ಬೆಸ್ಟ್ ಫ್ರೆಂಡ್ ಒಬ್ಬ ಹುಡುಗಿ ಆಗಿರೋ ಹುಡುಗರಿಗೆ ಈ 19 ಲಾಭಗಳು ಗ್ಯಾರಂಟಿ

ನಿಮಗೆ ಎಂಥ ಬಟ್ಟೆ ಬೇಕು ಅಂತ ಅವಳಿಗೆ ಗೊತ್ತು

ಹುಡುಗರಿಗೆ ಸಾಧಾರಣವಾಗಿ ಹುಡುಗರೇ ಸ್ನೇಹಿತರಾಗಿರ್ತಾರೆ.  ಹುಡ್ಗೀರ್ನ ಅರ್ಥ ಮಾಡ್ಕೊಳ್ಳೋದು ಸ್ವಲ್ಪ ಕಷ್ಟ ಇರ್ಬಹುದು. ಆದ್ರೆ ಹುಡುಗೀನ ನಿಮ್ ಬೆಸ್ಟ್ ಫ್ರೆಂಡ್ ಮಾಡ್ಕೊಳ್ಳೋದ್ರಿಂದ ಎಷ್ಟೆಲ್ಲ ಪ್ರಯೋಜನ ಇದೆ ಅಂತ ತಿಳ್ಕೊಳ್ಳೋಕೆ ಕೆಳಗಿರೋದನ್ನ ಓದಿ.

1. ನಿಮ್ಮ ಸಮಸ್ಯೆಗಳಿಗೆ ಒಬ್ಳು ಹುಡುಗಿ ಕೊಡೋ ಥರ ಒಬ್ಬ ಹುಡುಗ ಸಲಹೆ ಕೊಡೋಕೆ ಸಾಧ್ಯಾನೇ ಇಲ್ಲ.

ಅವ್ಳಿಗೆ ನಿಮ್ಮನ್ನ ಪೂರ್ತಿಯಾಗಿ ಗೊತ್ತಿರುತ್ತೆ. ಕೆಲವು ಸಲ ನಿಮ್ ಗರ್ಲ್ ಫ್ರೆಂಡಿಗಿಂತ ಚೆನ್ನಾಗಿ ಗೊತ್ತಿರುತ್ತೆ. ಸ್ಬಲ್ಪ ನಿಮ್ಮ ಕಾಲು ಎಳೀಬಹುದಾದ್ರೂ ಸಮಸ್ಯೆ ಪರಿಹಾರ ಗ್ಯಾರಂಟಿ.

2. ಅವ್ಳು ಯಾವಾಗ್ಲೂ ನಿಮ್ ಜೊತೆ ಶಾಪಿಂಗಿಗೆ ಹೋಗೋಕೆ ರೆಡಿ ಇರ್ತಾಳೆ. ನಿಮ್ಗೆ ಯಾವ ಥರದ ಬಟ್ಟೆ‌ ಚೆನ್ನಾಗಿ ಒಪ್ಪುತ್ತೆ ಅಂತ ಅವ್ಳಿಗೆ ಗೊತ್ತಿರುತ್ತೆ.

ಮದುವೆ, ಪಾರ್ಟಿ, ಇಂಟರ್ವ್ಯೂ ಏನೇ ಇದ್ರೂ ಯಾವ ಥರದ ಬಟ್ಟೆ ಹಾಕ್ಕೊಬೇಕು ಅನ್ನೋದು ಅವ್ಳಿಗಿಂತ ಚೆನ್ನಾಗಿ ಯಾರಿಗೂ ಗೊತ್ತಿರೋಕೆ ಸಾಧ್ಯಾನೆ ಇಲ್ಲ.

3. ನಿಮ್ಮ ಕಣ್ಣಿಗೆ ಬಿದ್ದಿರೋ ಚೆನ್ನಾಗಿರೋ ಹುಡುಗೀರೆಲ್ಲ ಅವ್ಳಿಗೆ ಗೊತ್ತಿರುತ್ತೆ

ಅಷ್ಟೇ ಅಲ್ಲ, ಆ ಚೆಂದದ ಹುಡ್ಗೀರ್ನ ನಿಮ್ಗೆ‌ ಪರಿಚಯ ಮಾಡ್ಸೋಕೂ ಅವ್ಳು ಯಾವಾಗ್ಲೂ ರೆಡಿ ಇರ್ತಾಳೆ.

4. ಮಜ ಏನಂದ್ರೆ ಎಲ್ರೂ ಅವ್ಳು ನಿಮ್ ಗರ್ಲ್ ಫ್ರೆಂಡ್ ಅಂತ ಅಂದ್ಕೊಂಡಿರ್ತಾರೆ.

ಅವ್ಳೂ ತಮಾಷೆಗೆ ಅಂತ ಹಾಗೇ ನಡ್ಕೋತಾಳೆ. ಕೆಲವು ಸಲ ನಿಮ್ಗೆ ಇದ್ರಿಂದ ಪರದಾಟ.

5. ನೈಟ್ ಕ್ಲಬ್ಗಳಿಗೆ, ನ್ಯೂ ಇಯರ್ ಪಾರ್ಟಿಗಳಿಗೆ ಜೊತೆಗೆ‌ ಹುಡ್ಗಿ ಇದ್ರೆ ಮಾತ್ರ ಎಂಟ್ರಿ ಅಂತ ಇರುತ್ತಲ್ಲ, ನಿಮ್ಗೆ ಅದು ಸಮಸ್ಯೆನೇ ಆಗೊಲ್ಲ.

6. ಯಾರಿಗಾದ್ರೂ ಗಿಫ್ಟ್ ಕೊಡ್ಬೇಕಿದ್ರೆ, ಒಳ್ಳೆ ಚಿಂದಿ ಗಿಫ್ಟ್ ಐಡಿಯಾಗಳನ್ನ ಕೊಡ್ತಾಳೆ.

7. ಆರಾಮಾಗಿ ಅವ್ಳ ಜೊತೆ 'ಮೊಗ್ಗಿನ ಮನಸು' ಥರದ್ ಹುಡ್ಗೀರ್ ಸಿನಿಮಾನೂ ನೋಡ್ಬಹುದು.

ಹುಡುಗ್ರಿಗೂ ರೊಮ್ಯಾಂಟಿಕ್ ಸಿನಿಮಾಗಳು, ಹುಡ್ಗೀರು ಮಾತ್ರ ನೋಡೋ ಸಿನಿಮಾಗಳನ್ನೆಲ್ಲ ನೋಡ್ಬೇಕು ಅಂತ ಆಸೆ ಇರುತ್ತೆ, ಆದ್ರೆ ಕಂಪೆನಿ ಇರೊಲ್ಲ. ಹುಡುಗಿ ನಿಮ್ ಬೆಸ್ಟ್ ಫ್ರೆಂಡ್ ಆದ್ರೆ, ಇದಕ್ಕೆಲ್ಲ ತಲೆ ಕೆಡಿಸ್ಕೊಳ್ಬೇಕಾಗೇ ಇರೊಲ್ಲ.

8. ಹುಡುಗ್ರ ಜೊತೆ ಮಾತ್ರ ಅಲ್ಲ, ಹುಡ್ಗಿ ನಿಮ್ ಬೆಸ್ಟ್ ಫ್ರೆಂಡ್ ಆದ್ರೆ ಇನ್ನೂ ಹುಚ್ಚು ಹುಚ್ಚು ವಿಷಯಗಳನ್ನ ಎಂಜಾಯ್ ಮಾಡ್ಬಹುದು.

9.  ಕ್ಲಾಸಲ್ಲಿ ಲೆಕ್ಚರ್ ಬೋರಾಗ್ತಾ ಇದ್ರೆ ಅವ್ಳು ನಿಮ್ ನೋಟ್ಬುಕ್ಕಲ್ಲಿ ಏನೋ ಗೀಚಿ ನಿಮ್ಗೆ ನಿದ್ದೆ ಬರೋದು ತಪ್ಪಿಸ್ತಾಳೆ.

ನಿಮ್ಗೆ ಪರೀಕ್ಷೇಲಿ ಕಾಪಿ ಹೊಡಿಯೋಕೂ ಸಹಾಯ ಮಾಡ್ತಾಳೆ.

10. ಫೇಸ್ಬುಕ್ಕಲ್ಲಿ ನಿಮ್ಮನ್ನ ಯಾವ್ದೋ ಕೆಲ್ಸಕ್ ಬಾರದ ಜೋಕಿಗೆ ಟ್ಯಾಗ್ ಮಾಡ್ತಾಳೆ. ಫೇಸ್ಬುಕ್, ಟ್ವಿಟರ್ ನಲ್ಲಿರೋದು ಅವ್ಳಿಂದಾಗಿ ಮಜ ಬರುತ್ತೆ.

11. ನಿಮ್ ಅಪ್ಪ - ಅಮ್ಮನೂ ನಿಮ್ ಬೇರೆ ಸ್ನೇಹಿತರಿಗಿಂತ ಇವ್ಳನ್ನ ನಂಬ್ತಾರೆ.

ನೀವು ನಿಮ್ ಗರ್ಲ್ ಫ್ರೆಂಡ್ ಜೊತೆ ಸುತ್ತಾಡ್ತಿರೋವಾಗ್ಲೂ ನೀವು ಕಾಲೇಜಿನಲ್ಲೇ ಇದ್ದೀರ ಅಂತ ಅವ್ಳು ನಿಮ್ ಅಪ್ಪ-ಅಮ್ಮನ್ನ ಸುಲಭವಾಗಿ ನಂಬಿಸ್ಬಹುದು.

12. ಅವ್ಳ ಜೊತೆ ನೀವು ನೀವಾಗಿರ್ಬಹುದು.

ಯಾವ್ದೇ ಸುಳ್ಳು ಹೇಳೋ ಅವಶ್ಯಕತೆ ಇಲ್ಲ. ನೀವು ಹೇಗೇ ಇದ್ರೂ ಅವ್ಳು ನಿಮ್ಮನ್ನ ಪೂರ್ತಿಯಾಗಿ ಒಪ್ತಾಳೆ.

13. ತುಂಬ ಸೀರಿಯಸ್ ವಿಷ್ಯ ಆಗಿರ್ಲಿ, ತುಂಬಾ ಸಿಲ್ಲಿ ವಿಷಯಾನೇ ಆಗಿರ್ಲಿ, ನೀವು ಅವ್ಳ ಜೊತೆ ಮಾತಾಡ್ಬಹುದು.

ನೀವು ಎಷ್ಟು ಹೊತ್ತಿಗೆ ಕಾಲ್ ಮಾಡಿದ್ರೂ ಮಾತಿಗೆ ಸಿಗ್ತಾಳೆ.

14. ನೀವು ಬೇಕಾದಷ್ಟು ಅವ್ಳ ಕಾಲು ಎಳೀಬಹುದು, ಅವ್ಳು ತಲೆನೇ ಕೆಡಿಸ್ಕೊಳೊಲ್ಲ.

15. ಅವ್ಳು ಕುಡೀದೇ ಇದ್ದರೂ 'ಒಳಗೆ ಸೇರಿದರೆ ಗುಂಡು' ಮಾಲಾಶ್ರೀ ಥರ ಆಡೋದು ನೋಡ್ಬಹುದು.

ನಿಮ್ಮ ಸ್ನೇಹಿತರ ಜೊತೆ ಬಿಯರ್ ಕುಡ್ದು ಅವ್ರ ಲವ್ ಟ್ರಾಜೆಡಿ ಕೇಳೋ ಬದ್ಲು ಏನೂ ಕುಡೀದೇನೇ ಅವಳು ವೋಡ್ಕಾ ಕುಡಿದಂಗೆ ಆಡೋದು ನೋಡಿ ಮಜ ತೆಗೋಬಹುದು.

16. ಅವ್ಳಿಗೆ ತುಂಬ ಮರ್ಯಾದೆ ಕೊಟ್ಟು ನಡ್ಕೋಬೇಕಾಗಿಲ್ಲ.

ನೀವು ಅವ್ಳ ಬಗ್ಗೆ ಕಾಳಜಿ ಇಟ್ಟಿರೋದು ಅವ್ಳಿಗೆ ಗೊತ್ತಿರೋದ್ರಿಂದ ಅವ್ಳು ನಿಮ್ಮಿಂದ ಅತಿ ಮರ್ಯಾದೆ ಏನೂ ಎಕ್ಸ್ಪೆಕ್ಟ್ ಮಾಡೊಲ್ಲ.

17. ಬೇಕಾದ ಹಾಗೆ ಕಿತ್ತಾಡ್ಬಹುದು.

18. ನೀವು ಅತ್ತೂ ಕರ್ದೂ ರಂಪ ಮಾಡಿದ್ರೂ ಅವ್ಳು ನಿಮ್ಮನ್ನ ಸಮಾಧಾನ ಮಾಡ್ತಾಳೆ.

ಹುಡುಗ್ರ ಹತ್ರ ಹೇಳ್ಕೊಳ್ಳೋಕೆ ಆಗ್ದೆ ಇರೋದೆಲ್ಲ ಅವ್ಳ ಹತ್ತಿರ ಹೇಳ್ಕೋಬಹುದು. ಹುಡುಗ್ರಾದ್ರೆ ನಿಮ್ಮನ್ನ ಆಡ್ಕೊಳ್ಳೋದು ಗ್ಯಾರಂಟಿ.

19. ಯಾರನ್ನಾದ್ರೂ ಅವ್ರ ಬೆನ್ ಹಿಂದೆ ಆಡ್ಕೊಳೋದಿದ್ರೆ ಅವ್ಳು ನೀವು ಹೇಳಿದ್ದನ್ನ ಕೇಳ್ತಾಳೆ. ಅಷ್ಟೆ ಅಲ್ಲ, ಅವ್ಳೂ ಆಡ್ಕೊಳ್ಳೋದ್ರಲ್ಲಿ ಕಂಪೆನಿ ಕೊಡ್ತಾಳೆ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ಮನಸಲ್ಲಿ ಇಲ್ಲ ಅಂತಿದ್ರೂ ಹೊರಗೆ ಹೂಂ ಅಂತಿದ್ದೀರಾ? ಇಲ್ಲ ಅನ್ನೋದು ಹೇಗೆ ಅಂತ ಕಲೀರಿ

"ಅಯ್ಯೋ ಬೇಜಾರು ಮಾಡ್ಕೊಂಡು ಬಿಟ್ರೆ"

ನಮ್ಮಲ್ಲಿ ಸುಮಾರು ಜನ ಬೇರೇವ್ರಿಗೆ ಅಂತಾನೇ ಬದುಕ್ತಾರೆ. ಎಲ್ಲರಿಗೂ ಸಮಯ ಮಾಡ್ಕೊತಾರೆ, ಎಲ್ಲರ ಬೇಡಿಕೆ ಪೂರೈಸ್ತಾರೆ, ಮಿತಿ ಮೀರಿ ತಮಗೆ ಆಗದಿದ್ರೂ ಒಪ್ಕೊಂಡ ಕೆಲಸ ಮಾಡ್ತಾರೆ, ಕಡೆಗೆ ತಮಗೆ ಅಂತ ತಮ್ಮ ಜೀವನದಲ್ಲೇ ಸ್ವಲ್ಪ ಸಮಯ ಇಲ್ದೆ ಆಗತ್ತೆ. ಇದೆಲ್ಲದಕ್ಕೂ ಕಾರಣ ’ಇಲ್ಲ’ ಅನ್ನೋಕ್ಕೆ ಹಿಂಜರಿಕೆ.

ನೀವೂ ಹೀಗೇ ಮಾಡ್ತೀರಾ? ಹಾಗಾದ್ರೆ ನೀವು ನಿಮ್ಮ ಜೀವನದಲ್ಲಿ ನಿಜವಾಗಿ ಮಾಡಬೇಕು ಅನ್ಕೊಂಡಿದ್ದೇ ಬೇರೆ, ನೀವು ಮಾಡ್ತಿರೋದೇ ಬೇರೆ ಆಗಿರತ್ತೆ. ಇಡೀ ದಿನ ಪುರಸೊತ್ತಿಲ್ಲದೇ ದುಡಿದ್ರೂ ನಿಮ್ಮಲ್ಲಿ ತೃಪ್ತಿ ಕಮ್ಮಿ ಆಯಾಸ ಜಾಸ್ತಿ ಕಾಣ್ಸತ್ತೆ. ಇದಕ್ಕೆ ಪರಿಹಾರ ಏನಂದ್ರೆ, ’ಇಲ್ಲ’, ’ಆಗಲ್ಲ’ ಅಂತ ಹೇಳೋ ಅಭ್ಯಾಸ ಮಾಡ್ಕೊಳೋದು. ಆಗ ಬೇರೇವ್ರ ಕೆಲಸ ಮಾಡೋದು ಕಮ್ಮಿ ಆಗಿ ನಮಗೆ ಬೇಕಾದ ಕೆಲಸ ಮಾಡೋಕ್ಕೆ ಸಮಯ ಸಿಗತ್ತೆ. ತುಂಬಾ ಕೆಲಸಗಳನ್ನ ಮಾಡೋ ಬದಲು ಮುಖ್ಯವಾದ ಕೆಲಸಗಳನ್ನ ಖುಷಿಯಿಂದ ಮಾಡಬಹುದು. ಹೀಗೆ ಮಾಡೋದ್ರಿಂದ ನೀವೂ ಖುಷಿಯಾಗಿರ್ತೀರಿ, ಯಾರಿಗೂ ನಿಮ್ಮಿಂದ ನಿರಾಸೆ ಕೂಡ ಆಗಲ್ಲ.

ಯಶಸ್ವಿಯಾದೋರು ’ಇಲ್ಲ’ ಅನ್ನೋಕ್ಕೆ ಭಯ ಪಡಲ್ಲ

’ಇಲ್ಲ’ ಅನ್ನೋದ್ರಿಂದ ನಿಮ್ಮ ದೃಷ್ಟಿಕೋನ ಬದಲಾಗತ್ತೆ. ಏನು ಮಾಡ್ಬೋದು ಅನ್ನೋಕ್ಕಿಂತ ಏನು ಮಾಡಬೇಕು ಅಂತ ಯೋಚಿಸ್ತೀರಿ. ಜೀವನ ಬಂದ ಹಾಗೆ ತೊಗೊಳೋ ಬದಲು, ನಿಮಗೆ ಬೇಕಾದ ಜೀವನ ರೂಪಿಸ್ಕೊಳೋ ಕಡೆ ಗಮನ ಹರಿಸ್ತೀರಿ. ಓಪ್ರಾ ವಿನ್ಫ್ರೀ ಅವರೂ ಸಹ ಹೂಂ ಅಂದೂ ಅಂದೂ ಅನುಭವಿಸಿ, ಬಹಳ ತಡವಾಗಿ ತಮಗೇನು ಬೇಕು ಅನ್ನೋ ಕಡೆ ಗಮನ ಹರಿಸಿದ್ದಂತೆ. ವಾರೆನ್ ಬುಫೆ ಪ್ರಕಾರ ಯಶಸ್ವಿ ವ್ಯಕ್ತಿಗಳು ಹೂಂ ಅನ್ನೋಕ್ಕಿಂತ ಇಲ್ಲ ಅನ್ನೋದೇ ಹೆಚ್ಚಂತೆ.

ಯಾಕೆ ಹೂಂ ಅನ್ನೋ ಒತ್ತಡ?

i.kinja-img.com

ಚಿಕ್ಕಂದಿನಿಂದ ಸ್ಕೂಲ್ ಮುಗಿಸೋಕ್ಕೆ, ಕಾಲೇಜ್ ಅಲ್ಲಿ ಪಾಸಾಗೋಕ್ಕೆ, ಕೆಲಸ ಪಡೆಯೋಕ್ಕೆ, ಪ್ರೋಮೋಶನ್ ಪಡೆಯೋಕ್ಕೆ, ಸಂಬಂಧ ಬೆಳೆಸೋಕ್ಕೆ, ಸ್ನೇಹಿತರನ್ನ ಉಳಿಸಿಕೊಳ್ಳೋಕ್ಕೆ ಹೀಗೆ ಎಲ್ಲದಕ್ಕು ಹೂಂ ಅಂತ ಹೇಳ್ತಾನೇ ಬಂದಿದೀವಿ. ನಮ್ಮನ್ನ ಬೆಳ್ಸಿರೋದು ಹಾಗೇನೆ. ಬೇರೇವ್ರಿಗೆ ಸಹಾಯ ಮಾಡಬೇಕು, ಇಲ್ಲ ಅನ್ನೋದು ತಪ್ಪು, ಕೈಲಾಗೋದಕ್ಕಿಂತ ಜಾಸ್ತಿ ಮಾಡಿದ್ರೆ ಯಶಸ್ಸು ಸಿಗತ್ತೆ, ದೊಡ್ದವರಿಗೆ ಇಲ್ಲ ಅನ್ಬಾರ್ದು, ಇಂಥ ಮಾತುಗಳನ್ನೇ ಪಾಲಿಸ್ತಾ ಇದ್ದೀವಿ. ಬೇರೇವ್ರ ಮಾತು ಅಷ್ಟೇ ಅಲ್ಲ, ನಮ್ಮ ಮೇಲೆ ನಾವೇ ಒತ್ತಡ ಹೇರಿಕೊಳ್ತೀವಿ ಕೂಡ. ಬೇರೇವ್ರಿಗಿಂತ ಜಾಸ್ತಿ ಕೆಲಸ ಮಾಡಬೇಕು ಅನ್ನೋ ತುಡಿತ, ಎಲ್ಲರಿಗೂ ಸಾಕಷ್ಟು ಸಮಯ ಕೊಡಬೇಕು ಅನ್ನೋ ಆಸೆ ನಮ್ಮ ಬಾಯಿಗೆ ಬೀಗ ಹಾಕತ್ತೆ. ಒಟ್ನಲ್ಲಿ ಎಷ್ಟೇ ಮಾಡಿದ್ರೂ ಇನ್ನೂ ಮಾಡಬಹುದಿತ್ತು ಅಂತಾನೇ ಅನ್ಸತ್ತೆ.

'ಇಲ್ಲ' ಅನ್ನೋದು ಹೇಗೆ?

’ಇಲ್ಲ’ ಅನ್ನೋದು ಅಷ್ಟು ಸುಲಭ ಅಲ್ಲ. ಆದರೆ ಅದರಿಂದ ಆಗೋ ಲಾಭಗಳು ಬಹಳಷ್ಟು. ’ಇಲ್ಲ’ ಅನ್ನೋದು ರೂಢಿ ಮಾಡ್ಕೊಳೋಕ್ಕೆ ಈ ಸಲಹೆಗಳನ್ನ ಪಾಲಿಸಿ:

1. ಯಾರದ್ದೋ ಹಂಗಿಗೆ ಸಿಲುಕಿ ಹೂಂ ಅನ್ಬೇಡಿ

ಯಾರದ್ದೋ ಹಂಗಿಗೆ ಸಿಲುಕಿ, ’ಇಲ್ಲ ಅಂದ್ರೆ ಏನ್ ಅನ್ಕೊಳ್ತಾರೋ’ ಅಂತ ಹೂಂ ಅಂತಿದ್ದೀರಾ? ನಿಜವಾಗಿ ಅದು ನಿಮ್ಮ ಜವಾಬ್ದಾರಿ ಹೌದಾ ಅಲ್ವಾ ಅಂತ ಯೋಚಿಸಿ. ಅದಕ್ಕೂ ಮುಖ್ಯವಾದ, ನಿಮಗೆ ಸಂಬಂಧ ಪಟ್ಟ ಜವಾಬ್ದಾರಿಗಳು ಇದ್ಯಾ ಅಂತ ಯೋಚನೆ ಮಾಡಿ.

2. ವಿಷಯಗಳನ್ನ ತಿಳ್ಕೊಳೋ ಅವಕಾಶ ತಪ್ಪಿ ಹೋಗತ್ತೆ ಅನ್ನೋ ಭಯ ಬೇಡ

ಕೆಲಸ ಮಾಡಿಲ್ಲ ಅಂದ್ರೆ ವಿಷಯಗಳು ತಿಳಿಯಲ್ಲ, ಏಳಿಗೆ ಆಗಲ್ಲ ಅನ್ನೋ ಭಯ. ಕುಟುಂಬ, ಸ್ನೇಹಿತರಿಗೆ ಸಮಯ ಕೊಡದೆ ಇದ್ರೆ ಅವರ ಜೊತೆ ಮಜಾ ಮಾಡೋಕ್ಕಾಗಲ್ಲ ಅನ್ನೋ ಕೊರಗು ನಿಮ್ಮಲ್ಲಿದ್ರೆ ’ಇಲ್ಲ’ ಅನ್ನೋದು ಕಷ್ಟಾನೇ. ನಾವು ಮನಸ್ಸಿಂದ ಹೂಂ ಅಂತಿದೀವಾ ಅಥವಾ ಈ ಭಯದಿಂದಾನಾ ಅಂತ ಯೋಚನೆ ಮಾಡೋದು ಮುಖ್ಯ. ಇಂಥ ಭಯಗಳಿಂದ ಒಳ್ಳೇದೇನೂ ಆಗಲ್ಲ.

3. ಏನ್ ಅನ್ಕೊಳ್ತಾರೋ ಅನ್ನೋ ಅಳುಕು ಬೇಡ

’ಇಲ್ಲ’ ಅಂದ್ರೆ ಏನ್ ಅನ್ಕೊಳ್ತಾರೋ, ಎಷ್ಟು ಬೇಜಾರು ಮಾಡ್ಕೊಳ್ತಾರೋ ಅಂತ ಹೂಂ ಅನ್ನಬೇಡಿ. ಯಾರಿಗೋ ನಿರಾಸೆ ಆಗಬಾರದು ಅಂತೆ ನೀವೇ ನಿರಾಶರಾಗೋದು ಸರಿಯೇ? ’ಇಲ್ಲ’ ಅಂದ್ರೆ ನಿಮಗೆ ಅಷ್ಟು ಸಮಯ ಕೊಡೋಕ್ಕಾಗಲ್ಲ ಅನ್ಕೊತಾರೆ ಅಷ್ಟೆ.

4. ಕೇಳಿದ ತಕ್ಷಣ ಹೂಂ ಅನ್ಬೇಡಿ

sarumbear.com
ಆ ಸಮಯದಲ್ಲಿ ಸರಿ ಅನ್ಸಿ ಅಥವಾ ಒತ್ತಡದಲ್ಲಿ ಹೂಂ ಅನ್ನೋದರ ಬದಲು ಸ್ವಲ್ಪ ಯೋಚನೆ ಮಾಡಿ. ನಿಮ್ಮ ಕೈಯಲ್ಲಿ ಈ ಕೆಲಸ ಆಗತ್ತಾ? ಅದಕ್ಕೆ ಸಾಕಷ್ಟು ಸಮಯ ಇದ್ಯಾ? ಎಲ್ಲಾ ಯೋಚನೆ ಮಾಡಿ ಆಮೇಲೆ ನಿಮ್ಮ ಉತ್ತರ ಹೇಳಿ.

5. ’ಇಲ್ಲ’ ಅಂತ ವಿನಯದಿಂದ ಹೇಳಿ

’ಇಲ್ಲ’ ಅಂತ ಹೇಳೋ ನಿರ್ಧಾರ ಮಾಡಿದ್ರೆ ಅದನ್ನ ಹೇಗೆ ಹೇಳೋದು ಅಂತ ಕೂಡ ಸರಿಯಾಗಿ ಯೋಚಿಸಿ. ನಿಮ್ಮ ಬಳಿ ಸಮಯ ಇಲ್ಲ, ಅದಕ್ಕೆ ನೀವು ನಿರಾಕರಿಸ್ತಿದೀರ ಅನ್ನೋದು ಆ ವ್ಯಕ್ತಿಗೆ ಸ್ಪಷ್ಟವಾಗಿ ಅರ್ಥ ಆಗಬೇಕು. ಏನೂ ಹೇಳದೇ ಸುಮ್ಮನೆ ಇರೋದು ತಪ್ಪು. ಹಾಗಂತ ತುಂಬಾ ಉದ್ದ ಕಾರಣಗಳನ್ನ ಕೊಡೋದೂ ತಪ್ಪು. ಚಿಕ್ಕದಾಗಿ, ಚೊಕ್ಕವಾಗಿ ವಿನಯದಿಂದ ಮಾತಾಡಿ. ಮತ್ತೊಮ್ಮೆ ಸಮಯ ಇದ್ದಾಗ ಅವರ ಕೆಲಸ ಮಾಡೋಕ್ಕೆ ಸಿದ್ಧ ಅನ್ನಿ. ಆಗ ಮುಂಬರೋ ಅವಕಾಶಗಳು ತಪ್ಪಿ ಹೋಗಲ್ಲ.

6. ’ಇಲ್ಲ’ ಅನ್ನೋ ಬದಲು ’ಆದರೆ’ ಅಂತ ಹೇಳಿ ನೋಡಿ

hrinasia.com
ಒಂದೇ ಸಲ ’ಇಲ್ಲ’ ಅನ್ನೋ ಬದಲು. ’ಸರಿ, ಆದರೆ..’ ಅಂತ ನಿಮ್ಮ ಬೇಡಿಕೆ ಅವರ ಮುಂದೆ ಇಡಿ. “ಈಗಲೇ ಆಗಲ್ಲ ಆದರೆ ಮುಂದೆ ಮಾಡ್ತೀನಿ” ಅಂತ ಅಥವಾ “ಮಾಡ್ತೀನಿ, ಆದರೆ ಒಂದು ಭಾಗ ಮಾತ್ರ ಸಾಧ್ಯ” ಅಂತ ಹೇಳಿ.

’ಇಲ್ಲ’ ಅನ್ನೋದು ಒಂದು ಕಲೆ

’ಇಲ್ಲ’ ಅನ್ನೋ ಕಲೆ ಆರಾಮ ಅಥವಾ ಸುಲಭ ಅಲ್ಲ. ಅದನ್ನ ರೂಢಿ ಮಾಡ್ಕೊಳ್ಳೋಕ್ಕೆ ಸಮಯ ಮತ್ತು ಸಮಾಧಾನ ಬೇಕು. ಎಲ್ಲಾದಕ್ಕೂ ಹೂಂ ಅನ್ನೋ ಅಭ್ಯಾಸದೋರಿಗೆ ಇದು ಕಷ್ಟ.

ನಿಮ್ಮ ಸಮಯ ನಿಮ್ಮ ಸ್ವತ್ತು

ablueribbonresume.com
ನಿಮಗಿರೋ ಸಮಯದಲ್ಲಿ ಏನೇನು ಕೆಲಸ ಮಾಡಬೇಕು, ಯಾವ್ದಕ್ಕೆ ಎಷ್ಟು ಸಮಯ ಕೊಡ್ಬೇಕು ಎಲ್ಲ ನಿಮಗೆ ಬಿಟ್ಟು ಬೇರೆ ಯಾರಿಗೂ ಗೊತ್ತಿರಲ್ಲ.

ಬೇಡದ್ದಕ್ಕೆ ಇಲ್ಲ ಅಂದ್ರೆ ಬೇಕಾದ್ದು ಮಾಡಕ್ಕೆ ಸಮಯ ಸಿಗತ್ತೆ

ನಿಮ್ಮ ಅಮೂಲ್ಯವಾದ ಸಮಯವನ್ನ ಸರಿಯಾಗಿ ಬಳಸೋ ಅವಕಾಶ ನಿಮಗೆ ನೀವು ಕೊಟ್ಕೊಳಿ. ಇಲ್ಲ ಅನ್ನಿಸ್ದಾಗ ’ಇಲ್ಲ’ ಅನ್ನೋದ್ರಿಂದ ಅದು ಸಾಧ್ಯ.

ನಿಮ್ಮ ಒಳ್ಳೆಯತನ ದುರುಪಯೋಗ ಪಡೆಸ್ಕೊಳೋ ಸ್ನೇಹಿತರಿಗೆ, ಮಿತಿ ಮೀರಿ ಕೆಲಸ ಕೊಡೋ ಬಾಸ್, ಸಾಲ ವಾಪಸ್ ಮಾಡದೇ ಇರೋ ಸಂಬಂಧಿಗೆ ಈ ಸಲ ಇಲ್ಲ ಅನ್ನೋದನ್ನ ಮರೀಬೇಡಿ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: