ಮಕ್ಕಳಿಂದ ಈ 13 ಅಮೂಲ್ಯ ಪಾಠಗಳನ್ನ ದೊಡ್ಡೋರು ಕಲೀಬೋದು, ಮಿಸ್ ಮಾಡ್ಕೊಬೇಡಿ

ನಾವ್ ಕಲ್ಸೋದ್ಕಿಂತ ನಾವ್ ಕಲಿಯೋದೇ ಜಾಸ್ತಿ ಇದೆ ಕಣ್ರಿ

ದಿನದಲ್ಲಿ ಒಂದ್ಸಲಾದ್ರೂ  ಚಿಕ್ ಮಕ್ಕಳ ಜೊತೆ ಸ್ವಲ್ಪ ಸಮಯ ಕಳೀರಿ. ಎಯ್ ಬರೇ ಚಾಕ್ಲೇಟ್ , ಐಸ್ಕ್ರೀಮ್ ಕೇಳ್ತಾರಂತ ಬಯ್ಕೋಬೇಡಿ. ಅವ್ರ್ ಕೇಳೋ ಪ್ರಶ್ನೆಗೆ ಕೆಲವೊಮ್ಮೆ ಗೂಗಲ್ನಲ್ಲಿ ಹುಡುಕಿದ್ರೂ ಸಿಗಲ್ಲ ಅನ್ನೋದು ನಿಮ್ಗೂ ಗೊತ್ತಿದೆ.

" ಚಿಕ್ಕ ಮಕ್ಕಳು ಮಾತ್ರ ಕಣ್ಮುಂದೆ ನಡೀತಿರೋ ವಿಷ್ಯಗಳನ್ನ ಸರ್ಯಾದ ರೀತಿಯಲ್ಲಿ ನೋಡೋಕೆ ಸಾಧ್ಯ. ನಾವ್ ಯಾವ್ದೋ ಒಂದು ಕಾರಣಕ್ಕೆ ಕಣ್ಮುಂದೆ ನಡೀತಾ ಇರೋ ವಿಷ್ಯಗಳ ಬಗ್ಗೆ ಗಮನಹರಿಸದೇ ಹೋಗ್ತಿವೋ ಆ ವಿಷ್ಯ್ಗಳನ್ನ ಸರ್ಯಾಗಿ ನೋಡೋದು ಮಕ್ಕಳು ಮಾತ್ರ . ಯಾಕಂದ್ರೆ ಮಕ್ಕಳು ಲಾಭ ನಷ್ಟದ ಬಗ್ಗೆ ಯೋಚ್ನೆ ಮಾಡಲ್ಲ"  - ಡಗ್ಲಾಸ್ ಆಡಂ 

1) ಬಣ್ಣ , ಜಾತಿ , ಭಾಷೆ ಇವ್ಯಾವದ್ರ ಬಗ್ಗೆ ತಲೆಕೆಡಿಸಿಕೊಳ್ಳದೇ ಬೇರೆಯವ್ರ ಜೊತೆ ಬೆರೇರಿ.

ಬಣ್ಣ ಜಾತಿ ಭಾಷೆ ಇದನ್ನ ಕಟ್ಕೊಂಡು ನಮ್ಗೇನ್ ಆಗ್ಬೇಕಾಗಿದೆ ನೀವೇ ಹೇಳಿ. ಸಾಯೋ ಸ್ಥಿತಿಯಲ್ಲಿದ್ದಾಗ ರಕ್ತ ಕೊಡ್ತೀನಿ ಅಂತ ಬಂದ ಒಬ್ಬ ಕಪ್ಪು ವರ್ಣದ ವ್ಯಕ್ತಿಯತ್ರ ನನಗೇ ನಿನ್ ರಕ್ತ ಬೇಡ ಅಂತೇಳ್ತಿರಾ ? ಇಲ್ಲಾ ತಾನೇ. ಸ್ವಲ್ಪ ಮಕ್ಕಳನ್ನ ನೋಡಿ ಅವ್ರಿಗೆ ಆಡೋದು ಮತ್ತೆ ಖುಷಿಯಾಗಿರೋದು ಮುಖ್ಯ. 

2) ಯಾವ್ದೇ ಕಾರಣಕ್ಕೂ ಸೋಲಕ್ಕೆ ತಯಾರಾಗ್ಬೇಡಿ. 

ಬುದ್ದಿ ಬೇಳಿತಾ ಇದ್ದಾಗೆ ನಾವ್ ಮಾಡೋ ಪ್ರತಿ ಕೆಲ್ಸದಲ್ಲೂ ಸೋಲು ನಮ್ಮನ್ನ ಅಪ್ಪಿಕೊಳ್ಳೋದು ಸಹಜ. ಬರೇ ಒಂದೆರಡು ಸೋಲಿಗೆ ನಾವು ಆಕಾಶ ಕಳಚಿ ಬಿದ್ದಾಗೆ ಮಾಡ್ತೀವಿ. ಆದ್ರೆ ಮಕ್ಕಳನ್ನ ನೋಡಿ , ಸೋಫಾದ ಮೇಲೆ ಕೂತ್ಕೊಳ್ಳಿಕ್ಕೆ ಆಗ್ಲಿಲ್ಲಾಂದ್ರು ಬಿಡೋದಿಲ್ಲ , ಹತ್ತತ್ತಾವೇ ಬೀಳ್ತಾವೆ , ಹತ್ತತ್ತಾವೇ ಬೀಳ್ತಾವೆ , ಹತ್ತತ್ತಾವೇ ಬೀಳ್ತಾವೆ , ಆದ್ರೆ ಪ್ರಯತ್ನ ಮಾತ್ರ ಬಿಡಲ್ಲ. ಕೊನೆಗೆ ಹತ್ತಿ ಕೂತ್ಕೊಂಡು ನಗಾಡೋದಿದೆಯಲ್ಲ ಅದ್ನ ಪದಗಳಲ್ಲಿ ಹೇಳಲ್ಲಿಕ್ಕೆ ಆಗಲ್ಲಾರೀ. 

3) ಉದಾರ ಮತ್ತು ಸಹಾನೂಭೂತಿಯ ಗುಣ ಇರ್ಲಿ.

ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರ್ದು ಅಂತಾರಲ್ಲ ಹಾಗೇ ಇದು. ನಿಮ್ಮಲ್ಲಿರೋದ್ನ ಹಂಚ್ಕೊಳೋದಾದ್ರೆ ಯಾವ್ದೇ ಫಲಾಪೇಕ್ಷೆಗಳಿಲ್ಲದೇ ಹಂಚ್ಕೊಳ್ಳಿ. 

trbimg.com

4) ಬೇರೆಯವ್ರು ಎನ್ ತಿಳ್ಕೋತಾರೆ ಅನ್ನೋದರ ಬಗ್ಗೆ ಯೋಚ್ನೆ ಮಾಡೋದು ನಿಲ್ಸಿ , ನಿಮ್ಮಿಷ್ಟ ಬಂದಾಂಗೆ ಬದುಕಿ.

ನಿಜಕ್ಕೂ ಯೋಚ್ನೆ ಮಾಡ್ಬೇಕಾದ ವಿಷ್ಯಾನೇ ಅಲ್ವಾ 

5) ಜೀವನದ ಬಗ್ಗೆ ಜಾಸ್ತಿ ಯೋಚ್ನೆ ಮಾಡೋಕೆ ಹೋಗ್ಬೇಡಿ.

ಮುಂದೆ ಎನಾಗತ್ತೆ ಅನ್ನೋದ್ರ ಬಗ್ಗೆ ನಮ್ಗೆ ಗೊತ್ತಿಲ್ಲ ಮೇಲಾಗಿ ಅದ್ರ ಮೇಲೆ ನಮ್ಗೆ ಹಿಡಿತ ಕೂಡಾ ಇಲ್ಲ. ಹಿಂದೆ ಆಗಿದ್ರ ಬಗ್ಗೆ ಕೊರಗ್ತಾ ಕೂತ್ಕೋಬಹುದು ಅಷ್ಟೇ . ಹಾಗಾದ್ರೆ ನಮ್ ಕೈಲ್ ಎನ್ ಕಿಸಿಬೋದು "  ಈ ಸಮಯದಲ್ಲಿ ಬದುಕಿ " ಅಷ್ಟೇ . ಜೀವ್ನ ಅಂದ್ರೆ ಚೂರು ಚೂರಾಗಿರೋ ಕಾಗದ ಅದ್ರಿಂದ ಎನೇನಲ್ಲ ಒಳ್ಳೆದ್ ಮಾಡ್ಬಹುದೋ ಅದ್ನ್ ಮಾಡೋಕೆ ಪ್ರಯತ್ನ ಪಡಿ. ಅದ್ ಬಿಟ್ಟು ಚೂರ್ ಚೂರಾಗಿದೆ ಅಂತ ಕೊರಗೋದ್ನ ಕಮ್ಮಿ ಮಾಡ್ಕೊಳ್ಳಿ. 

6) ಕಲ್ಪನೆ ಮಾಡ್ಕೊಳ್ಳೋದನ್ನ ಅಭ್ಯಾಸ ಮಾಡ್ಕೊಳ್ಳಿ. 

ನಿಮ್ ಬುದ್ದಿ ಎ ಯಿಂದ ಜಡ್ ವರೆಗೆ ಹೇಳಕೊಡತ್ತೆ. ಆದ್ರೆ ಕಲ್ಪನೆ ಅನ್ನೋದು ಅದಕ್ಕಿಂತ ಜಾಸ್ತೀನೇ ಹೇಳಕೊಡತ್ತೆ - ಆಲ್ಬರ್ಟ್ ಐನ್ ಸ್ಟೀನ್ 

hdqwalls.com

7) ಆದಷ್ಟೂ ಪ್ರಶ್ನೆ ಮಾಡೋದ್ನ ಕಲೀರಿ

ಕಿರಿರಿ ಅನ್ಸಿದ್ರೂ ನಿಮ್ ಜ್ನಾನ ಹೆಚ್ಚಾಗೋದ್ರಲ್ಲಿ ಅನುಮಾನ ಇಲ್ಲ ಬಿಡಿ. 

8) ತಮ್ ಕೈಯಲ್ಲಾಗ್ದೇ ಇದ್ರೂ ಎಲ್ಲದಕ್ಕೂ ತಯಾರಾಗಿರಿ.

ನೀವ್ ಒಂದ್ಸಲ ಹೊಡೆದ್ ನೋಡಿ , ತಿರ್ಗಿ ನಿಮ್ಗೆ ಎಷ್ಟ್ ಸಾಧ್ಯನೋ ಅಷ್ಟು ಹೊಡೀತಾರೆ. ನಿಮ್ಗೆ ನೋವಾಗಿದೆಯೋ , ಆಗಿಲ್ವೋ  ನಿಮ್ ಶಕ್ತಿ ಎಷ್ಟು ಅದ್ರ ಬಗ್ಗೆ ಯೋಚ್ನೆ ಮಾಡಲ್ಲ. ಮೇಲಾಗಿ ಹೆದ್ರಕೊಳ್ಳೋದೆ ಇಲ್ಲ.  ನಾನಂತೂ ಸುಮಾರ್ ಸಲ ತಿಂದಿದ್ದೀನಿ ಬಿಡಿ. 

9) ಸಂತೋಷವಾಗಿರ್ಲಿಕ್ಕೆ ಕಾರಣಾನೇ ಬೇಕಂತಿಲ್ಲ.

ಒಂದೊಂದ್ಸಲ ಯೋಚ್ನೆ ಮಾಡಿದ್ರೆ ಹೌದು ಅನ್ಸತ್ತೆ ಅಲ್ವಾ ? 

n-land.de

10) ನಗುವಿಗೆ ಪ್ರತಿ ನಗು ಅನ್ನೋ ನಿಯಮ ಪಾಲಿಸಿ. 

ನಾವೋ ನಮ್ಗಾಗಾಗ್ದೇ ಇದ್ದೋರ ಮೂತಿ ನೋಡ್ದಾಗ , ನಕ್ಕು ಮರೆತ್ ಬಿಡ್ಬೇಕು ಅನ್ನೋ ಮನಸಿದ್ರೂ ಅವ್ನೇ ಆ ಕೆಲ್ಸ ಮಾಡ್ಲಿ ಅಂತ ಗಂಟಾಕ್ಕೊಂಡು ಕಾಯ್ತಾ ಇರ್ತೇವೆ. 

11) ಬೇರೆಯವರಿಂದ ಒಳ್ಳೇಯೋರು ಅನ್ನಿಸಿಕೊಳ್ಳಕ್ಕೆ ಸುಮ್ನೆ ಸಾಹಸ ಮಾಡ್ಬೇಡಿ.

ನೀವ್ ಎನು ಅನ್ನೋದ್ನ ನಿಮ್ ಕೆಲ್ಸದ ಮೂಲಕ ತೋರ್ಸಿ ನಿಮ್ ಕಸರತ್ತಿನಿಂದಲ್ಲ ಅಂತಾರೆ

upload.wikimedia.org

12) ಯಾರಮೇಲೂ ಯಾವ್ದೇ ಕೋಪ ತಾಪ ಇಟ್ಕೊಳ್ಬೇಡಿ

ಜೀವನ ಚಿಕ್ಕದು. ಆದಷ್ಟು ಸಂತೋಷದಿಂದಿರಬೇಕು ಅಂತಾರೆ. ಅವ್ರಿದ್ದಾರೆ ನಾವ್ ಅದನ್ನ ಪಡ್ಕೊಳ್ಳೊಕ್ಕೆ ಮನುಷ್ಯತ್ವವನ್ನೇ ಮರೆತಿದ್ದಿವಿ. 

13) ಯಾವೂದು ಅಸಾಧ್ಯವಲ್ಲ ಅನ್ನೋದು ಕೊನೆಯ ಪಾಠ.

ನಮ್ಮ ಪರಮಶತ್ರು ನಾವೇ. ಬೇರೆಯಾರೂ ಅಲ್ಲ. ನಾವೇ ನಮ್ಗೆ " ಹೇ ನಿಂಗಾಗಲ್ಲ ಬಿಡು ಅಂತೀವಿ ತಾನೇ " ಅದ್ಕೆ. ನೆನಪಿಡಿ ನೀವ್ ನಿಮ್ ಮನಸ್ಸಿಗೆ ಎನ್ ಹೇಳ್ತಿರೋ ಅದ್ನೇ ನೀವ್ ಮಾಡಿ ತೋರ್ಸೋದು ನೆನಪಿಡಿ. 

dormstormer.com
ಕಲಿಯೋದು ಬೇಕಾದಷ್ಟಿದೆ. ಅದು ಮಕ್ಕಳಿಂದಾದ್ರೇನೂ , ಪ್ರಾಣಿಗಳಿಂದಾದ್ರೇನೂ ಸಾಯೋತನಕ ಕಲೀಲೇಬೇಕು. ಅದೇ ಜೀವನ. 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮಗೆ ರಾಮನ ಬಗ್ಗೆ ಎಷ್ಟು ಗೊತ್ತು ಅಂತ ಅರ್ಥ ಆಗಕ್ಕೆ ಈ ಚಿಕ್ಕ ಕ್ವಿಜ಼್‌ ಸಹಾಯ ಮಾಡುತ್ತೆ

ರಾಮಾಪಹರಣ ಕೇಳಿದೀರಿ ತಾನೆ?

ರಾಮನ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ! ಆದರೆ ರಾಮನ ಬಗ್ಗೆ ಎಲ್ಲವೂ ಗೊತ್ತಿದೆ ಅನ್ನೋರ ಸಂಖ್ಯೆ ಪ್ರಾಯಶಃ ಒಂದು. ಹೌದು, ಒಬ್ಬನಿಗೇ ಗೊತ್ತಿರೋದು ಎಲ್ಲಾ… ಅದು ವಾಲ್ಮೀಕಿಗೆ ಮಾತ್ರ! ಆದರೆ ಕಳಗಿರೋ ಕೆಲವು ಪ್ರಶ್ನೆಗಳಿಗೆ ನೀವು ಉತ್ತರ ಕೊಡ್ತಾ ಹೋಗಿ, ಆಗ ನಿಮಗೆ ರಾಮನ ಬಗ್ಗೆ ಎಷ್ಟು ಗೊತ್ತಿದೆ ಅಂತ ನಿಮಗೇ ಗೊತ್ತಾಗುತ್ತೆ.

1. ರಾಮನಿಗೆ ರಾಮ ಅಂತ ಹೆಸರು ಕೊಟ್ಟಿದ್ದು ಯಾರು?

2. ಯಾವುದೇ ಆಯುಧ ಇಲ್ಲದೆ ರಾಮನ್ನ ಯುದ್ಧದಲ್ಲಿ ಸೋಲಿಸಿದ ವ್ಯಕ್ತಿ ಯಾರು?

3. ರಾಮ ವನವಾಸಕ್ಕೆ ಹೋದಾಗ ಅವನಿಗೆ ಎಷ್ಟು ವರ್ಷ?

4. ತನ್ನ ಅವತಾರದ ಕೊನೆಯಲ್ಲಿ ರಾಮ ದೇಹವನ್ನ ಎಲ್ಲಿ ಮತ್ತೆ ಹೇಗೆ ಬಿಟ್ಟು ಹೋಗ್ತಾನೆ?

5. ರಾಮ, ಸೀತೆ ಮತ್ತು ಲಕ್ಷ್ಮಣರು ವನವಾಸ ಮಾಡಿದ ವನ ಯಾವುದು?

6. ಸೀತಾಪಹರಣ ಕೇಳಿದೀರಿ, ಆದರೆ ರಾಮಾಪಹರಣ ಕೇಳಿದೀರಾ? ಅಪಹರಿಸಿದ ವ್ಯಕ್ತಿ ಯಾರು?

7. ರಾಮಸೇತು ಎಷ್ಟು ಉದ್ದ ಇತ್ತು? ಅದನ್ನ ಕಟ್ಟಕ್ಕೆ ಎಷ್ಟು ದಿನ ತೊಗೋತು?

8. ರಾವಣನ ಮಾಯಾವಿ ಶಕ್ತಿಗಳ ಬಗ್ಗೆ ರಾಮನಿಗೆ ತಿಳಿಸಿದ್ದು ಯಾರು?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: