ಸೈಕಾಲಜಿ ಪ್ರಕಾರ ಮದುವೆ ಆಗಿರೋರು ಯಾಕೆ ಬೇರೆಯೋರ ಹಿಂದೆ ಹೋಗ್ತಾರೆ ಅಂತ ಕೇಳಿ ಆಶ್ಚರ್ಯ ಪಡ್ತೀರಿ

"ಅವಳನ್ನ ನಾನು ತುಂಬಾ ಪ್ರೀತಿಸ್ತೀನಿ"... "ಅವನೇ ನನ್ನ ನಿಜವಾದ ಸಂಗಾತಿ"...

ಮದುವೆ ಆಗಿದ್ದರೂ, ಗಂಡ-ಹೆಂಡತಿ ಅನ್ಯೋನ್ಯವಾಗಿ ಇದ್ದರೂ ಗಂಡಸು ಅಥವಾ ಹೆಂಗಸು ಬೇರೆಯೋರ ಹಿಂದೆ ಹೋಗೋದೇನು ಹೊಸದಲ್ಲ. ಇದನ್ನ ಸಮಾಜ ಒಳ್ಳೇ ನಡವಳಿಕೆ ಅಂತೇನು ಕರಿಯಲ್ಲ. ಆದರೆ ಅದಕ್ಕಿಂತ ಹೆಚ್ಚನ್ನೂ ನೀವು ಪ್ರಾಯಶಃ ಕೇಳಿಲ್ಲ. ಅಂದ್ರೆ... ಇದು ಕೆಟ್ಟದು ಅಂತ ಮಾತ್ರ ಕೇಳಿರ್ತೀರಿ. ಸೈಕಾಲಜಿಯಲ್ಲಿ ಇತ್ತೀಚಿನ ಸಂಶೋಧನೆಗಳಿಂದ ಈ ರೀತಿ ನಡ್ಕೊಳೋರ ಬಗ್ಗೆ ಸಾಕಷ್ಟು ತಿಳುವಳಿಕೆ ಮೂಡಿದೆ. ಅವರು ಹೀಗ್ಯಾಕೆ ಮಾಡ್ತಾರೆ? ಸಾಮಾನ್ಯವಾಗಿ ಈ ಅಫೇರುಗಳಲ್ಲಿ ಬೀಳೋರು ಈ ಮೂರು ಕಾರಣಗಳಿಗೋಸ್ಕರ ಬೀಳ್ತಾರಂತೆ...

1. ಅವರು ಈ ಮೂರನೆಯೋರ ಬಗ್ಗೆ ತಮ್ಮ ಮನಸ್ಸಿನಲ್ಲಿ ಮೂಡಿರೋ ಪ್ರತಿಬಿಂಬವನ್ನ ಮಾತ್ರ ಪ್ರೀತಿಸ್ತಾ ಇರ್ತಾರೆ

ಇಂಥ ಅಫೇರ್ ಮಾಡ್ಕೊಳೋರು ನಿಜಕ್ಕೂ ಆ ಮೂರನೇ ವ್ಯಕ್ತೀನ ಪ್ರೀತಿಸ್ತಾ ಇರ್ತಾರೆ ಅನ್ನೋದು ಸಾಮಾನ್ಯವಾಗಿ ಸುಳ್ಳಾಗಿರುತ್ತೆ. ಮೊದಮೊದಲಂತೂ ಅವರು ಪ್ರೀತಿಸೋದು ಆ ವ್ಯಕ್ತಿ ಯಾರು ಅಂತ ಇವರು ಅನ್ಕೊಂಡಿರ್ತಾರೋ ಆ ಊಹಾಪೋಹದ ವ್ಯಕ್ತೀನ ಮಾತ್ರ. ಅವಳು ಹಂಗಿರ್ತಾಳೆ, ಅವನ ಜೊತೆ ನನಗೆ ಇಂತಿಂಥ ಸುಖ ಸಿಗುತ್ತೆ ಅಂತೆಲ್ಲ ಮನಸ್ಸಲ್ಲೇ ಮಂಡಿಗೆ ಹಾಕಿಕೊಂಡಿರ್ತಾರೆ, ಅಷ್ಟೆ. ನಿಜಕ್ಕೂ ಆ ಮೂರನೇ ವ್ಯಕ್ತಿ ಹಾಗಿದಾನಾ/ಳಾ ಅಂತ ಯೋಚನೆ ಮಾಡಿರಲ್ಲ. ಅಂದರೆ ಯಾವ ಮೂರನೇ ವ್ಯಕ್ತಿ ಹಿಂದೆ ಇವರು ಬಿದ್ದಿರ್ತಾರೋ ಅವರು ಒಬ್ಬ ನಿಜವಾದ ವ್ಯಕ್ತಿ ಅಂತ ಹೇಳೋಕೇ ಕಷ್ಟ. ಇವರ ಮನಸ್ಸಿನಲ್ಲಿ ಮಾತ್ರ ಆ ವ್ಯಕ್ತಿ ಇರೋದು!

2. ಅವರಿಗೆ ಬೇರೆಯವರು ತಮ್ನ ಚೆನ್ನಾಗಿ ಹೊಗಳಬೇಕು ಅನ್ನೋ ಆಸೆ ಇರುತ್ತೆ.

ನೀನು ನೋಡಕ್ಕೆ ಚೆನ್ನಾಗಿದ್ಯಾ... ನೀನು ಒಳ್ಳೊಳ್ಳೆ ಬಟ್ಟೆ ಹಾಕ್ಕೋತ್ಯಾ... ನೀನು ಬಹಳಾ ಬುದ್ಧಿವಂತ/ಳು... ಹೀಗೆಲ್ಲ ಅನ್ನಿಸಿಕೊಳ್ಳಬೇಕು ಅನ್ನೋ ಆಸೆ ಇರುತ್ತೆ. ಈ ಆಸೆ ತೀರಿಸಿಕೊಳಕ್ಕೆ ಬೇರೆಯೋರ ಹಿಂದೆ ಹೋಗ್ತಾರೆ... ಗಂಡ/ಹೆಂಡತಿ ಇದನ್ನೆಲ್ಲ ಹೇಳ್ತಿಲ್ಲದೆ ಹೋದ್ರೆ, ಅಥವಾ ಕಡಿಮೆ ಹೇಳ್ತಿದ್ರಂತೂ ಈ ಆಸೆ ಹೆಚ್ಚಿರುವ ಸಾಧ್ಯತೆ ಜಾಸ್ತಿ. ಇಲ್ಲಿ ಪ್ರೀತಿ ಅನ್ನೋದು ಆ ಮೂರನೇ ವ್ಯಕ್ತಿಯ ಬಗ್ಗೇನಾ? ಖಂಡಿತ ಅಲ್ಲ. ಇಲ್ಲೂ ಈ ವ್ಯಕ್ತಿ ಪ್ರೀತಿಸ್ತಾ ಇರೋದು ಹೊಗಳಿಸಿಕೊಳ್ತಾ ಇರೋ ತನ್ನನ್ನ ಮಾತ್ರ ಅನ್ನಬಹುದು.

3. ಅವರಿಗೆ ಬೇಕಾಗಿರೋದು ಆ ಮೂರನೇ ವ್ಯಕ್ತಿ ಅಲ್ಲ, ಅವರಿಂದ ಸಿಗೋ 'ಕಚಗುಳಿ' ಅನುಭವ

ಇಂಥ ಅಫೇರುಗಳಲ್ಲಿ ಬೀಳೋರಿಗೆ ಒಂದ್ ಥರಾ ಮತ್ತು ಬಂದುಬಿಡುತ್ತೆ... ಆ ಮೂರನೆಯೋಳು ಅಥವ ಮೂರನೆಯೋನ ಜೊತೆ ಇದ್ದಾಗ ಆಗೋ ಆ 'ಕಚಗುಳಿ' ಮತ್ತೆ ಮತ್ತೆ ಬೇಕು ಅನ್ನಿಸ್ತಾ ಇರುತ್ತೆ. ಅಂದರೆ ಗಮನಿಸಿ, ಇಲ್ಲೂ ಇವರಿಗೆ ಬೇಕಿರೋದು ಆ ವ್ಯಕ್ತಿ ಅಲ್ಲ, ಕಚಗುಳಿ ಮಾತ್ರ. ಇದೇ ರೀತಿಯ ಕಚಗುಳಿ ಕೆಲವು ಕೆಮಿಕಲ್ಸ್ ಕೂಡ ಕೊಡಬಲ್ಲವು. ಡೋಪಾಮೈನ್ (ಕೊಕೇನ್ ಮತ್ತೆ ನಿಕೊಟೀನ್ ಸೇವನೆ ಮಾಡಿದರೆ ದೇಹ ತಾನೇ ಉತ್ಪತ್ತಿ ಮಾಡುತ್ತೆ), ನೊರೆಪಿನೆಫ್ರೀನ್ ಅಥವಾ ಅಡ್ರೀನಲಿನ್, ಮತ್ತೆ ಸೆರೋಟೋನಿನ್... ಈ ಮೂರು ಕೆಮಿಕಲ್ಗಳ್ನ ಮಿದುಳು ಉತ್ಪತ್ತಿ ಮಾಡುತ್ತೆ. ಅದರಿಂದ ಆಗೋ 'ಕಚಗುಳಿ' ಇವರಿಗೆ ಬೇಕು... ನಿಜಕ್ಕೂ ಆ ಮೂರನೇ ವ್ಯಕ್ತಿ ಅಲ್ಲ.

ಒಟ್ನಲ್ಲಿ ಮದುವೆ ಆಗಿರೋರು ಹೀಗ್ ನಡ್ಕೊಳೋದ್ರಲ್ಲಿ ಆ ಮೂರನೆ ವ್ಯಕ್ತಿ ಮುಖ್ಯವೇ ಅಲ್ಲ. ಅದೊಂದು ಮುಖವಾಡ, ಅಷ್ಟೇ...

ಆ ಮೂರನೆಯೋರ ವ್ಯಕ್ತಿತ್ವ, ಅವರಿಗೂ ಇವರಿಗೂ ಆಗೋ ಆಕರ್ಷಣೆ... ಇದೆಲ್ಲಕ್ಕಿಂತ ಮುಖ್ಯವಾದ್ದು ಈ ಅಫೇರೊಳಗೆ ಬೀಳೋರ ಒಳಗಿನ ಒಂದಲ್ಲ ಒಂದು ಕೊರತೆಯ ಅನುಭವ, ನನಗೆ ಏನೋ ಸಿಗ್ತಿಲ್ಲ ಅನ್ನೋ ಅನಿಸಿಕೆ. ಆದರೆ ಇವರು ತಮಗೆ ತಾವು ಹೇಳ್ಕೊಳೋದು, ಬೇರೆಯವರಿಗೆ ಗುಟ್ಟಾಗಿ ಹೇಳೋದು ಮಾತ್ರ ಬೇರೆ - "ಅವಳನ್ನ ನಾನು ತುಂಬಾ ಪ್ರೀತಿಸ್ತೀನಿ"... "ಅವನೇ ನನ್ನ ನಿಜವಾದ ಸಂಗಾತಿ..."

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮಗೆ ರಾಮನ ಬಗ್ಗೆ ಎಷ್ಟು ಗೊತ್ತು ಅಂತ ಅರ್ಥ ಆಗಕ್ಕೆ ಈ ಚಿಕ್ಕ ಕ್ವಿಜ಼್‌ ಸಹಾಯ ಮಾಡುತ್ತೆ

ರಾಮಾಪಹರಣ ಕೇಳಿದೀರಿ ತಾನೆ?

ರಾಮನ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ! ಆದರೆ ರಾಮನ ಬಗ್ಗೆ ಎಲ್ಲವೂ ಗೊತ್ತಿದೆ ಅನ್ನೋರ ಸಂಖ್ಯೆ ಪ್ರಾಯಶಃ ಒಂದು. ಹೌದು, ಒಬ್ಬನಿಗೇ ಗೊತ್ತಿರೋದು ಎಲ್ಲಾ… ಅದು ವಾಲ್ಮೀಕಿಗೆ ಮಾತ್ರ! ಆದರೆ ಕಳಗಿರೋ ಕೆಲವು ಪ್ರಶ್ನೆಗಳಿಗೆ ನೀವು ಉತ್ತರ ಕೊಡ್ತಾ ಹೋಗಿ, ಆಗ ನಿಮಗೆ ರಾಮನ ಬಗ್ಗೆ ಎಷ್ಟು ಗೊತ್ತಿದೆ ಅಂತ ನಿಮಗೇ ಗೊತ್ತಾಗುತ್ತೆ.

1. ರಾಮನಿಗೆ ರಾಮ ಅಂತ ಹೆಸರು ಕೊಟ್ಟಿದ್ದು ಯಾರು?

2. ಯಾವುದೇ ಆಯುಧ ಇಲ್ಲದೆ ರಾಮನ್ನ ಯುದ್ಧದಲ್ಲಿ ಸೋಲಿಸಿದ ವ್ಯಕ್ತಿ ಯಾರು?

3. ರಾಮ ವನವಾಸಕ್ಕೆ ಹೋದಾಗ ಅವನಿಗೆ ಎಷ್ಟು ವರ್ಷ?

4. ತನ್ನ ಅವತಾರದ ಕೊನೆಯಲ್ಲಿ ರಾಮ ದೇಹವನ್ನ ಎಲ್ಲಿ ಮತ್ತೆ ಹೇಗೆ ಬಿಟ್ಟು ಹೋಗ್ತಾನೆ?

5. ರಾಮ, ಸೀತೆ ಮತ್ತು ಲಕ್ಷ್ಮಣರು ವನವಾಸ ಮಾಡಿದ ವನ ಯಾವುದು?

6. ಸೀತಾಪಹರಣ ಕೇಳಿದೀರಿ, ಆದರೆ ರಾಮಾಪಹರಣ ಕೇಳಿದೀರಾ? ಅಪಹರಿಸಿದ ವ್ಯಕ್ತಿ ಯಾರು?

7. ರಾಮಸೇತು ಎಷ್ಟು ಉದ್ದ ಇತ್ತು? ಅದನ್ನ ಕಟ್ಟಕ್ಕೆ ಎಷ್ಟು ದಿನ ತೊಗೋತು?

8. ರಾವಣನ ಮಾಯಾವಿ ಶಕ್ತಿಗಳ ಬಗ್ಗೆ ರಾಮನಿಗೆ ತಿಳಿಸಿದ್ದು ಯಾರು?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: