ನಿಮ್ಮ ದೇಹದಲ್ಲಿ ಈ 10 ಗುರತುಗಳು ಕಾಣಿಸಿಕೊಂಡರೆ ಹಗುರವಾಗಿ ತೊಗೋಬೇಡಿ
ನೀವು ಆರೋಗ್ಯವಾಗಿದ್ದೀರಾ ಇಲ್ವಾ ಅಂತ ತಿಳ್ಕೊಳಿ
ಇದೊಂತರ ಅದ್ಭುತ ಅಂತ ಹೇಳಬಹುದು. ನಾವು ಆರೋಗ್ಯವಾಗಿದ್ದೀವಾ ಅಂತ ನಮ್ಮ ದೇಹಾನೆ ನಮಗೆ ತಿಳಿಸಿಕೊಡತ್ತೆ. ಅದೇ ಗಾಡೀಲಿ ಪೆಟ್ರೋಲ್ ಖಾಲಿ ಆದ್ರೆ ಗಾಡಿ ಹೇಳತ್ತಾಲ್ಲ ಹಾಗೇನೇ ನಮ್ಮ ದೇಹದಲ್ಲಿ ಏನಾದ್ರು ವ್ಯತ್ಯಾಸ ಆದ್ರೆ ಅಥವಾ ದೇಹಕ್ಕೆ ತೊಂದರೆ ಇದ್ರೆ ಅದನ್ನ ದೇಹಾನೆ ನಮಗೆ ತಿಳಿಸತ್ತೆ, ಅದು ಹೇಗೆ? ನಾವ್ ಹೇಳ್ಕೊಡ್ತೀವಿ. ನಿಮ್ಮ ದೇಹದಲ್ಲಿ ಇಲ್ಲಿ ನಾವು ಹೇಳಿರೋ ಹಾಗೇನಾದ್ರೂ ಇದ್ರೆ ನೀವ್ ಸ್ವಲ್ಪ ಹುಷಾರಾಗಬೇಕು. ಬೇಗ ಬೇಗ ಓದ್ಕೊಳಿ.
1. ಕಣ್ಣು ಸುತ್ತ ಕಪ್ಪಾಗಿರೋದು 
ಇದನ್ನ ಡಾರ್ಕ್ ಸರ್ಕಲ್ಸ್ ಅಂತಾರೆ. ನಿದ್ದೆ ಕಮ್ಮಿ ಆಗಿದ್ರೆ ಹೀಗಾಗೋದು ಮಾಮೂಲಿ. ಪ್ರತಿದಿನ 7-8ಗಂಟೆಕಾಲ ನಿದ್ದೆ ಮಾಡ್ಬೇಕು ಅಂತ ಡಾಕ್ಟರ್ ಹೇಳ್ತಾರೆ. ಬರಿ ಅಷ್ಟೇ ಅಲ್ಲ, ನಿಮ್ಮಲ್ಲೇನಾದ್ರು ರಕ್ತಹೀನತೆ ಇದ್ರೆ ಹೀಗಾಗತ್ತೆ. ರಕ್ತದಲ್ಲಿ ಕೆಂಪು ಕಣಗಳು ಎಷ್ಟಿರಬೇಕೋ ಅದಕ್ಕಿಂತ ಕಮ್ಮಿ ಇರತ್ತೆ, ಆಗ ಹೀಗಾಗತ್ತೆ. 
2. ಬೆರಳುಗಳ ಬಣ್ಣ ಬದಲಾಗೋದು 
ನಿಮ್ಮ ಬೆರಳಿನ ಬಣ್ಣ ಏನಾದ್ರೂ ನೀಲಿಗಟ್ಟೋದು, ಹಳದಿ ಬಣ್ಣ ಆಗೋದು ಈ ಥರ ಆದ್ರೆ ಸಮಸ್ಯೆ ಇದೆ ಅಂತ ಅರ್ಥ. ಸ್ವಲ್ಪ ಚಳಿ ಆಗ್ತಿದ್ದಂಗೆ ರಕ್ತನಾಳ ಸೆಳೆದಂಗಾಗತ್ತೆ ಆಗ ಬೆರೆಳಿನ ಬಣ್ಣ ಬದಲಾಗತ್ತೆ. ದೇಹದಲ್ಲಿ ರಕ್ತ ಸಂಚಾರದ ಸಮಸ್ಯೆ ಇದೆ ಅಂತ ಅರ್ಥ. ಇದನ್ನ ರೆನಾವ್ಡ್ ಸಿಂಡ್ರೋಮ್ ಅಂತ ಕರೀತಾರೆ.
3. ಕಣ್ಣಿಗೆ ಎಲ್ಲ ಸ್ವಲ್ಪ ಮಂದ ಮಂದವಾಗಿ ಕಾಣಿಸೋದು 
ಕಣ್ಣಿಗೆ ಜಾಸ್ತಿ ಕೆಲಸ ಕೊಟ್ಟರೆ ಯಾವತ್ತಿದ್ರೂ ತೊಂದ್ರೇನೇ. ಸ್ವಲ್ಪ ದೂರದಲ್ಲಿರೋದನ್ನ ಓದಕ್ಕೆ ತೊಂದ್ರೆ ಆಗ್ತಿದ್ರೆ, ವ್ಯಕ್ತಿ ಮುಖಾನ ಕಂಡು ಹಿಡಿಯಕ್ಕೆ ಕಷ್ಟ ಆಗ್ತಿದ್ರೆ ನೀವು ಕಣ್ಣಿನ ಡಾಕ್ಟರ್ ಹತ್ರ ಹೋಗೋದು ಒಳ್ಳೇದು. ಶಾರ್ಟ್ ಸೈಟ್ ಇದ್ದರು ಇರಬಹುದು.
4. ಕಣ್ಣ ಮುಂದೆ ಗುಳ್ಳೆಗಳು ಓಡಾಡೋದು 
ಫೋಟೋದಲ್ಲಿ ಕೊಟ್ಟಿರೋಥರ ಅಥವಾ ಇನ್ನು ಬೇರೆ ಬೇರೆ ಆಕಾರ ನಿಮ್ಮ ಕಣ್ಣ ಮುಂದೆ ಆಗಾಗ ಕಾಣುಸ್ತಿದ್ರೆ, ಹೆಚ್ಚುಕಮ್ಮಿ ಟ್ಯೂಬ್-ಲೈಟಿನ ಬೆಳಕಲ್ಲಿ ಈ ಥರ ಆಗತ್ತೆ. ಅಪರೂಪಕ್ಕಿದ್ರೆ ಪರ್ವಾಗಿಲ್ಲ ಆದ್ರೆ ಪ್ರತೀದಿನ, ವಾರಾಪೂರ್ತಿ ಈ ಥರ ಆಗ್ತಾ ಇದ್ರೆ ದಯವಿಟ್ಟು ಕಣ್ಣಿನ ಡಾಕ್ಟರ್ ಹತ್ರ ಹೋಗಿ. ಕಣ್ಣಲ್ಲಿ ಪೊರೆ ಆಗಿರೋ ಸಮಸ್ಯೆಯ ಸಂಕೇತ ಆಗಿರಬಹುದು. ಅಥವಾ ಬೇರೆ ಯಾವ್ದಾದ್ರು ಸಮಸ್ಯೆ ಇರಬಹುದು. 
5. ಅವಾಗವಾಗ ಹೊಟ್ಟೆ ಗುಡು ಗುಡು ಅಂತ ಶಬ್ದ ಮಾಡೋದು 
ಯಾವಾಗ್ಲೋ ಅಪರೂಪಕ್ಕೆ ಶಬ್ದ ಮಾಡುದ್ರೆ ಪರ್ವಾಗಿಲ್ಲ. ಪ್ರತಿದಿನ ಇದೇತರ ಆದ್ರೆ, ಜೊತೇಲಿ ಸ್ವಲ್ಪ ನೋವ್ವಿದ್ರೆ ನೀವು ಡಾಕ್ಟರ್ ಹತ್ರ ಹೋಗ್ಬೇಕು.
6. ಸಿಪ್ಪೆ ಥರ ಚರ್ಮ ಸುಲಿದು ಹೋಗ್ತಿದ್ರೆ 
ನಿಮ್ಮ ದೇಹದಲ್ಲಿ ವಿಟಮೀನಿನ ಕೊರತೆ ಇದೆ ಅಂತ. ಚೆನ್ನಾಗಿ ಪೌಷ್ಟಿಕ ಆಹಾರ ತಿಂದ್ರೆ ಸರಿಹೋಗತ್ತೆ. ಆದ್ರೆ ಇದರ ಜೊತೆಗೆ ಚರ್ಮದಲ್ಲಿ ತುರಿಕೆ, ಉರಿ, ನವೆ ಇದ್ರೆ ನೀವು ಡಾಕ್ಟರ್ ಹತ್ರ ಹೋಗ್ಲೇಬೇಕು.
7. ವಾಸ್ನೆ ಕಂಡು ಹಿಡಿಯಕ್ಕೆ ಆಗ್ದೇ ಇರೋದು 
ವಯಸ್ಸಾಗಿದ್ರೆ ಇವೆಲ್ಲ ಮಾಮೂಲಿ ಬಿಡಿ, ಆದ್ರೆ ವರ್ಷಕ್ಕಿಂತ ಕಮ್ಮಿ ಇಡ್ರೀ ಅಂದ್ರೆ ನೀವು ಯಾವದೇ ವಾಸ್ನೆ ಆದರು ಕಂಡು ಹಿಡಿಬೇಕು. ನೆಗಡಿ ಆದಾಗ ಪರ್ವಾಗಿಲ್ಲ, ಆದ್ರೆ ನಿಮಗೆ ವಾಸನೆ ಸ್ವಲ್ಪ ಮಟ್ಟಿಗೆ ಗೊತ್ತಾಗಲ್ಲ ಅಂದ್ರೆ ನೀವು ಡಾಕ್ಟರ್ ಹತ್ರ ಹೋಗ್ಬೇಕು.
8. ಕಣ್ಣು ಅದರೋದು ಅಥವಾ ಕಣ್ಣಲ್ಲಿ ಸೆಳೆತ 
ನೀವು ಕಣ್ಣಿಗೆ ತುಂಬಾ ಕೆಲಸ ಕೊಟ್ಟಾಗ ಹೀಗಾಗತ್ತೆ. ಇದನ್ನ ತಪ್ಪಿಸಕ್ಕೆ ತಣ್ಣೇರಲ್ಲಿ ಹತ್ತೀನ ಅದ್ದಿ ಕಣ್ಣನ್ನ ಒರೆಸಿಕೊಳ್ಳಿ. ಆದ್ರೆ ಕಣ್ಣು ಅದರೋದು ಕಮ್ಮಿ ಆಗ್ಲಿಲ್ಲ ಅಂದ್ರೆ ನೀವು ಡಾಕ್ಟರ್ ಹತ್ರ ಹೋಗಿ. ನರದ ಸಮಸ್ಯೆ ಇರಬಹುದು.
9. ಆಗಾಗ ಕಿವಿ ಹತ್ರ ಗುಯ್ಯ್ ಅಂತ ಕೇಳ್ಸೋದು
ಯಾವಾಗ್ಲೋ ಜೋರು ಶಬ್ದ ಆದಾಗ ಹೀಗಾದ್ರೆ ಪರ್ವಾಗಿಲ್ಲ. ಆದ್ರೆ ಅವಾಗವಾಗ ಕಿವಿ ಹತ್ರ ಹೀಗಾಗ್ತಿದ್ರೆ ಸ್ವಲ್ಪ ಎಚ್ಚರ ವಹಿಸಿ. ಜಾಸ್ತಿ ಶಬ್ದ ಇರೋ ಕಡೆ ಕೆಲಸ ಮಾಡೋರಿಗೆ ಈ ಸಮಸ್ಯೆ ಇದ್ದೆ ಇರತ್ತೆ. ಸ್ವಲ್ಪ ಹುಷಾರಾಗಿರಿ. ಈ ಥರ ಜಾಸ್ತಿ ಆಗ್ತಿದ್ರೆ ಡಾಕ್ಟರ್ ಹತ್ರ ಹೋಗಿ.
10. ಭುಜದ ಮೂಳೆ ಜಾರಿದಹಾಗೆ ಆಗೋದು 
ಕೆಲವೊಬ್ಬರು ಭುಜದ ಮೂಳೆ ಹೆಂಗ್ ಬೇಕೋ ಹಂಗೆ ತಿರುಗುಸ್ತಾರೆ. ಇದು ಹುಟ್ಟಿದಾಗಿಲಿಂದಾನು ಇರಬಹದು. ಇವರಿಗೆ ಮೂಳೆ ಜಾರಿದ್ ಹಾಗೆ ಆಗತ್ತೆ. ಇಲ್ಲ ಆಟಗಾರರಿಗೆ ಮೂಳೆ ಜಾರತ್ತೆ. ಉದಾಹರಣೆಗೆ ಸಚಿನ್ ತೆಂಡೂಲ್ಕರ್ ಇವರು ಆಪರೇಷನ್ ಮಾಡಿಸ್ಕೊಂಡ್ರು. ನಿಮ್ಮ ಮೂಳೆ ಜಾರ್ತಿದೆ ಅಂದ್ರೆ ಡಾಕ್ಟರ್ ಹತ್ರ ಹೋಗೋದು ಒಳ್ಳೇದು 
ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:
ನೀವು ತಿನ್ನೋದ್ರಲ್ಲಿ ಸಕ್ಕರೆ ಒಂದನ್ನ ಬಿಟ್ಟುಬಿಟ್ರೆ ಈ 10 ಅದ್ಭುತ ಲಾಭಗಳು ಸಿಗತ್ತೆ
ಸಕ್ಕರೆ ಬದ್ಲು ಬೆಲ್ಲ ಬಳಸಿ.
ಸಕ್ಕರೆ ಅನ್ನೋದು ಅಡುಗೆಮನೆಯ ಖಾಯಂ ಪದಾರ್ಥ. ಕೆಲವರಿಗಂತೂ ಸಕ್ಕರೆ ಅಂದ್ರೆ ಮೈಯೆಲ್ಲಾ ಬಾಯಿ. ಎಲ್ಲಾದಕ್ಕೂ ಒಂಚೂರು ಜಾಸ್ತಿ ಸಕ್ಕರೆ ಹಾಕ್ಕೊಂಡು ಲೊಟಿಕೆ ಹೊಡ್ಕೊಂಡು ತಿಂತಾರೆ. ಕುಡಿತಾರೆ. ಆದರೆ ಸಕ್ಕರೆ ಒಂದನ್ನ ಬಿಟ್ರೆ, ಕಡೇಪಕ್ಷ ಕಡಿಮೆ ಮಾಡ್ಕೊಂಡ್ರೆ ಏನೆಲ್ಲಾ ಲಾಭ ಇದೆ ಗೊತ್ತಾ? ಒಂದಲ್ಲ ಹತ್ತು ಹೇಳ್ತೀವಿ ಕೇಳಿ.
1. ಸದಾಕಾಲ ನಿಮ್ಮ ಶಕ್ತಿ, ಹುರುಪು ಒಂದೇ ತರ ಇರತ್ತೆ. 
shesaid.com
ಸಕ್ಕರೆ ಜಾಸ್ತಿ ಉಪಯೋಗಿಸೋದ್ರಿಂದ ನಿಮ್ಮ ದೇಹದಲ್ಲಿ ಸಕ್ಕರೆ ಮಟ್ಟ ಏರುಪಾರಾಗ್ತಾ ಇರತ್ತೆ. ಆದರಿಂದ ಆಗಾಗ ಆಯಾಸ, ಸುಸ್ತು, ಬೇಜಾರು ಎಲ್ಲಾ ಆಗುತ್ತಂತೆ. ಸಕ್ಕರೆ ಬಿಟ್ರೆ ಈ ತಾಪತ್ರಯ ಇಲ್ಲ. ಸದಾಕಾಲ ಉತ್ಸಾಹದಿಂದ ಗಟ್ಟಿಯಾಗಿ ಓಡಾಡ್ಕೊಂಡು ಇರಬೋದು.
2. ತೂಕ ಕಡಿಮೆ ಮಾಡೋಕೆ ಸಹಾಯ ಆಗತ್ತೆ.
rd.com
ಊಟ, ತಿಂಡಿ ಬಿಟ್ಟು ಉಪವಾಸ ಮಾಡೋ ಅಗತ್ಯ ಇಲ್ಲ. ಸಕ್ಕರೆ ತಿನ್ನೋದು ಬಿಡಿ. ಹಸಿವು ಕಡಿಮೆ ಆಗತ್ತೆ. ಸಿಹಿ ತಿನ್ನೋ ಚಪಲ ದೂರಾಗತ್ತೆ. ತೂಕ ತಾನೇತಾನಾಗಿ ಕಡಿಮೆ ಆಗತ್ತೆ.
3. ರಾತ್ರಿ ಹೊತ್ತು ಒಳ್ಳೇ ನಿದ್ದೆ ಬರತ್ತೆ.
health.harvard.edu
ಹೌದು ರೀ...ಸಕ್ಕರೆ ಜಾಸ್ತಿ ತಿಂದ್ರೆ, ಮೈಯಲ್ಲಿ ಸಕ್ಕರೆ ಮಟ್ಟ ಏರುಪೇರಾಗಿ ರಾತ್ರಿ ನಿದ್ದೆಗೂ ಕಂಟಕ ತರತ್ತಂತೆ. ಸಕ್ಕರೆ ಬಿಟ್ರೆ ಸಿಹಿ ನಿದ್ದೆ ಗ್ಯಾರೆಂಟಿ.
4. ನಿಮ್ಮ ರೋಗ ನಿರೋಧಕ ಶಕ್ತಿ ಜಾಸ್ತಿ ಆಗತ್ತೆ.
interactive-biology.com
ದೇಹದಲ್ಲಿ ಉರಿಯೂತದ ಲಕ್ಷಣ ಇದ್ರೆ ಕಡೆಮೆಯಾಗತ್ತೆ. ಆರೋಗ್ಯವಾಗಿ ಇರ್ತೀರ.
5. ನಿಮ್ಮ ಚರ್ಮ ಲಕಲಕ ಹೊಳೆಯತ್ತೆ.
dr-spiller.com
ಯಾವ ಮೇಕಪ್ಪೂ ಬೇಡ. ಗುಳ್ಳೆಗಳ ಕಿರಿಕಿರಿ ಇರಲ್ಲ. ನಯವಾದ ಚರ್ಮ ನಿಮ್ಮದಾಗತ್ತೆ.
6. ನಿಮಿಷಕ್ಕೊಂತರ ಮನಸ್ಸು ಬದಲಾಗಲ್ಲ. ಸ್ಥಿರವಾದ ಮನಸ್ಸು ನಿಮ್ಮದಾಗತ್ತೆ.
lifenbalancecom.files.wordpress.com
ನಿಮ್ಮ ಮನಸ್ಸಿನ ಭಾವನೆಗಳು ಹುಚ್ಚುಚ್ಚಾಗಿದ್ರೆ, ಅದಕ್ಕೂ ಸಕ್ಕರೆ ಕಾರಣ ಆಗಿರಬೋದು. ಸಕ್ಕರೆ ಬಿಟ್ರೆ, ಡಿಪ್ರೆಷನ್ನ, ಸ್ಕಿಜೋಫ್ರೀನಿಯಾ ತರದ ಖಾಯಿಲೆ ಬರೋ ಸಾಧ್ಯತೆ ಕಡಿಮೆ ಆಗತ್ತಂತೆ.
7. ನೀವು ನಿಮ್ಮ ವಯಸ್ಸಿಗಿಂತ ಚಿಕ್ಕೋರಾಗಿ ಕಾಣ್ತೀರ.
wisdomtimes.com
ಸಕ್ಕರೆ ಖಾಯಿಲೆ ಇದ್ದೋರು ಸುಸ್ತಾಗಿ, ವಯಸ್ಸಾದೋರ ತರ ಕಾಣೋದು ಗಮನಿಸಿದ್ದೀರ? ಸಕ್ಕರೆ ಬಿಟ್ರೆ, ನಿಮ್ಮ ದೇಹ ತೆಳ್ಳಗಾಗಿ, ಚರ್ಮ ನಯವಾಗಿ, ಉತ್ಸಾಹ ಜಾಸ್ತಿಯಾಗಿ ನೀವು ಚಿಕ್ಕವರ ಹಾಗೆ ಕಾಣೋದು ಸುಳ್ಳಲ್ಲ.
8. ನಿಮ್ಮ ಹೃದಯದ ಆರೋಗ್ಯ ಸುಧಾರಿಸತ್ತೆ.
ಸಕ್ಕರೆ ಬಾಯಿಗೆ ಮಾತ್ರ ಸಿಹಿ. ಹೃದಯದಲ್ಲಿ ಒಳ್ಳೇ ಕೊಬ್ಬಿನ ಅಂಶ ಕಡಿಮೆ ಮಾಡಿ, ನಿಮ್ಮ ಹೃದಯದ ಆರೋಗ್ಯ ಹಾಳು ಮಾಡತ್ತೆ. ಅದಕ್ಕೆ ಸಕ್ಕರೆ ಕಡಿಮೆ ಮಾಡೋದೊಂದೇ ದಾರಿ.
9. ನಿಮ್ಮ ಲಿವರ್ ಕೂಡ ಚೆನ್ನಾಗಿ ಕೆಲ್ಸ ಮಾಡಕ್ಕೆ ಶುರುವಾಗತ್ತೆ.
liverandpancreassurgeon.com
ಸಕ್ಕರೆ ಕೂಡ ಹೆಂಡದಷ್ಟೇ ಅಪಾಯಕಾರಿ. ನಿಮ್ಮ ಲಿವರ್ ಚೆನ್ನಾಗಿರಬೇಕಂದ್ರೆ, ಸಕ್ಕರೆ ಕಡೆಮೆ ಮಾಡಿ.
10. ಕಿಡ್ನಿ ಕಲ್ಲುಗಳ ಸಮಸ್ಯೆ ಬರಲ್ಲ.
st1.thehealthsite.com
ಸಕ್ಕರೆಭರಿತ ಪಾನೀಯ ಕುಡಿಯೋದ್ರಿಂದ ಕಿಡ್ನಿ ಕಲ್ಲುಗಳು ಆಗೋ ಸಾಧ್ಯತೆ 25 ರಿಂದ 33% ಇರತ್ತಂತೆ. ಸಕ್ಕರೆ ಕಮ್ಮಿ ಮಾಡಿದ್ರೆ, ಕಿಡ್ನಿ ಕೂಡ ಚೆನ್ನಾಗಾಗುತ್ತೆ.
ಇನ್ನೇನು ಬೇಕ್ರಿ? ಅನ್ಕೊಂಡಿದ್ದೆಲ್ಲಾ ಪಡೆಯೋಕೆ ಸಕ್ಕರೆ ಬಿಡಿ.
ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: