ಹೊಸದಾಗಿ ಬಂದಿರೋ ಈ ವಾಟ್ಸಾಪ್ ಫೀಚರಿಂದ ದುಡ್ಡು ರವಾನೆ ಮಾಡೋದು ಹೇಗೆ ಅಂತ ತಿಳ್ಕೊಳಿ

ಆಂಡ್ರಾಯ್ಡ್ ಮತ್ತೆ ಐ ಫೋನ್ ಎರಡಕ್ಕೂ ಇದು ಲಭ್ಯವಿದೆ.

ಇಂಟರ್ನೆಟ್ಟಲ್ಲಿ ದುಡ್ಡು ಕಳಿಸಕ್ಕೆ ಸಾವಿರ ವಿಧಾನ ಇದೆ, ದಿನದಿಂದ ದಿನಕ್ಕೆ ಎಲ್ಲ ವಿಧಾನಾನು ಸುಲಭ ಆಗ್ತಿದೆ. ಆದ್ರೆ ಹೊಚ್ಚ ಹೊಸ ವಿಧಾನ, ಸಕತ್ ಸುಲುಭವಾದ ವಿಧಾನ ಅಂದ್ರೆ ದಿನ ಬಳಸೋ ವಾಟ್ಸಾಪಲ್ಲಿ ದುಡ್ಡು ಕಳಿಸೋದು! ಹೌದು ಇವತ್ತು ನಮ್ಮ ದೇಶದಲ್ಲಿ ಈ ವ್ಯವಸ್ಥೆ ಸಿಕ್ತಾ ಇದೆ. ನಿಮ್ಮ ವಾಟ್ಸಪ್ಪ್ ಅಪ್ಡೇಟ್ ಮಾಡ್ಕೊಳಿ, ಆಂಡ್ರಾಯ್ಡ್ ಮತ್ತೆ ಐ ಫೋನ್ ಎರಡಕ್ಕೂ ಇದು ಲಭ್ಯವಿದೆ,  UPI ಮೂಲಕ P2P ಮೂಲಕ ಸೀದಾ ಬ್ಯಾಂಕ್ ಖಾತೆಗೆ ದುಡ್ಡು ಹಾಕಬಹುದು .

ಹೇಗೆ ಇದನ್ನ ಬಳಸೋದು?

ಮೊದಲು ವಾಟ್ಸಾಪ್ ಅಪ್ಡೇಟ್ ಮಾಡ್ಕೊಳಿ ವರ್ಷನ್ 2.18

ಬರಿ ನಿಮ್ಮ ವಾಟ್ಸಾಪ್ ಅಪ್ಡೇಟ್ ಆದ್ರೆ ಸಾಲಲ್ಲ, ನೀವು ಯಾರಿಗೆ ದುಡ್ಡು ಕಳಿಸಬೇಕು ಅವರ ಅಕೌಂಟ್ ಕೂಡ ಅಪ್ಡೇಟ್ ಆಗಿರಬೇಕು 

ಹೋಗಿ ಅನ್ನೋದನ್ನ ಕ್ಲಿಕ್ ಮಾಡಿ, ನಿಮ್ಮ ಬ್ಯಾಂಕ್ ಮಾಹಿತಿಯನ್ನ ಸೇರಿಸಿ. ಬ್ಯಾಂಕಿಗೆ ಕೊಟ್ಟಿರೋ ಮೊಬೈಲ್ ಸಂಖ್ಯೆ ಹಾಗು ವಾಟ್ಸಾಪ್ ಬಳಸೋ ಸಂಖ್ಯೆ ಒಂದೇ ಆಗಿದ್ದರೆ ಮಾತ್ರ ಇದು ಕೆಲಸ ಮಾಡೋದು 

ಇದಾದ ನಂತರ Terms and Conditions ಒಪ್ಪಿಕೊಳ್ಳಿ, ನಿಮ್ಮ ಮೊಬೈಲ್ ಸಂಖ್ಯೆ ವೆರಿಫ್ಯ್ ಆಗತ್ತೆ. ನಂತರ ನಿಮಗೆ ದುಡ್ಡು ಕಳಿಸಕ್ಕೆ UPI ಪ್ಲಾಟ್ಫಾರ್ಮ್ ಸಿಗತ್ತೆ 

ನಂತರ ನಿಮ್ಮ ಡೆಬಿಟ್ ಕಾರ್ಡ್ ಸಂಖ್ಯೆ ಕೂಡ ಫೀಡ್ ಮಾಡಿ ಇಡಬಹುದು. ಮಾಮೂಲಿ ಬೇರೆ ಕಡೆ ಹೇಗೆ ಮಾಡ್ತಿರೋ ಹಾಗೆ 

ಹಣ ಹೇಗೆ ಕಳಿಸೋದು 

androidheadlines.com
ಅತಿ ಮುಖ್ಯ ಏನಪ್ಪಾ ಅಂದ್ರೆ ಈಗಾಗಲೇ ಪೇಮೆಂಟ್ ಫೀಚರ್ ಇರೋ ವ್ಯಕ್ತಿ ಅಥವಾ ಅಪ್ಡೇಟ್ ಮಾಡಿಕೊಂಡಿರೋ ವ್ಯಕ್ತಿಯ ಜೊತೆ ನೀವು ಚಾಟ್ ಮಾಡಿ ದುಡ್ಡು ಕಳಿಸಬಹುದು ಇಲ್ಲ ಅಂದ್ರೆ ಆಗಲ್ಲ.

ನಿಮ್ಮ ಮತ್ತೆ ನೀವು ದುಡ್ಡು ಕಳಿಸಲು ಇಷ್ಟ ಪಡುವ ವ್ಯಕ್ತಿ, ಇಬ್ಬರೂ ನಿಮ್ಮ ಬ್ಯಾಂಕ್ ಮಾಹಿತಿ ಸೇರಿಸಿರಬೇಕು. ಇದಾದಮೇಲೆ ಸುಮ್ಮನೆ ಮಾಮೂಲಿ ಚಾಟ್ ಮಾಡಿ, ಅಲ್ಲಿ ನೀವು ಫೋಟೋ, ವಿಡಿಯೋ ಕಳಿಸಕ್ಕೆ ಓಟೋ ಅಟ್ಯಾಚ್ಮೆಂಟ್ ಬಟನ್ ಒತ್ತಿದರೆ ನಿಮಗೆ ಪೇಮೆಂಟ್ ಅಂತ ಒಂದು ಆಪ್ಷನ್ ಸಿಗತ್ತೆ. 

ಇನ್ನೇನ್ ಕಾಯ್ತಿದೀರಾ? ಅಪ್ಡೇಟ್ ಮಾಡ್ಕೊಳಿ 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮಗೆ ರಾಮನ ಬಗ್ಗೆ ಎಷ್ಟು ಗೊತ್ತು ಅಂತ ಅರ್ಥ ಆಗಕ್ಕೆ ಈ ಚಿಕ್ಕ ಕ್ವಿಜ಼್‌ ಸಹಾಯ ಮಾಡುತ್ತೆ

ರಾಮಾಪಹರಣ ಕೇಳಿದೀರಿ ತಾನೆ?

ರಾಮನ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ! ಆದರೆ ರಾಮನ ಬಗ್ಗೆ ಎಲ್ಲವೂ ಗೊತ್ತಿದೆ ಅನ್ನೋರ ಸಂಖ್ಯೆ ಪ್ರಾಯಶಃ ಒಂದು. ಹೌದು, ಒಬ್ಬನಿಗೇ ಗೊತ್ತಿರೋದು ಎಲ್ಲಾ… ಅದು ವಾಲ್ಮೀಕಿಗೆ ಮಾತ್ರ! ಆದರೆ ಕಳಗಿರೋ ಕೆಲವು ಪ್ರಶ್ನೆಗಳಿಗೆ ನೀವು ಉತ್ತರ ಕೊಡ್ತಾ ಹೋಗಿ, ಆಗ ನಿಮಗೆ ರಾಮನ ಬಗ್ಗೆ ಎಷ್ಟು ಗೊತ್ತಿದೆ ಅಂತ ನಿಮಗೇ ಗೊತ್ತಾಗುತ್ತೆ.

1. ರಾಮನಿಗೆ ರಾಮ ಅಂತ ಹೆಸರು ಕೊಟ್ಟಿದ್ದು ಯಾರು?

2. ಯಾವುದೇ ಆಯುಧ ಇಲ್ಲದೆ ರಾಮನ್ನ ಯುದ್ಧದಲ್ಲಿ ಸೋಲಿಸಿದ ವ್ಯಕ್ತಿ ಯಾರು?

3. ರಾಮ ವನವಾಸಕ್ಕೆ ಹೋದಾಗ ಅವನಿಗೆ ಎಷ್ಟು ವರ್ಷ?

4. ತನ್ನ ಅವತಾರದ ಕೊನೆಯಲ್ಲಿ ರಾಮ ದೇಹವನ್ನ ಎಲ್ಲಿ ಮತ್ತೆ ಹೇಗೆ ಬಿಟ್ಟು ಹೋಗ್ತಾನೆ?

5. ರಾಮ, ಸೀತೆ ಮತ್ತು ಲಕ್ಷ್ಮಣರು ವನವಾಸ ಮಾಡಿದ ವನ ಯಾವುದು?

6. ಸೀತಾಪಹರಣ ಕೇಳಿದೀರಿ, ಆದರೆ ರಾಮಾಪಹರಣ ಕೇಳಿದೀರಾ? ಅಪಹರಿಸಿದ ವ್ಯಕ್ತಿ ಯಾರು?

7. ರಾಮಸೇತು ಎಷ್ಟು ಉದ್ದ ಇತ್ತು? ಅದನ್ನ ಕಟ್ಟಕ್ಕೆ ಎಷ್ಟು ದಿನ ತೊಗೋತು?

8. ರಾವಣನ ಮಾಯಾವಿ ಶಕ್ತಿಗಳ ಬಗ್ಗೆ ರಾಮನಿಗೆ ತಿಳಿಸಿದ್ದು ಯಾರು?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: