ಅಲ್ಲಿ ಇಲ್ಲಿ ಆಯ್ಕೊಂಡ್ ಬಂದಿರೋ ಈ 27 ಸತ್ಯಗಳ್ನ ಕೇಳಿದರೆ ನಿಮ್ಮ ಬೇಜಾರು ಚಿಂದಿ ಚಿತ್ರಾನ್ನ

ಜೊತೆಗೆ ನಿಮ್ಮ ಸಾಮಾನ್ಯ ಜ್ಞಾನಾನೂ ಹೆಚ್ಚುತ್ತೆ

ಪ್ರಪಂಚದಲ್ಲಿ ಕಲಿಯಕ್ಕೇನು ಸ್ವಲ್ಪ ಇದ್ಯಾ? ಆದರೆ ಕಲಿಯೋದನ್ನೆಲ್ಲ ಒಂದೇ ಕ್ರಮದಲ್ಲಿ… ಉದಾಹರಣೆಗೆ ಸ್ಕೂಲು ಕಾಲೇಜಲ್ಲಿ ಇಂತಿಂಥ ಸಬ್ಜೆಕ್ಟಲ್ಲಿ ಇಂತಿಂಥದ್ದು ಕಲೀಬೇಕು ಅಂತಿರತ್ತಲ್ಲ, ಆ ವ್ಯವಸ್ಥೆಯಲ್ಲೇ ಕಲೀಬೇಕು ಅನ್ನೋದು ಸರಿಯಿಲ್ಲ. ಎಷ್ಟೋ ಸಲ ಕೆಲವು ಸತ್ಯಗಳ್ನ ಇರೋದು ಇದ್ದಂಗೆ ಹೇಳಿಬಿಟ್ಟರೆ ಅದರಿಂದಾನೇ ಸಾಕಷ್ಟು ಕಲಿಕೆ ಆಗುತ್ತೆ. ಅಂಥ

1. ಇಡೀ ಪ್ರಾಣಿಜಗತ್ತಿನಲ್ಲಿ ಮನುಷ್ಯನಿಗೆ ಮಾತ್ರ ನೇರವಾಗಿ ಗೆರೆ ಎಳಿಯೋಕೆ ಬರೋದು

2. ನಿಮ್ಗೆ 48 ವರ್ಷ ಆಗೋವರ್ಗೂ ನಿಮ್ ಮೆದುಳಿನ 'ವೈಟ್ ಮ್ಯಾಟರ್' ಜಾಸ್ತಿ ಆಗ್ತಾನೇ ಇರುತ್ತೆ -- ಇದರಿಂದ ನಿಮ್ಮ ದೇಹದ ಬೇರೆ ಬೇರೆ ಭಾಗಗಳು ಒಂದರ ಜೊತೆಗೆ ಇನ್ನೊಂದು 'ಮಾತಾಡೋದು' ಸುಲಭ ಆಗ್ತಾ ಹೋಗುತ್ತೆ.

3. ಇವತ್ತಿನ್ ಕಾಲದಲ್ಲಿ ಐದರಲ್ಲಿ ಒಂದು ಜೋಡಿ ಇಂಟರ್ನೆಟ್ಟಿನಿಂದಾನೆ ಅಂತೆ ಒಬ್ರಿಗೊಬ್ರು ಪರಿಚಯ ಆಗೋದು

4. ನಿಮ್ಗೆ ಬಿದ್ದ ಕನಸು ಹೇಗೆ ಶುರು ಆಯ್ತು ಅಂತ ನೆನಪಿಸ್ಕೊಳ್ಳೋಕೆ ಸಾಧ್ಯಾನೆ ಇಲ್ಲ!

5. ಬಿಳಿ ಗಡ್ಡ ಕಪ್ಪು ಗಡ್ಡಕ್ಕಿಂತ ಬೇಗ ಬೆಳಿಯುತ್ತೆ

6. ನೀವು ಸಂಗೀತ ಕೇಳ್ತಿದ್ರೆ ನಿಮ್ ಎಣ್ಣೆ ಹೊಡಿಯೋ ಸ್ಪೀಡ್ ಜಾಸ್ತಿ ಆಗುತ್ತೆ

7. ಗುಟ್ಟಿನ್ ಥರ ಪಿಸುಮಾತಲ್ಲಿ ಹೇಳಿದ್ ಮಾತ್ ಮೇಲೆನೇ ಜನ್ರಿಗೆ ನಂಬಿಕೆ ಜಾಸ್ತಿ ಅಂತೆ

8. ನಿಮ್ ಬದುಕಿನಲ್ಲಿ ಎರಡು ವಾರದಷ್ಟು ಸಮಯ ಟ್ರಾಫಿಕ್ ಲೈಟ್ ಹಸಿರಾಗೋದಕ್ಕೆ ಕಾಯೋದ್ರಲ್ಲಿ ಕಳ್ದಿರ್ತೀರ

9. ಬಾಳೆಹಣ್ಣಿನಿಂದ ಮಕ್ಳಿಗೆ ಕೂಡಾ ಯಾವ್ದೇ ಅಲರ್ಜಿ ಬರೊಲ್ವಂತೆ - ಇದೊಂದೇ ಹಣ್ಣು ಯಾರಿಗೂ ಅಲರ್ಜಿ ಕೊಡದೇ ಇರೋದು

10. ಭೂಮಿಯ 40% ಜಾಗ ಆರು ದೇಶದಲ್ಲಿ ಇದೆ

11. ಕಣಜ ಅನ್ನೋ ಜೇನು ನೊಣದ ಹಾಗೆ ಕಾಣೋ ಈ ಕೀಟಕ್ಕೆ ತನ್ನ ಜಾತಿಗೆ ಸೇರಿದ್ ಬೇರೆ ನೊಣಗಳ ಮುಖ ನೆನಪಿರುತ್ತಂತೆ!

12. ಮನುಷ್ಯನ ಶ್ವಾಸಕೋಶ ಬಿಡಿಸಿ ಇಟ್ಟರೆ ಒಂದು ಟೆನ್ನಿಸ್ ಕೋರ್ಟಿನಷ್ಟು ಅಗಲ ಇರುತ್ತೆ

13. ಗಂಡಸಿಗೆ ಐ.ಕ್ಯೂ. ಜಾಸ್ತಿ ಇದ್ರೆ ಅವನ ಆಯುಸ್ಸು ಹೆಚ್ಚಾಗುತ್ತೆ, ಆದ್ರೆ ಹೆಂಗಸಿಗೆ ಐ.ಕ್ಯೂ. ಜಾಸ್ತಿ ಇದ್ರೆ ಅವಳ ಆಯುಸ್ಸು ಕಡಿಮೆ ಆಗುತ್ತೆ!

14. ಸಂಗೀತಕ್ಕೆ ನಿಜವಾಗಿಯೂ ನೋವನ್ನ ಕಡಿಮೆ ಮಾಡೋ ಗುಣ ಇದೆ

15. ಕೆಲಸಕ್ಕೆ ಹೋಗೋವಾಗ ಹೆಂಡ್ತಿ ಹತ್ತಿರ ಎರಡು ಸೆಕೆಂಡ್ ಕಳೆದು ಆಮೇಲ್ ಹೋದ್ರೆ ಏಳು ವರ್ಷ ಆಯುಸ್ಸು ಹೆಚ್ಚಾಗುತ್ತೆ ಅಂತ ಒಂದು ಸಂಶೋಧನೆ ಹೇಳುತ್ತೆ

16. ಇ-ಸಿಗರೇಟಿಂದ ರೋಗ ತಡೆಗಟ್ಟೋ ಶಕ್ತಿ ಕಡಿಮೆ ಆಗುತ್ತಂತೆ

17. ಸಿಗರೇಟ್ ಹೊಗೆಗಿಂತ ಕಟ್ಟಿಗೆ ಸುಟ್ಟಾಗ ಬರೋ ಹೊಗೆಯಲ್ಲಿ ಕ್ಯಾನ್ಸರ್ ಬರಿಸೋ ರಾಸಾಯನಿಕಗಳು ಜಾಸ್ತಿ

18. ಬಾಂಬೆ ಮಿಠಾಯಿ (cotton candy) ಕಂಡು ಹಿಡ್ದಿದ್ದು ಒಬ್ಬ ಹಲ್ಲಿನ್ ಡಾಕ್ಟರ್ರು

ಬರ್ಲಿ ಹಲ್ಲು ಕಿತ್ತಿಸಿಕೊಳಕ್ಕೆ ಅಂತ ಇರಬೇಕು :-)

19. ಒಬ್ಬ ಮನುಷ್ಯ ಜೀವನದಲ್ಲಿ 40 ಟನ್ ತಿಂತಾನೆ

20. ಸೇಬಿನ್ ಬೀಜದಲ್ಲಿ 0.6% ಸಯನೈಡ್ ಇರುತ್ತೆ. ಹೆಚ್ಚಿನ ಪ್ರಮಾಣದಲ್ಲಿ ಅದು ವಿಷ.

21. ತಪ್ಪು ಮಾಡಿದೀನಿ ಅಂತ ತುಂಬ ಕೊರಗೋದ್ರಿಂದ ಖಾಯಿಲೆ ಜಾಸ್ತಿ

22. ಚ್ಯೂಯಿಂಗ್ ಗಮ್ ಜಗಿಯೋದ್ರಿಂದ ಮೆದುಳು ಚುರುಕಾಗುತ್ತೆ

23. ಜೇನುಪ್ಪ ಸಾವಿರ ವರ್ಷ ಇಟ್ರೂ ಹಾಳಾಗೊಲ್ಲ

24. ನೀಲಿ ಕಣ್ಣಿರೋವ್ರಿಗೆ ಕತ್ತಲಲ್ಲಿ ಇನ್ನಷ್ಟು ಚೆನ್ನಾಗಿ ಕಾಣುತ್ತೆ

25. ಒಬ್ಬ ಹುಡುಗಿ ಬೇರೆ ಹುಡುಗೀರ ಜೊತೆ ಇದ್ದಾಗ ಇನ್ನಷ್ಟು ಚೆನ್ನಾಗಿ ಕಾಣ್ತಾಳೆ

26. ನಗೋದಿಕ್ಕೆ ಮುಖದ ಹದಿನೇಳು ಥರದ ಮಾಂಸಖಂಡ ಉಪಯೋಗಿಸ್ತೀವಿ

27. ಒಂದು ಸರ್ವೇ ಪ್ರಕಾರ 85% ಗಂಡಸ್ರಿಗೆ ಕನ್ನಡಕ ಹಾಕಿರೋ ಹುಡುಗೀರು ಜಾಸ್ತಿ ಇಷ್ಟ ಆಗ್ತಾರೆ

 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ಸಾಮಾನ್ಯ ಮನುಷ್ಯರು ಈ 10 ಫೋಟೋಗಳ್ನ ನೋಡಿದ್ರೆ ಗಾಢವಾದ ಯೋಚನೆಗೆ ಬೀಳ್ತಾರೆ

ಫೋಟೋಗ್ರಫಿ ಒಂದು ವಿಜ್ಞಾನ!

ನಮ್ಮೆಲ್ಲರ ತಲೇಲಿ ಫೋಟೋಗ್ರಾಫಿ ಬಗ್ಗೆ ಒಂದ್ ಹುಳ ಇದ್ದೇ ಇದೆ. ಕೆಲವರು ತಮಾಷೆಗೆ ತೆಗೆದ್ರೆ ಇನ್ ಕೆಲವರು ಅದ್ನೇ ಜೀವ್ನ ಮಾಡ್ಕೊಂಡಿದ್ದಾರೆ. ಫೋಟೋ ತೆಗಿಯೋನು ತೆಗಿಯೋದ್ಕಿಂತ ಮುಂಚೆ ತುಂಬಾನೇ ಯೋಚ್ಸಿರ್ತಾನೆ. ಅವ್ನು ಆ ಫೋಟೋನ ನೋಡೋ ರೀತೀನೇ ಬೇರೇ, ನಾವು ಸಾಮಾನ್ಯ ಮನುಷ್ಯರು ನೋಡೋ ರೀತೀನೇ ಬೇರೆಯಾಗಿರತ್ತೆ. ಒಟ್ನಲ್ಲಿ ಒಂದ್ ಫೋಟೋ ಹಲವಾರು ತರದ ಅಭಿಪ್ರಾಯಗಳಿಗೆ, ಯೋಚನೆಗಳಿಗೆ ದಾರಿ ಮಾಡಿಕೊಡತ್ತೆ ಅನ್ನೋದ್ರಲ್ಲಿ ಅನುಮಾನಾನೇ ಇಲ್ಲ. ಅಂತಹದ್ದೇ ಒಂದಿಷ್ಟು ಫೋಟೋಗಳನ್ನ ಇಲ್ಲಿ ಕೊಟ್ಟಿದ್ದೀವಿ ನೋಡಿ. 

1. ಗಾಂಧಿ ತಾತನ ಮೂರು ಮಂಗಗಳನ್ನ ನೋಡಿ ಅದೆಷ್ಟು ಜನ ಬದ್ಲಾಗಿದ್ದಾರೋ ಗೊತ್ತಿಲ್ಲ, ಆದ್ರೆ ಈ ಮಕ್ಕಳನ್ನ ನೋಡಿ ಬದ್ಲಾಗ್ಲೇ ಬೇಕು ಅನ್ಸತ್ತೆ!

2. ಗುಡಿಸಲೇ ಆಗಲಿ, ಅರಮನೆ ಆಗಲಿ ಆಟ ನಿಲ್ಲದು.... 

3. ದೇವ್ರು ಇಷ್ಟು ಚೆನ್ನಾಗಿ ಸೃಷ್ಟಿ ಮಾಡಿರೋ ಈ ಪ್ರಪಂಚದಲ್ಲಿ ಮನುಷ್ಯಾನೇ ದೊಡ್ಡ ಸಮಸ್ಯೆ!

4. ಪದೇ ಪದೇ ದಡಕ್ಕೆ ಅಪ್ಪಳಿಸ್ತಾ ಇದ್ರೂ ನನ್ನ್ ಹತಾಶೆಯೇನೂ ಕಮ್ಮಿಯಾಗಿಲ್ಲ!

5. ಎಷ್ಟೋ ಜನ ಊಟ ತಿನ್ನದೇ ತೂಕ ಇಳಿಸ್ಕೊಳಕ್ಕೆ ಒದ್ದಾಡ್ತಾ ಇದ್ರೆ, ಇನ್ನೊಂದಿಷ್ಟು ಜನ ಒಂದ್ ತುತ್ತು ಊಟ ಸಿಕ್ರೆ ಸಾಕು ಅಂತಿದ್ದಾರೆ! 

6. ಇದ್ದಾಗ ಅದ್ರ ಬೆಲೆ ಗೊತ್ತಾಗಲ್ಲ , ಕಳ್ಕೊಂಡಾಗ್ಲೇ ಗೊತ್ತಾಗೋದು... ಮತ್ತೆ ಸಿಕ್ಕಿದ್ರಂತೂ ಆ ಸಂತೋಷ ಹೇಳಕ್ಕಾಗಲ್ಲ ಬಿಡಿ!

7. ಸ್ವಾಮಿ ನಿಷ್ಠೆ ಅಂದ್ರೆ ಇದೇ ಏನೋ!

8. ಎಷ್ಟೋ ಸರ್ತಿ ನಮ್ಮ ಅಕ್ಕ-ತಂಗೀರೇ ಅಮ್ಮನ ರೂಪ ತಾಳ್ತಾರೆ!

9. ಗೆದ್ದಾಗ ಚಪ್ಪಾಳೆ ಹೊಡಿಯೋ ಕೈಗಳಿಗಿಂತಾ, ಬಿದ್ದಾಗ ನಮ್ಮನ್ನ ಹಿಡಿದೇಳ್ಸೋ ಕೈಗಳು ತುಂಬಾ ಮುಖ್ಯ!

10. " ಈಸಬೇಕು... ಇದ್ದು ಜೈಸಬೇಕು " ಅಂತ ಕೇಳಿಲ್ವಾ?

ಅದಕ್ಕೇ ಹೇಳೋದೇನೋ, ಒಂದು ಚಿತ್ರ ಸಾವಿರ ಪದಗಳಿಗೆ ಸಮ ಅಂತ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: