ಕನ್ನಡ ಡಬ್ ಸ್ಮಾಷ್

ನಮಸ್ಕಾರ,

ನನ್ನ ಹೆಸರು ಭರತ್. ಹವ್ಯಾಸಿ ನಟ. ಮೊನ್ನೆ ಮೊನ್ನೆ ಯಾರೋ ಮಾಫಿಯಾ ರೂಲ್ಸ್ ಅನ್ನೋರು ಒಂದು ಡಬ್ ಸ್ಮಾಷ್ ಸ್ಪರ್ಧೆ ಇದೆ ಭಾಗವಹಿಸಿ ಅಂತ ಅಂದ್ರು. ನಾನು ವಿಡಿಯೋ ಮಾಡಿ ಹಾಕಿದೀನಿ, ಅವುಗಳ ಲಿಂಕ್ ಇಲ್ಲಿದೆ 

ಕನ್ನಡ ಭರ್ಜರಿ ಸಿನೆಮಾದ್ದು 

 

ಕನ್ನಡ ಬಹಾದ್ದೂರ್  ಸಿನೆಮಾದ್ದು 

 

ತಮಿಳ್ ಕತ್ತಿ ಸಿನೆಮಾದ್ದು 

ದಯವಿಟ್ಟು ನೋಡಿ, ನಿಮ್ಮ ಅನಿಸಿಕೆ ತಿಳಿಸಿ... ನಿಮ್ಮ views ಮತ್ತು likes ನನಗೆ vote ರೀತಿ ಎಣಿಕೆ ಆಗತ್ತೆ.

ನಿಮ್ಮ ಆಶೀರ್ವಾದ ಇರಲಿ...

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ಶಾಲಿಗ್ ಹ್ವಾಪತಿಗೆ ನಮ್ ಟೀಚರ್ ಹೇಳ್ತಿದ್ದ ಆ 13 ನೆಗಿ ತರ್ಸು ಮಾತ್ ಕೇಂಡಿರಿಯಾ

ಇನ್ನೊಂದ್ ಜನ್ಮ ಎತ್ರು ಮರುಕೆ ಆಗುದೇ ಇಲ್ಲ

ನೀವ್ ನಂಬ್ತೀರೋ ಬಿಡ್ತೀರೋ ನಂಗ್ ಗೊತ್ತಿಲ್ಲ. ನಾನೊಂದ್ ದಿನ ಶಾಲಿಗ್ವಾಪತಿಗೆ ಎಂತ ಆಯ್ತ್ ಗೊತ್ತಾ ?

ಪದ್ದಕ್ಕನ್  ಮನೆ ಹಾಡಿಯಾಗೆ ಗ್ವಾಯ್ ಮರ್ದಾಗೆ ಗ್ವಾಯ್ ಹಣ್ ( ಗೇರು ಹಣ್ಣು) ರಾಶಗಟ್ಲೇ ಬೆಳ್ಕಂಡ್ ಇತ್ತ್. ಅದ್ನ ಕಂಡ್ ನನ್ ಬಾಯಗೆ ಜೊಲ್ಲ್ ಸುರದೋಯ್ತ್ ಮರ್ರೆ. ಅದೂ ಕೆಂಪ್ ಕೆಂಪ್ ಹಣ್ಣ್ ಕಂಡ್ರೆ ಯಾರಿಗಾದ್ರೂ ತಡ್ಕಂಬಕ್ಕಾತ್ತಾ ನೀವೇ ಹೇಳಿ?

ಆಗ ನಂಗೆ 5 ನೇ ಕ್ಲಾಸ್. ಸ್ವಲ್ಪ ಕೈ ಕೋಚ್ ಜಾಸ್ತಿ. ನಾನೆಂತ ಮಾಡ್ದೇ ಶಾಲಿ ಚೀಲ ಅಲ್ಲೇ ತೋಡಲ್ಲಿ ಬೆಚ್ಚಿ ಗ್ವಾಯ್ ಹಣ್ಣ್ ಕ್ಯೊಯುಕ್ ಶುರು ಮಾಡ್ದೇ. ಅದೇ ಗಳ್ಗಿಗೆ ಆ ಚ್ವಳಿಕೊಟ್ಟಿ ಮಾಬ್ಲಣ್ಣ ಎಲ್ಲಿದ್ದಿನೋ ಎನೋ ಮರ್ರೆ , ನನ್ನನ್ನ ಕಂಡಂದ್ದೇ ಕೂಗೂಕೇ ಶುರು ಮಾಡ್ದ. ಕೈಗ್ ಸಿಕ್ಕದ್ದೆಲ್ಲಾ ಬರಿಕಂಡ್ ದಾರಿ ಗೊತ್ತಾಗ್ದೇ ಶಾಲಿಬದಿಗೆ ಒಡ್ದೇ. ತೋಡಗಿದ್ದದ್ದ ಚೀಲ ಅಲ್ಲೇ ಇತ್ತ್. ಸ್ವಲ್ಪ ಹೊತ್ತಾದ್ಮೇಲೆ ವಾಪಾಸ್ ಬಂದ್ ಆ ಚೀಲ ತಗೊಂಡೆ.

ಶಾಲಿ ಮುಟ್ಟೋವತಿಗೆ ಲೇಟ್ ಆಯ್ತ್ ಮರೆ. ನಮ್ ಕ್ಲಾಸ್ ಟೀಚರ್ ವಿನ್ನಿ ಫೆರ್ನಾಂಡಿಸ್ ಅಂದೇಳಿ. ಅವ್ರ ಕೇಂಡ್ರ್ , ಎಂತಕ್ ತಡ ಆದ್ ಅಂದೇಳಿ. ನಾನ್ ಅದ್ಕೆ ಹೇಳ್ದೇ , ಅಲ್ಯಾರೋ ಪದ್ದಕ್ಕನ್  ಮನೆ ಹಾಡಿಯಾಗ್  ಗ್ವಾಯ್ ಹಣ್ಣ್ ಕದೀತಾ ಇದ್ರ್ ನಾನ್ ಪದ್ದಕ್ಕನ್ ಮನೀಗೆ ಹೋಯ್ ಪದ್ದಕನಿಗೆ ಹೇಳಿ ಬರೋದ್ರೋಳಗೆ ಇಷ್ಟ್ ಹೊತ್ತಾಯ್ತು. ಅದ್ಕೆ ನಂಗೆ ಅವ್ರು ನಾಲ್ಕ್ ಗೋಯ್ ಹಣ್ಣ್ ಕೊಟ್ಟಿರ್. ಇದ್ರಲ್ ಒಂದ್ ನಿಮ್ಗೂ ಕೊಡೂಕ್ ಹೇಳಿರ್ . ತಗಣಿ ಟೀಚರ್ ಅಂದೆ. ಆವತ್ ನನ್ನನ್ನ ಕ್ಲಾಸಗೆ ಎಲ್ಲಾ ಮಕ್ಳೆದ್ರಿಗೆ ಹೊಗ್ಳದ್ದೇ ಹೊಗ್ಳದ್ದೆ. ಕೆಲವ್ ಹೆಣ್ಮಕ್ಕಳಂತೂ ಸಾಯಂಕಾಲ್ ಆಗುವರೆಗೂ ನನ್ ಕಂಡ್ ಒಂಥರಾ ನೆಗಿಯಾಡ್ತಾ ಇದ್ವು.

ಇದು ನನ್ ಜೀವ್ನದಲ್ಲಿ ನಡ್ದಿರೋ ಸತ್ಯ ವಿಷ್ಯ. ಇದೇ ನಮ್ನಿ ನೀವು ಕ್ಲಾಸಿಗೆ ತಡ್ ಆಯ್ ಹೋದಾಗ ನಿಮ್ ಟೀಚರ್ ಇದೇ ಪ್ರಶ್ನೆ ಕೇಂತ್ರ ಅಲಾ. ಇದೇ ನಮ್ನಿ ನಮ್ ಟೀಚರ್ ಇನ್ನೂ ಬ್ಯಾರ್ ಬ್ಯಾರೇ ತರದ್ ಪ್ರಶ್ನೆ ಕೇಳ್ತ್ರ ಅದ್ ಯಾವ್ದಲ್ಲ ಅಂದೇಳಿ ನೋಡ್ಕನ್ ಬಪ್ಪ ಬನ್ನಿ. 

1) ಎಂತಕ್ಕೆ ಲೇಟ್ ಆಗಿದ್ದಾ?

ನಾನ್ ಆಗ್ಲೇ ಹೇಳ್ದೇ ಅಲ್ವಾ . ಪದ್ದಕ್ಕನ ಮನಿಗೆ ಹೋಗಿ ಗ್ವಾಯ್ ಹಣ್ಣ್ ಕದೀತಾ ಇದ್ರ್ ಅಂದೇಳಿ. 

wordzz.com

2) ನಿಂಗೆ ತಿಂಡಿ ತಿಂಬುಕೆ ನೆನಪಿರತ್ತ್. ಪುಸ್ತಕ ಶಾಲಿಗೆ ತರ್ಕಂದೇಳೀ ನೆನಪಿರುದಿಲ್ಯಾ?

ಟೀಚರ್ ಮನೆಗೆಲಸ ಕೊಟ್ ನಾವ್ ಮಾಡ್ಕಂಡ್ ಹೋಗ್ದೇ ಇದ್ರೆ ಅವ್ರ್  ಹೀಂಗಿಂದೆಲ್ಲಾ ಹೇಳ್ದೇ ಪೂಜಿ ಮಾಡ್ತಾರಾ 

img.youtube.com

3) ಎಯ್ ಮಾತಾಡುಕಾಗ ಅಂದೇಳಿ ಹೇಳದ್ ಕೆಮಿ ಕೇಂತಿಲ್ಯಾ?

ಅಂತ ದೊಡ್ ಜೀವ್ ಇರೋ ಟೀಚರ್ ಕಣ್ಮುಂದೆ ಇದ್ರೂ ಈ ಮಕ್ಳ್ ಮಾತಾಡಿ ಬೊಬ್ಬೆ ಹಾಕ್ತಾರಲ್ಲ ಅವ್ರ ಬಯ್ದೇ ಇನ್ನೇನ್ ಮಾಡ್ತರಾ!

i.ytimg.com

4) ಯಾರಾದ್ರೂ ಗುಸುಗುಸು ಅಂದೇಳಿ ಮಾತಾಡ್ಕ್ ಆಮೇಲೆ ಎಂತ್ ಮಾಡ್ತೆ ಅಂದೇಳಿ ನಂಗ್ ಗುತ್ತಿಲ್ಯ. ಸೂಜಿ ಬಿದ್ರು ಶಬ್ದ ಆಗ್ಬಾರ್ದು ಹಾಂಗ್ ಸುಮ್ನೆ ಕೂತ್ಕೊಳ್ಬೇಕು  

d2c7959ezy50r5.cloudfront.net

5) ದಿನ ಅವ್ನತ್ರ ಪೆನ್ ಪೆನ್ಸಿಲ್ ಕೇಂಬುಕೆ ನಿಂದ್ ಎಲ್ಲೋಯ್ತಾ 

ಟೀಚರ್ ನನ್ನತ್ರ ಇದ್ದದ್ದ ತುಂಡಾಯ್ತ್ ಅದ್ಕೆ ಅವ್ನತ್ರ ಕೇಂಡದ್. ನಾಳಿಂದ ನಾನ್ ತುಂಡ್ ಮಾಡ್ಕಂತಿಲ ಟೀಚರ್

thecagegilded.files.wordpress.com

6) ಬೆಂಚಲ್ಲಿ ಒಂದೇ ಹುಡ್ಗ ಒಂದೇ ಹುಡ್ಗಿ ಕೂತ್ಕಣಕ್ 

ಪ್ರಶ್ನೆಗೆ ಉತ್ರ ಸರ್ಯಾಗ್ ಹೇಳ್ದೇ ಇದ್ರೆ ಇದೇ ಪನಿಷ್ಮೆಂಟ್. ಕಂಡರ್ ಎಲ್ಲ ನಗಾಡಿ ನಗಾಡಿ ಇಡಿ ದಿನ್ ಚಾಳ್ಸತಾ ಇರ್ಲಿ ಅಂದೇಳಿ. 

livemint.com

7) ಅಫೀಸ್ ರೂಮಿಗೆ ಹೋಗಿ ನನ್ ಟೇಬಲ್ ಮೇಲಿದ್ದದ ಆ ಪೇಪರೆಲ್ಲಾ ತಂದ್ ಇವ್ರಿಗೆಲ್ಲಾ ಕೊಡ್

indiasudar.files.wordpress.com

8) ಅಲ್ಲಾ ಎಷ್ಟ್ ದಿನ ಬೇಕಾ ನಿಂಗ್ ? ಎರಡ್ ವಾರ್ ಆಯ್ತ್ ಒಂದ್ ಪ್ರಾಜೆಕ್ಟ್ ವರ್ಕ್ ಕೊಟ್ . ಮನೇಲೆಂತ ಮರಣಕಟ್ಟಿ ಮಾಡ್ತಾ ಆಯ್ಕಂಡೆಯಾ ಹ್ಯಾಂಗೆ , ಇಲ್ಲಾ ಊರತುಂಬಾ ತಿರ್ಗತಾ ಇದ್ದೆ ಅಲಾ 

im.rediff.com

9) ಶಾಲಿ ಗೋಡೆ ಮೇಲೆ ಗಾದೆ ಮಾತ್, ನುಡಿಮುತ್ತನ್ನೆಲ್ಲಾ ಒಂದ್ ಚಾರ್ಟಲ್ಲಿ ಬರ್ದ್ ಹಾಕ್. ಯಾರ್ ಈ ಕೆಲ್ಸ ಮಾಡ್ತರಿ?

ಟೀಚರ್ ನಾನ್ ಮಾಡ್ತೆ. ಆರೆ , ಎಲ್ರೂ ಚಾರ್ಟ್ ತಕಂಬಕ್ ದುಡ್ ಕೊಡ್ಕ್. ಅದ್ ಸರಿಯಾಗ್ ಹೇಳಿ ಟೀಚರ್

i.ytimg.com

10) ಅಲ್ಲಾ ದಿನ ಇಡಿ ಉಚ್ಚೆ ಹೊಯ್ಯುಕೆ  ಹೋತಿಯಲ್ಲ ಉಚ್ಚಿ ಚೀಲ್ ಹರ್ದೋಯ್ತನ ನಿಂದ್ ?

ಇಲ್ಲ ಟೀಚರ್ ತಟುಕ್ ತಟುಕ್ ಬಂದಂಗಾತ್ ಅದ್ಕೆ 

merinews.com

11) ನನ್ನತ್ರ ಮಾತಾಡುದಾದ್ರೆ ಇಂಗ್ಲೀಷಲ್ಲೇ ಮಾತಾಡಕ್, ನಾನ್ ನಿಮ್ ಇಂಗ್ಲೀಷ್ ಟೀಚರ್ ಗುತ್ತಾಯ್ತಲ್ಲ!

ಇವ್ರದೊಂದ್ ದೊಡ್ಡ್ ರಗ್ಳೆ ಮರೆ. ಬತ್ತಿಲ್ಲ ಅಂದ್ರೂ ಬಿಡುದಿಲ್ಲ ಮರೆ.

2.bp.blogspot.com

12) ಮೊನ್ನೆ ಪೇರೆಂಟ್ಸ್ ಮೀಟಿಂಗೆ ನಿನ್ ಅಬ್ಬಿ ಎಂತಕ್ ಬಂದಿಲ್ಲ , ಅವ್ರ ಪೋನ್ ನಂಬರ್ ಕೊಡ್ ನಾನ್ ಮಾದಿ ಕೇಂತೆ ಎಂತಾಯ್ತ್ ಅಂದೇಳಿ

ಟೀಚರ್ ಪೋನ್ ಮಾಡುದು ಬೇಡ್ . ಅವ್ರ ನಂಗೆ ಸಮ್ ಬೈತ್ರ . ಇನ್ಮುಂದೆ ಚಂದ ಒದತ್ತೆ ಬಿಡಿ ಟೀಚರ್. 

images.indianexpress.com

13) ನಾನ್ ಕೇಂಡದಕ್ಕೆ ಉತ್ರ ಕೊಡುಕ ಆತಿಲ್ಲ ನಿಂಗೆ . ಹುಣ್ಸಿಹಣ್ಣ್ ಜಾಸ್ತಿ ಇತ್ ನಿಂಗೆ . ಹೆಡ್ ಮಾಸ್ಟ್ರ ಆಫೀಸ ಎದ್ರಿಗೆ ನಿಂತ್ಕೊ ಹೋಗ್ 

ಗಂಡಿಂದ್ ಕತಿ ಪಡ್ಚ . ಗಳಪಾಸ್ ಮಾಡಿ ಕೊಟ್ರ ಅಲಾ.  ಹಿಪ್ಳಕಟ್ಟಿ ಹ್ವಾಪ್ದ್ ಗ್ಯಾರಂಟಿ. 

rarapop.files.wordpress.com
ಹ್ಯಾಂಗಿತ್ತ ನಮ್ ಟೀಚರ್ ಡಯ್ಲಾಗ್. ಆಗಳೀಕಿ ನಡ್ದಿದಲ ಸತ್ರೂ ಮರುಕಾತಿಲ್ಲ ಅಲ್ದೇ. ಒಂಥರ ಹೇಸ್ಕಿ ಮಾಡ್ರು ಚಂದ್ವೇ ಅಲ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: