ನಿಮ್ಮ ಮಕ್ಕಳು ಚೆನ್ನಾಗಿ ಬೆಳೆದು ಒಳ್ಳೇ ಸಾಧನೆ ಮಾಡ್ಬೇಕಾದ್ರೆ ಅವರಿಗೆ ಈ 7 ವಿಷಯ ಹೇಳ್ಕೊಡಿ

ಬೀಳ್ಬೇಕು ಬಿದ್ದಮೇಲೆ ಮೇಲೆ ಏಳ್ಬೇಕು ಅಂತ ಕಲಿಸಿ

ಯಾರಿಗೆ ನನ್ನ ಮಕ್ಕಳು ಬೆಳೆದು ಹೆಸರು ಮಾಡ್ಬೇಕು, ಸಾಧನೆ ಮಾಡ್ಬೇಕು ಅಂತ ಅಸ್ಸೇ ಇರಲ್ಲ, ಆದ್ರೆ ಆಸೆ ಪಟ್ಟೊರೆಲ್ಲ ಇವತ್ತು ಸಾಧನೆ ಮಾಡಿದ್ದಿದ್ರೆ.... ಇವತ್ತು ನಾವಿದನ್ನ ಬರಿತಿರ್ಲಿಲ್ಲ. ಸುಮ್ಮನೆ ಆಸೆ ಪಟ್ಟರಾಗಲ್ಲ ಮಕ್ಕಳನ್ನ ಹೇಗೆ ಬೆಳೆಸ್ತೀವಿ ಅನ್ನೋದರ ಮೇಲೆ ಹೋಗತ್ತೆ. ನಿಮ್ಮ್ ಮಕ್ಳು ಸಾಧನೆ ಮಾಡ್ಬೇಕು ಅನ್ನೋದು ನಿಮ್ಮಾಸೆ ಆಗಿದ್ರೆ ನಾವು ಇಲ್ಲಿ ಹೇಳಿರೋ ಥರ ಬೆಳೆಸಿ... 

1. ತೊಂದರೆಗಳ್ನ ಹೇಗೆ ಎದುರಿಸಬೇಕು ಅಂತ ಹೇಳಿಕೊಡಿ

ಮುಕ್ಕಾಲ್ವಾಸಿ ಜನ ಇಲ್ಲೇ ಎಡವೋದು, ನನ್ನ ಮಕ್ಕಳು ಆರಾಮಾಗಿರ್ಲಿ ಅವರಿಗೆ ಯಾವದೇ ತೊಂದ್ರೆ ಬರದೇ ಇರ್ಲಿ ಅಂತ ಅಂತೀವಿ. ಆದ್ರೆ ಕಷ್ಟ ಬಂದಾಗ ಹೇಗೆ ಎದುರಿಸಬೇಕು ಅಂತ ಹೇಳ್ಕೊಡಲ್ಲ, ಮುಂದಕ್ಕೆ ಹೇಳ್ಕೊಡೋದನ್ನ ಮರೀಬೇಡಿ. ಕೈ ಕಾಲಿಗೆ ಗಾಯಾನು ಆಗ್ಬಾರ್ದು ಮೂಗು ಕ್ರಿಕೆಟನ್ನು ಸೂಪರ್ರಾಗಿ ಆಡ್ಬೇಕು ಅಂದ್ರೆ ಆಗತ್ತಾ. ಕಷ್ಟಾನೇ ಬರ್ಬಾರ್ದು ಅಂದ್ರೆ ತಪ್ಪಾಗತ್ತೆ. ಅದಕ್ಕೆ ಕಷ್ಟಾನಾ ಧೈರ್ಯದಿಂದ ಎದುರಿಸೋದನ್ನ ಕಲಿಸಿಕೊಡಿ.

2. ಅವರ ಕೆಲಸ ಅವರೇ ಮಾಡ್ಕೊಳೋದನ್ನ ಕಲಿಸಿಕೊಡಿ 

ಹೆಚ್ಚು ಕಡಿಮೆ ಕಷ್ಟವಾದ ಕೆಲಸಾನ ನೀವೇ ಮಾಡ್ಕೊಟ್ಟಿರ್ತೀರ. ಅಯ್ಯೋ ಪಾಪ ನಮ್ಮ ಮಕ್ಕಳಿಗೆ ಈ ಕೆಲಸ ಮಾಡಕ್ಕೆ ಕಷ್ಟ ಆಗತ್ತೆ ಪಾಪ ಅನ್ಕೊಂಡು ನಾವೇ ಎಲ್ಲ ಮಾಡ್ಕೊಟ್ಟಿರ್ತೀವಿ. ಆದ್ರೆ ಆ ಕೆಲಸಾನ ಮಾಡೋದು ನಿಮ್ಮ ಮಕ್ಳು ಕಲಿಯೋದು ಯಾವಾಗ. ಅದಕ್ಕೆ ಅವರಿಗೆ ಅವರ ಕೆಲಸಾನ ಮಾಡ್ಕೊಳೋದನ್ನ ಕಲಿಸಿಕೊಡಿ. ಒಂದೆರಡು ಸತಿ ತಪ್ಪು ಮಾಡಬೋದು, ಆದ್ರೆ ತಪ್ಪಿಂದಾನೆ ತಾನೇ ಕಲಿಯಕ್ಕಾಗದು.

3. ಬೇಗ ಹೊಗಳಬೇಡಿ

ಏನಪ್ಪಾ ಇದು ಅಂತ ಅನ್ಕೋಬೇಡಿ. ನಿಮ್ಮ ಮಕ್ಕಳು ಗೆದ್ದಾಗ ಬೆನ್ನು ತಟ್ಟಿ, ಸಂಭ್ರಮ ಪಡಿ ಒಳ್ಳೇದೇ ಆದ್ರೆ ಅತೀ ಮಾಡಕ್ಕೆ ಹೋಗ್ಬೇಡಿ. ಈಗ ಕ್ರಿಕೆಟ್ಟಲ್ಲಿ ನಿಮ್ಮ ಮಕ್ಕಳು ಆಡಿದ ತಂಡ ಗೆದ್ದರೆ ಅದು ಇಡೀ ತಂಡದ ಗೆಲುವು. ನೀವು ಓ ನನ್ನ ಮಕ್ಕಳು ಆಡಿದ್ದಕ್ಕೆ ಗೆದ್ದಿದ್ದು ಹಾಗೆ ಹೀಗೆ ಅಂತ ಹೇಳುದ್ರೆ ಅವ್ರಿಗೆ ಜಂಭ ಬಂದ್ಬಿಡತ್ತೆ ಆದ್ರೆ ಜಾಸ್ತಿ ಕಲ್ತಿರಲ್ಲ.

4. ಅವರಿಗೆ ಬೇಕಾದನ್ನ ಸಂಪಾದನೆ ಮಾಡ್ಕೊಳೋದನ್ನ ಕಲಿಸಿಕೊಡಿ 

ಯಾವಾಗ್ಲೂ ಮಕ್ಕಳಿಗೆ ಕೇಳಿದ್ದನ್ನ ಕೊಡಿಸಿಬಿಡ್ತೀವಿ ಆದ್ರೆ ನೀವಾಗೇ ಕೊಡಿಸಕ್ಕೂ ಮುಂಚೆ ಅವ್ರಿಗೆ ಗಳಿಸೋದನ್ನ ಹೇಳಿಕೊಡಿ. ಈಗ ನಿಮ್ಮ ಮಕ್ಕಳು ಏನೋ ಕೇಳಿದ್ದಾರೆ ಅಂದ್ರೆ ತಕ್ಷಣ ಕೊಡಿಸಬೇಡಿ. ಇಬ್ರು ಮಕ್ಕಳಿದ್ದಾರೆ ಒಬ್ಬರನ್ನ ಹೊಗಳಿ ಇನ್ನೊಬ್ಬರನ್ನ ಹೇಗೆ ಹೊಗಳದೇ ಇರೋದು ಅಂತ ಅನ್ಕೋಬೇಡಿ. ಪ್ರೀತೀನಾ ಕಲಿಸಿಕೊಡಿ, ಇದನ್ನ ಮಾಡಿದ್ರೆ ಇದನ್ನ ಕೊಡಿಸ್ತೀನಿ ಅಂತ ಯಾವತ್ತೂ ಹೇಳಿಕೊಡಬೇಡಿ.

5. ನೀವು ಮಾಡಿದ ತಪ್ಪನ್ನ ಮಕ್ಕಳಿಗೆ ತಿಳಿಸಿ 

ಹೆಚ್ಚು ಕಮ್ಮಿ ಯಾರು ಇದನ್ನ ಮಾಡಲ್ಲ. ನಿಮ್ಮ ಮಕ್ಕಳಷ್ಟೇ ಅಲ್ಲ ನೀವು ಇದೆ ತರದ ತಪ್ಪನ್ನ ಮಾಡಿದ್ರೀ ಅಲ್ವಾ. ನಿಮ್ಮ ಮಕ್ಕಳಿಗೆ ಅದನ್ನ ಹೇಳಿ. ನಾನು ಈ ಥರ ತಪ್ಪನ್ನ ಮಾಡಿದ್ದೆ ಆದ್ರೆ ಅದರಿಂದ ಇದನ್ನ ಕಲಿತುಕೊಂಡೆ, ನೀನು ಈ ತಪ್ಪನ್ನ ಮಾಡ್ಬೇಡ ಅಂತ ನಿಮ್ಮ ಅನುಭವಾನ ಹಂಚ್ಕೊಂಡು ಅವರಿಗೆ ಬುದ್ದಿ ಹೇಳಿ.

6. ಬುದ್ದಿವಂತಿಕೆಗೂ ಜವಾಬ್ದಾರಿಗೂ ವ್ಯತ್ಯಾಸ ಹೇಳಿಕೊಡಿ 

ಎಲ್ಲರಿಗೂ ತಪ್ಪು ಕಲ್ಪನೆ ಇರತ್ತೆ, ಇವ್ನು ಬುದ್ದಿವಂತ ಇವನ ಈ ಕೆಲ್ಸಾನ ನಿಭಾಯಿಸ್ತಾನೆ ಅಂತ, ಆದ್ರೆ ಪಕ್ಕ ಅದರ ಉಲ್ತಾನೆ ಆಗದು. ಬುದ್ದಿವಂತನಿಗೆ ಸರಿಯಾಗಿ ಕೆಲಸ ಮಾಡಕ್ಕೆ ಗೊತ್ತಿರತ್ತೆ ಆದರೆ ಅದನ್ನ ನಿಭಾಯಿಸಕ್ಕೆ ಗೊತ್ತಿರಲ್ಲ. ಉದಾಹರಣೆ ಬುದ್ದಿವಂತ ಸಂಬಳಕ್ಕೆ ದುಡೀತಿರ್ತಾನೆ ಆದ್ರೆ ಸುಮಾರು ಸತಿ ಫೇಲಾದ ದಡ್ಡ ಕಂಪನಿ ನಡೆಸೋ ತಾಕತ್ತನ್ನ ತನ್ನ ಅನುಭವದಿಂದ ಕಲಿತಿರ್ತಾನೆ. ಆದ್ರಿಂದ ಬುದ್ದಿವಂತಿಕೆಗೂ, ಜವಾಬ್ದಾರೀಗೂ ವ್ಯತ್ಯಾಸ ತಿಳಿಸಿಕೊಡಿ ಹಾಗೆ ಬುದ್ದಿವಂತಿಕೆ ಜೊತೆಗೆ ಜವಾಬ್ದಾರಿ ನಿಭಾಯಿಸೋದನ್ನ ಕಲಿಸಿ.

7. ಸ್ವಾರ್ಥ ಬಿಟ್ಟು ಬದುಕೋದನ್ನ ಕಲಿಸಿ 

ಸುಮ್ಮನೆ ಮಕ್ಕಳಿಗೆ ಸ್ವಾರ್ಥ ಬಿಟ್ಟು ಬದುಕಿ ಅಂದ್ರೆ ಆಗಲ್ಲ, ನೀವು ಅದನ್ನ ಪಾಲಿಸಿ. ಸ್ವಾರ್ಥ ಬಿಟ್ಟು ಜನಕ್ಕಾಗಿ, ಸಮಾಜಸೇವೆಗಾಗಿ ಒಂದೆರಡು ಕೆಲಸ ಮಾಡಿ ಅದರಲ್ಲಿ ಸಿಗೋ ಖುಷೀನ ತಿಳಿಸಿಕೊಡಿ.

 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮಗೆ ರಾಮನ ಬಗ್ಗೆ ಎಷ್ಟು ಗೊತ್ತು ಅಂತ ಅರ್ಥ ಆಗಕ್ಕೆ ಈ ಚಿಕ್ಕ ಕ್ವಿಜ಼್‌ ಸಹಾಯ ಮಾಡುತ್ತೆ

ರಾಮಾಪಹರಣ ಕೇಳಿದೀರಿ ತಾನೆ?

ರಾಮನ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ! ಆದರೆ ರಾಮನ ಬಗ್ಗೆ ಎಲ್ಲವೂ ಗೊತ್ತಿದೆ ಅನ್ನೋರ ಸಂಖ್ಯೆ ಪ್ರಾಯಶಃ ಒಂದು. ಹೌದು, ಒಬ್ಬನಿಗೇ ಗೊತ್ತಿರೋದು ಎಲ್ಲಾ… ಅದು ವಾಲ್ಮೀಕಿಗೆ ಮಾತ್ರ! ಆದರೆ ಕಳಗಿರೋ ಕೆಲವು ಪ್ರಶ್ನೆಗಳಿಗೆ ನೀವು ಉತ್ತರ ಕೊಡ್ತಾ ಹೋಗಿ, ಆಗ ನಿಮಗೆ ರಾಮನ ಬಗ್ಗೆ ಎಷ್ಟು ಗೊತ್ತಿದೆ ಅಂತ ನಿಮಗೇ ಗೊತ್ತಾಗುತ್ತೆ.

1. ರಾಮನಿಗೆ ರಾಮ ಅಂತ ಹೆಸರು ಕೊಟ್ಟಿದ್ದು ಯಾರು?

2. ಯಾವುದೇ ಆಯುಧ ಇಲ್ಲದೆ ರಾಮನ್ನ ಯುದ್ಧದಲ್ಲಿ ಸೋಲಿಸಿದ ವ್ಯಕ್ತಿ ಯಾರು?

3. ರಾಮ ವನವಾಸಕ್ಕೆ ಹೋದಾಗ ಅವನಿಗೆ ಎಷ್ಟು ವರ್ಷ?

4. ತನ್ನ ಅವತಾರದ ಕೊನೆಯಲ್ಲಿ ರಾಮ ದೇಹವನ್ನ ಎಲ್ಲಿ ಮತ್ತೆ ಹೇಗೆ ಬಿಟ್ಟು ಹೋಗ್ತಾನೆ?

5. ರಾಮ, ಸೀತೆ ಮತ್ತು ಲಕ್ಷ್ಮಣರು ವನವಾಸ ಮಾಡಿದ ವನ ಯಾವುದು?

6. ಸೀತಾಪಹರಣ ಕೇಳಿದೀರಿ, ಆದರೆ ರಾಮಾಪಹರಣ ಕೇಳಿದೀರಾ? ಅಪಹರಿಸಿದ ವ್ಯಕ್ತಿ ಯಾರು?

7. ರಾಮಸೇತು ಎಷ್ಟು ಉದ್ದ ಇತ್ತು? ಅದನ್ನ ಕಟ್ಟಕ್ಕೆ ಎಷ್ಟು ದಿನ ತೊಗೋತು?

8. ರಾವಣನ ಮಾಯಾವಿ ಶಕ್ತಿಗಳ ಬಗ್ಗೆ ರಾಮನಿಗೆ ತಿಳಿಸಿದ್ದು ಯಾರು?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: