ಗಲ್ಲ ಜೋತು ಬಿದ್ದು ಮುಖ ದಪ್ಪ ಕಾಣ್ತಿದ್ರೆ ಅದಕ್ಕೆ ಸುಲಭವಾದ ಉಪಾಯ ಇದೆ ಕೇಳಿ

ಜೋಡಿಗಲ್ಲಕ್ಕೆ ಸಿಂಪಲ್ ವ್ಯಾಯಾಮಗಳು

ಸಣ್ಣ ಇರಬೇಕು ಅಂತ ಎಲ್ಲರೂ ಆಸೆ ಪಡ್ತಾರೆ ಆದ್ರೆ ದೇಹ ಸಣ್ಣ ಆಗಿ ಇರೋಕೆ ಹತ್ತು ಹಲವಾರು ವ್ಯಯಾಮ ಮಾಡಿ ಮುಖಮಾತ್ರ ದಪ್ಪ ಕಂಡ್ರೆ ಎಷ್ಟು ಬೇಜಾರಾಗಲ್ಲ ಹೇಳಿ.

ಜೋತು ಬಿದ್ದು ಮುಖ ದಪ್ಪ ಕಾಣೋಹಾಗೆ ಮಾಡೋ ಜೋಡಿಗಲ್ಲ ಇಲ್ಲವಾಗಬೇಕು ಅಂದ್ರೆ ಇಲ್ಲಿವೆ ನೋಡಿ ಪರಿಹಾರಗಳು.

1. ವಾರ್ಮ್ ಅಪ್ ಮಾಡಿ

ಎಲ್ಲ ವ್ಯಾಯಮಕ್ಕೆ ಮುಂಚೆ ಮಂಸಖಂಡಗಳು ಸಡಿಲ ಆಗೋಕೆ ವಾರ್ಮ್ ಅಪ್ ವ್ಯಾಯಮ ಮಾಡೋ ಹಾಗೆ ಇಲ್ಲಿ ಕೂಡ ಮಾಡಬೇಕು.

ನಿಮ್ಮ ಗಲ್ಲನ ಮುಂದಕ್ಕೆ- ಹಿಂದಕ್ಕೆ- ಎಡಕ್ಕೆ-ಬಲಕ್ಕೆ ಆಡಿಸಿ.

8-10 ಸಾರಿ ಹೀಗೆ ಮಾಡಿ.

2. ಕೆಳ ತುಟಿನ ಒಳಗೆ ಮಾಡಿ ತಲೆ ಮೇಲೆ ಕೆಳಗೆ ಮಾಡಿ

ನಿಮ್ಮ ಕೆಳ ತುಟಿಯನ್ನ ಹಲ್ಲಿನ ಮೇಲೆ ಒಳಗೆಳೆದು, ತಲೆ ಬಗ್ಗಿಸಿ-  ತಲೆ ಮೇಲೆತ್ತುತ್ತಾ ಬಾಯಿ  ಮುಚ್ಚಿ.

ಹೀಗೆ ಮಾಡೋದ್ರಿಂದ ನಿಮ್ಮ ಗಲ್ಲದ ಮಾಂಸಖಂಡಗಳಿಗೆ ವ್ಯಾಯಮ ಆಗುತ್ತೆ.

5-7 ಬಾರಿ ಹೀಗೆ ಮಾಡಿ.

3. ನಾಲಿಗೇನ ಹೊರ ಚಾಚಿ ಮೂಗಿಗೆ ಮುಟ್ಟಿಸಿ.

ನಾಲಿಗೆಯ ಮಾಂಸಖಂಡ ಸಡಿಲ ಆಗೋದ್ರಿಂದ ಕೂಡ  ಗಲ್ಲಜೋತು ಬೀಳುತ್ತೆ, ಅದಕ್ಕೆ ನಿಮ್ಮ ನಾಲಿಗೇನ ಹೊರ ಚಾಚಿ ಮೂಗಿಗೆ ಮುಟ್ಟಿಸೋ ಪ್ರಯತ್ನ ಮಾಡಿ.

5 ಸಾರಿ ಹೀಗೆ ಮಾಡಿ.

4. ನಿಮ್ಮ ಕತ್ತಿನ ಮಾಂಸಖಂಡನ ಹಿಂಡ್ತಾ ಕತ್ತು ಎಡಕ್ಕೆ ಬಲಕ್ಕೆ ತಿರುಗಿಸಿ.

ನಿಮ್ಮ ಗಲ್ಲಾ ಮೇಲೆ ಮಾಡಿ, ಎಡಕ್ಕೆ ತಿರುಗಿಸಿ ನಿಮ್ಮ ಮಾಂಸಖಂಡನ ಹಿಂಡೋಹಾಗೆ ಮಾಡಿ, ನಂತರ ಅದೇ ರೀತಿ ಬಲಕ್ಕೂ ಮಾಡಿ.

5 ಬರಿ ಎರಡೂ ಕಡೆ ಮಾಡಿ.

5. ಕತ್ತು ಮೇಲೆ ಮಾಡಿ ನಿಮ್ಮ ಮೇಲ್ಚಾವಣಿಗೆ ಮುತ್ತಿಡಿ

ನಿಮ್ಮ ಕತ್ತಿನ ಮಾಂಸಖಂಡಗಳಿಗೆ ನೋವಾಗೋಹಾಗೆ ಕತ್ತನ್ನ ಮೇಲಕ್ಕೆ ತಿರುಗಿಸಿ, ಮುತ್ತು ಕೊಡೊ ಹಾಗೆ ತುಟಿನ ಮುಂದು ಮಾಡಿ. ಹೀಗೆ ಮಾಡೋವಾಗ ನಿಮಗೆ ನಿಮ್ಮ ಕತ್ತಿನ ಮಾಂಸಖಂಡಗಳಲ್ಲಿ ನೋವಾಗೋದು ಗೊತ್ತಾಗಬೇಕು.

5 -8 ಸಾರಿ ಮಾಡಿ.

6. ನಿಮ್ಮ ಗಲ್ಲದ ಕೆಳಗೆ ಮುಷ್ಠಿ ಇಟ್ಟು ನೋವಾಗೋ ವರೆಗೆ ಒತ್ತಿ

ನಿಮ್ಮ ಕೈನ ಮುಷ್ಠಿ ಮಾಡಿ, ಇದನ್ನ ನಿಮ್ಮ ಗಲ್ಲದ ಕೆಳಗಿಟ್ಟು ನಿಮ್ಮ ಮುಖವನ್ನ ಗಲ್ಲಕ್ಕೆ ಒತ್ತಿಡಿ.
ಹೋಗ್ತಾ ಹೋಗ್ತಾ ಹೆಚ್ಚು ಒತ್ತಿಡಿ, ಇನ್ನು ನೋವಾಗುತ್ತೆ ಅನ್ನೋವಾಗ 3 ಸೆಕೆಂಡ್ ಹೀಗೆ ಇಟ್ಟು ಕೈ ತೆಗೆದು  ಬಿಡಿ.

ಇದನ್ನೇ 5 -7 ಬಾರಿ ಮಾಡಿ.

7. ನಗಬೇಕು ಖುಷಿಗಲ್ಲ ನೋವಾಗೋಹಾಗೆ

ನಿಮ್ಮ ಹಲ್ಲನ್ನ ಗಟ್ಟಿಯಾಗಿ ಕಚ್ಚಿಟ್ಟುಕೊಂಡು ತುಟಿಯನ್ನ ಅಗಲ ಮಾಡಿ, ನಿಮ್ಮ ನಾಲಿಗೆ ಮೇಲೆಳೆದು ಆದಷ್ಟು ಮಾಂಸಖಂಡಗಳು ಎಳೆಯೋ ಹಾಗೆ ನೋಡ್ಕೊಳ್ಳಿ.

ಇದನ್ನೇ 5 - 8 ಬಾರಿ ಮಾಡಿ.

7. ಬಾಯಿತುಂಬ ಗಾಳಿತುಂಬಿಸಿ, ಕೆನ್ನೆನ ಒತ್ತಿಟ್ಟುಕೊಳ್ಳಿ

ನಿಮ್ಮ ಬಾಯಿ ತುಂಬಾ ಗಾಳಿ ತುಂಬಿಸಿಕೊಂಡು ಕೆನ್ನೆ ದಪ್ಪ ಮಾಡಿಕೊಳ್ಳಿ, ನಿಮ್ಮಕೈಗಳಿಂದ  ಕೆನ್ನೆನ ಒತ್ತಿಟ್ಟುಕೊಂಡು 5 ಸೆಕೆಂಡ್ ಹಾಗೆ ಇಟ್ಟುಕೊಳ್ಳಿ. ಹೀಗೆ ಮಾಡೋದ್ರಿಂದ ನಿಮ್ಮ ಮಾಂಸಖಂಡಗಳು ಗಟ್ಟಿ ಆಗುತ್ತೆ.

5 - 6  ಬಾರಿ ಇದನ್ನೇ ಮಾಡಿ 

ಸಿಂಪಲ್ ಆಗಿ ಯಾವಾಗ ಬೇಕಾದ್ರು ಮಾಡಿ ನಿಮ್ಮ ಮುಖ ಇನ್ನು ಸಣ್ಣ ಕಾಣುತ್ತೆ.

ಚಿತ್ರ: files.brightside.me

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ಲೈಫಲ್ಲಿ ಉದ್ಧಾರ ಆಗಬೇಕಾದ್ರೆ ಈ 10 ಕುಂಟು ನೆಪಗಳ್ನ ಇವತ್ತೇ ಅಲ್ಲ ಈಗಲೇ ಬಿಟ್ಟುಬಿಡಿ

ಆಗದು ಎಂದು ಕೈಕಟ್ಟಿ ಕುಳಿತರೆ...

ನೆಪ

ಕೆಲ್ವೊಂದ್ ಸಲ ಏನಾದ್ರೂ ಕೆಲ್ಸ ಮಾಡಕ್ಕಾಗ್ದೇ ಹೋದ್ರೆ ಯಾಕ್ ಮಾಡಕ್ಕಾಗ್ಲಿಲ್ಲ ಅಂತ ನೆಪ ಹೇಳ್ತಿರ್ತೀವಿ. ಅದ್ರಲ್ಲಿ ಕೆಲವು ನಿಜವಾದ ಕಾರಣಗಳೇ ಆಗಿದ್ರೂ ತುಂಬಾ ಸಲ ನಾವ್ ಹೇಳೋದು ಕುಂಟು ನೆಪಗಳೇ... ದೊಡ್ಡ ಸಾಧನೆ ಮಾಡ್ತಿನಿ ಅನ್ನೋರು ಈ ಥರ ನೆಪ ಹೇಳ್ಕೊಂಡು ಕೂತ್ರೆ ಆಗಲ್ಲ. ಇಲ್ನೋಡೀ ಕೆಲವು ನೆಪಗಳು ಇಲ್ಲಿವೆ... 

1. "ನನ್ ಕೈಲಾಗಲ್ಲ"

ಕೆಲ್ವೊಂದ್ ಸಲ ಸರಿಯಾದ ಪ್ರಯತ್ನ ಮಾಡ್ದೇನೆ "ಇದಾಗಲ್ಲ... ಅದಾಗಲ್ಲ..." ಅಂತ ಮಾತಾಡ್ತೀವಿ. ಈ ಥರ ಮಾಡೋದ್ರಿಂದ ಹಿಂದೆಂದೂ ಯಾರೂ ಮಾಡಿಲ್ದೇ ಇರೋ ಸಾಧನೇನ ನಾವು ಮಾಡೋ ಅವಕಾಶಾನ ನಾವ್ ಕಳ್ಕೋತೀವಿ.

2. "ನಾನ್ ಜಾಸ್ತಿ ಓದಿಲ್ಲ, ಅದಕ್ಕೇ ನಂಗೆ ಬೆಲೆ ಇಲ್ಲ..."

ಓದು ಜೀವನಕ್ಕೆ ತುಂಬಾ ಮುಖ್ಯ, ನಿಜ. ಆದ್ರೆ ಹೆಚ್ಚಿಗೆ ಅದಿಲ್ದೇ ಹೋದ್ರೆ ಏನೂ ಸಾದ್ಸಕ್ಕಾಗಲ್ಲ ಅನ್ನೋದು ಸುಳ್ಳು. ಸಮಾಜದಲ್ಲಿ ಹೆಚ್ಚಿಗೆ ಓದಿಲ್ಲದವರೂ ಸಾದ್ಸೋ ಅಂತಾದ್ದು ಬೇಕಾದಷ್ಟಿದೆ. ಹಾಗ್ ನೋಡಿದ್ರೆ ಹೆಚ್ಚಾಗಿ ಓದ್ದೇ ಇರೋರೇ ದೊಡ್ ದೊಡ್ ಸಾಧನೆಗಳನ್ನ ಮಾಡಿರೋ ಉದಾಹರಣೆಗಳು ಬೇಕಾದಷ್ಟಿವೆ. 

3. "ನಾನೇನಕ್ಕೂ ಪ್ರಯೋಜನ ಇಲ್ಲ..."

ತುಂಬಾ ಜನ್ರು ಈಥರ ಔರೌರಿಗೇ ಏನೋ ಹೇಳ್ಕೊಂಡು ಏನೂ ಮಾಡಲ್ಲ. ಇನ್ ಕೆಲುವ್ರು ಅಂಗವಿಕಲತೇನೋ ಇನ್ಯಾವ್ದೇ ಸಮಸ್ಯೆಗೋ ಸಿಕ್ಕಿ ಈ ಥರ ಮನಸ್ಸು ಮಾಡ್ಕೊಂಡಿರ್ಬೋದು. ಆದ್ರೆ ಒಂದ್ ವಿಷ್ಯ ನೆನಪಿಟ್ಕೊಳಿ. ಹುಟ್ತಾನೇ ಯಾರೂ ಯಾವುದ್ರಲ್ಲೂ ಪಂಟ್ರಾಗಿರಲ್ಲ. ಕೆಲ್ಸ ಮಾಡ್ತಾ ಮಾಡ್ತಾ ಎಲ್ರೂ ಕಲೀತಿವಿ, ಹಾಗೇ ಬೆಳೀತೀವಿ. ನೀಮ್ಮನ್ನ ಜಗತ್ತು ಕೈಲಾಗದೋರು ಅಂದ್ಕೊಂಡಷ್ಟೂ ನಿಮ್ಗೇ ಒಳ್ಳೇದು. ಯಾಕಂದ್ರೆ ನಿಮ್ಮಿಂದ ಅವರ ನಿರೀಕ್ಷೆ ಕಮ್ಮೀನೇ ಇರುತ್ತೆ. ಆಗ ನೀವಿಡೋ ಚಿಕ್ಕ ಚಿಕ್ಕ ಹೆಜ್ಜೇನೂ ಜಗತ್ತಿನ ಪಾಲಿಗೆ ದೊಡ್ಡದೇ ಆಗಿರುತ್ತೆ.

4."ನನ್ನತ್ರ ದುಡ್ಡಿಲ್ಲ.. ಅದಕ್ಕೇ ಏನೂ ಮಾಡಕ್ಕಾಗ್ತಿಲ್ಲ..."

ಸಮಾಜದಲ್ಲಿ ತುಂಬಾ ಜನ ದುಡ್ಡಿಲ್ದೇ ಇರೋರು ಇದಾರೆ. ಆದ್ರೆ ಎಲ್ಲಾರೂ ಹೀಗೇ ಹೇಳ್ಕೊಂಡು ಕೂತಿರಕ್ಕಾಗಲ್ಲ. ಏನಾದ್ರೂ ಸಣ್ಣಾಪುಟ್ಟ ಕೆಲ್ಸ ಮಾಡ್ಕೊಂಡು ನಿಮ್ ಸಾಧನೆಗೆ ಬೇಕಾದ್ ದುಡ್ಡನ್ನ ಕೂಡಿಡಿ, ಎಷ್ಟೊರ್ಷ್ ಹೀಗೆ ನೆಪ ಹೇಳ್ತಿರೀರಿ?

5. "ನೋಡ್ದೋರ್ ಏನನ್ಕೋತಾರೋ...!?"

ನೀವೇನಾದ್ರೂ ದೊಡ್ಡ ಸಾಧನೆ ಮಾಡ್ಬೇಕು ಅಂತಿದ್ರೆ, ಅವ್ರಿವ್ರು ಏನನ್ಕೋತಾರೋ ಅನ್ನೋದನ್ನ ತಲೆಯಿಂದ ಮೊದ್ಲು ತೆಗೆದಾಕಿ. ಯಾರೂ ಏನೂ ಅನ್ಕೊಳಲ್ಲ. ಅದನ್ನೇ ನೆಪ ಮಾಡ್ಕೊಬೇಡಿ. ಅದೂ ಅಲ್ದೇ ನಿಮ್ ಲೈಫಲ್ಲಿ ಏನ್ ನಡೀತಿದೆ ಅಂತ ನೋಡ್ಕೊಂಡು ಕೂತ್ಕೊಳೋವಷ್ಟು ಟೈಮು ಯಾರ್ಗೂ ಇರಲ್ಲ. ಎಲ್ಲಾರೂ ಔರೌರ್ ಕೆಲಸ್ದಲ್ಲಿ ಬಿಜಿ ಇರ್ತಾರೆ. ಇಷ್ಟಕ್ಕೂ ಯಾರಾದ್ರೂ ಏನಾದ್ರೂ ಅನ್ಕೋತಿದ್ರೆ ಅದು ಸೊಲ್ಪ ದಿನ ಮಾತ್ರ. ನೀವು ದೊಡ್ಡದೇನಾದ್ರೂ ಸಾಧಿಸ್ದಾಗ ಎಲ್ಲಾ ಮರ್ತೋಗತ್ತೆ.

6."ನನ್ ಹಣೇಬರ ಸರಿಯಿಲ್ಲ..."

ನಿಮ್ಮ ತಯಾರಿ ಮತ್ತು ಅವಕಾಶ ಎರಡೂ ಸೇರಿ ಅದೃಷ್ಟ ಅನ್ನುಸ್ಕೊಳೋದು. ನಿಮ್ಮ ತಯಾರಿ ನೀವ್ ಬಿಡ್ದೇ ಮಾಡ್ಕೊಳಿ. ಅವಕಾಶ ಹುಡುಕ್ತಾ ಇರಿ. ಅವೆರಡೂ ಸೇರ್ತಿದ್ದಂಗೆ ನಿಮ್ ಹಣೆಬರಹ ಸರಿಹೋಗುತ್ತೆ. ಲಕ್ಕಿದ್ರೆ ಎಲ್ಲಾ ಆಗೋಗುತ್ತೆ ಅನ್ನಕ್ಕೆ ಯಶಸ್ಸು ಅನ್ನೊದು ಜೂಜಾಟ ಅಲ್ಲ. ಅದನ್ನ ಬೆವರು ಸುರಿಸಿ ಪಡ್ಕೋಬೇಕು, ಆಗ್ಲೇ ಅದು ಸಾಧನೆ ಅನ್ನಿಸ್ಕೊಳ್ಳೋದು.

7. "ನಾನಿರೋದೇ ಹೀಗೆ, ನನ್ನ ನ್ನಾನು ಬದಲಾಯಿಸ್ಕೊಳಕ್ಕಾಗಲ್ಲ..."

ಯಾಕಾಗಲ್ಲ? ಬದಲಾವಣೆ ಅನ್ನೊದು ಎಲ್ಲಾ ಕಡೆ ಎಲ್ಲಾರಲ್ಲೂ ಆಗ್ತಾನೇ ಇರುತ್ತೆ. ಕಾಲಕ್ಕೆ ತಕ್ಕಂತೆ ಬದಲಾಗದೇ ಇರೋರಿಗೆ ಜಗತ್ತಲ್ಲಿ ಜಾಗ ಇಲ್ಲ - ನೆನಪಿರ್ಲಿ.

8. "ಮನೇಲಿ ಮದ್ವೆ ಮಾಡ್ಕೋ ಅಂತಿದ್ದಾರೆ, ಮದ್ವೆ ಆದ್ರೆ ಸಾಧನೆ ಮಾಡಕ್ ಆಗಲ್ಲ..."

ಲೈಫಲ್ಲಿ ಬರೋ ಎಷ್ಟೋ ಮೈಲಿಗಲ್ಲುಗಳ ಥರ ಮದುವೆನೂ ಒಂದು. ನೀವು ದೊಡ್ಡ ಸಾಧನೆ ಏನಾದ್ರು ಮಾಡ್ಬೇಕು ಅಂತಿದ್ರೆ, ನೀವು ಮದುವೆ ಆಗ್ತಿರೋ ಹುಡುಗ/ಹುಡುಗಿ ಜೊತೆ ಅದರ ಬಗ್ಗೆ ಚರ್ಚೆ ಮಾಡಿ ಔರ ಸಪೋರ್ಟ್ ತಗೊಳ್ಳಿ. ನಿಮಗೆ ನಿಮ್ಮ ಸಾಧನೆ ಎಷ್ಟು ಮುಖ್ಯ ಅನ್ನೋದನ್ನ ಹೇಳಿ. ಅವರ ಬೆಂಬಲಾನೂ ನಿಮಿಗ್ ಸಿಗುತ್ತೆ. ಅದನ್ ಬಿಟ್ಟು ಮದುವೆ ಆಗ್ತಿರೋದ್ರಿಂದ ಅದಾಗಲ್ಲ ಇದಾಗಲ್ಲ ಅನ್ನೋ ನೆಪ ಬೇಡ.

9. "ನಂಗ್ ವಯಸ್ಸಾಯ್ತು, ಇನ್ನೇನ್ ಸಾಧನೆ ಮಾಡ್ಲಿ?"

ನಿಮಿಗ್ ಗೊತ್ತಾ ಕರ್ನಲ್ ಸ್ಯಾಂಡರ್ಸ್ ಅನ್ನೋನು ಔನ್ಗೆ 62 ವರ್ಷ ಆಗಿದ್ದಾಗ  KFC ಅನ್ನೋ ಬ್ರಾಂಡನ್ನ ಶುರು ಮಾಡಿದ್ದು. ನೀವನ್ಕೊಂಡಿದ್ದನ್ನ ಸಾದ್ಸಕ್ಕೆ ಯಾವ್ದೇ ವಯಸ್ಸಿಲ್ಲ. ಮುಂದಕ್ ಓದ್ಬೇಕನ್ಸಿದ್ರೆ ಓದಿ, ಬಿಸಿನೆಸ್ ಶುರು ಮಾಡ್ಬೇಕನ್ಸಿದ್ರೆ ಮಾಡಿ, ಎಷ್ಟೇ ವಯಸ್ಸಾಗಿದ್ರೂ ತಲೆ ಕೆಡಿಸ್ಕೋಬೇಡಿ. 

10. "ಸಿಕ್ಕಾಪಟ್ಟೆ ಬಿಜಿ.. ಟೈಮಿಲ್ಲ..."

ಲೈಫಲ್ಲಿ ನಮಗೆ ನಿಜವಾಗ್ಲೂ ಯಾವುದು ಮುಖ್ಯ ಅನ್ನೊದರ ಪಟ್ಟಿ ಬರ್ಕೊಂಡು ನಮಗೆ ಮುಖ್ಯ ಯಾವ್ದೋ ಅದಕ್ ಮಾತ್ರ ಟೈಂ ಕೊಟ್ರೆ ಎಲ್ಲಾದಕ್ಕೂ ಟೈಂ ಇರುತ್ತೆ. ನಿಮಗೆ ನಿಮ್ಮ ಸಾಧನೆನೇ ಎಲ್ಲದಕ್ಕಿಂತ ಮುಖ್ಯ ಅನ್ನಿಸ್ದಾಗ ಅದಕ್ಕೆ ಟೈಂ ಇದ್ದೇ ಇರುತ್ತೆ. ಟೈಂ ಇಲ್ಲ ಅನ್ನೋ ನೆಪ ಸಲ್ಲ...

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: