ಈ 7 ಎಡವಟ್ಟುಗಳಿಗೆ ಸರಿಯಾದ ಪರಿಹಾರ ಏನು ಅಂತ ಗೊತ್ತಿದ್ರೆ ಜನ ನಿಮ್ನ ಬಾಂಡ್ ಅನ್ಕೋತಾರೆ

ಇವೆಲ್ಲ ನಡೆದೇ ನಡೆಯುತ್ತೆ

ಕೆಲ್ವೊಂದ್ ಕ್ಷಣ ನಮ್ಗೆ  ಎನ್ ಮಾಡ್ಬೇಕು ಎನ್ ಮಾಡ್ಬಾರ್ದು ಅಂತ  ಗೊತ್ತಾಗಲ್ಲ. ಅಂತಹ ಸಂದರ್ಭದಲ್ಲಿ ನಮ್ ಬುದ್ದಿ ಸರಿಯಾಗ್ ಉಪಯೋಗ್ಸಿದ್ರೆ ಎಂತಹ ಕಷ್ಟ ಇದ್ರೂ ಅದ್ನ ಸಲೀಸಾಗಿ ಪರಿಹರಿಸಿಕೊಳ್ಳಬಹುದು. ಮಳೆ ಬಂದಾಗ್ಲೋ ಅಡ್ಗಿ ಮನೆಯಲ್ಲಿದ್ದಾಗ್ಲೋ ಅಥ್ವಾ ಇನ್ಯಾವ್ದೋ ಪರಿಸ್ಥಿತಿಯಲ್ಲಿಯೋ ನಮ್ಗೆ ಕಷ್ಟ ಎದ್ರಾಗತ್ತೆ. ಅಂತ ಸಂದರ್ಭದಲ್ಲಿ ಒತ್ತಡ ಮಾಡ್ಕೊಂಡ್ರೆ ಎನ್ ಪ್ರಯೋಜನ ಇಲ್ಲ. ಒತ್ತಡದಿಂದ ನಿಮ್ ಸಮಸ್ಯೆಗೆ ಪರಿಹಾರ ಸಿಗಲ್ಲ. ಅಂತಹ ಕಷ್ಟ ಬಂದ್ರೆ ಹೇಗಪ್ಪಾ ಪರಿಹರ್ಸಿಕೊಳ್ಳೋದು ಅನ್ನೋದಕ್ಕೆ ಇಲ್ಲಿ ಕೆಲ್ವೊಂದ್ ಉಪಾಯ ಕೊಟ್ಟಿದಿವಿ ನೋಡಿ.

1) ಹೊರಗಿಂದ ಡೋರ್ ಲಾಕ್ ಆಗ್ಬಿಟ್ರೆ

ಮನೆಯಲ್ಲಿ ಮಕ್ಳಿದ್ರೆ ಡೋರ್ ಲಾಕ್ ಆಗೋದು ಸಾಮಾನ್ಯ. ಮಾತ್ ಕೇಳಲ್ಲ ಅದ್ಕೆ. ಎನ್ ಯೋಚ್ನೆ ಮಾಡೋ ಅವಶ್ಯಕತೆ ಇಲ್ಲ ಜೊತ್ಗೆ ಡೋರ್ ಒಡೀಬೇಕು... ಕಿಟ್ಕಿಯಿಂದ ನುಸುಳಿ ಬರ್ಬೇಕು ಅಂತೇನಿಲ್ಲ.

ಮೊದ್ಲು ಲಾಕಲ್ಲಿ ಸಣ್ಣದಾಗಿರೋ ತೂತು ಇದೆಯಾ ನೋಡಿ. ಇದ್ದೆ ಇರತ್ತೆ. ಅದ್ರ ಒಳ್ಗಡೆ ನೇರವಾಗಿರೋ ಪೇಪರ್ ಕ್ಲಿಪ್ ಹಾಕಿ ಇನ್ನೊಂದ್ ಕಡೆಯಿಂದ ತಕ್ಷಣ ತಿರುಗಿಸಿ ಬಿಡಿ. ಕೂಡ್ಲೇ ಒಪನ್ ಆಗತ್ತೆ. ಇದಾಗಲ್ಲ ಅಂದ್ರೆ ಲಾಕ್ ಫ್ರೇಮನ್ನ ನಿಧಾನವಾಗಿ ತಿರುಗಿಸಿ ಸ್ಕ್ರೂ ಸಡಿಲ ಮಾಡಿ ಬಿಡಿ. 

ತುಂಬಾ ಸಿಂಪಲ್ ಅಲ್ವಾ? ಸುಮ್ನೇ ಬಾಗಿಲು ಮುರಿಯೋದ್ ತಪ್ಪತ್ತೆ.

2) ನಲ್ಲಿ ನೀರು ಸೋರ್ತಾ ಇದ್ರೆ

ರಾತ್ರಿಯಿಡೀ ನಲ್ಲಿಯಿಂದ ನೀರು ಸೋರ್ತಾ ಇದ್ರೆ ಮಲ್ಗೋಕು ಆಗಲ್ಲ. ಅಷ್ಟು ಕಿರಿಕಿರಿ ಅನ್ಸತ್ತೆ. ರೀಪೇರಿಯವನಿಗೆ ಪೋನ್ ಮಾಡೋಣ ಅನ್ಕೊಂಡ್ರೆ ಹೇಳಿದ್ ಟೈಮ್ಗೆ ಬಂದ್ರೆ ದೇವ್ರು ದೊಡ್ಡವ್ನು! ಅಷ್ಟು ಸುಲಭ ಇಲ್ಲಾ ಅಲ್ವಾ? 

ನೀರು ಸೊರ್ತಾ ಇದೆ ಅಂದ್ರೆ ಸ್ಕ್ರೂ ಲೂಸ್ ಆಗಿರ್ಬೆಕು ಇಲ್ಲಾ ವಾಶರ್ ಹೋಗಿರ್ಬೇಕು. ಅದ್ಕೆ ನಲ್ಲಿ ಒಪನ್ ಮಾಡಿ ಸ್ವಲ್ಪ ಟೈಟ್ ಮಾಡ್ಬಿಡಿ. ಆಮೇಲೆ ಅಂಗಡಿಗೆ ಹೋಗಿ ಒಂದು ಹೊಸ ವಾಶರ್ ತಂದು ಫಿಟ್ ಮಾಡಿ.

ನಮ್ಮಲ್ಲಿ ಎನೆಂದ್ರೆ ಸರಿಯಾಗಿ ನಲ್ಲಿ ತಿರ್ಗಿಸಿ ಇರಲ್ಲ. ಅಷ್ಟೊಂದ್ ಬೇಜಬ್ದಾರಿ. ಅದ್ಕೆ ಉಪಯೋಗಿಸಿದ ಮೇಲೆ ಸರಿಯಾಗಿ ತಿರ್ಗಿಸಿ ಇಡಿ.

ಪ್ಲಂಬರ್ ಕಾಲು ಹಿಡಿಯೋದು ತಪ್ಪತ್ತೆ ನಿಮ್ಗೆ.

3) ಒಂದೇ ಸಮನೇ ಇರುವೆ, ಗೊದ್ದ, ನೊಣ ಬರ್ತಿದ್ರೆ

ಮನೇಲಿ ಕೀಟಗಳ ಹಾವಳಿ ತಪ್ಪಿಸಿಕೊಳ್ಳಕ್ಕೆ ಒಂದಿಷ್ಟು ಡಿಡಿಟಿ ಪೌಡರ್ ಅಥವಾ ಯಾವುದಾದ್ರೂ ಕೀಟನಾಶಕ ಇಟ್ಕೊಂಡಿರ್ಬೇಕು. ಇರುವೆ, ಗೊದ್ದ, ಜಿರಳೆ ಹೆಚ್ಚಾಗಿ ಯಾವ್ ಪ್ರದೇಶದಲ್ಲಿ ಇರತ್ತೋ ಅಲ್ಲಿ ಹಾಕ್ಬಿಡಿ. ಮೂಲೆಯನ್ನ ಮಾತ್ರ ಯಾವತ್ತು ಮರೀಬೇಡಿ. 

4) ಒವನಲ್ಲಿ ಹೊಗೆ ಬಂದಾಗ

ಈ ಸಮಸ್ಯೆ ಸರ್ವೇ ಸಾಮಾನ್ಯ. ಹೆದ್ರಿಕೊಳ್ಳೋ ಅವಶ್ಯಕತೆ ಎನೂ ಇಲ್ಲ. ಹೊಗೆ ಬಂದಾಗ ಒಂದಿಷ್ಟು ಗಟ್ಟಿಯಾದ ಬೇಕಿಂಗ್ ಸೋಡಾ ಹಾಕಿ. ತಿಂಡಿ ಬಿಸಿಯಾಗ್ತಾ ಇದ್ದಾಗ ಹೊಗೆ ಬಂದ್ರೂ ತೊಂದ್ರೆ ಇಲ್ಲ ಹಾಕಿ.

5) ಟೈಯರ್ ಪಂಕ್ಚರ್ ಅದಾಗ

ವೀಕೆಂಡ್ಗೆ ಸುತ್ತಾಡೊಣ ಅಂತ ಎಲ್ಲ ರೆಡಿ ಮಾಡ್ಕಂಡೊದಾಗ ಗಾಡಿ ಟೈರ್ ಪಂಚರ್ ಆದ್ರೆ ಎಷ್ಟು ಬೇಜಾರ್ ಆಗತ್ತೆ ಅಲ್ವಾ? ನಿಮ್ ಜೊತೆ ಜ್ಯಾಕ್, ಡೀಸೆಂಟ್ ಸ್ಪೇರ್ , ಲೆಗ್ ರೆಂಚು ಇರ್ಬೇಕು. ಇದಿಷ್ಟ್ ಇದ್ರೆ ಒಂದೊಳ್ಳೆ ಜಾಗ ಹುಡ್ಕಿ ಶುರು ಮಾಡಿ. 

6) ಬಿಸಿ ಎಣ್ಣೆ ಸಿಡಿದಾಗ/ ಚಾಕು, ಕತ್ತರಿ ಗಾಯ ಆದಾಗ

ದಿನ ನಿತ್ಯ ಅಡ್ಗೆ ಮನೆಯಲ್ಲಿ ಕೆಲ್ಸ ಇದ್ದೇ ಇರತ್ತೆ. ತರ್ಕಾರಿ ಕಟ್ ಮಾಡೊವಾಗ್ಲೋ ಇನ್ನೇನೋ ಹೆಚ್ಚುವಾಗ ಕತ್ರಿಯಿಂದ ಗಾಯ ಅಗೇ ಆಗತ್ತೆ. ಜೊತ್ಗೆ ಸುಟ್ಟ ಗಾಯ ಆದ್ರೆ ಕೂಡಾ  ಅದ್ಕೆಲ್ಲಾ ಕೂಗ್ತಾ ಕುತ್ಕಂಡ್ರೆ ಎನ್ ಪ್ರಯೋಜನ ಇಲ್ಲ. ಸುಟ್ಟ ಗಾಯ ಅಗಿದ್ರೆ ತಕ್ಷಣ ತಣ್ಣಗಿನ ನೀರು ಹಾಕಿ ಅಮೇಲೆ ಬರ್ನಾಲ್ ಕ್ರೀಮ್ ಹಚ್ಚಿ. ಗಾಯ ಆಗಿದ್ರೆ ರಕ್ತ ನಿಲ್ಲಕ್ಕೆ ಅರಿಶಿನ ಹಚ್ಚಿ, ಸುತ್ತ ಗಟ್ಟಿಯಾಗಿ ಬಟ್ಟೆ ಕಟ್ಟಿ ಹತ್ರದಲ್ಲಿರೋ ಡಾಕ್ಟರ್ ಹತ್ರ ಹೋಗಿ. 

7) ಮೊಟ್ಟೆ ಕೈ ಜಾರಿ ನೆಲದ ಮೇಲೆ ಬಿದ್ದಾಗ 

ಈ ತರ ಎಲ್ಲಾದ್ರೂ ಅದ್ರೆ ಎಷ್ಟು ಸಿಟ್ಟ್ ಬರತ್ತೆ ಅಲ್ವಾ? ನೆಲ ಕ್ಲೀನ್ ಮಾಡೋಕೆ ತುಂಬಾ ಟೈಮ್ ಬೇಕಾಗತ್ತೆ. ಅದ್ಕೆ ಬಿದ್ದ ಜಾಗದಲ್ಲಿ ಸ್ವಲ್ಪ ಉಪ್ಪು ಹಾಕಿ ಇಡಿ .ಅದು ಗಟ್ಟಿಯಾಗೋವರ್ಗೆ ಕಾಯಿರಿ ಅಮೇಲೆ ತೆಗೀರಿ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ಲೈಫಲ್ಲಿ ಉದ್ಧಾರ ಆಗಬೇಕಾದ್ರೆ ಈ 10 ಕುಂಟು ನೆಪಗಳ್ನ ಇವತ್ತೇ ಅಲ್ಲ ಈಗಲೇ ಬಿಟ್ಟುಬಿಡಿ

ಆಗದು ಎಂದು ಕೈಕಟ್ಟಿ ಕುಳಿತರೆ...

ನೆಪ

ಕೆಲ್ವೊಂದ್ ಸಲ ಏನಾದ್ರೂ ಕೆಲ್ಸ ಮಾಡಕ್ಕಾಗ್ದೇ ಹೋದ್ರೆ ಯಾಕ್ ಮಾಡಕ್ಕಾಗ್ಲಿಲ್ಲ ಅಂತ ನೆಪ ಹೇಳ್ತಿರ್ತೀವಿ. ಅದ್ರಲ್ಲಿ ಕೆಲವು ನಿಜವಾದ ಕಾರಣಗಳೇ ಆಗಿದ್ರೂ ತುಂಬಾ ಸಲ ನಾವ್ ಹೇಳೋದು ಕುಂಟು ನೆಪಗಳೇ... ದೊಡ್ಡ ಸಾಧನೆ ಮಾಡ್ತಿನಿ ಅನ್ನೋರು ಈ ಥರ ನೆಪ ಹೇಳ್ಕೊಂಡು ಕೂತ್ರೆ ಆಗಲ್ಲ. ಇಲ್ನೋಡೀ ಕೆಲವು ನೆಪಗಳು ಇಲ್ಲಿವೆ... 

1. "ನನ್ ಕೈಲಾಗಲ್ಲ"

ಕೆಲ್ವೊಂದ್ ಸಲ ಸರಿಯಾದ ಪ್ರಯತ್ನ ಮಾಡ್ದೇನೆ "ಇದಾಗಲ್ಲ... ಅದಾಗಲ್ಲ..." ಅಂತ ಮಾತಾಡ್ತೀವಿ. ಈ ಥರ ಮಾಡೋದ್ರಿಂದ ಹಿಂದೆಂದೂ ಯಾರೂ ಮಾಡಿಲ್ದೇ ಇರೋ ಸಾಧನೇನ ನಾವು ಮಾಡೋ ಅವಕಾಶಾನ ನಾವ್ ಕಳ್ಕೋತೀವಿ.

2. "ನಾನ್ ಜಾಸ್ತಿ ಓದಿಲ್ಲ, ಅದಕ್ಕೇ ನಂಗೆ ಬೆಲೆ ಇಲ್ಲ..."

ಓದು ಜೀವನಕ್ಕೆ ತುಂಬಾ ಮುಖ್ಯ, ನಿಜ. ಆದ್ರೆ ಹೆಚ್ಚಿಗೆ ಅದಿಲ್ದೇ ಹೋದ್ರೆ ಏನೂ ಸಾದ್ಸಕ್ಕಾಗಲ್ಲ ಅನ್ನೋದು ಸುಳ್ಳು. ಸಮಾಜದಲ್ಲಿ ಹೆಚ್ಚಿಗೆ ಓದಿಲ್ಲದವರೂ ಸಾದ್ಸೋ ಅಂತಾದ್ದು ಬೇಕಾದಷ್ಟಿದೆ. ಹಾಗ್ ನೋಡಿದ್ರೆ ಹೆಚ್ಚಾಗಿ ಓದ್ದೇ ಇರೋರೇ ದೊಡ್ ದೊಡ್ ಸಾಧನೆಗಳನ್ನ ಮಾಡಿರೋ ಉದಾಹರಣೆಗಳು ಬೇಕಾದಷ್ಟಿವೆ. 

3. "ನಾನೇನಕ್ಕೂ ಪ್ರಯೋಜನ ಇಲ್ಲ..."

ತುಂಬಾ ಜನ್ರು ಈಥರ ಔರೌರಿಗೇ ಏನೋ ಹೇಳ್ಕೊಂಡು ಏನೂ ಮಾಡಲ್ಲ. ಇನ್ ಕೆಲುವ್ರು ಅಂಗವಿಕಲತೇನೋ ಇನ್ಯಾವ್ದೇ ಸಮಸ್ಯೆಗೋ ಸಿಕ್ಕಿ ಈ ಥರ ಮನಸ್ಸು ಮಾಡ್ಕೊಂಡಿರ್ಬೋದು. ಆದ್ರೆ ಒಂದ್ ವಿಷ್ಯ ನೆನಪಿಟ್ಕೊಳಿ. ಹುಟ್ತಾನೇ ಯಾರೂ ಯಾವುದ್ರಲ್ಲೂ ಪಂಟ್ರಾಗಿರಲ್ಲ. ಕೆಲ್ಸ ಮಾಡ್ತಾ ಮಾಡ್ತಾ ಎಲ್ರೂ ಕಲೀತಿವಿ, ಹಾಗೇ ಬೆಳೀತೀವಿ. ನೀಮ್ಮನ್ನ ಜಗತ್ತು ಕೈಲಾಗದೋರು ಅಂದ್ಕೊಂಡಷ್ಟೂ ನಿಮ್ಗೇ ಒಳ್ಳೇದು. ಯಾಕಂದ್ರೆ ನಿಮ್ಮಿಂದ ಅವರ ನಿರೀಕ್ಷೆ ಕಮ್ಮೀನೇ ಇರುತ್ತೆ. ಆಗ ನೀವಿಡೋ ಚಿಕ್ಕ ಚಿಕ್ಕ ಹೆಜ್ಜೇನೂ ಜಗತ್ತಿನ ಪಾಲಿಗೆ ದೊಡ್ಡದೇ ಆಗಿರುತ್ತೆ.

4."ನನ್ನತ್ರ ದುಡ್ಡಿಲ್ಲ.. ಅದಕ್ಕೇ ಏನೂ ಮಾಡಕ್ಕಾಗ್ತಿಲ್ಲ..."

ಸಮಾಜದಲ್ಲಿ ತುಂಬಾ ಜನ ದುಡ್ಡಿಲ್ದೇ ಇರೋರು ಇದಾರೆ. ಆದ್ರೆ ಎಲ್ಲಾರೂ ಹೀಗೇ ಹೇಳ್ಕೊಂಡು ಕೂತಿರಕ್ಕಾಗಲ್ಲ. ಏನಾದ್ರೂ ಸಣ್ಣಾಪುಟ್ಟ ಕೆಲ್ಸ ಮಾಡ್ಕೊಂಡು ನಿಮ್ ಸಾಧನೆಗೆ ಬೇಕಾದ್ ದುಡ್ಡನ್ನ ಕೂಡಿಡಿ, ಎಷ್ಟೊರ್ಷ್ ಹೀಗೆ ನೆಪ ಹೇಳ್ತಿರೀರಿ?

5. "ನೋಡ್ದೋರ್ ಏನನ್ಕೋತಾರೋ...!?"

ನೀವೇನಾದ್ರೂ ದೊಡ್ಡ ಸಾಧನೆ ಮಾಡ್ಬೇಕು ಅಂತಿದ್ರೆ, ಅವ್ರಿವ್ರು ಏನನ್ಕೋತಾರೋ ಅನ್ನೋದನ್ನ ತಲೆಯಿಂದ ಮೊದ್ಲು ತೆಗೆದಾಕಿ. ಯಾರೂ ಏನೂ ಅನ್ಕೊಳಲ್ಲ. ಅದನ್ನೇ ನೆಪ ಮಾಡ್ಕೊಬೇಡಿ. ಅದೂ ಅಲ್ದೇ ನಿಮ್ ಲೈಫಲ್ಲಿ ಏನ್ ನಡೀತಿದೆ ಅಂತ ನೋಡ್ಕೊಂಡು ಕೂತ್ಕೊಳೋವಷ್ಟು ಟೈಮು ಯಾರ್ಗೂ ಇರಲ್ಲ. ಎಲ್ಲಾರೂ ಔರೌರ್ ಕೆಲಸ್ದಲ್ಲಿ ಬಿಜಿ ಇರ್ತಾರೆ. ಇಷ್ಟಕ್ಕೂ ಯಾರಾದ್ರೂ ಏನಾದ್ರೂ ಅನ್ಕೋತಿದ್ರೆ ಅದು ಸೊಲ್ಪ ದಿನ ಮಾತ್ರ. ನೀವು ದೊಡ್ಡದೇನಾದ್ರೂ ಸಾಧಿಸ್ದಾಗ ಎಲ್ಲಾ ಮರ್ತೋಗತ್ತೆ.

6."ನನ್ ಹಣೇಬರ ಸರಿಯಿಲ್ಲ..."

ನಿಮ್ಮ ತಯಾರಿ ಮತ್ತು ಅವಕಾಶ ಎರಡೂ ಸೇರಿ ಅದೃಷ್ಟ ಅನ್ನುಸ್ಕೊಳೋದು. ನಿಮ್ಮ ತಯಾರಿ ನೀವ್ ಬಿಡ್ದೇ ಮಾಡ್ಕೊಳಿ. ಅವಕಾಶ ಹುಡುಕ್ತಾ ಇರಿ. ಅವೆರಡೂ ಸೇರ್ತಿದ್ದಂಗೆ ನಿಮ್ ಹಣೆಬರಹ ಸರಿಹೋಗುತ್ತೆ. ಲಕ್ಕಿದ್ರೆ ಎಲ್ಲಾ ಆಗೋಗುತ್ತೆ ಅನ್ನಕ್ಕೆ ಯಶಸ್ಸು ಅನ್ನೊದು ಜೂಜಾಟ ಅಲ್ಲ. ಅದನ್ನ ಬೆವರು ಸುರಿಸಿ ಪಡ್ಕೋಬೇಕು, ಆಗ್ಲೇ ಅದು ಸಾಧನೆ ಅನ್ನಿಸ್ಕೊಳ್ಳೋದು.

7. "ನಾನಿರೋದೇ ಹೀಗೆ, ನನ್ನ ನ್ನಾನು ಬದಲಾಯಿಸ್ಕೊಳಕ್ಕಾಗಲ್ಲ..."

ಯಾಕಾಗಲ್ಲ? ಬದಲಾವಣೆ ಅನ್ನೊದು ಎಲ್ಲಾ ಕಡೆ ಎಲ್ಲಾರಲ್ಲೂ ಆಗ್ತಾನೇ ಇರುತ್ತೆ. ಕಾಲಕ್ಕೆ ತಕ್ಕಂತೆ ಬದಲಾಗದೇ ಇರೋರಿಗೆ ಜಗತ್ತಲ್ಲಿ ಜಾಗ ಇಲ್ಲ - ನೆನಪಿರ್ಲಿ.

8. "ಮನೇಲಿ ಮದ್ವೆ ಮಾಡ್ಕೋ ಅಂತಿದ್ದಾರೆ, ಮದ್ವೆ ಆದ್ರೆ ಸಾಧನೆ ಮಾಡಕ್ ಆಗಲ್ಲ..."

ಲೈಫಲ್ಲಿ ಬರೋ ಎಷ್ಟೋ ಮೈಲಿಗಲ್ಲುಗಳ ಥರ ಮದುವೆನೂ ಒಂದು. ನೀವು ದೊಡ್ಡ ಸಾಧನೆ ಏನಾದ್ರು ಮಾಡ್ಬೇಕು ಅಂತಿದ್ರೆ, ನೀವು ಮದುವೆ ಆಗ್ತಿರೋ ಹುಡುಗ/ಹುಡುಗಿ ಜೊತೆ ಅದರ ಬಗ್ಗೆ ಚರ್ಚೆ ಮಾಡಿ ಔರ ಸಪೋರ್ಟ್ ತಗೊಳ್ಳಿ. ನಿಮಗೆ ನಿಮ್ಮ ಸಾಧನೆ ಎಷ್ಟು ಮುಖ್ಯ ಅನ್ನೋದನ್ನ ಹೇಳಿ. ಅವರ ಬೆಂಬಲಾನೂ ನಿಮಿಗ್ ಸಿಗುತ್ತೆ. ಅದನ್ ಬಿಟ್ಟು ಮದುವೆ ಆಗ್ತಿರೋದ್ರಿಂದ ಅದಾಗಲ್ಲ ಇದಾಗಲ್ಲ ಅನ್ನೋ ನೆಪ ಬೇಡ.

9. "ನಂಗ್ ವಯಸ್ಸಾಯ್ತು, ಇನ್ನೇನ್ ಸಾಧನೆ ಮಾಡ್ಲಿ?"

ನಿಮಿಗ್ ಗೊತ್ತಾ ಕರ್ನಲ್ ಸ್ಯಾಂಡರ್ಸ್ ಅನ್ನೋನು ಔನ್ಗೆ 62 ವರ್ಷ ಆಗಿದ್ದಾಗ  KFC ಅನ್ನೋ ಬ್ರಾಂಡನ್ನ ಶುರು ಮಾಡಿದ್ದು. ನೀವನ್ಕೊಂಡಿದ್ದನ್ನ ಸಾದ್ಸಕ್ಕೆ ಯಾವ್ದೇ ವಯಸ್ಸಿಲ್ಲ. ಮುಂದಕ್ ಓದ್ಬೇಕನ್ಸಿದ್ರೆ ಓದಿ, ಬಿಸಿನೆಸ್ ಶುರು ಮಾಡ್ಬೇಕನ್ಸಿದ್ರೆ ಮಾಡಿ, ಎಷ್ಟೇ ವಯಸ್ಸಾಗಿದ್ರೂ ತಲೆ ಕೆಡಿಸ್ಕೋಬೇಡಿ. 

10. "ಸಿಕ್ಕಾಪಟ್ಟೆ ಬಿಜಿ.. ಟೈಮಿಲ್ಲ..."

ಲೈಫಲ್ಲಿ ನಮಗೆ ನಿಜವಾಗ್ಲೂ ಯಾವುದು ಮುಖ್ಯ ಅನ್ನೊದರ ಪಟ್ಟಿ ಬರ್ಕೊಂಡು ನಮಗೆ ಮುಖ್ಯ ಯಾವ್ದೋ ಅದಕ್ ಮಾತ್ರ ಟೈಂ ಕೊಟ್ರೆ ಎಲ್ಲಾದಕ್ಕೂ ಟೈಂ ಇರುತ್ತೆ. ನಿಮಗೆ ನಿಮ್ಮ ಸಾಧನೆನೇ ಎಲ್ಲದಕ್ಕಿಂತ ಮುಖ್ಯ ಅನ್ನಿಸ್ದಾಗ ಅದಕ್ಕೆ ಟೈಂ ಇದ್ದೇ ಇರುತ್ತೆ. ಟೈಂ ಇಲ್ಲ ಅನ್ನೋ ನೆಪ ಸಲ್ಲ...

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: