ಬಗ್ಗೆ ಆಸಕ್ತಿ ತೋರ್ಸೋಕೆ ಮಾತಾಡೋದೇ ಸುಲಭದ ದಾರಿ. ಆದ್ರೆ ಕಡಿಮೆ ಮಾತಾಡೋರು ಅವ್ರ ಪ್ರೀತಿನ ಬೇರೆ ರೀತೀಲೂ ತೋರಿಸ್ತಾರೆ. ಕೆಲವ್ರಿಗೆ 'ಎಲ್ಲ ಸರಿಯಾಗಿದೆ.', ಅಂತ ಹೇಳೋಕೆ ಆಗಾಗ ನಗ್ತಾ ಮಾತಾಡೋದು ಅವಶ್ಯ ಅನ್ಸುತ್ತೆ. ಆದರೆ ಮಾತು ಕಡಿಮೆ ಆಡೋರು ಎಲ್ಲ ಸರಿಯಾಗಿದ್ರೆ ಮಾತಾಡೋ ಅವಶ್ಯಕತೆ ಇಲ್ಲ ಅಂತ ಅಂದ್ಕೋತಾರೆ. ಏನಾದ್ರೂ ಸಮಸ್ಯೆ ಇದ್ರೆ ಮಾತಾಡಿದ್ರೆ ಸಾಕು ಅಂತ ಅವ್ರ ಅಭಿಪ್ರಾಯ. ಇದರಲ್ಲಿ ಯಾವ್ದು ಸರಿ, ಯಾವ್ದು ತಪ್ಪು ಅಂತ ಹೇಳೋಕಾಗೊಲ್ಲ. ಒಬ್ಬೊಬ್ರು ಒಂದೊಂದು ಥರ ಅಂತ ಹೇಳ್ಬಹುದು ಅಷ್ಟೆ. ಆದ್ರೆ ಮಾತು ಕಡಿಮೆ ಆಡೋರು ನಿಮ್ ಮೇಲಿನ್ ದ್ವೇಷದಿಂದ ಮೌನವಾಗಿದ್ದಾರೆ ಅಂತ ಅಂದ್ಕೊಳ್ಳೋದು ನಿಲ್ಸಿ.

5. ಅವರು ತುಂಬ ಯೋಚನೆ ಮಾಡಿ ಮಾತಾಡ್ತಾರೆ

ಮಾತು ಆಡಿದ್ರೆ ಹೋಯ್ತು, ಮುತ್ತು ಒಡೆದ್ರೆ ಹೋಯ್ತು ಅಂತ ಹೇಳ್ತಾರಲ್ಲ. ಮಾತು ಕಡಿಮೆ ಆಡೋರು ಅದಕ್ಕೇ ಮಾತಾಡೋ ಮೊದ್ಲು ತುಂಬಾ ಯೋಚ್ನೆ ಮಾಡ್ತಾರೆ. ಅವ್ರು ತಪ್ಪುತಪ್ಪಾಗಿ ಏನೋ ಹೇಳೋಕೆ ಇಷ್ಟ ಪಡೊಲ್ಲ. ಹಾಗಂತ ತುಂಬಾ ಮಾತಾಡೋದು ತಪ್ಪು ಅಂತನೂ ಅಲ್ಲ. ಮತ್ತೆ ಅದೇ ಮಾತು ಹೇಳ್ಬೇಕಷ್ಟೆ - ಒಬ್ಬೊಬ್ರು ಒಂದೊಂದು ಥರ ಅಂತ.

6. ಅವರಿಗೆ ನಿಮ್ಮ ಸಹಾಯ ಏನೂ ಬೇಕಿಲ್ಲ, ಅವ್ರನ್ನ ಅರ್ಥ ಮಾಡ್ಕೊಂಡ್ರೆ ಅದೇ ಸಾಕು

ಮಾತು ಕಡಿಮೆ ಆಡೋದು ಏನೋ ಕೊರತೆ ಅನ್ನೋ ಥರ ನೋಡ್ಬೇಕಾಗಿಲ್ಲ. ಮಾತು ಕಡಿಮೆ ಆಡೋರು ಅವ್ರ ಭಾವನೆಗಳ್ನ ಬೇರೆ ಯಾವ್ದೋ ರೀತೀಲಿ ವ್ಯಕ್ತಪಡಿಸ್ತಾರೆ. ಅದನ್ನ ಅರ್ಥ ಮಾಡ್ಕೋಬೇಕಷ್ಟೆ.

ಕಡಿಮೆ ಮಾತಾಡೋರ ಬಗ್ಗೆ ನಿಮ್ಗೆ ಈಗ ಸ್ವಲ್ಪ ಅರ್ಥ ಆಗಿರ್ಬಹುದಲ್ವಾ? ಅಥ್ವಾ ನೀವು ಕಡಿಮೆ ಮಾತಾಡೋರಾಗಿದ್ರೆ ನಿಮ್ ಬಗ್ಗೆ ನಿಮ್ಗೇ ಸ್ವಲ್ಪ ಹೆಚ್ಚೇ ಗೊತ್ತಾಗಿರ್ಬಹುದಲ್ವಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮಗೆ ರಾಮನ ಬಗ್ಗೆ ಎಷ್ಟು ಗೊತ್ತು ಅಂತ ಅರ್ಥ ಆಗಕ್ಕೆ ಈ ಚಿಕ್ಕ ಕ್ವಿಜ಼್‌ ಸಹಾಯ ಮಾಡುತ್ತೆ

ರಾಮಾಪಹರಣ ಕೇಳಿದೀರಿ ತಾನೆ?

ರಾಮನ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ! ಆದರೆ ರಾಮನ ಬಗ್ಗೆ ಎಲ್ಲವೂ ಗೊತ್ತಿದೆ ಅನ್ನೋರ ಸಂಖ್ಯೆ ಪ್ರಾಯಶಃ ಒಂದು. ಹೌದು, ಒಬ್ಬನಿಗೇ ಗೊತ್ತಿರೋದು ಎಲ್ಲಾ… ಅದು ವಾಲ್ಮೀಕಿಗೆ ಮಾತ್ರ! ಆದರೆ ಕಳಗಿರೋ ಕೆಲವು ಪ್ರಶ್ನೆಗಳಿಗೆ ನೀವು ಉತ್ತರ ಕೊಡ್ತಾ ಹೋಗಿ, ಆಗ ನಿಮಗೆ ರಾಮನ ಬಗ್ಗೆ ಎಷ್ಟು ಗೊತ್ತಿದೆ ಅಂತ ನಿಮಗೇ ಗೊತ್ತಾಗುತ್ತೆ.

1. ರಾಮನಿಗೆ ರಾಮ ಅಂತ ಹೆಸರು ಕೊಟ್ಟಿದ್ದು ಯಾರು?

2. ಯಾವುದೇ ಆಯುಧ ಇಲ್ಲದೆ ರಾಮನ್ನ ಯುದ್ಧದಲ್ಲಿ ಸೋಲಿಸಿದ ವ್ಯಕ್ತಿ ಯಾರು?

3. ರಾಮ ವನವಾಸಕ್ಕೆ ಹೋದಾಗ ಅವನಿಗೆ ಎಷ್ಟು ವರ್ಷ?

4. ತನ್ನ ಅವತಾರದ ಕೊನೆಯಲ್ಲಿ ರಾಮ ದೇಹವನ್ನ ಎಲ್ಲಿ ಮತ್ತೆ ಹೇಗೆ ಬಿಟ್ಟು ಹೋಗ್ತಾನೆ?

5. ರಾಮ, ಸೀತೆ ಮತ್ತು ಲಕ್ಷ್ಮಣರು ವನವಾಸ ಮಾಡಿದ ವನ ಯಾವುದು?

6. ಸೀತಾಪಹರಣ ಕೇಳಿದೀರಿ, ಆದರೆ ರಾಮಾಪಹರಣ ಕೇಳಿದೀರಾ? ಅಪಹರಿಸಿದ ವ್ಯಕ್ತಿ ಯಾರು?

7. ರಾಮಸೇತು ಎಷ್ಟು ಉದ್ದ ಇತ್ತು? ಅದನ್ನ ಕಟ್ಟಕ್ಕೆ ಎಷ್ಟು ದಿನ ತೊಗೋತು?

8. ರಾವಣನ ಮಾಯಾವಿ ಶಕ್ತಿಗಳ ಬಗ್ಗೆ ರಾಮನಿಗೆ ತಿಳಿಸಿದ್ದು ಯಾರು?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: