ಶಿವನ 3ನೇ ಕಣ್ಣು ಜಟೆ ತ್ರಿಶೂಲದಲ್ಲೆಲ್ಲ ಜೀವನದ ಈ 10 ಮುಖ್ಯವಾದ ಸಂದೇಶಗಳು ಅಡಗಿ ಕೂತಿವೆ

ಸಾಮಾನ್ಯವಾಗಿ ಇದು ಯಾರಿಗೂ ಗೊತ್ತಿರಲ್ಲ

ನಮ್ಮ ದೇವ್ರುಗಳಲ್ಲಿ ಭಾಳ ಬೇಗ ಒಲಿಯೋನು ಅಂದ್ರೆ ಶಿವ. ಭಕ್ತಿವಂತರಿಗೆ ಬೇಡಿದ್ದು ಕೊಡ್ತಾನೆ ಹಾಗೆ ಕೆಟ್ಟೋರಿಗೆ ಶಿಕ್ಷೆನೂ ಕೊಡ್ತಾನೆ. ಪುರಾಣದಲ್ಲಿ ಶಿವ ಅಂದ್ರೆ ಜಟಾಧಾರಿ, ತ್ರಿಶೂಲ ಹಿಡ್ಕೊತಾನೆ, ಮೈಗೆ ಭಸ್ಮ ಹಚ್ಚ್ಕೊತಾನೆ, ತಲೇಲಿ ಗಂಗೆ ಇರ್ತಾಳೆ, ಕತ್ತಿಗೆ ಹಾವು ಸುತ್ತ್ಕೊತಾನೆ....ಹೀಗೆಲ್ಲಾ ವರ್ಣನೆ ಮಾಡಿದಾರೆ. ನೋಡಕ್ಕೆ ವಿಚಿತ್ರವಾದ್ರೂ ಅದೇ ಒಂದೊಂದಾಗಿ ಬಿಡಿಸಿ ಹೀಗೆ ಯಾಕಿದಾನೆ ಅಂತ ತಿಳ್ಕೊಳ್ಳೊ ಪ್ರಯತ್ನ ಮಾಡಿದಾಗ ಜೀವನದ ಪಾಠಗಳನ್ನ ಕಲಿಸತ್ತೆ. ಮುಂದೆ ಓದಿ...

1. ಜಟೆ - "ಶಾಂತಿ ಸಮಾಧಾನದಿಂದ ಮಾಡಿದರೆ ಯಾವ ಕೆಲ್ಸ ಬೇಕಾದ್ರೂ ಸಾಧ್ಯ"

ದೇಹ, ಮನಸ್ಸು ಮತ್ತೆ ಆತ್ಮದ ಏಕಿಕರಣದ ಪ್ರತಿಬಿಂಬ ಶಿವನ ಜಟೆ.

ಪರೀಕ್ಷೆ ಪಾಸ್ ಮಾಡ್ಬೇಕು, ಆರೋಗ್ಯ ಸುಧಾರಿಸ್ಕೊಬೇಕು, ಕೆಲ್ಸದಲ್ಲಿ ಏಕಾಗ್ರತೆ ಬೆಳಸ್ಕೊಬೇಕು...ಈ ಸಂದರ್ಭಗಳಲ್ಲಿ ನಮ್ಮ ದೇಹ, ಮನ್ಸ್ಸು ಹಾಗೂ ಅಂತರಾತ್ಮ ಮೂರು ಒಂದೇ ದಿಕ್ಕಿನಲ್ಲಿ ಇರ್ಬೇಕು, ಶಾಂತಿ ಸಮಾಧಾನದಿಂದ ಇರ್ಬೇಕು. ಹೀಗಿದ್ರೆ ದೇಹದಲ್ಲಿ ಒಳ್ಳೆ ಹಾರ್ಮೋನ್ಗಳು ಬಿಡುಗಡೆ ಆಗತ್ವೆ, ಮನಸ್ಸಿಗೆ ಖುಷಿ ಆಗತ್ತೆ. ಇಮ್ಮ್ಯೂನಿಟಿ ಜಾಸ್ತಿ ಆಗತ್ತೆ. ಜೀವನದಲ್ಲಿ ಏನೇ ಕಷ್ಟ ಬಂದ್ರೂ ಎದುರಿಸಕ್ಕೆ ರೆಡಿ ಆಗ್ತೀವಿ, ಅದು ಕಷ್ಟ ಅನ್ಸೋದೇ ಇಲ್ಲ.

2. ಮೂರನೇ ಕಣ್ಣು - "ಕಣ್ಣಲ್ಲಿ ನೋಡಿದ್ದನ್ನ ನಂಬದೆ ಮನಸ್ಸಿಂದ ಅರ್ಥ ಮಾಡ್ಕೊಬೇಕು"

ಶಿವನ ಮೂರನೇ ಕಣ್ಣು ಸಮಸ್ಯೆಗಳನ್ನ ನೋಡೊ ರೀತಿ ಹೇಳುತ್ತೆ. ಜೊತೇಲಿ ಅದನ್ನ ಪರಿಹರಿಸೋಕೆ ದಾರಿ ಕೂಡ ತೊರ್ಸುತ್ತೆ.

ಜೀವನದಲ್ಲಿ ಯಾವುದೇ ತೊಂದ್ರೆ ಬಂದಾಗ ಎರಡು ಕಣ್ಣಿಗೆ ಏನ್ ಕಾಣಿಸತ್ತೋ ಅದರ ಜೊತೆ ಇನ್ನೂ ಏನಿದೆ ಅಂತ ಯೋಚ್ನೆ ಮಾಡಿ ಅದೇನು ಅದರ ಹಿಂದಿನ ಕಾರಣವೇನು, ಸಮಸ್ಯೆ ಹೆಂಗೆ ಬಗೆಹರಿಸಿದ್ರೆ ಎಲ್ಲರಿಗೂ ಒಳ್ಳೆದು ಅನ್ನೋದರ ಸಂಕೇತ.

3. ತ್ರಿಶೂಲ - "ಅಹಂಕಾರ ಬಿಟ್ಟು ಕೆಲ್ಸ ಮಾಡಬೇಕು"

ಮನುಷ್ಯನ ಮನಸ್ಸು, ಬುದ್ಧಿ ಹಾಗೆ ಅಹಂಕಾರದ ಪ್ರತೀಕ ತ್ರಿಶೂಲ. ಶಿವ ತನ್ನ ಅಹಂಕಾರಾನ ಮೆಟ್ಟಿ ನಿಂತಿದ್ದಾನೆ. ಬೇರೇಯೋರ ಅಹಂಕಾರನೂ ಅವ ಸಹಿಸೊಲ್ಲ.

ನಮ್ ಜೀವನದಲ್ಲಿ ಅಹಂ ಬಿಟ್ಟು ಕೆಲ್ಸ ಮಾಡಿದಾಗ ಇನ್ನೂ ಎತ್ತರಕ್ಕೇರ್ತೀವಿ. ಕೆಲಸ ಸಮರ್ಥವಾಗಿ ಮಾಡ್ತೀವಿ.

4. ಧ್ಯಾನದ ಭಂಗಿ - "ಏಕಾಗ್ರತೆಗೆ ಧ್ಯಾನ ಮಾಡಬೇಕು"

ಅವನು ಧ್ಯಾನಕ್ಕೆ ಕೂರೋ ಭಂಗಿ ದಿನ ನಿತ್ಯದ ಜಂಜಾಟದಲ್ಲಿ ತಾಳ್ಮೆ ಹೇಳಿಕೊಡುತ್ತೆ.

5. ವಿಭೂತಿ - "ಎಲ್ಲವೂ ಕ್ಷಣಿಕ"

ಜೀವನದಲ್ಲಿ ಎಲ್ಲವೂ ಕ್ಷಣಿಕ ಅನ್ನೋದು ವಿಭೂತಿಯ (ಭಸ್ಮ) ಸಂಕೇತ. 

ಜೀವನದಲ್ಲಿ ಸುಖವಾಗಿರಕ್ಕೆ ಏನ್ ಬೇಕೋ ಮಾಡಿ - ಚೆನ್ನಾಗಿ ಕಾಣ್ಸಕ್ಕೆ, ದುಡ್ಡು ಸಂಪಾದನೆ ಮಾಡಕ್ಕೆ. ಆದ್ರೆ ಅದೇ ಒಂದು ಗೀಳಾಗಿ ನಿಮ್ ದೇಹ ಮನಸ್ಸು ಹಾಳಗ್ಬಾರ್ದು ಅಂತ ಪಾಠ ಹೇಳತ್ತೆ.

6. ನೀಲಕಂಠ - "ಬರೋ ಕೋಪಾನ ಒಳ್ಳೇದಕ್ಕೆ ಉಪ್ಯೋಗಿಸಬೇಕು"

ಕೋಪ ನುಂಗಿ, ಅದನ್ನ ಸಕಾರತ್ಮಕವಾಗಿ ಬಳಸಿ, ಯಾರಿಗೂ ತೊಂದರೆ ಮಾಡದೆ ಅದರಿಂದ ಒಳ್ಳೇದು ಮಾಡಿ ಅನ್ನೋದರ ಸಂಕೇತ.

7. ಢಮರುಗ - "ವ್ಯಾಯಾಮ ಮಾಡಿ ದೇಹ ಮತ್ತು ಮನಸ್ಸನ್ನ ಶುದ್ಧ ಮಾಡ್ಕೋಬೇಕು"

ದೇಹನ ರೋಗ - ರುಜಿನದಿಂದ ದೂರ ಇಟ್ಟು ಶುದ್ಧವಾಗಿಡೋದರ ಸಂಕೇತ.

8. ಗಂಗಾಧರ - "ನಿರ್ಧಾರಗಳನ್ನ ತೊಗೊಬೇಕಾದ್ರೆ ಚಿಕ್ಕ ಚಿಕ್ಕ ವಿಷಯಾನೂ ಗಮನಿಸಬೇಕು"

ತಲೆ ಮೇಲಿರೋ ಗಂಗೆ ಸಂಕೇತ ಅಂಧತೆ ಕೊನೆ ಆಗಿ ಜ್ಞಾನ ಬೆಳೀಬೇಕು ಅಂತ. ಯಾವುದೇ ಕೆಲ್ಸ ಮಾಡೊಕ್ಕೆ ಮುಂಚೆ ಸಾಕಷ್ಟು ರಿಸರ್ಚ್ ಮಾಡಿ. ಸುಮ್ನೆ ಏನೂ ಗೊತ್ತಿಲ್ಲದೆ ಮುನ್ನುಗೋದು ಬೇಡ, ಆಮೇಲೆ ಪಶ್ಚಾತಾಪ ಪಡೋದು ಬೇಡ ಅನ್ನೋ ಪಾಠ ಕಲ್ಸತ್ತೆ.

9. ಕಮಂಡಲ - "ನಕಾರಾತ್ಮಕ ಭಾವನೆಗಳನ್ನ ಬಿಸಾಕಬೇಕು"

ಕಮಂಡಲ ದೇಹದಲ್ಲಿರೋ ಕೆಟ್ಟದೆಲ್ಲಾ ತೆಗೆದು ಹಾಕೋದರ ಸಂಕೇತ.

ಮನಸ್ಸು ದೇಹದಲ್ಲಿ ಬರೋ ನಕಾರಾತ್ಮಕ ಶಕ್ತಿಗಲನ್ನ ಆಚೆ ಹಾಕೊ ಪ್ರಯತ್ನ ಮಾಡಿ ಶುದ್ಧವಾಗಿ. ಇದ್ರಿಂದ ಅರೋಗ್ಯ ಕೂಡ ಕಾಪಾಡ್ಕೊಳ್ಳಿ ಅಂತ ಹೇಳತ್ತೆ.

10. ಕತ್ತಿನಲ್ಲಿ ಹಾವು - "ಕೋಪ, ದುಃಖ, ಹತಾಶೆ ಭಾವನೆಗಳನ್ನ ಹದ್ದುಬಸ್ತಿನಲ್ಲಿ ಇಟ್ಕೋಬೇಕು"

ಕೋಪ, ದುಃಖ, ಬೇಸರ, ಹತಾಶೆ..ಈ ತರದ ಭಾವನೆ ಮನಸ್ಸಿಗೆ ಖುಷಿ ಕೊಡಲ್ಲ. ಆದಷ್ಟು ಆಗದೇ ಇರೋ ಹಾಗೆ ಕಂಟ್ರೋಲ್ ಮಾಡ್ಬೇಕು. ಆದ್ರೆ ವಿಧಿಯಿಲ್ಲದೆ ಜಾಸ್ತಿ ಆದಾಗ ಗಂಟಲೊಳಗಡೇನೇ ಇಟ್ಕೊಂಡ್ರೆ ಆರೋಗ್ಯ ಹಾಳು. ಆಚೆ ಹಾಕಿ, ಮನಸ್ಸು ಹಗೂರ ಮಾಡ್ಕೊಳಿ ಅಂತ ಪಾಠ ಹೇಳತ್ತೆ.

ಇಷ್ಟು ಓದಿದ್ಮೇಲೆ ಶಿವ ಶಿವ ಅಂದಾಗಲೆಲ್ಲ ಈ ಮಾತುಗಳು ನೆನಪಾಗಿ ಜೀವನ ಇನ್ನಷ್ಟು ಅರ್ಥ ಆಗುತ್ತೆ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನದಿಯಲ್ಲಿರೋ ಕಲ್ಲುಗಳೆಲ್ಲಾ ಶಿವಲಿಂಗಗಳಾಗಿರೋ ಜಾಗ ನಿಮಗೆ ಗೊತ್ತಾ?

ನಿಮಗಿಲ್ಲಿ ನೋಡೋಕೆ ಸಾವಿರಕ್ಕೂ ಹೆಚ್ಚು ಶಿವಲಿಂಗಗಳಿವೆ!

ಉತ್ತರ ಕನ್ನಡ ಜಿಲ್ಲೆಯ ಸಿರಸಿ ತಾಲೂಕಿನಲ್ಲಿ ಶಲ್ಮಲ ನದಿ ನೀರಿಂದ ಸುಮಾರು ಸಾವಿರಾರು ಶಿವಲಿಂಗಗಳು ನದಿ ನೀರಿನ ರಭಸಕ್ಕೆ ತಾನೇ ಸೃಷ್ಟಿಯಾಗಿವೆ.

ಇದು ಉತ್ತರಕನ್ನಡ ಜಿಲ್ಲೆಯ ಸಿರಸಿ ತಾಲೂಕಿನ ಶಾಲ್ಮಲ ನದಿ ದಡದಲ್ಲಿದ್ಯಂತೆ. ಇನ್ನು ಇಲ್ಲಿನ ನದಿ ನೀರಿನ ರಭಸಕ್ಕೆ ಹಲಾವಾರು ಶಿವಲಿಂಗಗಳು ಮೂಡಿದ್ದು ನದಿಯಲ್ಲಿ ನೀರು ಕಡಿಮೆ ಆದಾಗ ಇದನ್ನ ಸ್ಪಷ್ಟವಾಗಿ ನೋಡಬಹುದಂತೆ.

ಇದಕ್ಕೆ ಸಹಸ್ರಲಿಂಗ ಅನ್ನೋ ಹೆಸರು ಇದಕ್ಕೆ ಸರಿಯಾಗೇ ಹೋಲುತ್ತೆ ಅಂತಾರೆ ಇದನ್ನ ನೋಡಿದೋರು.

ancient-origins.net

1969 ರಲ್ಲಿ ಈ ಸ್ಥಳವನ್ನ ಜೀನ್ ಬಾಲ್ಬೆಟ್ ಅನ್ನೋರು ಕಂಡುಹಿಡಿದರಂತೆ

ಕಾಂಬೋಡಿಯಾದಲ್ಲಿ ಯುದ್ಧ ಆಗದೇ ಹೋಗಿದ್ದರೆ ಇನ್ನೂ ಇಪ್ಪತ್ತು ವರ್ಷ ಮುಂಚೆಯೇ ನಮಗೆ ಸಿಗ್ತಿತ್ತೇನೋ ಅನ್ನೋ ಅಂತೆಕಂತೆ ಕೂಡ ಇದೆ.

ಇತ್ತೀಚೆಗೆ ಏರ್ತಿರೋ ತಾಪಮಾನದಿಂದ ನೀರಿನ ಪ್ರಮಾಣ ಕಡಿಮೆಯಾಗಿ ಇಲ್ಲಿ ಲಿಂಗಗಳು ನೋಡೋಕೆ ಸಿಕ್ಕಿದ್ದವಂತೆ.

ಇನ್ನು ಇತಿಹಾಸದ ಪ್ರಕಾರ ಇಲ್ಲಿನ ರಾಜ ಸದಾಶಿವರಾಯ 1000 ಲಿಂಗಗಳನ್ನ ಕೆತ್ತಿಸಿದರೆ ತನಗೆ ಮಗು ಹುಟ್ಟುತ್ತದೆ ಅನ್ನೋ ಕಾರಣ ಇಲ್ಲಿ ಲಿಂಗಗಳನ್ನ ಕೆತ್ತೋಕೆ ಆಜ್ಞೆ ಮಾಡಿದ್ದನಂತೆ. ಈ ವಿಗ್ರಹಗಳನ್ನ 1678-1718 ಅವಧೀಲಿ ಕೆತ್ತಿರಬಹುದು ಅನ್ನಲಾಗುತ್ತೆ.

ancient-code.com

ಕಾಂಬೋಡಿಯಾದಲ್ಲೂ ಇದೇ ತರ ಸಾಕಷ್ಟು ಲಿಂಗಗಳಿವೆ

ಕಾಂಬೋಡಿಯಾದ ಪ್ರಸಿದ್ಧ ದೇವಸ್ಥಾನ ಅಂಕೋರ್ ವಾಟ್ ನಿಂದ 25 ಕಿ.ಮೀ ದೂರದಲ್ಲೊಂದ ಸಹಸ್ರಲಿಂಗ ಜಾಗ ಇದ್ಯಂತೆ. ಇದರ ಹೆಸರು ಕೆಬಲ್ ಸ್ಪೀನ್ , ಇಲ್ಲಿ ಕೂಡ ನದಿಯಡಿಯಲ್ಲಿ ಸಾವಿರ ಲಿಂಗಗಳಿವೆ. ಆದರೆ ಇಲ್ಲಿಗೆ ತಲುಪೋ ದಾರಿ ಸ್ವಲ್ಪ ಕಷ್ಟ ಆಗಿರೋದ್ರಿಂದ ಇಲ್ಲಿಗೆ ಜನ ಹೋಗೋದುಬ್ ಕಡಿಮೆ.

ಹಿಂದಿನ ಕಾಲದಲ್ಲಿ ರಾಜರೆಲ್ಲಾ ಇಲ್ಲಿ ಸ್ನಾನ ಮಾಡೋಕೆ ಅಂತ ಬರೋರಂತೆ. ಈ ಲಿಂಗಗಳನ್ನ ಯಾರು ಯಾಕೆ ಕೆತ್ತಿತ್ತು ಅಂತ ತಿಳೀದೇ ಹೋದರೂ ಈ ಲಿಂಗಗಳನ್ನ ಸ್ಪರ್ಷಿಸಿ ಬರೋ ನೀರಿಂದಲೇ ಇಲ್ಲಿನ ಬೆಳೆ ಅಷ್ಟು ಸೊಂಪಾಗಿ ಬೆಳೆಯೋಕೆ ಕಾರಣ ಅನ್ನೋ ಅಂತೆಕಂತೆ ಇದೆ. ಕಾಂಬೋಡಿಯಾದ ಯುದ್ಧದ ಸಮಯದಲ್ಲಿ ಎಲ್ಲ ಹಿಂದೂ ದೇವಸ್ಥಾನಗಳು ನಾಶವಾದರೂ ಈ ಜಾಗದ ಸುತ್ತ ದಟ್ಟ ಕಾಡಿರೋ ಕಾರಣ ಕಾರಣ ಇದನ್ನ ಯಾರಿಗೂ ನಾಶಮಾಡೋಕಾಗಿಲ್ಲ ಅನ್ನಲಾಗುತ್ತೆ.

ಇಲ್ಲಿರೋ ಮತ್ತೊಂದು ಅದ್ಭುತವಾದ ಕೆತ್ತನೆ ಅಂದರೆ ವಿಷ್ಣುವಿನ ನಾಭಿಕಮಲದಿಂದ ಬ್ರಹ್ಮನ ಸೃಷ್ಟಿ ಆಗುತ್ತಿರೋ ಕೆತ್ತನೆ.

ancientpages.com

ಶಿವಲಿಂಗಕ್ಕೆ ತನ್ನದೇ ಆದ ಮಹತ್ವವಿದೆ

ಲಿಂಗವನ್ನ ಶಿವನ ಶಕ್ತಿರೂಪ ಅನ್ನಲಾಗುತ್ತೆ. ಕೆಲವರಿಗೆ ಅದು ಇಡೀ ಬ್ರಹ್ಮಾಂಡದ ಪ್ರತೀಕವಾಗಿ ಕಾಣುತ್ತೆ.

ಇನ್ನು ಶಿವ ಪ್ರತಿಯೊಬ್ಬ ಭಕ್ತನಿಗೂ ಒಂದೊಂದು ರೂಪದಲ್ಲಿ ಕಾಣ್ತಾನೆ.

lokaso.in
 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: