ಗಂಡನಿಂದ ಕಾರ್ ಓಡ್ಸೋದು ಕಲ್ತಿರೋ ಹೆಂಗಸರಿಗೆ ಮಾತ್ರ ಗೊತ್ತಿರೋ 7 ಮಹಾನ್ ಸತ್ಯಗಳು

ಎಷ್ಟು ತಾಳ್ಮೆ ಇದ್ದರೂ ಸಾಲದು

'ಜಟಕಾ ಕುದುರೆ ಹತ್ತಿ ಪ್ಯಾಟೆಗ್ ಹೋಗುಮಾ' ಅಂತ ಬೇಕಿದ್ರೆ ಕುದುರೆ ಮೇಲೆ ಕೂತ್ಕೊಂಡು ಬೇಕಿದ್ರೆ ಹೋಗ್ಬಹುದು, ಆದ್ರೆ ಗಂಡನಿಂದ ಡ್ರೈವಿಂಗ್ ಕಲಿಯೋ ಪಾಡು ಬೇಡ ಅಂತ ಗಂಡನಿಂದ ಡ್ರೈವಿಂಗ್ ಕಲಿತ ಹೆಂಗಸರು ಹೇಳ್ತಾರೆ. 'ಸಪ್ತಪದಿ' ತುಳಿದ ಗಂಡನ್ ಜೊತೆ ಇನ್ನು ಏಳು ಜನ್ಮ ಬದುಕ್ಬೇಕು ಅಂತ ನಿಮ್ ಆಸೆ ಇರ್ಬಹುದು. ಹಾಗೆ ಆಸೆ ಪಟ್ಟು ಗಂಡನಿಂದ್ಲೇ ಡ್ರೈವಿಂಗ್ ಕಲಿತಿದ್ರೆ ಈ 7 ವಿಷಯ ಕಲ್ತಿರ್ತೀರ.

1. ಎಷ್ಟೇ ತಾಳ್ಮೆಯಿಂದ ಓಡ್ಸಿದ್ರೂ ಗಂಡ ಒಪ್ಪಲ್ಲ

ನೀವು ಆತುರಾತುರವಾಗಿ ಓಡಿಸ್ತಿದ್ದೀರ ಅಂತ ಅನ್ಸುತ್ತೆ. ಅವ್ರು ಎಷ್ಟು ಫಾಸ್ಟ್ ಆಗಿ ಓಡ್ಸಿದ್ರೂ ಪರ್ವಾಗಿಲ್ಲ. ಆದ್ರೆ ನೀವು ಸ್ವಲ್ಪ ಥಟ್ ಅಂತ ಬ್ರೇಕ್ ಹಾಕಿದ್ರೂ ಅವ್ರು ಏನಾದ್ರೂ ಹೇಳೇ ಹೇಳ್ತಾರೆ.

2. ಡ್ರೈವ್ ಮಾಡ್ತಾ ಒಂದು ಸಣ್ ತಪ್ಪು ಮಾಡಿದ್ರೂ ಅವ್ರು ಕಾರ್ ನಿಲ್ಸೋಕೆ ಹೇಳ್ತಾರೆ

ಕಾರ್ ನಿಲ್ಸೋಕೆ ಹೇಳಿ ಅವ್ರೇ ಡ್ರೈವ್ ಮಾಡ್ಕೊಂಡು ಹೋಗ್ಬಿಡ್ತಾರೆ. ಭಯ, ಕಾಳಜಿ ಅಗತ್ಯಕ್ಕಿಂತ ಜಾಸ್ತಿ ಅವ್ರಿಗೆ.

3. ಡ್ರೈವಿಂಗ್ ಕಲಿಸುವಾಗ್ಲೇ ಗಂಡಂಗೆ 'ಇವತ್ತು ತಿಂಡಿಗೆ ಏನು, ನಾಳೆ ಯಾವ ಸಾರು?', ಅಂತ ಎಲ್ಲ ತುಂಬಾ ಕುತೂಹಲ ಬಂದ್ಬಿಡುತ್ತೆ

ನೀವಿಲ್ಲಿ ಕಷ್ಟಪಟ್ಟು ಕ್ಲಚ್ಚು, ಗೇರು ಅಂತ ತಲೆ ಕೆಡಿಸ್ಕೋತಿದ್ರೆ ಗಂಡಂಗೆ ನೀವು ಏನು ಆಡಿಗೆ ಮಾಡಿದ್ದೀರಿ, ನಾಳೆ ಏನು ಮಾಡ್ತೀರ ಅನ್ನೋದೆಲ್ಲ ತುಂಬಾ ಮುಖ್ಯ ಅನ್ಸುತ್ತೆ.

4. ಡ್ರೈವಿಂಗ್ ಗೊತ್ತಿದ್ ಮಾತ್ರಕ್ಕೆ ಡ್ರೈವಿಂಗ್ ಕಲಿಸೋಕೆ ಬರುತ್ತೆ ಅನ್ನೋ ಹಾಗಿಲ್ಲ

ನಿಮ್ ಗಂಡ ಎಷ್ಟು ಒಳ್ಳೆ ಡ್ರೈವರ್ ಆಗಿದ್ರೂ ಕೂಡ ಹೊಸಬ್ರಿಗೆ ಡ್ರೈವಿಂಗ್ ಕಲಿಸೋಕೆ ಬರ್ಬೇಕು ಅಂತ ಏನಿಲ್ಲ ಅಂತ ನಿಮ್ಗೆ ಅರ್ಥ ಆಗುತ್ತೆ. ಅವ್ರು ಕಲಿಯುವಾಗ ಮಾಡಿದ್ ತಪ್ಪುಗಳು ಅವ್ರಿಗೆ ನೆನಪಿರೊಲ್ಲ.

5. ಐ.ಪಿ.ಎಲ್., ಒನ್ ಡೇ, ಟೆಸ್ಟ್ ಮ್ಯಾಚು - ಒಟ್ನಲ್ಲಿ ಕ್ರಿಕೆಟ್ ಇದ್ರೆ ಅವತ್ತು ಡ್ರೈವಿಂಗ್ ಕ್ಲಾಸ್ ಕ್ಯಾನ್ಸಲ್

ಹಾಗಿದ್ರೆ ಡ್ರೈವಿಂಗ್ ಕಲಿಯೋದು ಮರ್ತೇ ಬಿಡೋದು ಒಳ್ಳೇದು ಅಂತ ನೀವು ಎಷ್ಟೋ ಸಲ ಅಂದ್ಕೊಂಡಿರ್ತೀರ.

6. ಗಂಡ ನಿಮ್ ತಪ್ಪನ್ನ ತೋರ್ಸಿದ್ರೆ ನಿಮ್ಗೆ ತುಂಬಾ ಸಿಟ್ಟು ಬರುತ್ತೆ

ಯಾರು ನಿಮ್ ತಪ್ಪನ್ನ ಎತ್ತಿ ತೋರ್ಸಿದ್ರೂ ಪರ್ವಾಗಿಲ್ಲ, ಗಂಡ ತೋರ್ಸಿದ್ರೆ ಮಾತ್ರ ಸಿಟ್ಟು ನುಗ್ಗಿ ಬರುತ್ತೆ. ಅಲ್ವಾ? ನೀವು ಸಿಟ್ಟು ಬಂದು ಮಧ್ಯದಲ್ಲೇ, 'ಡ್ರೈವಿಂಗ್ ಕಲ್ಸೋದೂ ಬೇಡ, ನನ್ನ ಆಡ್ಕೊಳ್ಳೋದೂ ಬೇಡ.', ಅಂತ ಕ್ಲಾಸ್ ಕ್ಯಾನ್ಸಲ್ ಮಾಡಿರ್ತೀರಿ :-)

7. ಜಗಳ ಆಡೋವಾಗೆಲ್ಲ ನಿಮ್ ಗಂಡ ನೀವು ಪ್ರಪಂಚದ್ ಅತಿ ಕೆಟ್ಟ ಡ್ರೈವರ್ ಅಂತ ಆಡ್ಕೋತಾರೆ

ನೀವೊಬ್ರೇ ಅಲ್ಲ, ಯಾವ ಹೆಂಗಸಿಗೂ ಡ್ರೈವಿಂಗ್ ಕಲಿಯೋಕೆ ಆಗೋದೇ ಇಲ್ಲ, ಎಲ್ಲ ಹೆಂಗಸ್ರೂ ಖರಾಬ್ ಡ್ರೈವರ್ಸ್ ಅಂತ ಹೇಳ್ತಾನೇ ಇರ್ತಾರೆ. ಆದ್ರೆ ಅದೆಲ್ಲ ಸುಳ್ಳು, ಹೆಂಗಸ್ರು ಬಸ್ ಕೂಡಾ ಓಡಿಸ್ತಾರೆ ಅಂತ ನಿಮ್ಗೆ ಗೊತ್ತಾಗೇ ಇರುತ್ತೆ.

ಒಟ್ನಲ್ಲಿ ಡ್ರೈವಿಂಗ್ ಪೂರ್ತಿ ಕಲಿತ್ರೂ ಕಲೀದೇ ಇದ್ರೂ, ಗಂಡನಿಂದ ಏನಾದ್ರೂ ಕಲಿಯೋದಂತೂ ತುಂಬಾ ಕಷ್ಟ ಅನ್ನೋ ಪಾಠ ಕಲ್ತಿರ್ತೀರಿ. ಹೌದಲ್ವ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ಕೆಟ್ಟ ಅಭ್ಯಾಸ ನಿಲ್ಲಿಸೋದಕ್ಕಿಂತ ಒಂದು ಒಳ್ಳೆ ಅಭ್ಯಾಸ ಶುರು ಮಾಡ್ಕೊಳ್ಳೊದು ಸುಲಭ ಯಾಕೆ ತಿಳ್ಕೊಳಿ

ಕೆಟ್ಟ ಅಭ್ಯಾಸ ತಾನೇ ನಿಂತೋಗತ್ತೆ :-)

ಕಿಟ್ಕಿ ನೋಡಿದ್ರೆ ಅವಕಾಶಗಳು ಕೈ ಬೀಸಿ ಕರೀತಾ ಇವೆ ಅನ್ಸತ್ತೆ , ಬಾಗಿಲು ಮುಚ್ಚಿದ್ರೆ ಒಳ್ಗಡೆಯಿಂದ ಲಾಕ್ ಆಗಿಲ್ಲ ಅನ್ನೋ ಆತ್ಮವಿಶ್ವಾಸ ಪುಟಿದೇಳತ್ತೆ , ಗಡಿಯಾರ ನೋಡ್ತಾ ಇದ್ರೆ ಸಮಯ ಅತ್ಯಮೂಲ್ಯ ಅನ್ಸತ್ತೆ , ಫ್ಯಾನ್ ನೋಡಿದ್ರೆ ಪ್ರತಿ ಗಾಳಿಯು ನಮ್ಮ ಉಸಿರಾಟಕ್ಕೆ ಸಹಾಯ ಮಾಡ್ತಾ ಇದೆಯಲ್ಲ ಅನ್ಸತ್ತೆ  ಆದ್ರೆ ಬೆಡ್ ನೋಡಿದ್ರೆ ಮಲ್ಗಬೇಕು ಅನ್ಸತಾ ಅಲ್ವಾ ? ಎನ್ ಮಾಡ್ಲಿ  ಮಲಗ್ಲಾ ? ಇದೊಂದೇ ಅಲ್ಲ ಇನ್ನೂ ಕೆಳ್ಗೆ ಹೋಗ್ನೋಡಿ. 

ಉದಾಹರಣೆ ಒಂದು :  "ನಾನ್ ಎಷ್ಟ್ ಸಲ ಬಡ್ಕೊಂಡಿದ್ದೀನಿ , ಅವ್ರ ಮನೇಲ್ ಹೋಗಿ ಊರಿಂದೆಲ್ಲಾ ವಿಷ್ಯ ಮನೆಗೆ ತಗೊಂಡ್ ಬಂದ್ , ನನ್ ಜೊತೆ ಮಾತಾಡ್ಬೇಡ್ ಅಂತ . ನಂದೇ ನಂಗೆ ಜಾಸ್ತಿಯಾಗಿದೆ  . ಅದ್ರಲ್ಲಿ ಇದೊಂದು"

ಉದಾಹರಣೆ ಎರಡು :    " ಪುಣ್ಯಾತ್ಮ ಕರೆಂಟ್ ಬಿಲ್ಲ್ ಕಟ್ಟೋದು ನಾವೇ . ಸ್ನಾನ ಮಾಡಿದ್ಮೇಲೆ  ಆ ಗೀಸರ್ ಆಫ್ ಮಾಡೋಕೆ ನಿಂಗೆ ನೆನಪಿರಲ್ವಾ. ಕಳೆದ ತಿಂಗಳಿನ ಬಿಲ್ಲನ್ನ ಇನ್ನೂ ಕಟ್ಟಿಲ್ಲ ಅಲ್ವಾ ನೀನು  " 

ಉದಾಹರಣೆ ಮೂರು : " ನಾನ್ ಎನ್ ಹೇಳಿದ್ದೀನಿ ಅಂತ ನಿಂಗ್  ನೆನಪಿದೆಯಾ ? ಕೆಲ್ಸ ಮಾಡೋವಾಗ ಮೊಬೈಲನ್ನ ಬಳ್ಸಬಾರ್ದಂತ ಹೇಳಿದ್ದಿನಿ ತಾನೆ" 

ಉದಾಹರಣೆ ನಾಲ್ಕು : " ಯಾವಾಗ್ ನೋಡಿದ್ರೂ ಟಿ ವಿ ನೋಡ್ತಾ ಇರ್ತೀಯಾ ಮಾಡ್ಲಿಕ್ಕೆ ಬೇರೆ ಎನೂ ಕೆಲ್ಸ ಇಲ್ವಾ ನಿಂಗೆ " 

ಹೀಗೆ ಸೇರ್ಸತಾ ಹೋದ್ರೆ ಇವತ್ತಿಗೆ ಮುಗೀಯಲ್ಲಾರಿ ಇದು. ದಿನನಿತ್ಯ ನಾವ್ ಮಾಡೋ ಈ ಕೆಲ್ಸಗಳು ನಮ್ಗೆ ತಪ್ಪು ಅನ್ಸಲ್ಲ. ಆದ್ರೆ ಬೇರೆಯವ್ರಿಗೆ ಕೆಟ್ಟ್ ಅಭ್ಯಾಸ ಅನ್ಸಬಿಡತ್ತೆ. ನಾನ್ ಮಾಡಿದ್ದೇ ಸರಿ , ನಾನ್ ಹೇಳಿದ್ದೇ ಸರಿಯಂತ ವಾದ ಶುರುವಾದ್ರೆ ಸಂಬಂಧಗಳು ಚೆನ್ನಾಗಿರಲ್ಲ. ಹಾಗಂತ ಈ ಕೆಟ್ಟ್ ಅಭ್ಯಾಸಗಳನ್ನ ಬಿಡೋದು ಅಷ್ಟು ಸುಲಭ ಇದೆಯಾ ಅಂತ ನೀವ್ ಕೇಳ್ಬಹುದು. ಸುಲಭ ಇಲ್ಲಾಂತ ನಮ್ಗೂ ಗೊತ್ತು ಕಣ್ರೀ. ಕೆಟ್ಟ್ ಅಭ್ಯಾಸಗಳನ್ನ ಬಿಡೋದಕ್ಕಿಂತ ಹೊಸ್ದಾಗಿರೋ  ಒಂದು ಒಳ್ಳೆ ಅಭ್ಯಾಸವನ್ನ ರೂಢಿಸ್ಕೊಂಡ್ರೆ ತನ್ನಿಂದ ತಾನೇ ಆ ಕೆಟ್ಟ್ ಅಭ್ಯಾಸ ಕಮ್ಮಿಯಾಗಬಹುದಲ್ವಾ ? ನೀವೇಷ್ಟೇ ತಿಪ್ಪರಲಾಗಾ ಹಾಕಿ ಕೆಟ್ಟ್ ಅಭ್ಯಾಸಾನ ಕಮ್ಮಿ ಮಾಡ್ಕೊಳ್ತೀನಿ ಅಂದಷ್ಟು ಜಾಸ್ತಿನೇ ಆಗತ್ತೆ.

https://i0.wp.com/www.loyaldetermined.com/wp-content/uploads/2016/09/mastering-bad-habbits-2.jpg?ssl=1

ನಮ್ಗೆ ಯಾವ್ದು ಖುಷಿ ಕೊಡತ್ತೋ ಅದನ್ನೇ ನಾವು ಪದೇ ಪದೇ ಮಾಡ್ತಾ ಇರ್ತೇವೆ 

ಬೇಜಾರಾದಾಗಲೆಲ್ಲ ಬಾರಿಗೆ ಹೋಗಿ ಕುಡಿಯೋದ್ರಿಬಹುದು , ಬೇಕರಿ ಮತ್ತೆ ಸಿಹಿ ಪದಾರ್ಥಗಳನ್ನ ಜಾಸ್ತಿನೇ ತಿನ್ನೋದು , ಟಿ ವಿ ಮುಂದೆ ಜಾಸ್ತಿ ಕೂತ್ಕೊಳ್ಳೋದು , ಮೊಬೈಲ್ನಲ್ಲಿ ಗೇಮ್ ಆಡ್ತಾ ಇರೋದು ಇದ್ರಿಂದೆಲ್ಲಾ ಡೋಪಮೈನ್ ಹಾರ್ಮೋನ್ ಬಿಡುಗಡೆಯಾಗತ್ತೆ. ಈ ಡೋಪಮೈನ್ ಹಾರ್ಮೋನ್ ನಮ್ ಮನಸ್ಸಿಗೆ ಖುಷಿ ಕೊಡೋ ಹಾರ್ಮೋನ್. ಮನುಷ್ಯನಿಗೆ ಅದ್ರಿಂದ ಖುಷಿ ಸಿಗತ್ತೆ ಅಂದ್ಮೇಲೆ , ಅದು ಕೆಟ್ಟದ್ದು ಅದ್ನ ಬಿಟ್ಟ್ ಬಿಡು ಅಂತ ಯಾರೇ ಹೇಳಿದ್ರೂ ಹೇಗ್ ತಾನೇ ಬಿಟ್ಬಿಡೋಕೆ ಸಾಧ್ಯ. ಆಫೀಸ್ ಕೆಲ್ಸ ಎಲ್ಲಾ ಮುಗಿದ್ಮೇಲೆ ಸ್ವಲ್ಪ ವರ್ಕೌಟ್ ಮಾಡ್ಬೇಕು ಅಂತ ಮನ್ಸಾದ್ರೆ , ಟಿ ವಿ ನೋಡಿದ್ ತಕ್ಷಣ ನಾಳೆ ಮಾಡಿದ್ರಾಯ್ತು ಬಿಡು ಅಂತ ಹೇಳಲ್ವಾ ? 70 ಪ್ರತಿಶತ ಸಿಗ್ರೇಟ್ ಸೇದೋರು ಹೇಳೋದ್ ಒಂದೇ ಡಯ್ಲಾಗ್ " ಬಿಡ್ಬೇಕಂತ ನಾನು ತುಂಬಾನೇ ಪ್ರಯತ್ನ ಪಡ್ತೇನೆ ಆದ್ರೆ ಆಗ್ತಾ ಇಲ್ಲ " 

http://www.thechangeblog.com/wp-content/uploads/2010/12/change-bad-habits.jpg
 

ಅದ್ಕೆ ನಿಮ್ ಕೆಟ್ಟ್ ಅಭ್ಯಾಸ ಹಾಗೇ ಇರ್ಲಿ ಸ್ವಲ್ಪದಿನದ ಮಟ್ಟಿಗೆ ಅದ್ರ ಜೊತೆ ಒಂದಿಷ್ಟು ಒಳ್ಳೆ ಅಭ್ಯಾಸಗಳನ್ನ ಸೇರ್ಸಕೊಳ್ಳಿ. ಹೇಗ್ ಸೇರ್ಸಕ್ಕೊಳ್ಳೋದು ಅಂದ್ರಾ ಕೆಳ್ಗಡೆ ಒದಿ. 

1) ನಿಮ್ಮನ್ನ ನೀವು ಕೆಟ್ಟದಾಗಿ ಕಲ್ಪನೆ ಮಾಡ್ಕೊಳ್ಳೊದ್ನ ಕಮ್ಮಿ ಮಾಡ್ಕೊಳ್ಳಿ

ನನಗೆ ಈ ತರದ ಕೆಟ್ಟ್ ಅಭ್ಯಾಸಗಳಿವೆ ಅದ್ನ ನಾನೇದ್ರೂ ಮಾಡಿ ಇವತ್ತೇ ನಿಲ್ಸಬೇಕು. ಬೇರೆಯವ್ರಿಗೆ ಹೋಲಿಸಿ ನೋಡಿದ್ರೆ ಬೇಡ ಬಿಡಿ ನಂಗೆ ತುಂಬಾನೇ ಕೆಟ್ಟ್ ಅಭ್ಯಾಸಗಳಿವೆ. ಈ ತರದ ಮಾತುಗಳು ನಿಮ್ಮನ್ನ ಋಣಾತ್ಮಕ ಚಿಂತನೆಗಳಿಗೆ ದಾರಿ ಮಾಡ್ಕೊಡತ್ತೆ. ಇದ್ರಿಂದ ನೀವು ಎನೂ ಪ್ರಯೋಜನಕ್ಕೆ ಇಲ್ಲಾ ಅನ್ನೋದೇ ಜಾಸ್ತಿಯಾಗಿ ನಿಮ್ಗೆ ಕೇಳತ್ತೆ ಹೊರ್ತು ನಾನ್ ಎನ್ ಬೇಕಾದ್ರೂ ಮಾಡಬಲ್ಲೆ ಅನ್ನೋ ಆತ್ಮ ವಿಶ್ವಾಸ ಬರಲ್ಲಾರೀ. ಅದ್ಕೆ ಇವತ್ತಿನಿಂದಾನೇ ಇದ್ನ ನಿಲ್ಸಿಬಿಡಿ ಆಯ್ತಾ.

ನಿಮ್ ತಪ್ಪುಗಳನ್ನ ನೋಡ್ಕಂಡು ನೀವು ನಗಾಡ್ತಿರಿ ಅಂದ್ರೆ ನಿಮ್ಗೆ ಎನನಬೇಕು ನೀವೆ ಹೇಳಿ. ಕೆಟ್ಟ್ ಅಭ್ಯಾಸವನ್ನ ನಿಲ್ಸಿತೀನಿ ಅಂದಾಗ ನಾನ್ ಮಾಡ್ತಾ ಇರೋದು ನಿಜವಾಗ್ಲೂ ಕೆಟ್ಟದ್ದಾ ಅನ್ನೋ ಮಾತು ನಿಮ್ಮಲ್ಲೇ ಬರತ್ತೆ. ಈ ಮಾತು ಬಂತಂದ್ರೆ ಸಾಕು ನಿಮ್ಗಿರೋ ಅಭ್ಯಾಸದ ಬಗ್ಗೆ ಸಾವಿರಾರು ಒಳ್ಳೆಯ ಕಾರಣಗಳು ಹುಟ್ಕೊಳ್ತವೆ. ಉದಾಹರಣೆಗೆ : ನೀವು ಊಟ ಮಾಡೋಕ್ಕಿಂತ ಮುಂಚೆ ಒಂದ್ 90 ಹಾಕಿ ಮಲ್ಗಬೇಕು ಅಂತಿದ್ರೆ ನಾಳೆಯಿಂದ ನೀವೆ ಹೇಳ್ತಿರಿ " ನಾನ್ ನಾಳೆಯಿಂದ ಇದ್ನ ಬಿಡ್ಬೇಕು ಅಂತ " ಆದ್ರೆ ನಾಳೆ ಅದೇ ಸಮಯಕ್ಕೆ ನಿಮ್ಗೆ ತಡ್ಕೊಳ್ಳೋಕ್ ಆಗಲ್ಲ 90 ಬಿದ್ದೇ ಬೀಳತ್ತೆ. ಅದ್ರ ಬದಲು ಈ ವಾರ 60 ಮುಂದಿನ ವಾರ 30 ಅಂತ ಶುರು ಹಚ್ಕೊಂಡ್ರೆ ಒಂದಲ್ಲ ಒಂದಿನ ಬಿಡ್ಬಹುದು ತಾನೇ ? 

http://2.bp.blogspot.com/-0Saek6evfBg/UChcURRbBJI/AAAAAAAABWs/09EoxjNfDB8/s1600/feeling-guilty.jpg
 

2) ಯೋಚನೆಯ ದಾರಿಯನ್ನ ಬದಲಾಯಿಸಿ 

ಯಾವಾಗ ನೀವು ಹೊಸದಾದ ಅಭ್ಯಾಸವನ್ನ ಶುರು ಮಾಡ್ಕೊಳ್ತಿರೋ ಆ ಅಭ್ಯಾಸ ಯಾವ್ದೇ ಕಾರಣಕ್ಕೂ ದೈಹಿಕ ಹಾಗೂ ಮಾನಸಿಕವಾಗಿ ನಿಮ್ಗೆ ತೊಂದ್ರೆ ಕೊಡ್ಬಾರ್ದು. ನೀವು ನಿಮ್ಮ ಹೊಸ ಅಭ್ಯಾಸದಿಂದ ಖುಷಿಯಾಗಿರಬೇಕೇ ಹೊರತು ಕಷ್ಟ ಪಟ್ಟವರ ತರ ಅಲ್ಲ. ಹೊಸದಾದ ಅಭ್ಯಾಸವನ್ನ ಮಾಡೋದಕ್ಕಿಂತ ಮುಂಚೆ ಅಥ್ವಾ ಕೆಟ್ಟ್ ಅಭ್ಯಾಸವನ್ನ ಕಂಡುಹಿಡಿಯೋದಕ್ಕಿಂತ ಮುಂಚೆ ನೀವು ಒಬ್ಬ ಪತ್ತೇದಾರಿ ಇಲ್ಲಾ ವಿಜ್ನಾನಿ ತರ ಯೋಚ್ನೆ ಮಾಡ್ಬೇಕು. ಇದು ಸ್ವಲ್ಪ ಕಷ್ಟ್ ಅನ್ಸಿದ್ರೂ ಆದ್ರೆ ದೊಡ್ಡ್  ಸಂಗ್ತಿ ಅಲ್ಲ ಬಿಡಿ. 

ಒಂದೇ ಒಂದ್ಸಲ ಯೋಚ್ನೆ ಮಾಡಿ . ಆ ನಿಮ್ ಕೆಟ್ಟ್ ಅಭ್ಯಾಸ ನಿಮ್ಗೆ ಹೇಗ್ ಶುರುವಾಯ್ತು ಅಂತ ಕಂಡುಹಿಡೀರಿ. ಕಂಡುಹಿಡಿದ್ಮೇಲೆ , ನೀವು ಅದ್ಕೆ ಅಷ್ಟು ಅಂಟ್ಕೊಂಡಿರ್ಲಿಕ್ಕೆ ಕಾರಣ ಯಾವ್ದು ಅಂತ ಕಂಡುಹೀಡಿರಿ. ಉದಾಹರಣೆಗೆ ಸುಮಾರು ವರ್ಷದಿಂದ ನೀವು ಬ್ರೆಡ್ ಜಾಮೇ ನಿಮ್ ಬೆಳಿಗ್ಗೆ ತಿಂಡಿಯಾಗಿದ್ರೆ ಒಂದ್ಸಲ ಯೋಚ್ನೆ ಮಾಡಿ. ಒಂದೋ ನಿಮ್ಗೆ ಬೆಳಿಗ್ಗೆ ಎಳಕ್ಕೆ ಕಷ್ಟ್ ಆಗ್ತಾ ಇರ್ಬಹುದು ಇಲ್ಲ ಒಳ್ಳೆ ರೀತಿಯ ತಿಂಡಿಯನ್ನ ತಯಾರ್ ಮಾಡ್ಲಿಕ್ಕೆ ಸೋಂಬೇರಿತನ ಇರಬಹುದು ಅಲ್ವಾ . ಈವಾಗ ನೀವ್ ಎನ್ ಮಾಡ್ಬೇಕಂದ್ರೆ  ಒಂದ್ ಕೈ  ನೋಡೆ ಬಿಡೋಣ " ದಿನ ದಿನ ಬೇರೆ ಬೇರೆ ತಿಂಡಿ ತಯಾರ್ ಮಾಡೋಕೆ ನಿಮ್ ಮನ್ಸನ್ನ ತಯಾರ್ ಮಾಡ್ಕೊಳ್ಳಿ. ಬೆಳಿಗ್ಗೆ ತಿನ್ಬೇಕಲ್ಲಾ ಅಂತ ಮಾಡ್ಬೇಡಿ ಎನಾದ್ರೂ ಕಲಿಯೋಣ ಅಂತ ಶುರು ಹಚ್ಕೊಳ್ಳಿ.  ನೆನಪಿರ್ಲಿ ನಿಮ್ಮ ಹೊಸ ಅಭ್ಯಾಸ ಮೊದ್ಲಿರೋ ಅಭ್ಯಾಸದಷ್ಟೇ ಖುಷಿಕೊಡ್ಬೇಕು ಅಷ್ಟೇ. 

http://images5.fanpop.com/image/photos/29100000/Be-Different-think-different-29142411-900-600.jpg
ಯಾವಾಗ ಹೊಸ ಅಭ್ಯಾಸವೂ ನಿಮ್ಗೆ ಅಷ್ಟೇ ಸಮಧಾನ ಕೊಡತ್ತೋ ಅಲ್ಲಿಂದಾನೇ ನಿಮ್ಗೆ ಗೊತ್ತೇ ಇಲ್ಲದಾಗೆ ನೀವು ಬದಲಾಗ್ತೀರಿ. ಬದಲಾವಣೆ ಜಗದ ನಿಯಮ ಅಂತ ಶ್ರೀ ಕೃಷ್ಣ ಹೇಳಿಲ್ವಾ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: