ಜನ ನಿಮ್ನ ಇನ್ನಷ್ಟು ಜಾಸ್ತಿ ಇಷ್ಟ ಪಡಬೇಕಾದ್ರೆ ಆದಷ್ಟು ಬೇಗ ನಿಮ್ಮ ನಡವಳಿಕೇಲಿ ಈ 9 ಬದಲಾವಣೆ ಮಾಡ್ಕೊಳಿ

ಕಡಿಮೆ ಮಾತಾಡಿ, ಹೆಚ್ಚು ಕೇಳಿಸ್ಕೊಳಿ

ಕೆಲವರು ಏನೇ ಮಾಡಿದರೂ ಜನ ಅವರನ್ನ ಇಷ್ಟಪಡಲ್ಲ. ಇನ್ನೂ ಕೆಲವರು ಏನೇ ಮಾಡಿದರೂ ತುಂಬಾನೇ ಇಷ್ಟಪಡ್ತಾರೆ. ಯಾಕೆ? ಅಂತೋರಿಗೆ ಕೆಲವೊಂದು ಉಪಾಯಗಳು ಗೊತ್ತಿರ್ತವೆ. ನಿಮಗೂ ಅಷ್ಟೇ ಇಲ್ಲಿರೋಂತ 9 ಉಪಾಯ ಗೊತ್ತಿದ್ರೆ ಜನ ನಿಮ್ಮನ್ನ ತುಂಬಾ ಇಷ್ಟ ಪಡ್ತಾರೆ. ಆ ಉಪಾಯಗಳನ್ನ ಒಂದೊಂದಾಗಿ ನೋಡ್ತಾ ಹೋಗೋಣ ಬನ್ನಿ.

1. ಬೇರೆಯವರಿಗೆ ಆದಷ್ಟು ಸಹಾಯ ಮಾಡಿ, ಆದರೆ ಅದಕ್ಕೆ ಪ್ರತಿಯಾಗಿ ಏನನ್ನೂ ನಿರೀಕ್ಷಿಸಕ್ಕೆ ಹೋಗಬೇಡಿ

ಜನರಿಗೆ ತುಂಬ ಇಷ್ಟ ಆಗೋರು ಪ್ರತಿಯೊಂದರಲ್ಲಿ ಗೆಲ್ಲಬೇಕು ಅಂತ ಬಯಸಲ್ಲ. ಬೇರೆಯರಿಗೆ ಜಾಸ್ತಿ ಸಹಾಯ ಮಾಡ್ತಾರೆ. ಆದರೆ ಅವರಿಂದ ಏನನ್ನೂ ನಿರೀಕ್ಷಿಸಲ್ಲ. ತಪ್ಪು, ಸೋಲು ಒಪ್ಪಿಕೊಳ್ಳೋದ್ರಲ್ಲಿ ಯಾವುದೇ ಹಿಂಜರಿಕೆ ಇರಲ್ಲ. ನಾನು ಇಂತದ್ದರಲ್ಲಿ ವೀಕ್ ಇದ್ದೀನಿ ಎಂದು ಮನಸ್ಸು ಬಿಚ್ಚಿ ಮಾತಾಡ್ತಾರೆ. ಈ ರೀತಿ ಎಲ್ಲರೂ ಮಾಡಕ್ಕಾಗಲ್ಲ ಅಲ್ವಾ? ಅದಕ್ಕೆ ಅಂತೋರನ್ನ ಜನ ಇಷ್ಟಪಡೋದು. "ನಿನ್ನನ್ನ ಕಂಡ್ರೆ ನನಗೆ ಅಸೂಯೆ" ಅಥವಾ "ನನಗಿದು ಗೊತ್ತಾಗ್ತಿಲ್ಲ ಸ್ವಲ್ಪ ಹೇಳ್ಕೊಡ್ರಪ್ಪಾ" ಅಂತ ಕೇಳ್ತಾರೆ. ಯಾಕಂದ್ರೆ ಜನ ಪ್ರಾಮಾಣಿಕತೆ ಮತ್ತೆ ನಿಜವಾದ ಭಾವನೆಗಳನ್ನು ಗೌರವಿಸ್ತಾರೆ ಅಂತ ಅವರಿಗೆ ಚೆನ್ನಾಗಿ ಗೊತ್ತು.

2. ಕಣ್ಣಲ್ಲಿ ಕಣ್ಣಿಟ್ಟು ಮಾತಾಡಿ; ಈ ಕಲೆ ಗೊತ್ತಿಲ್ಲದಿದ್ದರೆ ಕಲಿತುಕೊಳ್ಳಿ

ಜನ ಯಾರ್ನ ಇಷ್ಟ ಪಡ್ತಾರೋ ಅವರು ಮುಖ್ಯವಾಗಿ ಕಣ್ಣಲ್ಲಿ ಕಣ್ಣಿಟ್ಟು ನೋಡ್ತಾ ಮಾತಾಡ್ತಾರೆ - ಬೇಕಾದರೆ ಗಮನಿಸಿ. ನೀವು ಒಂದು ಸ್ಮೈಲ್ ಕೊಟ್ರೆ ಅವರೂ ಅಷ್ಟೇ ನಗ್ತಾರೆ. ಹುಬ್ಬುಗಂಟಿಕ್ಕಿ ಮಾತಾಡಲ್ಲ. ಹೇಳಿದ್ದನ್ನೇ ಮತ್ತೆ ಮತ್ತೆ ಹೇಳಕ್ಕೋಗಲ್ಲ. ಬೇರೆಯವರು ಹೇಳಿದ್ದನ್ನ ಕೇಳಿಸ್ಕೋತಾರೆ. ಅವರ ಭಾವನೆಗಳನ್ನ ಅರ್ಥ ಮಾಡ್ಕೋತಾರೆ. ಏನ್ ಮಾತಾಡ್ತಿದ್ದಾರೆ ಅನ್ನೋದ್ರ ಕಡೆಗೆ ಅವರ ಗಮನ ಇರುತ್ತೆ. ಇದ್ರಿಂದ ಅವರು ಕೊಡೋಂತ ಸಲಹೆ ಸೂಚನೆ ನಂಬಲಿಕ್ಕೆ ಸಾಧ್ಯವಾಗುತ್ತೆ. ಆಗ ಆಟೋಮ್ಯಾಟಿಕ್ ಆಗಿ ಜನ ಇಷ್ಟಪಡ್ತಾರೆ.

3. ಬೋರ್ ಆಗೋಹಂಗೆ ಮಾತಾಡಬೇಡಿ, ನಿಮ್ಮ ಮಾತಲ್ಲಿ ಕುತೂಹಲ ಇರಬೇಕು

ಕೆಲವರು ಮಾತಾಡಬೇಕಾದರೆ ಮುಖ ಬೇರೆ ಕಡೆ ತಿರುಗಿಸೋದು, ನನಗೆ ಒಪ್ಪಿಗೆ ಇಲ್ಲಾಂತ ಭಾವನೆಗಳನ್ನ ತೋರಿಸ್ಕೋತಿರ್ತಾರೆ. ಆದರೆ ಎಲ್ಲರಿಗೂ ಇಷ್ಟ ಆಗೋಂತವ್ರು ಈ ರೀತಿ ಮಾಡಲ್ಲ. ಸಂಭಾಷಣೆ, ಮಾತು ಆದಷ್ಟು ಆಸಕ್ತಿಕರವಾಗಿರುವಂತೆ ನೋಡ್ಕೋತಾರೆ. ಇದರಿಂದ ಉಂಟಾಗುವ ಪಾಸಿಟೀವ್ ಎಮೋಷನ್ಸ್ ಇಷ್ಟಪಡೋ ಹಂಗೆ ಮಾಡುತ್ತೆ.

4. ಆದಾಗ ಬೇರೆಯೋರ್ನ ಮುಟ್ಟಿ ಮಾತಾಡಿಸಿ; ಇದ್ರಿಂದ ನಂಬಿಕೆ ವಿಶ್ವಾಸ ಬೆಳೆಯುತ್ತೆ

ಯಾರನ್ನೇ ಆಗಲಿ ಮುಟ್ಟಿ ಮಾತಾಡಿಸೋದ್ರಿಂದ ಇನ್ನಷ್ಟು ಆತ್ಮೀಯತೆ ಬೆಳೆಯುತ್ತೆ. ಮಾತಿಗಿಂತ ಸ್ಪರ್ಶ ಮುಖ್ಯವಾಗುತ್ತೆ. ಸ್ಪರ್ಶಿಸೋದ್ರಿಂದ ಮಾತಲ್ಲಿ ಹೇಳಲಿಕ್ಕಾಗದಂತ 12 ತರದ ಭಾವನೆಗಳು ನಮ್ಮಲ್ಲಿ ಉಂಟಾಗುತ್ತವಂತೆ. ಜನ ಯಾರ್ನ ತುಂಬ ಇಷ್ಟ ಪಡ್ತಾರೋ‌ ಅವರು ಯಾರನ್ನೇ ಆಗಲಿ ಹಾರೈಸಬೇಕಾದ್ರೆ ಬೆನ್ನು ತಟ್ತಾರೆ ಅಥವಾ ಕೈಕುಲುಕ್ತಾರೆ. ಸಂದರ್ಭ ನೋಡ್ಕೊಂಡು ಪ್ರತಿಕ್ರಿಯಿಸ್ತಾರೆ. ಇದ್ರಿಂದ ನಂಬಿಕೆ, ವಿಶ್ವಾಸ ಬೆಳೆಯುತ್ತೆ.

5. ನಿಮ್ಮ ಮಾತಿಗೆ ತಕ್ಕಂಗೆ ಮುಖದ ಭಾವನೆಗಳಿರಲಿ; ಆಗ ಜನ ನುಮ್ಮನ್ನ ಇಷ್ಟಪಡ್ತಾರೆ

ಜನ ಯಾರ್ನ ತುಂಬ ಇಷ್ಟ ಪಡ್ತಾರೋ ಅವರು ಮುಖಭಾವನೆಗಳನ್ನ ವ್ಯಕ್ತಪಡಿಸೋದ್ರಲ್ಲಿ ಎಕ್ಸ್‌ಪರ್ಟ್ ಆಗಿರ್ತಾರೆ. ಅದೆಷ್ಟೇ ಬೋರಿಂಗ್ ಕಥೆಯಾದರೂ ಆಸಕ್ತಿ ಕೆರಳಿಸುವಂತೆ ಹೇಳುವ ಕಲೆ ಇವರಿಗಿರುತ್ತೆ. ಕಥೆ, ಮಾತಿಗೆ ತಕ್ಕಂತೆ ಮುಖದ ಭಾವ ಬದಲಾಗುತ್ತಿರುತ್ತೆ. ಎದುರುಗಡೆ ಇರೋರಿಗೆ ಅವರ ಮಾತಿನ ಶೈಲಿ ಮುಖದ ಭಾವನೆಗಳಿಂದ ಇಷ್ಟ ಆಗ್ತಾರೆ.

6. ಅಯ್ಯೋ ನಾನು ಸಿಲ್ಲಿಯಾಗಿ ಕಾಣ್ತೀನಿ ಅನ್ನೋಂತ ಭಯ ಬಿಟ್ಟು ಎಲ್ಲರ ಜೊತೆ ಬೆರೀರಿ

ಜನ ಯಾರ್ನ ತುಂಬ ಇಷ್ಟ ಪಡ್ತಾರೋ ಅವರು ಅಯ್ಯೋ ನಾನು ಒಡ್ಡೊಡ್ದಾಗಿ ಕಾಣ್ತೀನಿ. ಸಿಲ್ಲಿಯಾಗಿ ಕಾಣ್ತಿದ್ದೀನಿ. ಯಾರು ಏನು ಅಂದ್ಕೋತಾರೋ ಏನೋ ಅಂತ ಭಯ ಬೀಳಲ್ಲ. ಯಾಕಂದ್ರೆ ಜನಕ್ಕೆ ಗೊತ್ತು ಯಾರು ಏನು ಅಂತ. ಒಂದು ವೇಳೆ ಆ ತರದ್ದೆಲ್ಲಾ ಮುಚ್ಚಿಟ್ರೆ ಜನ ನೋಡಿ ನಗೋ ಹಂಗೆ ಆಗುತ್ತೆ ಅಷ್ಟೆ.

7. ತುಂಬ ಪ್ರಶ್ನೆ ಕೇಳಿ; ಕೇಳಕ್ಕೆ ಹಿಂಜರೀಬೇಡಿ

ಜನ ಯಾರ್ನ ತುಂಬ ಇಷ್ಟ ಪಡ್ತಾರೋ ಅವರು ಪ್ರಶ್ನೆ ಕೇಳೋದರಲ್ಲಿ ನಿಪುಣರಾಗಿರ್ತಾರೆ. ಪ್ರಶ್ನೆಗಳನ್ನ ಜಾಸ್ತಿ ಕೇಳಿ ನಿಮ್ಮ ಬಗ್ಗೆ ಹೆಚ್ಚಾಗಿ ಮಾತಾಡ್ತಾರೆ. ಪ್ರಶ್ನೆ ಕೇಳೆಕ್ಕೆ ಯಾವುದೇ ಹಿಂಜರಿಕೆ ಇರಲ್ಲ. ಎಲ್ಲವನ್ನೂ ಓಪನ್ ಆಗಿ ಹೇಳ್ಕೋತಾರೆ. ಇದ್ರಿಂದ ನೀವು ಏನ್ ಯೋಚ್ನೆ ಮಾಡ್ತಿದ್ದೀರಿ ಅನ್ನೋದ್ರ ಜೊತೆಗೆ ಇಬ್ಬಾ ನಡುವೆ ಒಳ್ಳೆ ನಂಬಿಕೆ ಬರೋ ತರಹ ಮಾಡುತ್ತೆ. ಯಾವುದೇ ವ್ಯಕ್ತಿಯನ್ನ ಮೀಟ್ ಆದಾಗ ಜಾಸ್ತಿ ಪ್ರಶ್ನೆ ಕೇಳ್ತಾರೆ. ಅವರಲ್ಲೂ ಇರೋಂತ ಕಾಮನ್ ಗುಣ, ವಿಷಯಾನ ಹೇಳ್ಕೋತಾರೆ. 

8. ಒಂದೇ ಒಂದ್ಸಲ ಮೀಟ್ ಆಗಿದ್ರೂ ಹೆಸರನ್ನ ಮಾತ್ರ ಮರೀಬೇಡಿ

ಜನ ಯಾರ್ನ ಇಷ್ಟ ಪಡ್ತಾರೋ ಅವರು ಚೆನ್ನಾಗಿ ಹೆಸರು ನೆನಪಲ್ಲಿಟ್ಕೋತಾರೆ. ಅಷ್ಟೇ ಅಲ್ಲ ಸಣ್ಣಪುಟ್ಟ ಸಂಗತಿಗಳನ್ನ ಕರಾರುವಕ್ಕಾಗಿ ಹೇಳ್ತಾರೆ. ಯಾವಾಗ್ಲೋ ಒಂದ್ಸ ಮೀಟ್ ಆಗಿದ್ರೂ ಹೆಸರು ಜ್ಞಾಪಕ ಇಟ್ಕೊಂಡಿರ್ತಾರೆ. ಇದ್ರಿಂದ ಅವರನ್ನ ಇಷ್ಟಪಡೋಕೆ ಸಾಧ್ಯವಾಗುತ್ತೆ. ಮಾತುಕತೆ ಇನ್ನಷ್ಟು ಸೊಗಸಾಗಿ ಸಾಗೋ ತರಹ ಆಗುತ್ತೆ. ಎದುರುಗಡೆ ಇರೋಂತ ವ್ಯಕ್ತಿಯಲ್ಲಿ ಯಾವಾಗ್ಲೂ ಪಾಸಿಟೀವ್ ಗುಣಗಳನ್ನೇ ನೋಡ್ತಿರ್ತಾರೆ. ಅವರ ಗೆಳೆಯ, ಸಂಬಂಧಿ, ಸಾಕು ನಾಯಿ ಹೆಸರು ಜ್ಞಾಪಕ ಇಟ್ಕೊಂಡಿರ್ತಾರೆ. 

9. ಮಾತು ಕಡಿಮೆ ಮಾಡಿ ಕೇಳಿಸಿಕೊಳೋದು ಜಾಸ್ತಿ ಮಾಡಿ

ಸುಮಾರು ಮಂದಿ ಬೇರೆಯೋರು ಹೇಳೋದನ್ನ ಕೇಳಿಸ್ಕೊಳ್ಳೋದೆ ಇಲ್ಲ. ಅವರವರಿಗೆ ತೋಚಿದ್ದನ್ನ ಮಾತಾಡ್ತಿರ್ತಾರೆ. ಜನಕ್ಕೆ ಇಷ್ಟ ಆಗೋ ಅಂತಾವ್ರು ಮೊದ್ಲು ಕಿವಿಗೊಟ್ಟು ಕೇಳಿಸ್ಕೋತಾರೆ, ಅರ್ಥ ಮಾಡ್ಕೋತಾರೆ. ಆಮೇಲೆ ತಮ್ಮಲ್ಲಿನ ಕಾಮನ್ ವಿಚಾರಗಳೊಂದಿಗೆ ತಾಳೆ ಮಾಡ್ಕೊಂಡು ಮಾತಾಡ್ತಾರೆ. ಆಗ ಸಂಬಂಧಗಳು ಚೆನ್ನಾಗಿರ್ತಾರೆ ಅಲ್ವಾ? ಜನ ಇಷ್ಟ ಪಡೋಂತ ವ್ಯಕ್ತಿಗಳು ಮಾಡೋದು ಇದಿನ್ನೇ.

 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ಕೆಟ್ಟ ಅಭ್ಯಾಸ ನಿಲ್ಲಿಸೋದಕ್ಕಿಂತ ಒಂದು ಒಳ್ಳೆ ಅಭ್ಯಾಸ ಶುರು ಮಾಡ್ಕೊಳ್ಳೊದು ಸುಲಭ ಯಾಕೆ ತಿಳ್ಕೊಳಿ

ಕೆಟ್ಟ ಅಭ್ಯಾಸ ತಾನೇ ನಿಂತೋಗತ್ತೆ :-)

ಕಿಟ್ಕಿ ನೋಡಿದ್ರೆ ಅವಕಾಶಗಳು ಕೈ ಬೀಸಿ ಕರೀತಾ ಇವೆ ಅನ್ಸತ್ತೆ , ಬಾಗಿಲು ಮುಚ್ಚಿದ್ರೆ ಒಳ್ಗಡೆಯಿಂದ ಲಾಕ್ ಆಗಿಲ್ಲ ಅನ್ನೋ ಆತ್ಮವಿಶ್ವಾಸ ಪುಟಿದೇಳತ್ತೆ , ಗಡಿಯಾರ ನೋಡ್ತಾ ಇದ್ರೆ ಸಮಯ ಅತ್ಯಮೂಲ್ಯ ಅನ್ಸತ್ತೆ , ಫ್ಯಾನ್ ನೋಡಿದ್ರೆ ಪ್ರತಿ ಗಾಳಿಯು ನಮ್ಮ ಉಸಿರಾಟಕ್ಕೆ ಸಹಾಯ ಮಾಡ್ತಾ ಇದೆಯಲ್ಲ ಅನ್ಸತ್ತೆ  ಆದ್ರೆ ಬೆಡ್ ನೋಡಿದ್ರೆ ಮಲ್ಗಬೇಕು ಅನ್ಸತಾ ಅಲ್ವಾ ? ಎನ್ ಮಾಡ್ಲಿ  ಮಲಗ್ಲಾ ? ಇದೊಂದೇ ಅಲ್ಲ ಇನ್ನೂ ಕೆಳ್ಗೆ ಹೋಗ್ನೋಡಿ. 

ಉದಾಹರಣೆ ಒಂದು :  "ನಾನ್ ಎಷ್ಟ್ ಸಲ ಬಡ್ಕೊಂಡಿದ್ದೀನಿ , ಅವ್ರ ಮನೇಲ್ ಹೋಗಿ ಊರಿಂದೆಲ್ಲಾ ವಿಷ್ಯ ಮನೆಗೆ ತಗೊಂಡ್ ಬಂದ್ , ನನ್ ಜೊತೆ ಮಾತಾಡ್ಬೇಡ್ ಅಂತ . ನಂದೇ ನಂಗೆ ಜಾಸ್ತಿಯಾಗಿದೆ  . ಅದ್ರಲ್ಲಿ ಇದೊಂದು"

ಉದಾಹರಣೆ ಎರಡು :    " ಪುಣ್ಯಾತ್ಮ ಕರೆಂಟ್ ಬಿಲ್ಲ್ ಕಟ್ಟೋದು ನಾವೇ . ಸ್ನಾನ ಮಾಡಿದ್ಮೇಲೆ  ಆ ಗೀಸರ್ ಆಫ್ ಮಾಡೋಕೆ ನಿಂಗೆ ನೆನಪಿರಲ್ವಾ. ಕಳೆದ ತಿಂಗಳಿನ ಬಿಲ್ಲನ್ನ ಇನ್ನೂ ಕಟ್ಟಿಲ್ಲ ಅಲ್ವಾ ನೀನು  " 

ಉದಾಹರಣೆ ಮೂರು : " ನಾನ್ ಎನ್ ಹೇಳಿದ್ದೀನಿ ಅಂತ ನಿಂಗ್  ನೆನಪಿದೆಯಾ ? ಕೆಲ್ಸ ಮಾಡೋವಾಗ ಮೊಬೈಲನ್ನ ಬಳ್ಸಬಾರ್ದಂತ ಹೇಳಿದ್ದಿನಿ ತಾನೆ" 

ಉದಾಹರಣೆ ನಾಲ್ಕು : " ಯಾವಾಗ್ ನೋಡಿದ್ರೂ ಟಿ ವಿ ನೋಡ್ತಾ ಇರ್ತೀಯಾ ಮಾಡ್ಲಿಕ್ಕೆ ಬೇರೆ ಎನೂ ಕೆಲ್ಸ ಇಲ್ವಾ ನಿಂಗೆ " 

ಹೀಗೆ ಸೇರ್ಸತಾ ಹೋದ್ರೆ ಇವತ್ತಿಗೆ ಮುಗೀಯಲ್ಲಾರಿ ಇದು. ದಿನನಿತ್ಯ ನಾವ್ ಮಾಡೋ ಈ ಕೆಲ್ಸಗಳು ನಮ್ಗೆ ತಪ್ಪು ಅನ್ಸಲ್ಲ. ಆದ್ರೆ ಬೇರೆಯವ್ರಿಗೆ ಕೆಟ್ಟ್ ಅಭ್ಯಾಸ ಅನ್ಸಬಿಡತ್ತೆ. ನಾನ್ ಮಾಡಿದ್ದೇ ಸರಿ , ನಾನ್ ಹೇಳಿದ್ದೇ ಸರಿಯಂತ ವಾದ ಶುರುವಾದ್ರೆ ಸಂಬಂಧಗಳು ಚೆನ್ನಾಗಿರಲ್ಲ. ಹಾಗಂತ ಈ ಕೆಟ್ಟ್ ಅಭ್ಯಾಸಗಳನ್ನ ಬಿಡೋದು ಅಷ್ಟು ಸುಲಭ ಇದೆಯಾ ಅಂತ ನೀವ್ ಕೇಳ್ಬಹುದು. ಸುಲಭ ಇಲ್ಲಾಂತ ನಮ್ಗೂ ಗೊತ್ತು ಕಣ್ರೀ. ಕೆಟ್ಟ್ ಅಭ್ಯಾಸಗಳನ್ನ ಬಿಡೋದಕ್ಕಿಂತ ಹೊಸ್ದಾಗಿರೋ  ಒಂದು ಒಳ್ಳೆ ಅಭ್ಯಾಸವನ್ನ ರೂಢಿಸ್ಕೊಂಡ್ರೆ ತನ್ನಿಂದ ತಾನೇ ಆ ಕೆಟ್ಟ್ ಅಭ್ಯಾಸ ಕಮ್ಮಿಯಾಗಬಹುದಲ್ವಾ ? ನೀವೇಷ್ಟೇ ತಿಪ್ಪರಲಾಗಾ ಹಾಕಿ ಕೆಟ್ಟ್ ಅಭ್ಯಾಸಾನ ಕಮ್ಮಿ ಮಾಡ್ಕೊಳ್ತೀನಿ ಅಂದಷ್ಟು ಜಾಸ್ತಿನೇ ಆಗತ್ತೆ.

https://i0.wp.com/www.loyaldetermined.com/wp-content/uploads/2016/09/mastering-bad-habbits-2.jpg?ssl=1

ನಮ್ಗೆ ಯಾವ್ದು ಖುಷಿ ಕೊಡತ್ತೋ ಅದನ್ನೇ ನಾವು ಪದೇ ಪದೇ ಮಾಡ್ತಾ ಇರ್ತೇವೆ 

ಬೇಜಾರಾದಾಗಲೆಲ್ಲ ಬಾರಿಗೆ ಹೋಗಿ ಕುಡಿಯೋದ್ರಿಬಹುದು , ಬೇಕರಿ ಮತ್ತೆ ಸಿಹಿ ಪದಾರ್ಥಗಳನ್ನ ಜಾಸ್ತಿನೇ ತಿನ್ನೋದು , ಟಿ ವಿ ಮುಂದೆ ಜಾಸ್ತಿ ಕೂತ್ಕೊಳ್ಳೋದು , ಮೊಬೈಲ್ನಲ್ಲಿ ಗೇಮ್ ಆಡ್ತಾ ಇರೋದು ಇದ್ರಿಂದೆಲ್ಲಾ ಡೋಪಮೈನ್ ಹಾರ್ಮೋನ್ ಬಿಡುಗಡೆಯಾಗತ್ತೆ. ಈ ಡೋಪಮೈನ್ ಹಾರ್ಮೋನ್ ನಮ್ ಮನಸ್ಸಿಗೆ ಖುಷಿ ಕೊಡೋ ಹಾರ್ಮೋನ್. ಮನುಷ್ಯನಿಗೆ ಅದ್ರಿಂದ ಖುಷಿ ಸಿಗತ್ತೆ ಅಂದ್ಮೇಲೆ , ಅದು ಕೆಟ್ಟದ್ದು ಅದ್ನ ಬಿಟ್ಟ್ ಬಿಡು ಅಂತ ಯಾರೇ ಹೇಳಿದ್ರೂ ಹೇಗ್ ತಾನೇ ಬಿಟ್ಬಿಡೋಕೆ ಸಾಧ್ಯ. ಆಫೀಸ್ ಕೆಲ್ಸ ಎಲ್ಲಾ ಮುಗಿದ್ಮೇಲೆ ಸ್ವಲ್ಪ ವರ್ಕೌಟ್ ಮಾಡ್ಬೇಕು ಅಂತ ಮನ್ಸಾದ್ರೆ , ಟಿ ವಿ ನೋಡಿದ್ ತಕ್ಷಣ ನಾಳೆ ಮಾಡಿದ್ರಾಯ್ತು ಬಿಡು ಅಂತ ಹೇಳಲ್ವಾ ? 70 ಪ್ರತಿಶತ ಸಿಗ್ರೇಟ್ ಸೇದೋರು ಹೇಳೋದ್ ಒಂದೇ ಡಯ್ಲಾಗ್ " ಬಿಡ್ಬೇಕಂತ ನಾನು ತುಂಬಾನೇ ಪ್ರಯತ್ನ ಪಡ್ತೇನೆ ಆದ್ರೆ ಆಗ್ತಾ ಇಲ್ಲ " 

http://www.thechangeblog.com/wp-content/uploads/2010/12/change-bad-habits.jpg
 

ಅದ್ಕೆ ನಿಮ್ ಕೆಟ್ಟ್ ಅಭ್ಯಾಸ ಹಾಗೇ ಇರ್ಲಿ ಸ್ವಲ್ಪದಿನದ ಮಟ್ಟಿಗೆ ಅದ್ರ ಜೊತೆ ಒಂದಿಷ್ಟು ಒಳ್ಳೆ ಅಭ್ಯಾಸಗಳನ್ನ ಸೇರ್ಸಕೊಳ್ಳಿ. ಹೇಗ್ ಸೇರ್ಸಕ್ಕೊಳ್ಳೋದು ಅಂದ್ರಾ ಕೆಳ್ಗಡೆ ಒದಿ. 

1) ನಿಮ್ಮನ್ನ ನೀವು ಕೆಟ್ಟದಾಗಿ ಕಲ್ಪನೆ ಮಾಡ್ಕೊಳ್ಳೊದ್ನ ಕಮ್ಮಿ ಮಾಡ್ಕೊಳ್ಳಿ

ನನಗೆ ಈ ತರದ ಕೆಟ್ಟ್ ಅಭ್ಯಾಸಗಳಿವೆ ಅದ್ನ ನಾನೇದ್ರೂ ಮಾಡಿ ಇವತ್ತೇ ನಿಲ್ಸಬೇಕು. ಬೇರೆಯವ್ರಿಗೆ ಹೋಲಿಸಿ ನೋಡಿದ್ರೆ ಬೇಡ ಬಿಡಿ ನಂಗೆ ತುಂಬಾನೇ ಕೆಟ್ಟ್ ಅಭ್ಯಾಸಗಳಿವೆ. ಈ ತರದ ಮಾತುಗಳು ನಿಮ್ಮನ್ನ ಋಣಾತ್ಮಕ ಚಿಂತನೆಗಳಿಗೆ ದಾರಿ ಮಾಡ್ಕೊಡತ್ತೆ. ಇದ್ರಿಂದ ನೀವು ಎನೂ ಪ್ರಯೋಜನಕ್ಕೆ ಇಲ್ಲಾ ಅನ್ನೋದೇ ಜಾಸ್ತಿಯಾಗಿ ನಿಮ್ಗೆ ಕೇಳತ್ತೆ ಹೊರ್ತು ನಾನ್ ಎನ್ ಬೇಕಾದ್ರೂ ಮಾಡಬಲ್ಲೆ ಅನ್ನೋ ಆತ್ಮ ವಿಶ್ವಾಸ ಬರಲ್ಲಾರೀ. ಅದ್ಕೆ ಇವತ್ತಿನಿಂದಾನೇ ಇದ್ನ ನಿಲ್ಸಿಬಿಡಿ ಆಯ್ತಾ.

ನಿಮ್ ತಪ್ಪುಗಳನ್ನ ನೋಡ್ಕಂಡು ನೀವು ನಗಾಡ್ತಿರಿ ಅಂದ್ರೆ ನಿಮ್ಗೆ ಎನನಬೇಕು ನೀವೆ ಹೇಳಿ. ಕೆಟ್ಟ್ ಅಭ್ಯಾಸವನ್ನ ನಿಲ್ಸಿತೀನಿ ಅಂದಾಗ ನಾನ್ ಮಾಡ್ತಾ ಇರೋದು ನಿಜವಾಗ್ಲೂ ಕೆಟ್ಟದ್ದಾ ಅನ್ನೋ ಮಾತು ನಿಮ್ಮಲ್ಲೇ ಬರತ್ತೆ. ಈ ಮಾತು ಬಂತಂದ್ರೆ ಸಾಕು ನಿಮ್ಗಿರೋ ಅಭ್ಯಾಸದ ಬಗ್ಗೆ ಸಾವಿರಾರು ಒಳ್ಳೆಯ ಕಾರಣಗಳು ಹುಟ್ಕೊಳ್ತವೆ. ಉದಾಹರಣೆಗೆ : ನೀವು ಊಟ ಮಾಡೋಕ್ಕಿಂತ ಮುಂಚೆ ಒಂದ್ 90 ಹಾಕಿ ಮಲ್ಗಬೇಕು ಅಂತಿದ್ರೆ ನಾಳೆಯಿಂದ ನೀವೆ ಹೇಳ್ತಿರಿ " ನಾನ್ ನಾಳೆಯಿಂದ ಇದ್ನ ಬಿಡ್ಬೇಕು ಅಂತ " ಆದ್ರೆ ನಾಳೆ ಅದೇ ಸಮಯಕ್ಕೆ ನಿಮ್ಗೆ ತಡ್ಕೊಳ್ಳೋಕ್ ಆಗಲ್ಲ 90 ಬಿದ್ದೇ ಬೀಳತ್ತೆ. ಅದ್ರ ಬದಲು ಈ ವಾರ 60 ಮುಂದಿನ ವಾರ 30 ಅಂತ ಶುರು ಹಚ್ಕೊಂಡ್ರೆ ಒಂದಲ್ಲ ಒಂದಿನ ಬಿಡ್ಬಹುದು ತಾನೇ ? 

http://2.bp.blogspot.com/-0Saek6evfBg/UChcURRbBJI/AAAAAAAABWs/09EoxjNfDB8/s1600/feeling-guilty.jpg
 

2) ಯೋಚನೆಯ ದಾರಿಯನ್ನ ಬದಲಾಯಿಸಿ 

ಯಾವಾಗ ನೀವು ಹೊಸದಾದ ಅಭ್ಯಾಸವನ್ನ ಶುರು ಮಾಡ್ಕೊಳ್ತಿರೋ ಆ ಅಭ್ಯಾಸ ಯಾವ್ದೇ ಕಾರಣಕ್ಕೂ ದೈಹಿಕ ಹಾಗೂ ಮಾನಸಿಕವಾಗಿ ನಿಮ್ಗೆ ತೊಂದ್ರೆ ಕೊಡ್ಬಾರ್ದು. ನೀವು ನಿಮ್ಮ ಹೊಸ ಅಭ್ಯಾಸದಿಂದ ಖುಷಿಯಾಗಿರಬೇಕೇ ಹೊರತು ಕಷ್ಟ ಪಟ್ಟವರ ತರ ಅಲ್ಲ. ಹೊಸದಾದ ಅಭ್ಯಾಸವನ್ನ ಮಾಡೋದಕ್ಕಿಂತ ಮುಂಚೆ ಅಥ್ವಾ ಕೆಟ್ಟ್ ಅಭ್ಯಾಸವನ್ನ ಕಂಡುಹಿಡಿಯೋದಕ್ಕಿಂತ ಮುಂಚೆ ನೀವು ಒಬ್ಬ ಪತ್ತೇದಾರಿ ಇಲ್ಲಾ ವಿಜ್ನಾನಿ ತರ ಯೋಚ್ನೆ ಮಾಡ್ಬೇಕು. ಇದು ಸ್ವಲ್ಪ ಕಷ್ಟ್ ಅನ್ಸಿದ್ರೂ ಆದ್ರೆ ದೊಡ್ಡ್  ಸಂಗ್ತಿ ಅಲ್ಲ ಬಿಡಿ. 

ಒಂದೇ ಒಂದ್ಸಲ ಯೋಚ್ನೆ ಮಾಡಿ . ಆ ನಿಮ್ ಕೆಟ್ಟ್ ಅಭ್ಯಾಸ ನಿಮ್ಗೆ ಹೇಗ್ ಶುರುವಾಯ್ತು ಅಂತ ಕಂಡುಹಿಡೀರಿ. ಕಂಡುಹಿಡಿದ್ಮೇಲೆ , ನೀವು ಅದ್ಕೆ ಅಷ್ಟು ಅಂಟ್ಕೊಂಡಿರ್ಲಿಕ್ಕೆ ಕಾರಣ ಯಾವ್ದು ಅಂತ ಕಂಡುಹೀಡಿರಿ. ಉದಾಹರಣೆಗೆ ಸುಮಾರು ವರ್ಷದಿಂದ ನೀವು ಬ್ರೆಡ್ ಜಾಮೇ ನಿಮ್ ಬೆಳಿಗ್ಗೆ ತಿಂಡಿಯಾಗಿದ್ರೆ ಒಂದ್ಸಲ ಯೋಚ್ನೆ ಮಾಡಿ. ಒಂದೋ ನಿಮ್ಗೆ ಬೆಳಿಗ್ಗೆ ಎಳಕ್ಕೆ ಕಷ್ಟ್ ಆಗ್ತಾ ಇರ್ಬಹುದು ಇಲ್ಲ ಒಳ್ಳೆ ರೀತಿಯ ತಿಂಡಿಯನ್ನ ತಯಾರ್ ಮಾಡ್ಲಿಕ್ಕೆ ಸೋಂಬೇರಿತನ ಇರಬಹುದು ಅಲ್ವಾ . ಈವಾಗ ನೀವ್ ಎನ್ ಮಾಡ್ಬೇಕಂದ್ರೆ  ಒಂದ್ ಕೈ  ನೋಡೆ ಬಿಡೋಣ " ದಿನ ದಿನ ಬೇರೆ ಬೇರೆ ತಿಂಡಿ ತಯಾರ್ ಮಾಡೋಕೆ ನಿಮ್ ಮನ್ಸನ್ನ ತಯಾರ್ ಮಾಡ್ಕೊಳ್ಳಿ. ಬೆಳಿಗ್ಗೆ ತಿನ್ಬೇಕಲ್ಲಾ ಅಂತ ಮಾಡ್ಬೇಡಿ ಎನಾದ್ರೂ ಕಲಿಯೋಣ ಅಂತ ಶುರು ಹಚ್ಕೊಳ್ಳಿ.  ನೆನಪಿರ್ಲಿ ನಿಮ್ಮ ಹೊಸ ಅಭ್ಯಾಸ ಮೊದ್ಲಿರೋ ಅಭ್ಯಾಸದಷ್ಟೇ ಖುಷಿಕೊಡ್ಬೇಕು ಅಷ್ಟೇ. 

http://images5.fanpop.com/image/photos/29100000/Be-Different-think-different-29142411-900-600.jpg
ಯಾವಾಗ ಹೊಸ ಅಭ್ಯಾಸವೂ ನಿಮ್ಗೆ ಅಷ್ಟೇ ಸಮಧಾನ ಕೊಡತ್ತೋ ಅಲ್ಲಿಂದಾನೇ ನಿಮ್ಗೆ ಗೊತ್ತೇ ಇಲ್ಲದಾಗೆ ನೀವು ಬದಲಾಗ್ತೀರಿ. ಬದಲಾವಣೆ ಜಗದ ನಿಯಮ ಅಂತ ಶ್ರೀ ಕೃಷ್ಣ ಹೇಳಿಲ್ವಾ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: