ಪ್ರೀತಿ ಮಾಡಿ ಪ್ರಪೋಸ್ ಮಾಡೋಕೆ ಕಷ್ಟ ಅನ್ನೋರು ಈ 7 ಸಲಹೆಗಳನ್ನ ಆದಷ್ಟು ಬೇಗ ಪಾಲಿಸಿ

ಎಷ್ಟೇ ಕಷ್ಟ ಆದ್ರೂ ಐದು ಮತ್ತೆ ಆರನೇ ಸಲಹೆನ ಮಾತ್ರ ಬಿಡ್ಬೇಡಿ

ಇನ್ನೇನ್ ಪ್ರೇಮಿಗಳ ದಿನ  ಬಂದೇ ಬಿಡ್ತು. ವರ್ಷಾನುಗಟ್ಲೇ ಪ್ರೀತಿ ಮಾಡಿ ಅದ್ನ ಹೇಳ್ಕೊಳ್ಕಾಗ್ದೇ ಒದ್ದಾಡಿ ಒದ್ದಾಡಿ ಸಾಯೋ ಪ್ರೇಮಿಗಳು ಒಂದ್ಕಡೆಯಾದ್ರೆ , ಹೇಳಿದ್ರೆ ಎಲ್ಲಿ ಅವ್ಳನ್ನ ಕಳ್ಕೊಳ್ತೀನಿ ಅನ್ನೋ ಭಯಪಡೋ ಪ್ರೇಮಿಗಳು ಇನ್ನೊಂದ್ಕಡೆ. ಇದೆಲ್ಲದ್ರ ಮಧ್ಯೆ ಅವ್ಳು ಸಿಗಲ್ಲಾಂತ ಗೊತ್ತಿದ್ರು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತ್ಸೋ ಪ್ರೇಮಿಗಳ ಅವಸ್ಥೆ ಇನ್ನೊಂದ್ಕಡೆ. ಹೀಗೆ ಗಲ್ ಗಲ್ಲಿಯಲ್ಲಿ ಒಂದೊಂದ್ ಪ್ರೇಮ ಕತೆ ಇದ್ದೇ ಇರತ್ತೆ. ಪ್ರತಿ ಪ್ರೇಮ ಕತೆಯ ಹಿಂದೆ ಅದೆಷ್ಟೋ ತೊಳಲಾಟ , ಮಿಡಿತ , ತುಡಿತ ಎಲ್ಲಾ ಇರತ್ತೆ.

ಇವತ್ತಿನ ದಿನ ನಾವ್ ಹೇಳಿಕ್ಕೆ ಹೊರ್ಟಿರೋ ವಿಷ್ಯ "  ಪ್ರೀತ್ಸಿದ ಹುಡ್ಗಿಗೇ ಯಾವ್ ರೀತಿ ಪ್ರಪೋಸ್ ಮಾಡಿದ್ರೆ ಅವ್ಳು ಒಪ್ಕೊಳಬಹುದಂತ ". ನೆನಪಿಟ್ಕೊಳ್ಳಿ ಪ್ರೀತಿಯಲ್ಲಿದ್ದಾಗ ಅವ್ರದ್ದೇ ಆದ ಒಂದ್ ಲೋಕವನ್ನ ಸೃಷ್ಟಿ ಮಾಡ್ಕೊಂಡಿರ್ತಾರೆ . ಯಾವ್ದು ಫಿನಾಯಿಲು , ಯಾವ್ದು ಹಾಲು ಅನ್ನೋ ಕನ್ಪ್ಯೂಷನ್ ಜಾಸ್ತಿನೇ ಇರತ್ತೆ. ಹೆಚ್ಚಾಗಿ ತಾಳ್ಮೆ ಇರಲ್ಲ ಜೊತೆಯಲ್ಲಿ ವಾಸ್ತವವನ್ನ ಒಪ್ಕೊಳ್ಳೋ ಬುದ್ದಿಯಂತೂ ಇರಲ್ಲ. ಯಾವಾಗ ತಾಳ್ಮೆ , ವಾಸ್ತವವನ್ನ ಒಪ್ಕೊಳ್ಳೋ ಬುದ್ದಿಯಿರಲ್ವೋ ನೋವು ತನ್ನಿಂದ ತಾನೇ ಬಂದ್ ಬಿಡತ್ತೆ. ಅದ್ಕೋಸ್ಕರಾನೇ ನಾವ್ ಹೇಳ್ತಾ ಇರೋ ಈ ಕೆಳ್ಗಿನ ಎಲ್ಲಾ ಸಲಹೆಗಳು ವರ್ಕ್ ಔಟ್ ಆಗೇ ಆಗತ್ತೆ ಅನ್ನೋ ಅತಿಯಾದ ಆತ್ಮವಿಶ್ವಾಸ ಇಟ್ಕೊಳ್ಬೇಡಿ. ಕೆಲವೊಮ್ಮೆ ನಿಮ್ ಆತುರದಿಂದ ಎಡವಟ್ಟಾಗೋ ಚಾನ್ಸು ಇದ್ದೇ ಇರತ್ತೆ. ಅದ್ಕೆ ನಿಮ್ ಹುಡ್ಗಿ / ಹುಡ್ಗನ ಪರಿಸ್ಥಿತಿ ನೋಡಿ ಈ ಸಲಹೆಯನ್ನ ಪಾಲಿಸಿ. 

1) ನಿಮ್ ಮೇಲೆ ನಿಮ್ಗೆ ನಂಬಿಕೆ ಇರ್ಲಿ ಹೆದ್ರಿಕೆಯನ್ನ ಬಿಟ್ ಬಿಡಿ

ಹೆದ್ರಿಕೆಯನ್ನೋದು ಅತಿದೊಡ್ಡ ಸಮಸ್ಯೆ. ನೀವ್ ಅವ್ರನ್ನ ಪ್ರೀತಿಸ್ತಾ ಇರೋದಕ್ಕೋ ಇಲ್ಲಾ ಅದೆಷ್ಟೋ ವರ್ಷದಿಂದ ಇಟ್ಕೊಂಡಿರೋ ಆ ತೊಳಲಾಟ , ಮಿಡಿತಕ್ಕೋ ಇದೆಲ್ಲ ಮಿಕ್ಸಾಗಿ ಬರೋದೇ ಆ ಹೆದ್ರಿಕೆ. ಈ ಹೆದ್ರಿಕೆಯನ್ನ ದಾಟ್ಕೊಂಡೋಗಿ ಪ್ರೇಮ ನಿವೇದನೆ ಮಾಡೋದಿದೆಯಲ್ಲ ಅದು ಒಂದು ದೊಡ್ಡ ಯುದ್ದ ಗೆದ್ದಾಗೆ . ಆದ್ರೆ ಒಂದ್ ವಿಷ್ಯಾನ್ ಸರ್ಯಾಗಿ ಗಮನಿಸಿ. ನೀವ್ ಪ್ರೀತಿ ಮಾಡೋರನ್ನ ನೋಡಿ , ನಿಮ್ ಫ್ರೆಂಡ್ಗೆ ಯಾವ್ದೇ ತರದ ಭಯ ಇರಲ್ಲ. ಹೋಗಿ ಮಾತಾಡು ಅಂದ್ರೆ ಅವ್ರು ನೇರವಾಗಿ ಮಾತಾಡ್ತಾರೆ. ಅದೇ ನಿಮ್ಗ್ ಯಾಕಾಗಲ್ಲ ಅನ್ನೋ ಪ್ರಶ್ನೆ ಅದೆಷ್ಟೋ ಸಲ ನೀವ್ ಕೇಳ್ಕೊಂಡಿರ್ತೀರಿ ತಾನೆ. ಈಗ ನಾನ್ ಹೇಳೋ ಒಂದ್ ಸಲಹೆಯನ್ನ ಪಾಲ್ಸಿ.  ನಿಮ್ ಹೆದ್ರಿಕೆ ನಿಮ್ ಪ್ರೀತಿಯನ್ನ ಗೆಲ್ಸಲ್ಲ , ನಿಮ್ ಧೈರ್ಯವೇ ನಿಮ್ ಪ್ರೀತಿಯನ್ನ ಗೆಲ್ಸತ್ತೆ ಅನ್ನೋದು ನೆನಪಿಟ್ಕೊಳ್ಳಿ. ಪ್ರಪೋಸ್ ಮಾಡೋಕ್ಕಿಂತ ಮುಂಚೆ ನೀವು ಮಾನಸಿಕವಾಗಿ ಈ ಪ್ರಶ್ನೆಗಳನ್ನ ಕೇಳಿ ತಯಾರಾಗಿ. 

* ನಾನೀಗ ಅವ್ರನ್ನ ಪ್ರಪೋಸ್ ಮಾಡೋಕೆ ಹೋಗ್ತಾ ಇಲ್ಲ ನನ್ಗೆ ಯಾವ್ದೋ ಒಂದು ಅಡ್ರೆಸ್ ಕೇಳ್ಬೇಕು ಅದ್ಕೆ ಅವ್ರನ್ನ ಕೇಳೋಕೆ ಹೋಗ್ತಾ ಇದ್ದೇನೆ ಅನ್ನೋ ತರ  ಮಾನಸಿಕವಾಗಿ ತಯಾರಾಗಿ.  

* ಹಾಯ್ ಅಂತ ಅವ್ರನ್ನ ಮಾತಾಡ್ಸಿ ಅಡ್ರೆಸ್ ಕೇಳಿ. 

* ಅವ್ರು ಅಡ್ರೆಸ್ ಹೇಳಿದ್ ನಂತರ ಶುರು ಹಚ್ಕೊಳ್ಳಿ " ನಿಜಕ್ಕೂ ನಂಗೆ ಎಲ್ಲಿಗೂ ಹೋಗ್ಬೇಕಾಗಿಲ್ಲ , ನಿಮ್ಮನ್ನ ನಾನು ಸುಮಾರು ವರ್ಷದಿಂದ ಪ್ರೀತಿ ಮಾಡ್ತಾ ಇದ್ದೇನೆ ಅದ್ನ ಹೇಳ್ಕೊಳ್ಳಕ್ಕೆ ಭಯ ಇತ್ತು. ಅದ್ಕೆ ಈ ರೀತಿ ಮಾಡ್ದೆ. ಇದು ನನ್ ಪೋನ್ ನಂಬರ್ ಸಮಯ ತಗೊಂಡು ನಿಮ್ ಅಭಿಪ್ರಾಯ ಎನಂತ ತಿಳ್ಸಿ ತುಂಬಾ ಲೇಟ್ ಮಾಡ್ಬೇಡಿ ತಡ್ಕೊಳ್ಳೋದ್ ಕಷ್ಟ್ ಆಗತ್ತೆ. ಬಾಯ್ ಅಂತ ಹೇಳಿ ಅಲ್ಲಿಂದ ಕುಪ್ಪಳ್ಸಕೊಂಡ್ ಬನ್ನಿ. ಆಕಾಶ ತಲೆಮೇಲೆ ಬಿದ್ದಾಗೆ ನಡ್ಕೊಂಡ್ ಹೋಗ್ಬೇಡಿ. ಇದೊಂದು ಸಣ್ಣ ಸ್ಯಾಂಪಲ್. ನೀವ್ ಯಾವ್ದೇ ಉಪಾಯ ಮಾಡಿ ಆದ್ರೆ ಅದು ನಿಮ್ ಹೆದ್ರಿಕೆಯನ್ನ ಕಮ್ಮಿ ಮಾಡ್ಸತ್ತೆ ಅನ್ನೋದು ಧ್ರಡಪಡ್ಸಕೊಳ್ಳಿ. 

i.ytimg.com

2) ಕ್ಯಾಂಡಲ್ ಲೈಟ್ ಡಿನ್ನರ್ಗೆ ಕರ್ಕೊಂಡೋಗಿ 

ತುಂಬಾ ವರ್ಷದಿಂದ ನೀವು ಅವ್ರ ಜೊತ್ಗೆ ಸ್ನೇಹದಿಂದ ಇದ್ದು , ಆ ಸ್ನೇಹ ಪ್ರೀತಿಗೆ ಬದ್ಲಾಗಿದ್ರೆ ಹೇಗಪ್ಪಾ ಹೇಳೋದು ಅನ್ನೋ ತೊಂದ್ರೆ ಸಾಮಾನ್ಯ. ಎಲ್ಲಾದ್ರೂ ಅವ್ಳು ಫ್ರೆಂಡ್ಶಿಪ್ಪೇ ಬೇಡ ಅಂದ್ರೆ ಎನಪ್ಪಾ ಗತಿ ಅನ್ನೋ ಯೋಚ್ನೆ ಸಾಮಾನ್ಯವಾಗಿ ಬಂದ್ ಬಿಡತ್ತೆ. ಅದ್ಕೆ ನೀವು ಫ್ರೆಂಡ್ಶಿಪ್ ಸಲುಗೆಯಲ್ಲೇ ಇವತ್ತು ಡಿನ್ನರ್ಗೆ ಹೋಗೋಣ ಅಂತೇಳಿ. ಅವ್ರು ಒಪ್ಕೊಂಡ್ರೆ ಮುಂದಿನ ಕೆಲ್ಸ ಮಾಡೋಕೆ ತಯಾರಾಗಿ.

ಕ್ಯಾಂಡಲ್ ಲೈಟ್ ಡಿನ್ನರ್ನಲ್ಲಿ ಉಪಯೋಗ್ಸೋ ಆ ಬೆಳಕು ಮನುಷ್ಯನ ಮೂಡನ್ನ ( ಶ್ರಂಗಾರ ರಸ )  ಬದ್ಲ ಮಾಡೋ ಶಕ್ತಿಯಿದೆ. ನಿಮ್ಗೆ ಸಾಧ್ಯವಾದ್ರೆ ಎನಾದ್ರೂ ರಿಂಗೋ ಅಥ್ವಾ ಗಿಫ್ಟೋ ಕೊಟ್ಟೋ ಪ್ರಪೋಸ್ ಮಾಡಿ.

ಇಲ್ಲಾಂದ್ರೆ ಹೀಗ್ ಹೇಳಿ " ಎಷ್ಟ್ ವರ್ಷಾಂತ ನಾನು ನೀನು ಫ್ರೆಂಡಾಗಿರೋದು ನೀನ್ ಒಪ್ಕೊಂಡ್ರೆ ನಿನ್ನ್ ಇನ್ನು ಜಾಸ್ತಿ ಅರ್ಥ ಮಾಡ್ಕೊಳ್ತಿನಿ ಚೆನ್ನಾಗ್ ನೋಡ್ಕೊಳ್ತೀನಿ. ಪ್ರೀತಿ ಮಾಡ್ತಾ ಇದ್ದೀನಿ ಅಂತಕ್ಷಣ ನಮ್ ಇಬ್ರ ಫ್ರೆಂಡ್ಶಿಪ್ಗೆ ಯಾವ್ದೇ ತರ ತೊಂದ್ರೆಯಾಗ್ಬಾರ್ದು. ನೀನ್ ಒಪ್ಕೊಳಿಲ್ಲಾಂದ್ರೆ ನಮ್ ಫ್ರೆಂಡ್ಶಿಪ್ ಹಾಗೇ ಇರತ್ತೆ ಆಯ್ತಾ ಅಂತೇಳೀ ಸುಮ್ನಾಗಿ.

ಮುಂದಿನ ಕೆಲವು ನಿಮಿಷಗಳ ಕಾಲ ಮೌನ ಇದ್ದೇ ಇರತ್ತೆ ಮಾತು ಅಷ್ಟೊಂದ್ ಇರಲ್ಲ. ಹೊರುಡುವಾಗ್ ಇಲ್ಲಾ ಅವ್ರ ಮನೆಯತ್ರ ಡ್ರಾಪ್ ಮಾಡೋವಾಗ್ಲೋ ನಿಮ್ಗೆ ಉತ್ರ ಸಿಕ್ಕೇ ಸಿಗತ್ತೆ ಇಲ್ಲಾಂದ್ರೆ ನಾಳೆವರೆಗೂ ಕಾಯ್ರಿ. 

2.bp.blogspot.com

3) ನೀವ್ ಅವ್ರನ್ನ ಎಲ್ಲಿ ಭೇಟಿಯಾಗಿದ್ರೋ ಅಲ್ಲಿಯೇ ಅವ್ರಿಗೆ ಪ್ರಪೋಸ್ ಮಾಡಿ 

ಈ ಉಪಾಯ ನಿಜಕ್ಕೂ ಒಳ್ಳೆಯದು. ಒಪ್ಕೊಂಡ್ರೆ ಅಲ್ಲಿಂದಾನೇ ನೀವು ಹೊಸ ಜೀವ್ನ ಶುರು ಮಾಡ್ಬಹುದು. ಇಲ್ಲಾಂದ್ರೆ ಅದೇ ಸ್ಥಳದಲ್ಲಿ ಭೇಟಿಯಾದೆ , ಅದೇ ಸ್ಥಳದಲ್ಲಿ ಕಳ್ಕೊಂಡೆ ಅಂತ ಸುಮ್ನಾಗಬಹುದು. ನೀವು ಮೊದ್ಲಿಗೆ ಭೇಟಿಯಾದಾಗ ಆ ವಾತಾವರಣ ಹೇಗಿತ್ತೋ ಅದೇ ತರದ ವಾತಾವರಣವನ್ನ ಮತ್ತೆ ನಿರ್ಮಾಣ ಮಾಡಿ. ಆವತ್ತು ಸುತ್ತಮುತ್ತ ಒಡಾಡಿದವ್ರನ್ನೆಲ್ಲಾ ಮತ್ತೆ ಹುಡ್ಕೊಂಡು ಕರ್ಕೊಂಡ್ ಬರ್ಬೇಕು ಅಂತಲ್ಲ. ನೀವ್ ಆ ಸನ್ನೀವೇಶದಲ್ಲಿ ಹೇಗ್ ವರ್ತಿಸಿದ್ದೀರೋ ಅದೇ ತರ ವರ್ತಿಸಿ.

ಇವತ್ತೇನಾಯ್ತು ಅಂತ ಅವ್ರೇನಾದ್ರು ಕೇಳಿದ್ರೆ ಶುರು ಹಚ್ಕೊಳ್ಳಿ " ನೆನಪಿದೆಯಾ ಇದೇ ಸ್ಥಳದಲ್ಲಿ ನಾವ್ ಮೊದ್ಲು ಭೇಟಿಯಾಗಿದ್ವಿ,ಈ ಸ್ಥಳದಿಂದಾನೇ ನಮ್ಮಿಬ್ಬರ ಫ್ರೆಂಡ್ಶಿಪ್ ಇಷ್ಟರಮಟ್ಟಿಗೆ ಗಟ್ಟಿಯಾಗಿದೆ. ಅದ್ಕೆ ನಾನೊಂದ್ ಸ್ಟೆಪ್ ಮುಂದಕ್ಕೋಗಿ ನಿನ್ ಹತ್ರ ಕೇಳ್ತಾ ಇದ್ದೇನೆ ನನ್ ಪ್ರೀತಿಸ್ತೀಯಾ ? ನೀನ್ ಒಪ್ಕೊಂಡ್ರೆ ಇಲ್ಲಿಂದಾನೇ ಹೊಸ ಜೀವ್ನ ಶುರುವಾಗತ್ತೆ . ನಿನ್ ಅಭಿಪ್ರಾಯ ಎನೂಂತ ಹೇಳು? ನನ್ಗೆ ಸಮಯ ಜಾಸ್ತಿ ಬೇಕೂಂತ ಕೇಳ್ಬೇಡ ಯಾಕಂದ್ರೆ ನಾನ್ ಎನಂತ ನಿಂಗೆ ತುಂಬಾ ವರ್ಷದಿಂದ ಗೊತ್ತು.  ಅದಷ್ಟು ಬೇಗ ನಿನ್ ಅಭಿಪ್ರಾಯ ತಿಳ್ಸು ಅಂತೇಳಿ , ಬಿಲ್ ಪೇ ಮಾಡಿ ಗಾಡಿಯಲ್ಲೋ  , ನಡ್ಕೊಂಡೋ ಬನ್ನಿ. ಸ್ವಲ್ಪ ಸಮಯ ಕಾಯಿರಿ. ಉತ್ತರ ಬಂದೇ ಬರತ್ತೆ. 

static4.businessinsider.com

4)  ವ್ಯಾಲೇಂಟೈನ್ ಡೇ ದಿನಾನೇ ಪ್ರಪೋಸ್ ಮಾಡ್ಬೇಕು ಅನ್ನೋ ಜಿದ್ದು ಬಿಟ್ಬಿಟ್ಟು , ಅವ್ರ ಬರ್ತಡೇ ದಿನಾನೋ ಇಲ್ಲಾ ಇನ್ಯಾವ್ದೋ ಒಳ್ಳೆ ದಿನ ನೋಡಿ ಪ್ರಪೋಸ್ ಮಾಡಿ 

ಕೆಲವರಿರ್ತಾರೆ ಮಾಡಿದ್ರೆ ನಾನು ವ್ಯಾಲೇಂಟೈನ್ ಡೇ ದಿನಾನೇ ಮಾಡ್ತೇನೆ ಅಂತ . ಒಂದ್ಸಲ ಯೋಚ್ನೆ ಮಾಡಿ ಆ ದಿನ ಸುತ್ತಮುತ್ತ ಇರೋರ ಕಣ್ಣು ಎಲ್ಲ ಹುಡುಗ ಹುಡುಗೀಯರ ಮೇಲೆನೇ ಇರತ್ತೆ. ನೀವು ಸುರಂಗದೊಳ್ಗೆ ಹೋಗಿ ಪ್ರಪೋಸ್ ಮಾಡಿದ್ರೂ ಅಲ್ಲೊಂದ್ ಕಣ್ ಇದ್ದೇ ಇರತ್ತೆ. ನೀವು ಪ್ರಪೋಸ್ ಮಾಡೋದ್ನ ಬೇರೆ ಯಾರು ನೋಡ್ಬಾರ್ದು ಅನ್ನೋ ಆಸೆ ಹುಡ್ಗಿಗೂ ಇರತ್ತೆ. ಮೇಲಾಗಿ ಯಾರಾದ್ರೂ ನೋಡಿ ಅಪ್ಪ ಅಮ್ಮನಿಗೋ ಹೇಳಿದ್ರೆ ಅವ್ಳು ನಿಮ್ ಜನ್ಮದಲ್ಲಿ ಒಪ್ಕೊಳ್ಳೋಕೆ ತಯಾರಿರಲ್ಲ ನೆನಪಿಟ್ಕೊಳ್ಳಿ.

ಅದ್ಕೆ ಅವ್ರ ಹುಟ್ಟಿದ ದಿನ ಇಲ್ಲಾ ರಜಾ ದಿನ ಅಥ್ವಾ ಸಮಾರಂಭದ ದಿನ , ವಾರ್ಷಿಕೋತ್ಸವದ ದಿನಗಳನ್ನ ಆಯ್ಕೆ ಮಾಡ್ಕೊಳ್ಳಿ. ಆವತ್ತೋಗಿ ಸ್ವಲ್ಪ ಮಾತಾಡ್ಬೇಕಿತ್ತು ಅಂತೇಳಿ ಕರೀರಿ.

ಅವ್ರೆಲ್ಲಾದ್ರೂ ಫ್ರೆಂಡ್ಸನ ಜೊತೆಗೆ ಬಂದ್ರೆ ಸನ್ನೆ ಮಾಡಿ ಒಬ್ಳೇ ಬನ್ನಿ ಅಂತೇಳಿ. ಫ್ರೆಂಡ್ಸ್ ಎಲ್ಲಾದ್ರೂ ಕ್ಯಾತೆ ತೆಗೆದ್ರೆ ಹೀಗ್ ಹೇಳಿ " ನೋಡು ನಿನ್ನೆಯಷ್ಟೇ ಅವ್ರ ಅಪ್ಪ ಪೋನ್ ಮಾಡಿದ್ರು ಯಾರೋ ಕಾಲೇಜಲ್ಲಿ / ಹೊರ್ಗಡೆ ಟಾರ್ಚರ ಕೊಡ್ತಾ ಇದ್ದಾನಂತೆ ಅದ್ಕೆ ನನ್ನತ್ರ ಸಾಲ್ವ್ ಮಾಡ್ಲಿಕ್ಕೆ ಹೇಳಿದ್ದಾರೆ ನೀನ್ ಸ್ವಲ್ಪ ಹೊತ್ತು ದೂರ ಇರು ನಾನ್ ಮಾತಾಡಿ ಇವ್ಳನ್ನ ಕಳಸ್ತಿನೀ ಅಂತೇಳಿ.  ಅವ್ಳೊಬ್ಳೆ ಇದ್ದಾಗ  ಶುರು ಹಚ್ಕೊಳ್ಳಿ.

ನಿಂಗ್ಯಾರು ತೊಂದ್ರೆ ಕೊಡ್ತಾ ಇಲ್ಲಾಂತ ನಂಗು ಗೊತ್ತು ನಾನ್ ಮಾತಾಡೋ ವಿಷ್ಯ ನಿನ್ ಫ್ರೆಂಡ್ ಕೇಳ್ಬಾರ್ದು ಅಂತ ನಾನ್ ಹಾಗ್ ಹೇಳ್ದೇ ತಪ್ ತಿಳ್ಕೊಬೇಡ.

ನಿನ್ನನ್ನ ತುಂಬಾ ದಿನದಿಂದ ಪ್ರೀತಿ ಮಾಡ್ತಾ ಇದ್ದೆನೇ.  ವ್ಯಾಲೇಂಟೈನ್ ಡೇ ದಿನಾನೇ ಹೇಳಬೇಕು ಅನ್ಕೊಂಡಿದ್ದೆ ಯಾಕೋ ಸರಿ ಬರಲ್ಲಾಂತ ಇವತ್ತ್ ಹೇಳ್ತಾ ಇದ್ದೇನೆ. " ಐ ರಿಯಲಿ ಲವ್ ಯೂ ಅಂತೇಳಿ " .ಎನಾದ್ರೂ ಉತ್ತರ ಕೊಡ್ತಾರಾಂತ ಸ್ವಲ್ಪ ಕಾಯ್ರಿ. ಎನೂ ಕೊಟ್ಟಿಲ್ಲಾಂದ್ರೆ ಈ ಕೆಳ್ಗಿನ ಮಾತ್ಗಳನ್ನ ಹೇಳ್ಬೀಡಿ. 

ನಿನ್ ಮೇಲೆ ಆಕರ್ಷಣೆಯಾಗಿದ್ರೆ ನಾನ್ ನಿಂಗೆ ಪ್ರಪೋಸ್ ಮಾಡ್ತಾ ಇರ್ಲಿಲ್ಲ. ನಿನ್ ಮೇಲ್ ನಂಗಾಗಿರೋದು ಪ್ರೀತಿ ಆದಾದ ನಂತ್ರ ಮದ್ವೆನೂ ಆಗ್ತೀನಿ. ಅದಕ್ಕೆಲ್ಲಾ ತುಂಬಾ ಸಮಯ ಇದೆ. ಈವಾಗ ಇಬ್ರು ಚೆನ್ನಾಗಿ ಅರ್ಥ ಮಾಡ್ಕೊಳ್ಳೋಣ. ಆದಷ್ಟು ಬೇಗ ನಿನ್ ಉತ್ರ ನಂಗೇ ಹೇಳು. ನನ್ ಪೋನ್ ನಂಬರನ್ನ ಇಂತಹ ಸ್ಥಳದಲ್ಲಿ ಬರ್ದಿದ್ದೇನೆ ಸೇವ್ ಮಾಡ್ಕೊಂಡು ನಂಗೆ ಇವತ್ತೇ ಉತ್ರ ಹೇಳು ಅಂತ ಬಂದ್ಬಿಡಿ

blog.easemytrip.com

5) ಸಿನೆಮಾದ ಮಧ್ಯದಲ್ಲಿ ನೀವೇ ತಯಾರು ಮಾಡಿದ ಒಂದು ಚಿಕ್ಕ ದೃಷ್ಯ ತುಣಕನ್ನ ತೋರ್ಸಿ ಪ್ರಪೋಸ್ ಮಾಡಿ

ವೀಕೆಂಡ್ ದಿನ ಈ ಪ್ಲಾನ್ ಇಟ್ಕೊಳ್ಳಿ. ಮಾಮೂಲಾಗಿ ಇವತ್ತು ಸಿನೆಮಾಗೆ ಹೋಗೋಣ ಅಂತೇಳಿ. ಅದ್ಕಿಂತ ಮೊದ್ಲು ಯಾವ್ದಾದ್ರೂ ಆಪ್ನಲ್ಲಿ ಒಂದು ಸಣ್ಣದಾದ ವಿಡೀಯೋವನ್ನ ನೀವೇ ತಯಾರಿಸಿಕೊಳ್ಳಿ. ಆ ವಿಡೀಯೋ ತುಂಬೆಲ್ಲಾ ಐ ಲವ್ ಯೂ , ಐ ಕಾಂಟ್ ಲೀವ್ ವಿಥೌಟ್ ಯೂ , ಯು ಆರ್ ಮೈ ಹಾರ್ಟ್ , ವಿಲ್ ಯು ಮ್ಯಾರಿ ಮೀ ಅಂತೆಲ್ಲ ಬರೀರಿ.

ಸಿನೆಮಾದ ಮಧ್ಯದಲ್ಲಿ ಶುರು ಹಚ್ಕೊಳಿ ಹೇ ನಿನ್ನೆ ರಾತ್ರಿಯೆಲ್ಲ ನಿದ್ದೆ ಬಿಟ್ಟು ಒಂದ್ ವಿಡೀಯೋನ ಎಡಿಟ್ ಮಾಡಿದ್ದೇನೆ ಒಂದ್ಸಲ ನೋಡ್ಬಿಟ್ಟು ನಿನ್ ಅಭಿಪ್ರಾಯ ಹೇಳು. ಬರೇ 2 ನಿಮಿಷದ ವಿಡೀಯೋ ಅಂತೇಳಿ ಹಾಕ್ಕೊಡಿ. ಮೊದ್ಲಿಗೆ ಗುರುಯಾಸಿದ್ರೂ ನೋಡ್ತಾ ಹೋಗ್ತಾರೆ. ಇನ್ನೇನ್ ವಿಡಿಯೋ ಮುಗೀತು ಅನ್ನೋವಾಗ ಸುಮ್ನೆ ಇದ್ಬಿಡಿ ಎನೂ ಮಾತಾಡ್ಬೇಡಿ.

ಇಂಟರ್ವಾಲ್ ಮುಗ್ದು ಸಿನೆಮಾ ಮತ್ತೆ ಶುರು ಆದಾಗ ನಿಧಾನಕ್ಕೆ ಕೇಳಿ " ಎನೂ ಹೇಳೆ ಇಲ್ಲಾಂತ " ನಿಮ್ ಕೈಯನ್ನ ಹಿಡ್ಕೊಂಡು ಸಿನೆಮಾ ನೋಡಿದ್ರೆ ಒಪ್ಪಿದ್ದಾರೆ ಅಂತರ್ಥ. ವಿಡೀಯೋ ನೋಡಿದ ತಕ್ಷಣ ಎದ್ ಹೋದ್ರು ಅಂದ್ರೆ ಅವ್ರನ್ನ ಫಾಲೋ ಮಾಡಕ್ಕಂತೂ ಹೋಗ್ಬೇಡಿ. ಸಿನೆಮಾ ಪೂರ್ತಿ ನೋಡಿ ಹೋಗಿ. ಒಂದ್ವೇಳೆ ಹೊರ್ಗಡೆ ಹೋಗಿ ಕಾಲ್ ಮಾಡಿದ್ರೆ ಕಣ್ಮುಚ್ಕೊಂಡು ಎದ್ದೋಗಿ. 

s4.scoopwhoop.com

6) ಟೀ ಶರ್ಟಲ್ಲಿ ವಿಲ್ ಯೂ ಮ್ಯಾರಿ ಮೀ ಅಂತ ಬರ್ಕೊಂಡು ಪ್ರಪೋಸ್ ಮಾಡಿ

ನಿಮ್ಮವ್ರು ನೋಡಿದ್ ತಕ್ಷಣ ಕೇಳೇ ಕೇಳ್ತಾರೆ. ನೇರವಾಗಿ ಹೇಳ್ಬಿಡಿ. ನಿನ್ನತ್ರ ಕೇಳೋಕೆ ಅಷ್ಟು ಧೈರ್ಯ ಇಲ್ಲ ಅದ್ಕೆ ಹಾಕೊಂಡ್ ಬಂದೇ ಎನ್ ಹೇಳ್ತೀಯಾ ? ನಮ್ ಎರಡ್ನೇ ಮಗನನ್ನ ಯಾವ್ ಸ್ಕೂಲಲ್ಲಿ ಸೇರ್ಸಿದ್ರೆ ಒಳ್ಳೆ ಎಡ್ಜ್ಯುಕೇಶನ್ ಕೊಡ್ತಾರೆ ಅನ್ನೋ ಐಡಿಯೇನಾದ್ರೂ ಇದ್ಯಾ ಅಂತೇಳಿ. 

ಉತ್ತರ ಇಲ್ಲ ಎನಿದ್ರೂ ನಗುವೇ ಅಲ್ವಾರೀ. 

shopping.mickmickdesigns.co.uk

7) ಗಿಫ್ಟ್ ಬಾಕ್ಸನಲ್ಲಿ ಅಡಗಿಕೊಂಡು ರಿಂಗ್ ಕೊಟ್ಟು ಪ್ರಪೋಸ್ ಮಾಡಿ 

ಇದಾಗ್ಬೇಕಂದ್ರೆ ನಿಮ್ಗೆ ತುಂಬಾ ಜನ ಸಪೋರ್ಟ ಮಾಡ್ಬೇಕು . ಯಾವ್ದಾದ್ರೂ ಒಂದ್ ಮಾಲ್ಗೋ ಹೋಗಿ ನಿಮ್ ಕತೆಯನ್ನ ಹೇಳಿ. ಹಾಗೇ ಎಲ್ಲಾ ಖರ್ಚು ವೆಚ್ಚಗಳನ್ನ ನೀವೆ ಬರ್ಸ್ತೀರಿ ಅನ್ನೋ ಮಾತನ್ನ ಕೂಡಾ ಹಾಕ್ಬಿಡಿ. ನಿಮ್ಗೆ ಸಹಾಯಕ್ಕೆ ಬರೋ ಎಲ್ಲರಿಗೂ ಪ್ಲಾನನ್ನ ಸರ್ಯಗಿ ವಿವರಿಸಿ ಬಿಡಿ.

ನೀವ್ ಪ್ರೀತಿಸ್ತಾ ಇರೋರಿಗೆ ಆ ಮಾಲಿಂದ ಕಾಲ್ ಮಾಡ್ಸಿ ಹೇಳಿ. ನೀವು ನಮ್ಮ ಈ ವ್ಯಾಲೆಂಟೈನ್ ದಿನದ ಲಕ್ಕಿ ಕಸ್ಟಮರ್.  ನಿಮ್ಗೆ ಬಹುಮಾನವಾಗಿ ಒಂದು ಡೈಮೈಂಡ್ ರಿಂಗ್ ಕೊಡ್ತಾ ಇದ್ದೇವೆ . ನೀವು ಇಂತ ಮಾಲ್ಗೆ ಬಂದು ತಗೊಂಡೋಗಿ ಅಂತೇಳಿ. ಅವ್ರು ಬರೋ ದಿನ ನೀವು ಒಂದ್ ದೊಡ್ಡ ಗಿಫ್ಟ್ ಬಾಕ್ಸಲ್ಲಿ ಅಡ್ಗಿ ಕೂತ್ಕಂಡಿರಿ ಗಾಳಿ ಬರ್ತಾ ಇರ್ಲಿ ಆಯ್ತಾ . ಇನ್ನೇನ್ ಲಕ್ಕಿ ಕಸ್ಟಮರ್ಗೆ ಡೈಮಂಡ್ ರಿಂಗ್ ಕೊಡ್ತಾ ಇದ್ದೇವೇ ಅನ್ನೋವಾಗ ಬಾಕ್ಸನಿಂದ ಹೊರ್ಬಂದು ನಿಮ್ಮವ್ರಿಗೆ ಕೊಟ್ಬಿಟ್ಟು ಐ ಲವ್ ಯೂ ಅಂತೇಳಿ. ಒಪ್ಕೊಂಡೆ ಒಪ್ಕೋತಾರಿ ಕಣ್ರಿ ಒಪ್ಕೊಳಿಲ್ಲಾಂದ್ರೆ ನಿಮ್ ಹಣೆಬರಹ 

i2.wp.com
ಅದೇನೇ ಇರಬಹುದು ಎಲ್ಲದಕ್ಕೂ ನೀವು ಧೈರ್ಯ ಮಾಡ್ಬೇಕು. ಒಪ್ಕೊಂಡ್ರೆ ಖಂಡಿತ ಖುಷಿಯಾಗತ್ತೆ . ಒಪ್ಕೊಂಡಿಲ್ಲಾಂದ್ರೆ ಬೇಜಾರ್ ಮಾಡ್ಕೊಂಡ್ ಬರೋದ್ಕಿಂತ ನಿಮ್ ಭವಿಷ್ಯದ ಬಗ್ಗೆ ಯೋಚ್ಸಿ. ಯಾಕಂದ್ರೆ ಜೀವ್ನ ಇರೋದೇ ಒಂದು ದುಡುಕಿದ್ರೆ ಮತ್ತೆ ಸಿಗಲ್ಲ.

ಎನಿ ವೇ ಆಲ್ ದ ಬೆಸ್ಟ್.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ಈ 10 ಅಭ್ಯಾಸಗಳಿರೋರನ್ನ ಮದುವೆಯಾಗದಿರೋದು ಒಳ್ಳೇದು

ಮದುವೆ ಆಗೋ ಯೋಚನೆ ಮಾಡ್ತಿದ್ದೀರಾ? ಇದು ದೊಡ್ಡ ನಿರ್ಧಾರ.

ಚೆನ್ನಾಗಿರೋ, ರಸಿಕತೆ ಇರೋ, ನಿಮಗೆ ಬೆಂಬಲ ಕೊಡೋ ವ್ಯಕ್ತಿನ ಆಯ್ಕೆ ಮಾಡಿದ್ರೆ ಸಂತೋಷವಾಗಿರ್ತೀರ. ಅದೇ ಒಬ್ಬ ತಪ್ಪು ವ್ಯಕ್ತಿಯನ್ನ ಆಯ್ಕೆ ಮಾಡಿದ್ರಿ ಅಂದರೆ ನಿಮ್ಮ ಜೀವನ ನರಕ ಆಗೋದು ಖಂಡಿತ. ನಿಮಗೆ ಯಾರು ಸರಿ ಹೊಂದಲ್ಲ ಅಂತ ಯೋಚಿಸುವಾಗ ಈ ಹತ್ತು ವಿಷಯಗಳನ್ನ ಮರೀಬೇಡಿ.

1. ಸಂಕುಚಿತ ಮನೋಭಾವ ಇರೋರು

ನೀವು ವಿಶಾಲ ಮನೋಭಾವದವರಾಗಿದ್ರೆ ಇವರ ಜೊತೆ ನಿಮ್ಮ ವಿಚಾರಗಳ ಬಗ್ಗೆ ಮಾತು ಬರೋದು ಖಂಡಿತ. ಇಂಥವರನ್ನ ಬದಲಾಯಿಸೋ ಹರಸಾಹಸಕ್ಕೆ ಕೈ ಹಾಕೋ ಬದಲು, ಸಮಾನ ಮನಸ್ಕರನ್ನ ಒಪ್ಕೊಳಿ. ಕನಿಷ್ಠ ನಿಮ್ಮ ವಿಚಾರಗಳನ್ನ ಕೇಳಿ ಅದನ್ನ ಒಪ್ಕೊಳ್ದೇ ಇದ್ರೂ ಧಿಕ್ಕರಿಸದೇ ಸುಮ್ಮನೆ ಇರೋರನ್ನ ಮದುವೆ ಆಗಿ.

2. ಪ್ರಾಣಿ ದ್ವೇಷಿಗಳು


ನಾಯೋ, ಬೆಕ್ಕೋ, ಇಲಿಯೋ, ಆನೆಯೋ ಒಟ್ನಲ್ಲಿ ಮನಸ್ಸಲ್ಲಿ ಪ್ರಾಣಿಗಳ ಬಗ್ಗೆ ಪ್ರೀತಿ ಇರೋರನ್ನ ಮದುವೆ ಆಗಿ.

3. ಸಂಬಂಧಗಳಿಗೆ ಬೆಲೆ ಕೊಡದೇರೋರು

ನಿಮ್ಮನ್ನ ಮದುವೆ ಆಗೋ ಮೊದಲು ಬೇರೊಬ್ಬರಿಗೆ ಮೋಸ ಮಾಡಿರೋ ವ್ಯಕ್ತಿ ಮುಂದೆ ನಿಮಗೂ ಮೋಸ ಮಾಡಲ್ಲ ಅನ್ನಕ್ಕೆ ಕಷ್ಟ. ಒಂದು ಸಂಬಂಧಕ್ಕೆ ಬೆಲೆ ಕೊಡದೇ ಇರೋರು ಇನ್ನೊಂದಕ್ಕೆ ಕೊಡಬಹುದು ಅಂತ ಹೇಗೆ ಹೇಳ್ತೀರ? ನಿಮಗೆ ನಿಯತ್ತಾಗಿರೋರನ್ನ ಮದುವೆ ಆಗಿ.

4. ಮಾತು ತಪ್ಪೋರು


ಊಟಕ್ಕೆ ಬರ್ತೀನಿ ಅಂದು ಬರಲ್ಲ, ಸಿನೆಮಾ ಹೋಗೋಣ ಅಂದು ಬರಲ್ಲ, ಒಟ್ನಲ್ಲಿ ನಿಮಗೆ ಕೊಟ್ಟ ಯಾವ ಮಾತನ್ನೂ ಉಳಿಸ್ಕೊಳ್ತಿಲ್ಲ ಅಂದ್ರೆ ಅವರ ಜೊತೆ ಏಗೋದು ಕಷ್ಟ. ಕೊಟ್ಟ ಮಾತಿಗೆ ತಪ್ಪದೇ ನಿಮಗೆ, ನಿಮ್ಮ ಸಂಬಂಧಕ್ಕೆ ಸಮಯ ಕೊಡೋರ ಜೊತೆ ಸಂತೋಷ ಸಿಗತ್ತೆ.

5. ಸುಳ್ಳು ಹೇಳೋರು

ನೀವು ಮದುವೆ ಆಗೋರು ತುಂಬಾ ಸುಳ್ಳು ಹೇಳ್ತಿದಾರೆ ಅನ್ಸಿದ್ರೆ ಮದುವೆಗೆ ಮುಂಚೆ ಯೋಚನೆ ಮಾಡಿ. ಸುಳ್ಳು ಎಷ್ಟು ಚಿಕ್ಕದೇ ಆದ್ರೂ ಒಂದು ಸುಳ್ಳನ್ನ ಮುಚ್ಚಕ್ಕೆ ಮತ್ತೊಂದು ಅಂತ ಸುಳ್ಳುಗಳ ಸುಳಿಯಲ್ಲಿ ನಿಮ್ಮನ್ನ ಸಿಲುಕಿಸ್ತಾರೆ.

6. ಜಗಳ ಕಾಯೋರು


ಯಾವುದೋ ಹಳೇ ವಿಷಯ ತೆಗೆದು ಪದೇ ಪದೇ ಜಗಳ ಆಡೋರ ಜೊತೆ ಇಡೀ ಜೀವನ ಕಳ್ಯೋದು ಕಷ್ಟ ಆಗತ್ತೆ. ತಪ್ಪು ಎಲ್ಲರಿಂದ ಆಗತ್ತೆ. ಕ್ಷಮಿಸಿ, ಮರೆತು ಮುಂದೆ ಸಾಗೋದೇ ದಾಂಪತ್ಯ.

7. ಕುಟುಂಬದವರನ್ನ ಗೌರವಿಸದೋರು

ತಮ್ಮ ಕುಟುಂಬದವರಿಗೆ ಗೌರವ, ಸಮಯ ಕೊಡದೇ ಇರೋರು ಮುಂದೆ ನಿಮ್ಮನ್ನೂ ಹಾಗೇ ಕಂಡರೆ ಆಶ್ಚರ್ಯ ಇಲ್ಲ. ಹತ್ತಿರದವರಿಗೆ ಹೆಚ್ಚು ನೋವು ಕೊಡೋದು ಮಾನವ ಗುಣ. ಆದರೆ ಉದ್ದೇಶಪೂರ್ವಕವಾಗಿ ಹೀಗೆ ಮಾಡೋರಿಂದ ದೂರ ಇರೋದು ಒಳ್ಳೇದು. ತಮ್ಮ ಕುಟುಂಬ, ಸ್ನೇಹಿತರಿಂದ ದೂರ ಸರಿಯೋರು ಮುಂದೆ ನಿಮ್ಮ ಜೊತೆ ಆತ್ಮೀಯವಾಗಿರ್ತಾರಾ?

8. ನಿಂದಿಸೋರು

http://www.survivors.org.au/wp-content/uploads/2016/01/Emotional-Abuse.jpg
ನಿಮ್ಮ ಬಗ್ಗೆ ನಿಮಗೆ ಜಿಗುಪ್ಸೆ ತರಿಸೋರ ಜೊತೆ ಮದುವೆ ಮಾಡ್ಕೊಳೋದು ಒಳ್ಳೆ ನಿರ್ಧಾರ ಅಲ್ಲ. ದೈಹಿಕ ನೋವಿಗಿಂತ ಮಾನಸಿಕ ನೋವು ವಾಸಿ ಆಗೋದು ಕಷ್ಟ. ಯಾವಾಗಲೂ ’ಏನು ಮಾತು ಕೇಳಬೇಕೋ’ ಅನ್ನೋ ಯೋಚನೇಲೇ ಇದ್ದೀರ ಅಂದರೆ ಈ ಸಂಬಂಧದಿಂದ ಹೊರಬರೋದು ಸೂಕ್ತ.

9. ನಿಮ್ಮ ಮಾತಿಗೆ ಬೆಲೆ ಕೊಡದೋರು

ನಿಮ್ಮನ್ನ ಮಾತಾಡಕ್ಕೆ ಬಿಡಲ್ಲ ಅಥವಾ ನೀವು ಹೇಳಿದ್ದನ್ನ ತಿದ್ದಿ, ನಿಲ್ಲಿಸಿ, ತಮ್ಮ ಅಭಿಪ್ರಾಯ ಹೇಳ್ತಾರೆ ಅಂದರೆ ನಿಮ್ಮ ಮಾತಿನ ಬಗ್ಗೆ ಅವರಿಗೆ ಗೌರವ ಇಲ್ಲ ಅಂತ. ನಿಮ್ಮ ಮೇಲೆ ಹಿಡಿತ ಸಾಧಿಸಬೇಕು ಅನ್ನೋರು ನಿಮ್ಮ ಮಾತನ್ನ ಅರ್ಧದಲ್ಲೇ ನಿಲ್ಲಿಸ್ತಾರೆ.

10. ಇನ್ನೂ ಬೆಳೆಯದೇ ಇರೋರು


ಎಷ್ಟೇ ವಯಸ್ಸಾಗಿದ್ರೂ ತಮ್ಮನ್ನ ತಾವು ನೋಡ್ಕೊಳೋಕ್ಕೆ ಬರದೋರಿಗೆ ನೀವು ಸಂಗಾತಿ ಅಲ್ಲ, ಅಪ್ಪನೋ ಅಮ್ಮನೋ ಆಗಬೇಕಾಗತ್ತೆ. ಇನ್ನೂ ದುಡ್ಡು ಕಾಸಿನ ವ್ಯವಹಾರ ಗೊತ್ತಿಲ್ಲ, ಕೆಲಸಕ್ಕೆ ಸರಿಯಾಗಿ ಹೋಗಲ್ಲ, ಮನೆ ಕ್ಲೀನ್ ಮಾಡಲ್ಲ ಅನ್ನೋರ ಜೊತೆ ಬದುಕೋ ಕಷ್ಟ ಯಾಕೆ ಮೈಮೇಲೆ ಹಾಕೊಳ್ತೀರ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: