ಜಾಗರಣೆ ಮಾಡೋರು ಮಾಡದೆ ಇರೋರು ಎಲ್ಲರಿಗೂ ಶಿವನ ಬಗ್ಗೆ ತಿಳಿದಿರಬೇಕಾದ 24 ಅದ್ಭುತ ವಿಷಯಗಳು

ಶಿವ ಅಂದ್ರೆ ಸತ್ವ, ರಜಸ್ ಮತ್ತು ತಮೋ ಗುಣಗಳಿಂದ ಮುಕ್ತನಾದವನು

ಶಿವ

ಶಿವ ಶಿವ ಎಂದ್ರೆ ಭಯವಿಲ್ಲ, ಶಿವ ನಾಮಕೆ ಸಾಟಿ ಬೇರಿಲ್ಲ ಅಂತ ನಮ್ಮ ಜನ ಹಾಡು ಕಟ್ಟಿ ಅನಾದಿಕಾಲದಿಂದಲೂ ಶಿವನಾಮ ಸ್ಮರಣೆ ಮಾಡುತ್ತಿದ್ದಾರೆ. ಶಿವರಾತ್ರಿ ದಿನ ಶಿವ ಪೂಜೆ ಒಂದೇ ಒಂದು ಬಿಲ್ಪತ್ರೆಯಿಂದ ಮಾಡಿದರೂ ಸಾಕು, ಸಿವ ಮೆಚ್ತಾನೆ ಅಂತ ನಂಬಿಕೆ ಇದೆ.

ಶಿವ ಎಲ್ಲಾ ದೇವರಿಗಿಂತ ಬೇಗ ವರ ಕೊಡ್ತಾನೆ ಅಂತ ನಮ್ಮ ಪುರಾಣಗಳಲ್ಲಿ ಹೇಳುವ ಸಾಕಷ್ಟು ದೃಷ್ಟಾಂತಗಳಿವೆ. ಹಾಗೆ ಶಿವನ ಬಗ್ಗೆ ಇಲ್ಲಿ ಕೊಟ್ಟಿರುವ 24 ವಿಷಯಗಳು ಕೆಲವರಿಗೆ ಭಕ್ತಿಯ ಧಾರೆಯಾಗಿ, ಇನ್ನೂ ಕೆಲವರಿಗೆ ಆಶ್ಚರ್ಯದ ಮಾಹಿತಿಯಾಗಿ ಆಗಲಿವೆ.

1. ‘ಶಿವ’ ಅನ್ನೋ ಪದದ ಮೂಲ ಶ್ರೀ ರುದ್ರಂ ಚಮಕಮ್ (ಕೃಷ್ಣಯಜುರ್ವೇದದ ತೈತ್ತಿರೀಯ ಸಂಹಿತೆ)

ಶಿವ ಪದದಲ್ಲಿ "ಶಿ" ಅಂದ್ರೆ ಪವಿತ್ರ ಅಂತ ಅರ್ಥ.

shiva-1.jpg

2. ವಿಷ್ಣು ಸಹಸ್ರನಾಮದ 27ನೇ ಮತ್ತು 600ನೇ ಹೆಸ್ರು ಶಿವಂದು

ಆದಿ ಶಂಕರರ ಪ್ರಕಾರ ಶಿವ ಅನ್ನೋ ಹೆಸರಿಗೆ ಹಲವು ಅರ್ಥಗಳಿವೆ - ಪವಿತ್ರವಾದದ್ದು, ಪ್ರಕೃತಿಯ ಮೂರು ಗುಣ ಸತ್ವ, ರಜಸ್ ಮತ್ತು ತಮೋ ಗುಣಗಳ ಹಿಡಿತಕ್ಕೆ ಒಳಗಾಗದವ ಎಂದೂ, ತನ್ನ ಹೆಸರು ಉಚ್ಚಾರಣೆ ಮಾತ್ರದಿಂದಲೇ ಭಕ್ತರನ್ನು ಉದ್ದರಿಸುವನೂ ಶಿವ ಎಂದೂ ಅರ್ಥ ಇದೆ.

3. ಶೈವರು ಶಿವನನ್ನು ಮಹಾದೇವ, ಮಹೇಶ್ವರ, ಪರಮೇಶ್ವರ ಅಂತ ಕರೀತಾರೆ

4. ಮಹಾಭಾರತದ ಅನುಶಾಸನ ಪರ್ವ ಶಿವ ಸಹಸ್ರನಾಮದ ಮೂಲವಂತೆ

"ಮಹಾನ್ಯಾಸ"ದಲ್ಲಿ ಶಿವನ ದಶಸಹಸ್ರನಾಮ ಸಿಗುತ್ತದೆ. ಶ್ರೀ ರುದ್ರ ಚಮಕಮ್ (ಶತರುದ್ರಿಯಾ) ದಲ್ಲೂ ಶಿವನ ಹಲವು ನಾಮಸ್ಮರಣೆ ಸಿಗುತ್ತದೆ.

5. ಭಾರತ ದೇಶದ ಜನ ಅವರವರ ಆರಾಧ್ಯದೈವಗಳ ಹೆಸರಿಗೆ ‘ಈಶ್ವರ’ ಅಂತ ಸೇರಿಸುತ್ತ ಬಂದಂತೆ ಶಿವ ಜನಪ್ರಿಯನಾದ

ಶಿವನ ಈಗಿನ ರೂಪ ಅನೇಕ ವರ್ಷಗಳಿಂದ ಜನರ ಅಭಿಪ್ರಾಯಗಳನ್ನು ಕ್ರೂಢಿಕರಿಸಿ ಬಂದಿರುವುದು. ನಮ್ಮ ಸ್ಥಳೀಯ ಅನುಷ್ಠಾನಕ್ಕೆ ಸರ್ಯಾಗಿ ಜನ ಶಿವನಿಗೆ ಅನೇಕ ಹೆಸರುಗಳನ್ನು ಕೊಟ್ಟು ಎಲ್ಲಾದಕ್ಕೂ "ಈಶ್ವರ" ಅಂತ ಸೇರ್ಸಿ ಭೂತೇಶ್ವರ, ಚಂಡೇಶ್ವರ, ಹಾತಕೇಶ್ವರ ಅಂತ ಕರ್ಯಕ್ಕೆ ಶುರು ಮಾಡಿದ್ರು.

6. ಮಹಾರಾಷ್ಟ್ರದ ಜೆಜೂರಿ ಅನ್ನೋ ಊರ್ನಲ್ಲಿ ಖಂಡೋಬ ಅನ್ನೋದು ಶಿವನ ಸ್ಥಳೀಯ ಹೆಸ್ರು.

ಲಿಂಗದ ರೂಪದಲ್ಲಿ ಪೂಜಿಸುತ್ತಾರೆ. ಸೂರ್ಯ ಮತ್ತು ಕಾರ್ತಿಕೇಯನ ಜೊತೆ ಸೇರಿಸಿ ಕಥೆ ಹೇಳ್ತಾರೆ.

7. ವೇದಗಳಲ್ಲಿ ಬರೋ ಪುರುಷ, ರುದ್ರ, ಅಗ್ನಿ, ವಾಯು, ಪ್ರಜಾಪತಿ ಮುಂತಾದ ದೇವತೆಗಳು ಬೇರೆ ಯಾರೂ ಅಲ್ಲ ಶಿವನೇ ಅಂತ ಗುರುತಿಸಿದ್ದರಿಂದ ಶಿವನ ಜನಪ್ರಿಯತೆ ಹೆಚ್ಚುತ್ತಾ ಬಂತು.

8. ಶಿವ ಮತ್ತು ರುದ್ರ ಅನ್ನೋ ಎರಡು ಹೆಸರನ್ನ ನಾವು ಒಂದೇ ತರಾ ಉಪಯೋಗಿಸ್ತೀವಿ.

ರುದ್ರ ಗಾಳಿ ಅಥವಾ ಬಿರುಗಾಳಿ ಮತ್ತು ಬೇಟೆಗೆ ಸಂಬಂಧಿಸಿದ ವೈದಿಕ ದೇವತೆ. "ಗರ್ಜಿಸುವವ" ಎಂದೇ ಹೇಳ್ತಾರೆ. ಋಗ್ವೇದದಲ್ಲಿ, ರುದ್ರನನ್ನು "ಪ್ರಬಲರಲ್ಲಿ ಅತ್ಯಂತ ಪ್ರಬಲ" ಎಂದು ಹೊಗಳಲಾಗಿದೆ.

9. ಮೊದಮೊದಲು ‘ಶಿವ’ ಅನ್ನೋ ಪದ ದೇವತೆಗಳ ಹೆಸರಿಗೆ ವಿಶೇಷಣ ಪದವಾಗಿ ಉಪ್ಯೋಗ ಆಗ್ತಿತ್ತು

1700 ಮತ್ತು 1100 ಕ್ರಿ.ಪೂ ಅವಧಿಯಲ್ಲಿ ಕಂಡುಬಂದ ಅತ್ಯಂತ ಪುರಾತನ ಅನ್ನಿಸಿಕೊಂಡಿರೋ ಋಗ್ವೇದದಲ್ಲಿ ರುದ್ರ ಅನ್ನೋ ದೇವತೆಯನ್ನ ಹೆಸರಿಸಿದ್ದರು. ರುದ್ರ ಮತ್ತು ಶಿವ ಅನ್ನೊ ಪದಗಳನ್ನ ನಾವು ಒಂದೇ ತರ ಬಳಕೆ ಮಾಡೊದಾದ್ರೂ ಶಿವ ಅನ್ನೋ ಪದ ದೇವತೆಗಳ ಗುಣ ವರ್ಣನೆ ಮಾಡೊಕ್ಕೆ ಉಪ್ಯೋಗ ಮಾಡೋದು ಅಂತ "ರುದ್ರಂ" ಶ್ಲೋಕ ಮಾಲೆಯಲ್ಲಿ ಕಂಡುಬರತ್ತೆ. ಅದ್ರಲ್ಲೇ ಇಂದ್ರ, ಮಿತ್ರ ಅತ್ತು ಅಗ್ನಿಯನ್ನ ಶಿವ ಅಂತ ವರ್ಣನೆ ಮಾಡ್ತಾರೆ.

10. ರುದ್ರ ಶಿವನಿಗಿಂತ ಹಳೆಯವನು

ರುದ್ರ ದೇವನ ಅಸ್ಥಿತ್ವ ಶಿವನಿಗಿಂತ ಹಳೇದು ಅಂತ ವೇದಗಳು ಹೇಳತ್ತೆ. ಕೈಯಲ್ಲಿ ಬಾಣ ಹಿಡಿದಿರುವುದು ರುದ್ರನ ಮುಖ್ಯ ಲಕ್ಷಣವೆಂದು, ಶರ್ವ ಅನ್ನೋ ಹೆಸರಿಂದನೂ ಶಿವನನ್ನು ಕರೀತಾರೆ. ಶರ್ವ ಅಂದ್ರೆ "ಕತ್ತಲನ್ನು ಹೊಡೆದೋಡಿಸುವ ಶಕ್ತಿ" ಅಂತ ಹೇಳ್ತಾರೆ.

11. ರುದ್ರ ಮತ್ತು ಅಗ್ನಿಗೆ ತುಂಬಾ ಹತ್ತಿರದ ಸಂಬಂಧ ಇದೆ.

ವೇದದ ಪ್ರಕಾರ ರುದ್ರ ಶಿವ ಆಗೋವಾಗ ಅಗ್ನಿಯು ಎತ್ತಿನ ರೂಪ ತೊಗೊತಾನೆ, ನಂದಿಯಾಗ್ತಾನೆ. ಶಿವನು ಭೈರವ ರೂಪದಲ್ಲಿ ಉರಿಯುತ್ತಿರುವ ಕೂದಲನ್ನು ಹೊಂದುತ್ತಾನೆ.

12. ಋಗ್ವೇದದಲ್ಲಿ ಇಂದ್ರನ್ನ ಶಿವ ಅಂತ ಕರೆದಿದೆ.

ಅದೇ ಋಗ್ವೇದದಲ್ಲಿ ರುದ್ರ ದೇವತೆ ಮರುತಗಳ ತಂದೆ ಆದ್ರೆ ಇಂದ್ರನ ತರ ಯುದ್ಧನಿರತನಾಗಿರುವುದಿಲ್ಲ ಎಂದು ಹೇಳಿದೆ.

13. ಭೀಮ್ಬೆಟ್ಕ ಕಲ್ಲಿನ ಶಾಸನಗಳಲ್ಲಿ ಶಿವನ ಕುಣಿತ, ಶಿವನ ತ್ರಿಶೂಲ ಮತ್ತು ಅವನ ವಾಹನ ನಂದಿಯ ಚಿತ್ರಗಳಿವೆ. ಬೇರೆ ಯಾವ ದೇವತೆಗಳೂ ಇಲ್ಲ.

ಕ್ರಿ.ಪೂ 400-200ರಲ್ಲಿ ಶ್ವೇತಾಶ್ವತರ ಉಪನಿಷತ್ತು ಪ್ರಾಬಲ್ಯಕ್ಕೆ ಬರೋ ಮುಂಚೆ ರುದ್ರನ ರೂಪ ಸ್ಪಷ್ಟವಾಗುತ್ತಾ ಬಂತಂತೆ. ಇದ್ರಲ್ಲಿ ರುದ್ರ ಮತ್ತು ಶಿವನ ವ್ಯಕ್ತಿತ್ವವನ್ನು ಸೃಷ್ಟಿ ಮತ್ತು ಲಯದ ಪ್ರಕ್ರಿಯೆಗೆ ಹೋಲಿಸಿದ್ದಾರೆ. ಇದ್ರಿಂದನೇ ಶೈವ ಸಂಸೃತಿ ಹುಟ್ಟಿತು ಅಂತ ಪತಂಜಲಿ ಮಾಹಾಭಾಷ್ಯ ಮತ್ತು ಮಹಭಾರತದಲ್ಲಿ ಉಲ್ಲೇಖವಿದೆ.

14. ಶಿವನ ತ್ರಿಶೂಲ ಮನುಷ್ಯನ ಮೂರು ಮುಖಗಳನ್ನ ತೋರಿಸತ್ತೆ

ಯಾವ ಮೂರು ಮುಖಗಳು? ಒಳಮುಖ, ಹೊರಮುಖ ಹಾಗೂ ಸುತ್ತಲಿನ ಪ್ರಪಂಚ. ತ್ರಿಶೂಲದ ಬುಡದಲ್ಲಿ ಈ ಮೂರು ಲೀನವಾಗತ್ತೆ. ಶಿವನು ಒಂದು ಕೈಯಲ್ಲಿ ತ್ರಿಶೂಲ ಮತ್ತೊಂದು ಕೈಯಲ್ಲಿ ಅರ್ಧಚಂದ್ರನ್ನ ಹಿಡಿದಿರ್ತಾನೆ. ಮೈಬಣ್ಣ ಹಿಮಪರ್ವತದ ಹಾಗೆ ಇರತ್ತೆ. ಕತ್ತಿನ ಸುತ್ತ ಐದು ಹಾವನ್ನು ಸುತ್ತಿಕೊಂಡು, ತಲೆ ಬುರುಡೆಗಳ ಸರಮಾಲೆಯನ್ನ ಹಾಕಿರುತ್ತಾನೆ ಮತ್ತು ಸದಾ ಅವನ ಮೂರ್ತಿನ ದಕ್ಷಿಣಕ್ಕೆ ಮುಖ ಮಾಡಿ ಇಡುವುದು ಪದ್ದತಿ.

 

15. ಶಿವನಿಗಿರುವ ಮೂರನೆಯ ಕಣ್ಣಿನಿಂದ ಅವನಿಗೆ "ತ್ರ್ಯಂಬಕ"ನೆಂಬ ಹೆಸರು ಬಂತು.

ವೇದದ ಪ್ರಕಾರ ತ್ರ್ಯಂಬಕ ಅಂದ್ರೆ ಮೂರು ಅಮ್ಮಂದಿರು ಅಂತ. ಈ ಮೂರು ಅಮ್ಮಂದಿರನ್ನು ಅಂಬಿಕಾ ದೇವತೆ ಅಂತ ಹೇಳತ್ತೆ. ಶಿವನಿಗೆ ಸಿಟ್ಟು ಬಂದ್ರೆ ತನ್ನ ಮೂರನೆ ಕಣ್ಣನ್ನ ತೆಗೀತಾನೆ, ಮುಂದಿರೋದೆಲ್ಲಾ ಸುಟ್ಟು ಬೂದಿಯಾಗತ್ತೆ ಅಂತ ನಂಬಿಕೆ ಇದೆ.

16. ಋಗ್ವೇದದ ಪ್ರಕಾರ ಶಿವನ ತಲೆ ಮೇಲಿರೋ ಚಂದ್ರ ಅಲಂಕಾರಕ್ಕೆ ಮಾತ್ರವಲ್ಲ, ಸೃಷ್ಟಿಯ ಆದಿ-ಅಂತ್ಯದ ಪ್ರತೀಕವಾಗಿದೆ.

ಶಿವನ ತಲೆಯ ಮೇಲೆ ಚಂದ್ರ ಇರೋದ್ರಿಂದ ಚಂದ್ರಶೇಖರ ಅಂತ ಹೆಸ್ರು ಬಂದಿದೆ.

17. ಶಿವನ ಮೈಮೇಲಿನ ಬೂದಿ ಸಕಲ ಜೀವರಾಶಿಗಳ ಅಂತ್ಯವನ್ನು ಸೂಚಿಸುತ್ತೆ

ಭೈರವನಾದ ಶಿವನು ಸ್ಮಶಾನವಾಸಿ ಅಂತ ಹೇಳ್ತಾರೆ.

vibhuti-rudraksha-ratna.com_.jpg

18. ಸಮುದ್ರ ಮಂಥನದಲ್ಲಿ ಹಲಾಹಲ ವಿಷ ಎಷ್ಟು ಶಕ್ತಿಯುತವಾಗಿತ್ತು ಅಂದ್ರೆ ಶಿವ ನೀಲಕಂಠನಾದ.

 ಸಮುದ್ರ ಮಂಥನದಲ್ಲಿ ಅಮೃತ ಸಿಗೋ ಮುಂಚೆ ಹಾಲಹಲ ವಿಷ ಉಕ್ಕಿ ಬಂತು. ಆಗ ಶಿವ ಅದನ್ನು ಕುಡಿದನು. ತಕ್ಷಣ ಪಾರ್ವತಿ ಆ ವಿಷ ಶಿವನ ಹೊಟ್ಟೆ ತಲುಪದಿರಲಿ ಅಂತ ಶಿವನ ಕತ್ತನ್ನು ಗಟ್ಟಿಯಾಗಿ ಹಿಡಿದಳು. ಆದ್ರೆ ವಿಷ ಎಷ್ಟು ಶಕ್ತಿಯುತವಾಗಿತ್ತೂ ಅಂದ್ರೆ ಶಿವ ನೀಲಕಂಠನಾದ.

nilakantha-.youtube.com_.jpg

19. ಶಿವನ ಮುಡಿಯಲ್ಲಿ ಗಂಗೆ ಇದ್ದು ಅಲ್ಲಿಂದ ಭೂಮಿಗೆ ಅಮೃತಧಾರೆಯಾಗಿ ಹರೀತಾಳೆ.

ಭಗೀರಥನ ಪ್ರಯತ್ನದಿಂದ ಗಂಗೆ ಭೂಲೋಕಕ್ಕೆ ಬರಲು ಒಪ್ಪಿದಳು. ಆದರೆ ತನ್ನ ವೇಗವನ್ನು ತಡೆಯುವರಾರು? ಎಂದು ಕೇಳಿದಾಗ, ಭಗೀರಥ ಶಿವನನ್ನು ಒಪ್ಪಿಸಿದ. ಗಂಗೆ ಶಿವನ ತಲೆಯ ಮೇಲೆ ಬಿದ್ದು ಅಲ್ಲಿಂದ ಕೆಳಗೆ ಇಳಿದಳು. ಶಿವ ಗಂಗೆಯನ್ನು ತನ್ನ ಮುಡಿಯಲ್ಲಿ ಇಟ್ಟುಕೊಂಡ.

shiva-19.jpg

20. ಶಿವನ ಎಡಗೈನಲ್ಲಿರೋ ಡಮರುಗದಿಂದ ಹೊರಟ ಓಂ ಶಬ್ದದಿಂದಲೇ ಸಂಸೃತ ಭಾಷೆ ಹುಟ್ಟಿದ್ದು

ಡಮರುಗ ಶಬ್ದಬ್ರಹ್ಮನ ಆವಾಸ ಸ್ಥಾನ.

shiva-20.jpg

21. ಶಿವ ಪಶುಗಳ (ಪ್ರಾಣಿ ಪಕ್ಷಿಗಳ) ರಕ್ಷಕನಾಗಿದ್ದುದರಿಂದ ಪಶುಪತಿ ಎನಿಸಿಕೊಳ್ತಾನೆ

ಶಿವನ ವಾಹನ ನಂದಿ, ಅಂದರೆ ಎತ್ತು. ಎತ್ತು ಧರ್ಮದ ಪ್ರತಿಕ. ಆದ್ರಿಂದ ಶಿವ ಧರ್ಮ ರಕ್ಷಕನೆಂದೂ ತೋರಿಸುತ್ತದೆ.

shiva-21.jpg

22. ಶಿವನ ವಾಸಸ್ಥಾನ ಹಿಮಾಲಯದ ಕೈಲಾಸ ಪರ್ವತ.

ಈಗಲೂ ಕೈಲಾಸ ಪರ್ವತ ಲಿಂಗಾಕಾರದಲ್ಲಿದೆ ಎಂದು ನಂಬುತ್ತಾರೆ.

shiva-22.jpg

23. ನಾಟ್ಯ ಹಾಗೂ ಸಂಗೀತದ ದೇವತೆಯಾಗಿ ಶಿವ ನಟರಾಜ ಎನಿಸಿಕೊಂಡ

ಶಿವ ಸಹಸ್ರನಾಮದಲ್ಲಿ ನರ್ತಕ, ನಿತ್ಯನರ್ತ ಇದೆ. ಗಂಡಸರ ಕಾಲ-ಮಹಾಕಾಲ ನೃತ್ಯಪ್ರಕಾರ ತಾಂಡವ ನೃತ್ಯವಾಯಿತು. ಪಾರ್ವತಿಯ ನೃತ್ಯ ಲಾಸ್ಯವಾಯಿತು. ತಾಂಡವ-ಲಾಸ್ಯ ನೃತ್ಯ ಜಗತ್ತಿನ ಸೃಷ್ಟಿ-ಲಯದ ಪ್ರತಿಕವಾಗಿದೆ.

shiva-23-ishtadevata.com_.jpg

24. ಪಾರ್ವತಿಗೆ ಅಮರತ್ವದ ರಹಸ್ಯ ಹೇಳುತ್ತಾ ಶಿವ ಜಮ್ಮು-ಕಾಶ್ಮೀರದ ಶ್ರೀನಗರದಿಂದ ಸುಮಾರು 141 ಕಿ.ಮೀ. ದೂರಲ್ಲಿನ ಪೆಹಲ್ಗಾಂ ದಾರಿಯಲ್ಲಿ ಅಮರನಾಥ ಗುಹೆಗೆ ಹೋಗಿ ಅಮರೇಶ್ವರನಾದ.

ಶಿವನ ಕೊರಳಿನಲ್ಲಿದ್ದ ರುಂಡ ಮಾಲೆಯನ್ನು ಕಂಡ ಪಾರ್ವತಿ ಒಮ್ಮೆ ಆ ಬಗ್ಗೆ ಪ್ರಶ್ನಿಸುತ್ತಾಳೆ. ಅದು ಹೇಗೆ ಬಂತು ಮತ್ತು ಅದರ ಐತಿಹ್ಯವೇನು ಎಂದು. ಇದಕ್ಕೆ ಉತ್ತರಿಸುವ ಶಿವ ತಾನು ಹುಟ್ಟಿದಾಗನಿಂದಲೇ ತನ್ನ ಕೊರಳಲ್ಲಿ ಈ ರುಂಡ ಮಾಲೆ ಇದೆ. ನೀನು ಹುಟ್ಟಿದಾಗ ಇದಕ್ಕೆ ಮತ್ತೊಂದು ಮಣಿ ರಿಸಿದೆ ಎಂದು ಹೇಳುತ್ತಾನೆ. ಆಗ ದೇವಿ ಪಾರ್ವತಿ ಹುಟ್ಟು ಸಾವಿನ ಕುರಿತು  ಪ್ರಶ್ನಿಸುತ್ತಾಳೆ - ಎಲ್ರೂ ಸಾಯ್ತಾರೆ. ಆದರೆ ನೀವು ಮಾತ್ರ ಅಮರರಾಗಿದ್ದೀರಿ. ಅದು ಹೇಗೆ ಎಂದು. ಆರಂಭದಲ್ಲಿ ಶಿವ ಈ ಪ್ರಶ್ನೆಗೆ ಉತ್ತರಿಸಲು ನಿರಾಕರಿಸುತ್ತಾನೆ. ಆದರೆ ಪಟ್ಟು ಬಿಡದ ದೇವಿ ಪಾರ್ವತಿ ಪದೇ ಪದೇ ಈ ಬಗ್ಗೆ ಪ್ರಶ್ನಿಸುತ್ತಿರುತ್ತಾಳೆ. ಅಂತಿಮವಾಗಿ ಶಿವ ಪಾರ್ವತಿಗೆ ಅಮರತ್ವದ ರಹಸ್ಯವನ್ನು ಹೇಳಲು ಸಿದ್ಧನಾಗುತ್ತಾನೆ. ಇದೇ ಅಮರಕಥಾ ಎಂದು ಹೇಳಲಾಗುತ್ತದೆ.

shiva-24-kannada.nativeplanet.com_.jpg

ಹೊರಚಿತ್ರ: ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನದಿಯಲ್ಲಿರೋ ಕಲ್ಲುಗಳೆಲ್ಲಾ ಶಿವಲಿಂಗಗಳಾಗಿರೋ ಜಾಗ ನಿಮಗೆ ಗೊತ್ತಾ?

ನಿಮಗಿಲ್ಲಿ ನೋಡೋಕೆ ಸಾವಿರಕ್ಕೂ ಹೆಚ್ಚು ಶಿವಲಿಂಗಗಳಿವೆ!

ಉತ್ತರ ಕನ್ನಡ ಜಿಲ್ಲೆಯ ಸಿರಸಿ ತಾಲೂಕಿನಲ್ಲಿ ಶಲ್ಮಲ ನದಿ ನೀರಿಂದ ಸುಮಾರು ಸಾವಿರಾರು ಶಿವಲಿಂಗಗಳು ನದಿ ನೀರಿನ ರಭಸಕ್ಕೆ ತಾನೇ ಸೃಷ್ಟಿಯಾಗಿವೆ.

ಇದು ಉತ್ತರಕನ್ನಡ ಜಿಲ್ಲೆಯ ಸಿರಸಿ ತಾಲೂಕಿನ ಶಾಲ್ಮಲ ನದಿ ದಡದಲ್ಲಿದ್ಯಂತೆ. ಇನ್ನು ಇಲ್ಲಿನ ನದಿ ನೀರಿನ ರಭಸಕ್ಕೆ ಹಲಾವಾರು ಶಿವಲಿಂಗಗಳು ಮೂಡಿದ್ದು ನದಿಯಲ್ಲಿ ನೀರು ಕಡಿಮೆ ಆದಾಗ ಇದನ್ನ ಸ್ಪಷ್ಟವಾಗಿ ನೋಡಬಹುದಂತೆ.

ಇದಕ್ಕೆ ಸಹಸ್ರಲಿಂಗ ಅನ್ನೋ ಹೆಸರು ಇದಕ್ಕೆ ಸರಿಯಾಗೇ ಹೋಲುತ್ತೆ ಅಂತಾರೆ ಇದನ್ನ ನೋಡಿದೋರು.

ancient-origins.net

1969 ರಲ್ಲಿ ಈ ಸ್ಥಳವನ್ನ ಜೀನ್ ಬಾಲ್ಬೆಟ್ ಅನ್ನೋರು ಕಂಡುಹಿಡಿದರಂತೆ

ಕಾಂಬೋಡಿಯಾದಲ್ಲಿ ಯುದ್ಧ ಆಗದೇ ಹೋಗಿದ್ದರೆ ಇನ್ನೂ ಇಪ್ಪತ್ತು ವರ್ಷ ಮುಂಚೆಯೇ ನಮಗೆ ಸಿಗ್ತಿತ್ತೇನೋ ಅನ್ನೋ ಅಂತೆಕಂತೆ ಕೂಡ ಇದೆ.

ಇತ್ತೀಚೆಗೆ ಏರ್ತಿರೋ ತಾಪಮಾನದಿಂದ ನೀರಿನ ಪ್ರಮಾಣ ಕಡಿಮೆಯಾಗಿ ಇಲ್ಲಿ ಲಿಂಗಗಳು ನೋಡೋಕೆ ಸಿಕ್ಕಿದ್ದವಂತೆ.

ಇನ್ನು ಇತಿಹಾಸದ ಪ್ರಕಾರ ಇಲ್ಲಿನ ರಾಜ ಸದಾಶಿವರಾಯ 1000 ಲಿಂಗಗಳನ್ನ ಕೆತ್ತಿಸಿದರೆ ತನಗೆ ಮಗು ಹುಟ್ಟುತ್ತದೆ ಅನ್ನೋ ಕಾರಣ ಇಲ್ಲಿ ಲಿಂಗಗಳನ್ನ ಕೆತ್ತೋಕೆ ಆಜ್ಞೆ ಮಾಡಿದ್ದನಂತೆ. ಈ ವಿಗ್ರಹಗಳನ್ನ 1678-1718 ಅವಧೀಲಿ ಕೆತ್ತಿರಬಹುದು ಅನ್ನಲಾಗುತ್ತೆ.

ancient-code.com

ಕಾಂಬೋಡಿಯಾದಲ್ಲೂ ಇದೇ ತರ ಸಾಕಷ್ಟು ಲಿಂಗಗಳಿವೆ

ಕಾಂಬೋಡಿಯಾದ ಪ್ರಸಿದ್ಧ ದೇವಸ್ಥಾನ ಅಂಕೋರ್ ವಾಟ್ ನಿಂದ 25 ಕಿ.ಮೀ ದೂರದಲ್ಲೊಂದ ಸಹಸ್ರಲಿಂಗ ಜಾಗ ಇದ್ಯಂತೆ. ಇದರ ಹೆಸರು ಕೆಬಲ್ ಸ್ಪೀನ್ , ಇಲ್ಲಿ ಕೂಡ ನದಿಯಡಿಯಲ್ಲಿ ಸಾವಿರ ಲಿಂಗಗಳಿವೆ. ಆದರೆ ಇಲ್ಲಿಗೆ ತಲುಪೋ ದಾರಿ ಸ್ವಲ್ಪ ಕಷ್ಟ ಆಗಿರೋದ್ರಿಂದ ಇಲ್ಲಿಗೆ ಜನ ಹೋಗೋದುಬ್ ಕಡಿಮೆ.

ಹಿಂದಿನ ಕಾಲದಲ್ಲಿ ರಾಜರೆಲ್ಲಾ ಇಲ್ಲಿ ಸ್ನಾನ ಮಾಡೋಕೆ ಅಂತ ಬರೋರಂತೆ. ಈ ಲಿಂಗಗಳನ್ನ ಯಾರು ಯಾಕೆ ಕೆತ್ತಿತ್ತು ಅಂತ ತಿಳೀದೇ ಹೋದರೂ ಈ ಲಿಂಗಗಳನ್ನ ಸ್ಪರ್ಷಿಸಿ ಬರೋ ನೀರಿಂದಲೇ ಇಲ್ಲಿನ ಬೆಳೆ ಅಷ್ಟು ಸೊಂಪಾಗಿ ಬೆಳೆಯೋಕೆ ಕಾರಣ ಅನ್ನೋ ಅಂತೆಕಂತೆ ಇದೆ. ಕಾಂಬೋಡಿಯಾದ ಯುದ್ಧದ ಸಮಯದಲ್ಲಿ ಎಲ್ಲ ಹಿಂದೂ ದೇವಸ್ಥಾನಗಳು ನಾಶವಾದರೂ ಈ ಜಾಗದ ಸುತ್ತ ದಟ್ಟ ಕಾಡಿರೋ ಕಾರಣ ಕಾರಣ ಇದನ್ನ ಯಾರಿಗೂ ನಾಶಮಾಡೋಕಾಗಿಲ್ಲ ಅನ್ನಲಾಗುತ್ತೆ.

ಇಲ್ಲಿರೋ ಮತ್ತೊಂದು ಅದ್ಭುತವಾದ ಕೆತ್ತನೆ ಅಂದರೆ ವಿಷ್ಣುವಿನ ನಾಭಿಕಮಲದಿಂದ ಬ್ರಹ್ಮನ ಸೃಷ್ಟಿ ಆಗುತ್ತಿರೋ ಕೆತ್ತನೆ.

ancientpages.com

ಶಿವಲಿಂಗಕ್ಕೆ ತನ್ನದೇ ಆದ ಮಹತ್ವವಿದೆ

ಲಿಂಗವನ್ನ ಶಿವನ ಶಕ್ತಿರೂಪ ಅನ್ನಲಾಗುತ್ತೆ. ಕೆಲವರಿಗೆ ಅದು ಇಡೀ ಬ್ರಹ್ಮಾಂಡದ ಪ್ರತೀಕವಾಗಿ ಕಾಣುತ್ತೆ.

ಇನ್ನು ಶಿವ ಪ್ರತಿಯೊಬ್ಬ ಭಕ್ತನಿಗೂ ಒಂದೊಂದು ರೂಪದಲ್ಲಿ ಕಾಣ್ತಾನೆ.

lokaso.in
 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: