ಜಗತ್ತಲ್ಲಿರೋ ಈ 10 ನಾಯಿಗಳನ್ನ ಕೊಂಡ್ಕೊಳ್ಳೋಕೆ ನಾವು ಭಾಳ ಶ್ರೀಮಂತರಾಗಿರ್ಬೇಕು

ಎಲ್ ಐ ಸಿ ಪಾಲಿಸಿಗೂ ಇಷ್ಟ್ ಹಣ ಕೊಟ್ಟಿರಲ್ಲ!

ಮನುಷ್ಯನನ್ನ ನಂಬೋ ಒಂದು ಪ್ರಾಣಿಯಂತೇನಾದ್ರೂ ಇದ್ರೆ ನಾಯಿಗೆ ಅದ್ರಲ್ಲಿ ಮೊದಲ ಸ್ಥಾನ ಸಿಗತ್ತೆ. ಹಾಗೇ ಮನುಷ್ಯ ಎನಾದ್ರೂ ಪ್ರಾಣಿಗಳಲ್ಲಿ ನಂಬಿಕೆ ಇಡ್ಬೇಕು ಅಂತ ಬಯ್ಸಿದ್ರೆ ಅವ್ನು ಮೊದ್ಲು ಆಯ್ಕೆ ಮಾಡ್ಕೊಳ್ಳೋದೇ ನಾಯಿಯನ್ನ. ಒಂದ್ ಬಿಸ್ಕಿಟ್ ಹಾಕಿ ಸಾಕು , ಜೀವ್ನ ಪೂರ್ತಿ ನಿಮ್ ಬೆನ್ನ ಹಿಂದೆಯೇ ಬರತ್ತೆ .

ನಮ್ ಜೀವ್ನದಲ್ಲಿ ಎಷ್ಟೋ ಸಲ ನಮ್ ಗುಣಕ್ಕೆ ನಾಯಿಯನ್ನ ಹೋಲಿಸ್ತಾರೆ. ಹುಡ್ಗ ಹುಡ್ಗಿಯನ್ನ ಅತಿಯಾಗಿ ಪ್ರೀತಿಸ್ತಾ ಇದ್ರೆ ಜನ ಹೇಳ್ತಾರೆ  "ನೋಡೋ ಅವ್ನ , ಹ್ಯಾಗೆ ನಾಯಿ ತರ ಅವ್ಳ ಬೆನ್ನಿಂದೆ ಹೋಗ್ತಾ ಇದ್ದಾನೆ ಅಂತ" . ಕೆಟ್ಟದ್ ಮಾಡೀದ್ರೆ ಅವ್ನದ್ದು ನಾಯಿ ಬುದ್ದಿಯಂತಾರೆ. ಜೋರಾಗಿ ಮಾತಾಡ್ತಾ ಇದ್ರೆ ನಾಯಿ ತರ ಬೊಗಳ್ಬೇಡ  ಅಂತಾರೆ. ಬರೇ ಮಾತಾಡಿ ಎನೂ ಕಿಸಿದೇ ಇದ್ರೆ ಬೊಗ್ಳೋ ನಾಯಿ ಕಚ್ಚೋದಿಲ್ಲ ಅಂತಾರೆ. ಇಷ್ಟೆಲ್ಲಾ ಉಗ್ಸಕೊಂಡ್ರು ನಾವ್ ಮತ್ತೆ ಮತ್ತೆ ಅದ್ನೇ ಮಾಡ್ತಿವಿ ಅಲ್ವಾ. ನಾಯಿ ಕೂಡಾ ಹಾಗೇ ನೀವ್ ಒಂದ್ಸಲ ಊಟ ಹಾಕಿ ಮತ್ತೆ ಜೀವಮಾನವಿಡೀ ಹಾಕ್ದೇ ಇದ್ರೂ ಪರ್ವಾಗಿಲ್ಲ ಅದು ಆ ಋಣವನ್ನ ತೀರ್ಸತ್ತೆ.

ಈಗೀನ ಕಾಲದಲ್ಲಿ ಮನುಷ್ಯರಿಗೆ ಕೊಡೋ ಬೆಲೆ ಕಮ್ಮಿಯಾಗಿ ನಾಯಿಗೆ ಕೊಡೋ ಬೆಲೇನೇ ಜಾಸ್ತಿಯಾಗಿದೆ. ನಾವ್ ನಾಯಿ ಸಾಕ್ಬೇಕು ಅನ್ನೋ ಪ್ರಶ್ನೆ ಬಂದಾಗ ಯಾವ್ ನಾಯಿಯನ್ನ ತಂದ್ರೆ ಒಳ್ಳೆದಿರತ್ತೆ ಅನ್ನೋ ಪ್ರಶ್ನೆ ಮತ್ತೆ ಮತ್ತೆ ಬರತ್ತೆ. ಸ್ವಲ್ಪಾನೇ ದುಡ್ ಕೊಟ್ಟು ನಾಯಿಯನ್ನ ತಂದು  ಸಾಕ್ ಬಿಡ್ತೀವಿ. ಆದ್ರೆ ಜಗತ್ತಲ್ಲಿ ಯಾವ ನಾಯಿಗೆ ಬೆಲೆ ಹೆಚ್ಚು ಅನ್ನೋದು ತಿಳ್ಕೊಳ್ಬೇಕಾದ್ರೆ ಮುಂದೆ ಒದಿ. 

1) ಐರಿಷ್ ವೂಲ್ಫ್ ಹೌಂಡ್ಗೆ ಒಂದು ಲಕ್ಷದಿಂದ ಒಂದು ಲಕ್ಷದ ಅರವತ್ತು ಸಾವಿರ ದವರೆಗೂ ಜನ ಕೊಡ್ತಾರಂತೆ 

ಈ ನಾಯಿ ಪಕ್ಕಾ ಸ್ಪರ್ಧೆಗಂತಾನೇ ಹುಟ್ದಂಗಿದೆ. ಯಾಕಂದ್ರೆ ಒಬ್ಬ ಅಥ್ಲೀಟ್ಗೆ ಇರ್ಬೇಕಾದ ಎಲ್ಲ ಲಕ್ಷಣ್ಗಳು ಈ ನಾಯಿಯಲ್ಲಿದೆಯಂತೆ. ಹಾಗೇ ನಾಯಕತ್ವಕ್ಕೆ ಈ ನಾಯಿ ಹೇಳ್ ಮಾಡ್ಸದಂಗಿದೆ. ಅದ್ಕೆ ಐರಿಷ್ನಲ್ಲಿ ಒಂದ್ ಗಾದೆ ಮಾತಿದೆ " ಮುದ್  ಮಾಡಿ ಮಾತಾಡ್ಸಿದ್ರೆ ಈ ನಾಯಿ ಮ್ರದು ಸ್ವಭಾವವಂತೆ , ಕೆಣಕಿದ್ರೆ ಭಯಂಕರ ಕೋಪ ಬರತ್ತಂತೆ " 

2) ಸಲುಕಿಸ್ ನಾಯಿಯನ್ನ ಹೆಚ್ಚೆಂದ್ರೆ ಒಂದುವರೆ ಲಕ್ಷ ಕೊಟ್ಟು ತಗೊಳ್ ಬಹುದಂತೆ

ಈ ನಾಯಿಯನ್ನ ನೀವು ಸೌಂದರ್ಯ ಸ್ಪರ್ಧೆಗೆ ಕರ್ಕೊಂಡ್ ಹೋಗ್ಬಹುದು. ಹಾಗೇ ತುಂಬಾನೇ ಸಹನೆಯಿರೋ ನಾಯಿಯಿದು. ಸಹನೆಯಿದ್ರು ಒಡೋದಕ್ಕೆ ಭೇಟೆಯಾಡುದಕ್ಕೆ ಇದೇನ್ ಕಮ್ಮಿಯಿಲ್ಲ. ಇದ್ರ ಮೈಮೇಲಿನ ಕೂದ್ಲು ತುಂಬಾನೇ ನಯವಾಗಿದೆಯಂತೆ ಹಾಗೆ ಬೇರೆ ಬೇರೆ ಬಣ್ಣದಲ್ಲಿ ಈ ನಾಯಿ ಸಿಗತ್ತಂತೆ. 


 

3) ಅಕಿಟಾಸ್ ನಾಯಿಯ ಬೆಲೆ ಶುರುವಾಗೋದೆ ಒಂದು ಲಕ್ಷದಿಂದ ಮೂರು ಲಕ್ಷದವರೆಗೆ ಇರತ್ತಂತೆ

ಈ ನಾಯಿಯ ಹುಟ್ಟು ಜಪಾನಿನಲ್ಲಾಗಿದ್ರೂ ಇವತ್ತಿನ ದಿನದಲ್ಲಿ ಎಲ್ಲಾ ಕಡೆ ಸಿಗತ್ತೆ. ಈ ನಾಯಿಯನ್ನ ಥೆರಪಿ ನಾಯಿಯಾಗಿ ಬಳಸ್ತಾರೆ. ಇದ್ರ ಮೈಮೇಲಿನ ಕೂದ್ಲು ಇದಕ್ಕೆ ಯಾವ್ದೇ ವಾತಾವರಣದಲ್ಲಿ ಹೊಂದ್ಕೊಳ್ಳೋ ಹಾಗೆ ಸಹಾಯ ಮಾಡತ್ತೆ. ಸಮಯ ಬಂದ್ರೆ ಈ ನಾಯಿ ಆಕ್ರಮಣಕಾರಿಯಾಗಿ ತನ್ನ ಧೈರ್ಯ ತೋರ್ಸತ್ತೆ. 

4)  ಫೆರೋ ಹೌಂಡ್ ನಾಯಿಗೆ ಎರಡು ಲಕ್ಷದಿಂದ ನಾಲ್ಕು ಕಾಲು ಲಕ್ಷದವರೆಗೆ ಬೆಲೆಯಿದೆಯಂತೆ

ಈ ನಾಯಿಯನ್ನ ರಾಜಮನೆತನದ ನಾಯಿಯಂತ ಕರೀತಾರೆ. ಈ ನಾಯಿ ತುಂಬಾನೇ ಶಕ್ತಿಯುತ  ಹಾಗೇ ಒಡೋದ್ರಲ್ಲಿ ಇದ್ನ ಮೀರ್ಸೋ ನಾಯಿ ಇಲ್ಲ. ಪ್ರಾಮಾಣಿಕತನಕ್ಕೆ ಬೇಟೆಯಾಡುದಕ್ಕೆ ಗೂಢಾಚಾರಕ್ಕೆ ಇದ್ನ ಬಳ್ಸತಾರೆ. ಇದ್ರ ಇನ್ನೊಂದ ವಿಶೇಷವಾದ ಗುಣ ಅಂದ್ರೆ ನಾಚಿಕೆ. ನಾಚ್ಕೊಂಡಾಗ ಇದ್ರ ಮೂಗಿನಿಂದ ಕಿವಿಯವರೆಗೂ ಕೆಂಪಾಗ್ ಬಿಡತ್ತಂತೆ. 


 

5) ಟಿಬೇಟಿಯನ್ ಮ್ಯಾಸ್ಟಿಫ್ ನಾಯಿಯನ್ನ ಸಾಕೋಕೆ ಬರೇ ಹಣ ಸುರಿದ್ರೆ ಸಾಕಾಗಲ್ಲ ಗುಂಡಿಗೇನೂ ಬೇಕಂತೆ 

ಇದ್ನ ಜನ್ರು ಒಂದುಮುಕ್ಕಾಲು ಲಕ್ಷದಿಂದ ನಾಲ್ಕುವರೆ ಲಕ್ಷದವರೆಗೂ ಕೊಟ್ಟು ತಗೊಳ್ತಾರಂತೆ. ಇದ್ರ ಗಾಢವಾದ ಕೂದಲು ಎಂತವರನ್ನ ಕೂಡಾ ಒಂದ್ಸಲ ಹೃದಯ ಬಡಿತ ಜೋರಾಗಿ ಹೊಡ್ಕೊಳ್ಳೋ ಹಾಗೆ ಮಾಡ್ಸೋದಂತೂ ಖಚಿತ. ಇದೇ ತಳಿಯಲ್ಲಿ ಕೆಲವು ನಾಯಿಗಳು ಸೌಮ್ಯ ಸ್ವಭಾವದಾಗಿದ್ರೆ ಇನ್ ಕೆಲವು ನಾಯಿಗಳು ಸಿಂಹ ಎದ್ರುಗಿದ್ರು ಅವಕ್ಕೇ ಲೆಕ್ಕಕ್ಕೆ ಇಲ್ಲ. ಆದ್ರೂ ಈ ನಾಯಿಯ ಕೂದಲಿನಿಂದಾನೇ ಪ್ರಾಮಾಣಿಕ ನಾಯಿಯನ್ನ ಪಟ್ಟದಿಂದ ದೂರ ಉಳಿಯತ್ತೆ. 


 

6) ರಾಟ್ ವೀಲರ್ ನಾಯಿಯನ್ನ ಜನ್ರು ಒಂದು ಕಾಲು ಲಕ್ಷದಿಂದ ಐದು ಕಾಲು ಲಕ್ಷದವರೆಗೆ ಕೊಟ್ಟು ಥೆರಪಿ ನಾಯಿಯಾಗಿ ಬಳಸ್ತಾರಂತೆ 

ರಾಟ್ ವೀಲರ್ ನಾಯಿ ತುಂಬಾನೇ ಶಕ್ತಿಯುತವಾಗಿರೋ ನಾಯಿಯಂತೆ. ಅಷ್ಟೆ ಅಲ್ದೇ ಈ ನಾಯಿಯನ್ನ ಸಕಲಕಲಾವಲ್ಲಭ ನಾಯಿಯಂತಾನೇ ಕರೀತಾರೆ. ಯಾಕಂದ್ರೆ ಜನ ಈ ನಾಯಿಯನ್ನ ಥೆರಪಿ ನಾಯಿಯಾಗಿ , ರಕ್ಷಣೆಗಾಗಿ , ಸಹಾಯಕ್ಕಾಗಿ , ಪೋಲಿಸ್ ನಾಯಿಯಾಗಿ , ಸ್ಪರ್ಧೆಗಾಗಿ , ಶಕ್ತಿ ಪ್ರದರ್ಶನಕ್ಕಾಗಿ ಬಳಸ್ತಾರೆ. ಎಲ್ಲಾದ್ರೂ ಆಕ್ರಮಣಕಾರಿಯಾಗಿ ಬೆಳ್ಸದ್ರೆ ಮುಂದೊಂದು ದಿನ ನಿಮ್ಮನ್ನೇ ಸಾಯ್ಸಿದ್ರು ಆಶ್ಚರ್ಯ ಪಡ್ಬೇಕಾಗಿಲ್ಲ ಹಾಗಂತ ಪ್ರಾಮಾಣಿಕ ನಾಯಿಯಂತಲ್ಲ, ಪ್ರಾಮಾಣಿಕವೇ ಆದ್ರೆ ಬೆಳ್ಸೋ ವಿಧಾನ ಸರಿಯಾಗಿರ್ಬೇಕು ಅಷ್ಟೇ. 


 

7) ಲೋಚೆನ್ ನಾಯಿಯ ತಳಿಗೆ ಜನ ಎರಡುವರೆ ಲಕ್ಷದಿಂದ ಐದು ಕಾಲು ಲಕ್ಷ ಸುರೀಲಿಕ್ಕೆ ತಯಾರಾಗಿರ್ತಾರಂತೆ

ಲೋಚೆನ್ ಅಂದ್ರೆ ಜರ್ಮನಿ ಭಾಷೆಯಲ್ಲಿ ಸಣ್ಣ ಸಿಂಹ ಅಂತೆ. ಇದ್ರ ಕೂದ್ಲು ಮತ್ತು ಮುಖದ ಆಕಾರ ಸಿಂಹವನ್ನೇ ಹೋಲ್ತಾ ಇರೋದ್ರಿಂದ ಬಹುಷ ಹಾಗೇ ಕರ್ದಿರಬೇಕು. ಈ ನಾಯಿ ತುಂಬಾನೇ ಬುದ್ದಿವಂತ ನಾಯಿಯಂತೆ. ಬುದ್ದಿಯ ಜೊತ್ಗೆ ಮ್ರದು ಸ್ವಭಾವ ಕೂಡಾ ಇದಕ್ಕಿದೆ. 


 

8) ಚೌ ಚೌ ನಾಯಿಗೆ ಜನ ಎರಡು ಲಕ್ಷದಿಂದ ಐದುವರೆ ಲಕ್ಷದವರೆಗೂ ಕೊಡಕ್ಕೇ ತಯಾರಾಗ್ತಿರಂತೆ 

ಗಟ್ಟಿಮುಟ್ಟಾಗಿರೋ ಈ ನಾಯಿಯನ್ನ ಕೆಲ್ಸದ ನಾಯಿಯಾಗಿ ಮನೇಲಿ ಬಳ್ಸಕೊಳ್ಳೋದೇ ಜಾಸ್ತಿಯಂತೆ. ಬರೇ ಕೆಲ್ಸಕ್ಕೆ ಅಲ್ಲ. ಇದ್ನ ನೋಡ್ತಾ ಇದ್ರೆ ಸಿಂಹವನ್ನ ನೋಡ್ದಂಗಿರತ್ತೆ.ಇದ್ರ ಮೈಮೇಲಿನ ಕೂದ್ಲು , ಕಪ್ಪು ಮತ್ತೆ ನೀಲಿ  ನಾಲಿಗೆ ನೋಡುಗರನ್ನ ಆಕರ್ಷಿಸುದ್ರಲ್ಲಿ ಎರಡ್ ಮಾತಿಲ್ಲ. 


 

9) ಇಂಗ್ಲೀಷ್ ಬುಲ್ ಡಾಗಗೇ ಅಮೇರಿಕಾದ ಜನರು ಒಂದು ಮುಕ್ಕಾಲ್ ಲಕ್ಷದಿಂದ ಆರು ಲಕ್ಷದವರೆಗೂ ಕೊಡ್ಲಿಕ್ಕೆ ತಯಾರಾಗ್ತಾರಂತೆ

ಇಳಿಬಿದ್ದಿರೋ ಈ ನಾಯಿಯ ದವಡೆಯನ್ನ ನೋಡ್ತಾ ಇದ್ರೆ ಎಂತವರಿಗಾದ್ರೂ ಪರ್ವಾಗಿಲ್ಲ ನಾನು ಹಣವನ್ನ ಕೂಡಾಕಿ ತಗೊಂಡೆ ತಗೊಳ್ತಿನಿ ಅಂತಾರೆ. ತುಂಬಾನೇ ಮ್ರದು ಸ್ವಭಾವವನ್ನ ಹೊಂದಿರೋ ಈ ನಾಯಿ ನಿಮ್ ಮೂಡಿಗೆ ತಕ್ಕಂತೆ ಪ್ರತಿಕ್ರಿಯಿಸತ್ತೆ. ಒಂದೊಳ್ಳೆ ಕಂಪ್ನಿ ಅಂತ ಹೇಳ್ಬಹುದ್.


 

10) ಸಮಾಯ್ಡ್ ತಳಿಯ ನಾಯಿಗಳ ಬೆಲೆ ಎರಡುವರೆ ಲಕ್ಷದಿಂದ ಆರಂಭವಾಗಿ ಎಳುವರೆ ಲಕ್ಷದವರೆಗೂ ಇರತ್ತಂತೆ

ಇಷ್ಟ್ ದುಡ್ ಕೊಟ್ ಎನ್ ಪ್ರಯೋಜನ ಅಂತ ಕೇಳಿದ್ರಾ ? ಈ ನಾಯಿಯನ್ನ  ನೋಡಿದ್ರೇನೆ ಗೊತ್ತಾಗತ್ತೆ ಎಷ್ಟ್ ಚಂದ ಇದೆಯಲ್ವಾ. ಬರೇ ಚಂದ ಅಲ್ಲ ಅತಿ ಚುರುಕುಬುದ್ದಿಯ ನಾಯಿಯಂತೆ. ನೀವ್ ಹೇಳಿದ್ದನ್ನ ಚಾಚೂ ತಪ್ಪದೇ ಆದಷ್ಟು ಬೇಗನೇ ಪಾಲಿಸೋ ನಾಯಿ ಇದು. ಒಂದ್ ಲೆಕ್ಕದಲ್ಲಿ ಹೇಳ್ಬೇಕಂದ್ರೆ ನಿಮ್ಗಿಂತ ಜಾಸ್ತಿನೇ ಇದ್ಕೆ ಬುದ್ದಿಯಿದೆ.  ಅದ್ಕೆ ಇಷ್ಟ್ ರೂಪಾಯಿ ಕೊಡ್ಬೇಕು. ಅದ್ರ ಮೈಮೇಲಿರೋ ಕೂದಲಿನಿಂದ ಯಾವ್ದೇ ವಾತಾವರಣದಲ್ಲಿ ಬೇಕಾದ್ರೂ ಬದುಕಬಹುದಂತೆ. 


ನಿಮ್ಗೆ ಯಾವ್ ನಾಯಿಯನ್ನ ತಗೊಳ್ಬೇಕಂತ ಅನ್ಸತಾ ಇದೆ ? ಕಮೆಂಟ್ ಮಾಡಿ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ಶಾಲಿಗ್ ಹ್ವಾಪತಿಗೆ ನಮ್ ಟೀಚರ್ ಹೇಳ್ತಿದ್ದ ಆ 13 ನೆಗಿ ತರ್ಸು ಮಾತ್ ಕೇಂಡಿರಿಯಾ

ಇನ್ನೊಂದ್ ಜನ್ಮ ಎತ್ರು ಮರುಕೆ ಆಗುದೇ ಇಲ್ಲ

ನೀವ್ ನಂಬ್ತೀರೋ ಬಿಡ್ತೀರೋ ನಂಗ್ ಗೊತ್ತಿಲ್ಲ. ನಾನೊಂದ್ ದಿನ ಶಾಲಿಗ್ವಾಪತಿಗೆ ಎಂತ ಆಯ್ತ್ ಗೊತ್ತಾ ?

ಪದ್ದಕ್ಕನ್  ಮನೆ ಹಾಡಿಯಾಗೆ ಗ್ವಾಯ್ ಮರ್ದಾಗೆ ಗ್ವಾಯ್ ಹಣ್ ( ಗೇರು ಹಣ್ಣು) ರಾಶಗಟ್ಲೇ ಬೆಳ್ಕಂಡ್ ಇತ್ತ್. ಅದ್ನ ಕಂಡ್ ನನ್ ಬಾಯಗೆ ಜೊಲ್ಲ್ ಸುರದೋಯ್ತ್ ಮರ್ರೆ. ಅದೂ ಕೆಂಪ್ ಕೆಂಪ್ ಹಣ್ಣ್ ಕಂಡ್ರೆ ಯಾರಿಗಾದ್ರೂ ತಡ್ಕಂಬಕ್ಕಾತ್ತಾ ನೀವೇ ಹೇಳಿ?

ಆಗ ನಂಗೆ 5 ನೇ ಕ್ಲಾಸ್. ಸ್ವಲ್ಪ ಕೈ ಕೋಚ್ ಜಾಸ್ತಿ. ನಾನೆಂತ ಮಾಡ್ದೇ ಶಾಲಿ ಚೀಲ ಅಲ್ಲೇ ತೋಡಲ್ಲಿ ಬೆಚ್ಚಿ ಗ್ವಾಯ್ ಹಣ್ಣ್ ಕ್ಯೊಯುಕ್ ಶುರು ಮಾಡ್ದೇ. ಅದೇ ಗಳ್ಗಿಗೆ ಆ ಚ್ವಳಿಕೊಟ್ಟಿ ಮಾಬ್ಲಣ್ಣ ಎಲ್ಲಿದ್ದಿನೋ ಎನೋ ಮರ್ರೆ , ನನ್ನನ್ನ ಕಂಡಂದ್ದೇ ಕೂಗೂಕೇ ಶುರು ಮಾಡ್ದ. ಕೈಗ್ ಸಿಕ್ಕದ್ದೆಲ್ಲಾ ಬರಿಕಂಡ್ ದಾರಿ ಗೊತ್ತಾಗ್ದೇ ಶಾಲಿಬದಿಗೆ ಒಡ್ದೇ. ತೋಡಗಿದ್ದದ್ದ ಚೀಲ ಅಲ್ಲೇ ಇತ್ತ್. ಸ್ವಲ್ಪ ಹೊತ್ತಾದ್ಮೇಲೆ ವಾಪಾಸ್ ಬಂದ್ ಆ ಚೀಲ ತಗೊಂಡೆ.

ಶಾಲಿ ಮುಟ್ಟೋವತಿಗೆ ಲೇಟ್ ಆಯ್ತ್ ಮರೆ. ನಮ್ ಕ್ಲಾಸ್ ಟೀಚರ್ ವಿನ್ನಿ ಫೆರ್ನಾಂಡಿಸ್ ಅಂದೇಳಿ. ಅವ್ರ ಕೇಂಡ್ರ್ , ಎಂತಕ್ ತಡ ಆದ್ ಅಂದೇಳಿ. ನಾನ್ ಅದ್ಕೆ ಹೇಳ್ದೇ , ಅಲ್ಯಾರೋ ಪದ್ದಕ್ಕನ್  ಮನೆ ಹಾಡಿಯಾಗ್  ಗ್ವಾಯ್ ಹಣ್ಣ್ ಕದೀತಾ ಇದ್ರ್ ನಾನ್ ಪದ್ದಕ್ಕನ್ ಮನೀಗೆ ಹೋಯ್ ಪದ್ದಕನಿಗೆ ಹೇಳಿ ಬರೋದ್ರೋಳಗೆ ಇಷ್ಟ್ ಹೊತ್ತಾಯ್ತು. ಅದ್ಕೆ ನಂಗೆ ಅವ್ರು ನಾಲ್ಕ್ ಗೋಯ್ ಹಣ್ಣ್ ಕೊಟ್ಟಿರ್. ಇದ್ರಲ್ ಒಂದ್ ನಿಮ್ಗೂ ಕೊಡೂಕ್ ಹೇಳಿರ್ . ತಗಣಿ ಟೀಚರ್ ಅಂದೆ. ಆವತ್ ನನ್ನನ್ನ ಕ್ಲಾಸಗೆ ಎಲ್ಲಾ ಮಕ್ಳೆದ್ರಿಗೆ ಹೊಗ್ಳದ್ದೇ ಹೊಗ್ಳದ್ದೆ. ಕೆಲವ್ ಹೆಣ್ಮಕ್ಕಳಂತೂ ಸಾಯಂಕಾಲ್ ಆಗುವರೆಗೂ ನನ್ ಕಂಡ್ ಒಂಥರಾ ನೆಗಿಯಾಡ್ತಾ ಇದ್ವು.

ಇದು ನನ್ ಜೀವ್ನದಲ್ಲಿ ನಡ್ದಿರೋ ಸತ್ಯ ವಿಷ್ಯ. ಇದೇ ನಮ್ನಿ ನೀವು ಕ್ಲಾಸಿಗೆ ತಡ್ ಆಯ್ ಹೋದಾಗ ನಿಮ್ ಟೀಚರ್ ಇದೇ ಪ್ರಶ್ನೆ ಕೇಂತ್ರ ಅಲಾ. ಇದೇ ನಮ್ನಿ ನಮ್ ಟೀಚರ್ ಇನ್ನೂ ಬ್ಯಾರ್ ಬ್ಯಾರೇ ತರದ್ ಪ್ರಶ್ನೆ ಕೇಳ್ತ್ರ ಅದ್ ಯಾವ್ದಲ್ಲ ಅಂದೇಳಿ ನೋಡ್ಕನ್ ಬಪ್ಪ ಬನ್ನಿ. 

1) ಎಂತಕ್ಕೆ ಲೇಟ್ ಆಗಿದ್ದಾ?

ನಾನ್ ಆಗ್ಲೇ ಹೇಳ್ದೇ ಅಲ್ವಾ . ಪದ್ದಕ್ಕನ ಮನಿಗೆ ಹೋಗಿ ಗ್ವಾಯ್ ಹಣ್ಣ್ ಕದೀತಾ ಇದ್ರ್ ಅಂದೇಳಿ. 

wordzz.com

2) ನಿಂಗೆ ತಿಂಡಿ ತಿಂಬುಕೆ ನೆನಪಿರತ್ತ್. ಪುಸ್ತಕ ಶಾಲಿಗೆ ತರ್ಕಂದೇಳೀ ನೆನಪಿರುದಿಲ್ಯಾ?

ಟೀಚರ್ ಮನೆಗೆಲಸ ಕೊಟ್ ನಾವ್ ಮಾಡ್ಕಂಡ್ ಹೋಗ್ದೇ ಇದ್ರೆ ಅವ್ರ್  ಹೀಂಗಿಂದೆಲ್ಲಾ ಹೇಳ್ದೇ ಪೂಜಿ ಮಾಡ್ತಾರಾ 

img.youtube.com

3) ಎಯ್ ಮಾತಾಡುಕಾಗ ಅಂದೇಳಿ ಹೇಳದ್ ಕೆಮಿ ಕೇಂತಿಲ್ಯಾ?

ಅಂತ ದೊಡ್ ಜೀವ್ ಇರೋ ಟೀಚರ್ ಕಣ್ಮುಂದೆ ಇದ್ರೂ ಈ ಮಕ್ಳ್ ಮಾತಾಡಿ ಬೊಬ್ಬೆ ಹಾಕ್ತಾರಲ್ಲ ಅವ್ರ ಬಯ್ದೇ ಇನ್ನೇನ್ ಮಾಡ್ತರಾ!

i.ytimg.com

4) ಯಾರಾದ್ರೂ ಗುಸುಗುಸು ಅಂದೇಳಿ ಮಾತಾಡ್ಕ್ ಆಮೇಲೆ ಎಂತ್ ಮಾಡ್ತೆ ಅಂದೇಳಿ ನಂಗ್ ಗುತ್ತಿಲ್ಯ. ಸೂಜಿ ಬಿದ್ರು ಶಬ್ದ ಆಗ್ಬಾರ್ದು ಹಾಂಗ್ ಸುಮ್ನೆ ಕೂತ್ಕೊಳ್ಬೇಕು  

d2c7959ezy50r5.cloudfront.net

5) ದಿನ ಅವ್ನತ್ರ ಪೆನ್ ಪೆನ್ಸಿಲ್ ಕೇಂಬುಕೆ ನಿಂದ್ ಎಲ್ಲೋಯ್ತಾ 

ಟೀಚರ್ ನನ್ನತ್ರ ಇದ್ದದ್ದ ತುಂಡಾಯ್ತ್ ಅದ್ಕೆ ಅವ್ನತ್ರ ಕೇಂಡದ್. ನಾಳಿಂದ ನಾನ್ ತುಂಡ್ ಮಾಡ್ಕಂತಿಲ ಟೀಚರ್

thecagegilded.files.wordpress.com

6) ಬೆಂಚಲ್ಲಿ ಒಂದೇ ಹುಡ್ಗ ಒಂದೇ ಹುಡ್ಗಿ ಕೂತ್ಕಣಕ್ 

ಪ್ರಶ್ನೆಗೆ ಉತ್ರ ಸರ್ಯಾಗ್ ಹೇಳ್ದೇ ಇದ್ರೆ ಇದೇ ಪನಿಷ್ಮೆಂಟ್. ಕಂಡರ್ ಎಲ್ಲ ನಗಾಡಿ ನಗಾಡಿ ಇಡಿ ದಿನ್ ಚಾಳ್ಸತಾ ಇರ್ಲಿ ಅಂದೇಳಿ. 

livemint.com

7) ಅಫೀಸ್ ರೂಮಿಗೆ ಹೋಗಿ ನನ್ ಟೇಬಲ್ ಮೇಲಿದ್ದದ ಆ ಪೇಪರೆಲ್ಲಾ ತಂದ್ ಇವ್ರಿಗೆಲ್ಲಾ ಕೊಡ್

indiasudar.files.wordpress.com

8) ಅಲ್ಲಾ ಎಷ್ಟ್ ದಿನ ಬೇಕಾ ನಿಂಗ್ ? ಎರಡ್ ವಾರ್ ಆಯ್ತ್ ಒಂದ್ ಪ್ರಾಜೆಕ್ಟ್ ವರ್ಕ್ ಕೊಟ್ . ಮನೇಲೆಂತ ಮರಣಕಟ್ಟಿ ಮಾಡ್ತಾ ಆಯ್ಕಂಡೆಯಾ ಹ್ಯಾಂಗೆ , ಇಲ್ಲಾ ಊರತುಂಬಾ ತಿರ್ಗತಾ ಇದ್ದೆ ಅಲಾ 

im.rediff.com

9) ಶಾಲಿ ಗೋಡೆ ಮೇಲೆ ಗಾದೆ ಮಾತ್, ನುಡಿಮುತ್ತನ್ನೆಲ್ಲಾ ಒಂದ್ ಚಾರ್ಟಲ್ಲಿ ಬರ್ದ್ ಹಾಕ್. ಯಾರ್ ಈ ಕೆಲ್ಸ ಮಾಡ್ತರಿ?

ಟೀಚರ್ ನಾನ್ ಮಾಡ್ತೆ. ಆರೆ , ಎಲ್ರೂ ಚಾರ್ಟ್ ತಕಂಬಕ್ ದುಡ್ ಕೊಡ್ಕ್. ಅದ್ ಸರಿಯಾಗ್ ಹೇಳಿ ಟೀಚರ್

i.ytimg.com

10) ಅಲ್ಲಾ ದಿನ ಇಡಿ ಉಚ್ಚೆ ಹೊಯ್ಯುಕೆ  ಹೋತಿಯಲ್ಲ ಉಚ್ಚಿ ಚೀಲ್ ಹರ್ದೋಯ್ತನ ನಿಂದ್ ?

ಇಲ್ಲ ಟೀಚರ್ ತಟುಕ್ ತಟುಕ್ ಬಂದಂಗಾತ್ ಅದ್ಕೆ 

merinews.com

11) ನನ್ನತ್ರ ಮಾತಾಡುದಾದ್ರೆ ಇಂಗ್ಲೀಷಲ್ಲೇ ಮಾತಾಡಕ್, ನಾನ್ ನಿಮ್ ಇಂಗ್ಲೀಷ್ ಟೀಚರ್ ಗುತ್ತಾಯ್ತಲ್ಲ!

ಇವ್ರದೊಂದ್ ದೊಡ್ಡ್ ರಗ್ಳೆ ಮರೆ. ಬತ್ತಿಲ್ಲ ಅಂದ್ರೂ ಬಿಡುದಿಲ್ಲ ಮರೆ.

2.bp.blogspot.com

12) ಮೊನ್ನೆ ಪೇರೆಂಟ್ಸ್ ಮೀಟಿಂಗೆ ನಿನ್ ಅಬ್ಬಿ ಎಂತಕ್ ಬಂದಿಲ್ಲ , ಅವ್ರ ಪೋನ್ ನಂಬರ್ ಕೊಡ್ ನಾನ್ ಮಾದಿ ಕೇಂತೆ ಎಂತಾಯ್ತ್ ಅಂದೇಳಿ

ಟೀಚರ್ ಪೋನ್ ಮಾಡುದು ಬೇಡ್ . ಅವ್ರ ನಂಗೆ ಸಮ್ ಬೈತ್ರ . ಇನ್ಮುಂದೆ ಚಂದ ಒದತ್ತೆ ಬಿಡಿ ಟೀಚರ್. 

images.indianexpress.com

13) ನಾನ್ ಕೇಂಡದಕ್ಕೆ ಉತ್ರ ಕೊಡುಕ ಆತಿಲ್ಲ ನಿಂಗೆ . ಹುಣ್ಸಿಹಣ್ಣ್ ಜಾಸ್ತಿ ಇತ್ ನಿಂಗೆ . ಹೆಡ್ ಮಾಸ್ಟ್ರ ಆಫೀಸ ಎದ್ರಿಗೆ ನಿಂತ್ಕೊ ಹೋಗ್ 

ಗಂಡಿಂದ್ ಕತಿ ಪಡ್ಚ . ಗಳಪಾಸ್ ಮಾಡಿ ಕೊಟ್ರ ಅಲಾ.  ಹಿಪ್ಳಕಟ್ಟಿ ಹ್ವಾಪ್ದ್ ಗ್ಯಾರಂಟಿ. 

rarapop.files.wordpress.com
ಹ್ಯಾಂಗಿತ್ತ ನಮ್ ಟೀಚರ್ ಡಯ್ಲಾಗ್. ಆಗಳೀಕಿ ನಡ್ದಿದಲ ಸತ್ರೂ ಮರುಕಾತಿಲ್ಲ ಅಲ್ದೇ. ಒಂಥರ ಹೇಸ್ಕಿ ಮಾಡ್ರು ಚಂದ್ವೇ ಅಲ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: